ನವದೆಹಲಿ: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ ಮತ್ತು ಇತರರಿಗೆ ಜಾಮೀನು ನೀಡಲು ದೆಹಲಿ ಪೊಲೀಸರು (Delhi Police) ವಿರೋಧಿಸಿದ್ದಾರೆ.
ಆರೋಪಿಗಳು ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಹಿನ್ನೆಲೆ ದೆಹಲಿ ಪೊಲೀಸರು ಜಾಮೀನು ವಿರೋಧಿಸಿ ಅಫಿಡವಿಟ್ ಸಿದ್ಧಪಡಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಗಲಭೆ ಸ್ವಯಂಪ್ರೇರಿತವಾಗಿ ಆಗಿಲ್ಲ. ದೇಶದಲ್ಲಿ ಶಾಂತಿ ಕದಡಲು ಮತ್ತು ಜಾಗತಿಕವಾಗಿ ಭಾರತದ ವರ್ಚಸ್ಸಿಗೆ ಹಾನಿ ಮಾಡಲು ಎಚ್ಚರಿಕೆಯಿಂದ ಯೋಜಿಸಲಾದ ಪ್ರಯತ್ನ ಇದಾಗಿದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: 2020ರ ದೆಹಲಿ ಗಲಭೆ ಕೇಸ್ ಆರೋಪಿಗಳ ಜಾಮೀನು ಅರ್ಜಿ – ಪ್ರತಿಕ್ರಿಯೆ ಸಲ್ಲಿಸದ ದೆಹಲಿ ಪೊಲೀಸರಿಗೆ ಸುಪ್ರೀಂ ತರಾಟೆ
ಆರೋಪಿಗಳು ಮಾಡಿರುವ ಪಿತೂರಿಗೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆಗಳು, ದಾಖಲೆಗಳು ಮತ್ತು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧದ ಭಿನ್ನಾಭಿಪ್ರಾಯವನ್ನು ಅಸ್ತ್ರವಾಗಿ ಬಳಸಿಕೊಂಡು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹೊಡೆತ ತರುವ ಉದ್ದೇಶದಿಂದ ಈ ಗಲಭೆಯನ್ನು ಸೃಷ್ಟಿಸಿದ್ದಾರೆ ಎಂದು ಪೊಲೀಸರು ವಾದಿಸಲಿದ್ದಾರೆ.
ಅಂತಾರಾಷ್ಟ್ರೀಯ ಗಮನ ಸೆಳೆಯಲು ಮತ್ತು ದೇಶವನ್ನು ನಕಾರಾತ್ಮಕವಾಗಿ ಬಿಂಬಿಸುವ ಉದ್ದೇಶದಿಂದ ಹಾಗೂ ಈ ಗಲಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡುವ ಸಂದರ್ಭಕ್ಕೆ ಹೊಂದಿಕೆಯಾಗುವಂತೆ ಯೋಜಿಸಿದ್ದಾರೆ. ಹೀಗಾಗಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರನ್ ಹೈದರ್ ಮತ್ತು ಗುಲ್ಫಿಶಾ ಫಾತಿಮಾ ಸೇರಿದಂತೆ ಅರ್ಜಿದಾರರಿಗೆ ಜಾಮೀನು ನೀಡಬಾರದು. ಅವರನ್ನು ಜೈಲಿನಲ್ಲಿಡಬೇಕು ಎಂದು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿಗೆ 2,296 ಕೋಟಿ ಅನುದಾನಕ್ಕೆ ಸಂಪುಟ ಅಸ್ತು!
ನವದೆಹಲಿ: ದೆಹಲಿ (Delhi) ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೀಗ ತನಿಖೆ ನಡೆಸಿದ ಪೊಲೀಸರು ಸುಳ್ಳು ಕಥೆ ಕಟ್ಟಿದ ಆರೋಪದಲ್ಲಿ ವಿದ್ಯಾರ್ಥಿನಿಯ ತಂದೆಯನ್ನೇ ಬಂಧಿಸಿದ್ದಾರೆ.
ಏನಿದು ಪ್ರಕರಣ?
