Tag: Delhi Police

  • ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ

    ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ

    ನವದೆಹಲಿ: ಕರ್ಫ್ಯೂ ಸಮಯದಲ್ಲಿ ಕ್ರಿಕೆಟ್ ಆಡಬಹುದಾ ಎಂದು ಒಬ್ಬ ಯುವಕ ದೆಹಲಿ ಪೊಲೀಸರನ್ನು ಟ್ವೀಟ್ ನಲ್ಲಿ ಕೇಳಿದ್ದಾನೆ. ಇದಕ್ಕೆ ಪೊಲೀಸರು ಲಘಯವಾಗಿಯೇ ಉತ್ತರಿಸಿದ್ದಾರೆ. ಪ್ರಸ್ತುತ ಈ ಸಂಭಾಷಣೆ ಟ್ವಿಟ್ಟರ್ ನಲ್ಲಿ ಫುಲ್ ವೈರಲ್ ಆಗಿದೆ.

    ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತದ ಹಲವು ಕಡೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ದೆಹಲಿ ಸರ್ಕಾರ ಸಹ ಇಂದಿನಿಂದ ವಾರಾಂತ್ಯದ ಕರ್ಫ್ಯೂವನ್ನು ವಿಧಿಸಿದೆ. ಪರಿಣಾಮ ಜನರಿಗೆ ಕರ್ಫ್ಯೂ ಬಗ್ಗೆ ಯಾವುದೇ ಅನುಮಾನವಿದ್ದರೂ ಟ್ವೀಟ್ ನಲ್ಲಿ ಕೇಳುವ ಅವಕಾಶವಿತ್ತು. ಅದಕ್ಕೆ ಯುವಕ ಪುನಿತ್ ಶರ್ಮಾ ಕರ್ಫ್ಯೂ ಸಮಯದಲ್ಲಿ ಕ್ರಿಕೆಟ್ ಆಡಬಹುದಾ? ಎಂದು ಪ್ರಶ್ನೆ ಕೇಳಿ ಸುದ್ದಿಯಾಗಿದ್ದಾನೆ. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ಟ್ವೀಟ್‍ನಲ್ಲಿ ಏನಿದೆ?
    ಪುನೀತ್ ವಾರಾಂತ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಪ್ಲಾನ್ ಮಾಡಿಕೊಂಡಿದ್ದಾನೆ. ಆದರೆ ಈ ಕರ್ಫ್ಯೂನಿಂದ ಬೇಸರಗೊಂಡ ಆತ ನೇರವಾಗಿ ಪೊಲೀಸರಿಗೆ ಪ್ರಶ್ನೆಯನ್ನು ಟ್ವೀಟ್ ಮಾಡುವ ಮೂಲಕ ಕೇಳಿದ್ದಾನೆ. ಪುನೀತ್ ಈ ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ದೆಹಲಿಯಲ್ಲಿ ಕ್ರಿಕೆಟ್ ಆಡಬಹುದೇ? ಈ ವೇಳೆ ನಾವು ಕೋವಿಡ್ ಪ್ರೋಟೋಕಾಲ್‌ಗಳಾದ ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾನೆ.

    ಈ ಪ್ರಶ್ನೆ ನೋಡಿದ ದೆಹಲಿ ಪೊಲೀಸರು ತಮಾಷೆಯಾಗಿ ಉತ್ತರಿಸಿದ್ದು, ಇದೊಂದು ‘ಸಿಲ್ಲಿ ಪಾಯಿಂಟ್’ ಸರ್. ಈ ಸಮಯದಲ್ಲಿ ನಾವು ಇನ್ನು ಎಚ್ಚರದಿಂದ ಇರಬೇಕು. ಅಲ್ಲದೆ, ದೆಹಲಿ ಪೊಲೀಸರು ಈ ರೀತಿ ಸಿಲ್ಲಿಯಾಗಿ ಆಡುವವರನ್ನು ಹಿಡಿಯಲು ಯಾವಾಗಲೂ ಸಿದ್ಧವಾಗಿರುತ್ತಾರೆ ಎಂದು ಟ್ವೀಟ್ ಗೆ ರಿಪ್ಲೈ ಮಾಡಿದ್ದಾರೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಅಮಾನವೀಯ, ಇದೊಂದು ಅವೈಜ್ಞಾನಿಕ ಕ್ರಮ: ಎ.ಎಸ್.ಪೊನ್ನಣ್ಣ

    ಒಂದು ವೇಳೆ ಜನರು ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಬಹಳ ಸೂಕ್ಷ್ಮವಾಗಿ ಟ್ವೀಟ್ ಮೂಲಕ ಪೊಲೀಸರು ಯುವಕನ ಜೊತೆಗೆ ಸಾಮಾನ್ಯರಿಗೂ ತಿಳಿಸಿದ್ದಾರೆ.

  • ಕುಸ್ತಿಪಟು ಸುಶೀಲ್ ಕುಮಾರ್​ಗೆ 14 ದಿನ ನ್ಯಾಯಾಂಗ ಬಂಧನ

    ಕುಸ್ತಿಪಟು ಸುಶೀಲ್ ಕುಮಾರ್​ಗೆ 14 ದಿನ ನ್ಯಾಯಾಂಗ ಬಂಧನ

    ನವದೆಹಲಿ: ರೆಸ್ಲರ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಬಂಧನವಾಗಿರುವ ಕುಸ್ತಿಪಟು ಸುಶೀಲ್ ಕುಮಾರ್​ಗೆ 14ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ದೆಹಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ಸುಶೀಲ್ ಕುಮಾರ್ ಅವರನ್ನು 4 ದಿನ ಪೊಲೀಸ್ ಕಸ್ಟಡಿ ನೀಡಬೇಕೆಂದು ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸುಶೀಲ್ ಕುಮಾರ್ ಬಂಧನ

    ಏನಿದು ಪ್ರಕರಣ
    ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4ರಂದು ಸಾಗರ್ ರಾಣಾ ಕೊಲೆಯಾಗಿದ್ದರು. ಬಳಿಕ ಸುಶೀಲ್ ಹಾಗೂ ಸಾಗರ್ ರಾಣಾ ನಡುವಣ ಘರ್ಷಣೆಯಲ್ಲಿ ಸಾಗರ್ ಹತ್ಯೆಗೀಡಾಗಿದ್ದರು ಎಂದು ವರದಿಯಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ರನ್ನು ಬಂಧಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದರು. ನಂತರ ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಪೊಲೀಸರು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ, ಆತನ ಸಹಚರ ಅಜಯ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ ಬಹುಮಾನ ಕೂಡ ಘೋಷಿಸಿದ್ದರು.

