Tag: Delhi Police

  • ಬೇಹುಗಾರಿಕೆಗಾಗಿ ಭಾರತೀಯ ಮೊಬೈಲ್‌ ಸಿಮ್‌ ಕಾರ್ಡ್‌ ಪೂರೈಸುತ್ತಿದ್ದ ಪಾಕ್‌ ಸ್ಪೈ ಅರೆಸ್ಟ್‌

    ಬೇಹುಗಾರಿಕೆಗಾಗಿ ಭಾರತೀಯ ಮೊಬೈಲ್‌ ಸಿಮ್‌ ಕಾರ್ಡ್‌ ಪೂರೈಸುತ್ತಿದ್ದ ಪಾಕ್‌ ಸ್ಪೈ ಅರೆಸ್ಟ್‌

    – 90 ದಿನ ಪಾಕಿಸ್ತಾನದಲ್ಲೇ ಉಳಿದಿದ್ದ ರಾಜಸ್ಥಾನದ ವ್ಯಕ್ತಿ

    ಬೆಂಗಳೂರು: ಬೇಹುಗಾರಿಕೆ ಚಟುವಟಿಕೆಗಳಿಗಾಗಿ ಭಾರತೀಯ ಮೊಬೈಲ್‌ ಸಿಮ್‌ (Indian SIMs) ಕಾರ್ಡ್‌ಗಳನ್ನು ಪೂರೈಸುತ್ತಾ, ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಪಾಕ್‌ ಪರ ಬೇಹುಗಾರನನ್ನ (Spy) ದೆಹಲಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಬಂಧಿಸಿದ್ದಾರೆ.

    ರಾಜಸ್ಥಾನದ (Rajasthan) ದೀಗ್ ಜಿಲ್ಲೆಯ ಗಂಗೋರಾ ಗ್ರಾಮದ ನಿವಾಸಿ ಕಾಸಿಮ್ (34) ಬಂಧಿತ ಬೇಹುಗಾರ. ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಈತನನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಭಾರತದ ಬ್ರಹ್ಮೋಸ್‌ ನಮ್ಮ ಪ್ಲ್ಯಾನ್‌ಗಳನ್ನೆಲ್ಲಾ ತಲೆಕೆಳಗೆ ಮಾಡಿತು – ಸತ್ಯ ಒಪ್ಪಿಕೊಂಡ ಪಾಕ್‌ ಪ್ರಧಾನಿ

    ಪಾಕಿಸ್ತಾನಕ್ಕೆ 2024ರ ಆಗಸ್ಟ್‌ ಮತ್ತು 2025ರ ಮಾರ್ಚ್‌ನಲ್ಲಿ 2 ಬಾರಿ ಭೇಟಿ ನೀಡಿದ್ದ ಕಾಸಿಮ್‌ 90 ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದ. ಈ ಸಮಯದಲ್ಲಿ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಅಧಿಕಾರಿಗಳನ್ನೂ ಭೇಟಿ ಮಾಡಿದ್ದ ಎಂದು ಶಂಕಿಸಲಾಗಿದೆ. ಇಂದು ಬೆಳಗ್ಗೆ ಕಾಸಿಮ್‌ನನ್ನ ಬಂಧಿಸಿದ್ದು, ಪೊಲೀಸ್‌ ರಿಮ್ಯಾಂಡ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸುಳಿವು ಸಿಕ್ಕಿದ್ದು ಹೇಗೆ?
    2024ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಸೇನೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ್ದ ಸೂಕ್ಷ್ಮ ಮಾಹಿತಿಯನ್ನ ಸಂಗ್ರಹಿಸಲು ಪಾಕ್‌ ಗುಪ್ತಚರ ಅಧಿಕಾರಿಗಳು ಭಾರತೀಯ ಮೊಬೈಲ್‌ ಸಂಖ್ಯೆಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರ ಎಂಬ ಮಾಹಿತಿ ಭಾರತೀಯ ಗುಪ್ತಚರ ಅಧಿಕಾರಿಗಳಿಗೆ ಬಂದಿತ್ತು. ಭಾರತದಲ್ಲೇ ಸಿಮ್‌ ಕಾರ್ಡ್‌ಗಳನ್ನ ಖರೀದಿಸಿ, ಇಲ್ಲಿನವರ ಸಹಾಯದಿಂದಲೇ ಗಡಿಯಾಚೆಗೆ ಪೂರೈಸಲಾಗಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಪಾಕಿಸ್ತಾನದ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್

    ಈ ಸಿಎಮ್‌ ಕಾರ್ಡ್‌ಗಳನ್ನೇ ಬಳಸಿಕೊಂಡು ಐಎಸ್‌ಐ ಅಧಿಕಾರಿಗಳು ಭಾರತೀಯರನ್ನ ಸೋಷಿಯಲ್‌ ಮೀಡಿಯಾಗಳ ಮೂಲಕ ಸಂಪರ್ಕಿಸುತ್ತಿದ್ದರು, ಜೊತೆಗೆ ಸೂಕ್ಷ್ಮ ಮಾಹಿತಿಯನ್ನ ಹೊರತೆಗೆಯಲು ಯತ್ನಿಸುತ್ತಿದ್ದರು. ಈ ಕುರಿತು ತನಿಖೆ ನಡೆಸಿದಾಗ ಕಾಸಿಮ್‌ ಹೆಸರು ಹೊರಬಂದಿತು. ಕೂಡಲೇ ಆತನನ್ನ ಬಂಧಿಸಲಾಗಿದೆ ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ.

    ಸದ್ಯ ಕಾಸಿಮ್‌ ಹಿನ್ನೆಲೆ, ಪಾಕ್‌ಗೆ ಭೇಟಿ ನೀಡಿದ ಪ್ರಯಾಣ ವಿವರ ಹಾಗೂ ಈತನ ಸಂಪರ್ಕದಲ್ಲಿ ಯಾರ‍್ಯಾರು ಇದ್ದಾರೆ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ.  ಇದನ್ನೂ ಓದಿ: ಭಾರತ ಜಲಯುದ್ಧ; ಇತ್ತ ಅಫ್ಘಾನಿಸ್ತಾನದಿಂದಲೂ ಶಾಕ್‌ ಆತಂಕ, ಪಾಕ್‌ನಲ್ಲಿ ಚೀನಾ ಅಣೆಕಟ್ಟೆ ನಿರ್ಮಾಣ ಯಾಕೆ?