ಭಾನುವಾರ (ಅ.26) ದೆಹಲಿಯ ಲಕ್ಷ್ಮಿಬಾಯಿ ಕಾಲೇಜಿನ ಹೊರಗೆ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ (Acid Attack) ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಬೈಕ್‌ನಲ್ಲಿ ಬಂದ ಮೂವರು ಆ್ಯಸಿಡ್ ಎಸೆದು ಪರಾರಿಯಾಗಿದ್ದಾರೆ. ಮುಖವನ್ನು ರಕ್ಷಿಸುವ ಭರದಲ್ಲಿ ತನ್ನ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಆರೋಪಿಗಳಲ್ಲಿ ಓರ್ವ ಮುಕುಂದ್‌ಪುರದ ನಿವಾಸಿ ಜಿತೇಂದ್ರ ಮತ್ತು ಆತನ ಮತ್ತಿಬ್ಬರು ಸ್ನೇಹಿತರಾದ ಇಶಾನ್ ಮತ್ತು ಅರ್ಮಾನ್ ಎಂದು ಆರೋಪಿಸಿದ್ದಳು. ಇದನ್ನೂ ಓದಿ: ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್
ತನಿಖೆಯ ವೇಳೆ ವಿದ್ಯಾರ್ಥಿನಿಯ ಹೇಳಿಕೆಯಲ್ಲಿ ಗೊಂದಲವಿರುವುದನ್ನು ಪೊಲೀಸರು ಗಮನಿಸಿದ್ದರು. ಕೂಡಲೇ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ, ಆರೋಪಿ ಜಿತೇಂದ್ರ ಹಾಗೂ ಆತನ ಬೈಕ್ ಕೃತ್ಯ ನಡೆದಿದೆ ಎಂದು ಹೇಳಿದ ಸಮಯದಲ್ಲಿ ಬೇರೆ ಕಡೆ ಇರುವುದು ಕಂಡು ಬಂದಿತ್ತು. ಕರೆಗಳ ವಿವರ, ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳಿಂದ ಇದು ದೃಢಪಟ್ಟಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ರವೀಂದರ್ ಯಾದವ್ ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ವೇಳೆ ಘಟನೆಯ 2 ದಿನದ ಹಿಂದೆ ವಿದ್ಯಾರ್ಥಿನಿಯ ತಂದೆಯ ಮೇಲೆ ಜಿತೇಂದ್ರ ಪತ್ನಿ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ದೂರು ನೀಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆಯೂ ವಾಗ್ವಾದ ನಡೆದಿತ್ತು. ಇದೇ ಕಾರಣಕ್ಕಾಗಿ ವಿದ್ಯಾರ್ಥಿನಿಯ ತಂದೆಯು ಜಿತೇಂದ್ರ ವಿರುದ್ಧ ಸಂಚು ರೂಪಿಸಿ, ಆ್ಯಸಿಡ್ ದಾಳಿಯ ಸುಳ್ಳು ಕಥೆ ಕಟ್ಟಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.
– UPSC ಆಕಾಂಕ್ಷಿ ಗೆಳೆಯ; ಫೋರೆನ್ಸಿಕ್ ಸೈನ್ಸ್ ಗೆಳತಿ; ಗ್ಯಾಸ್ ಏಜೆನ್ಸಿಯ ಎಕ್ಸ್ ಬಾಯ್‌ಫ್ರೆಂಡ್
– ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಹತ್ಯೆ
ನವದೆಹಲಿ: ಇದೇ ಅಕ್ಟೋಬರ್ 6ರಂದು ಉತ್ತರ ದೆಹಲಿಯ ಗಾಂಧಿ ವಿಹಾರ್ ಬಿಲ್ಡಿಂಗ್‌ನ ಫ್ಲಾಟ್‌ನಲ್ಲಿ (Delhi’s Gandhi Vihar Flat) ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಲ್ಲಿಗೆ ಧಾವಿಸಿದ್ದ ಅಗ್ನಿಶಾಮಕ ಸಿಬ್ಬಂದಿ 35 ವರ್ಷದ ಯುಪಿಎಸ್ಸಿ ಆಕಾಂಕ್ಷಿ ರಾಮಕೇಶ್ ಮೀನಾ ಅವರ ಸುಟ್ಟ ದೇಹವನ್ನ ಪತ್ತೆ ಮಾಡಿದ್ರು. ಮೊದಲಿಗೆ ಇದು AC (ಹವಾ ನಿಯಂತ್ರಣ) ಸ್ಫೋಟದಿಂದ ಆಗಿರುವ ದುರಂತ ಎಂದೇ ನಂಬಲಾಗಿತ್ತು. ಆದ್ರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ದೆಹಲಿ ಪೊಲೀಸರ ಅನುಮಾನ, ಕೃತ್ಯದ ಬಳಿಕ ಸಿಕ್ಕ ಒಂದೇ ಒಂದೇ ಸುಳಿವು ರೋಚಕ ಸತ್ಯ ಬಯಲಿಗೆಳೆಯುವಲ್ಲಿ ಯಶಸ್ವಿಯಾಯ್ತು.
ಈ ಪ್ರಕರಣದ ಮಾಸ್ಟರ್ ಮೈಂಡ್, ಸೂತ್ರಧಾರಿ ಎಲ್ಲವೂ 21 ವರ್ಷದ ಫೋರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ (Forensic Science Student) ಅಮೃತಾ. ಹತ್ಯೆಯಾದ ರಾಮಕೇಶ್ ಮೀನಾ ಆಕೆಯ ಲಿವ್ ಇನ್ ಪಾರ್ಟ್ನರ್.
ಎಕ್ಸ್ ಬಾಯ್‌ಫ್ರೆಂಡ್ ಜೊತೆ ಸೇರಿ ಹಾಕಿದ್ಳು ಸ್ಕೆಚ್
ಯೆಸ್. ಅಮೃತಾ, ಮೀನಾ ಇಬ್ಬರು ಲಿವ್ ಇನ್ ಪಾರ್ಟ್ನರ್. ಆದ್ರೆ ರಾಮಕೇಶ್ ಅಮೃತಾಳ ಖಾಸಗಿ ವಿಡಿಯೋವನ್ನ ರಹಸ್ಯವಾಗಿ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ವಿಡಿಯೋಗಳನ್ನ ಡಿಲೀಟ್ ಮಾಡುವಂತೆ ಕೇಳಿಕೊಂಡರೂ ನಿರಾಕರಿಸಿದ್ದ. ಇದರಿಂದ ಅಮೃತಾ, ಮೀನಾ ಮೇಲೆ ಸಿಟ್ಟಾಗಿದ್ದಳು. ಕೊನೆಗೆ ಮೊರಾಬಾದ್‌ನಲ್ಲಿ ಗ್ಯಾಸ್ ಏಜೆನ್ಸಿ (Gas Agency) ಹೊಂದಿದ್ದ ತನ್ನ ಎಕ್ಸ್ ಬಾಯ್‌ಫ್ರೆಂಡ್‌ಗೆ (Boyfriend) ಈ ವಿಷಯವನ್ನೆಲ್ಲ ತಿಳಿಸಿದಳು. ಆ ನಂತರ ಇಬ್ಬರು ಒಟ್ಟಾಗಿ ಸೇರಿ ಕೊಲೆಗೆ ಪ್ಲ್ಯಾನ್ ಮಾಡಿದ್ರು.
