Tag: Delhi Police

  • ಬಲಪಂಥೀಯ ನಾಯಕರೇ ಟಾರ್ಗೆಟ್‌ – ಆತ್ಮಹತ್ಯಾ ಬಾಂಬರ್‌ಗಳನ್ನ ಸಿದ್ಧಪಡಿಸಿದ್ದ ಐಸಿಸ್‌ ಉಗ್ರರ ಗ್ಯಾಂಗ್‌

    ಬಲಪಂಥೀಯ ನಾಯಕರೇ ಟಾರ್ಗೆಟ್‌ – ಆತ್ಮಹತ್ಯಾ ಬಾಂಬರ್‌ಗಳನ್ನ ಸಿದ್ಧಪಡಿಸಿದ್ದ ಐಸಿಸ್‌ ಉಗ್ರರ ಗ್ಯಾಂಗ್‌

    – ಸಿಗ್ನಲ್ ಆ್ಯಪ್‌ನಲ್ಲಿ ಸಂವಹನ, ಪಾಕ್‌ ಉಗ್ರರೊಂದಿಗೆ ನಿರಂತರ ಸಂಪರ್ಕ
    – ಇಸ್ಲಾಂ ರಾಜ್ಯ ಸ್ಥಾಪನೆಗೆ ಹೊಂಚು ಹಾಕಿದ್ದ ಜಾಲ; ಐವರು ಅರೆಸ್ಟ್‌

    ನವದೆಹಲಿ: ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದಿದ್ದ ಐವರು ಐಸಿಸ್‌ ಉಗ್ರರ ಗ್ಯಾಂಗ್‌ನ (ISIS Terrorists) ಬಗ್ಗೆ ರಣರೋಚಕ ರಹಸ್ಯಗಳು ಬಯಲಾಗಿವೆ. ʻಖಿಲಾಫತ್‌ʼ (Muslims States) ಮಾಡಲು ಹೊಂಚುಹಾಕಿದ್ದ ಗ್ಯಾಂಗ್‌ ಬಲಪಂಥೀಯ ನಾಯಕರನ್ನೇ (Right Wing Leaders) ಟಾರ್ಗೆಟ್‌ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಚಾಟಿಂಗ್‌ ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದ ಈ ಗ್ಯಾಂಗ್‌ ಪಾಕ್‌ನಿಂದ (Pakistan) ನಿರ್ವಹಿಸಲ್ಪಡುತ್ತಿತ್ತು. ಗುಂಪಿನಲ್ಲಿ 40 ಸದಸ್ಯರು ಇದ್ದರೂ ಕೇವಲ ಐವರಿಗೆ ಮಾತ್ರ ಉಗ್ರ ಚಟುವಟಿಕೆಗಳ ಬಗ್ಗೆ ತಿಳಿದಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದ ಶಂಕಿತರು ಬಲಪಂಥೀಯ ನಾಯಕರನ್ನೇ ಗುರಿಯಾಗಿಸಲು ಪ್ಲ್ಯಾನ್‌ ಮಾಡಿಕೊಂಡಿದ್ದರು. ಈ ಕುರಿತು ಸಿಗ್ನಲ್‌ ಆಪ್‌ನಲ್ಲಿ ಪಾಕ್‌ ಮೂಲದವರೊಂದಿಗೆ ನಡೆಸಿದ ಚಾಟ್‌ಗಳು ಲಭ್ಯವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಅಲ್ಲದೇ ಶಂಕಿತ ಉಗ್ರರ ಗ್ಯಾಂಗ್‌ ನಿರಂತರವಾಗಿ ಪಾಕ್‌ ಮೂಲದವರ ಜೊತೆಗೆ ಸಂಪರ್ಕದಲ್ಲಿರುತ್ತಿತ್ತು. ಸಿಗ್ನಲ್‌ ಆಪ್‌ (Signal App) ಮೂಲಕ ಮುಂದಿನ ಚಟುವಟಿಕೆಗಳ ಬಗ್ಗೆ ಸಂವಹನ ನಡೆಸುತ್ತಿತ್ತು. ಜೊತೆಗೆ ಭಾರತದಲ್ಲಿ ಎಲ್ಲೆಲ್ಲಿ ಕೆಮಿಕಲ್‌ ಬಾಂಬ್‌ ಸ್ಫೋಟಿಸಬೇಕು ಅನ್ನೋ ಬಗ್ಗೆಯೂ ಚರ್ಚಿಸಿದ್ದರು. ಆತ್ಮಹತ್ಯಾ ಬಾಂಬರ್‌ಗಳನ್ನು ಸಿದ್ಧಪಡಿಸಿದ್ದರು ಅನ್ನೋದು ವರದಿಗಳಿಂದ ತಿಳಿದುಬಂದಿದೆ.

    ಐವರು ಅರೆಸ್ಟ್‌
    ದೆಹಲಿ (Delhi), ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ನೆಲೆಸಿದ್ದ ಐವರು ಶಂಕಿತ ಉಗ್ರರನ್ನ ಕಳೆದ ಎರಡು ದಿನಗಳಲ್ಲಿ ಬಂಧಿಸಲಾಗಿದೆ. ಮುಂಬೈ ನಿವಾಸಿ ಅಫ್ತಾಬ್, ಅಬು ಸುಫಿಯಾನ್‌ ಇಬ್ಬರನ್ನ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ, ಆಶರ್ ದಾನಿಶ್‌ ರಾಂಚಿಯಲ್ಲಿ, ಕಮ್ರಾನ್ ಖುರೇಷಿಯನ್ನ ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮತ್ತು ಹುಜೈಫ್ ಯೆಮೆನ್‌ನ ತೆಲಂಗಾಣದಲ್ಲಿ ಬಂಧಿಸಲಾಗಿದೆ.