  • 50ಕ್ಕೂ ಹೆಚ್ಚು ಕೊಲೆ ಮಾಡಿ ಪರಾರಿಯಾಗಿದ್ದ ಸಿರಿಯಲ್‌ ಕಿಲ್ಲರ್‌ ʻಡಾಕ್ಟರ್‌ ಡೆತ್‌ʼ ಅರೆಸ್ಟ್‌!

    50ಕ್ಕೂ ಹೆಚ್ಚು ಕೊಲೆ ಮಾಡಿ ಪರಾರಿಯಾಗಿದ್ದ ಸಿರಿಯಲ್‌ ಕಿಲ್ಲರ್‌ ʻಡಾಕ್ಟರ್‌ ಡೆತ್‌ʼ ಅರೆಸ್ಟ್‌!

    – ರಾಜಸ್ಥಾನದ ಆಶ್ರಮದಲ್ಲಿ ಆರ್ಚಕನಂತೆ ಪತ್ತೆಯಾದ ನರ ರಾಕ್ಷಸ
    – ಹತ್ಯೆ ಮಾಡಿ ಹೆಣಗಳನ್ನು ಮೊಸಳೆಗಳಿಗೆ ನೀಡುತ್ತಿದ್ದ ಪಾಪಿ!
    – ಕಿಡ್ನಿ ರಾಕೆಟ್‌ನಲ್ಲೂ ಸಿಲುಕಿದ್ದ ಹಂತಕ

    ಜೈಪುರ್‌: 50 ಜನರನ್ನು ಭೀಕರವಾಗಿ ಹತ್ಯೆ ಮಾಡಿ ಪೊಲೀಸ್ ದಾಖಲೆಗಳಲ್ಲಿ ‘ಡಾಕ್ಟರ್ ಡೆತ್’ (Dr Death) ಎಂದು ಕುಖ್ಯಾತಿ ಪಡೆದಿದ್ದ ಸರಣಿ ಹಂತಕನನ್ನು ದೆಹಲಿ ಪೊಲೀಸರು (Delhi Police ) ರಾಜಸ್ಥಾನದಲ್ಲಿ (Rajasthan) ಬಂಧಿಸಿದ್ದಾರೆ.

    ಬಂಧಿತ ಸರಣಿ ಹಂತಕನನ್ನು ಡಾ. ದೇವೇಂದರ್ ಶರ್ಮಾ (67) (Dr.Devender Sharma) ಎಂದು ಗುರುತಿಸಲಾಗಿದೆ. ಈತ ಆಗಸ್ಟ್ 2023 ರಲ್ಲಿ ಪೆರೋಲ್‌ ಪಡೆದು ತಲೆಮರೆಸಿಕೊಂಡಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ರಾಜಸ್ಥಾನದ ದೌಸಾದ ಆಶ್ರಮವೊಂದರಲ್ಲಿ ಅರ್ಚಕನಾಗಿ ಸೇರಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶರ್ಮಾ ರಾಜಸ್ಥಾನದ ಬಂಡಿಕುಯಿಯಲ್ಲಿರುವ ಜಂತ ಕ್ಲಿನಿಕ್‌ನಲ್ಲಿ 11 ವರ್ಷಗಳ ಕಾಲ ಆಯುರ್ವೇದ ವೈದ್ಯನಾಗಿ ಕೆಲಸ ಮಾಡಿದ್ದ. 1994 ರಲ್ಲಿ, ಅನಿಲ ಎಜೆನ್ಸಿ ತೆರೆಯಲು ಪ್ರಯತ್ನಿಸಿದ್ದ. ಈ ವೇಳೆ ಆತನಿಗೆ 11 ಲಕ್ಷ ರೂ.ಗಳನ್ನು ವಂಚಿಸಲಾಗಿತ್ತು. ಬಳಿಕ ಅಲ್ಲಿಂದ ಅಲಿಘರ್‌ನ ಮನೆಗೆ ಮರಳಿ, ಅಲ್ಲಿ ನಕಲಿ ಅನಿಲ ಏಜೆನ್ಸಿಯನ್ನು ನಡೆಸುತ್ತಿದ್ದ. ಈ ಸಮಯದಲ್ಲಿ ಬೇರೆ ಕಡೆಗಳಿಗೆ ಸಾಗಿಸುತ್ತಿದ್ದ ಅನಿಲ ಸಿಲಿಂಡರ್‌ಗಳನ್ನು ಕದಿಯಲು ಟ್ರಕ್ ಚಾಲಕರನ್ನು ಕೊಲೆ ಮಾಡುತ್ತಿದ್ದ. ಬಳಿಕ ಶವಗಳನ್ನು ನದಿಗಳಿಗೆ ಎಸೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    1998 ಮತ್ತು 2004ರ ಅವಧಿಯಲ್ಲಿ ಶರ್ಮಾ ಅಕ್ರಮ ಮೂತ್ರಪಿಂಡ ಕಸಿ ದಂಧೆಯಲ್ಲಿ ಭಾಗಿಯಾಗಿದ್ದ. ದೆಹಲಿ, ಹರಿಯಾಣ ಮತ್ತು ರಾಜಸ್ಥಾನದಾದ್ಯಂತ 125 ಕ್ಕೂ ಹೆಚ್ಚು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದ. ಮೂತ್ರಪಿಂಡ ದಾನಿಗಳನ್ನು ವ್ಯವಸ್ಥೆ ಮಾಡುವ ಮಧ್ಯವರ್ತಿಯಾಗಿ ಪ್ರತಿ ಕಸಿಗೆ 5 ರಿಂದ 7 ಲಕ್ಷ ರೂ.ಗಳನ್ನು ಗಳಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಇನ್ನೂ 2002 ಮತ್ತು 2004 ರ ನಡುವೆ, ಶರ್ಮಾ ಹಲವಾರು ಟ್ಯಾಕ್ಸಿ ಚಾಲಕರ ಅಪಹರಣ ಮಾಡಿ ಕೊಲೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಶರ್ಮಾ ದೆಹಲಿಯಿಂದ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು, ಚಾಲಕರನ್ನು ಕೊಂದು ಶವವನ್ನು ಕಾಸ್ಗಂಜ್‌ನ ಮೊಸಳೆಗಳಿಂದ ತುಂಬಿದ ಹಜ್ರಾ ಕಾಲುವೆಯಲ್ಲಿ ಎಸೆಯುತ್ತಿದ್ದ. ನಂತರ ಕದ್ದ ಟ್ಯಾಕ್ಸಿಗಳನ್ನು ಬೂದು ಮಾರುಕಟ್ಟೆಯಲ್ಲಿ ತಲಾ 20,000 ರಿಂದ 25,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿ 21 ಟ್ಯಾಕ್ಸಿ ಚಾಲಕರ ಕೊಲೆಗಳ ಆರೋಪ ಹೊರಿಸಿದ್ದರು. ನಂತರ ಶರ್ಮಾ 50ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರಿಗೆ ಹತ್ಯೆಗೀಡಾದವರ ಶವಗಳನ್ನು ಪತ್ತೆ ಮಾಡಲು ಸಾಧ್ಯವಾಗದ ಕಾರಣ, ಕೇವಲ ಏಳು ಕೊಲೆಗಳಿಗೆ ಶರ್ಮಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕೆಲವು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೂ ಆದೇಶಿಸಲಾಗಿತ್ತು. ಇನ್ನೂ ಅಪರಾಧ ಸಾಭೀತಾದ ಬಳಿಕ ಆತನ ಪತ್ನಿ ಮತ್ತು ಮಕ್ಕಳು ಅವನಿಂದ ದೂರವಾಗಿದ್ದರು.

