Tag: demand

  • ಮಧುಮೇಹಿಗಳಿಗೆ ರಾಮಬಾಣವಾಗಿರುವ ಜಂಬುನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್!

    ಮಧುಮೇಹಿಗಳಿಗೆ ರಾಮಬಾಣವಾಗಿರುವ ಜಂಬುನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್!

    -ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಕಾರುಬಾರು!

    ಚಿಕ್ಕಬಳ್ಳಾಪುರ: ಇಲ್ಲಿಯ ಗಲ್ಲಿ ಗಲ್ಲಿಗಳಲ್ಲಿ ನೇರಳೆ ಹಣ್ಣಿನದ್ದೆ ಕಮಾಲ್. ಮಧುಮೇಹಿಗಳಿಗೆ ರಾಮಬಾಣವಾಗಿರುವ ಜಂಬುನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್ ಇದೆ. ಇದರಿಂದ ಬೆಳೆದ ರೈತರಿಗೂ ಲಾಭ ಸೇವಿಸಿದ ಗ್ರಾಹಕರಿಗೂ ಭಾರೀ ಲಾಭವಾಗಿದೆ.

    ನೇರಳೆ ಹಣ್ಣಿನಲ್ಲಿ ವಿವಿಧ ಔಷಧೀಯ ಗುಣಗಳಿವೆ. ಕೆಲವು ಕಾಯಿಲೆಗಳಿಗೆ ನೇರಳೆ ಹಣ್ಣು ರಾಮಬಾಣ ಅನ್ನೋ ಪ್ರಚಾರ ಆಗಿದ್ದೇ ತಡ, ಮಾರುಕಟ್ಟೆಯಲ್ಲಿ ಮುಗಿಬಿದ್ದು ನೇರಳೆ ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ನೇರಳೆ ಬೆಳೆದ ರೈತರಿಗೆ ಜಣ ಜಣ ಕಾಂಚಣವಾದರೆ, ಗ್ರಾಹಕರು ಔಷಧಿಯುಕ್ತ ಹಣ್ಣು ತಿಂದ ಖುಷಿಪಡುತ್ತಿದ್ದಾರೆ.

    ಕಾಡು ಮೇಡು ಬೆಟ್ಟಗುಡ್ಡ, ರೈತರ ಬದುಗಳಲ್ಲಿ ಕಾಣಸಿಗುತ್ತಿದ್ದ ನೇರಳೆ ಹಣ್ಣನ್ನು ಕಂಡರೆ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಆದರೆ ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನು ವಾಸಿಮಾಡಬಲ್ಲ, ಔಷಧೀಯ ಗುಣಗಳಿವೆ ಅನ್ನೋದು ಗೊತ್ತಾಗುತ್ತಿದ್ದಂತೆ, ನೇರಳೆ ಹಣ್ಣಿಗೆ ಬಾರೀ ಭಾರೀ ಡಿಮ್ಯಾಂಡ್ ಬಂದಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಮಾತ್ರ ಲಭ್ಯವಿರುವ ನೇರಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಬಂದ ಕಾರಣ ಚಿಕ್ಕಬಳ್ಳಾಪುರದ ಗಲ್ಲಿ ಗಲ್ಲಿಗಳಲ್ಲಿ ಸಣ್ಣ ಹಣ್ಣಿನ ಅಂಗಡಿಯಿಂದ ದೊಡ್ಡ ದೊಡ್ಡ ಹಣ್ಣಿನ ಅಂಗಡಿಗಳಲ್ಲೂ ನೇರಳೆ ಹಣ್ಣಿನದ್ದೇ ಕಾರುಬಾರು. ಕೆ.ಜಿ ನೇರಳೆ ಹಣ್ಣಿಗೆ ಇನ್ನೂರು ರೂಪಾಯಿಂದ ಮುನ್ನೂರು ರೂಪಾಯಿ ಕೊಟ್ಟು ಸಾರ್ವಜನಿಕರು ಖರೀದಿ ಮಾಡುತ್ತಿದ್ದಾರೆ.

    ನೇರಳೆ ಮರದ ಎಲೆ, ಕಾಯಿ, ತೊಗಟೆ, ಹಣ್ಣು, ಬೀಜ ಎಲ್ಲವೂ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದರಿಂದ ನೇರಳೆ ಮರಗಳನ್ನು ಬೆಳೆದ ರೈತರಿಗೆ ಪುಲ್ ಡಿಮ್ಯಾಂಡೋ ಡಿಮ್ಯಾಂಡ್. ಮೇ ಜೂನ್ ತಿಂಗಳಲ್ಲಿ ಹಣ್ಣಿಗೆ ಬಾರೀ ಬೇಡಿಕೆ ಬಂದು ಹಣ್ಣುಗಳ ವರ್ತಕರು ರೈತರ ತೋಟಗಳಿಗೆ ಬಂದು ಖರೀದಿಸುತ್ತಿದ್ದಾರೆ. ಇನ್ನು ಹೂ ಮೊಗ್ಗು ಇರುವಾಗಲೇ ನೇರಳೆ ಮರಗಳ ಗುತ್ತಿಗೆ ಪಡೆಯುತ್ತಾರೆ. ನೇರಳೆ ಮರಕ್ಕೆ ಬಂಗಾರದ ಬೆಲೆ ಬಂದ ಕಾರಣ, ಕಾಡು ಮೇಡುಗಳಲ್ಲಿ ಇರುತ್ತಿದ್ದ ನೇರಳೆ ಮರಗಳು ರೈತರ ಜಮೀನುಗಳಲ್ಲಿ ತೋಟಗಳಾಗಿ ಮಾರ್ಪಡುತ್ತಿವೆ. ಇನ್ನು ಚಿಕ್ಕಬಳ್ಳಾಪುರ ತೋಟಗಾರಿಕಾ ಇಲಾಖೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, ಸಸಿಯಿಂದ ನಾಟಿ ಮಾಡೋವರೆಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ.

