Tag: Democrat

  • ಡೆಮಾಕ್ರಟಿಕ್ ಬೆಂಬಲಿಸಲ್ಲ, ಇನ್ನು ಮುಂದೆ ರಿಪಬ್ಲಿಕ್‌ಗೆ ಮತ ಹಾಕ್ತೀನಿ: ಮಸ್ಕ್

    ಡೆಮಾಕ್ರಟಿಕ್ ಬೆಂಬಲಿಸಲ್ಲ, ಇನ್ನು ಮುಂದೆ ರಿಪಬ್ಲಿಕ್‌ಗೆ ಮತ ಹಾಕ್ತೀನಿ: ಮಸ್ಕ್

    ವಾಷಿಂಗ್ಟನ್: ಇಲ್ಲಿಯವರೆಗೆ ನಾನು ಡೆಮಾಕ್ರಟಿಕ್ ಪರವಾಗಿ ಮತ ಹಾಕುತ್ತಿದ್ದೆ. ಇನ್ನು ಮುಂದೆ ರಿಪಬ್ಲಿಕ್ ಪರವಾಗಿ ಮತ ಹಾಕುತ್ತೇನೆ ಎಂದು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

    ನಾನು ಇನ್ನು ರಿಪಬ್ಲಿಕ್ ಪಕ್ಷಕ್ಕೆ ಮತ ಹಾಕುತ್ತೇನೆ. ಏಕೆಂದರೆ ಅದು ತುಂಬಾ ದಯೆಯುಳ್ಳ ಪಕ್ಷ ಎಂದಿದ್ದಾರೆ. ಮಸ್ಕ್ ಅವರ ಈ ಹೇಳಿಕೆಯಿಂದ ಟೆಸ್ಲಾ ಕಂಪನಿ ಷೇರು ಮೌಲ್ಯ ಇಳಿಕೆಯಾಗಿದೆ. ಒಂದೇ ದಿನದಲ್ಲಿ ಶೇ.7.51 ರಷ್ಟು ಇಳಿಕೆಯಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

    ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಈ ಹಿಂದೆ ನಾನು ಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕಿದ್ದೇನೆ. ಆಗ ಅವರು ದಯೆಯುಳ್ಳ ಪಕ್ಷವಾಗಿತ್ತು. ಈಗ ದ್ವೇಷದ ಪಕ್ಷವಾಗಿ ವಿಭಜನೆಯಾಗುತ್ತಿದೆ. ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ. ಆದ್ದರಿಂದ ರಿಪಬ್ಲಿಕ್‌ಗೆ ಮತ ಹಾಕುತ್ತೇನೆ. ಇನ್ನು ಮುಂದೆ ನನ್ನ ವಿರುದ್ಧ ನಡೆಸುವ ಕ್ಯಾಂಪೇನ್ ತಂತ್ರಗಳು ಹಾಗೂ ರಾಜಕೀಯ ದಾಳಿಗಳನ್ನು ನೋಡಬಹುದು. ಬರುವ ಚುನಾವಣೆಯಲ್ಲಿ ನಾನು ರಿಪಬ್ಲಿಕನ್ನರಿಗೆ ಮತ ಹಾಕುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಟ್ವಿಟ್ಟರ್ ಹೇರಿದ ನಿಷೇಧವನ್ನು ರದ್ದು ಮಾಡುತ್ತೇನೆ. ನಾನು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.

  • ಪ್ರಧಾನಿ ಮೋದಿ, ಅಮಿತ್ ಶಾ ಪ್ರಜಾಪ್ರಭುತ್ವದ ಕೊಲೆಗಾರರು-ಸಾಹಿತಿ ಓಲ್ಗಾ

    ಪ್ರಧಾನಿ ಮೋದಿ, ಅಮಿತ್ ಶಾ ಪ್ರಜಾಪ್ರಭುತ್ವದ ಕೊಲೆಗಾರರು-ಸಾಹಿತಿ ಓಲ್ಗಾ

    ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಜಾಪ್ರಭುತ್ವದ ಕೊಲೆಗಾರರು. ಅವರು ದೇಶದಲ್ಲಿ ನಿಧಾನವಾಗಿ ಅಸಹಿಷ್ಣುತೆಯನ್ನು ಹಬ್ಬಿಸುತ್ತಿದ್ದಾರೆ ಎಂದು ತೆಲುಗು ಸಾಹಿತಿ ಓಲ್ಗಾ ಆರೋಪಿಸಿದ್ದಾರೆ.

    ಶನಿವಾರ ನಡೆದ ಮೇ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಅಮಿತ್ ಶಾ, ನರೇಂದ್ರ, ಮೋದಿ ಹಾಗೂ ಬಿಜೆಪಿಯವರು ಕ್ರೈಂಗಳನ್ನು ಮಾಡುತ್ತಿದ್ದಾರೆ. ಆದರೆ ಅದಕ್ಕೆ ಯಾವುದೇ ಉತ್ತರ ಕೊಡುತ್ತಿಲ್ಲ. ಒಂದು ಕಾಲದ ಬಹುತ್ವ ಭಾರತ ಹಾಗೂ ರಾಷ್ಟ್ರೀಯತೆ ಇವರಿಂದಾಗಿ ಹಿಂದೂತ್ವ ಭಾರತ ಸಿದ್ಧಾಂತಕ್ಕೆ ವಾಲುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

    ಕ್ರೀಯಾಶೀಲ ಬರಹಗಾರರು ಬಿಜೆಪಿ ನಡೆಯನ್ನು ಗಮನಿಸುತ್ತಾ ಜಾಗೃತರಾಗುತ್ತಿದ್ದಾರೆ. ಹಿಂದೂತ್ವ ಭಾರತ ಸಿದ್ಧಾಂತ ಇಂದು ಕಸದಬುಟ್ಟಿಗೆ ಸೇರಬೇಕಿದ್ದು, ಬಹುತ್ವ ಭಾರತ ಹಾಗೂ ರಾಷ್ಟ್ರೀಯತೆಗಳು ಮಂಚೂಣಿಗೆ ಬರಬೇಕು ಎಂದು ಅವರು ಹೇಳಿದ್ದಾರೆ.