    ಜನವರಿ 2020 ರಲ್ಲಿ, ಹಂತಕ ಶರ್ಮಾನನ್ನು ಉತ್ತಮ ನಡವಳಿಕೆಯ ಆಧಾರದ ಮೇಲೆ ಜೈಪುರ ಕೇಂದ್ರ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ ಆಗಲೂ ಆತ ತಲೆಮರೆಸಿಕೊಂಡಿದ್ದ. ಕೆಲವು ತಿಂಗಳ ಬಳಿಕ ಪೊಲೀಸರು ಅಪರಾಧಿಗಳ ಬಗ್ಗೆ ಮಾಹಿತಿ ಕಲೆ ಹಾಕುವಾಗ ಶರ್ಮಾ, ಎರಡನೇ ಹೆಂಡತಿಯೊಂದಿಗೆ ಬಾಪ್ರೋಲಾದಲ್ಲಿ ವಾಸಿಸುತ್ತಿರುವುದು ತಿಳಿದು ಬಂದಿತ್ತು. ಈ ವೇಳೆ ಆತ ರಿಯಲ್‌ ಎಸ್ಟೇಟ್‌ ಉದ್ಯಮ ಆರಂಭಿಸಿಕೊಂಡಿದ್ದ. ವಿವಾದಿತ ಕಟ್ಟಡ ಮಾರಾಟದಲ್ಲಿ ತೊಡಗಿದ್ದ ವೇಳೆಯೇ ಆತನನ್ನು ಬಂಧಿಸಿ ಪೊಲೀಸರು ತಿಹಾರ್‌ ಜೈಲಿಗಟ್ಟಿದ್ದರು. ಸ್ವಲ್ಪ ವರ್ಷಗಳ ಕಾಲ ಜೈಲಲ್ಲಿದ್ದ ಶರ್ಮಾಗೆ 2023ರಲ್ಲಿ ಎರಡು ತಿಂಗಳ ಪೆರೋಲ್ ನೀಡಲಾಯಿತು, ಇದಾದ ಬಳಿಕ ಮತ್ತೆ ಆತ ತಲೆಮರೆಸಿಕೊಂಡಿದ್ದ.

    ಹಂತಕನ ಪತ್ತೆಗೆ ಜೈಪುರ, ದೆಹಲಿ, ಅಲಿಗಢ, ಆಗ್ರಾ ಮತ್ತು ಪ್ರಯಾಗ್‌ರಾಜ್ ಸೇರಿದಂತೆ ಎಲ್ಲಾ ಸಂಭಾವ್ಯ ಅಡಗುತಾಣಗಳಲ್ಲಿ ಆರು ತಿಂಗಳ ಕಾಲ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಕೊನೆಗೆ ರಾಜಸ್ಥಾನದ ದೌಸಾದ ಆಶ್ರಮದಲ್ಲಿ ಅರ್ಚಕನ ವೇಷದಲ್ಲಿ ಅಡಗಿಕೊಂಡಿದ್ದು ಪತ್ತೆಯಾಗಿತ್ತು. ಪೊಲೀಸರ ತಂಡವು ಅಲ್ಲಿ ಮೊಕ್ಕಾಂ ಹೂಡಿ, ಆತನ ಅನುಯಾಯಿಯಂತೆ ನಟಿಸಿ ಬಂಧಿಸಿದ್ದಾರೆ. ಬಂಧನದ ಬಳಿಕ ಆತ ತನ್ನೆಲ್ಲಾ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. ಮತ್ತೆ ಜೈಲಿಗೆ ವಾಪಸ್‌ ಆಗಬಾರದು ಎಂದೇ ಪೆರೋಲ್‌ ಪಡೆದು ಪರಾರಿಯಾಗಿದ್ದೆ ಎಂದು ಹೇಳಿಕೊಂಡಿದ್ದಾನೆ.

    ಶರ್ಮ ಕೊಲೆ, ಅಪಹರಣ ಮತ್ತು ದರೋಡೆ ಸೇರಿದಂತೆ 27 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆತನನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್‌ ಗಂಭೀರ್‌ಗೆ ಜೀವ ಬೆದರಿಕೆ

    ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್‌ ಗಂಭೀರ್‌ಗೆ ಜೀವ ಬೆದರಿಕೆ

    ನವದೆಹಲಿ: ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ (Pahalgam) ಭಯೋತ್ಪಾದಕರು ಹಿಂದೂಗಳ ನರಮೇದ ನಡೆಸಿದ ದಿನವೇ ಟೀಂ ಇಂಡಿಯಾ ಮುಖ್ಯಕೋಚ್‌ ಗೌತಮ್‌ ಗಂಭೀರ್‌ (Gautam Gambhi) ಅವರಿಗೆ 2 ಬಾರಿ ಜೀವ ಬೆದರಿಕೆ ಸಂದೇಶ ಬಂದಿತ್ತು ಎಂದು ವರದಿಯಾಗಿದೆ.

