Tag: Delivery Boys

  • ಸ್ವಿಗ್ಗಿ ಡೆಲಿವರಿ ಬ್ಯಾಗ್‍ಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

    ಸ್ವಿಗ್ಗಿ ಡೆಲಿವರಿ ಬ್ಯಾಗ್‍ಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

    ಬೆಂಗಳೂರು: ನಗರದಲ್ಲಿ ಸ್ವಿಗ್ಗಿ ಡೆಲಿವರಿ (Swiggy Delivery)  ಬ್ಯಾಗ್‍ಗಳಲ್ಲಿ (Bag) ಗಾಂಜಾ (Cannabis) ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು (Bengaluru) ಸಿಸಿಬಿ (CCB) ಪೊಲೀಸರು (Police) ಬಂಧಿಸಿದ್ದಾರೆ.

    ಸ್ವಿಗ್ಗಿ ಡೆಲಿವರಿ ಬ್ಯಾಗ್‍ನಲ್ಲಿ ಗಾಂಜಾ ಸಾಗಾಟದ ಅನುಮಾನ ಬಂದ ಹಿನ್ನೆಲೆ ಕಾರ್ಯಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ವೈಟ್ ಫೀಲ್ಡ್ ಮತ್ತು ಯಲಹಂಕದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಾಂಜಾ ಡೆಲಿವರಿ ಬ್ಯಾಗ್‍ನಲ್ಲಿ ಸಾಗಾಟ ಮಾಡಿ ಮಾರಾಟ ಮಾಡುವ ಜಾಲ ಬಯಲಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಬೆಂಕಿ ಅವಘಡ – ಮನೆಯಲ್ಲಿದ್ದ ಇಬ್ಬರು ಮಕ್ಕಳು ಸೇರಿ 6 ಮಂದಿ ಸಜೀವ ದಹನ

    ಬಂಧಿತರಿಬ್ಬರೂ ಸ್ವಿಗ್ಗಿ ಡೆಲಿವರಿ ಹೆಸರಲ್ಲಿ ಗ್ರಾಹಕರಿಗೆ ಗಾಂಜಾ ಸರಬರಾಜು ಮಾಡುತ್ತಿದ್ರು. ಬಿಹಾರದಿಂದ ಬೆಂಗಳೂರಿಗೆ ವಿವಿಧ ಬಗೆಯ ಡ್ರಗ್ಸ್ ತಂದು ಸ್ವಿಗ್ಗಿ ಡೆಲಿವರಿ ಬ್ಯಾಗ್‍ಗಳಲ್ಲಿ ತುಂಬಿಕೊಂಡು ಅಪಾರ್ಟ್ಮೆಂಟ್‌ಗಳಲ್ಲಿ ನಡೆಯುವ ಪಾರ್ಟಿಗಳು, ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬ ಕುರಿತು ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ ಗಾಂಜಾ ಮತ್ತು ಎಮ್‍ಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಮತ್ತಷ್ಟು ಇದೇ ರೀತಿಯ ತಂಡಗಳು ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಆಯ್ತು, ಈಗ ಕಂಗನಾ ರಣಾವತ್‌ಗೂ ಕೇಸರಿ ಕಂಟಕ

    Live Tv
    [brid partner=56869869 player=32851 video=960834 autoplay=true]

  • ಆನ್‍ಲೈನ್‍ನಲ್ಲಿ ಬಂದ ಮೊಬೈಲ್ ಕದ್ದು ಸೋಪ್ ಇಟ್ಟ ಡೆಲಿವರಿ ಬಾಯ್ಸ್

    ಆನ್‍ಲೈನ್‍ನಲ್ಲಿ ಬಂದ ಮೊಬೈಲ್ ಕದ್ದು ಸೋಪ್ ಇಟ್ಟ ಡೆಲಿವರಿ ಬಾಯ್ಸ್

    ಲಕ್ನೋ: ಆನ್‍ಲೈನ್‍ನಲ್ಲಿ ಮೊಬೈಲ್ ಆರ್ಡರ್ ಮಾಡಿದವರಿಗೆ ಡೆಲಿವರಿ ಬಾಯ್ಸ್ ಪಂಗನಾಮ ಹಾಕಿದ್ದು, ಬಾಕ್ಸ್ ನಲ್ಲಿದ್ದ ಮೊಬೈಲ್ ಕದ್ದು, ಸೋಪ್ ಇಟ್ಟು ಡೆಲಿವರಿ ಮಾಡಿದ್ದಾರೆ.

