Tag: Delhi Polls

  • ದೆಹಲಿ ಚುನಾವಣೆಗೆ 4 ದಿನ ಇರುವಾಗಲೇ ಶಾಕ್‌ – ಆಪ್‌ನ 8 ಮಂದಿ ನಿರ್ಗಮಿತ ಶಾಸಕರು ಬಿಜೆಪಿ ಸೇರ್ಪಡೆ

    ದೆಹಲಿ ಚುನಾವಣೆಗೆ 4 ದಿನ ಇರುವಾಗಲೇ ಶಾಕ್‌ – ಆಪ್‌ನ 8 ಮಂದಿ ನಿರ್ಗಮಿತ ಶಾಸಕರು ಬಿಜೆಪಿ ಸೇರ್ಪಡೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ (Delhi Polls) ಇನ್ನೂ ನಾಲ್ಕು ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಆಮ್‌ ಆದ್ಮಿ ಪಕ್ಷಕ್ಕೆ ದೊಡ್ಡ ಶಾಕ್‌ ಆಗಿದೆ. ಒಂದು ದಿನದ ಹಿಂದೆಯಷ್ಟೇ ಎಎಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ 8 ಮಂದಿ ನಿರ್ಗಮಿತ ಶಾಸಕರು ಶನಿವಾರ (ಇಂದು) ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ.

    ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್‌ ಸಿಗದಿದ್ದಕ್ಕೆ ಕೋಪಗೊಂಡು ರಾಜೀನಾಮೆ ನೀಡಿದ್ದ ವಂದನಾ ಗೌರ್ (ಪಾಲಂ ಕ್ಷೇತ್ರದ ಶಾಸಕ), ರೋಹಿತ್ ಮೆಹ್ರಾಲಿಯಾ (ತ್ರಿಲೋಕಪುರಿ), ಗಿರೀಶ್ ಸೋನಿ (ಮದೀಪುರ), ಮದನ್ ಲಾಲ್ (ಕಸ್ತೂರ್ಬಾ ನಗರ), ರಾಜೇಶ್ ರಿಷಿ (ಉತ್ತಮ ನಗರ), ಬಿ ಎಸ್ ಜೂನ್ (ಬಿಜ್ವಾಸನ್), ನರೇಶ್ ಯಾದವ್ (ಮೆಹ್ರಾಲಿ) ಮತ್ತು ಪವನ್ ಶರ್ಮಾ (ಆದರ್ಶ ನಗರ) ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಎಎಪಿಗೆ ರಾಜೀನಾಮೆ ನೀಡಿದ ನಂತರ, ಸದನದ ಸದಸ್ಯತ್ವವನ್ನು ತ್ಯಜಿಸಿ ವಿಧಾನಸಭೆ ಸ್ಪೀಕರ್‌ಗೆ ರಾಜೀನಾಮೆ ಶುಕ್ರವಾರ ಪತ್ರಗಳನ್ನು ಕಳುಹಿಸಲಾಗಿತ್ತು. ಇದನ್ನೂ ಓದಿ: Union Budget: ಬಜೆಟ್‌ ಮಂಡಿಸಿ ಇತಿಹಾಸ ಬರೆಯಲಿದ್ದಾರೆ ನಿರ್ಮಲಾ ಸೀತಾರಾಮನ್‌

    ಎಎಪಿ ಮಾಜಿ ಶಾಸಕ ವಿಜೇಂದರ್ ಗಾರ್ಗ್ ಮತ್ತು ನಿರ್ಗಮಿತ ಎಎಪಿ ನಾಯಜರು ದೆಹಲಿ ಬಿಜೆಪಿಯ ಉಸ್ತುವಾರಿ ಬೈಜಯಂತ್ ಪಾಂಡಾ ಮತ್ತು ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ

  • ದೆಹಲಿ ಚುನಾವಣೆ ಹೊತ್ತಲ್ಲೇ ಎಎಪಿಗೆ ಶಾಕ್‌ – ಟಿಕೆಟ್‌ ಸಿಗದಿದ್ದಕ್ಕೆ ಸಿಟ್ಟಿಗೆದ್ದು 7 ಮಂದಿ ಶಾಸಕರು ರಾಜೀನಾಮೆ

    ದೆಹಲಿ ಚುನಾವಣೆ ಹೊತ್ತಲ್ಲೇ ಎಎಪಿಗೆ ಶಾಕ್‌ – ಟಿಕೆಟ್‌ ಸಿಗದಿದ್ದಕ್ಕೆ ಸಿಟ್ಟಿಗೆದ್ದು 7 ಮಂದಿ ಶಾಸಕರು ರಾಜೀನಾಮೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್‌ ಸಿಗದಿದ್ದಕ್ಕೆ ಕೋಪಗೊಂಡು 7 ಮಂದಿ ಎಎಪಿ ಶಾಸಕರು ರಾಜೀನಾಮೆ ನೀಡಿದ್ದಾರೆ.

    ನರೇಶ್ ಯಾದವ್ (ಮೆಹ್ರೌಲಿ), ರೋಹಿತ್ ಕುಮಾರ್ (ತ್ರಿಲೋಕಪುರಿ), ರಾಜೇಶ್ ರಿಷಿ (ಜನಕಪುರಿ), ಮದನ್ ಲಾಲ್ (ಕಸ್ತೂರ್ಬಾ ನಗರ), ಪವನ್ ಶರ್ಮಾ (ಆದರ್ಶ ನಗರ), ಮತ್ತು ಭಾವನಾ ಗೌಡ್ (ಪಾಲಂ). ಬಿಎಸ್ ಜೂನ್ (ಬಿಜ್ವಾಸನ್) ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

    ಪಾಲಂ ಶಾಸಕಿ ಭಾವನಾ ಗೌರ್ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ‌’ಕೇಜ್ರಿವಾಲ್ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ’ ತಿಳಿಸಿದ್ದಾರೆ.