ತಾನು ಫೋರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಆಗಿದ್ದರಿಂದ ಕೃತ್ಯ ನಡೆದ ಸ್ಥಳ ಸಂಪೂರ್ಣ ಸುಟ್ಟುಹೋದ್ರೆ, ಫೋರೆನ್ಸಿಕ್ ಅಧಿಕಾರಿಗಳಿಗೆ ಯಾವುದೇ ಸಾಕ್ಷ್ಯ ಸಿಗಲ್ಲ ಅಂತ ಅಮೃತಾ ನಂಬಿದ್ದಳು. ಇತ್ತ ಎಕ್ಸ್ ಬಾಯ್‌ಫ್ರೆಂಡ್ ಗ್ಯಾಸ್ ಎಜೆನ್ಸಿ ಹೊಂದಿದ್ದರಿಂದ ಸುಲಭವಾಗಿ ಗ್ಯಾಸ್ ಸಿಲಿಂಡರ್ ಲಭ್ಯವಿರುತ್ತಿತ್ತು. ಜೊತೆಗೆ ಅವನಿಗೆ ಸ್ಫೋಟಿಸುವುದೂ ಗೊತ್ತಿತ್ತು. ಇಬ್ಬರಷ್ಟೇ ಈ ಕೆಲಸಕ್ಕೆ ಸಾಲೋದಿಲ್ಲ ಅಂತ ಎಕ್ಸ್‌ಬಾಯ್‌ಫ್ರೆಂಡ್ ಗೆಳೆಯನನ್ನೂ ಸೇರಿಸಿಕೊಂಡು ಸ್ಕೆಚ್ ಹಾಕಿದ್ರು.
ಹತ್ಯೆ ನಡೆದಿದ್ದು ಹೇಗೆ?
ಇದೇ ಅಕ್ಟೋಬರ್ 6ರ ಮುಂಜಾನೆ ಮೂವರು ಗಾಂಧಿವಿಹಾರ್ ಬಿಲ್ಡಿಂಗ್‌ನ ಫ್ಲ್ಯಾಟ್‌ಗೆ ಪ್ರವೇಶಿಸಿದ್ರು. ಫ್ಲ್ಯಾಟ್‌ನಲ್ಲಿದ್ದ ಮೀನಾನನ್ನ ಮೊದಲು ಕತ್ತು ಹಿಸುಕಿ ಕೊಲೆ ಮಾಡಿದ್ರು. ಬಳಿಕ ಅವನ ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಹಾಗೂ ಬೆಲೆ ಬಾಳುವ ವಸ್ತುಗಳೆಲ್ಲವನ್ನೂ ಎತ್ತಿಟ್ಟುಕೊಂಡರು. ಸಾಕ್ಷ್ಯ ಸುಳಿವು ಸಿಗುವ ಎಲ್ಲಾ ವಸ್ತುಗಳನ್ನ ಎತ್ತಿಟ್ಟುಕೊಂಡಿದ್ರು. ಇದು ಕೊಲೆ ಅಂತ ಗೊತ್ತೇ ಆಗದಂತೆ ಮಾಡಲು ರಾಮಕೇಶ್ ದೇಹವನ್ನ ಎಣ್ಣೆ, ತುಪ್ಪ ಹಾಗೂ ಮದ್ಯ ಸುರಿದು ಸುಟ್ಟುಬಿಟ್ಟರು. ನಂತರ ಓಪನ್ ಸಿಲಿಂಡರ್ ಬಳಸಿ ಸ್ಫೋಟಿಸಿದ್ರು. ಫ್ಲ್ಯಾಟ್‌ಗೆ ಉಳಿದ ವಸ್ತುಗಳಿಗೆ ಬೆಂಕಿ ಹಚ್ಚಿ ಯಾವುದೇ ಸಾಕ್ಷ್ಯ ಸಿಗದಂತೆ ಮಾಡಿದ್ರು. ತಾವು ಬಚಾವ್ ಆಗ್ತೀವಿ ಅಂತ ತಿಳಿದುಕೊಂಡು ಗ್ಯಾಸ್ ಸ್ಫೋಟಿಸಿ ಅಲ್ಲಿಂದ ಪರಾರಿಯಾಗಿದ್ದರು. ಅವರು ಅಲ್ಲಿಂದ ಪರಾರಿಯಾದ 15 ನಿಮಿಷಗಳಲ್ಲಿ ಅವರಿದ್ದ ಫ್ಲ್ಯಾಟ್ ಸಂಪೂರ್ಣ ಸ್ಫೋಟಗೊಂಡು ಬೆಂಕಿಯಲ್ಲಿ ಉರಿಯಿತು.
ಸಿಕ್ಕಿಬಿದ್ದದ್ದು ಹೇಗೆ?