  • ‘ನಿಖಿಲ್ ಎಲ್ಲಿದ್ದೀಯಪ್ಪ’ ಸಿನಿಮಾ ಟೈಟಲ್‍ಗೆ ಫುಲ್ ಡಿಮ್ಯಾಂಡ್

    ‘ನಿಖಿಲ್ ಎಲ್ಲಿದ್ದೀಯಪ್ಪ’ ಸಿನಿಮಾ ಟೈಟಲ್‍ಗೆ ಫುಲ್ ಡಿಮ್ಯಾಂಡ್

    ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿರುವ ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್‍ಗೆ ಈಗ ಫುಲ್ ಡಿಮ್ಯಾಂಡ್ ಆಗಿದೆ. ನಿಖಿಲ್ ಎಲ್ಲಿದ್ದೀಯಪ್ಪ ಸಿನಿಮಾ ಟೈಟಲ್‍ಗೆ ಈಗ ಭರ್ಜರಿ ಬೇಡಿಕೆಯಾಗಿದೆ.

    ನಿಖಿಲ್ ಎಲ್ಲಿದ್ದೀಯಪ್ಪ ಶೀರ್ಷಿಕೆಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಾಕಷ್ಟು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಮಂಡ್ಯದ ಚುನಾವಣಾ ಕಣವೇ ಸಿನಿಮಾ ಕಥೆಯಾಗಿದ್ದು, “ಮಂಡ್ಯದ ಹೆಣ್ಣು”, “ಜೋಡೆತ್ತು”, “ಕಳ್ಳೆತ್ತು” ಟೈಟಲ್ ನೋಂದಣಿಗೂ ಫುಲ್ ಡಿಮ್ಯಾಂಡ್ ಶುರುವಾಗಿದೆ.

    ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದಾರೆ. ಒಟ್ಟು 7 ರಿಂದ 8 ಚಿತ್ರತಂಡಗಳು ಟೈಟಲ್ ಕೊಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಿದೆ. ಆದರೆ ಇದೆಲ್ಲ ರಾಜಕೀಯಕ್ಕೆ ಸಂಬಂಧಿಸುವುದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಈ ಟೈಟಲ್ ನೀಡಲು ನಿರಾಕರಿಸಿದೆ.

    ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಹೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.

  • ಹೊಸತೊಡಕು ಆಚರಿಸಲು ಖುಷಿಯಲ್ಲಿದ್ದ ಜನರಿಗೆ ಶಾಕ್

    ಹೊಸತೊಡಕು ಆಚರಿಸಲು ಖುಷಿಯಲ್ಲಿದ್ದ ಜನರಿಗೆ ಶಾಕ್

    ಬೆಂಗಳೂರು/ಮಂಡ್ಯ: ಶನಿವಾರ, ಒಬ್ಬಟ್ಟು ತಿಂದು ಭರ್ಜರಿಯಾಗಿಯೇ ಯುಗಾದಿ ಹಬ್ಬ ಆಚರಿಸಿದ್ದ ಸಿಲಿಕಾನ್ ಸಿಟಿ ಜನರು ಇಂದು ಹೊಸತೊಡಕು ಆಚರಿಸಲು ಸಜ್ಜಾಗಿದ್ದಾರೆ. ಆದರೆ ಹಬ್ಬದ ಖುಷಿಯಲ್ಲಿದ್ದ ಜನರಿಗೆ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯ ಕಹಿ ಅನುಭವವಾಗುತ್ತಿದೆ.

    ಇಂದು ಮಾರ್ಕೆಟ್ ಹೋಗಿ ಚಿಕನ್, ಮಟನ್ ರೇಟ್ ಕೇಳಿದರೆ ಜನರು ಶಾಕ್ ಆಗುತ್ತಾರೆ. ಏಕೆಂದರೆ ಚಿಕನ್ ಒಂದು ಕೆಜಿಗೆ 250 ರೂ. ಆಗಿದೆ. ಅಲ್ಲದೆ ಮಟನ್ ಒಂದು ಕೆಜಿಗೆ 550 ಆಗಿದೆ.

    ಹೀಗಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಲ್ಲಿ ಚಿಕನ್, ಪೆಪ್ಪರ್ ಚಿಕನ್, ಫಿಶ್ ಕರಿ, ಫಿಶ್ ಫ್ರೈ, ತಲೆ ಕಾಲ್ ಮಾಂಸ, ಕಾಲ್ ಸೂಪ್ ಹೇಗಪ್ಪಾ ಮಾಡುವುದು ಎಂದು ನಾನ್ ವೆಜ್ ಪ್ರಿಯರು ಯೋಚನೆ ಮಾಡತ್ತಿದ್ದರೆ, ಇತ್ತ ವ್ಯಾಪಾರಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಯುಗಾದಿ ನೆಪದಲ್ಲಿ ಮತದಾರರಿಗೆ ಭರ್ಜರಿ ಗಿಫ್ಟ್-‘ಹೊಸತೊಡಕು’ ರೂಪದಲ್ಲಿ ಮಟನ್-ಚಿಕನ್ ಭಾಗ್ಯ!

