Tag: Delhi Schools

  • ದೆಹಲಿಯ 6 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ – 4 ದಿನಗಳಿಂದ 3 ಬಾರಿ ಬೆದರಿಕೆ

    ದೆಹಲಿಯ 6 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ – 4 ದಿನಗಳಿಂದ 3 ಬಾರಿ ಬೆದರಿಕೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) 6 ಶಾಲೆಗಳಿಗೆ (Schools) ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ದೆಹಲಿಯ ಆರು ಶಾಲೆಗಳಿಗೆ ಬೆಳಗ್ಗೆ 6:35 ರಿಂದ 7:48ರ ನಡುವೆ ಬಾಂಬ್ ಬೆದರಿಕೆಗೆ (Bomb Threat) ಸಂಬಂಧಿಸಿದ ಕರೆಗಳು, ಇಮೇಲ್ ಬಂದಿವೆ. ಇವುಗಳಲ್ಲಿ ಪ್ರಸಾದ್ ನಗರದಲ್ಲಿರುವ ಆಂಧ್ರ ಶಾಲೆ, ಬಿಜಿಎಸ್ ಇಂಟರ್‌ನ್ಯಾಷನಲ್ ಶಾಲೆ, ರಾವ್ ಮಾನ್ ಸಿಂಗ್ ಶಾಲೆ, ಕಾನ್ವೆಂಟ್ ಶಾಲೆ, ಮ್ಯಾಕ್ಸ್ ಫೋರ್ಟ್ ಶಾಲೆ ಮತ್ತು ದ್ವಾರಕಾದ ಇಂದ್ರಪ್ರಸ್ಥ ಅಂತರರಾಷ್ಟ್ರೀಯ ಶಾಲೆಗಳಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಲ್‌ ಸಂತೋಷ್‌ ವಿರುದ್ಧ ಅವಹೇಳನ – ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ

    ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ಪೊಲೀಸ್ ತಂಡಗಳು ತಕ್ಷಣ ಆವರಣಕ್ಕೆ ಧಾವಿಸಿ, ಶೋಧ ಕಾರ್ಯ ನಡೆಸುತ್ತಿವೆ. ಇದನ್ನೂ ಓದಿ: ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ರಹಸ್ಯ ಬಯಲು – ಪ್ರಿಯತಮನಿಂದಲೇ ಸ್ಕೆಚ್‌; ಮರ್ಮ ಅರಿಯದೇ ಹೊರಟಿದ್ದಳು ಮುಗ್ಧೆ

    ಇದೀಗ ಒಂದೇ ವಾರದಲ್ಲಿ ಮೂರು ಬಾರಿ ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಆ.18 ರಂದು ದೆಹಲಿಯಾದ್ಯಂತ 32 ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು. ನಿನ್ನೆ (ಆ.20) 50 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿ 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆ ಇಟ್ಟಿದ್ದರು. ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಇವು ಹುಸಿ ಬಾಂಬ್ ಬೆದರಿಕೆಗಳು ಎಂದು ತಿಳಿದುಬಂದಿತ್ತು.

  • ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ – 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆ

    ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ – 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆ

    ನವದೆಹಲಿ: ರಾಷ್ಟ್ರ ರಾಜಧಾನಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ (Bomb Threat) ಮೇಲ್ ಬಂದಿದ್ದು, 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಟೆರರೈಸರ್ಸ್ 111 ಎಂಬ ಗುಂಪು ಆಂಗಿ ಪಬ್ಲಿಕ್ ಸ್ಕೂಲ್, ಫೇಯ್ತ್ ಅಕಾಡೆಮಿ, ಡೂನ್ ಪಬ್ಲಿಕ್ ಸ್ಕೂಲ್, ಸರ್ವೋದಯ ವಿದ್ಯಾಲಯ ಸೇರಿದಂತೆ ವಿವಿಧ ಶಾಲೆಗಳಿಗೆ 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆಯಿಟ್ಟು ಬಾಂಬ್ ಬೆದರಿಕೆಯ ಮೇಲ್ ಕಳುಹಿಸಿದೆ. ಸದ್ಯ ಶಾಲೆಗಳಲ್ಲಿ ಪೊಲೀಸರು ಹಾಗೂ ಶ್ವಾನದಳ ಪರಿಶೀಲನೆ ನಡೆಸಿವೆ.ಇದನ್ನೂ ಓದಿ: ಒಳಮೀಸಲಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ: ಮುಖ್ಯಮಂತ್ರಿ ಚಂದ್ರು