    ಇದಾದ ಬಳಿಕ ಮೇ 18ರಂದು ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ರೋಹಿಣಿ ನ್ಯಾಯಾಲಯ ವಜಾಗೊಳಿಸಿತ್ತು. ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಸುಶೀಲ್ ಕುಮಾರ್ ಮತ್ತು ಅವರ ಸ್ನೇಹಿತನನ್ನು ಮೇ 23ರಂದು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ಇದನ್ನೂ ಓದಿ: ಸುಶೀಲ್ ಕುಮಾರ್​ಗೆ ಶಾಕ್‍ಕೊಟ್ಟ ರೈಲ್ವೇ ಇಲಾಖೆ

    ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಮತ್ತು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜಯಿಯಾಗಿದ್ದರು.

  • ಟೂಲ್‍ಕಿಟ್ ತನಿಖೆ- ಪ್ರತಿಭಟನೆಗೆ ಕೆನಡಾ ಲಿಂಕ್, ರೈತ ನಾಯಕರ ಮೇಲೆ ಕಣ್ಣು

    ಟೂಲ್‍ಕಿಟ್ ತನಿಖೆ- ಪ್ರತಿಭಟನೆಗೆ ಕೆನಡಾ ಲಿಂಕ್, ರೈತ ನಾಯಕರ ಮೇಲೆ ಕಣ್ಣು

    – ಝೂಮ್ ಸಭೆಯಲ್ಲಿ ಪಾಲ್ಗೊಂಡಿದ್ದವರ ವಿವರ ಕೇಳಿದ ಪೊಲೀಸರು
    – ವಾಟ್ಸಪ್ ಗ್ರೂಪ್‍ಗೆ ಅಂತರಾಷ್ಟ್ರೀಯ ರೈತ ಪ್ರತಿಭಟನೆಯ ಹೆಸರು

    ನವದೆಹಲಿ: ದೆಹಲಿಯ ರೈತರ ದಂಗೆ ಹಾಗೂ ಕೆಂಪು ಕೋಟೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ರೈತರ ಪ್ರತಿಭಟನೆಗೆ ಕೆನಡಾ ಪ್ರಜೆಯ ಕುಮ್ಮಕ್ಕು ಇರುವುದು ತನಿಖೆ ವೇಳೆ ಪತ್ತೆಯಾಗಿದೆ.

    ದೆಹಲಿ ಪೊಲೀಸರು ಟೂಲ್‍ಕಿಟ್ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಆಘಾತಕಾರಿ ಮಾಹಿತಿ ಲಭ್ಯವಾಗುತ್ತಿದೆ. ಖಲಿಸ್ಥಾನಿ ಪರ ಸಂಘಟನೆ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್(ಪಿಜೆಎಫ್) ಸಹ ಸಂಸ್ಥಾಪಕ ಮೋ ಧಲಿವಾಲ್  ಶಂತನು ಮುಲಿಕ್‌ ನನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ದೆಹಲಿ ಹೊರವಲಯದಲ್ಲಿ ರೈತರ ಪ್ರತಿಭಟನೆ ಹಾಗೂ ಆಂದೋಲನ ಪ್ರಾರಂಭವಾಗುತ್ತಿದ್ದಂತೆ ರೈತ ನಾಯಕರನ್ನು ಸಂಪರ್ಕಿಸಬೇಕು ಎಂದು ಕೇಳಿಕೊಂಡಿದ್ದ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿದೆ ಮಾಡಿದೆ.

     ಮುಂಬೈ ಮೂಲದ ವಕೀಲೆ ಹಾಗೂ ಹೋರಾಟಗಾರ್ತಿ ನಿಕಿತಾ ಜಾಕೋಬ್ ಜೊತೆ ಶಂತನು ನಿರಂತರ ಸಂಪರ್ಕ ಹೊಂದಿದ್ದ. ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್, ಪ್ರೊಟೋಮೇಲ್ ಬಳಸಿ ಇಬ್ಬರೂ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರೈತರ ಪ್ರತಿಭಟನೆ ಕುರಿತು ಸ್ವೀಡಿಷ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ಹಂಚಿಕೊಂಡಿರುವ ಟೂಲ್‍ಕಿಟ್‍ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಜಾಕೋಬ್ ಸೋಮವಾರ ಬಾಂಬೆ ಹೈ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾಳೆ.

    ಮುಂಬೈ ಮೂಲದ ನಿಕಿತಾ ಜಾಕೋಬ್ ಶನಿವಾರ ಬಂಧಿಸಲ್ಪಟ್ಟಿದ್ದ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಹಾಗೂ ಈ ಪ್ರಕರಣದ ಶಂಕಿತ ಶಾಂತನುನನ್ನು ಸಂಪರ್ಕಿಸಿರುವುದು ಇದೇ ವೇಳೆ ಬಹಿರಂಗವಾಗಿದೆ.