    ಮಂಡ್ಯದಲ್ಲೂ ಇಂದು ಮಟನ್‍ಗೆ ಭಾರೀ ಬೇಡಿಕೆಯಾಗಿದೆ. ಯುಗಾದಿ ಹಬ್ಬದ ಮಾಂಸದಡುಗೆಗೆ ಮಂಡ್ಯದಲ್ಲಿ ಭರ್ಜರಿ ಬೇಡಿಕೆಯಿದೆ. ಇಷ್ಟು ದಿನ ಲೋಕಸಭಾ ಚುನಾವಣಾ ಕಾವಿನಿಂದ ರಂಗೇರಿದ್ದ ಮಂಡ್ಯ, ಶನಿವಾರ ಯುಗಾದಿ ಹಬ್ಬ ಮುಗಿಸಿ ಇಂದು ವರ್ಷ ತೊಡಕಿನ ಖುಷಿಯಲ್ಲಿ ಇದ್ದಾರೆ.

    ಹಬ್ಬಕ್ಕೆ ಮಾಂಸದಡುಗೆ ಮಾಡಲು ಮಂಡ್ಯದ ಎಲ್ಲ ಮಾಂಸದಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನೂರಾರು ಜನ ನಿಂತು ಮಟನ್ ಖರೀದಿಸುತ್ತಿದ್ದಾರೆ. ಸದ್ಯ ಜನರು ಚುನಾವಣೆಯ ಯೋಚನೆ ಬಿಟ್ಟು ಮಾಂಸದಡುಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ.

  • ಗಮನಿಸಿ, ಎರಡು ದಿನ ಸ್ತಬ್ಧವಾಗಲಿದೆ ಕರುನಾಡು..!

    ಗಮನಿಸಿ, ಎರಡು ದಿನ ಸ್ತಬ್ಧವಾಗಲಿದೆ ಕರುನಾಡು..!

    ಬೆಂಗಳೂರು: ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆಕೊಟ್ಟಿದೆ.

    ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಿದ್ದು, 12 ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಬೀದಿಗಿಳಿಯಲಿವೆ. ಬಿಎಂಟಿಸಿ ಹಾಗೂ ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‍ ಗಳು ಸ್ತಬ್ಧವಾಗಲಿದೆ ಅಂತ ಸಿಐಟಿಯು ಉಪಾಧ್ಯಕ್ಷ ಅನಂತ್ ಸುಬ್ಬರಾವ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಬುಧವಾರ ಸಂಜೆ ಐದು ಗಂಟೆಯವರೆಗೂ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದ್ದು, ಈಗಾಗಲೇ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ಕೊಟ್ಟಿದೆ ಎಂದು ತಿಳಿದುಬಂದಿದೆ.

    ಬಂದ್ ಯಾಕೆ?:
    ಮೋಟಾರು ವಾಹನ ತಿದ್ದುಪಡಿ ಮಸೂದೆ -2017ರನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಬಂದ್‍ಗೆ ಕರೆ ಮಾಡಲಾಗಿದೆ.

     ಮುಷ್ಕರ ದಿನ ಏನಿರಲ್ಲ:
    ಮಂಗಳವಾರ ಮತ್ತು ಬುಧವಾರ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಇರಲ್ಲ. ಆಟೋ ಸಂಘಟನೆಯಿಂದ ಬೆಂಬಲ ಇರುವುದರಿಂದ ಆಟೋ ಕೂಡ ಸಿಗಲ್ಲ. ಇತ್ತ ಓಲಾ ಮತ್ತು ಊಬರ್ ಕ್ಯಾಬ್‍ಗಳು ಸಿಗುವುದಿಲ್ಲ. ಮುಷ್ಕರದಲ್ಲಿ ಬ್ಯಾಂಕ್ ನೌಕರರು ಕೂಡ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಬ್ಯಾಂಕ್ ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆಗಳು ಇವೆ. ಎಪಿಎಂಸಿ ಲಾರಿ ಸಿಬ್ಬಂದಿ ಪಾಲ್ಗೊಳ್ಳುವುದರಿಂದ ಎಪಿಎಂಸಿ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.

    ಏನಿರುತ್ತೆ?:
    ಆಸ್ಪತ್ರೆಗಳು, ಮೆಡಿಕಲ್ ಶಾಪ್, ಅಂಗಡಿ ಮುಂಗಟ್ಟುಗಳು ಇರುತ್ತದೆ. ಜೊತೆಗೆ ಅಂಬುಲೆನ್ಸ್ ಸೇವೆ, ಮೆಟ್ರೋ ಮತ್ತು ರೈಲು ಸೇವೆ ಇರಲಿದೆ.

    50- 50 ಬೆಂಬಲ:
    ನಿರ್ಧಾರ ಪ್ರಕಟಿಸದ ಹೋಟೆಲ್ ಮಾಲೀಕರು ನೈತಿಕ ಬೆಂಬಲದ ಘೋಷಣೆ ಮಾಡಿದ್ದು, ಚಿತ್ರೋದ್ಯಮದ ನೈತಿಕ ಬೆಂಬಲ, ಚಿತ್ರ ಪ್ರದರ್ಶನ ಬಂದ್ ಮಾಡುವ ಬಗ್ಗೆ ಯಾವುದೇ ಫೋಷಣೆ ಮಾಡಿಲ್ಲ. ಇನ್ನೂ ಶಾಲಾ ಕಾಲೇಜುಗಳ ವಾಹನಗಳು ಸ್ತಬ್ಧವಾಗುವುದರಿಂದ ಆಯಾಯ ಜಿಲ್ಲಾಧಿಕಾರಿಗಳು ಶಾಲಾ -ಕಾಲೇಜು ಬಂದ್ ನಿರ್ಣಯ ಕೈಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಮುಂಡಿ ಬೆಟ್ಟ ಆಯ್ತು, ಈಗ ನಂಜನಗೂಡು ದೇವಾಲಯದಲ್ಲೂ ನೌಕರರ ಪ್ರತಿಭಟನೆ!