    2 ಇ-ಮೇಲ್‌ಗಳ ಮೂಲಕ ʻನಿನ್ನನ್ನು ಕೊಲ್ಲುತ್ತೇವೆʼ ಎನ್ನುವ ಬೆದರಿಕೆ ಸಂದೇಶಗಳು ಬಂದಿವೆ. ಈ ಸಂಬಂಧ ಗೌತಮ್‌ ಗಂಭೀರ್‌ ಅವರ ಕಾರ್ಯದರ್ಶಿ ದೆಹಲಿ ಪೊಲೀಸರಿಗೆ (Delhi Police) ದೂರು ನೀಡಿದ್ದು, ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇ-ಮೇಲ್‌ ವಿಳಾಸದ ಬೆನ್ನುಬಿದ್ದಿದ್ದಾರೆ. ಇದನ್ನೂ ಓದಿ: Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ

    ಬಿಜೆಪಿ ಮಾಜಿ ಸಂಸದರೂ ಆಗಿರುವ ಗೌತಮ್‌ ಗಂಭೀರ್‌ ಅವರಿಗೆ ಇದೇ ಏಪ್ರಿಲ್‌ 22ರಂದು ಮಧ್ಯಾಹ್ನ 2:07ರ ಸುಮಾರಿಗೆ jigneshsinhsodhaparmar14@gmail.com ಎಂಬ ಇಮೇಲ್ ಐಡಿಯಿಂದ ಮೊದಲ ಇಮೇಲ್ ಬೆದರಿಕೆ ಬಂದಿತ್ತು. ಸಂಜೆ 7:09 ಗಂಟೆ ವೇಳೆಗೆ chandressodha3@gmail.com ಎಂಬ ಐಡಿಯಿಂದ 2ನೇ ಬೆದರಿಕೆ ಸಂದೇಶ ಬಂದಿತ್ತು. ಈ ಹಿನ್ನೆಲೆ ಗಂಭೀರ್‌ ಅವರಿಗೂ ಸೂಕ್ತ ಭದ್ರತೆ ನೀಡಲಾಗಿದೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ (ಕೇಂದ್ರ) ಹರ್ಷ ವರ್ಧನ್ ಹೇಳಿದ್ದಾರೆ. ಇದನ್ನೂ ಓದಿ: ಕೊಲೆಯಾಗಿದ್ದ ಮಹಿಳೆ ಪತ್ತೆ ಕೇಸ್; 2 ವರ್ಷ ಜೈಲುಶಿಕ್ಷೆ ಅನುಭವಿಸಿ ನಿರಪರಾಧಿಯಾಗಿ ಬಿಡುಗಡೆಯಾದ ಸುರೇಶ್

  • ದೆಹಲಿಯಲ್ಲಿ ಕಟ್ಟಡ ಕುಸಿತ – 9 ತಿಂಗಳ ಮಗು ಸೇರಿ ನಾಲ್ವರು ಸಾವು

    ದೆಹಲಿಯಲ್ಲಿ ಕಟ್ಟಡ ಕುಸಿತ – 9 ತಿಂಗಳ ಮಗು ಸೇರಿ ನಾಲ್ವರು ಸಾವು

    – 10ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ

    ನವದೆಹಲಿ: ದೆಹಲಿಯ ಮುಸ್ತಫಾಬಾದ್‌ ಪ್ರದೇಶದಲ್ಲಿ ಇಂದು ನಸುಕಿನ ಜಾವ 4 ಅಂತಸ್ತಿನ ಕಟ್ಟಡ ಕುಸಿದು (Mustafabad Building Collapse) ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ 18 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈಶಾನ್ಯ ದೆಹಲಿಯ ದಯಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಚಾಂದಿನಿ, ದಾನಿಶ್, ರೇಷ್ಮಾ ಮತ್ತು ನವೀದ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ 2 ಸುತ್ತು ಗುಂಡಿನ ದಾಳಿ – ಡ್ರೈವಿಂಗ್‌ ಸೀಟ್‌ ಟಾರ್ಗೆಟ್‌ ಮಾಡಿ ಫೈರಿಂಗ್‌ ಮಾಡಿದ್ದು ಏಕೆ?

    ಕಟ್ಟಡ ಕುಸಿದಾಗ ಸುಮಾರು 24 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು ಅವರಲ್ಲಿ 18 ಮಂದಿಯನ್ನ ರಕ್ಷಿಸಲಾಗಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ 14 ಮಂದಿಯನ್ನ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಇನ್ನೂ ಕೆಲವರು ಅವಶೇಷಗಳಡಿಯಲ್ಲಿ ಹೂತು ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ? – ಅನುರಾಗ್‌ ಕಶ್ಯಪ್‌ ವಿವಾದ

    ಸದ್ಯ ಎನ್‌ಡಿಆರ್‌ಎಫ್‌, ಡಾಗ್ ಸ್ಕ್ವಾಡ್, ದೆಹಲಿ ಪೊಲೀಸರ (Delhi Police) ತಂಡಗಳು ಮತ್ತು ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಈವರೆಗೆ 18 ಮಂದಿಯನ್ನ ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ ಎಂದು ಸ್ಥಳೀಯ ಡಿಸಿಪಿ ಸಂದೀಪ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

  • ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

    ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

    ನವದೆಹಲಿ: ದೆಹಲಿ (Delhi) ಉದ್ಯಮಿ ತನ್ನ ಪತ್ನಿಯನ್ನು ಕೊಂದು ಚರಂಡಿಗೆಸೆದ 15 ದಿನಗಳ ಬಳಿಕ ಆಕೆಯ ಮೂಗುತಿಯ ಮೂಲಕ ಪೊಲೀಸರು ಗುರುತನ್ನು ಪತ್ತೆಹಚ್ಚಿದ್ದಾರೆ. ಈ ಘಟನೆ ದ್ವಾರಕಾದ (Dwaraka) ಚಾವ್ಲಾ ಪ್ರದೇಶದಲ್ಲಿ ನಡೆದಿದೆ.

    ಮಾ.15 ರಂದು ಸೀಮಾ ಸಿಂಗ್ (47) ಎಂಬ ಮಹಿಳೆಯ ಮೃತದೇಹ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಆದರೆ ಪತ್ತೆಯಾಗಿ 15 ದಿನ ಕಳೆದರೂ ಆಕೆಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ತನಿಖಾಧಿಕಾರಿಗಳು ಆಕೆ ಹಾಕಿಕೊಂಡಿದ್ದ ಮೂಗುತಿಯ ಆಧಾರದ ಮೇಲೆ ತನಿಖೆ ಆರಂಭಿಸಿದ್ದರು.ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

    ಅಧಿಕಾರಿಗಳು ಮೂಗುತಿ ಖರೀದಿಸಿದ್ದ ಅಂಗಡಿಯನ್ನು ಪತ್ತೆ ಹಚ್ಚಿ, ಖರೀದಿದಾರರ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಯನ್ನು ಪಡೆದುಕೊಂಡರು. ಇದರಿಂದ ಸಂಪರ್ಕಕ್ಕೆ ಸಿಕ್ಕ ದೆಹಲಿ ಉದ್ಯಮಿಯನ್ನು ವಿಚಾರಿಸಿದಾಗ ನನ್ನ ಪತ್ನಿ ವೃಂದಾವನಕ್ಕೆ (Vrindavan) ಹೋಗಿರುವುದಾಗಿ ತಿಳಿಸಿದ್ದಾನೆ.