    ಮೂಲಗಳ ಪ್ರಕಾರ, ಧಲಿವಾಲ್ ಕೇವಲ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳನ್ನು ಮಾತ್ರ ಸಂಪರ್ಕಿಸಿಲ್ಲ. ಬದಲಿಗೆ ನವೆಂಬರ್‍ನಲ್ಲಿ ದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ ಕೆನಡಾದ ಸಂಸದರ ಜೊತೆ ಸಹ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ಟೂಲ್‍ಕಿಟ್ ದಾಖಲೆ ತಯಾರಿಕೆಯಲ್ಲಿ ಕೆಲ ರೈತ ಮುಖಂಡರ ಪಾತ್ರ ಇರುವ ಬಗ್ಗೆ ಸಹ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೇಕ್ ಐಡಿ ಬಳಸಿ ಗಣರಾಜ್ಯೋತ್ಸ ದಿನದಂದು ಹಿಂಸಾಚಾರ ಬಡೆಸುವ ಬಗ್ಗೆ ಜನವರಿ 11ರಂದು ಜಾಕೋಬ್, ದಿಶಾ ಹಾಗೂ ಶಾಂತನು ಝೂಮ್ ಆ್ಯಪ್ ಮೂಲಕ ಮೀಟಿಂಗ್ ನಡೆಸಿದ್ದರು. ಹೀಗಾಗಿ ಈ ಮೀಟಿಂಗ್‍ನಲ್ಲಿ ಭಾಗವಹಿಸಿದವರ ಯುಆರ್‍ಎಲ್ ಹಾಗೂ ಐಪಿ ಅಡ್ರೆಸ್ ನೀಡುವಂತೆ ದೆಹಲಿ ಪೊಲೀಸರು ಝೂಮ್ ಸಂಸ್ಥೆಗೆ ಪತ್ರ ಬರೆದಿದ್ದಾರೆ.

    ಟೂಲ್‍ಕಿಟ್‍ನ್ನು ಕಳುಹಿಸಲು ಡಿಸೆಂಬರ್‍ನಲ್ಲಿ ದಿಶಾ ರಚಿಸಿದ ವಾಟ್ಸಪ್ ಗ್ರೂಪ್‍ಗೆ ಅಂತರಾಷ್ಟ್ರೀಯ ರೈತರ ಮುಷ್ಕರ ಎಂದು ಹೆಸರಿಡಲಾಗಿತ್ತು. ಈಗ ಡಿಲೀಟ್ ಮಾಡಲಾದ ಈ ಗುಂಪಿನಲ್ಲಿ 10ಕ್ಕೂ ಹೆಚ್ಚು ಸದಸ್ಯರನ್ನು ಸೇರಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಗ್ರೂಪ್‍ನ ವಿವರಗಳು ಹಾಗೂ ಸದಸ್ಯರ ಚಾಟ್‍ಗಳನ್ನು ನೀಡುವಂತೆ ಪೊಲೀಸರು ವಾಟ್ಸಪ್‍ಗೆ ಸಹ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ರಸ್ತೆಯಲ್ಲಿ ನಿಂತ ಐವರು ಮಹಿಳೆಯರಿಗೆ ಕಿರುಕುಳ- ಎಸ್‍ಐ ಅರೆಸ್ಟ್

    ರಸ್ತೆಯಲ್ಲಿ ನಿಂತ ಐವರು ಮಹಿಳೆಯರಿಗೆ ಕಿರುಕುಳ- ಎಸ್‍ಐ ಅರೆಸ್ಟ್

    – 200 ಸಿಸಿಟಿವಿ ಪರಿಶೀಲಿಸಿದಾಗ ಪತ್ತೆಯಾದ ಎಸ್‍ಐ

    ನವದೆಹಲಿ: ರಸ್ತೆಯಲ್ಲಿ ನಿಂತಿದ್ದ ಐವರು ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡು ಕಿರುಕುಳ ನೀಡಿದ ಆರೋಪದಡಿಯಲ್ಲಿ ದೆಹಲಿ ಪೊಲೀಸರು ಸಬ್ ಇನ್‍ಸ್ಪೆಕ್ಟರ್ ಒಬ್ಬರನ್ನ ಬಂಧಿಸಿದ್ದಾರೆ.

    ಪುನಿತ್ ಗ್ರೋವಲ್ ಬಂಧಿತ ಸಬ್ ಇನ್‍ಸ್ಪೆಕ್ಟರ್. ಕಳೆದ ಕೆಲ ದಿನಗಳಿಂದ ದೆಹಲಿಯ ದ್ವಾರಕಾ ನಗರದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ಓರ್ವ ನಡೆದುಕೊಳ್ಳುತ್ತಿರುವ ಬಗ್ಗೆ ಕೆಲವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮೌಖಿಕ ದೂರು ಸಲ್ಲಿಸಿದ್ದರು. ಇದನ್ನೂ ಓದಿ: 190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

    ಮೌಖಿಕ ದೂರಿನ ಅನ್ವಯ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ದ್ವಾರಕಾ ನಗರದಲ್ಲಿಯ 200ಕ್ಕೂ ಅಧಿಕ ಸಿಸಿಟಿವಿ ಫೂಟೇಜ್ ಸಂಗ್ರಹಿಸಿದ್ದಾರೆ. ಸಿಸಿಟಿವಿ ಫೂಟೇಜ್ ನಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರ್ ಪತ್ತೆಯಾಗಿದ್ದು, ಅದರ ಮೂಲ ಹಿಡಿದು ತೆರಳಿದ ಪೊಲೀಸರಿಗೆ ಆರೋಪಿ ಓರ್ವ ಸಬ್ ಇನ್‍ಸ್ಪೆಕ್ಟರ್ ಅನ್ನೋ ವಿಷಯ ತಿಳಿದಿದೆ. ಇದನ್ನೂ ಓದಿ: ಇಬ್ಬರೂ ಪತ್ನಿಯರೊಂದಿಗಿನ ಕಾಮದಾಟ ಲೈವ್ ಮಾಡುತ್ತಿದ್ದವನ ಬಂಧನ – ಲೈವ್ ಮಾಡಿ ಹಣಗಳಿಸುತ್ತಿದ್ದ ಆರೋಪಿ

