Tag: Delhi Religious Meeting

  • ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಕೊರೊನಾ ಪ್ರಕರಣಗಳು ಪತ್ತೆ

    ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಕೊರೊನಾ ಪ್ರಕರಣಗಳು ಪತ್ತೆ

    – ದೆಹಲಿಗೆ ಹೋಗಿದ್ದ 364 ಜನರಿಗೆ ಕೊರೊನಾ ಸೋಂಕು

    ಚೆನ್ನೈ: ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ತಮಿಳುನಾಡಿನ ಹೆಲ್ತ್ ಸೆಕ್ರಟರಿ ಬೀಲಾ ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.

    ಇಂದು ಕೊರೊನಾ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬೀಲಾ ರಾಜೇಶ್, ಇಂದು ಒಂದೇ ದಿನ ತಮಿಳುನಾಡಿನಲ್ಲಿ ಹೊಸ 102 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ 411 ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

    ಇಂದು ತಮಿಳುನಾಡಿನಲ್ಲಿ 102 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 100 ಜನರು ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮ ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 411 ಆಗಿದ್ದು, ಅವುಗಳಲ್ಲಿ 364 ಸೋಂಕಿತರು ದೆಹಲಿಯ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಒಟ್ಟು 1,200 ಜನರನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರನ್ನೂ ಕ್ಯಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಬೀಲಾ ರಾಜೇಶ್ ಹೇಳಿದ್ದಾರೆ.

    ಇದಕ್ಕೂ ಮುನ್ನ ಮಾತನಾಡಿದ್ದ ತಮಿಳುನಾಡಿನ ಆರೋಗ್ಯ ಸಚಿವ ಸಿ ವಿಜಯಬಾಸ್ಕರ್, ನಮ್ಮ ರಾಜ್ಯದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಏಳು ಜನರು ಸೇರಿದಂತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 411 ತಲುಪಿದೆ. 1,580 ಕೊರೊನಾ ವೈರಸ್ ಸೋಂಕಿತ ಮತ್ತು ಶಂಕಿತ ಜನರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದರು.

    ಇನ್ನೂ ಕೇರಳದಲ್ಲಿ ಇಂದು 9 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕಾಸರಗೋಡಿನಿಂದ 7 ಮತ್ತು ಕಣ್ಣೂರು ಮತ್ತು ತ್ರಿಶೂರ್ನಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಜಮಾತ್ ಕಾರ್ಯಕ್ರಮದಲ್ಲಿ 3 ಜನರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 295ಕ್ಕೇರಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

  • ದೆಹಲಿ ಸಭೆಯಲ್ಲಿ ಭಾಗವಹಿಸಿದ್ದವರು ಸೂಸೈಡ್ ಬಾಂಬರ್ ಗಳಾ: ಈಶ್ವರಪ್ಪ ಪ್ರಶ್ನೆ

    ದೆಹಲಿ ಸಭೆಯಲ್ಲಿ ಭಾಗವಹಿಸಿದ್ದವರು ಸೂಸೈಡ್ ಬಾಂಬರ್ ಗಳಾ: ಈಶ್ವರಪ್ಪ ಪ್ರಶ್ನೆ

    ಶಿವಮೊಗ್ಗ: ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಒಟ್ಟು 24 ಮಂದಿ ಸಂಬಂಧ ಹೊಂದಿದ್ದಾರೆ. ಇದರಲ್ಲಿ ಒಟ್ಟು 10 ನೇರವಾಗಿ ಭಾಗವಹಿಸಿದ್ದರೆ, ಉಳಿದ 14 ಮಂದಿ ಸೆಕೆಂಡರಿ ಸಂಬಂಧ ಹೊಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24 ಮಂದಿಯಲ್ಲಿ ಈಗಾಗಲೇ 10 ಮಂದಿ ಕ್ವಾರಂಟೈನ್ ಮುಗಿದು ಹೋಗಿದೆ. ಉಳಿದ 11 ಮಂದಿ ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದು, ಎಲ್ಲರದ್ದೂ ನೆಗೆಟಿವ್ ಬಂದಿದೆ. ಇನ್ನೂಳಿದ ಮೂರು ಮಂದಿ ಬೇರೆ ಬೇರೆ ಜಿಲ್ಲೆಯಲ್ಲಿ ಇದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

    ದೆಹಲಿಯಲ್ಲಿ ಸಭೆ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಸಚಿವ ಈಶ್ವರಪ್ಪ ಕೊರೊನಾ ವೈರಸ್ ಸೋಂಕು ತಗಲುವ ಭೀತಿ ಇದ್ದರೂ ಸಭೆ ನಡೆಸುವ ಸಂದರ್ಭ ಇತ್ತಾ. ಎಷ್ಟು ಜನ ಹೋಗಿದ್ದರು. ಯಾಕೆ ಹೋಗಿದ್ದರು ಎಂಬುದು ತಿಳಿಯಬೇಕಿದೆ. ಎಷ್ಟು ಜನರಿಗೆ ಅನುಮತಿ ತೆಗೆದುಕೊಂಡಿದ್ದರು ಅನ್ನೋದು ಗೊತ್ತಾಗಬೇಕಿದೆ. ಇವರೇನು ಸೂಸೈಡ್ ಬಾಂಬರ್ ಗಳ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

    ನಿಜಾಮುದ್ದೀನ್ ಸಮಸ್ಯೆ ಆಗದೇ ಇದ್ದಿದ್ದರೆ, ಈ ಕೊರೊನಾ ಸಮಸ್ಯೆ ದಿನೇ ದಿನೇ ಕಡಿಮೆಯಾಗುತ್ತಿತ್ತು. ಆದರೆ ಇದೊಂದು ಆತಂಕ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡಲು ಹೋಗಬಾರದು. ಧರ್ಮವನ್ನು ಎತ್ತಿಕಟ್ಟುವ ಜನರಿದ್ದಾರೆ. ಇವರ ಬಗ್ಗೆ ಹುಷಾರಾಗಿರಬೇಕು. ಇದು ದೊಡ್ಡ ಪ್ರಕರಣವಾಗಬಾರದು. ಇದನ್ನು ಮಧ್ಯದಲ್ಲಿ ತರಲು ನಾವು ಬಿಡುವುದಿಲ್ಲ. ಸಭೆಗೆ ಹೋದವರು ತಪ್ಪು ಮಾಡಿ ಎಲ್ಲರಿಗೂ ಸಮಸ್ಯೆ ಉಂಟು ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.