    ISIS 2

    ಬಾಂಬ್‌ ಎಕ್ಸ್‌ಪರ್ಸ್‌ ಪದವೀಧರ ಆಶರ್ ದಾನಿಶ್‌
    ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ ಡ್ಯಾನಿಶ್‌ ಈ ಐವರ ಗುಂಪಿನ ನಾಯಕನಾಗಿದ್ದ. ʻಗಜ್ವಾʼ ಎಂಬ ಕೋಡ್‌ ನೊಂದಿಗೆ ಭಾರತದಲ್ಲಿ ಕೆಲಸ ಮಾಡುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದಿದ್ದ. ಬಾಂಬ್‌ ತಯಾರಿಸುವುದರಲ್ಲಿ ಎಕ್ಸ್‌ಪರ್ಟ್‌ ಆಗಿದ್ದ ಎಂದು ವರದಿಗಳು ತಿಳಿಸಿವೆ. ತನ್ನ ಅಸಲಿ ವೇಷ ಬದಲಿಸಿ ವಿದ್ಯಾರ್ಥಿಯಂತೆ ಗುರುತಿಸಿಕೊಂಡಿದ್ದ. ಈತ ರಾಂಚಿಯ ತಬಾರಕ್‌ ಲಾಡ್ಜ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ.

    ಭಾರೀ ಪ್ರಮಾಣದ ಕೆಮಿಕಲ್‌ ಪತ್ತೆ
    ಬಂಧಿತ ಆರೋಪಿಗಳಿಂದ ಒಂದು ಪಿಸ್ತೂಲ್‌, ಡಿಜಿಟಲ್‌ ಸಾಧನಗಳು, ಭಾರೀ ಪ್ರಮಾಣದ ಕೆಮಿಕಲ್‌ ವೆಪೆನ್‌, ವೆಪೆನ್‌ ಕಾರ್ಟ್ರಿಡ್ಜ್‌ ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ಕೆಮಿಕಲ್‌ಗಳ ಪೈಕಿ ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಸೋಡಿಯಂ ಬೈಕಾರ್ಬನೇಟ್, ಸಲ್ಫರ್ ಪೌಡರ್, pH ಮೌಲ್ಯ ಪರೀಕ್ಷಕ ಮತ್ತು ಬಾಲ್ ಬೇರಿಂಗ್‌ಗಳು ಸೇರಿವೆ. ಅಲ್ಲದೇ ಲ್ಯಾಪ್ ಟಾಪ್, ಮೊಬೈಲ್ ಫೋನ್, ಡಿಜಿಟಲ್‌ ತಕ್ಕಡಿ, ಬೀಕರ್ ಸೆಟ್, ಗ್ಲೌಸ್‌, ಆಕ್ಸಿಜನ್‌ ಮಾಸ್ಕ್‌, ಮದರ್‌ಬೋರ್ಡ್ ಹೊಂದಿರುವ ಪ್ಲಾಸ್ಟಿಕ್ ಕಂಟೇನರ್ ವಶಪಡಿಸಿಕೊಳ್ಳಲಾಗಿದೆ. ಡ್ಯಾನಿಶ್‌ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವಲ್ಲಿ ಪರಿಣಿತನಾಗಿದ್ದ ಎಂದು ತಿಳಿದುಬಂದಿದೆ.

  • ಐವರು ಐಸಿಸ್ ಉಗ್ರರು ಅರೆಸ್ಟ್‌ – ಭಾರೀ ಪ್ರಮಾಣದ ಕೆಮಿಕಲ್‌ ವೆಪೆನ್‌ ಪತ್ತೆ

    ಐವರು ಐಸಿಸ್ ಉಗ್ರರು ಅರೆಸ್ಟ್‌ – ಭಾರೀ ಪ್ರಮಾಣದ ಕೆಮಿಕಲ್‌ ವೆಪೆನ್‌ ಪತ್ತೆ

    – ಮುಸ್ಲಿಂ ಸಾಮ್ರಾಜ್ಯ ಸ್ಥಾಪನೆಗಾಗಿ ʻಖಿಲಾಫತ್‌ʼ ಮಾದರಿ ಅನುಸರಿಸುತ್ತಿದ್ದ ಗ್ಯಾಂಗ್‌
    – ಪಾಕಿಸ್ತಾನದಿಂದ ನಿರ್ವಹಿಸುತ್ತಿದ್ದ ಗ್ಯಾಂಗ್‌

    ನವದೆಹಲಿ: ಕೆಮಿಕಲ್‌ ವೆಪೆನ್‌ (ರಾಸಾಯನಿಕ ಶಸ್ತ್ರಾಸ್ತ್ರ – Chemical Weapons) ತಯಾರಿಸುತ್ತಿದ್ದ ಹಾಗೂ ಮುಸ್ಲಿಂ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳಲು ʻಖಿಲಾಫತ್‌ʼ(Khilafat Model) ಮಾದರಿ ಅನುಸರಿಸುತ್ತಿದ್ದ ಐವರು ಶಂಕಿತ ಐಸಿಸ್‌ ಉಗ್ರರನ್ನು ವಿವಿಧ ರಾಜ್ಯಗಳಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ದೆಹಲಿ (Delhi), ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಶಂಕಿತ ಉಗ್ರರನ್ನ ಬಂಧಿಸಲಾಗಿದೆ. ಮುಂಬೈ ನಿವಾಸಿ ಅಫ್ತಾಬ್, ಅಬು ಸುಫಿಯಾನ್‌ ಇಬ್ಬರನ್ನ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ, ಆಶರ್ ದಾನಿಶ್‌ ರಾಂಚಿಯಲ್ಲಿ, ಕಮ್ರಾನ್ ಖುರೇಷಿಯನ್ನ ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮತ್ತು ಹುಜೈಫ್ ಯೆಮೆನ್‌ನ ತೆಲಂಗಾಣದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: Hyderabad | ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ

    ಬಂಧಿತ ಐವರು ಉಗ್ರ ಸಂಘಟನೆಯ ಸ್ಲೀಪರ್‌ ಮಾಡ್ಯೂಲ್‌ನ ಭಾಗವಾಗಿದ್ದರು. ಬಾಂಬ್‌ಗಳನ್ನ ತಯಾರಿಸುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಹಾಗೂ ಮುಸ್ಲಿಂ ಸಂಘಟನೆಯ (Muslims Union) ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ-ಪಾಕ್‌ ಪಂದ್ಯ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