    ಅಕ್ಟೋಬರ್ 17 ಮತ್ತು ಅಕ್ಟೋಬರ್ 20ರ ನಡುವೆ ಈ ಘಟನೆಗಳು ಬೆಳಗ್ಗೆ 8 ರಿಂದ 9 ಗಂಟೆಯೊಳಗೆ ನಡೆದಿವೆ. ಬೆಳಗ್ಗೆ ಕಲರ್ ಬಟ್ಟೆ ಧರಿಸಿ ಕಾರಿನಲ್ಲಿ ಬರುತ್ತಿದ್ದ ಪುನೀತ್, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಮಾತನಾಡುವ ನೆಪದಲ್ಲಿ ಮಹಿಳೆಯರ ಬಳಿ ತೆರಳುತ್ತಿದ್ದ ಪುನೀತ್ ಕಿರುಕುಳ ನೀಡುತ್ತಿದ್ದನು.ಹಲವರು ಈತನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ರೆ, ಕೆಲವರು ಪೊಲೀಸ್ ಹೆಲ್ಪ್ ಲೈನ್ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಸಲಿಂಗ ಕಾಮ ಮುಚ್ಚಿಡಲು ವಿವಾಹವಾದ- ಯಾರಿಗೂ ಹೇಳದಂತೆ ಪತ್ನಿಗೆ ಕೊಲೆ ಬೆದರಿಕೆ

    ಘಟನೆ ಸಂಬಂಧ ತನಿಖೆಗಿಳಿದ ಪೊಲೀಸರು ಸ್ಥಳೀಯ 200ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ದೃಶ್ಯದಲ್ಲಿ ನಂಬರ್ ಪ್ಲೇಟ್ ಇಲ್ಲದ ಬೂದು ಬಣ್ಣದ ಕಾರು ಪತ್ತೆಯಾಗಿತ್ತು. ಕಾರ್ ಮಾಲೀಕನೇ ಎಸ್‍ಐ ಪುನೀತ್ ವಿಷಯ ಗೊತ್ತಾಗುತ್ತಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 354 ಡಿ, 354 ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದನ್ನೂ ಓದಿ: ಸಲಿಂಗಕಾಮದಾಸೆಗೆ ಮರ್ಮಾಂಗಕ್ಕೆ ವಿದ್ಯಾರ್ಥಿಯಿಂದಲೇ ಕತ್ತರಿ – ಪೊಲೀಸರ ತಂತ್ರದಿಂದ ಅಸಲಿ ಕೃತ್ಯ ಬೆಳಕಿಗೆ

  • ಸ್ವಾತಂತ್ರ್ಯ ದಿನಾಚರಣೆಯಂದು ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರ

    ಸ್ವಾತಂತ್ರ್ಯ ದಿನಾಚರಣೆಯಂದು ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರ

    – ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಸ್ಫೋಟಕ್ಕೆ ಸಂಚು
    – ಭದ್ರತೆ ಹೆಚ್ಚಿದ್ದರಿಂದ ಪ್ರಯತ್ನ ವಿಫಲ
    – ವಿಚಾರಣೆ ವೇಳೆ ಭಯಾನಕ ಅಂಶ ಬಹಿರಂಗ

    ನವದೆಹಲಿ: ಶುಕ್ರವಾರ ರಾತ್ರಿ ನಗರದಲ್ಲಿ ಬಂಧನವಾಗಿದ್ದ ಐಸಿಸ್ ಉಗ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ಮಾಹಿತಿ ಹೊರ ಬಿದ್ದಿದ್ದು, ಇದರಿಂದಾಗಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

    ಶುಕ್ರವಾರ ರಾತ್ರಿಯಷ್ಟೇ ದೆಹಲಿಯ ಧೌಲಾ ಕೌನ್ ಬಳಿ ಐಸಿಸ್ ಆಪರೇಟರ್ ನನ್ನು ಬಂಧಿಸಲಾಗಿದ್ದು, ಈತನನ್ನು ವಿಚಾರಣೆ ನಡೆಸಿದಾಗ ಭಯಾನಕ ಅಂಶ ಹೊರ ಬಿದ್ದಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಆರೋಪಿ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಆದರೆ ಭದ್ರತೆ ಹೆಚ್ಚಿದ್ದ ಕಾರಣ ಪ್ರಯತ್ನ ವಿಫಲವಾಗಿತ್ತು ಎಂದು ಪೊಲೀಸರು ನಡೆಸಿದ ವಿಚಾರಣೆ ವೇಳೆ ಬಹಿರಂಗವಾಗಿದೆ.

    ಆರೋಪಿಯನ್ನು ಇದೀಗ 8 ದಿನಗಳ ಕಾಲ ಪೊಲೀಸ್ ರಿಮ್ಯಾಂಡ್ ಹೋಮ್ ಗೆ ವಹಿಸಲಾಗಿದ್ದು, ಶುಕ್ರವಾರ ರಾತ್ರಿ ನಡೆದ ಸಣ್ಣ ಪ್ರಮಾಣದ ಗುಂಡಿನ ಚಕಮಕಿ ಬಳಿಕ ದೆಹಲಿಯ ಪೊಲೀಸ್ ಸ್ಪೆಷಲ್ ಸೆಲ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ನಂತರ ಲೋಧಿ ಕಾಲೋನಿಯಲ್ಲಿರುವ ಸ್ಪೆಷಲ್ ಸೆಲ್ ಪೊಲೀಸ್ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

    ಈ ಕುರಿತು ಪೊಲೀಸ್ ಸ್ಪೆಷಲ್ ಸೆಲ್ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾಹ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 36 ವರ್ಷದ ಯುಸುಫ್ ಅಕಾ ಅಬುನನ್ನು ಬಂಧಿಸಿದ್ದು, ಈತ ಐಸಿಸ್ ಕಮಾಂಡರ್ ನೊಂದಿಗೆ ನೇರ ಸಂಪರ್ಕದಲ್ಲಿದ್ದ. ಅಲ್ಲದೆ ಅವನ ಪತ್ನಿ ಹಾಗೂ ನಾಲ್ಕು ಮಕ್ಕಳ ಪಾಸ್‍ಪೋರ್ಟ್ ಹೊಂದಿದ್ದಾನೆ ಎಂದು ಕುಶ್ವಾಹ್ ತಿಳಿಸಿದ್ದಾರೆ.

    ಇತ್ತೀಚೆಗೆ ಸಿರಿಯಾದಲ್ಲಿ ಸಾವನ್ನಪ್ಪಿದ ಯುಸುಫ್ ಅಲ್ಹಿಂದಿ ಈತನನ್ನು ನಿರ್ವಹಣೆ ಮಾಡುತ್ತಿದ್ದ. ನಂತರ ಪಾಕಿಸ್ತಾನ ಮೂಲದ ಅಬು ಅಝಿಯಾಫಾ ಈತನನ್ನು ನಿಯಂತ್ರಿಸುತ್ತಿದ್ದ. ಆದರೆ ಅಫ್ಘಾನಿಸ್ಥಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಈತ ಸಹ ಸಾವನ್ನಪ್ಪಿದ ಎಂದು ಪೊಲೀಸರು ವಿವರಿಸಿದ್ದಾರೆ.