    ಚಾಮುಂಡಿ ಬೆಟ್ಟ ಆಯ್ತು, ಈಗ ನಂಜನಗೂಡು ದೇವಾಲಯದಲ್ಲೂ ನೌಕರರ ಪ್ರತಿಭಟನೆ!

    ಮೈಸೂರು: ಚಾಮುಂಡಿಬೆಟ್ಟದಲ್ಲಿ ಅರ್ಚಕರು ಹಾಗೂ ಸಿಬ್ಬಂದಿಯ ಪ್ರತಿಭಟನೆ ನಂತರ ನಂಜನಗೂಡಿನ ನಂಜುಡೇಶ್ವರ ದೇವಾಲಯದ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

    ಸೋಮವಾರದಿಂದ ನಂಜನಗೂಡು ನಂಜುಡೇಶ್ವರ ದೇವಾಲಯದ ನೌಕರರು ಅನಿರ್ಧಿಷ್ಟಾವಧಿ ಧರಣಿ ಮಾಡಲು ನಿರ್ಧರಿಸಿದ್ದು, ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಧರಣಿಯಲ್ಲಿ ದೇವಾಲಯದ 180 ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಆರಂಭಿಸಿದ್ದಾರೆ. ಚಾಮುಂಡಿ ಬೆಟ್ಟದ ನೌಕರರಂತೆ ಇವರು ಪ್ರಮುಖ 7 ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.

    ಪ್ರತಿಭಟನಾಕಾರರ ಬೇಡಿಕೆಗಳು:
    1. ಕಾರ್ಯಾರ್ಥ ನೇಮಕ ಮಾಡಿರುವ ನೌಕರರನ್ನು ಖಾಯಂಗೊಳಿಸಬೇಕು.
    2. ವೇತನ ಶ್ರೇಣಿ ಪಡೆಯುತ್ತಿರುವ ನೌಕರರಿಗೆ 6ನೇ ವೇತನ ಮಂಜೂರು ಮಾಡಿ ಕಾಲ ಕಾಲಕ್ಕೆ ಬರುವ ಭತ್ಯೆಯನ್ನು ಕೊಡಲು ಖಾಯಂ ಆದೇಶ ಮಾಡುವುದು.
    3. ಪ್ರತಿವರ್ಷ ಬೋನಸ್ ರೂಪದಲ್ಲಿ ಎಲ್ಲ ನೌಕರರಿಗೆ ಇಡೀ ತಿಂಗಳ ಪೂರ್ಣ ವೇತನ ಪಾವತಿಸಬೇಕು.
    4. ಸೇವಾವಧಿಗೂ ಮುನ್ನಾ ಅಕಾಲಿಕ ಮರಣ ಹೊಂದುವ ನೌಕರರ ಕುಟುಂಬದವರಿಗೆ ಅನುಕಂಪದ ಮೇಲೆ ಕೆಲಸ ನೀಡಬೇಕು.
    5. ನಿವೃತ್ತಿ ಬಳಿಕ ನೌಕರರಿಗೆ ಕೊಡುವ 35 ಸಾವಿರ ರೂ. ಹಣವನ್ನು 5 ಲಕ್ಷ ರೂ.ಗೆ ಏರಿಸಬೇಕು
    6. ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು.
    7. ದೇವಾಲಯದ ಕಾರ್ಯನಿರ್ವಹಿಸುತ್ತಿರುವ ಅನುವಂಶೀಯ ನೌಕರರು ಮರಣ ಹೊಂದಿದಲ್ಲಿ ಧಾರ್ಮಿಕ ಕೈಂಕಾರ್ಯಗಳಿಗೆ ಅಡೆ ತಡೆ ಉಂಟಾಗದಂತೆ ಸದರಿ ಹುದ್ದೆಗೆ ತುರ್ತಾಗಿ ನೌಕರರನ್ನು ನಿಗದಿ ಪಡಿಸಬೇಕು.

    ಇಂದು ಬೆಳಗ್ಗೆ ದೇವಾಲಯದಲ್ಲಿ ನಂಜುಡೇಶ್ವರನಿಗೆ ಪೂಜಾ ವಿಧಿ ವಿಧಾನ ನಡೆದ ಬಳಿಕ ನೌಕರರು ಧರಣಿ ಆರಂಭಿಸಿದ್ದಾರೆ. ಅರ್ಚಕರು, ಸೇವಾ ಕೌಂಟರ್ ಸಿಬ್ಬಂದಿ, ಪ್ರಸಾದ ವಿತರಣಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲಾ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆಯಿಂದ ಭಕ್ತರಿಗೆ ಸೇವೆಗಳಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ. ವಿಶೇಷ ಪೂಜೆ, ಅರ್ಚನೆ ಹಾಗೂ ಇತರೆ ಸೇವೆಗಳು ಪ್ರತಿಭಟನೆ ಆರಂಭವಾದ ಬಳಿಕ ಭಕ್ತರಿಗೆ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಒಟ್ಟು 242 ಮಂದಿ ನೌಕರರಿರುವ ನಂಜನಗೂಡು ದೇವಾಲಯದಲ್ಲಿ ಸುಮಾರು 62 ಹುದ್ದೆಗಳು ಖಾಲಿಯಿದ್ದು, ಇನ್ನುಳಿದ 180 ಮಂದಿ ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಡದೇವತೆ ಚಾಮುಂಡಿಗೆ ಪೂಜೆ ಇಲ್ಲ – ಶುಕ್ರವಾರವೇ ಶಕ್ತಿ ದೇವತೆಯ ಸನ್ನಿಧಾನಕ್ಕೆ ಬೀಗ