    ಬಾಕ್ಸ್ ನಲ್ಲಿದ್ದ ಹೊಸ ಮೊಬೈಲ್ ಕದ್ದು, ಮೊಬೈಲ್ ಬದಲಿಗೆ ಸೋಪ್ ಇಟ್ಟು ಡೆಲಿವರಿ ಮಾಡಿದ್ದಾರೆ. ಇದೇ ರೀತಿ ಹಲವು ಗ್ರಾಹಕರಿಗೆ ಮೋಸ ಮಾಡಿದ್ದ ಗ್ಯಾಂಗ್‍ನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಮೇಜಾನ್, ಫ್ಲಿಪ್‍ಕಾರ್ಟ್‍ನಿಂದ ಬುಕ್ ಮಾಡಿದವರಿಗೆ ಡೆಲಿವರಿ ಬಾಯ್ಸ್ ಮೋಸ ಮಾಡಿದ್ದು, ಡೀಲರ್ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳನ್ನು ಶಿವಂ, ಕರಣ್, ವಿಜಯ್, ಅಶೋಕ್, ನಾಗೇಂದ್ರ ಹಾಗೂ ಶಿವಂ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ. ಆರೋಪಿಗಳಿದ್ದ ಸ್ಥಳದಿಂದ 11 ಮೊಬೈಲ್ ಫೋನ್, ನಕಲಿ ಬಿಲ್ ಬುಕ್, ಪ್ಯಾಕಿಂಗ್ ಮಟಿರಿಯಲ್, ಟೇಪ್ ಕಟರ್ಸ್ ಹಾಗೂ ಸೋಪ್ ಬಾರ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಗಾಜಿಯಾಬಾದ್‍ನ ವಸುಂಧರಾ ಕಾಲೋನಿಯ ಸೆಕ್ಟರ್ 15ರಲ್ಲಿ ಬಂಧಿಸಲಾಗಿದೆ ಎಂದು ಡಿಎಸ್‍ಪಿ ಅನ್ಶು ಜೈನ್ ಮಾಹಿತಿ ನೀಡಿದ್ದಾರೆ.

    ಈ ಗ್ಯಾಂಗ್ ಹೊಸ ಮೊಬೈಲ್‍ಗಳಿದ್ದ ಬಾಕ್ಸ್ ನ್ನು ಕತ್ತರಿಸಿ, ಮೊಬೈಲ್ ತೆಗೆದುಕೊಂಡು, ಬಳಿಕ ಸೋಪ್ ಇಟ್ಟು ಗೊತ್ತಾಗದ ರೀತಿಯಲ್ಲಿ ನಾಜೂಕಾಗಿ ಪ್ಯಾಕ್ ಮಾಡುತ್ತಿದ್ದರು. ಅಲ್ಲದೆ ಡೆಲಿವರಿ ಬಾಯ್ಸ್ ಗ್ರಾಹಕರಿಗೆ ನಕಲಿ ಬಿಲ್ ನೀಡಿ ಯಾಮಾರಿಸುತ್ತಿದ್ದರು. ಗ್ರಾಹಕರ ಚಿತ್ತವನ್ನು ಬೇರೆಡೆ ಸೆಳೆಯಲು ಹೊಸ ಮೊಬೈಲ್‍ಗಳ ಮೇಲೆ ಡಿಸ್ಕೌಂಟ್‍ನ್ನು ಸಹ ಡೆಲಿವರಿ ಬಾಯ್ಸ್ ನೀಡುತ್ತಿದ್ದರು.

