Tag: Democratic Republic of Congo

  • ಕಾಂಗೋದಲ್ಲಿ M23 ಬಂಡುಕೋರರ ಲೂಟಿ – 100ಕ್ಕೂ ಹೆಚ್ಚು ಬಲಿ, ಸಾವಿರಾರು ಜನರಿಗೆ ಗಾಯ

    ಕಾಂಗೋದಲ್ಲಿ M23 ಬಂಡುಕೋರರ ಲೂಟಿ – 100ಕ್ಕೂ ಹೆಚ್ಚು ಬಲಿ, ಸಾವಿರಾರು ಜನರಿಗೆ ಗಾಯ

    ಬ್ರೆಜ್‌ವಿಲ್ಲೆ: ಡೆಮೊಕ್ರೆಟಿಕ್ ರಿಪಬ್ಲಿಕ್ ಕಾಂಗೋ (Democratic Republic of Congo) ದೇಶದಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿದ್ದು, M23 ಬಂಡುಕೋರರ ಲೂಟಿಯಿಂದ 100ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 1,000 ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ: 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿದ ಬಿಜೆಪಿ – ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?

    ರುವಾಂಡಾ ಬೆಂಬಲಿತ ಎಂ-23 ಬಂಡುಕೋರರ ಲೂಟಿಗೆ ಇಳಿದಿದ್ದು, ರುವಾಂಡಾ, ಫ್ರಾನ್ಸ್, ಬೆಲ್ಜಿಯಂ, ಕೀನ್ಯಾ, ಉಗಾಂಡಾ ಸೇರಿ ಹಲವು ದೇಶಗಳ ರಾಯಭಾರಿ ಕಚೇರಿಗಳನ್ನು ದೋಚಿ, ಬೆಂಕಿ ಹಚ್ಚಿದ್ದಾರೆ. ಇದರಿಂದ ಬಂಡೆಕೋರರನ್ನು ಚೆದುರಿಸಲು ಪೊಲೀಸರು ಗುಂಡು ಹಾರಿಸಿ, ಆಶ್ರುವಾಯು ಪ್ರಯೋಗಿಸಿದ್ದಾರೆ.

    ಜೊತೆಗೆ 20 ಲಕ್ಷ ಜನಸಂಖ್ಯೆಯುಳ್ಳ ಗೋಮಾ ನಗರವನ್ನು ಬಂಡುಕೋರರು ವಶಕ್ಕೆ ಪಡೆದಿದ್ದು, 1,200ಕ್ಕೂ ಹೆಚ್ಚು ಕಾಂಗೋಲೀಸ್ ಸೈನಿಕರು ಶರಣಾಗಿದ್ದಾರೆ. ಈ ಹಿಂಸಾಚಾರವನ್ನು ತಡೆಗಟ್ಟಲು ಕಾಂಗೋಲೀಸ್ ಭದ್ರತಾ ಪಡೆಗಳು ಕಾರ್ಯನಿರತರಾಗಿವೆ. ಇನ್ನೂ ಈ ಸಂಘರ್ಷದಿಂದಾಗಿ ಗೋಮಾ ನಗರದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಘರ್ಷಣೆಯ ತೀವ್ರತೆಯಿಂದಾಗಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸುಮಾರು 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಹತ್ತುವಾಗ ಹೃದಯಾಘಾತದಿಂದ ಯುವಕ ಸಾವು

     

  • ಇಬ್ಬರು ಯುಎನ್ ತಜ್ಞರ ಹತ್ಯೆ – 51 ಮಂದಿಗೆ ಮರಣದಂಡನೆ

    ಇಬ್ಬರು ಯುಎನ್ ತಜ್ಞರ ಹತ್ಯೆ – 51 ಮಂದಿಗೆ ಮರಣದಂಡನೆ

    ಕಿನ್ಶಾಸ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಿಲಿಟರಿ ನ್ಯಾಯಾಲಯ ಶನಿವಾರ ಇಬ್ಬರು ವಿಶ್ವಸಂಸ್ಥೆಯ ತಜ್ಞರ ಹತ್ಯೆಗೈದ 51 ಜನರಿಗೆ ಮರಣದಂಡನೆ ವಿಧಿಸಿದೆ.

    2017ರಲ್ಲಿ ಇಬ್ಬರು ಯುಎನ್ ತಜ್ಞರ ಹತ್ಯೆಯಾಗಿತ್ತು. ಈ ಹತ್ಯೆಗೆ ಸಂಬಂಧ ಪಟ್ಟ 50 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಹಲವರು ನ್ಯಾಯಾಲಯಕ್ಕೆ ಗೈರಾಗುತ್ತಿದ್ದು. ಈಗ ಕೋರ್ಟ್ ಬರೋಬ್ಬರಿ 51 ಮಂದಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

