Tag: Delimitation Row

  • ಕ್ಷೇತ್ರ ಪುನರ್‌ವಿಂಗಡಣೆ; ತ‌ಮಿಳುನಾಡಿನಲ್ಲಿ ಸರ್ವಪಕ್ಷ ಸಭೆ

    ಕ್ಷೇತ್ರ ಪುನರ್‌ವಿಂಗಡಣೆ; ತ‌ಮಿಳುನಾಡಿನಲ್ಲಿ ಸರ್ವಪಕ್ಷ ಸಭೆ

    – ದಕ್ಷಿಣ ರಾಜ್ಯಗಳ ಸಂಸದರು, ಪಕ್ಷದ ಪ್ರತಿನಿಧಿಗಳ ಜಂಟಿ ಕ್ರಿಯಾ ಸಮಿತಿ ರಚನೆಗೆ ನಿರ್ಧಾರ

    ಚೆನ್ನೈ: ಕ್ಷೇತ್ರ ಪುನರ್‌ವಿಂಗಡಣೆ (Delimitation Row) ವಿಷಯವನ್ನು ಚರ್ಚಿಸಲು ನಡೆದ ಸರ್ವಪಕ್ಷ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin), ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಕ್ಷೇತ್ರಗಳನ್ನು ಪುನರ್‌ವಿಂಗಡಿಸುವ ಪ್ರಸ್ತಾವಿತ ಕ್ರಮವನ್ನು ಸಾಮೂಹಿಕವಾಗಿ ವಿರೋಧಿಸಲು ದಕ್ಷಿಣ ರಾಜ್ಯಗಳ ಸಂಸದರು ಮತ್ತು ಪಕ್ಷದ ಪ್ರತಿನಿಧಿಗಳ ಜಂಟಿ ಕ್ರಿಯಾ ಸಮಿತಿಯನ್ನು ರಚಿಸುವಂತೆ ಸೂಚಿಸಿದ್ದಾರೆ.

    ಎಂ.ಕೆ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು, ನಟ-ರಾಜಕಾರಣಿ ಕಮಲ್ ಹಾಸನ್ ಮತ್ತು ವಿಜಯ್ ಅವರ ಟಿವಿಕೆ ಸೇರಿದಂತೆ ಇತರರು ಭಾಗವಹಿಸಿದ್ದರು. ಇದನ್ನೂ ಓದಿ: ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ

    MK Stalin (1)

    ತಮಿಳುನಾಡು ಬಿಜೆಪಿ ಸಭೆಗೆ ಗೈರಾಗಿದ್ದು, ರಾಜ್ಯಾಧ್ಯಕ್ಷ ಅಣ್ಣಾಮಲೈ ಇದನ್ನು ಅತ್ಯಂತ ತಮಾಷೆ ಎಂದು ಬಣ್ಣಿಸಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆ ದಕ್ಷಿಣ ರಾಜ್ಯಗಳಿಗೆ ಅನಾನುಕೂಲಕರವಾಗುವ ಭಯ ಕಾಲ್ಪನಿಕ ಎಂದು ಹೇಳಿದ್ದಾರೆ. ತಮಿಳು ರಾಷ್ಟ್ರೀಯವಾದಿ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಮತ್ತು ಮಾಜಿ ಕೇಂದ್ರ ಸಚಿವ ಜಿಕೆ ವಾಸನ್ ಅವರ ತಮಿಳು ಮಾನಿಲ ಕಾಂಗ್ರೆಸ್ (ಮೂಪನಾರ್) ಕೂಡ ಸಭೆಗೆ ಗೈರಾಗಿದ್ದವು.