  • ಫುಡ್ ಡೆಲಿವರಿ ಬಾಯ್ಸ್‌ಗೆ 7 ಟಫ್ ರೂಲ್ಸ್ – ಆನ್‍ಲೈನ್ ಫುಡ್ ಆರ್ಡರ್ ಮುನ್ನ ಈ ಸ್ಟೋರಿ ಓದಿ

    ಫುಡ್ ಡೆಲಿವರಿ ಬಾಯ್ಸ್‌ಗೆ 7 ಟಫ್ ರೂಲ್ಸ್ – ಆನ್‍ಲೈನ್ ಫುಡ್ ಆರ್ಡರ್ ಮುನ್ನ ಈ ಸ್ಟೋರಿ ಓದಿ

    ಬೆಂಗಳೂರು: ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಎಷ್ಟೇ ಕಠಿಣ ನಿಮಯಗಳನ್ನು ಜಾರಿ ಮಾಡಿದ್ರೂ ಜನರು ಮಾತ್ರ ಸುಖಾಸುಮ್ಮನೆ ಓಡಾಡಲು ಶುರು ಮಾಡಿದ್ದಾರೆ. ಇದೀಗ ಫುಡ್ ಡೆಲಿವರಿ ಬಾಯ್ಸ್‌ಗೆ ಟಫ್ ರೂಲ್ಸ್ ಜಾರಿಯಾಗಲಿದೆ. ಹೀಗಾಗಿ ಆನ್‍ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಸ್ಟೋರಿ ಓದಿ.

    ಸರ್ಕಾರದಿಂದ ಫುಡ್ ಡೆಲಿವರಿ ಬಾಯ್ಸ್‌ಗೆ ಕಠಿಣ ನಿಮಯ ಜಾರಿಗೆ ಬಂದಿದೆ. ಸರ್ಕಾರ ಜಾರಿ ಮಾಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಫುಡ್ ಡೆಲಿವರಿ ಬಾಯ್ಸ್‌ಗೆ ಏಳು ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿದೆ. ಒಂದು ವೇಳೆ ಫುಡ್ ಡೆಲಿವರಿ ಬಾಯ್ಸ್ ಈ ನಿಯಮಗಳನ್ನು ಪಾಲಿಸದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

    ಏಳು ಕಠಿಣ ನಿಮಯ:
    1. ಫೇಸ್ ಮಾಸ್ಕ್ ಮತ್ತು ಫೇಸ್ ಸೀಲ್ಡ್ ಕಡ್ಡಾಯವಾಗಿ ಬಳಸಬೇಕು.
    2. ಫುಡ್ ಡೆಲಿವರಿಗೆ ಮುನ್ನ ಮತ್ತು ನಂತರ ಕೈಗಳನ್ನ ಸ್ಯಾನಿಟೈಸ್ ಮಾಡಬೇಕು.
    3. ಫುಡ್ ಡೆಲಿವರಿ ಕೊಡುವಾಗ 3 ರಿಂದ 6 ಅಡಿ ಅಂತರ ಪಾಲಿಸಬೇಕು.
    4. ಕಾಲಿಂಗ್ ಬೆಲ್, ಬಾಗಿಲು, ಗೇಟ್ ಮುಟ್ಟಬಾರದು. ಮುಟ್ಟಿದರೆ ತಕ್ಷಣ ಕೈಗಳಿಗೆ ಸ್ಯಾನಿಟೈಸ್ ಮಾಡಬೇಕು.
    5. ಯುಪಿಐ ಅಥವಾ ಆನ್‍ಲೈನ್ ಮೂಲಕ ಹಣ ಪಡೆಯುವುದು ಸೂಕ್ತ.
    6. ಹಣ ಪಡೆದರೆ ತಕ್ಷಣ ಕೈಗಳಿಗೆ ಸ್ಯಾನಿಟೈಸ್ ಮಾಡಬೇಕು.
    7. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮುಟ್ಟಿದರು ಕೈಗಳಿಗೆ ಸ್ಯಾನಿಟೈಸ್ ಮಾಡಬೇಕು.