    ನಾಡದೇವತೆ ಚಾಮುಂಡಿಗೆ ಪೂಜೆ ಇಲ್ಲ – ಶುಕ್ರವಾರವೇ ಶಕ್ತಿ ದೇವತೆಯ ಸನ್ನಿಧಾನಕ್ಕೆ ಬೀಗ

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಭಕ್ತರಿಗೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ.

    ಅರ್ಚಕರು ಮತ್ತು ಸಿಬ್ಬಂದಿ ಅನಿರ್ದಾಷ್ಟವಧಿ ಮುಷ್ಕರ ನಡೆಸುತ್ತಿದ್ದಾರೆ. ದೇವಸ್ಥಾನದ ಸಿಬ್ಬಂದಿ ಭಕ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ಬಿಡಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಪ್ರತಿಭಟನಾ ಸಿಬ್ಬಂದಿ ಬೇಡಿಕೆಗೆ ಮಣಿದ ಪೊಲೀಸರು ಹೊರಗಡೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

    ಇಂದಿನಿಂದ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ದೇವಾಲಯದ 183 ಮಂದಿ ಖಾಯಂ ನೌಕರರು ಹಾಗೂ 37 ಮಂದಿ ಗುತ್ತಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಗರ್ಭಗುಡಿಯ ಮುಂಭಾಗವೇ ಅರ್ಚಕರು ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದ್ದು, ದೇವಾಲಯದ ಒಳಗೆ ಹೊರಗೆ ಎರಡು ಕಡೆ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಭಟನೆ ನಡೆಯುತ್ತಿದೆ.

    ಚಾಮುಂಡಿಬೆಟ್ಟದಲ್ಲಿ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪೂಜೆ ಸಲ್ಲಿಸಿದ್ದ ಬಳಿಕ 8 ಗಂಟೆಯಿಂದ ಪೂಜೆ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲದೇ ಗರ್ಭಗುಡಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದರು. ಪರಿಣಾಮ ದೇವಾಲಯದ ಒಳಗೆ ಮಂಗಳಾರತಿ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಕುಂಕುಮ ವಿತರಣೆ ಮತ್ತು ತಿರ್ಥ ವಿತರಣೆಯೂ ಸ್ಥಗಿತಗೊಂಡಿದ್ದು, ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಅರ್ಧದಿಂದಲೇ ದರ್ಶನ ಪಡೆದು ವಾಪಸ್ ಹೋಗುತ್ತಿದ್ದಾರೆ.

    ದೇವಾಲಯಗಳ ನೌಕರರ ಪ್ರಮುಖ 7 ಬೇಡಿಕೆ:
    1. ಶೇ.30ರಷ್ಟು ವೇತನ ಹೆಚ್ಚಳ ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಆದಾಗ ಮಂಜೂರು ಮಾಡಿಕೊಳ್ಳಲು ಖಾಯಂ ಆದೇಶ ನೀಡಬೇಕು.
    2. ವಾರ್ಷಿಕ ಬೋನಸ್ ಪಾವತಿಸದಿರುವ ಬಗ್ಗೆ ಹಾಗೂ ಪ್ರತಿ ವರ್ಷ ಒಂದು ತಿಂಗಳ ಪೂರ್ತಿ ವೇತನವನ್ನ ಪಾವತಿಸಲು ಖಾಯಂ ಆದೇಶ ನೀಡಬೇಕು.
    3. ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಲು ತುರ್ತಾಗಿ ಆದೇಶಿಸಬೇಕು.
    4. ಅನುಕಂಪದ ಆಧಾರದ ಮೇಲೆ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ರಾಜ್ಯದ ಎಲ್ಲಾ ಇಲಾಖೆಯಲ್ಲಿ ನೌಕರಿ ನೀಡಬೇಕು.
    5. ದೇವಾಲಯದ ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನ ಮಂಜೂರು ಮಾಡಬೇಕು.
    6. ಮೃತ ದೇವಾಲಯದ ನೌಕರರುಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು.
    7. ನೌಕರರ ತಿಂಗಳ ವೇತವನ್ನು ಬೆಟ್ಟದ ಶಾಖೆಯ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಬಟಾವಡೆ ಮಾಡಬೇಕು.

    https://www.youtube.com/watch?v=8gyZUeLcgbM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರಿಂದ ಅಹೋರಾತ್ರಿ ಧರಣಿ: ಬೇಡಿಕೆ ಏನು?

    ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರಿಂದ ಅಹೋರಾತ್ರಿ ಧರಣಿ: ಬೇಡಿಕೆ ಏನು?

    ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಬಳಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಸೂಕ್ತ ಬೆಡ್ ಶೀಟ್, ಚಾಪೆ ಇಲ್ಲದೆ ಟಾರ್ಪಲ್ ಮತ್ತು ಮಣ್ಣಿನ ಮೇಲೆ ಮಲಗಿ ಚಳಿಗೆ ನಡುಗುತ್ತಾ ಕಾರ್ಯಕರ್ತೆಯರು ಪ್ರತಿಭಟಿಸುತ್ತಿದ್ದಾರೆ.