    2017ರಲ್ಲಿ ಸರ್ಕಾರ ಹಾಗೂ ಸ್ಥಳೀಯ ಗುಂಪಿನ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಅಮೆರಿಕ ಮೂಲದ ಮೈಕೆಲ್ ಶಾರ್ಪ್ ಹಾಗೂ ಚಿಲಿ ಮೂಲದ ಝೈದಾ ಕ್ಯಾಟಲಾನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರು ಸಾವನ್ನಪ್ಪಿದ 16 ದಿನಗಳ ಬಳಿಕ 2017 ಮಾರ್ಚ್ 28ರಂದು ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ – 6 ಐಸಿಸ್‌ ಉಗ್ರರ ಹತ್ಯೆ

    2016ರಲ್ಲಿ ಸ್ಥಳೀಯ ಸಾಂಪ್ರದಾಯಿಕ ಮುಖ್ಯಸ್ಥ ಕಮುಯಿನಾ ನ್ಸಾಪು ಅವರ ಹತ್ಯೆಯ ಬಳಿಕ ಈ ಸಂಘರ್ಷ ಪ್ರಾರಂಭವಾಗಿತ್ತು. ಸಂಘರ್ಷದಲ್ಲಿ 3,400 ಜನರು ಪ್ರಾಣ ಬಿಟ್ಟಿದ್ದು, ಸಾವಿರಾರು ಜನರು ಊರು ಬಿಟ್ಟಿದ್ದರು. ಈ ವೇಳೆ ವಿಶ್ವಸಂಸ್ಥೆ ದೇಶದಲ್ಲಿ ಶಾಂತಿ ಸ್ಥಾಪಿಸಲು ಶಾಂತಿಪಾಲನ ಪಡೆಯ ಜೊತೆ ತಜ್ಞರನ್ನು ಕಳುಹಿಸಿಕೊಟ್ಟಿತ್ತು. ಇದನ್ನೂ ಓದಿ: ಅಮೆರಿಕದಲ್ಲಿ ಭಾರಿ ಹಿಮಪಾತದ ಸುಳಿವು – ನ್ಯೂಯಾರ್ಕ್ ಸೇರಿ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ

    ವಿಶ್ವಸಂಸ್ಥೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇಬ್ಬರು ಯುಎನ್ ತಜ್ಞರ ಹತ್ಯೆಗೈಯಲಾಗಿತ್ತು. ಶಿಕ್ಷೆ ಒಳಗಾದವರ ಪೈಕಿ 22 ಮಂದಿ ಪರಾರಿಯಾಗಿದ್ದಾರೆ.

  • ಟೇಕಾಫ್ ಆದ ಕೂಡಲೇ ನೆಲಕ್ಕುರುಳಿದ ವಿಮಾನ- 29ಕ್ಕೂ ಹೆಚ್ಚು ಮಂದಿ ಸಾವು

    ಟೇಕಾಫ್ ಆದ ಕೂಡಲೇ ನೆಲಕ್ಕುರುಳಿದ ವಿಮಾನ- 29ಕ್ಕೂ ಹೆಚ್ಚು ಮಂದಿ ಸಾವು

    ಗೋಮ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಗೋಮ ನಗರದಲ್ಲಿ ಟೇಕಾಫ್ ಆದ ಕೂಡಲೇ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 29ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದುರಂತ ನಡೆದಿದೆ.

    ಬ್ಯುಸಿ ಬೀ ಎಂಬ ಸ್ಥಳೀಯ ಸಂಸ್ಥೆಗೆ ಸೇರಿದ ವಿಮಾನ ಬೆನಿ ನಗರಕ್ಕೆ ಹೊರಟಿತ್ತು. ಟೇಕಾಫ್ ಆಗುವ ವೇಳೆ ತಾಂತ್ರಿಕ ದೋಷದಿಂದ ವಿಮಾನ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲವರು ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಕೊನೆಯುಸಿರು ಎಳೆದಿದ್ದಾರೆ. ಸಾಕಷ್ಟು ಮಂದಿ ಇನ್ನೂ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ನಾರ್ತ್ ಕಿವು ಸರ್ಕಾರ ತಿಳಿಸಿದೆ

    ಈ ವಿಮಾನ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ವಿಮಾನ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಯುರೋಪಿಯನ್ ಒಕ್ಕೂಟದಲ್ಲಿ ಈ ವಿಮಾನಗಳ ಕಾರ್ಯ ನಿರ್ವಹಣೆಯನ್ನು ನಿಷೇಧಿಸಲಾಗಿದೆ. ಟೇಕಾಪ್ ಆದ ಬಳಿಕ ಏರ್‌ಪೋರ್ಟ್‌ ಬಳಿ ಇದ್ದ ವಸತಿ ಪ್ರದೇಶಕ್ಕೆ ವಿಮಾನ ಬಂದು ಅಪ್ಪಳಿಸಿದೆ. 2 ಮನೆಗಳ ಮೇಲೆ ವಿಮಾನ ಬಿದ್ದ ಪರಿಣಾಮ ಮನೆಗಳು ನೆಲಸಮವಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

    ಘಟನಾ ಸ್ಥಳದಲ್ಲಿ ಒಟ್ಟಾರೆ 29 ಮೃತದೇಹಗಳು ಪತ್ತೆಯಾಗಿವೆ. ತಾಂತ್ರಿಕ ಸಮಸ್ಯೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.