    ಖಿಲಾಫತ್‌ ರಾಜ್ಯ ಸ್ಥಾಪನೆ ಎಂದರೆ ಇಸ್ಲಾಮಿಕ್‌ ರಾಜ್ಯ ಸ್ಥಾಪನೆ ಎಂದರ್ಥ.‌ ಅದರಂತೆ ಒಂದು ಸ್ಥಳವನ್ನು ಆಕ್ರಮಣ ಮಾಡಿಕೊಂಡು ನಂತರ ಅಲ್ಲಿ ಜಿಹಾದ್‌ ಚಟುವಟಿಕೆ ನಡೆಸುವುದನ್ನು ಇದು ಸೂಚಿಸುತ್ತದೆ. ಪಾಕಿಸ್ತಾನದಿಂದ ಈ ಮಾದರಿಯನ್ನ ನಿರ್ವಹಿಸಲಾಗಿದೆ. ಉಗ್ರರು ತಮ್ಮ ಸೋಷಿಯಲ್‌ ಮೀಡಿಯಾಗಳ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದರು ಅನ್ನೋ ರಹಸ್ಯವೂ ಬಯಲಾಗಿದೆ. ಇದನ್ನೂ ಓದಿ: ʻತುಂಬಾ ಅಪಾಯಕಾರಿʼ ದೂರವಿರಿ – ರಷ್ಯಾ ಸೇನೆ ಸೇರುತ್ತಿರುವ ಭಾರತೀಯರಿಗೆ MEA ವಾರ್ನಿಂಗ್‌

    ಬಾಂಬ್‌ ಎಕ್ಸ್‌ಪರ್ಸ್‌ ಪದವೀಧರ ಆಶರ್ ದಾನಿಶ್‌
    ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ ಡ್ಯಾನಿಶ್‌ ಈ ಐವರ ಗುಂಪಿನ ನಾಯಕನಾಗಿದ್ದ. ʻಗಜ್ವಾʼ ಎಂಬ ಕೋಡ್‌ ನೊಂದಿಗೆ ಭಾರತದಲ್ಲಿ ಕೆಲಸ ಮಾಡುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದಿದ್ದ. ಬಾಂಬ್‌ ತಯಾರಿಸುವುದರಲ್ಲಿ ಎಕ್ಸ್‌ಪರ್ಟ್‌ ಆಗಿದ್ದ ಎಂದು ವರದಿಗಳು ತಿಳಿಸಿವೆ. ತನ್ನ ಅಸಲಿ ವೇಷ ಬದಲಿಸಿ ವಿದ್ಯಾರ್ಥಿಯಂತೆ ಗುರುತಿಸಿಕೊಂಡಿದ್ದ. ಈತ ರಾಂಚಿಯ ತಬಾರಕ್‌ ಲಾಡ್ಜ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ.

    ಭಾರೀ ಪ್ರಮಾಣದ ಕೆಮಿಕಲ್‌ ಪತ್ತೆ
    ಬಂಧಿತ ಆರೋಪಿಗಳಿಂದ ಒಂದು ಪಿಸ್ತೂಲ್‌, ಡಿಜಿಟಲ್‌ ಸಾಧನಗಳು, ಭಾರೀ ಪ್ರಮಾಣದ ಕೆಮಿಕಲ್‌ ವೆಪೆನ್‌, ವೆಪೆನ್‌ ಕಾರ್ಟ್ರಿಡ್ಜ್‌ ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ಕೆಮಿಕಲ್‌ಗಳ ಪೈಕಿ ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಸೋಡಿಯಂ ಬೈಕಾರ್ಬನೇಟ್, ಸಲ್ಫರ್ ಪೌಡರ್, pH ಮೌಲ್ಯ ಪರೀಕ್ಷಕ ಮತ್ತು ಬಾಲ್ ಬೇರಿಂಗ್‌ಗಳು ಸೇರಿವೆ. ಅಲ್ಲದೇ ಲ್ಯಾಪ್ ಟಾಪ್, ಮೊಬೈಲ್ ಫೋನ್, ಡಿಜಿಟಲ್‌ ತಕ್ಕಡಿ, ಬೀಕರ್ ಸೆಟ್, ಗ್ಲೌಸ್‌, ಆಕ್ಸಿಜನ್‌ ಮಾಸ್ಕ್‌, ಮದರ್‌ಬೋರ್ಡ್ ಹೊಂದಿರುವ ಪ್ಲಾಸ್ಟಿಕ್ ಕಂಟೇನರ್ ವಶಪಡಿಸಿಕೊಳ್ಳಲಾಗಿದೆ. ಡ್ಯಾನಿಶ್‌ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವಲ್ಲಿ ಪರಿಣಿತನಾಗಿದ್ದ ಎಂದು ತಿಳಿದುಬಂದಿದೆ.

  • ದೆಹಲಿ ಪೊಲೀಸ್, ಜಾರ್ಖಂಡ್ ATS ಜಂಟಿ ಕಾರ್ಯಾಚರಣೆ – ಇಬ್ಬರು ಶಂಕಿತ ISIS ಉಗ್ರರು ಅರೆಸ್ಟ್

    ದೆಹಲಿ ಪೊಲೀಸ್, ಜಾರ್ಖಂಡ್ ATS ಜಂಟಿ ಕಾರ್ಯಾಚರಣೆ – ಇಬ್ಬರು ಶಂಕಿತ ISIS ಉಗ್ರರು ಅರೆಸ್ಟ್

    ನವದೆಹಲಿ: ದೆಹಲಿ ಪೊಲೀಸರು (Delhi Police), ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ (Jharkhand ATS) ಹಾಗೂ ರಾಂಚಿ ಪೊಲೀಸರು (Ranchi Police) ಜಂಟಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಶಂಕಿತ ಐಸಿಸ್ ಉಗ್ರರನ್ನು (Suspected ISIS Terrorists) ಬಂಧಿಸಿದ್ದಾರೆ.