  • 10 ಲಕ್ಷದ ಸೂಟ್‌ ಧರಿಸುವವರಿಂದ ʻಶೀಷ ಮಹಲ್‌ʼ ಪ್ರಸ್ತಾಪ ಸೂಕ್ತವಲ್ಲ – ಮೋದಿಗೆ ಕೇಜ್ರಿವಾಲ್‌ ತಿರುಗೇಟು

    10 ಲಕ್ಷದ ಸೂಟ್‌ ಧರಿಸುವವರಿಂದ ʻಶೀಷ ಮಹಲ್‌ʼ ಪ್ರಸ್ತಾಪ ಸೂಕ್ತವಲ್ಲ – ಮೋದಿಗೆ ಕೇಜ್ರಿವಾಲ್‌ ತಿರುಗೇಟು

    ನವದೆಹಲಿ: 2,700 ಕೋಟಿ ರೂಪಾಯಿ ಮೌಲ್ಯದ ಮನೆ ನಿರ್ಮಿಸಿ, 8,400 ಕೋಟಿ ರೂಪಾಯಿ ಮೌಲ್ಯದ ವಿಮಾನದಲ್ಲಿ ಹಾರಾಟ ನಡೆಸಿ, 10 ಲಕ್ಷ ರೂ. ಸೂಟ್‌ ಧರಿಸುವವರಿಂದ `ಶೀಷ ಮಹಲ್’ (sheeshmahal) ಪ್ರಸ್ತಾಪ ಸೂಕ್ತವಲ್ಲ ಎಂದು ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಕುಟುಕಿದರು.

    ಆಪ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಪ್ರಧಾನಿ ಮೋದಿ (Narendra Modi) ಅವರಿಗೆ ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತಿರುಗೇಟು ನೀಡಿದರು. ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ – ಎಎಪಿ ದೆಹಲಿ ನಗರಕ್ಕೆ ಆಪತ್ತು ಎಂದ ಪ್ರಧಾನಿ

    ನಿಜವಾದ ಅನಾಹುತ, ವಿಪತ್ತುಗಳು ದೆಹಲಿಯಲ್ಲಿಲ್ಲ, ಅದು ಬಿಜೆಪಿಯಲ್ಲಿದೆ. ಮೊದಲ ಅನಾಹುತವೆಂದರೆ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಇಲ್ಲದೇ ಇರೋದು, ದೆಹಲಿ ಚುನಾವಣೆಗೆ ಯಾವುದೇ ಅಜೆಂಡಾ ಇಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ – ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಪತ್ರ ಬರೆದ ಸಂಸದ ಸುಧಾಕರ್‌

    ಇದೇ ವೇಳೆ ನಾನು ಜನರಿಗಾಗಿ ಮನೆ ಕಟ್ಟಿದ್ದೇನೆ, ನನಗಾಗಿ `ಶೀಷ ಮಹಲ್’ ಕಟ್ಟಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ, 2,700 ಕೋಟಿ ರೂಪಾಯಿ ಮೌಲ್ಯದ ಮನೆ ನಿರ್ಮಿಸಿ, 8,400 ಕೋಟಿ ರೂಪಾಯಿ ಮೌಲ್ಯದ ವಿಮಾನದಲ್ಲಿ ಹಾರಾಟ ನಡೆಸಿ, 10 ಲಕ್ಷ ರೂಪಾಯಿ ಸೂಟ್‌ ಧರಿಸುವವರಿಂದ ಶೀಷ ಮಹಲ್‌ ಪ್ರಸ್ತಾಪ ಸೂಕ್ತವಲ್ಲ ಎಂದರು.

    ದೆಹಲಿಯಲ್ಲಿ 4 ಲಕ್ಷ ಕೊಳಗೇರಿಗಳಿವೆ, 15 ಲಕ್ಷ ಜನರಿಗೆ ಮನೆಗಳ ಅಗತ್ಯವಿದೆ. ಬಿಜೆಪಿ ತನ್ನ 2020ರ ಪ್ರಣಾಳಿಕೆಯಲ್ಲಿ, 2022ರ ವೇಳೆಗೆ ದೆಹಲಿಯ ಪ್ರತಿಯೊಬ್ಬರಿಗೂ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದ್ರೆ ಕಳೆದ 5 ವರ್ಷಗಳಲ್ಲಿ ವಿತರಣೆ ಮಾಡಿರುವುದು ಕೇವಲ 4,700 ಮನೆಗಳು ಮಾತ್ರ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಂಗ್‌ ಅವಧಿಯಲ್ಲಿ 2.9 ಕೋಟಿ, ಮೋದಿ ಕಾಲದಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ

    ದೆಹಲಿಯಲ್ಲಿ ಪ್ರಧಾನಿ ಮೋದಿ ಮಾಡಿದ 43 ನಿಮಿಷಗಳ ಭಾಷಣದಲ್ಲಿ 39 ನಿಮಿಷಗಳ ಕಾಲ ದೆಹಲಿ ಸರ್ಕಾರವನ್ನ ನಿಂದಿಸಿದ್ದಾರೆ. ವಾಸ್ತವ ಬೇರೆಯೇ ಇದೆ. ಕಳೆದ 10 ವರ್ಷಗಳ ಅವಧಿಯಲ್ಲಿ ನಮ್ಮ ಪಕ್ಷವು ದೆಹಲಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದ್ರೆ ಮೂರು ಗಂಟೆಯೂ ಸಾಕಾಗಕಲ್ಲ ಎಂದು ಕುಟುಕಿದರು.