ಇನ್ನೂ ಪ್ರಕರಣ ಭೇದಿಸಿದ ಪೊಲೀಸರು ಸ್ಫೋಟಕ ವಿಚಾರಗಳನ್ನ ಬಯಲಿಗೆಳೆದಿದ್ದಾರೆ. ಆಕೆ ಸಿಕ್ಕಿಬಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಕೊಲೆ ಮಾಡಿಸಿದ ಅಮೃತಾ ಇದೊಂದು ಆಕಸ್ಮಿಕ ಘಟನೆ ಅಂತ ಬಿಂಬಿಸಲು ಪ್ರಯತ್ನಿಸಿದ್ದಳು. ಆದ್ರೆ ಅನೇಕ ಸುಳಿವುಗಳನ್ನ ಬಿಟ್ಟುಹೋಗಿದ್ದಳು ಅಂತ ತಿಳಿಸಿದ್ದಾರೆ.
ಸುಳಿವು ಸಿಕ್ಕಿದ್ದು ಎಲ್ಲಿ?
* ಸುಳಿವು 1: ದೇಹದ ಭಾಗಗಳು ಭಾಗಶಃ ಸುಟ್ಟುಹೋಗಿತ್ತು, ಮೂಳೆಗಳು ಬೆಂಕಿಗೆ ಬೂದಿಯಾಗಿತ್ತು. ಆದ್ರೆ ಎಸಿ ಸ್ಫೋಟದಿಂದ ಇಷ್ಟು ಪ್ರಮಾಣದಲ್ಲಿ ದೇಹ ಸುಡಲು ಸಾಧ್ಯವಿಲ್ಲ ಎಂದು ತನಿಖಾಧಿಕಾರಿಗಳು ಅದಾಜಿಸಿದ್ರು. ಇದು ಕೊಲೆ ಅನುಮಾನಕ್ಕೆ ಕಾರಣವಾಯಿತು.
* ಸುಳಿವು 2: ಗ್ಯಾಸ್ ಸಿಲಿಂಡರ್ ಸುಟ್ಟ ದೇಹಕ್ಕೆ ಸಲ್ಪ ಹತ್ತಿರದಲ್ಲೇ ಇತ್ತು. ಅಲ್ಲದೇ ಇದು ಫ್ಲ್ಯಾಟ್‌ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧವಿಲ್ಲ ಎಂಬುದನ್ನ ಫೋರೆನ್ಸಿಕ್ ಮೂಲಕ ಅಧಿಕಾರಿಗಳು ಖಚಿತಪಡಿಸಿಕೊಂಡರು.
* ಸುಳಿವು 3: ಆರಂಭದಲ್ಲಿ ಎಸಿ ಸ್ಫೋಟದಿಂದ ದುರಂತ ಸಂಭವಿಸಿದೆ ಎಂದು ನಂಬಲಾಗಿತ್ತು. ಆದ್ರೆ ಎಸಿ ಘಟಕಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಇದರಿಂದ ಪೊಲೀಸರ ಅನುಮಾನ ನಿಜವಾಯ್ತು.
* ಸುಳಿವು 4: ಘಟನೆ ನಡೆದ ನಂತರ ಅಮೃತಾಳ ಫೋನ್ ಸ್ವಿಚ್‌ಆಫ್ ಆಗಿತ್ತು.
* ಸುಳಿವು 5: ಘಟನೆಗೂ ಮುನ್ನ ಮೂವರು ಮುಸುಕುಧಾರಿಗಳು ಫ್ಲ್ಯಾಟ್ ಪ್ರವೇಶ ಮಾಡಿದ್ದರು. ಅವರಲ್ಲಿ ಅಮೃತಾ ಕೂಡ ಒಬ್ಬಳಾಗಿದ್ದಳು. ಸ್ಫೋಟ ಸಂಭವಿಸುವ 15 ನಿಮಿಷಕ್ಕೂ ಮುನ್ನ ಅವರು ಅಲ್ಲಿಂದ ಎಸ್ಕೇಪ್ ಆಗಿದ್ದರು. ಇದೆಲ್ಲವು ಸೆರೆಯಾಗಿದ್ದ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಯಿತು.
ಇದೆಲ್ಲದರ ಆಧಾರದ ಮೇಲೆ ತೀವ್ರ ವಿಚಾರಣೆ ನಡೆಸಿದಾಗ ಅಮೃತಾ ಕೃತ್ಯ ಎಸಿಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಬಂಧಿತರಿಂದ ಅನೇಕ ಡಿಜಿಟಲ್ ಸಾಧನಗಳು ಹಾಗೂ ಕದ್ದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಅಮೃತಾ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನವದೆಹಲಿ: 2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿತೂರಿ ಆರೋಪದಲ್ಲಿ ಜೈಲು ಸೇರಿರುವ ಆರು ಆರೋಪಿಗಳ ಜಾಮೀನು ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ವಿಫಲರಾದ ದೆಹಲಿ ಪೊಲೀಸರನ್ನು (Delhi Police) ಸುಪ್ರೀಂಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.
ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಸೇರಿದಂತೆ ಇತರ ಮೂವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋಟ್‌ನ ನ್ಯಾ.ಅರವಿಂದ್ ಕುಮಾರ್ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು, ಈಗಾಗಲೇ ಅರ್ಜಿಗಳಿಗೆ ಉತ್ತರಿಸಲು ದೆಹಲಿ ಪೊಲೀಸರಿಗೆ ಸಾಕಷ್ಟು ಸಮಯ ನೀಡಲಾಗಿತ್ತು, ಹೀಗಾಗಿ ಈ ವಿಷಯವನ್ನು ಶುಕ್ರವಾರ (ಅ.31) ಇತ್ಯರ್ಥಪಡಿಸುವುದಾಗಿ ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಅಧಿಕಾರಿಗಳು ಪತ್ರಿಕೆ ಓದಿಲ್ಲವೇ? – ಬೀದಿ ನಾಯಿಗಳ ವಿಚಾರದಲ್ಲಿ ಪ್ರತಿಕ್ರಿಯೆ ಸಲ್ಲಿಸದ ರಾಜ್ಯಗಳಿಗೆ ಸುಪ್ರೀಂ ಚಾಟಿ
ವಿಚಾರಣೆ ವೇಳೆ, ಆರೋಪಿಗಳು ಸಲ್ಲಿಸಿದ ಮೇಲ್ಮನವಿಗೆ ಪ್ರತಿಕ್ರಿಯಿಸಲು ಇನ್ನೂ ಎರಡು ವಾರಗಳ ಕಾಲಾವಕಾಶ ನೀಡಬೇಕೆಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಮನವಿ ಮಾಡಿಕೊಂಡರು. ಈ ವೇಳೆ ಕೋರ್ಟ್, ನೀವು ಈ ಪ್ರಕರಣದಲ್ಲಿ ಮೊದಲ ಬಾರಿ ಹಾಜರಾಗಿರಬಹುದು. ಆದರೆ ನಾವು ಈಗಾಗಲೇ ದೆಹಲಿ ಪೊಲೀಸರಿಗೆ ಸಾಕಷ್ಟು ಸಮಯ ನೀಡಿದ್ದೇವೆ. ಆದರೂ ಕೂಡ ಅವರು ಪ್ರತಿಕ್ರಿಯಿಸಿಲ್ಲ ಎಂದು ಆಕ್ರೋಶ ಹೊರಹಾಕಿದೆ.
ಈ ವೇಳೆ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಪ್ರಕರಣದ ವಿಚಾರಣೆ ಮುಂದೂಡಲು ಮನವಿ ಮಾಡಿಕೊಂಡರು. ಆದರೆ ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನುಸಿಂಘ್ವಿ ವಿರೋಧಿಸಿದರು. ಅಂತಿಮವಾಗಿ ನ್ಯಾಯಾಲಯವು ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಿತು.
– ಪ್ರಮುಖ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಶಂಕಿತ ಭಯೋತ್ಪಾದಕರು
ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾದೊಂದಿಗೆ ಸಂಯೋಜಿತವಾಗಿರುವ ಭಯೋತ್ಪಾದಕ ಮಾಡ್ಯೂಲ್ ಅನ್ನು ದೆಹಲಿ ಪೊಲೀಸರು (Delhi Police) ಭೇದಿಸಿದ್ದಾರೆ. ಈ ಜಾಲದಲ್ಲಿದ್ದ ಇಬ್ಬರು ಶಂಕಿತರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನಗಳು ದೆಹಲಿಯಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯನ್ನು ತಪ್ಪಿಸಿವೆ.
ಬಂಧಿತರ ಪೈಕಿ ಓರ್ವ ಅದ್ನಾನ್ ಮಧ್ಯಪ್ರದೇಶದ ಭೋಪಾಲ್ ಮೂಲದವನಾಗಿದ್ದು, ಮತ್ತೊಬ್ಬ ಆರೋಪಿ ದೆಹಲಿಯವನು ಎಂದು ತಿಳಿದು ಬಂದಿದೆ. ದೆಹಲಿಯ ಸಾದಿಕ್ ನಗರ ಮತ್ತು ಭೋಪಾಲ್‌ನಲ್ಲಿ ನಡೆದ ಸಂಘಟಿತ ಕಾರ್ಯಾಚರಣೆಯಲ್ಲಿ ಮಾಹಿತಿ ಪಡೆದ ನಂತರ ಇಬ್ಬರನ್ನು ಬಂಧಿಸಲಾಗಿದೆ. ಶಂಕಿತರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ ಎನ್‌ಡಿಎ & ಲಠ್‌ಬಂಧನ್ ನಡುವಿನ ಹೋರಾಟ: ಆರ್‌ಜೆಡಿ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಆರೋಪಿಗಳು ಐಸಿಸ್ (ISIS) ಜೊತೆ ಸಂಬಂಧ ಹೊಂದಿದ್ದಾರೆ ಮತ್ತು ದೆಹಲಿಯಲ್ಲಿ ಪ್ರಮುಖ ಭಯೋತ್ಪಾದಕ ದಾಳಿಯನ್ನು ಯೋಜಿಸುತ್ತಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರಿಂದ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅಪರಾಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಸೆಪ್ಟೆಂಬರ್‌ನಲ್ಲೂ ದೆಹಲಿ, ಜಾರ್ಖಂಡ್, ತೆಲಂಗಾಣ ಮತ್ತು ಮಧ್ಯಪ್ರದೇಶದಾದ್ಯಂತ ಹಲವಾರು ದಾಳಿಗಳನ್ನು ನಡೆಸಿ ಪಾಕಿಸ್ತಾನ ಮೂಲದ ಇದೇ ರೀತಿಯ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿದ್ದರು. ದಾಳಿಗಳ ನಂತರ, ಪೊಲೀಸರು ಐವರು ಭಯೋತ್ಪಾದಕರನ್ನು ಬಂಧಿಸಿದ್ದರು. ಅವರನ್ನು ಅಶರ್ ದಾನಿಶ್, ಅಫ್ತಾಬ್, ಸುಫಿಯಾನ್, ಮುಜಾಪಾ ಮತ್ತು ಕಮ್ರಾನ್ ಖುರೇಷಿ ಅಲಿಯಾಸ್ ಸಮರ್ ಖಾನ್ ಎಂದು ಗುರುತಿಸಲಾಗಿತ್ತು. ಇದನ್ನೂ ಓದಿ: ಡ್ರೈವರ್, ಕಂಡಕ್ಟರ್ ಬೆಂಕಿ ನಂದಿಸ್ತಿದ್ದರು, 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡ್ವಿ – ಪ್ರಾಣಾಪಾಯದಿಂದ ಪಾರಾದ ಆಕಾಶ್ ಮಾತು
– ದೆಹಲಿಯ ಹಲವೆಡೆ ಭಯೋತ್ಪಾದಕ ದಾಳಿಗೆ ಪ್ಲ್ಯಾನ್
– ಆತ್ಮಹತ್ಯಾ ದಾಳಿಗೆ ತರಬೇತಿ ಪಡೆಯುತ್ತಿದ್ದ ಶಂಕಿತರು
ನವದೆಹಲಿ: ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದು, ದೆಹಲಿಯ ವಿವಿಧೆಡೆ ಭಯೋತ್ಪಾದನಾ ದಾಳಿಗಳಿಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನ (Suspected Terrorists) ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.