    ಬೊಕಾರೊ ಮೂಲದ ಆಶರ್ ಡ್ಯಾನಿಶ್ ಎಂದು ಗುರುತಿಸಲಾದ ಪ್ರಮುಖ ಆರೋಪಿಯನ್ನು ರಾಂಚಿಯಲ್ಲಿ ಬಂಧಿಸಲಾಗಿದೆ. ಐಸಿಸ್-ಸಂಬಂಧಿತ ಮಾಡ್ಯೂಲ್‌ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕವು ಆಶರ್ ಡ್ಯಾನಿಶ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿತ್ತು. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು – ಬಿಜೆಪಿ ನಿಯೋಗದಿಂದ ಸರ್ವೇ ಕಾರ್ಯ

    ಏಕಕಾಲದಲ್ಲಿ ನಡೆಸಿದ ಸಂಘಟಿತ ದಾಳಿಯಲ್ಲಿ ಅಫ್ತಾಬ್ ಎಂಬ ಮತ್ತೊಬ್ಬ ಶಂಕಿತ ಐಸಿಸ್ ಉಗ್ರನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತರು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು. ಅಲ್ಲದೇ ಭಾರತದಲ್ಲಿ ಭ ಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಬಳಿಕ ಇಂಡಿಯಾ, ಪಾಕಿಸ್ತಾನ ಮ್ಯಾಚ್ ಬೇಕಿತ್ತಾ? – ಸಂತೋಷ್ ಲಾಡ್

  • ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್‌ ಬೆದರಿಕೆ – ತೀವ್ರ ಶೋಧ

    ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್‌ ಬೆದರಿಕೆ – ತೀವ್ರ ಶೋಧ

    ನವದೆಹಲಿ: ಇಲ್ಲಿನ ದ್ವಾರಕಾದ ದೆಹಲಿ ಪಬ್ಲಿಕ್‌ ಶಾಲೆ (DPS) ಸೇರಿದಂತೆ ಅನೇಕ ಶಾಲೆಗಳಿಗೆ ಬಾಂಬ್‌ ಬೆದರಿಕೆ (Bomb Threat) ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಮೂಲಗಳ ಪ್ರಕಾರ, ದೆಹಲಿ ಪೊಲೀಸ್‌ ತಂಡಗಳು (Delhi Police Team) ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳು ಸ್ಥಳಕ್ಕೆ ದೌಡಾಯಿಸಿದ್ದು, ಪೂರ್ಣ ಶೋಧ ನಡೆಸುತ್ತಿವೆ. ಅಗ್ನಿಶಾಮಕ ದಳಗಳೂ ಸ್ಥಳದಲ್ಲೇ ಬೀಡುಬಿಟ್ಟಿವೆ.

    ಪೊಲೀಸರು ಹೇಳುವಂತೆ, ದ್ವಾರಕಾದ ಸೆಕ್ಟರ್-19 ಬಳಿಯ ಸೇಂಟ್ ಥಾಮಸ್ ಶಾಲೆ, ಸೆಕ್ಟರ್ 18 ಎನ ದೆಹಲಿ ಇಂಟರ್ನ್ಯಾಷನಲ್ ಸ್ಕೂಲ್ ಎಡ್ಜ್, ಸೆಂಟ್ರಲ್ ಅಕಾಡೆಮಿ ಸ್ಕೂಲ್, ಸೆಕ್ಟರ್ 10ರ ದ್ವಾರಕಾದ ಜಿಡಿ ಗೋನೆಕಾ ಸ್ಕೂಲ್, ಸೆಕ್ಟರ್ 19ರ ದ್ವಾರಕಾ ಮತ್ತು ಮಾಡರ್ನ್ ಇಂಟರ್ನ್ಯಾಷನಲ್ ಶಾಲೆಗಳಿಗೆ ಬೆದರಿಕೆ ಬಂದಿವೆ. ಎಲ್ಲ ಬೆದರಿಕೆಗಳೂ ಒಂದೇ ಇಮೇಲ್‌ ಐಡಿಯಿಂದ ಬೆದರಿಕೆ ಬಂದಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಟ್ರಾಫಿಕ್‌ ಸಮಸ್ಯೆಗೆ ಕೊನೆಗೂ ಮುಕ್ತಿ – 700 ಮೀಟರ್ ಉದ್ದದ ಹೆಬ್ಬಾಳ ಮೇಲ್ಸೇತುವೆ ಇಂದು ಉದ್ಘಾಟನೆ

    ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಶಾಲೆಗಳಿಗೆ ರಜೆ ಘೊಷಿಸುವಂತೆ ಸೂಚಿಸಿದ್ದಾರೆ. ಇಡೀ ಶಾಲಾ ಆವರಣವನ್ನು ತೀವ್ರವಾಗಿ ಶೋಧಿಸಲಾಗುತ್ತಿದೆ. ಇದನ್ನೂ ಓದಿ: ಕೃಷ್ಣಾಷ್ಟಮಿ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಅವಘಡ – ಐವರು ಸಾವು

    ಕೆಲ ದಿನಗಳ ಹಿಂದೆ ಬೆಂಗಳೂರಿನಾದ್ಯಂತ 40 ಖಾಸಗಿ ಶಾಲೆಗಳಿಗೆ ಒಂದೇ ದಿನ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು.

  • ಹಳೇ ಅಕ್ರಮ ಸಂಬಂಧಕ್ಕೆ ಶಿಕ್ಷೆ – ಹೆತ್ತ ತಾಯಿಯನ್ನೇ 2 ಬಾರಿ ಅತ್ಯಾಚಾರಗೈದ ಪಾಪಿ ಮಗ

    ಹಳೇ ಅಕ್ರಮ ಸಂಬಂಧಕ್ಕೆ ಶಿಕ್ಷೆ – ಹೆತ್ತ ತಾಯಿಯನ್ನೇ 2 ಬಾರಿ ಅತ್ಯಾಚಾರಗೈದ ಪಾಪಿ ಮಗ

    ನವದೆಹಲಿ: ಹಳೆಯ ಅಕ್ರಮ ಸಂಬಂಧದ ಬಗ್ಗೆ ತಿಳಿದು ತಾಯಿಯ ಮೇಲೆಯೇ ಹೆತ್ತ ಮಗನೇ ಎರಡು ಬಾರಿ ಅತ್ಯಾಚಾರ ಎಸಗಿದ ಘಟನೆ ದೆಹಲಿಯಲ್ಲಿ (Dehli) ನಡೆದಿದೆ. ಕೃತ್ಯ ಎಸಗಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ.