    2,500 ರುಪಾಯಿ ಸಂಬಳವನ್ನು ಹೆಚ್ಚಳ ಮಾಡಬೇಕು, ತಮಿಳುನಾಡು ರೀತಿಯಲ್ಲಿ ಕರ್ನಾಟಕ ರಾಜ್ಯದ ಬಿಸಿಯೂಟ ಕಾರ್ಯಕರ್ತರಿಗೂ ಸಂಬಳ ನೀಡಬೇಕು ಹಾಗೂ ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣ ಗೊಳಿಸಬಾರದು ಎಂದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

    ಕಾರ್ಯಕರ್ತೆಯರ ಬೇಡಿಕೆಗಳೇನು..?
    * 2,500 ರೂ. ಸಂಬಳವನ್ನು ಹೆಚ್ಚಳ ಮಾಡಬೇಕು
    * ಕೆಲಸ ಖಾಯಂಗೊಳಿಸಬೇಕು.
    * ಇನ್ಶೂರೆನ್ಸ್, ಇಎಸ್‍ಐ ಪಿಎಫ್ ನೀಡಲು ಒತ್ತಾಯ.
    * ತಮಿಳುನಾಡು ರೀತಿಯಲ್ಲಿ ರಾಜ್ಯದ ಬಿಸಿಯೂಟ ಕಾರ್ಯಕರ್ತರಿಗೂ ಸಂಬಳ ನೀಡಬೇಕು.
    * ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣ ಗೊಳಿಸಬಾರದು.
    * ಇಸ್ಕಾನ್‍ಗೆ ನೀಡಬೇಕೆಂದಿರುವ ಗುತ್ತಿಗೆಯನ್ನು ರದ್ದುಗೊಳಿಸಬೇಕು.

    ಕಳೆದ ಬಾರಿ ನಾವು ಪ್ರತಿಭಟನೆ ನಡೆಸಿದಾಗ ಶಿಕ್ಷಣ ಸಚಿವ ತನ್ವೀರ್ ಸೇಠ್ ಸೇರಿ ವಿವಿಧ ನಾಯಕರು ಆಶ್ವಾಸನೆ ನೀಡಿದರೂ ಬೇಡಿಕೆ ಈಡೇರಿಸಿರಲಿಲ್ಲ. ಆಶ್ವಾಸನೆ ಕೊಟ್ಟು ಮೋಸ ಮಾಡಿರುವ ಎಲ್ಲಾ ಸರ್ಕಾರಗಳಿಗೆ ನಮ್ಮ ಧಿಕ್ಕಾರ, ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನಾ ಧರಣಿ ಮುಂದುವರಿಯಲಿದೆ ಎಂದು ಬಿಸಿಯೂಟ ಕಾರ್ಯಕರ್ತೆಯರ ರಾಜ್ಯ ಸಂಘಟನೆಯ ನಾಯಕಿ ರುದ್ರಮ್ಮಬೆಳಲ್ಗೆರೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಮ್ಯಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ವಿಶೇಷ ಬೇಡಿಕೆಯಿಟ್ಟ ನಟಿ ರಾಗಿಣಿ

    ರಮ್ಯಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ವಿಶೇಷ ಬೇಡಿಕೆಯಿಟ್ಟ ನಟಿ ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ನಟಿ ರಮ್ಯಾ ಗುರುವಾರ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ನಟಿ ರಮ್ಯಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ವಿಶೇಷ ಬೇಡಿಕೆಯಿಟ್ಟಿದ್ದಾರೆ.

    ರಾಗಿಣಿ ತಮ್ಮ ಟ್ವಿಟ್ಟರ್ ನಲ್ಲಿ “ಸುಂದರಿ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ಹೀಗೆ ಮಿಂಚುತ್ತಿರು ಹಾಗೂ ನಿನಗೆ ಇನ್ನಷ್ಟು ಧೈರ್ಯ ಸಿಗಲಿ” ಟ್ವೀಟ್ ಮಾಡಿದ್ದರು. ರಾಗಿಣಿ ಟ್ವೀಟ್‍ಗೆ, ಧನ್ಯವಾದಗಳು ಎಂದು ರಮ್ಯಾ ಪ್ರತಿಕ್ರಿಯಿಸಿದ್ದರು.

    ರಾಗಿಣಿ ಅವರು ಮತ್ತೆ ರಮ್ಯಾ ಅವರ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿ, “ನಮಗೆ ಡಿನ್ನರ್ ಹಾಗೂ ಪಾರ್ಟಿ ಕೊಡಿಸು. ಬೆಂಗಳೂರು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದೆ” ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಟ್ವೀಟ್‍ಗೆ ರಮ್ಯಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

    ಸದ್ಯ ರಮ್ಯಾ ಅವರು ಸಿನಿಮಾದಿಂದ ದೂರ ಉಳಿದುಕೊಂಡು ರಾಜಕಾರಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. 2003ರಲ್ಲಿ ತೆರೆಕಂಡ ‘ಅಭಿ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ನೀಡಿದ ರಮ್ಯಾ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್‍ವುಡ್ ಕ್ವೀನ್ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಬರೋಬ್ಬರಿ ಒಂದು ದಶಕ ರಮ್ಯಾ ಬೇಡಿಕೆಯ ನಟಿಯಾಗಿದ್ದರು. ರಾಜಕಾರಣದಲ್ಲಿ ಗುರುತಿಸಿಕೊಂಡ ಬಳಿಕ ಸಿನಿಮಾದಿಂದ ರಮ್ಯಾ ಅಂತರವನ್ನು ಕಾಯ್ದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗೋಲ್ ಗುಂಬಜ್‍ನಷ್ಟೇ ಫೇಮಸ್ ಆಗಿದ್ದ ದ್ರಾಕ್ಷಿ ಬೆಳೆ ಈಗ ಕುಂಠಿತ