ಗುಪ್ತಚರ ಸಂಸ್ಥೆ ಹಾಗೂ ದೆಹಲಿ ಪೊಲೀಸ್ ವಿಶೇಷ ಘಟಕ (Delhi Police Speical Unit) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್ ಮಾಡ್ಯೂಲ್ (ISIS Module) ಭೇದಿಸಿದ್ದು, ಇಬ್ಬರನ್ನ ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬನನ್ನ ಅದ್ನಾನ್ ಎಂದು ಗುರುತಿಸಲಾಗಿದೆ. ಈತ ಮೂಲತಃ ಮಧ್ಯಪ್ರದೇಶದ ಭೋಪಾಲ್ ಮೂಲದವನು, ಮತ್ತೊಬ್ಬ ಶಂಕಿತನನ್ನ ದೆಹಲಿಯ ಸಾದಿಕ್ ನಗರದಲ್ಲಿ ಬಂಧಿಸಲಾಗಿದೆ. ಈ ಇಬ್ಬರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್ ಗುದ್ದಿದ್ದಾಗ ಏನಾಯ್ತು?
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ದೆಹಲಿಯಲ್ಲಿ ಪ್ರಮುಖ ದಾಳಿ ನಡೆಸಲು ಪ್ಲ್ಯಾನ್ ಮಾಡುತ್ತಿದ್ದರು. ಇಬ್ಬರು ಫಿದಾಯೀನ್ (ಆತ್ಮಹತ್ಯಾ) ದಾಳಿಗಳಿಗೆ ತರಬೇತಿ ಪಡೆದಿದ್ದರು. ಸದ್ಯ ಇಬ್ಬರನ್ನ ಬಂಧಿಸಿದ್ದು, ಅವರ ಬಳಿಯಿದ್ದ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಸ್ಫೋಟಕ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ತಾಪುರ ಆರ್‌ಎಸ್‌ಎಸ್ ಫೈಟ್ – ಕ್ರೈಸ್ತ ಸಂಘಟನೆ ಸೇರಿ ಐವರಿಂದ ಅರ್ಜಿ
ಇನ್ನೂ ಕಾರ್ಯಾಚರಣೆ ಮುಂದುವರಿಸಿರುವ ಅಧಿಕಾರಿಗಳು ಸಂಪೂರ್ಣ ಜಾಲ ಪತ್ತೆಹಚ್ಚಲು ಮುಂದಾಗಿದ್ದಾರೆ. ಐಸಿಸ್ ಜಾಲದಲ್ಲಿ ಇನ್ನು ಎಷ್ಟು ಮಂದಿ ಇದ್ದಾರೆ? ಭಾರತದಲ್ಲಿ ಬೇರೆ ಎಲ್ಲೆಲ್ಲಿ ದಾಳಿಗೆ ಯೋಜನೆ ರೂಪಿಸಲಾಗಿದೆ? ಎಂಬೆಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನೆಲಮಂಗಲ ಹೈವೇಯಲ್ಲಿ ಲಾರಿ, ಕಾರು ಮಧ್ಯೆ ಭೀಕರ ಅಪಘಾತ – ಇಬ್ಬರು ಬಲಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಅಕ್ರಮವಾಗಿ ವಾಸಿಸುತ್ತಿದ್ದ 25 ಬಾಂಗ್ಲಾದೇಶದ ಪ್ರಜೆಗಳನ್ನು (Bangladeshi nationals) ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.
ಬಂಧಿತರು ಐಎಂಓ ಮೊಬೈಲ್ ಅಪ್ಲಿಕೇಶನ್ ಮೂಲಕ ಬಾಂಗ್ಲಾದೇಶದಲ್ಲಿರುವ ಜನರೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಈ ಅಪ್ಲಿಕೇಶನ್‌ನನ್ನು ಅಂತರರಾಷ್ಟ್ರೀಯ ಕರೆಗಳಿಗೆ ಮಾತ್ರ ಹೆಚ್ಚಾಗಿ ಬಳಸಲಾಗುತ್ತದೆ. ಕಳೆದ ಐದು ದಿನಗಳ ಹಿಂದೆ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳನ್ನು ದಕ್ಷಿಣ ದೆಹಲಿಯ ಮಹಿಪಾಲ್ಪುರ ಪ್ರದೇಶದಿಂದ ಪೊಲೀಸರು ಬಂಧಿಸಿದ್ದರು.