    ಎಂಡಿ ಫಿರೋಜ್ ಅಲಿಯಾಸ್ ಸುಹೇಲ್ (29) ಬಂಧಿತ ಆರೋಪಿಯಾಗಿದ್ದು, ಸಂತ್ರಸ್ತೆಯ ಮಗಳು ದೂರು ದಾಖಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಬಿಜೆಪಿಗರ ರ‍್ಯಾಲಿ ಧರ್ಮಸ್ಥಳದ ಪರ, ನ್ಯಾಯದ ಪರ ಅಲ್ಲ – ಡಿಕೆಶಿ

    ದೂರಿನಲ್ಲಿ ಏನಿದೆ?
    ದೂರಿನ ಪ್ರಕಾರ, ಜು.25ರಂದು ಸಂತ್ರಸ್ತೆ, ಆಕೆಯ ಪತಿ (72) ಹಾಗೂ ಮಗಳು ಮೂವರು ತೀರ್ಥಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ (Saudi Arabia) ತೆರಳಿದ್ದರು. ಈ ವೇಳೆ ಆರೋಪಿ ತನ್ನ ತಂದೆಗೆ ಕರೆ ಮಾಡಿ, ಅಮ್ಮನಿಗೆ ಕೆಟ್ಟ ಸ್ವಭಾವವಿದೆ. ನೀವು ಕೂಡಲೇ ಅಲ್ಲಿಂದ ಹಿಂದಿರುಗಿ ಬಂದು ಅಮ್ಮನಿಗೆ ವಿಚ್ಛೇದನ ನೀಡಿ ಎಂದು ಒತ್ತಾಯಿಸಿದ್ದ. ಜೊತೆಗೆ ಹಲವು ಬಾರಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

    ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ, ಆ.11ರಂದು ತೀರ್ಥಯಾತ್ರೆ ಮುಗಿಸಿ ಮನೆಗೆ ವಾಪಸ್ಸಾಗಿದ್ದ ತಾಯಿಯ ಮೇಲೆ ಆರೋಪಿ ಹಲ್ಲೆ ನಡೆಸಿದ್ದ. ಇದರಿಂದ ಭಯಭೀತರಾದ ತಾಯಿ ಹಿರಿಯ ಮಗಳ ಮನೆಗೆ ತೆರಳಿದ್ದರು. ಸ್ವಲ್ಪ ದಿನಗಳ ಬಳಿಕ ಮತ್ತೆ ತಮ್ಮ ಮನೆಗೆ ಮರಳಿದ್ದರು. ಆಗ ಆರೋಪಿ ನಿಮ್ಮ ಜೊತೆ ಮಾತನಾಡಬೇಕು ಎಂದು ಹೇಳಿ ತಾಯಿಯನ್ನು ಕೋಣೆಗೆ ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ, ಚಾಕು ಮತ್ತು ಕತ್ತರಿಯಿಂದ ಬೆದರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಕುರಿತು ಸಂತ್ರಸ್ತೆ ಪ್ರಾರಂಭದಲ್ಲಿ ಯಾರಿಗೂ ಹೇಳಿರಲಿಲ್ಲ. ಬಳಿಕ ಭಯದಿಂದ ಮಗಳಿಗೆ ವಿಷಯ ತಿಳಿಸಿ, ಆಕೆಯ ಜೊತೆಗೆ ಮಲಗಲು ಶುರು ಮಾಡಿದ್ದಳು. ಆದರೆ ಆ.14ರಂದು ಆರೋಪಿ ತನ್ನ ತಾಯಿ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದ. ನಾನು ನಿನ್ನ ತಾಯಿ ಎಂದು ಬೇಡಿಕೊಂಡರೂ ಕೂಡ ಬಿಡದೇ, ನಿನ್ನ ಕೆಟ್ಟ ಸ್ವಭಾವಕ್ಕೆ ಇದು ಶಿಕ್ಷೆ ಎಂದು ಹೇಳಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

    ಸದ್ಯ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: Video Viral | ಸ್ವಾತಂತ್ರ‍್ಯ ದಿನಾಚರಣೆಯಂದು ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ; ಕ್ರಮಕ್ಕೆ ಆಗ್ರಹ

  • ಕಾಂಗ್ರೆಸ್ ಸಂಸದೆ ಸರ ಕಳವು ಪ್ರಕರಣ – ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸ್

    ಕಾಂಗ್ರೆಸ್ ಸಂಸದೆ ಸರ ಕಳವು ಪ್ರಕರಣ – ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸ್

    ನವದೆಹಲಿ: ವಾಕಿಂಗ್ ಹೋಗಿದ್ದ ಕಾಂಗ್ರೆಸ್ (Congress) ಸಂಸದೆ ಸುಧಾ ರಾಮಕೃಷ್ಣನ್ (Sudha Ramakrishnan) ಅವರ ಸರ ದೋಚಿ ಪರಾರಿಯಾಗಿದ್ದ ಕಳ್ಳರನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಆಗಸ್ಟ್ 4ರಂದು ತಮಿಳುನಾಡಿನ ಮೈಲಾಡುತುರೈನ ಸಂಸದೆ ಸುಧಾ ಅವರು ಚಾಣಕ್ಯಪುರಿಯ ಪೋಲೆಂಡ್ ರಾಯಭಾರ ಕಚೇರಿಯ ಬಳಿ ಡಿಎಂಕೆ ಶಾಸಕಿ ರಾಜತಿ ಅವರ ಜೊತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಸುಧಾ ಅವರ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದ. ಇದನ್ನೂ ಓದಿ: ಡಿಕೆಶಿ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು: ಇಕ್ಬಾಲ್ ಹುಸೇನ್

    ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಇದೀಗ ಪೊಲೀಸರು ಖದೀಮನನ್ನು ಬಂಧಿಸಿದ್ದು, ಆತನಿಂದ ಚಿನ್ನದ ಸರವನ್ನೂ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಓಖ್ಲಾ ನಿವಾಸಿಯೆಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 10 ದಿನಗಳಷ್ಟೇ ಬಾಕಿಯಿದೆ. ಈ ಹಿನ್ನೆಲೆ ದೆಹಲಿಯಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಿದ್ದೂ ಕೆಂಪು ಕೋಟೆ (Red Fort) ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಬಾಂಗ್ಲಾದೇಶದ ಐವರು ಅಕ್ರಮ ವಲಸಿಗರನ್ನ ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಹೌದು. ಕೆಂಪು ಕೋಟೆಯ ಪ್ರವೇಶ ನಿಯಂತ್ರಣ ಬಿಂದುವಿನ ಬಳಿ ಆ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸ್ ತಂಡವು ಆರೋಪಿಗಳನ್ನು ವಿಚಾರಿಸಿ ಬಂಧಿಸಿದೆ. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಮತ್ತೊಬ್ಬ ಶಂಕಿತನ ಬಂಧನ

    20 ರಿಂದ 25 ವರ್ಷ ವಯಸ್ಸಿನ ಇಬ್ಬರು ಆರೋಪಿಗಳು ನಿಯಮಿತ ತಪಾಸಣೆಯ ಸಮಯದಲ್ಲಿ ಸರಿಯಾದ ದಾಖಲೆಗಳನ್ನ ತೋರಿಸುವಲ್ಲಿ ವಿಫಲರಾಗಿದ್ದಾರೆ. ಹೆಚ್ಚಿನ ತಪಾಸಣೆ ನಡೆಸಿದಾಗ ಅವರು ಅಕ್ರಮವಾಗಿ ನೆಲೆಸಿರುವುದು ಕಂಡು ಬಂದಿದೆ. ಇದನ್ನೂ ಓದಿ: ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕ – ಭಾರತ ಕೌಂಟರ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ಆಯುಕ್ತ (ಉತ್ತರ ಜಿಲ್ಲೆ) ರಾಜ ಬಂಥಿಯಾ, ಇವರೆಲ್ಲರೂ ಅಕ್ರಮ ವಲಸಿಗರಾಗಿದ್ದು, ಅಕ್ರಮವಾಗಿ ಕೆಂಪು ಕೋಟೆ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಹೀಗಾಗಿ ಐವರು ಬಾಂಗ್ಲಾದೇಶದ ಪ್ರಜೆಗಳನ್ನ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಅವರು ಸುಮಾರು 3-4 ತಿಂಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದೆಹಲಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಇದು ಪಾಪರ್‌ ಸರ್ಕಾರ, ಪರಿಹಾರ ಕೊಡದಿದ್ರೆ ಅಧಿಕಾರ ಬಿಟ್ಟು ತೊಲಗಿ – ಅಶೋಕ್‌ ವಾಗ್ದಾಳಿ

  • ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!

    ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!

    ನವದೆಹಲಿ: ಕಳೆದ 6 ದಿನಗಳಿಂದ ತ್ರಿಪುರದ (Tripura) 19 ವರ್ಷದ ಯುವತಿಯೊಬ್ಬಳು ದೆಹಲಿಯಲ್ಲಿ ನಾಪತ್ತೆಯಾಗಿದ್ದಾಳೆ. ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ದೆಹಲಿಯ (Delhi) ಆತ್ಮ ರಾಮ ಸನಾತನ ಧರ್ಮ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ದೇಬ್ನಾಥ್ (19) ಕಳೆದ 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಜು.7ರಂದು ಕೊನೆಯ ಬಾರಿ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಳು. ಬೆಳಗ್ಗೆ 5:56ಕ್ಕೆ ತನ್ನ ಸ್ನೇಹಿತೆ ಪಿಟುನಿಯಾ ಜೊತೆ ಸರೈ ರೋಹಿಲ್ಲಾ ನಿಲ್ದಾಣಕ್ಕೆ ಹೋಗುವುದಾಗಿ ತಿಳಿಸಿದ್ದಳು. ಇದನ್ನೂ ಓದಿ: ಪತ್ನಿಯಿಂದ ವಿಚ್ಛೇದನ – 40 ಲೀಟರ್ ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!

    ಇದಾದ ನಂತರ ಪೋಷಕರು 8 ಗಂಟೆಗೆ ಕರೆ ಮಾಡಿದಾಗ ಸ್ನೇಹಾ ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡಿದ್ದ ಪೋಷಕರು ಆಕೆಯ ಸ್ನೇಹಿತೆ ಪಿಟುನಿಯಾಳನ್ನು ಸಂಪರ್ಕಿಸಿದ್ದರು. ಸ್ನೇಹಾಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ವಿಶ್ವಕ್ಕೇ ಮಾದರಿಯಾದ ಭಾರತ – ಮಿಷನ್ ಇಂದ್ರಧನುಷ್ ಯಶಸ್ಸಿಗೆ ವಿಶ್ವಸಂಸ್ಥೆ ಶ್ಲಾಘನೆ