    ಹೆಚ್ಚಿನ ತನಿಖೆಗಾಗಿ ವಿಚಾರಣೆಗೊಳಪಡಿಸಿದಾಗ ಉದ್ಯಮಿ ತಪ್ಪೊಪ್ಪಿಕೊಂಡಿದ್ದು, ತನ್ನ ಪತ್ನಿಯನ್ನು ಭದ್ರತಾ ಸಿಬ್ಬಂದಿಯ ಸಹಾಯದಿಂದ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಹಾಗೂ ನಮ್ಮಿಬ್ಬರ ಸಂಬಂಧದಲ್ಲಿ ತುಂಬಾ ಭಿನ್ನಾಭಿಪ್ರಾಯಗಳಿದ್ದ ಕಾರಣ ಕೊಲೆ ಮಾಡಿರುವುದಾಗಿ ತಿಳಿಸಿದ್ದು, ಸದ್ಯ ಪೊಲೀಸರು ಪತಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

  • ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 20ಕ್ಕೂ ಅಧಿಕ ಬಾಂಗ್ಲಾ ಪ್ರಜೆಗಳ ಬಂಧನ

    ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 20ಕ್ಕೂ ಅಧಿಕ ಬಾಂಗ್ಲಾ ಪ್ರಜೆಗಳ ಬಂಧನ

    ನವದೆಹಲಿ: ಅಕ್ರಮವಾಗಿ ನೆಲೆಸಿದ್ದ 20ಕ್ಕೂ ಹೆಚ್ಚು ಬಾಂಗ್ಲಾದೇಶಿ (Bangladesh) ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆಗ್ನೇಯ ಮತ್ತು ದಕ್ಷಿಣ ದೆಹಲಿ (Delhi)  ಜಿಲ್ಲೆಗಳಲ್ಲಿ ನಡೆಸಿದ ಸಂಘಟಿತ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.ಇದನ್ನೂ ಓದಿ: ಇರಾಕ್, ಬಾಂಗ್ಲಾದೇಶ ಸೈಕ್ಲೋನ್ ಎಫೆಕ್ಟ್ – ಭಾರತದ 18 ರಾಜ್ಯಗಳಿಗೆ ಮಳೆ ಅಲರ್ಟ್

    ಈ ಕುರಿತು ಉಪಪೊಲೀಸ್ ಆಯುಕ್ತ ಸಚಿನ್ ಶರ್ಮಾ ಮಾಹಿತಿ ನೀಡಿದ್ದು, ಬಂಧಿತ ವ್ಯಕ್ತಿಗಳು ಮಾನ್ಯ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದ್ದರು ಮತ್ತು ಕಾನೂನುಬಾಹಿರವಾಗಿ ವಾಸಿಸುತ್ತಿದ್ದರು. ಕಾರ್ಯಾಚರಣೆಯ ಸಮಯದಲ್ಲಿ, ಅವರ ಬಳಿಯಿಂದ ಹಲವಾರು ಅನುಮಾನಾಸ್ಪದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ (ಮಾ.11) ಪೊಲೀಸರು ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ವಾಸಿಸುತ್ತಿದ್ದ ಮೂವರು ಅನಧಿಕೃತ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಗಡಿಪಾರು ಮಾಡಿದ ನಂತರ ಭಾರತಕ್ಕೆ ಅಕ್ರಮವಾಗಿ ಮತ್ತೆ ಪ್ರವೇಶಿಸಿದ್ದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದೆ ಎಂದು ಹೇಳಿದರು.

    ಅನಧಿಕೃತ ವಲಸೆಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮತ್ತು ಭದ್ರತೆಯನ್ನು ಬಲಪಡಿಸಲು ಮಾ.10 ರಂದು ಪಿವಿಸಿ ಮಾರುಕಟ್ಟೆ ಮುಂಡ್ಕಾ, ಬಾಬಾ ಹರಿದಾಸ್ ಕಾಲೋನಿ, ಸುಲ್ತಾನ್ ಪುರಿ, ಬೆನಿವಾಲ್ ಲೋಹಾ ಮಂಡಿ, ಇಂದ್ರ ಜೀಲ್ ಮತ್ತು ಹನುಮಾನ್ ಮಂದಿರ ಕಮರುದ್ದೀನ್ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪೊಲೀಸ್ ತಂಡಗಳು ದಾಳಿ ನಡೆಸಿದವು ಎಂದು ಡಿಸಿಪಿ ತಿಳಿಸಿದ್ದಾರೆ.ಇದನ್ನೂ ಓದಿ: ದರ್ಶನ್‌, ಮದರ್‌ ಇಂಡಿಯಾ ನಡುವೆ ಬಿರುಕು?- ನಿಮ್ಮನ್ನು ಅರ್ಥ ಮಾಡಿಕೊಳ್ಳುವವರ ಜೊತೆಯಿರಿ ಎಂದ ನಟಿ

     

  • ಐವರು ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದ ದೆಹಲಿ ಪೊಲೀಸ್

    ಐವರು ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದ ದೆಹಲಿ ಪೊಲೀಸ್

    ನವದೆಹಲಿ: ರಾಜಧಾನಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಐವರು ಬಾಂಗ್ಲಾದೇಶದ ನುಸುಳುಕೋರರನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ.