    ಗೋಲ್ ಗುಂಬಜ್‍ನಷ್ಟೇ ಫೇಮಸ್ ಆಗಿದ್ದ ದ್ರಾಕ್ಷಿ ಬೆಳೆ ಈಗ ಕುಂಠಿತ

    ವಿಜಯಪುರ: ಇಲ್ಲಿನ ಗೋಲ್ ಗುಂಬಜ್ ಎಷ್ಟು ಫೇಮಸ್ಸೋ ದ್ರಾಕ್ಷಿ ಬೆಳೆ ಕೂಡ ಅಷ್ಟೇ ಹೆಸರುವಾಸಿಯಾಗಿದೆ. ವಿಜಯಪುರದ ದ್ರಾಕ್ಷಿಗೆ ಯೂರೋಪ್ ಸೇರಿದಂತೆ ದೇಶದ ಹಲವೆಡೆ ಭಾರೀ ಬೇಡಿಕೆ ಇದೆ. ಆದರೆ ಇದೀಗ ದ್ರಾಕ್ಷಿ ಬೆಳೆ ಕುಂಠಿತವಾಗಿದೆ.

    ಐತಿಹಾಸಿಕ ಜಿಲ್ಲೆ, ಗುಮ್ಮಟಗಳ ಜಿಲ್ಲೆ, ಬರದ ನಾಡು ಎಂದು ವಿಜಯಪುರವನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಇದರ ಜೊತೆಗೆ ದ್ರಾಕ್ಷಿ ಕಣಜ ಎಂದು ಕರೆಯುತ್ತಾರೆ. ವಿಜಯಪುರದ ದ್ರಾಕ್ಷಿ ನಮ್ಮ ದೇಶದಲ್ಲೆಡೆ ಸೇರಿಂದಂತೆ ಯೂರೋಪ್, ಅಮೆರಿಕಾದಂತಹ ಹೊರ ದೇಶದವರೆಗೆ ರಫ್ತಾಗುತ್ತದೆ. ಒಣ ದ್ರಾಕ್ಷಿ ಕೂಡ ಪ್ರಪಂಚದ ಅನೇಕ ಕಡೆ ರಫ್ತಾಗುತ್ತದೆ. ಆದರೆ ಈಗ ಈ ದ್ರಾಕ್ಷಿಯ ಕಣಜದ ಹೆಸರು ಅಳಿಸಿ ಹೋಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಆದಕ್ಕೆ ಪ್ರಮುಖ ಕಾರಣ ಪ್ರತಿ ವರ್ಷ ಕೈ ಕೊಡುತ್ತಿರುವ ದ್ರಾಕ್ಷಿ ಬೆಳೆ.

    ರಾಜ್ಯದಲ್ಲೇ ಅತೀ ಹೆಚ್ಚು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 12 ಸಾವಿರ ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತೆ. ರೈತರು ಏಪ್ರಿಲ್ ತಿಂಗಳಷ್ಟೊತ್ತಿಗೆ ಮಾಡಬೇಕಿದ್ದ ದಾಕ್ಷಿ ಕಟ್ಟಿಂಗ್ (ಚಾಟ್ನಿ) 25% ನಷ್ಟು ಮಾಡಿಲ್ಲ. ಆದ್ದರಿಂದ ಅಕ್ಟೊಬರ್ ತಿಂಗಳಲ್ಲಿ ನೀರಿಕ್ಷೆ ಮಾಡಿದಷ್ಟು ಫಸಲು ಬಂದಿಲ್ಲ. ಇದರಿಂದ ಇಳುವರಿಯಲ್ಲಿ ಇಳಿಮುಖವಾಗಿದ್ದು, ಈ ಬಾರಿ 30 ರಿಂದ 40% ಇಳುವರಿ ಕಡಿಮೆ ಬರುತ್ತೆ. ಇದಕ್ಕೆಲ್ಲ ಪ್ರಮುಖ ಕಾರಣ ವರುಣನ ಅವಕೃಪೆ, ಅಂತರ್ಜಲ ಕುಸಿತ, ಬೋರ್ ವೆಲ್ ನಲ್ಲಿ ನೀರಲ್ಲದ್ದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

    ಬರದ ನಾಡು ಖ್ಯಾತಿಯ ವಿಜಯಪುರ ಜಿಲ್ಲೆಯ ರೈತರು ನಿರಂತರ ವರುಣನ ಅವಕೃಪೆಯಿಂದ ತತ್ತರಿಸಿ ಹೋಗಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ದ್ರಾಕ್ಷಿಗೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯಲ್ಲೇ ದ್ರಾಕ್ಷಿ ಸಿಗದಂತಾಗುತ್ತೆ. ಇದರಿಂದ ದ್ರಾಕ್ಷಿ ಬೆಳೆಗಾರರು ಆತಂಕಗೊಂಡಿದ್ದು, ಅಂತರ್ಜಲ ಹೆಚ್ಚಿಸುವಲ್ಲಿ ಸರ್ಕಾರ ಹೊಸ ಯೋಜನೆ ರೂಪಿಸಿ ದಿಟ್ಟ ಹೆಜ್ಜೆ ಇಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಗ್‍ಬಾಸ್ ಶೋದಲ್ಲಿ ಟೆಕ್ಕಿಗಳಿಗೆ ಅವಕಾಶ ನೀಡಿ: ಅಭಿಮಾನಿಗಳ ಬೇಡಿಕೆ ಏನು?