    ಬಳಿಕ ಸ್ನೇಹಾ ಪೋಷಕರು, ಕ್ಯಾಬ್ ಚಾಲಕನನ್ನು ಪತ್ತೆಹಚ್ಚಿ, ಮಗಳ ಚಲನವಲನದ ಮಾಹಿತಿ ಪಡೆದಿದ್ದರು. ಈ ವೇಳೆ ಸ್ನೇಹಾಳನ್ನು ದೆಹಲಿಯ ಸಿಗ್ನೇಚರ್ ಸೇತುವೆಯ ಬಳಿ ಬಿಟ್ಟಿರುವುದಾಗಿ ಮಾಹಿತಿ ನೀಡಿದ್ದ. ಬಳಿಕ ದೆಹಲಿ ಪೊಲೀಸರು ಪಕ್ಕದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಆಕೆಯ ದೃಶ್ಯ ಸರಿಯಾಗಿ ಗೋಚರವಾಗಿಲ್ಲ. ಇದನ್ನೂ ಓದಿ: J&K | ಮೂರು ಬಸ್‌ಗಳ ನಡುವೆ ಅಪಘಾತ – 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರಿಗೆ ಗಾಯ

    ಇದರಿಂದ ಸಂಶಯಗೊಂಡ ಪೊಲೀಸರು ಸೇತುವೆಯ ಬಳಿ ಶೋಧ ಕಾರ್ಯ ನಡೆಸಿದ್ದರು. ಸತತ ಒಂದು ವಾರಗಳ ಕಾಲ ಹುಡುಕಾಡಿದರೂ ಸ್ನೇಹಾ ಪತ್ತೆಯಾಗಿಲಿಲ್ಲ.

    ಘಟನೆ ಕುರಿತು ಯುವತಿ ಪೋಷಕರು ತ್ರಿಪುರ ಸಿಎಂ ಮಾಣಿಕ್ ಸಹಾ (Manik Saha) ಅವರಿಗೆ ಮಾಹಿತಿ ನೀಡಿದ್ದಾರೆ. ಮಾಣಿಕ್ ಸಹಾ ಅವರು ಸ್ನೇಹಾ ಪತ್ತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

  • ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಇಬ್ಬರು ಆರೋಪಿಗಳಿಗೆ ಜಾಮೀನು

    ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಇಬ್ಬರು ಆರೋಪಿಗಳಿಗೆ ಜಾಮೀನು

    – ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿನ ಮನೋರಂಜನ್‌ಗೆ ಸಿಗದ ಬೇಲ್‌

    ನವದೆಹಲಿ: 2023ರ ಡಿಸೆಂಬರ್‌ 13ರಂದು ನಡೆದಿದ್ದ ಸಂಸತ್ತಿನ ಭದ್ರತಾ ಲೋಪ ಪ್ರಕರಣದ (Parliament Security Breach Case) ಇಬ್ಬರು ಆರೋಪಿಗಳಿಗೆ ದೆಹಲಿ ಹೈಕೋರ್ಟ್ (Delhi High Court) ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ.

    ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ದ್ವಿಸದಸ್ಯ ಪೀಠವು ನೀಲಂ ಆಜಾದ್, ಮಹೇಶ್ ಕುಮಾವತ್‌ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳಿಗೆ ತಲಾ 50,000 ರೂ. ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಸಲ್ಲಿಸುವಂತೆ ನಿರ್ದೇಶಿಸಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿಗ ಮನೋರಂಜನ್‌: ದೆಹಲಿ ಪೊಲೀಸರು

    Security breach in Lok Sabha

    ಪ್ರಕರಣ ಮುಗಿಯುವವರೆಗೆ ದೆಹಲಿ ಬಿಟ್ಟು ಹೋಗದಂತೆ ಸೂಚಿಸಿರುವ ಕೋರ್ಟ್‌ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 10 ಗಂಟೆ ವೇಳೆಗೆ ಗೊತ್ತುಪಡಿಸಿದ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದೆ. ಇದಕ್ಕೂ ಮುನ್ನ ವಿಚಾರಣೆ ನಡೆಸಿದ್ದ ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ (ASJ) ಹರ್ದೀಪ್ ಕೌರ್ ಆಜಾದ್ ಜಾಮೀಜು ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನೂ ಓದಿ: Tamil Nadu Custodial Death | ಕೊಲೆಗಾರರು ಹೀಗೆ ದಾಳಿ ಮಾಡಲ್ಲ – ಹೈಕೋರ್ಟ್‌ ಛೀಮಾರಿ; ಐವರು ಪೊಲೀಸರು ಅರೆಸ್ಟ್‌

    ಮೈಸೂರಿನ ಮನೋರಂಜನ್‌ಗೆ ಸಿಗದ ಜಾಮೀನು
    ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಕೋರ್ಟ್‌ ಮಾಸ್ಟರ್‌ ಮೈಂಡ್‌ಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್‌ಗೆ ಜಾಮೀನು ನಿರಾಕರಿಸಿದೆ. ಮೈಸೂರು ಮೂಲದ ಮನೋರಂಜನ್‌ ಅಂದಿನ ಸಂಸದ ಪ್ರತಾಪ್‌ ಸಿಂಹ ಅವರ ಮೂಲಕ ಪಾಸ್‌ ಪಡೆದು ಸಂಸತ್‌ ಪ್ರವೇಶಿಸಿದ್ದರು. ಇದನ್ನೂ ಓದಿ: ಓಲಾ, ಊಬರ್ ಬಳಕೆದಾರರಿಗೆ ಶಾಕ್ – ಪೀಕ್ ಅವರ್‌ನಲ್ಲಿ ದುಪ್ಪಟ್ಟು ದರ ವಿಧಿಸಲು ಕೇಂದ್ರ ಒಪ್ಪಿಗೆ

    Manoranjan

    ಏನಿದು ಪ್ರಕರಣ?
    2023ರ ಡಿಸೆಂಬರ್ 13 ರಂದು ಸಂಸತ್‌ ಭವನದಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಕೆಲವು ವ್ಯಕ್ತಿಗಳು ಸದನಕ್ಕೆ ನುಗ್ಗಿ ಸ್ಮೋಕ್‌ ಬಾಂಬ್‌ ಎಸೆದಿದ್ದರು. ಸಾಗರ್‌ ಶರ್ಮಾ ಮತ್ತು ಮನೋರಂಜನ್ ಎಂಬ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಬಂದು ಸ್ಮೋಕ್‌ ಬಾಂಬ್‌ ಎಸೆದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ದೆಹಲಿ ಪೊಲೀಸರು ಮಾಸ್ಟರ್ ಮೈಂಡ್, ಲಲಿತ್ ಝಾ ಮತ್ತು ಸಹ-ಆರೋಪಿ ಮಹೇಶ್ ಕುಮಾವತ್ ಸೇರಿ ಕೆಲವು ಆರೋಪಿಗಳನ್ನ ಬಂಧಿಸಿದ್ದರು. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಬಂಧನ

  • ಇನ್ನೊಬ್ಬಳೊಂದಿಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಜಗಳ – ಬುರ್ಖಾ ಧರಿಸಿ ಬಂದು 5ನೇ ಮಹಡಿಯಿಂದ ತಳ್ಳಿ ಪ್ರೇಯಸಿಯ ಕೊಲೆ

    ಇನ್ನೊಬ್ಬಳೊಂದಿಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಜಗಳ – ಬುರ್ಖಾ ಧರಿಸಿ ಬಂದು 5ನೇ ಮಹಡಿಯಿಂದ ತಳ್ಳಿ ಪ್ರೇಯಸಿಯ ಕೊಲೆ

    ನವದೆಹಲಿ: ಬುರ್ಖಾ (Burkha) ಧರಿಸಿ ಬಂದು ಕಟ್ಟಡದ 5ನೇ ಮಹಡಿಯಿಂದ ತಳ್ಳಿ ಪ್ರೇಯಸಿಯನ್ನು ಕೊಲೆ ಮಾಡಿ ಪ್ರಿಯಕರ ಎಸ್ಕೇಪ್ ಆದ ಘಟನೆ ಈಶಾನ್ಯ ದೆಹಲಿಯ ಅಶೋಕ್ ನಗರದಲ್ಲಿ (Ashok Nagar) ನಡೆದಿದೆ.

    ನೇಹಾ (19) ಕೊಲೆಯಾದ ಪ್ರೇಯಸಿ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ತೌಫೀಕ್ ಮತ್ತು ನೇಹಾ ಹಲವಾರು ತಿಂಗಳುಗಳಿಂದ ಸಂಬಂಧದಲ್ಲಿದ್ದರು. ತೌಫೀಕ್ ತನ್ನ ಕುಟುಂಬ ನೋಡಿದ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ರೆಡಿಯಾಗಿದ್ದಾನೆ ಎಂದು ತಿಳಿದು ನೇಹಾ ಹಾಗೂ ತೌಫೀಕ್ ನಡುವೆ ಜಗಳ ಉಂಟಾಗಿದೆ. ಈ ಹಿನ್ನೆಲೆ ತೌಫೀಕ್ ತನ್ನ ಗುರುತನ್ನು ಮರೆಮಾಚಿ ಬುರ್ಖಾ ಧರಿಸಿ ನೇಹಾಳ ಮನೆಗೆ ಬಂದು ಆಕೆಯನ್ನು ಐದನೇ ಮಹಡಿಯಿಂದ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ.  ಇದನ್ನೂ ಓದಿ: ಚಿತ್ರದುರ್ಗ | ಬಾತ್‌ರೂಮಲ್ಲಿ ವ್ಯಕ್ತಿಯ ಬರ್ಬರ ಹತ್ಯೆ – 7 ಆರೋಪಿಗಳ ಬಂಧನ

    ಘಟನೆಯಿಂದ ತೀವ್ರ ಗಾಯಗೊಂಡಿದ್ದ ನೇಹಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ ವೇಳೆ ಬುರ್ಖಾ ಧರಿಸಿ ಕಟ್ಟಡದ ಒಳಗೆ ಅನುಮಾನಾಸ್ಪದವಾಗಿ ವ್ಯಕ್ತಿಯೋರ್ವ ನುಗ್ಗಿರುವ ದೃಶ್ಯ ಸೆರೆಯಾಗಿದ್ದು, ಬಳಿಕ ಆತುರಾತುರವಾಗಿ ಹೊರಬಂದಿರುವುದು ಕೂಡ ಸೆರೆಯಾಗಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿ ದೆಹಲಿ ಪೊಲೀಸರು ವಿಚಾರಣೆ ನಡೆಸಿದ ವೇಳೆ ತೌಫೀಕ್ ಗುರುತು ಮರೆಮಾಚಿ ಬಂದಿರುವುದನ್ನು ಒಪ್ಪಿಕೊಂಡಿದ್ದಾನೆ.  ಇದನ್ನೂ ಓದಿ: ವಾರಕ್ಕೆ 3 ದಿನ ಕಾವೇರಿ ಆರತಿ – 10,000 ಆಸನಗಳ ವ್ಯವಸ್ಥೆ, 70% ಉಚಿತ, 30% ಟಿಕೆಟ್: ಡಿಕೆಶಿ

    ನೇಹಾ ಹಾಗೂ ತೌಫೀಕ್ ನಡುವೆ ಸಂಬಂಧ ಇತ್ತು ಎಂಬುದನ್ನು ನೇಹಾಳ ಕುಟುಂಬ ತಿರಸ್ಕರಿಸಿದೆ. ನೇಹಾಳಿಗೆ ತೌಫೀಕ್ ಜೊತೆ ಯಾವ ಸಂಬಂಧವಿರಲಿಲ್ಲ. ಅಲ್ಲದೇ ನೇಹಾ ತೌಫೀಕ್‌ಗೆ ರಾಖಿ ಕಟ್ಟುತ್ತಿದ್ದಳು ಎಂದು ಆಕೆಯ ತಂದೆ ಹೇಳಿದ್ದಾರೆ. ನೇಹಾಳಿಗೆ ತೌಫೀಕ್ ಸುಮಾರು ಮೂರು ವರ್ಷಗಳಿಂದ ಪರಿಚಯ. ತೌಫೀಕ್ ಆಗಾಗ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಕುಟುಂಬ ಹೇಳಿಕೊಂಡಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಕುಡಿದು ಅಂಬುಲೆನ್ಸ್ ಚಾಲನೆ – ಚಾಲಕನಿಗೆ 13,000 ದಂಡ!