    ಸದರ್ ಬಜಾರ್ ಪ್ರದೇಶದಲ್ಲಿದ್ದ ಇಬ್ಬರು ಬಾಂಗ್ಲಾದೇಶಿಗಳು ಹಾಗೂ ಹೊರ ಜಿಲ್ಲೆಯಲ್ಲಿದ್ದ ಮೂವರನ್ನು ಬಂಧಿಸಲಾಗಿದೆ. ಐವರು ಬಾಂಗ್ಲಾದೇಶಿಗಳು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ಅವರ ದಾಖಲೆಗಳನ್ನು ಸಹ ಪರಿಶೀಲನೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಮದು ಸುಂಕ ಕಡಿತದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ – ಭಾರತದ ಸ್ಪಷ್ಟನೆ

    ಮಾ.8ರಂದು, ದೆಹಲಿ ಪೊಲೀಸರು ವಸಂತ್ ಕುಂಜ್ ಪ್ರದೇಶದ ಜೈ ಹಿಂದಿ ಕ್ಯಾಂಪ್‌ನಲ್ಲಿ ಅಕ್ರಮ ವಲಸಿಗರ ವಿರುದ್ಧ ಪರಿಶೀಲನಾ ಅಭಿಯಾನ ನಡೆಸಿದರು. ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ, ಪರಿಶೀಲನೆಗಾಗಿ ಜನರಿಂದ ಅವರ ಗುರುತಿನ ಚೀಟಿಗಳನ್ನು ಕೇಳಲಾಗುತ್ತದೆ. ಅವರ ಎಲ್ಲಾ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಯಾರಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ, ಅವರ ಗುರುತಿನ ಚೀಟಿಗಳನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ ಎಂದು ಸಬ್‌ಇನ್ಸ್‌ಪೆಕ್ಟರ್‌ ರವಿ ಮಲಿಕ್ ತಿಳಿಸಿದ್ದಾರೆ. ಇದನ್ನೂ ಓದಿ: ಡೆವಿಲ್ ಚಿತ್ರೀಕರಣ ಶುರುವಾಗೋ ಹೊತ್ತಲ್ಲೇ ಆಪ್ತರನ್ನ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ ʻದಾಸʼ

    ಮಾ. 6ರಂದು, ಸಂಗಮ್ ವಿಹಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲು ದೆಹಲಿ ಪೊಲೀಸರು ಪರಿಶೀಲನಾ ಅಭಿಯಾನವನ್ನು ಸಹ ನಡೆಸಿದ್ದರು. ಈ ವರ್ಷದ ಜನವರಿಯಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದೆಹಲಿಯಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಇದನ್ನೂ ಓದಿ: ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತಾವನೆ ಬಂದ್ರೆ ಮಧ್ಯರಾತ್ರಿವರೆಗೂ ವ್ಯಾಪಾರಕ್ಕೆ ಅವಕಾಶ- ಭೈರತಿ ಸುರೇಶ್

    ದೆಹಲಿ ಪೊಲೀಸರು ಉನ್ನತ ಅಧಿಕಾರಿಗಳ ಸಭೆಯಲ್ಲಿ, ದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರ ವಿರುದ್ಧದ ಕಾರ್ಯಾಚರಣೆಯ ಸಲುವಾಗಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಕಾರ್ಯವನ್ನು ತೀವ್ರಗೊಳಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಗುಡ್ ಫ್ರೈಡೆ ದಿನ ನಿಗಿದಿಯಾಗಿರೋ ಸಿಇಟಿ ಪರೀಕ್ಷೆ ಮುಂದೂಡಿ: ಐವಾನ್ ಡಿಸೋಜಾ

    ಉದ್ಯೋಗಿಗಳು/ಗೃಹ ಸಹಾಯಕರು ಮತ್ತು ಕಟ್ಟಡ ಕಾರ್ಮಿಕರನ್ನು ಪರಿಶೀಲಿಸುವ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಮುದ್ರಣ ಮತ್ತು ಸೋಷಿಯಲ್ ಮೀಡಿಯಾಗಳ ಮೂಲಕ ಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಲು ಇನ್ಸ್‌ಪೆಕ್ಟರ್‌ ಜನರಲ್ ಅವರು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಇದನ್ನೂ ಓದಿ: Bengaluru | ಬೇಸಿಗೆಯ ತಾಪಕ್ಕೆ ತಂಪೆರಿದ ವರುಣ – ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ

    ಫೆಬ್ರವರಿಯಲ್ಲಿ, ದೆಹಲಿ ಪೊಲೀಸರು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಶಂಕಿತ 16 ಜನರನ್ನು ಬಂಧಿಸಿದ್ದರು. ವೀಸಾ ಇಲ್ಲದೆ ಈ ಜನರು ಭಾರತದಲ್ಲಿ ಅವಧಿ ಮೀರಿ ನೆಲೆಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಲಾಗಿದ್ದು, ಗಡೀಪಾರು ಮಾಡವಂತೆ ಆದೇಶ ನೀಡಿದ್ದಾರೆ.

  • ಪ್ಲಾಟ್‌ಫಾರ್ಮ್‌, ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ: ದೆಹಲಿ ಪೊಲೀಸ್‌

    ಪ್ಲಾಟ್‌ಫಾರ್ಮ್‌, ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ: ದೆಹಲಿ ಪೊಲೀಸ್‌

    – ಉನ್ನತಮಟ್ಟದ ಸಮಿತಿಯಿಂದ ತನಿಖೆ ಶುರು

    ನವದೆಹಲಿ: ಕೊನೇ ಕ್ಷಣದಲ್ಲಿ ಪ್ಲಾಟ್‌ಫಾರ್ಮ್‌ ಹಾಗೂ ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂದು ಹಿರಿಯ ದೆಹಲಿ ಪೊಲೀಸ್‌ (Delhi Police) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನವದೆಹಲಿ ರೈಲು ನಿಲ್ದಾಣದ (Delhi Railway Station) ಪ್ಲಾಟ್‌ಫಾರ್ಮ್ ಸಂಖ್ಯೆ 13 ಮತ್ತು 14 ಜನದಟ್ಟಣೆಯಿಂದ ಕೂಡಿತ್ತು. ಅನೇಕ ಜನರು ಎರಡು ರೈಲುಗಳನ್ನು ಹತ್ತಲು ಕಾಯುತ್ತಿದ್ದರು. ಮಾಗ್ಧ್ ಎಕ್ಸ್‌ಪ್ರೆಸ್‌ ಮತ್ತು ಜಮ್ಮು ಕಡೆಗೆ ಹೋಗುವ ಇನ್ನೊಂದು ರೈಲು ವಿಳಂಬವಾಯಿತು. ಈ ಮಧ್ಯೆ, ಮಹಾ ಕುಂಭಕ್ಕಾಗಿ ವಿಶೇಷ ರೈಲು, ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್‌, ರಾತ್ರಿ 10:10ಕ್ಕೆ ಪ್ಲಾಟ್‌ಫಾರ್ಮ್ ಸಂಖ್ಯೆ 14 ರಿಂದ ಹೊರಡಬೇಕಿತ್ತು. ಪ್ರಯಾಗ್‌ರಾಜ್‌ಗೆ ರೈಲು (Prayagraj Express Train) ಹೋಗುವ ಸಮಯ ಹತ್ತಿರವಾಗುತ್ತಿದ್ದಂತೆ, ಹೆಚ್ಚು ಹೆಚ್ಚು ಜನರು ಪ್ಲಾಟ್‌ಫಾರ್ಮ್‌ಗೆ ಧಾವಿಸಲು ಪ್ರಾರಂಭಿಸಿದರು. ಇದು ಜನದಟ್ಟಣೆಯನ್ನು ಹೆಚ್ಚಿಸಿತು ಎಂದು ಅಧಿಕಾರಿ ಹೇಳಿದ್ದಾರೆ.

    ಪ್ಲಾರ್ಟ್‌ಫಾರ್ಮ್‌ನಲ್ಲಿ ಗೊಂದಲ:
    ಪ್ಲಾಟ್‌ಫಾರ್ಮ್ 16ಕ್ಕೆ ಪ್ರಯಾಗ್‌ರಾಜ್ ವಿಶೇಷ ಆಗಮಿಸಲಿದೆ ಎಂಬ ರೈಲ್ವೆ ಸಿಬ್ಬಂದಿಯ ಘೋಷಣೆ ಜನರ ಗೊಂದಲಕ್ಕೆ ಕಾರಣವಾಯಿತು. ಇದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿಕೆಶಿ

    ಏಕೆಂದರೆ ಪ್ರಯಾಗರಾಜ್ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಲೇ ಪ್ಲಾಟ್‌ಫಾರ್ಮ್ 14 ರಲ್ಲಿತ್ತು. ಈ ವೇಳೆ 16ನೇ ಪ್ಲಾಟ್‌ಫಾರ್ಮ್‌ಗೆ ತಲುಪಲಿದೆ ಎಂಬ ಘೋಷಣೆಯೊಂದು ಹೊರಬಿದ್ದಿತು. ಪ್ಲಾಟ್‌ಫಾರ್ಮ್ 14 ರಲ್ಲಿ ತಮ್ಮ ರೈಲನ್ನು ತಲುಪಲು ಸಾಧ್ಯವಾಗದ ಜನರು 16ಕ್ಕೆ ಆಗಮಿಸುತ್ತಿದೆ ಎಂದು ಭಾವಿಸಿ ಅತ್ತ ನುಗ್ಗಲು ಪ್ರಾರಂಭಿಸಿದ್ರು. ಇದರಿಂದಾಗಿ ಕಾಲ್ತುಳಿತ ಸಂಭವಿಸಿರಬಹುದು ಎಂದು ಹೇಳಿದ್ದಾರೆ.

    ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೆಯು ಇಬ್ಬರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಕೂಡ ರಚಿಸಿದೆ. ಉತ್ತರ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ನರಸಿಂಗ್ ದೇವು ಮತ್ತು ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಪಂಕಜ್ ಗಂಗ್ವಾರ್ ಸಮಿತಿಯ ಭಾಗವಾಗಿದ್ದಾರೆ. ತನಿಖೆ ಆರಂಭಿಸಿರುವ ಸಮಿತಿಯು, ನವದೆಹಲಿ ರೈಲು ನಿಲ್ದಾಣದ ಎಲ್ಲಾ ವಿಡಿಯೋ ತುಣುಕನ್ನು ಪಡೆದುಕೊಳ್ಳಲು ಆದೇಶ ನೀಡಿದೆ. ಇದನ್ನೂ ಓದಿ: ಮುಂಬೈ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ಕಾರ್ಮಿಕರು ಸಜೀವ ದಹನ

    ನಿನ್ನೆ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಎರಡು ರೈಲುಗಳು ವಿಳಂಬವಾಗಿ ಬಂದ ಕಾರಣ ಮತ್ತು ಮಹಾ ಕುಂಭಮೇಳಕ್ಕೆ ತೆರಳಲು ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ವಿಳಂಬವಾದ ಪರಿಣಾಮ ಕಾಲ್ತುಳಿತ ಉಂಟಾಯಿತು. ಪರಿಣಾಮ 11 ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 422 ವಸ್ತುಗಳನ್ನು ಗುರುತಿಸಿ, ನೊಬೆಲ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ 9 ತಿಂಗಳ ಐರಾ

  • ದೆಹಲಿಯಲ್ಲಿ ಮತ್ತೆರಡು ಶಾಲೆಗಳಿಗೆ ಬಾಂಬ್ ಬೆದರಿಕೆ

    ದೆಹಲಿಯಲ್ಲಿ ಮತ್ತೆರಡು ಶಾಲೆಗಳಿಗೆ ಬಾಂಬ್ ಬೆದರಿಕೆ

    ನವದೆಹಲಿ: ನೋಯ್ಡಾ ಮತ್ತು ದೆಹಲಿಯಲ್ಲಿ ಎರಡು ಶಾಲೆಗಳಿಗೆ ಶುಕ್ರವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆಯ (Bomb Threat) ಸಂದೇಶಗಳು ಬಂದಿದೆ.

    ಮಯೂರ್ ವಿಹಾರ್ 1ನೇ ಹಂತದಲ್ಲಿರುವ ಅಹ್ಲ್ಕಾನ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ನೋಯ್ಡಾದ ಶಿವ ನಾಡರ್ ಶಾಲೆಗೆ ಬೆದರಿಕೆ ಇಮೇಲ್‌ಗಳು ಬಂದಿವೆ. ಇದನ್ನೂ ಓದಿ: ಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಐಶ್ವರ್ಯ

    ಬೆದರಿಕೆ ಸಂದೇಶ ಬರುತ್ತಿದ್ದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನ ಕಳುಹಿಸದಂತೆ ಎಲ್ಲಾ ಪೋಷಕರಿಗೆ ಸಂದೇಶ ಕಳುಹಿಸಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕಾಗಮಿಸಿದ ಶ್ವಾನದಳ, ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಶೋಧಕಾರ್ಯ ನಡೆಸಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಕಳೆದ 2 ದಿನಗಳ ಹಿಂದೆಯೂ ಸಹ ನೋಯ್ಡಾದ 2 ಖಾಸಗಿ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಕೇಳಿಬಂದಿತ್ತು. 9ನೇ ಕ್ಲಾಸ್‌ನ ವಿದ್ಯಾರ್ಥಿಯೊಬ್ಬ ಶಾಲೆಗೆ ಹೋಗುವುದನ್ನು ತಪ್ಪಿಸಲು ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಇದನ್ನೂ ಓದಿ: RBI: 5 ವರ್ಷಗಳ ಬಳಿಕ ರೆಪೊ ದರ ಕಡಿತ ಮಾಡಿದ ಆರ್‌ಬಿಐ

  • ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆ ಭೇದಿಸಿದ ಪೊಲೀಸರು – 11 ಮಂದಿ ಅರೆಸ್ಟ್‌

    ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆ ಭೇದಿಸಿದ ಪೊಲೀಸರು – 11 ಮಂದಿ ಅರೆಸ್ಟ್‌

    – ವೆಬ್‌ಸೈಟ್‌ನಲ್ಲಿ ಕೇವಲ 20 ರೂ.ಗೆ ನಕಲಿ ದಾಖಲೆ ಸೃಷ್ಠಿಸುತ್ತಿದ್ದ ಜಾಲ

    ನವದೆಹಲಿ: ಬಾಂಗ್ಲಾದೇಶಿ ಪ್ರಜೆಗಳ (Bangladeshi nationals) ಅಕ್ರಮ ವಲಸೆ ದಂಧೆಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ 6 ಜನರೊಂದಿಗೆ ಐವರು ಬಾಂಗ್ಲಾದೇಶಿ ಪ್ರಜೆಗಳನ್ನೂ ಬಂಧಿಸಲಾಗಿದೆ ಎಂದು ದಕ್ಷಿಣ ಜಿಲ್ಲೆಯ ಡಿಸಿಪಿ (South Delhi DCP) ಅಂಕಿತ್ ಚೌಹಾಣ್ ತಿಳಿಸಿದ್ದಾರೆ.

    ಇತ್ತಿಚೇಗೆ ಸಂಗಮ್ ವಿಹಾರ್‌ನಲ್ಲಿ ಸೆಟಾನ್ ಶೇಖ್ ಎಂಬುವನ ಹತ್ಯೆಯಾಗಿತ್ತು. ಹತ್ಯೆಯಾಗಿದ್ದ ವ್ಯಕ್ತಿ ಬಾಂಗ್ಲಾದೇಶಿ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್‌ಗಳನ್ನ ಸೃಷ್ಟಿಸಲು ಸಹಾಯ ಮಾಡುತ್ತಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿತ್ತು. ತನಿಖೆ ವೇಳೆ ಶೇಖ್ ಸಹಚರರ ಮೇಲೆ ಶಂಕೆ ವ್ಯಕ್ತವಾಗಿದ್ದು, ಹಣಕಾಸಿನ ಕಲಹ ಮತ್ತು ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದೆ ಎಂದು ಸಹಚರರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ವಂಚನೆ ಕೇಸ್‌ಗೆ ಟ್ವಿಸ್ಟ್ ಕೊಟ್ಟ ವರ್ತೂರು ಪ್ರಕಾಶ್‌ – 12 ಲಕ್ಷ ನಗದು, 3 ಬ್ರಾಸ್‌ಲೆಟ್‌, ಚಿನ್ನದ ಉಂಗುರ ವಾಪಸ್

    ಇಂದು (ಡಿ.24) ಕಾರ್ಯಾಚರಣೆ ವೇಳೆ ಪೊಲೀಸರು 21 ನಕಲಿ ಆಧಾರ್ ಕಾರ್ಡ್‌ಗಳು, 6 ಪ್ಯಾನ್ ಕಾರ್ಡ್‌ಗಳು ಮತ್ತು 4 ವೋಟರ್ ಐಡಿಗಳನ್ನ ವಶಪಡಿಸಿಕೊಂಡಿದ್ದಾರೆ. 2022 ರಿಂದ ರಜತ್ ಮಿಶ್ರಾ ಎಂಬ ವ್ಯಕ್ತಿಯಿಂದ ನಿರ್ವಹಿಸಲ್ಪಡುವ ಜನತಾ ಪ್ರಿಂಟ್ಸ್ ಎಂಬ ವೆಬ್‌ಸೈಟ್‌ನಲ್ಲಿ 20 ರೂ.ಗೆ ನಕಲಿ ದಾಖಲೆಗಳನ್ನು ಸೃಷ್ಠಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.

    ಬಂಧಿತರ ಪೈಕಿ ಮುನ್ನಿ ದೇವಿ ಕೂಡ ಸಿಂಡಿಕೇಟ್‌ಗೆ ಸಹಾಯ ಮಾಡುತ್ತಿದ್ದಾಳೆ ಎಂದು ಶಂಕಿಸಲಾಗಿದೆ. ಈ ಸಂಘಟಿತ ಜಾಲವು ಬಾಂಗ್ಲಾದೇಶಿ ವಲಸಿಗರಿಗೆ ಅರಣ್ಯ ಮಾರ್ಗಗಳ ಮೂಲಕ ಭಾರತವನ್ನು ಪ್ರವೇಶಿಸಲು ಸಹಾಯ ಮಾಡುತ್ತಿದೆ ಮತ್ತು ಅವರಿಗೆ ನಕಲಿ ಐಡಿಗಳು, ಸಿಮ್ ಕಾರ್ಡ್‌ಗಳು ಮತ್ತು ಹಣಕಾಸಿನ ನೆರವು ನೀಡುತ್ತಿದೆ ಎಂಬ ಮಾಹಿತಿ ಇದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಶಿವಣ್ಣಗೆ ಇಂದು ಶಸ್ತ್ರಚಿಕಿತ್ಸೆ – ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಪೂಜೆ

    ಪೊಲೀಸ್ ತಂಡಗಳು ಗಡಿಯಾಚೆಗಿನ ಸಂಪರ್ಕಗಳನ್ನು ಅನ್ವೇಷಿಸುತ್ತಿವೆ. ಹೆಚ್ಚಿನ ತನಿಖೆಗಾಗಿ ಬಾಂಗ್ಲಾದೇಶಕ್ಕೆ ಸಿಬ್ಬಂದಿಯನ್ನ ನಿಯೋಜಿಲಾಗಿದೆ. ನಕಲಿ ಮತದಾರರ ಚೀಟಿಗಳನ್ನು ಚುನಾವಣಾ ವಂಚನೆಗೆ ಬಳಸಲಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ‌. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