    30 ಬೋರ್ ಬಂದೂಕು ಸೇರಿ ಕುಕ್ಕರ್ ನಲ್ಲಿನ ಎರಡು ಐಇಡಿಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ನಾಲ್ಕು ಜೀವಂತ ಕಾರ್ಟ್‍ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಖೋರಸನ್ ಪ್ರೊವಿನ್ಸ್‍ನ ಇಸ್ಲಾಮಿಕ್ ಸ್ಟೇಟ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದ. ಕೆಲವೇ ತಿಂಗಳ ಹಿಂದೆ ತನ್ನ ಊರಿನಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಸ್ಪೆಷಲ್ ಸೆಲ್ ಡಿಸಿಪಿ ತಿಳಿಸಿದ್ದಾರೆ.

    ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿದ್ದ. ಕೊರೊನಾ ಹಿನ್ನೆಲೆ ಈತನ ಚಲನವಲನಕ್ಕೆ ನಿಯಂತ್ರಣ ಬಿತ್ತು. ನಂತರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸ್ಫೋಟ ನಡೆಸಲು ಸಂಚು ರೂಪಿಸಿದ್ದ, ಭದ್ರತೆ ಹೆಚ್ಚಿದ್ದರಿಂದ ಸಂಚು ವಿಫಲವಾಗಿದೆ. ವಶಪಡಿಸಿಕೊಳ್ಳಲಾದ ಎರಡು ಕುಕ್ಕರ್ ಐಇಡಿಗಳನ್ನು ಎನ್‍ಎಸ್‍ಜಿ ಸಹಾಯದಿಂದ ನಿಷ್ಕ್ರಿಯಗೊಳಿಸಲಾಗಿದೆ ಎಂದು ಕುಶ್ವಾಹ್ ವಿವರಿಸಿದ್ದಾರೆ.

    ಐಸಿಸ್ ಆಪರೇಟರ್ ನನ್ನು ಎಂಟು ದಿನಗಳ ಕಾಲ ಪೊಲೀಸ್ ರಿಮ್ಯಾಂಡ್ ಹೋಮ್ ನಲ್ಲಿಡಲಾಗಿದ್ದು, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಹಾಗೂ ಸ್ಫೋಟಕ ಕಾಯ್ದೆ ಸೇರಿ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • 12ರ ಬಾಲಕಿಯ ಅತ್ಯಾಚಾರ ಕೇಸ್- ಪ್ರಮುಖ ಆರೋಪಿಯ ಬಂಧನ

    12ರ ಬಾಲಕಿಯ ಅತ್ಯಾಚಾರ ಕೇಸ್- ಪ್ರಮುಖ ಆರೋಪಿಯ ಬಂಧನ

    ನವದೆಹಲಿ: 12 ಬಾಲಕಿಯನ್ನು ಅತ್ಯಾಚಾರಗೈದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ.

    ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಏಮ್ಸ್ ಆಸ್ಪತ್ರೆಗೆ ತೆರಳಿ ಬಾಲಕಿಯ ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಆಸ್ಪತ್ರೆಯ ಮುಂಭಾಗ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಮುಂದಿನ 48 ಗಂಟೆ ಬಾಲಕಿಯ ಆರೋಗ್ಯ ವಿಚಾರದಲ್ಲಿ ನಿರ್ಣಾಯಕ ಘಟ್ಟವಾಗಲಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಹಾಡಹಗಲೇ ಮನೆಗೆ ನುಗ್ಗಿ 12ರ ಬಾಲೆಯ ರೇಪ್- ಕತ್ತರಿಯಿಂದ ಮಾರಣಾಂತಿಕ ಹಲ್ಲೆ

    ಏನಿದು ಘಟನೆ? ಬಾಲಕಿಯ ಮನೆಯಲ್ಲಿ ಒಬ್ಬಳೇ ಇರೋದನ್ನು ಖಾತ್ರಿ ಮಾಡಿಕೊಂಡು ನುಗ್ಗಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಾಯಗೊಂಡು ಬಾಲಕಿ ಮನೆಯಿಂದ ಹೊರ ಬರೋದನ್ನ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಕಿಯ ತಂದೆ, ತಾಯಿ ಮತ್ತು ಸೋದರಿ ಮನೆಯ ಬಳಿಕ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎಲ್ಲರೂ ಒಂದೇ ಕೋಣೆಯಲ್ಲಿ ವಾಸವಾಗಿದ್ದರು.

  • ರೈಲಿನಲ್ಲಿ ಶಿಷ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಾಕ್ಸಿಂಗ್ ಕೋಚ್ ಅರೆಸ್ಟ್

    ರೈಲಿನಲ್ಲಿ ಶಿಷ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಾಕ್ಸಿಂಗ್ ಕೋಚ್ ಅರೆಸ್ಟ್

    ನವದೆಹಲಿ: ಗುರು-ಶಿಷ್ಯೆಯ ಸಂಬಂಧಕ್ಕೆ ಕಳಂಕ ತರುವ ಕೃತ್ಯ ಎಸಗಿದ್ದ ಹರ್ಯಾಣದ ಬಾಕ್ಸಿಂಗ್ ತರಬೇತುದಾರ ಸಂದೀಪ್ ಮಲೀಕ್‍ನನ್ನು ಸೋನಿಪತ್‍ನಲ್ಲಿ ಬಂಧಿಸಲಾಗಿದೆ.

    ಬಾಕ್ಸಿಂಗ್ ತರಬೇತುದಾರ ಸಂದೀಪ್ ಮಲೀಕ್ (28) ವಿರುದ್ಧ 19 ವರ್ಷದ ವಿದ್ಯಾರ್ಥಿನಿ ಮಹಿಳಾ ಬಾಕ್ಸರ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಸಂದೀಪ್ ಕೂಡ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ.