    ಸಭೆಯಲ್ಲಿ ಮಾತನಾಡಿದ ಸಿಎಂ ಎಂ.ಕೆ.ಸ್ಟಾಲಿನ್, ಸಂಸದೀಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದರೆ ನಮಗೆ 22 ಹೆಚ್ಚುವರಿ ಸ್ಥಾನಗಳು ಸಿಗಬೇಕು. ಆದರೆ, ಪ್ರಸ್ತುತ ಜನಸಂಖ್ಯೆಯ ಪ್ರಕಾರ ನಮಗೆ ಕೇವಲ 10 ಹೆಚ್ಚುವರಿ ಸ್ಥಾನಗಳು ಸಿಗುತ್ತವೆ. ಅಂದರೆ ನಾವು 12 ಸ್ಥಾನಗಳನ್ನು ಕಳೆದುಕೊಳ್ಳುತ್ತೇವೆ. ಇದು ಭಾರತೀಯ ಪ್ರಜಾಪ್ರಭುತ್ವದಲ್ಲಿ ತಮಿಳುನಾಡಿನ ರಾಜಕೀಯ ಪ್ರಾತಿನಿಧ್ಯದ ಮೇಲಿನ ನೇರ ದಾಳಿಯಾಗಿದೆ. ತಮಿಳುನಾಡಿನ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ತನ್ನ ಜನರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಮ್ಮ ರಾಜ್ಯದ ಬಲವನ್ನು ಕಡಿಮೆ ಮಾಡಲಾಗುತ್ತಿದೆ. ನಾವು ಕ್ಷೇತ್ರ ಪುನರ್‌ವಿಂಗಡಣೆಯನ್ನು ವಿರೋಧಿಸುವುದಿಲ್ಲ. ಆದರೆ, ಕಳೆದ 50 ವರ್ಷಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಕ್ಕಾಗಿ ಇದು ಶಿಕ್ಷೆಯಾಗಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    ಈ ಸರ್ವಪಕ್ಷ ಸಭೆಯು 2026 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸುತ್ತದೆ. 2026 ರ ನಂತರ ಮತ್ತು ಮುಂದಿನ 30 ವರ್ಷಗಳವರೆಗೆ 1971 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ಪ್ರಧಾನಿ ಭರವಸೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ. ಸಂಸದೀಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಅಗತ್ಯ ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಬೇಕು. ಈ ಸರ್ವಪಕ್ಷ ಸಭೆಯು ಈ ಬೇಡಿಕೆಗಳನ್ನು ತಮಿಳುನಾಡಿನ ಕನಿಷ್ಠ ನಿರೀಕ್ಷೆಗಳಾಗಿ ಇರಿಸುತ್ತದೆ. ನಾವು ಈ ವಿಷಯವನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ ಅದರ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಈ ವಿಷಯವನ್ನು ಮುಂದಕ್ಕೆ ಕೊಂಡೊಯ್ಯಲು ದಕ್ಷಿಣ ಭಾರತದ ಸಂಸದರಿಗಾಗಿ ಜಂಟಿ ಕ್ರಿಯಾ ಸಮಿತಿಯನ್ನು ಸಹ ರಚಿಸುತ್ತೇವೆ ಎಂದು ಹೇಳಿದರು.

    ಕೇಂದ್ರ ಸರ್ಕಾರವು ನಿರಂಕುಶವಾಗಿ ಸಂಸದೀಯ ಕ್ಷೇತ್ರಗಳ ವಿಂಗಡಣೆ ಪ್ರಕ್ರಿಯೆಯನ್ನು ಆರಂಭಿಸಿದರೆ ದಕ್ಷಿಣ ರಾಜ್ಯಗಳ ರಾಜಕೀಯ ಮಹತ್ವವನ್ನು ಸಂಪೂರ್ಣವಾಗಿ ನಾಶಮಾಡುವ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ. ಇದನ್ನು ಯಾವುದೇ ರೀತಿಯಲ್ಲಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕ್ಷೇತ್ರ ಪುನರ್ ವಿಂಗಡಣೆಯ ವಿರುದ್ಧ ಹೋರಾಡಲು ತಮಿಳಗ ವೆಟ್ರಿ ಕಳಗಂ ಎಲ್ಲಾ ಪಕ್ಷಗಳೊಂದಿಗೆ ನಿಲ್ಲುತ್ತದೆ. ಈ ಕೆಟ್ಟ ಪರಿಸ್ಥಿತಿಯಲ್ಲಿ ತಮಿಳುನಾಡು ಕಲ್ಯಾಣವನ್ನು ಯಾರು ವಿರೋಧಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಲಾಗುತ್ತದೆ. ತಮಿಳುನಾಡು ಕಲ್ಯಾಣಕ್ಕಾಗಿ ಯಾರು ನಿಲ್ಲುತ್ತಾರೆ ಎಂಬುದನ್ನು ಸಹ ತಿಳಿಯುತ್ತದೆ ಎಂದು ನಟ ಮತ್ತು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಟ್ವೀಟ್ ಮಾಡಿದ್ದಾರೆ.

  • 16 ಮಕ್ಕಳನ್ನು ಹೊಂದುವ ಬಗ್ಗೆ ಯೋಚಿಸಿ – ತಮಿಳುನಾಡು ಸಿಎಂ ಸ್ಟಾಲಿನ್‌ ಕರೆ ಕೊಟ್ಟಿದ್ದೇಕೆ?

    16 ಮಕ್ಕಳನ್ನು ಹೊಂದುವ ಬಗ್ಗೆ ಯೋಚಿಸಿ – ತಮಿಳುನಾಡು ಸಿಎಂ ಸ್ಟಾಲಿನ್‌ ಕರೆ ಕೊಟ್ಟಿದ್ದೇಕೆ?

    ಚೆನ್ನೈ: ಹಿಂದಿನ ಕಾಲದಲ್ಲಿ ಹಿರಿಯರು ನವ ದಂಪತಿಗಳಿಗೆ 16 ರೂಪದ ಸಂಪತ್ತನ್ನು ಹೊಂದುವಂತೆ ಆಶೀರ್ವದಿಸುತ್ತಿದ್ದರು. ಬಹುಶಃ ಈಗ 16 ರೂಪದ ಸಂಪತ್ತಿನ ಬದಲು 16 ಮಕ್ಕಳನ್ನು (Childrens) ಹೊಂದುವಂತೆ ಆಶೀರ್ವಾದ ನೀಡುವ ಸಮಯ ಬಂದಿದೆ ಎಂದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ (MK Stalin) ಹೇಳಿದ್ದಾರೆ.

    ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ದಕ್ಷಿಣ ಭಾರತ ರಾಜ್ಯಗಳ ಜನರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಕರೆ ನೀಡಿದ್ದರು. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗುವ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಹ ಜೇಳಿದ್ದರು. ಈ ಬೆನ್ನಲ್ಲೇ ತಮಿಳುನಾಡು (Tamil Nadu) ಸಿಎಂ ದಂಪತಿಗಳು ಹಚ್ಚೆಚ್ಚು ಮಕ್ಕಳನ್ನು ಹೊಂದುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಶಿಮ್ಲಾದಲ್ಲಿ ಅಕ್ರಮ ಮಸೀದಿ ತೆರವು ಕಾರ್ಯ ಆರಂಭ – 5 ಮಹಡಿಯ ಕಟ್ಟಡದಲ್ಲಿ 3 ಮಹಡಿ ಅಕ್ರಮ ನಿರ್ಮಾಣ

    ಚೆನ್ನೈನಲ್ಲಿ ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮದಲಿ 31 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿಸಿ ಅವರು ಮಾತನಾಡಿದರು. ತಮಿಳುನಾಡಿನಲ್ಲಿ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿ ಇರುವ ನಾಣ್ಣುಡಿ ಒಂದಿದೆ. ಹಿಂದೆ ನಮ್ಮ ಹಿರಿಯರೆಲ್ಲ 16 ವಿವಿಧ ಬಗೆಯ ಸಂಪತ್ತುಗಳನ್ನು ಹೊಂದಿರಬೇಕು ಎಂದು ಆಶೀರ್ವದಿಸುತ್ತಿದ್ದರು. ಈಗ 16 ಮಕ್ಕಳನ್ನು ಹೊಂದುವಂತೆ ಆಶೀರ್ವಾದ ಮಾಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

    ಮುಂದುವರಿದು, ಇವತ್ತಿನ ಪರಿಸ್ಥಿತಿಯಲ್ಲಿ ದಕ್ಷಿಣ ಭಾರತದಲ್ಲಿ ಲೋಕಸಭಾ ಸ್ಥಾನಗಳು ಕುಸಿಯುತ್ತಿದೆ. ಹೀಗಾಗಿ ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ನಾವು ಏಕೆ ಕಡಿಮೆ ಮಕ್ಕಳನ್ನು ಹೊಂದಬೇಕು ಎಂದು ನಿರ್ಬಂಧ ಹಾಕಿಕೊಳ್ಳಬೇಕು? ನಾವೇಕೆ 16 ಮಕ್ಕಳನ್ನು ಹೊಂದುವ ಗುರಿ ಹಾಕಿಕೊಳ್ಳಬಾರದು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರಾಮಜನ್ಮಭೂಮಿ ವಿವಾದ ಪರಿಹಾರಕ್ಕೆ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್‌

    ಸ್ಟಾಲಿನ್‌ ಹೇಳಿಕೆಗೆ ಕಾರಣ ಏನು?
    ಜನಸಂಖ್ಯೆ ಹೆಚ್ಚಳ ಮಾಡಿಕೊಳ್ಳಿ ಎಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಕರೆ ನೀಡೋದಕ್ಕೆ ರಾಜಕೀಯ ಕಾರಣಗಳೂ ಇವೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಉಪಕಣ; ದೋಸ್ತಿಗಳಲ್ಲಿ ಮೂಡದ ಒಮ್ಮತ – ಮುಂದಿನ ಆಯ್ಕೆ ಮುಕ್ತವಾಗಿರಿಸಿದ ಮಾಜಿ ಮಂತ್ರಿ

    ಇಂದಿನ ದಿನಗಳಲ್ಲಿ ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಲೋಕಸಭಾ ಸದಸ್ಯ ಸ್ಥಾನಗಳು ಜನಸಂಖ್ಯೆ ಆಧಾರದ ಮೇಲೆ ನಿರ್ಧಾರ ಆಗುವ ಕಾರಣ, ಜನಸಂಖ್ಯೆ ಕಡಿಮೆ ಇರುವ ದಕ್ಷಿಣ ಭಾರತಕ್ಕೆ ಕಡಿಮೆ ಸಂಸದರು ಸಿಗುತ್ತಾರೆ. ಮುಂದಿನ ದಿನಗಳಲ್ಲಿ ಇದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗುತ್ತದೆ ಅನ್ನೋದು ತಮಿಳುನಾಡು ಸಿಎಂ ಕಳವಳ ಎಂದು ವಿಶ್ಲೇಷಕರು ಹೇಳಿದ್ದಾರೆ.

    ಕಳವಳ ಏಕೆ?
    ಮುಂದಿನ ದಿನಗಳಲ್ಲಿ ತಮಿಳುನಾಡು ಮತ್ತು ಇತರ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆ ಜನಸಂಖ್ಯೆ ಹೆಚ್ಚಳದಿಂದ 753ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂಬುದು ಕೆಲವರ ಅಂದಾಜು. ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಹಾಲಿ ಕ್ಷೇತ್ರಗಳ ಸಂಖ್ಯೆ 80 ರಿಂದ 126ಕ್ಕೆ ಜಿಗಿಯುವ ಸಾಧ್ಯತೆಯಿದೆ. ದಕ್ಷಿಣದ ರಾಜ್ಯಗಳ ಪೈಕಿ, ಕರ್ನಾಟಕದಲ್ಲಿ 28 ರಿಂದ 36ಕ್ಕೆ, ತಮಿಳುನಾಡಿನಲ್ಲಿ 39ರಿಂದ 41ಕ್ಕೆ ಮತ್ತು ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ತಲಾ ಮೂರು ಸ್ಥಾನಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ.