Tag: Delhi School

  • ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ – ವಿದ್ಯಾರ್ಥಿ ಅರೆಸ್ಟ್

    ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ – ವಿದ್ಯಾರ್ಥಿ ಅರೆಸ್ಟ್

    ನವದೆಹಲಿ: ಪರೀಕ್ಷೆಗೆ ಹಾಜರಾಗಲು ಬಯಸದೇ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ. ವಿಚಾರಣೆ ವೇಳೆ ವಿದ್ಯಾರ್ಥಿ 23 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ಮಾತನಾಡಿ, ಶಂಕಿತ ವಿದ್ಯಾರ್ಥಿ ದೆಹಲಿಯ 23 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದ. ತಾನು ಈ ಹಿಂದೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಪ್ರಾಪ್ತ ಯುವಕ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಶಾಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ತಿರ್ಮಾನಿಸಿದ್ದ, ಈ ಹಿನ್ನೆಲೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದು, ಇದರಿಂದ ಪರೀಕ್ಷೆ ರದ್ದಾಗಲಿ ಎಂದು ಆತ ಬಯಸಿದ್ದ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಎಲ್ಲಾ ವಿವಿಯಲ್ಲೂ ಖಾಲಿ ಹುದ್ದೆಗಳ ಖಾಯಂ ನೇಮಕಾತಿ ಆಗಲಿ: ನಮೋಶಿ

    ನ.28 ರಂದು ರೋಹಿಣಿ ಪ್ರಶಾಂತ್ ವಿಹಾರ್ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಅದಾದ ಒಂದು ದಿನದ ನಂತರ ಹಲವಾರು ಶಾಲೆಗಳು ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದವು. ಜೊತೆಗೆ ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್‌ಗೆ ಬೆದರಿಕೆ ಇಮೇಲ್ ಬಂದಿತ್ತು. ಪೊಲೀಸರ ತನಿಖೆಯ ವೇಳೆ ವಿದ್ಯಾರ್ಥಿಯೇ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಎಂದು ತಿಳಿದುಬಂದಿದೆ.

    ಕಳೆದ ತಿಂಗಳು 11 ದಿನಗಳಲ್ಲಿ 100ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ದೆಹಲಿ ಶಾಲೆಗಳನ್ನು ಅಸ್ತವ್ಯಸ್ತಗೊಳಿಸಿತ್ತು. ಈ ಇಮೇಲ್‌ಗಳನ್ನು ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಮೂಲಕ ಕಳುಹಿಸಲಾಗಿದೆ. ಹೀಗಾಗಿ ಅಪರಾಧಿಗಳನ್ನು ಪತ್ತೆಹಚ್ಚಲು ಕಠಿಣ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷದ ಮೇ ತಿಂಗಳಿನಿAದ 50ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ದೆಹಲಿಯ ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳು ಸ್ವೀಕರಿಸಿವೆ.ಇದನ್ನೂ ಓದಿ: ಬಜೆಟ್‌ಗೆ ಇನ್ನೆರಡು ತಿಂಗಳು ಬಾಕಿ – ಕಳೆದ ವರ್ಷದ ಬಜೆಟ್ ಹಣವನ್ನೇ ರಿಲೀಸ್ ಮಾಡದ ಸರ್ಕಾರ!

  • ದೆಹಲಿಯ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ – ಕಳೆದ ಒಂದು ವಾರದಲ್ಲಿ 5ನೇ ಘಟನೆ

    ದೆಹಲಿಯ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ – ಕಳೆದ ಒಂದು ವಾರದಲ್ಲಿ 5ನೇ ಘಟನೆ

    ನವದೆಹಲಿ: ಇಲ್ಲಿನ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಬಂದಿದ್ದು, ಕಳೆದ 9 ದಿನಗಳಲ್ಲಿ 5ನೇ ಬಾಂಬ್ ಬೆದರಿಕೆ ಇದಾಗಿದೆ.

    ದೆಹಲಿ ಅಗ್ನಿಶಾಮಕ ದಳದ (Delhi Fire Service) ಮಾಹಿತಿಯ ಪ್ರಕಾರ, ದಕ್ಷಿಣ ದೆಹಲಿಯ ಇಂಡಿಯನ್ ಪಬ್ಲಿಕ್ ಸ್ಕೂಲ್ ಹಾಗೂ ವಾಯುವ್ಯ ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದ ಕ್ರೆಸೆಂಟ್ ಪಬ್ಲಿಕ್ ಸ್ಕೂಲ್‌ನಿಂದ ಕರೆ ಮಾಡಿ ಇಂದು (ಡಿ.17) ಬೆಳಿಗ್ಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ಮಾಹಿತಿ ನೀಡಿದರು.ಇದನ್ನೂ ಓದಿ: BBK 11: ಹದ್ದು ಮೀರಿದ ವರ್ತನೆ- ಉಗ್ರಂ ಮಂಜು, ರಜತ್ ನಡುವೆ ಕಿರಿಕ್

    ಬಳಿಕ ಪೊಲೀಸರು, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಗಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇದುವರೆಗೆ ಯಾವುದೇ ರೀತಿಯ ಅನುಮಾನಾಸ್ಪದವಾದ್ದದ್ದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ದೆಹಲಿಯ ಆರು ಶಾಲೆಗಳಿಗೆ ಡಿ.13 ರಂದು ಮುಂಜಾನೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇನ್ನೂ ಡಿ.9 ರಂದು ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ಕನಿಷ್ಠ 44 ಶಾಲೆಗಳು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದ್ದವು. ನಂತರ, ಇದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ನಿರ್ಧರಿಸಿದ್ದರು.

    ಭಟ್ನಾಗರ್ ಇಂಟರ್ನ್ಯಾಷನಲ್ ಸ್ಕೂಲ್, ಪಶ್ಚಿಮ ವಿಹಾರ್, ಕೇಂಬ್ರಿಡ್ಜ್ ಶಾಲೆ, ಶ್ರೀನಿವಾಸ್ ಪುರಿ, ಡಿಪಿಎಸ್ ಅಮರ್ ಕಾಲೋನಿ, ಕೈಲಾಶ್ ಪೂರ್ವ, ದಕ್ಷಿಣ ದೆಹಲಿ ಪಬ್ಲಿಕ್ ಸ್ಕೂಲ್, ಡಿಫೆನ್ಸ್ ಕಾಲೋನಿ, ದೆಹಲಿ ಪೊಲೀಸ್ ಪಬ್ಲಿಕ್ ಸ್ಕೂಲ್, ಸಫ್ದರ್ಜಂಗ್, ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್, ರೋಹಿಣಿ ಬೆದರಿಕೆ ಇ-ಮೇಲ್‌ಗಳಿಗೆ ಸಂಬಂಧಿಸಿದ ಕರೆಯನ್ನು ಸ್ವೀಕರಿಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದರು.ಇದನ್ನೂ ಓದಿ: 2ನೇ ತ್ರೈಮಾಸಿಕದಲ್ಲಿ ದೇಶದ ಬೆಳವಣಿಗೆ ದರವು 5.4% ರಷ್ಟಿದೆ – ನಿರ್ಮಲಾ ಸೀತಾರಾಮನ್

  • ದೆಹಲಿಯ CRPF ಶಾಲೆ ಬಳಿ ಭಾರೀ ಸ್ಫೋಟ

    ದೆಹಲಿಯ CRPF ಶಾಲೆ ಬಳಿ ಭಾರೀ ಸ್ಫೋಟ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (New Delhi) ರೋಹಿಣಿಯಲ್ಲಿರುವ ಸಿಆರ್‌ಪಿಎಫ್‌ ಶಾಲೆಯಲ್ಲಿ (CRPF School) ಭಾರಿ ಸ್ಫೋಟ ಸಂಭವಿಸಿದೆ.

    ಸ್ಫೋಟದಿಂದ ಶಾಲೆಯ ಗೋಡೆಗೆ ಹಾನಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಫೊರೆನ್ಸಿಕ್‌ ತಂಡಗಳು ಮತ್ತು ದೆಹಲಿ ಪೊಲೀಸ್‌ ವಿಶೇಷ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

    ಸ್ಥಳೀಯ ನಿವಾಸಿಯೊಬ್ಬರು ರೆಕಾರ್ಡ್ ಮಾಡಿದ ವೀಡಿಯೋದಲ್ಲಿ, ಸ್ಫೋಟದ ಸ್ಥಳದ ಸಮೀಪದಿಂದ ಹೊಗೆಯ ಮೋಡ ಕಂಡುಬಂದಿದೆ. ‘ನಾನು ಮನೆಯಲ್ಲಿದ್ದೆ. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಸಿತು. ತಕ್ಷಣ ಮೋಡದಂತೆ ಹೊಗೆ ಆವರಿಸಿತು. ಏನಾಯಿತು ಎಂದು ನನಗೆ ಗೊತ್ತಿಲ್ಲ. ಪೊಲೀಸ್ ತಂಡ ಮತ್ತು ಅಂಬುಲೆನ್ಸ್‌ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    ಪ್ರಶಾಂತ್ ವಿಹಾರ್‌ನಲ್ಲಿರುವ ಸಿಆರ್‌ಪಿಎಫ್ ಶಾಲೆಯ ಬಳಿ ಬೆಳಗ್ಗೆ 7:47ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲು ತಜ್ಞರನ್ನು ಕರೆಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಗೋಯೆಲ್ ಹೇಳಿದ್ದಾರೆ.

    ಸ್ಫೋಟದ ತೀವ್ರತೆಗೆ ಶಾಲೆಯ ಬಳಿ ನಿಲ್ಲಿಸಿದ್ದ ಕಾರುಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಆ ಪ್ರದೇಶದಲ್ಲಿನ ಅಂಗಡಿಗಳ ಸೂಚನಾ ಫಲಕಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ರಾಷ್ಟ್ರೀಯ ಭದ್ರತಾ ಪಡೆಗೆ ಮಾಹಿತಿ ನೀಡಲಾಗಿದ್ದು, ತಂಡವೊಂದು ಸ್ಥಳಕ್ಕೆ ಭೇಟಿ ನೀಡಬಹುದು. ಕಚ್ಚಾ ಬಾಂಬ್ ಸ್ಫೋಟಿಸಿರಬಹುದು ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

  • ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

    ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

    ನವದೆಹಲಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚುವುದಾಗಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಇಂದು ಘೋಷಿಸಿದರು.

    ಮಾಲಿನ್ಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಪ್ರಸ್ತುತ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೆಹಲಿಯ ಎಲ್ಲ ಶಾಲೆಗಳನ್ನು ನಾಳೆಯಿಂದ ಮುಂದಿನ ಆದೇಶದವರೆಗೆ ಮುಚ್ಚಲಾಗುವುದು ಎಂದು ಹೇಳಿದರು.

    ಗಾಳಿಯ ಗುಣಮಟ್ಟ ಸುಧಾರಿಸುತ್ತಿದ್ದ ಮುನ್ಸೂಚನೆಯಿಂದ ನಾವು ಶಾಲೆಗಳನ್ನು ಪುನರಾರಂಭಿಸಿದ್ದೆವು. ಆದರೆ ಈಗ ಮತ್ತೆ ವಾಯುಮಾಲಿನ್ಯದ ಮಟ್ಟವು ಹೆಚ್ಚಾಗಿದೆ. ಈ ಹಿನ್ನೆಲೆ ನಾಳೆಯಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನನಗೆ ಮತ ಹಾಕದಂತೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕ್ತಿದ್ದಾರೆ: ಎಂ.ಶಂಕರ್ ಆರೋಪ

    ನವೆಂಬರ್ 13ರಲ್ಲಿಯೂ ಶಾಲಾ-ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಸೋಮವಾರದಿಂದ ಪ್ರಾರಂಭಿಸಲಾಗಿತ್ತು. ಈ ಹಿನ್ನೆಲೆ ದೈಹಿಕ ತರಗತಿಗಳನ್ನು ಪುನರಾರಂಭಿಸುವಂತೆ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಕೇಳಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

    ಈ ವೇಳೆ ಸುಪ್ರೀಂ ಕೋರ್ಟ್ ದೆಹಲಿಯ ಎನ್‍ಸಿಆರ್‍ನಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕುರಿತು ಕೇಂದ್ರ ಮತ್ತು ದೆಹಲಿಯನ್ನು ತರಾಟೆಗೆ ತೆಗೆದುಕೊಂಡಿತು. ನಾವು, ನಿಮ್ಮ ಅಧಿಕಾರಶಾಹಿಯಲ್ಲಿ ಸೃಜನಶೀಲತೆಯನ್ನು ತುಂಬಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಅಧಿಕಾರಿಗಳು ಮಾಲಿನ್ಯವನ್ನು ನಿಯಂತ್ರಿಸಲು ವಿಫಲವಾದರೆ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದೆ. ಇದನ್ನೂ ಓದಿ:  ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮುಖ್ಯ ನ್ಯಾಯಮೂರ್ತಿ ಎನ್‍ವಿ ರಮಣ ನೇತೃತ್ವದ ವಿಶೇಷ ಪೀಠವು ಮಾಲಿನ್ಯ ಮಟ್ಟವನ್ನು ತಗ್ಗಿಸಲು ಗಂಭೀರ ಕ್ರಮಗಳನ್ನು ನಿರೀಕ್ಷಿಸುವುದಾಗಿ ಹೇಳಿದೆ.