5 ತಿಂಗಳಲ್ಲಿ 900 ಬಾಂಗ್ಲಾ ಪ್ರಜೆಗಳು ಪತ್ತೆ
ಜನವರಿಯಿಂದ ಮೇ ವರೆಗೆ ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಸುಮಾರು 900 ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ. ದಾಖಲೆ ಪರಿಶೀಲನೆಯ ನಂತರ ಅವರನ್ನು ಗಡಿಪಾರು ಮಾಡಲಾಗುವುದು. ಪಹಲ್ಗಾಮ್ ದಾಳಿಯ ಬಳಿಕ ದಾಖಲೆರಹಿತ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆಯು ಚುರುಕಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣ ಇತ್ತೀಚೆಗೆ ಜಾಸ್ತಿ ಆಗ್ತಿವೆ. ಖುದ್ದು ಪ್ರಧಾನಿ ಮೋದಿ (PM Modi) ಅವರೇ ಜಾಗೃತಿ ಮೂಡಿಸಿದ್ರೂ ಎಚ್ಚೆತ್ತುಕೊಳ್ಳದ ಜನ, ಇಂತಹ ಕೃತ್ಯಗಳಿಗೆ ಒಳಗಾಗುತ್ತಿದ್ದಾರೆ. ಅದರಂತೆ ದೆಹಲಿಯ ನಿವೃತ್ತ ಬ್ಯಾಂಕರ್ ಒಬ್ಬರು ಡಿಜಿಟಲ್ ಅರೆಸ್ಟ್‌ಗೆ ಹೆದರಿ 23 ಕೋಟಿ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾವು ಇಡಿ ಮತ್ತು ಸಿಬಿಐ ಅಧಿಕಾರಿಗಳು (CBI Officers) ಅಂತ ಹೇಳಿಕೊಂಡು, ಸೈಬರ್ ವಂಚಕರು ಒಂದು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಬೆದರಿಕೆ ಹಾಕುವ ಮೂಲಕ 23 ಕೋಟಿ ರೂ.ಗಳನ್ನು ವಂಚಿಸಿದ್ದಾರೆ. ಆರೋಪಿಗಳು, ನಿವೃತ್ತ ಬ್ಯಾಂಕರ್‌ಗೆ ನಿಮ್ಮ ಆಧಾರ್ ಕಾರ್ಡ್, ಡ್ರಗ್ಸ್ ಸಾಗಣೆ, ಉಗ್ರರಿಗೆ ಹಣಕಾಸು ನೆರವು ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ (Pulwama Terror Attack) ಬಳಕೆಯಾಗಿದೆ ಎಂದು ಹೇಳಿದ್ದಾರೆ. ಬಳಿಕ ಸಿಬಿಐ, ಇಡಿ ಅಂತ ಹೇಳಿಕೊಳ್ಳುವ ಕೆಲ ಅಧಿಕಾರಿಗಳು ನಿವೃತ್ತ ಬ್ಯಾಂಕ್ ಅಧಿಕಾರಿಯನ್ನ ಸಂಪರ್ಕಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಕಡಲ ತೀರದಲ್ಲಿ ಸೋಮಾಲಿಯಕ್ಕೆ ಹೊರಡಬೇಕಿದ್ದ ಹಡಗಿಗೆ ಬೆಂಕಿ – ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ತನಿಖೆಯ ನೆಪದಲ್ಲಿ ಆತನನ್ನು ಫ್ಲಾಟ್ ಒಳಗೆ ಇರಿಸಿ ಮನೆಯಿಂದ ಹೊರಗೆ ಹೋಗದಂತೆ ಹೇಳಿದ್ದಾರೆ. ಆಗಸ್ಟ್ 4ರಿಂದ ಒಂದು ತಿಂಗಳ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ಭಯದಿಂದ ಬಲಿಪಶು, ಅವರು ಹೇಳಿದಂತೆಲ್ಲಾ ಕೇಳಿದ್ದಾರೆ. ಬಳಿಕ ಮೋಸಹೋಗಿರುವುದು ಅರಿತ ಬ್ಯಾಂಕರ್, ಸೆಪ್ಟೆಂಬರ್ 19ರಂದು NCRP ಸೈಬರ್ ಪೊಲೀಸ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡ ಸೈಬರ್ ಕ್ರೈಂ, ವಂಚನೆಗೊಳಗಾದ ಮೊತ್ತದಲ್ಲಿ 12.11 ಕೋಟಿ ರೂ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಲಾಗಿದೆ.
ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಯ ಹೊಸ ವಿಧಾನವಾಗಿದೆ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ ಮತ್ತು ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ. ಇದನ್ನೂ ಓದಿ: Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ
ಉತ್ತರ ಪ್ರದೇಶದ (Uttarpradesh) ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆ ಹೊರಗೆ ಇದೇ ಸೆ.12ರಂದು ನಸುಕಿನ 3:30ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಎಸ್ಕೇಪ್ ಆಗಿದ್ದರು. ಗುಂಡಿನ ದಾಳಿ ನಡೆದ ಮನೆಯಲ್ಲಿ ದಿಶಾ ಪಟಾನಿ ಕುಟುಂಬ ವಾಸವಿತ್ತು. ಆ ಸಮಯದಲ್ಲಿ ದಿಶಾ ಅವರ ತಂದೆ ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಸಿಂಗ್ ಪಟಾನಿ, ತಾಯಿ ಅಕ್ಕ ಖುಷ್ಬು ಪಟಾನಿ ಇದ್ದರು. ಬಳಿಕ ಗೋಲ್ಡಿ ಬ್ರಾರ್ ಗ್ಯಾಂಗ್ ಗುಂಡಿನ ದಾಳಿ ಹೊಣೆ ಹೊತ್ತುಕೊಂಡಿತ್ತು. ಇದನ್ನೂ ಓದಿ: ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ
ದುಷ್ಕರ್ಮಿಗಳ ಬೆನ್ನತ್ತಿ ಪೊಲೀಸರ ಮೇಲೆಯೇ ಶಂಕಿತರು ಗುಂಡಿನ ದಾಳಿಗೆ ಮುಂದಾದ್ರು. ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಗಾಯಗೊಂಡಿದ್ದ ಶಂಕಿತರು ಬಳಿಕ ಸಾವನ್ನಪ್ಪಿದರು.
ಗುಂಡಿನ ದಾಳಿಗೆ ಕಾರಣ ಏನು?
ದಾಳಿ ಹೊಣೆ ಹೊತ್ತಿದ್ದ ಗೋಲ್ಡಿ ಬ್ರಾರ್ ಗ್ಯಾಂಗ್ ಅದಕ್ಕೆ ಕಾರಣ ಉಲ್ಲೇಖಿಸಿ ಪತ್ರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಎಲ್ಲಾ ಸಹೋದರರಿಗೆ ರಾಮ್ ರಾಮ್ ನಾನು, ವೀರೇಂದ್ರ ಚರಣ್, ಮಹೇಂದ್ರ ಶರಣ್. ‘ಸಹೋದರರೇ, ಇಂದು ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದೇವೆ. ಅವರು ನಮ್ಮ ಪೂಜ್ಯ ಸಂತರಾದ ಪ್ರೇಮಾನಂದ ಜಿ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಜಿ ಮಹಾರಾಜ್ ಅವರನ್ನು ಅವಮಾನಿಸಿದ್ದಾರೆ. ಅಲ್ಲದೇ ನಮ್ಮ ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಿದರು. ನಮ್ಮ ದೇವತೆಗಳ ಮೇಲಿನ ಅವಮಾನ ಸಹಿಸಲಾಗದು. ಇದು ಕೇವಲ ಟ್ರೈಲರ್ ಅಷ್ಟೇ. ಮುಂದಿನ ಬಾರಿ, ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದ್ರೆ, ಅವರ ಮನೆಯಲ್ಲಿ ಯಾರೂ ಜೀವಂತವಾಗಿ ಉಳಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿತ್ತು.
ನವದೆಹಲಿ: ಕಂಠಪೂರ್ತಿ ಕುಡಿದು ಇಬ್ಬರು ಪೊಲೀಸ್ ಅಧಿಕಾರಿಗಳು ವಾಹನ ಚಲಾಯಿಸಿದ್ದಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೆಹಲಿಯ (Delhi) ರಾಮಕೃಷ್ಣ ಆಶ್ರಮ ಮೆಟ್ರೋ ಸ್ಟೇಷನ್ (Ramakrishna Ashram Metro Station) ಬಳಿ ನಡೆದಿದೆ.
ಗುರುವಾರ (ಸೆ.18) ಬೆಳಗ್ಗೆ 5ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ಕುರಿತು ಮೃತ ವ್ಯಕ್ತಿಯ ಮಗ ಮಾತನಾಡಿ, ಇಬ್ಬರು ಅಧಿಕಾರಿ ಹಾಗೂ ಓರ್ವ ಮಹಿಳೆಯಿದ್ದ ಪೊಲೀಸ್ ವಾಹನವು ನನ್ನ ತಂದೆಗೆ ಡಿಕ್ಕಿ ಹೊಡೆದಿದೆ. ಅವರು ತುಂಬಾ ಕುಡಿದಿದ್ದರು. ನನ್ನ ತಂದೆ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರ‍್ಯಾಂಪ್ ಮೇಲೆ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ನಡೆದ ಸ್ಥಳದ ಹತ್ತಿರದಲ್ಲಿಯೇ ಒಂದು ಜಾಗವಿದೆ. ಅವರು ಯಾವಾಗಲೂ ಅಲ್ಲಿ ಕುಡಿಯಲು ಬರುತ್ತಾರೆ. ಅಲ್ಲದೇ ಅವರ ವ್ಯಾನ್‌ನಲ್ಲಿ ಖಾಲಿ ಮದ್ಯದ ಬಾಟಲಿಗಳಿದ್ದವು, ಅಲ್ಲದೇ ಮದ್ಯದ ವಾಸನೆಯೂ ಬರುತ್ತಿತ್ತು ಎಂದು ತಿಳಿಸಿದ್ದಾರೆ.
ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಬ್ಬರು ಪೊಲೀಸರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.ಇದನ್ನೂ ಓದಿ:ಅಕ್ಕ, ಬಾವನ ಜೊತೆ ಗಲಾಟೆ – ಬಿಗ್ ಬಾಸ್ ರಂಜಿತ್ ಮೇಲೆ ದೂರು ದಾಖಲು