    ಇದೇ ಗುಂಪು ಆ.18ರಂದು ಬಾಂಬ್ ಬೆದರಿಕೆ ಕರೆ ಮಾಡಿ, 5,000 ಅಮೆರಿಕನ್ ಡಾಲರ್‌ಗೆ ಬೇಡಿಕೆ ಇಟ್ಟಿತ್ತು. ವಿವಿಧ ಶಾಲೆಗಳ ಪ್ರಾಂಶುಪಾಲರು ಮತ್ತು ಆಡಳಿತ ಸಿಬ್ಬಂದಿಗೆ ಇ-ಮೇಲ್ ಕಳುಹಿಸಿರುವ ಗುಂಪು, ಶಾಲೆಯ ಸಿಸಿಟಿವಿ ಕ್ಯಾಮರಾ, ವಿದ್ಯಾರ್ಥಿಗಳ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ತಮ್ಮ ಬಳಿ ಇದ್ದು, ಶಾಲೆಯ ಆವರಣದಲ್ಲಿ 48 ಗಂಟೆಗಳ ಒಳಗೆ ಬಾಂಬ್ ಸ್ಫೋಟಿಸುವುದಾಗಿ ತಿಳಿಸಿದ್ದರು.

    ನಮ್ಮದು ಟೆರರೈಸರ್ಸ್ 111 ಗುಂಪು. ನಿಮ್ಮ ಕಟ್ಟಡದ ಒಳಗೆ ಮತ್ತು ನಗರದ ಇತರೆಡೆ ಬಾಂಬ್ ಇಟ್ಟಿದ್ದೇವೆ. ಹೆಚ್ಚಿನ ಸಾಮರ್ಥ್ಯದ ಅ4 ಬಾಂಬ್‌ಗಳು ಸೇರಿದಂತೆ ಸ್ಫೋಟಕ ಸಾಧನಗಳನ್ನು ತರಗತಿ, ಸಭಾಂಗಣ, ಸಿಬ್ಬಂದಿ ಕೊಠಡಿ ಮತ್ತು ಶಾಲಾ ಬಸ್‌ಗಳಲ್ಲಿ ಇಟ್ಟಿದ್ದೇವೆ. ಅಪಾರ ಸಾವು-ನೋವು ಉಂಟು ಮಾಡುವಂತೆ ಮಾಡಿದ್ದೇವೆ. 48 ಗಂಟೆಗಳ ಒಳಗಾಗಿ 2000 ಅಮೆರಿಕನ್ ಡಾಲರ್ ವರ್ಗಾಯಿಸಿ, ಇಲ್ಲದಿದ್ದರೆ ಬಾಂಬ್ ಸ್ಫೋಟಿಸಲಾಗುವುದು ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದರು.

    ರಾಷ್ಟ್ರ ರಾಜಧಾನಿಯ ಹಲವಾರು ಶಾಲೆಗಳಿಗೆ ಟೆರರೈಸರ್ಸ್ 111 ಎಂದು ಹೇಳಲಾದ ಗುಂಪಿನಿಂದ ಇಮೇಲ್ ಬಂದಿತ್ತು. 72 ಗಂಟೆಗಳ ಒಳಗೆ ಕ್ರಿಪ್ಟೋಕರೆನ್ಸಿಯಲ್ಲಿ 5,000 ಡಾಲರ್ ವರ್ಗಾಯಿಸುವಂತೆ ಬೇಡಿಕೆ ಇಡಲಾಗಿತ್ತು. ಅಷ್ಟು ಹಣವನ್ನು ಕಳುಹಿಸದಿದ್ದಲ್ಲಿ ಶಾಲೆಯ ಆವರಣದಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲಾಗುವುದು ಅಧಿಕಾರಿಯೊಬ್ಬರು ತಿಳಿಸಿದ್ದರು.ಇದನ್ನೂ ಓದಿ: ಟೀಚರ್‌ ಮೇಲೆ ಸಿಕ್ಕಾಪಟ್ಟೆ ಲವ್‌ – ದೂರು ನೀಡಿದ್ದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ

  • ದೆಹಲಿಯಲ್ಲಿನ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    ದೆಹಲಿಯಲ್ಲಿನ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    ನವದೆಹಲಿ: ದೆಹಲಿಯ ಆರು ಶಾಲೆಗಳಿಗೆ ಶುಕ್ರವಾರ ಮುಂಜಾನೆ ಬಾಂಬ್ ಬೆದರಿಕೆ ಕರೆಗಳು ಬಂದಿದೆ. ಇ-ಮೇಲ್‌ ಮೂಲಕ ಬೆದರಿಕೆ ಕರೆ ಬಂದಿದ್ದು, ವಾರದಲ್ಲಿ ಎರಡನೇ ಪ್ರಕರಣ ದಾಖಲಾಗಿದೆ.

    ಡಿ.9 ರಂದು ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ಕನಿಷ್ಠ 44 ಶಾಲೆಗಳು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದ್ದವು. ನಂತರ, ಇದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ನಿರ್ಧರಿಸಿದ್ದರು.

    ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಒಂದು ವಾರದೊಳಗೆ ಶಾಲೆಗಳಿಗೆ ಎರಡನೇ ಬಾರಿ ಬಾಂಬ್ ಬೆದರಿಕೆ ಬಂದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

    ಭಟ್ನಾಗರ್ ಇಂಟರ್ನ್ಯಾಷನಲ್ ಸ್ಕೂಲ್, ಪಶ್ಚಿಮ ವಿಹಾರ್ (ನಸುಕಿನ 4:21), ಕೇಂಬ್ರಿಡ್ಜ್ ಶಾಲೆ, ಶ್ರೀ ನಿವಾಸ್ ಪುರಿ (ಬೆಳಗ್ಗೆ 6:23), ಡಿಪಿಎಸ್ ಅಮರ್ ಕಾಲೋನಿ, ಕೈಲಾಶ್ ಪೂರ್ವ (ಬೆಳಗ್ಗೆ 6:35), ದಕ್ಷಿಣ ದೆಹಲಿ ಪಬ್ಲಿಕ್ ಸ್ಕೂಲ್, ಡಿಫೆನ್ಸ್ ಕಾಲೋನಿ (ಬೆಳಗ್ಗೆ 7:57), ದೆಹಲಿ ಪೊಲೀಸ್ ಪಬ್ಲಿಕ್ ಸ್ಕೂಲ್, ಸಫ್ದರ್ಜಂಗ್ (ಬೆಳಗ್ಗೆ 8:02 am), ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್, ರೋಹಿಣಿ (ಬೆಳಗ್ಗೆ 8:30) ಬೆದರಿಕೆ ಇ-ಮೇಲ್‌ಗಳಿಗೆ ಸಂಬಂಧಿಸಿದ ಕರೆಯನ್ನು ಸ್ವೀಕರಿಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಗ್ನಿಶಾಮಕ ದಳ, ಪೊಲೀಸರು, ಬಾಂಬ್ ಪತ್ತೆ ದಳ, ಶ್ವಾನ ದಳಗಳು ಶಾಲೆಗಳಿಗೆ ಆಗಮಿಸಿ ತೀವ್ರ ಶೋಧ ನಡೆಸಿವೆ. ಅಧಿಕಾರಿಗಳು ಪೋಷಕರನ್ನು ಎಚ್ಚರಿಸಿದ್ದಾರೆ. ಮಕ್ಕಳನ್ನು ಮನೆಯಲ್ಲಿಯೇ ಇರಿಸಿ ಅಥವಾ ಅವರು ಈಗಾಗಲೇ ಶಾಲೆಗೆ ಬಂದಿದ್ದರೆ ಅವರನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

  • ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ (Delhi Air Pollution) ತಗ್ಗಿದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿವೆ. ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳನ್ನು (Delhi Schools) ತೆರೆಯಲಾಗಿದ್ದು, ಇದರಲ್ಲಿ ನರ್ಸರಿಯಿಂದ 12ನೇ ತರಗತಿವರೆಗಿನ ಎಲ್ಲಾ ತರಗತಿಗಳನ್ನು ಭೌತಿಕ ಕ್ರಮದಲ್ಲಿ ನಡೆಸಲಾಗುತ್ತಿದೆ. ಆದರೆ, ಕೆಲವು ಖಾಸಗಿ ಶಾಲೆಗಳು ನರ್ಸರಿಯಿಂದ 5ನೇ ತರಗತಿವರೆಗಿನ ತರಗತಿಗಳನ್ನು ಮುಚ್ಚಲು ನಿರ್ಧರಿಸಿವೆ.

    ಮಾಲಿನ್ಯ ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದು ಖಾಸಗಿ ಶಾಲೆಗಳು ಹೇಳಿವೆ. ಈ ಸಂಬಂಧ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದ್ದು, ಒಂದು ವಾರದವರೆಗೆ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ದೆಹಲಿ ವಿಶ್ವವಿದ್ಯಾನಿಲಯವು ವಾಯು ಮಾಲಿನ್ಯದ ದೃಷ್ಟಿಯಿಂದ ನವೆಂಬರ್ 13-19ರ ವರೆಗೆ ಚಳಿಗಾಲದ ರಜೆಯನ್ನು ಘೋಷಿಸಿತ್ತು. ಮಾಲಿನ್ಯ ಕಡಿಮೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಎಲ್ಲ ಕಾಲೇಜುಗಳಲ್ಲಿ ತರಗತಿಗಳನ್ನು ಆರಂಭಿಸಿದೆ. ಕಾಲೇಜುಗಳು ಬಹಳ ದಿನಗಳಿಂದ ಮುಚ್ಚಲ್ಪಟ್ಟಿವೆ, ಹೀಗಾಗಿ ಶಿಕ್ಷಣಕ್ಕೆ ನಷ್ಟವಾಗದಂತೆ ಕಾಲೇಜುಗಳನ್ನು ತೆರೆಯುವುದು ಕಡ್ಡಾಯವಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಗಾಳಿಯ ದಿಕ್ಕು ಮತ್ತು ಗಾಳಿಯ ವೇಗದಲ್ಲಿನ ಬದಲಾವಣೆಯಿಂದಾಗಿ ಗಾಳಿಯ ಗುಣಮಟ್ಟವು ತೀವ್ರ ವರ್ಗದಿಂದ ಕಡಿಮೆಯಾಗಿದೆ ಆದರೆ ಗಾಳಿಯು ಇನ್ನೂ ಅತ್ಯಂತ ಕಳಪೆ ವಿಭಾಗದಲ್ಲಿದೆ. ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಒಟ್ಟಾರೆ AQI 398 ರೊಂದಿಗೆ ಅತ್ಯಂತ ಕಳಪೆ ವರ್ಗದಲ್ಲಿದೆ. ಬೆಳಗಿನ ಜಾವ ಗಾಳಿ ಬೀಸುತ್ತಿರುವುದರಿಂದ ಮಂಜು ಮತ್ತು ಹೊಗೆಯ ಪ್ರಮಾಣ ಕಡಿಮೆಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