    ಪಶ್ಚಿಮ ಬಂಗಾಳ ಕ್ಲಾಸಿಕ್ ಬಾಕ್ಸಿಂಗ್ ಚಾಂಪಿಯನ್‍ಶಿಪ್-2020 ಟೂರ್ನಿಗೆ ಹರ್ಯಾಣ ಮಹಿಳಾ ತಂಡದ ಜೊತೆಗೆ ಕೋಚ್ ಸಂದೀಪ್ ಕೂಡ ಹೋಗಿದ್ದ. ಫೆಬ್ರವರಿ 29ರಿಂದ ಮಾರ್ಚ್ 3ರವರೆಗೆ ನಡೆಯಬೇಕಿದ್ದ ಈ ಟೂರ್ನಿಗಾಗಿ ತಂಡವು ಫೆಬ್ರವರಿ 27ರಂದು ನವದೆಹಲಿಯಿಂದ ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಕೋಲ್ಕತ್ತಾಗೆ ಹೊರಟಿತ್ತು. ಈ ಸಮಯದಲ್ಲಿ ರೈಲಿನಲ್ಲಿ ಮತ್ತು ಬಳಿಕ ಕೋಲ್ಕತ್ತಾದಲ್ಲಿ ತರಬೇತುದಾರ ಮಹಿಳಾ ಬಾಕ್ಸರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

    ಮಹಿಳಾ ಬಾಕ್ಸರ್ ಕೋಲ್ಕತ್ತಾದಿಂದ ಹಿಂದಿರುಗಿದ ಕೂಡಲೇ ನವದೆಹಲಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಸೋನಿಪತ್‍ನಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಕೋಚ್ ಕೂಡ ಆರೋಪವನ್ನು ಒಪ್ಪಿಕೊಂಡಿದ್ದಾನೆ.

    ಆರೋಪಿ ಸಂದೀಪ್ ಭಾರತ ಮಟ್ಟದಲ್ಲಿ ಬಾಕ್ಸರ್ ಆಗಿದ್ದ. ಆತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಶಿಷ್ಯೆ ಮೇಲೆ ಲೈಂಗಿಕ  ದೌಜನ್ಯ ಎಸೆಗಿತ ಸಂದೀಪ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ದೆಹಲಿ ಹಿಂಸಾಚಾರಕ್ಕೆ ವಾಟ್ಸಪ್‍ನಲ್ಲೇ ನಡೆದಿತ್ತು ಸಂಚು – ಆಪ್ ಕೌನ್ಸಲರ್ ಮನೆಯಲ್ಲಿ ಸಿಕ್ತು ಪೆಟ್ರೋಲ್ ಬಾಂಬ್

    ದೆಹಲಿ ಹಿಂಸಾಚಾರಕ್ಕೆ ವಾಟ್ಸಪ್‍ನಲ್ಲೇ ನಡೆದಿತ್ತು ಸಂಚು – ಆಪ್ ಕೌನ್ಸಲರ್ ಮನೆಯಲ್ಲಿ ಸಿಕ್ತು ಪೆಟ್ರೋಲ್ ಬಾಂಬ್

    ನವದೆಹಲಿ : ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರ ಪೂರ್ವ ನಿರ್ಧರಿತ ಸಂಚು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ 18 ಎಫ್‍ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು 108 ಮಂದಿಯನ್ನು ಬಂಧಿಸಿದ್ದಾರೆ.

    ಬಂಧಿತರಿಂದ ಮಾಹಿತಿ ಕಲೆ ಹಾಕಿರುವ ಪೊಲೀಸರು ಮೊಬೈಲ್ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಂಧಿತರ ಮೊಬೈಲ್ ಪರಿಶೀಲನೆ ವೇಳೆ ವಾಟ್ಸಪ್‍ ನಲ್ಲಿ ಗಲಭೆ ನಡೆಸಲು ಚರ್ಚೆ ಮಾಡಿರುವುದು ಬೆಳಕಿಗೆ ಬಂದಿದೆ. ಈಶಾನ್ಯ ದೆಹಲಿ ಸ್ಥಳೀಯರೊಂದಿಗೆ ಹೊರಗಿನವರ ಕೈವಾಡವಿದ್ದು, ಘಟನೆಯಲ್ಲಿ ಬಳಕೆಯಾದ ಕಲ್ಲುಗಳು ಮತ್ತು ದೇಸಿ ಗನ್ ಗಳನ್ನು ಉತ್ತರ ಪ್ರದೇಶ ಬಿಹಾರದಿಂದ ತರಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಹಿಂಸಾಚಾರ ಸೃಷ್ಟಿಸುವ ದೃಷ್ಟಿಯಿಂದಲೇ ದೆಹಲಿ ಹೊರಗಿನ ನಾಗರಿಕರ ಜೊತೆ ಚರ್ಚಿಸಿ ಕಲ್ಲುಗಳನ್ನು ನಿಗದಿತ ಸ್ಥಳಗಳಲ್ಲಿ ಸಾಗಿಸಿ ಗಲಭೆ ಸೃಷ್ಟಿಸಲಾಗಿದೆ.

    ಈ ಬೆಳವಣಿಗೆ ನಡುವೆ ಆಪ್ ಕೌನ್ಸಿಲರ್ ತಾಹೀರ್ ಅವರ ಮನೆಯ ಟೆರೇಸ್‍ನಲ್ಲಿ ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳು ಪತ್ತೆಯಾಗಿವೆ. ಮಾಧ್ಯಮವೊಂದಕ್ಕೆ ಸ್ಥಳೀಯರು ಕೊಟ್ಟ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿದಾಗ ಟೆರೇಸ್ ಮೇಲೆ ಪೆಟ್ರೋಲ್ ಬಾಂಬ್‍ಗಳು ಸಿಕ್ಕಿವೆ. ತಾಹೀರ್ ಹುಸ್ಸೇನ್ ಮನೆಯಲ್ಲಿ ಹಲವು ಶಸ್ತ್ರಾಸ್ತ್ರಗಳಿವೆ. ಅವರ ಮನೆಯಲ್ಲಿ ನೂರಾರು ಧಂಗೆಕೋರರು ಒಟ್ಟಾಗಿ ಸಭೆ ಸೇರಿದ್ದರು ಎನ್ನಲಾಗಿದೆ. ಅಲ್ಲಿಂದ ಬೇರೆಯವರ ಮನೆಯ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್‍ಗಳನ್ನು ಎಸೆದಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಈ ನಡುವೆ ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಮೇಲೆ ಹಲ್ಲೆ ನಡೆಸಿದ್ದು ಆಮ್ ಆದ್ಮಿ ಪಕ್ಷದ ನಾಯಕರು ಎಂದು ಅವರ ತಂದೆ ರೋಹಿತ್ ಶರ್ಮಾ ಆರೋಪಿಸಿದ್ದಾರೆ. ಆದರೆ ಅಂಕಿತ್ ಶರ್ಮಾ ಸಾವಿನಲ್ಲಿ ತಮ್ಮ ಹೆಸರು ಕೇಳಿಬರುತ್ತಲೇ ಹುಸ್ಸೇನ್ ಬೇರೆಯದೇ ರೀತಿ ಮಾತನಾಡಿದ್ದು, ಗಲಭೆಯಲ್ಲಿ ತಮಗೂ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದು, ನಮ್ಮ ಮನೆಗೂ ನುಗ್ಗಿದ ದುಷ್ಕರ್ಮಿಗಳು ಬಲವಂತವಾಗಿ ನನ್ನನ್ನು ಮನೆಯಿಂದ ನೂಕಿದ್ದರು ಎಂದಿದ್ದಾರೆ.

  • ಸೊಸೆಯನ್ನೇ ರೇಪ್‍ಗೈದ ಆರೋಪ: ಬಿಜೆಪಿಯ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್

    ಸೊಸೆಯನ್ನೇ ರೇಪ್‍ಗೈದ ಆರೋಪ: ಬಿಜೆಪಿಯ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್

    ನವದೆಹಲಿ: ಮದ್ಯದ ಅಮಲಿನಲ್ಲಿ ಸೊಸೆಯನ್ನೇ ಅತ್ಯಾಚಾರಗೈದ ಆರೋಪದ ಅಡಿ ಬಿಜೆಪಿಯ ಮಾಜಿ ಶಾಸಕ ಮನೋಜ್ ಶೊಕೀನ್ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆರೋಪಿ ಮನೋಜ್ ಶೊಕೀನ್ ಅವರು ದೆಹಲಿಯ ನಂಗ್ಲೋಯಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2015ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಮಾಜಿ ಶಾಸಕರ ವಿರುದ್ಧ ಸಂತ್ರಸ್ತೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಮನೋಜ್ ಶೊಕೀನ್ ಅವರು ಕಳೆದ ಡಿಸೆಂಬರ್ 31ರ ಮಧ್ಯರಾತ್ರಿ ಗನ್ ತೋರಿಸಿ, ಬೆದರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆಯು ದೂರು ನೀಡಿದ್ದಾರೆ. ಈ ಸಂಬಂಧ ಮಾಜಿ ಶಾಸಕರ ವಿರುದ್ಧ ಅತ್ಯಾಚಾರ ಆರೋಪದ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ದೂರಿನಲ್ಲಿ ಏನಿದೆ?:
    2018 ಡಿಸೆಂಬರ್ 31ರಂದು ರಾತ್ರಿ ನಾನು, ಪತಿ, ಸಹೋದರ ಹಾಗೂ ಸಹೋದರ ಸಂಬಂಧಿ ಎಲ್ಲರೂ ಸೇರಿ ಮೀರ ಬಾಘ್ ಪ್ರದೇಶದಲ್ಲಿರುವ ಪತಿಯ ಮನೆಗೆ ಹೊರಡಿದ್ದೇವು. ಆದರೆ ಹೊಸ ವರ್ಷಾಚರಣೆಗೆ ಪತಿ ನನ್ನನ್ನು ಪಾಶ್ಚಿಮ್ ವಿಹಾರ ಪ್ರದೇಶದಲ್ಲಿರುವ ಹೊಟೇಲ್‍ವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿಗೆ ನಮ್ಮ ಅನೇಕ ಸಂಬಂಧಿಕರು ಬಂದಿದ್ದರು. ಸುಮಾರು ಮಧ್ಯ ರಾತ್ರಿ 12:30ಕ್ಕೆ ಪಾರ್ಟಿ ಮುಗಿಸಿ ಮಗೆ ಬಂದಿದ್ದೇವು. ಆದರೆ ಪತಿ ನನ್ನನ್ನು ಮನೆಯಲ್ಲಿ ಬಿಟ್ಟು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ಮನೆಯಲ್ಲಿ ನಾನು ಒಬ್ಬಳೆ ಮಲಗಿದ್ದಾಗ ಮಧ್ಯರಾತ್ರಿ 1:30 ಗಂಟೆ ಸುಮಾರು ಮನೆಗೆ ಬಂದ ನನ್ನ ಮಾವ ಮನೋಜ್ ಶೊಕೀನ್, ನಿನ್ನ ಜೊತೆ ಮಾತನಾಡಬೇಕು ಎಂದು ಹೇಳಿ ರೂಂ ಒಳಗೆ ಬಂದರು. ಬಳಿಕ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಇದನ್ನು ವಿರೋಧಿಸಿದ್ದಕ್ಕೆ ಗನ್ ತೋರಿಸಿ, ಬೊಬ್ಬಿಟ್ಟರೆ ನಿನ್ನ ಸಹೋದರನನ್ನು ಗುಂಡಿಟ್ಟು ಹತ್ಯೆ ಮಾಡುತ್ತೇನೆ ಎಂದು ಬೆದರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಸಂಬಂಧ ಆರೋಪಿ ಮನೋಜ್ ಶೊಕೀನ್ ಅವರ ಐಪಿಸಿ ಸೆಕ್ಷನ್ 376 (ಬಲಾತ್ ಸಂಭೋಗಕ್ಕೆ ದಂಡನೆ) ಹಾಗೂ 506 (ಕೊಲೆ ಬೆದರಿಕೆ) ಅಡಿ ಪ್ರಕರಣದ ದಾಖಲಾಗಿದೆ. ಪ್ರಕರಣ ಕುರಿತು ತನಿಖೆ ಆರಂಭಿಸಲಾಗಿದ್ದು, ಆರೋಪಿಯ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಪೊಲೀಸ್ ಆಯುಕ್ತ ಸೆಜು ಪಿ ಕುರುವಿಲ್ಲಾ ಹೇಳಿದ್ದಾರೆ.

  • ಆನ್‍ಲೈನ್‍ನಲ್ಲಿ ಎಫ್‍ಐಆರ್ ನೊಂದಣಿಗೆ ದೆಹಲಿ ಪೊಲೀಸರು ಸಜ್ಜು

    ಆನ್‍ಲೈನ್‍ನಲ್ಲಿ ಎಫ್‍ಐಆರ್ ನೊಂದಣಿಗೆ ದೆಹಲಿ ಪೊಲೀಸರು ಸಜ್ಜು

    ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯು ಎಸ್‍ಎಂಎಸ್, ಇ-ಮೇಲ್ ಹಾಗೂ ವಾಟ್ಸಪ್‍ಗಳ ಮೂಲಕ ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶ ನೀಡಿದೆ.

    ದೆಹಲಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಸಂಬಂಧಿತ ತುರ್ತು ಸೇವೆಯನ್ನು ಒದಗಿಸಲು ಆನ್‍ಲೈನ್‍ನಲ್ಲಿ ಕುಟುಂಬದ ಸದಸ್ಯರು ಅಥವಾ ಮಗು ಕಾಣೆಯಾದ ಸಂದರ್ಭದಲ್ಲಿ ದೆಹಲಿ ಪೊಲೀಸ್ ವೆಬ್‍ಸೈಟ್‍ನಲ್ಲಿಯೂ ದೂರು ಸಲ್ಲಿಸಬಹುದು.

    ಆನ್‍ಲೈನ್ ಎಫ್‍ಐಆರ್ ನಲ್ಲಿ ಅಭಿವೃದ್ಧಿಪಡಿಸಲು ಇನ್ನು ಒಂದು ತಿಂಗಳಲ್ಲಿ ಮೊಬೈಲ್ ಅಪ್ಲಿಕೇಶನ್‍ನನ್ನು ಬಿಡುಗಡೆ ಮಾಡಲಿದ್ದು, ಇದಕ್ಕೆ ಒಪ್ಪಿಗೆ ಸೂಚಿಸಿರುವ ಹೈ ಕೋರ್ಟ್‍ನ ನ್ಯಾಯಾಧೀಶರು ಮನಮೋಹನ್ ಮತ್ತು ಸಂಗೀತ ಧಿಂಗ್ರ ಸೆಹ್ಗಾಲ್ ಆನ್‍ಲೈನ್ ಎಪ್‍ಐಆರ್ ಎಂಬ ತುರ್ತು ಸೇವೆ ಅವಶ್ಯಕವಾದುದೆಂದು ತಿಳಿಸಿದೆ.

    ಮನೆ ಕೆಲಸದಾಕೆಯ ನಾಪತ್ತೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲು ವಿಳಂಬವಾದ ಕಾರಣ ತನಿಖೆಯ ಅತ್ಯಮೂಲ್ಯ ಸಮಯ ಹಾಳಾಯಿತು. ಹಾಗೆ ಆನ್‍ಲೈನ್ ಎಫ್ ಐಆರ್ ಪ್ರಕರಣಗಳು ಮರೆತು ಹೋಗಲು ಕಾರಣವಾಗಬಹುದು ಹಾಗೂ ದೂರು ನೀಡಿದವರ ನೇರ ಸಂಪರ್ಕ ಕಡಿತವಾಗುತ್ತದೆ. ಇದು ಎಫ್‍ಐಆರ್ ನೋಂದಣಿಗೆ ವಿಳಂಬ ತರಬಹುದೆಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.

    ದೆಹಲಿ ಪೊಲೀಸ್ ಪ್ರಸ್ತಾಪವನ್ನು ಬೆಂಬಲಿಸಿರುವ ಡಿಸಿಪಿ, ಕಾಣೆಯಾದ ವ್ಯಕ್ತಿ ಅಥವಾ ಮಕ್ಕಳ ಬಗ್ಗೆ ದೂರು ದಾಖಲಿಸಲು ದೆಹಲಿ ಪೊಲೀಸ್ ವೆಬ್‍ಸೈಟ್‍ ನಲ್ಲಿ ಅಥವಾ ಅದಕ್ಕಾಗಿರುವ ಅಪ್ಲಿಕೇಶನ್ ಗಳನ್ನೂ ಉತ್ತಮವಾಗಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ದಾರೆ.

    ವೆಬೆ ಸೈಟ್‍ನಲ್ಲಿರುವ ಕಾಣೆಯಾದ ವ್ಯಕ್ತಿ ಅಥವಾ ಮಗುವಿನ ವರದಿ ಮಾಡಿ ಎಂಬ ಆಯ್ಕೆಯನ್ನು ಒತ್ತಿದರೆ ದೂರು ದಾಖಲಾತಿಯ ಪುಟ ತೆರೆಯುತ್ತದೆ. ಅಲ್ಲಿ ಒಂದಷ್ಟು ಖಚಿತ ಮಾಹಿತಿಗಳನ್ನು ತುಂಬಿದರೆ ಅದು ಹತ್ತಿರದ ಠಾಣೆಯಲ್ಲಿ ದೂರು ದಾಖಲಾದ ಎಫ್‍ಐಆರ್ ಅನ್ನು  24 ಗಂಟೆಯೊಳಗೆ ಖಚಿತಪಡಿಸುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ನಿಯೋಜಿಸಿ ತನಿಖೆಗೆ ಸಂಬಂಧಿತ ಹೆಚ್ಚಿನ ಮಾಹಿತಿಗಳನ್ನು ಅಪ್‍ಡೇಟ್ ಮಾಡಲಾಗುತ್ತದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]