    ಬಿಗ್‍ಬಾಸ್ ಶೋದಲ್ಲಿ ಟೆಕ್ಕಿಗಳಿಗೆ ಅವಕಾಶ ನೀಡಿ: ಅಭಿಮಾನಿಗಳ ಬೇಡಿಕೆ ಏನು?

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್’ ಕನ್ನಡ ಆರನೇ ಆವೃತ್ತಿಯ ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ಇದೇ ತಿಂಗಳು 21ಕ್ಕೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಆದರೆ ರಿಯಾಲಿಟಿ ಶೋ ಆರಂಭಕ್ಕೂ ಮುನ್ನಾ ಪ್ರೇಕ್ಷಕರು ಬಿಗ್‍ಬಾಸ್ ಗೆ ಬೇಡಿಕೆಯಿಟ್ಟಿದ್ದಾರೆ.

    ಖಾಸಗಿ ವಾಹಿಯೂ ಇತ್ತೀಚೆಗೆ ಬಿಗ್‍ಬಾಸ್ ನ ಪ್ರೋಮೋ ಒಂದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದೆ. ಈ ಪ್ರೋಮೋದಲ್ಲಿ ನಟ ಸುದೀಪ್ ಮಾತನಾಡಿದ್ದು, ಈ ಪ್ರೋಮೋ ನೋಡಿ ಪ್ರೇಕ್ಷಕರು ಕಮೆಂಟ್ ಗಳ ಮೂಲಕ ತಮ್ಮ ಅನಿಸಿಕೆ ಮತ್ತು ಬೇಡಿಕೆಗಳನ್ನು ತಿಳಿಸಿದ್ದಾರೆ.

    ಬಿಗ್‍ಬಾಸ್ ಶೋ ನಲ್ಲಿ ಮೊದಲ ಆವೃತ್ತಿಯಿಂದಲೂ ಐಟಿ ಉದ್ಯೋಗಿಗಳು ಸ್ಪರ್ಧಿಗಳಾಗಿ ಕಾಣಿಸಿಕೊಂಡಿಲ್ಲ. ಆದ್ದರಿಂದ ಈ ಬಾರಿಯಾದರೂ ಐಟಿ ಉದ್ಯೋಗಿಗೆ ಅವಕಾಶ ಕೊಡಿ ಎಂದು ಬಿಗ್‍ಬಾಸ್ ಬಳಿ ಟೆಕ್ಕಿಗಳು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ.

     

    ಸಾಮಾಜಿಕ ಜಾಲತಾಣಗಳಲ್ಲಿ ಹಾಡಿನ ಮೂಲಕ ಗುರುತಿಸಿಕೊಂಡಿರುವ ತುಳಸಿ ಪ್ರಸಾದ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ದಯವಿಟ್ಟು ತುಳಸಿ ಪ್ರಸಾದ್ ಆಯ್ಕೆ ಮಾಡಬೇಡಿ. ಒಂದು ವೇಳೆ ಆಯ್ಕೆ ಮಾಡಿದರೆ `ಬಿಗ್‍ಬಾಸ್ ಬ್ಯಾನ್’ ಎಂದು ಒಂದು ಆಂದೋಲನ ಶುರುವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಕೆಲವರು ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ಲವ್ ಸ್ಟೋರಿ ಆಗುತ್ತಿದೆ. ಈ ಬಾರಿ ನಮಗೆ ಫೇಕ್ ಲವ್ ಸ್ಟೋರಿ ಬೇಡ. ಅದನ್ನು ನೋಡಲು ನಮಗೆ ಇಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ಸಲದ ಕನ್ನಡ ಬಿಗ್ ಬಾಸ್ ಮನೆಗೆ ಜನಸಾಮಾನ್ಯರ ಸಂಖ್ಯೆ ಎಷ್ಟು? ಸೆಲೆಬ್ರಿಟಿಗಳ ಸಂಖ್ಯೆ ಎಷ್ಟು? ಅದರಲ್ಲಿ ಹೆಣ್ಣು ಮಕ್ಕಳು ಎಷ್ಟು? ಗಂಡು ಮಕ್ಕಳು ಎಷ್ಟು? ಎಂದು ಪ್ರಶ್ನೆ ಕೇಳಿದ್ದಾರೆ.

    ತುಂಬಾ ಜನರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲು ಇಷ್ಟಪಟ್ಟಿದ್ದು, ನಮ್ಮನ್ನು ಆಯ್ಕೆ ಮಾಡಿ ಬಿಗ್‍ಬಾಸ್ ಎಂದು ಕೇಳಿಕೊಂಡಿದ್ದಾರೆ. ಆಯ್ಕೆಯಾಗದಿರುವವರು ಅವರ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಎಂಬ ಶೀರ್ಷಿಕೆಯನ್ನು ಕನ್ನಡದಲ್ಲಿ ಬಳಸಿದ್ದಕ್ಕೆ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ತುಂಬಾ ಜನರು ಸುದೀಪ್ ಅವರ ಅಭಿನಯವನ್ನು ಮೆಚ್ಚಿಕೊಂಡು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಾವು ಬಿಗ್‍ಬಾಸ್ ಶೋಗೆ ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv