Tag: Delhi Weather

  • ದೆಹಲಿ ಹವಾಮಾನದಲ್ಲಿ ಕ್ಷೀಪ್ರ ಬದಲಾವಣೆ – ಚಳಿ ಗಾಳಿಗೆ ನಡುಗಿದ ರಾಜಧಾನಿ ಜನರು

    ದೆಹಲಿ ಹವಾಮಾನದಲ್ಲಿ ಕ್ಷೀಪ್ರ ಬದಲಾವಣೆ – ಚಳಿ ಗಾಳಿಗೆ ನಡುಗಿದ ರಾಜಧಾನಿ ಜನರು

    ನವದೆಹಲಿ: ದೆಹಲಿಯಲ್ಲಿ ವಿಚಿತ್ರ ಹವಾಮಾನ ಕಂಡು ಬರುತ್ತಿದೆ. ಒಂದೇ ವಾರದ ಅವಧಿಯಲ್ಲಿ ತಾಪಮಾನದಲ್ಲಿ ಭಾರಿ ವ್ಯತ್ಯಾಸವಾಗುತ್ತಿದ್ದು, ಜನರು ಚಳಿಗಾಲದ ಮನಸ್ಥಿತಿಯಲ್ಲಿ ಬದುಕಬೇಕೋ ಅಥವಾ ಬೇಸಿಗೆಯ ವಾತಾವರಣಕ್ಕೆ ಸಜ್ಜಾಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ.

    ಕಳೆದ ಗುರುವಾರ ಅಂದರೆ ಫೆಬ್ರವರಿ 27 ರಂದು ದೆಹಲಿಯ ಕನಿಷ್ಠ ತಾಪಮಾನವು 20 ಡಿಗ್ರಿಗಳನ್ನು ಮುಟ್ಟುವ ಹಂತದಲ್ಲಿತ್ತು. ಆದರೆ ಇಂದು ಅದು ಮತ್ತೆ ಕುಸಿದಿದೆ. ಪಾಲಂನಂತಹ ಕೆಲವು ನಿಲ್ದಾಣಗಳಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ವರದಿಯಾಗಿದೆ.

    ತಾಪಮಾನ ಕುಸಿತಕ್ಕೆ ಕಾರಣ ಪಶ್ಚಿಮದಿಂದ ಬೀಸುತ್ತಿರುವ ಬಲವಾದ ಶೀತ ಮಾರುತಗಳು. ಸುಮಾರು 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇದು ಹಿಮಾಲಯದಿಂದ ಶೀತವನ್ನು ಹೊತ್ತು ತರುತ್ತಿದೆ. ಇತ್ತೀಚೆಗೆ, ಫೆಬ್ರವರಿ ಕೊನೆಯ ದಿನಗಳಲ್ಲಿ, ಪರ್ವತಗಳಲ್ಲಿ ಭಾರಿ ಹಿಮಪಾತವಾಯಿತು. ಅಂದಿನಿಂದ ಈ ತಂಪಾದ ಗಾಳಿಯು ದೆಹಲಿಯ ಜನರನ್ನು ನಡುಗಿಸುತ್ತಿದೆ. ಈ ಗಾಳಿ ನಾಳೆಯವರೆಗೆ ಅಂದರೆ ಮಾರ್ಚ್ 6 ರವರೆಗೆ ಬೀಸಲಿದೆ.

    ಹವಾಮಾನ ಇಲಾಖೆಯು ಮಾರ್ಚ್ ತಿಂಗಳನ್ನು ಬೇಸಿಗೆಯ ಆರಂಭವೆಂದು ಪರಿಗಣಿಸುತ್ತದೆ. ಈ ಬಾರಿ ಮಾರ್ಚ್ ತಿಂಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ಮಾರ್ಚ್ ಆರಂಭದ ದಿನಗಳಲ್ಲಿ ಹವಾಮಾನದಲ್ಲಿನ ಏರಿಳಿತಗಳಿಂದಾಗಿ, ಚಳಿಗಾಲ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಆದರೆ ದಿನಾಂಕ ಮುಂದುವರೆದಂತೆ, ತಾಪಮಾನವು ಹೆಚ್ಚಾಗುವ ನಿರೀಕ್ಷೆಯಿದೆ.

    ಮಾರ್ಚ್ 10 ರ ವೇಳೆಗೆ ಗರಿಷ್ಠ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನಿಷ್ಠ ತಾಪಮಾನವು 18 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಅಂದರೆ ಹೋಳಿ ಬರುವ ಹೊತ್ತಿಗೆ ದೆಹಲಿಯಲ್ಲಿ ಶಾಖವು ಅದರ ನಿಜವಾದ ರೂಪದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಲಿದೆ.

  • Delhi Weatherː ದೆಹಲಿಯಲ್ಲಿ ತಾಪಮಾನ ಏರಿಕೆ – ಮಾನ್ಸೂನ್ ವಿಳಂಬ ಸಾಧ್ಯತೆ

    Delhi Weatherː ದೆಹಲಿಯಲ್ಲಿ ತಾಪಮಾನ ಏರಿಕೆ – ಮಾನ್ಸೂನ್ ವಿಳಂಬ ಸಾಧ್ಯತೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ತಾಪಮಾನ ಹೆಚ್ಚುತ್ತಿದ್ದು ಜನರು ಮನೆಯಿಂದ ಹೊರ ಬರಲು‌ ಹೆದರುವ ಸನ್ನಿವೇಶ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ತೀವ್ರ ಬಿಸಿಲಿಸಿದ್ದು, ಗಂಟೆಗೆ 30-40 ಕಿಮೀ ವೇಗದಲ್ಲಿ ಬಿಸಿ ಗಾಳಿ ಬೀಸಲಿದೆ.

    weather (1)

    ಮಂಗಳವಾರ 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, ಬುಧವಾರ ಇದು 41 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬಿಪರ್‌ ಜಾಯ್‌ ಚಂಡಮಾರುತ (Biparjoy Cyclone) ಇಂದು‌ ಗುಜರಾತ್‌ನ ಕಛ್ ಮತ್ತು ಸೌರಾಷ್ಟ್ರ ಭಾಗದಲ್ಲಿ ಅಪ್ಪಳಿಸುತ್ತಿರುವ ಹಿನ್ನಲೆ‌ ಬಿಸಿ ಗಾಳಿಯ ಪ್ರಮಾಣ ತಗ್ಗಲಿದ್ದು ಮುಂದಿನ 4 ದಿನಗಳ 37°-39° ಸೆಲ್ಸಿಯಸ್‌ ತಾಪಮಾನ ಇರಲಿದೆ‌ ಎಂದು ಭಾರತೀಯ ಹವಾಮಾನ ‌ಇಲಾಖೆ‌ (IMD) ಹೇಳಿದೆ. ಇದನ್ನೂ ಓದಿ: ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ

    weather

    ಸದ್ಯ ತೀವ್ರ ಬಿಸಿಲಿರುವ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬರಲು‌ ಹಿಂದೇಟು‌ ಹಾಕ್ತಿದ್ದಾರೆ. ಮಧ್ಯಾಹ್ನದ ವೇಳೆ‌ ಜನರ ಸಂಚಾರ ‌ವಿರಳವಾಗಿದೆ. ಉರಿ ಬಿಸಿಲಿನಿಂದ ಜನರಲ್ಲಿ ಸುಸ್ತು ಕಾಣಿಸಿಕೊಳ್ಳುತ್ತಿದ್ದು ಬೆವರಿನಿಂದ ತುರಿಕೆ ಸಮಸ್ಯೆಯೂ‌ ಕಂಡು ಬರುತ್ತಿದೆ. ಇದನ್ನೂ ಓದಿ: Cyclone Biparjoy: ಇಂದು ಸಂಜೆ ಅಪ್ಪಳಿಸಲಿದೆ ಸೈಕ್ಲೋನ್‌ – 74 ಸಾವಿರ ಮಂದಿ ಸ್ಥಳಾಂತರ

    ನೈಋತ್ಯ ಮಾನ್ಸೂನ್ ಕಳೆದ ಗುರುವಾರ ಕೇರಳ ಕರಾವಳಿ ಭಾಗಕ್ಕೆ ಆಗಮಿಸಿದೆ. ದೆಹಲಿಯಲ್ಲಿ ಜೂನ್ 27ರ ವೇಳೆಗೆ ಮಾನ್ಸೂನ್ ಕಾಣಿಸಿಕೊಳ್ಳಬೇಕಿತ್ತು. ಆದರೆ ದೆಹಲಿಯಲ್ಲಿ ಮಾನ್ಸೂನ್ (Monsoon) ಆರಂಭವಾಗುವ ಬಗ್ಗೆ‌ ಹವಾಮಾನ ಇಲಾಖೆ ಇನ್ನೂ ಮಾಹಿತಿ ನೀಡಿಲ್ಲ. ಜೂನ್ 3ನೇ ವಾರದಲ್ಲಿ ಮಾನ್ಸೂನ್ ಬಗ್ಗೆ ಅಂದಾಜಿಸಬಹುದು ಎನ್ನಲಾಗಿದೆ.