Tag: Delhi Metro

  • ಒಂದೇ ಸೀಟ್‌ಗಾಗಿ ಮಹಿಳೆಯರಿಬ್ಬರ ಫೈಟ್ – ಜುಟ್ಟು ಹಿಡಿದು ಜಗಳವಾಡಿದ ವಿಡಿಯೋ ವೈರಲ್

    ಒಂದೇ ಸೀಟ್‌ಗಾಗಿ ಮಹಿಳೆಯರಿಬ್ಬರ ಫೈಟ್ – ಜುಟ್ಟು ಹಿಡಿದು ಜಗಳವಾಡಿದ ವಿಡಿಯೋ ವೈರಲ್

    -ಬೇರೆ ಕಡೆ ಖಾಲಿ ಸೀಟು ಇದ್ದರೂ ಒಂದೇ ಸೀಟಿಗಾಗಿ ಗಲಾಟೆ

    ನವದೆಹಲಿ: ದೆಹಲಿ ಮೆಟ್ರೋದಲ್ಲಿ (Delhi Metro) ಮಹಿಳೆಯರಿಬ್ಬರು ಒಂದೇ ಸೀಟಿಗಾಗಿ ಜುಟ್ಟು ಹಿಡಿದು ಜಗಳವಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದೆಹಲಿಯ ನೇರಳೆ ಮಾರ್ಗದ (Violet Line) ಬದ್ಖಲ್ ಮೋರ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಒಂದು ಸೀಟಿಗಾಗಿ ಆರಂಭವಾದ ವಾಗ್ವಾದ ಗಲಾಟೆಯಾಗಿ ಪರಿವರ್ತನೆಯಾಯಿತು, ಅಲ್ಲಿಂದ ಪರಸ್ಪರ ಕೂದಲು ಎಳೆಯುವುದು, ಹೊಡೆಯುವುದು, ನೂಕಾಡುವುದನ್ನು ಮಾಡಿದರು. ಜೊತೆಗೆ ಕುಸ್ತಿಯಾಡುವಾಗ ಒಬ್ಬರ ಮೇಲೆ ಇನ್ನೊಬ್ಬರು ಬೀಳುವಂತೆ ಜಗಳವಾಡಿದರು. ಈ ವಿಡಿಯೋವನ್ನು ಅಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಿದ ಡಿಕೆ ಶಿವಕುಮಾರ್‌

    ಮೆಟ್ರೋ ಯಾವಾಗಲೂ ಮನರಂಜನೆ ನೀಡುತ್ತದೆ ಎಂದು ಬರೆದುಕೊಂಡಿದ್ದು, ಮೆಟ್ರೋದಲ್ಲಿ ಇನ್ನೂ ಹಲವಾರು ಸೀಟುಗಳು ಖಾಲಿಯಿದ್ದರೂ ಕೂಡ ಈ ಇಬ್ಬರು ಮಹಿಳೆಯರು ಒಂದೇ ಸೀಟಿಗಾಗಿ ಹೊಡೆದಾಡಿಕೊಂಡಿದ್ದಾರೆ, ಇನ್ನೂ ಕೆಲವರು ಕಾಮೆಂಟ್ ಮಾಡಿದ್ದು, ದೆಹಲಿ ಮೆಟ್ರೋ ಯಾವತ್ತಿಗೂ ಜನರನ್ನು ನಿರಾಶೆಗೊಳಿಸುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

    ಇನ್ನೂ ಇತ್ತೀಚಿಗಷ್ಟೇ ದೆಹಲಿ ಮೆಟ್ರೋ ರೈಲು ನಿಗಮವು 2017ರ ನಂತರ 8 ವರ್ಷಗಳ ಬಳಿಕ ಮೆಟ್ರೋ ಪ್ರಯಾಣ ದರವನ್ನು 1ರಿಂದ 4 ರೂ.ವರೆಗೆ ಏರಿಕೆ ಮಾಡಿದೆ. ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಮಾರ್ಗದಲ್ಲಿ ಮಾತ್ರ 5 ರೂ.ಗೆ ಹೆಚ್ಚಿಸಿದೆ. ಕನಿಷ್ಠ 11 ರೂ.ನಿಂದ ಗರಿಷ್ಠ 64 ರೂ.ಗೆ ಪ್ರಯಾಣ ದರ ನಿಗದಿಯಾಗಿದೆ.ಇದನ್ನೂ ಓದಿ: ಡ್ಯಾಡ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿದ ಶಿವರಾಜ್ ಕುಮಾರ್

     

  • 8 ವರ್ಷದ ಬಳಿಕ ದೆಹಲಿ ಮೆಟ್ರೋ ದರ ಏರಿಕೆ

    8 ವರ್ಷದ ಬಳಿಕ ದೆಹಲಿ ಮೆಟ್ರೋ ದರ ಏರಿಕೆ

    – ಸಾಮಾನ್ಯ ಪ್ರಯಾಣ ದರ 1-4 ರೂ.ವರೆಗೆ ಏರಿಕೆ

    ನವದೆಹಲಿ: ಎಂಟು ವರ್ಷಗಳ ಬಳಿಕ ದೆಹಲಿ ಮೆಟ್ರೋ ರೈಲು ನಿಗಮ (DMRC) ಪ್ರಯಾಣ ದರವನ್ನು 1 ರಿಂದ 4ರೂ.ಗೆ ಏರಿಕೆಯಾಗಿದೆ.

    ಇಂದಿನಿಂದ (ಆ.25) ದೆಹಲಿ ಮೆಟ್ರೋ (Delhi Metro) ರೈಲು ಟಿಕೆಟ್ ದರ ಏರಿಕೆಯಾಗಿದೆ. ಎಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟಿಕೆಟ್ ಬೆಲೆ ಏರಿಕೆಯಾಗಿದೆ. ದೆಹಲಿ, ಎನ್‌ಸಿಆರ್ ಪ್ರದೇಶಗಳ ಲಕ್ಷಾಂತರ ಜನರ ಮೇಲೆ ಈ ದರ ಏರಿಕೆ ಪರಿಣಾಮ ಬೀರಲಿದೆ.ಇದನ್ನೂ ಓದಿ: ಧರ್ಮಸ್ಥಳ ಸಂಘದ ವಿರುದ್ಧ ಪಿತೂರಿಗೆ ಬಂದಿದ್ದ ಮಟ್ಟಣ್ಣನವರ್‌ಗೆ ಗ್ರಾಮಸ್ಥರ ಕ್ಲಾಸ್!

    ಈ ಕುರಿತು ದೆಹಲಿ ಮೆಟ್ರೋ ರೈಲು ನಿಗಮ ಮಾಹಿತಿ ನೀಡಿದ್ದು, ಟಿಕೆಟ್ ದರ ಪರಿಷ್ಕರಣೆ ಎನ್ನುವುದು ಹೆಸರಿಗಷ್ಟೇ. ಎಲ್ಲಾ ಮಾರ್ಗಗಳಲ್ಲಿ 1ರೂ.ಯಿಂದ 4 ರೂ.ವರೆಗೆ ಏರಿಕೆಯಾಗಿದೆ. ಇನ್ನೂ ಏರ್‌ಪೋರ್ಟ್ ಎಕ್ಸ್‌ಪ್ರೆಸ್‌ ಲೈನ್‌ನಲ್ಲಿ (Airport Express Line Metro) 5 ರೂ. ಏರಿಕೆಯಾಗಿದೆ. ದರ ಏರಿಕೆ ಬಳಿಕ ಕನಿಷ್ಠ 11 ರೂ. ಹಾಗೂ ಗರಿಷ್ಠ ದರ 64 ರೂ. ಆಗಿದೆ ಎಂದು ತಿಳಿಸಿದೆ.

    ಪ್ರಯಾಣ ದರದ ಹೆಚ್ಚಳ ಹೊರತಾಗಿಯೂ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ. ಜೊತೆಗೆ ಬೆಳಿಗ್ಗೆ 8 ಗಂಟೆಗೂ ಮುನ್ನ, ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಹಾಗೂ ರಾತ್ರಿ 9 ಗಂಟೆಯ ನಂತರ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ.

    ಹೊಸ ದರ ಹೇಗಿದೆ?
    ಸಾಮಾನ್ಯ ದಿನಗಳಲ್ಲಿ ಮೆಟ್ರೋ ಟಿಕೆಟ್ ದರ:
    0-2 ಕಿ.ಮೀ.ಗೆ 11 ರೂ.
    2-5 ಕಿ.ಮೀ.ಗೆ 21 ರೂ.
    5-12 ಕಿ.ಮೀ.ಗೆ 32 ರೂ.
    12-21 ಕಿ.ಮೀ.ಗೆ 43 ರೂ.
    21-32 ಕಿ.ಮೀ.ಗೆ 54 ರೂ.
    32 ಕಿ.ಮೀ.ಗಿಂತ ಹೆಚ್ಚಿನದಕ್ಕೆ 64 ರೂ.

    ಭಾನುವಾರ ಹಾಗೂ ರಜಾ ದಿನಗಳಲ್ಲಿ ಮೆಟ್ರೋ ಟಿಕೆಟ್ ದರ:
    0-2 ಕಿ.ಮೀ.ಗೆ 11 ರೂ.
    2-5 ಕಿ.ಮೀ.ಗೆ 11 ರೂ.
    5-12 ಕಿ.ಮೀ.ಗೆ 21 ರೂ.
    12-21 ಕಿ.ಮೀ.ಗೆ 32 ರೂ.
    21-32 ಕಿ.ಮೀ.ಗೆ 43 ರೂ.
    32 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ 54 ರೂ.

    ದರ ನಿಗದಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಡಿಎಂಆರ್‌ಸಿ ಕೊನೆಯದಾಗಿ 2017ರಲ್ಲಿ ಟಿಕೆಟ್ ದರ ಏರಿಕೆ ಮಾಡಿತ್ತು. ಆ ಸಮಯದಲ್ಲಿ ಕನಿಷ್ಠ ದರ 10 ರೂ. ಮತ್ತು ಗರಿಷ್ಠ ದರ 60 ರೂ. ಆಗಿತ್ತು.ಇದನ್ನೂ ಓದಿ: ದಾವಣಗೆರೆ | ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನ ಮೇಲೆ ಚಿರತೆ ದಾಳಿ

  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿ – ಮೆಟ್ರೋ ರೈಲು ಹಳಿಗೆ ಧುಮುಕಿ ಆತ್ಮಹತ್ಯೆ

    ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿ – ಮೆಟ್ರೋ ರೈಲು ಹಳಿಗೆ ಧುಮುಕಿ ಆತ್ಮಹತ್ಯೆ

    ನವದೆಹಲಿ: ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ 39 ವರ್ಷದ ವ್ಯಕ್ತಿಯೊಬ್ಬ ಮೆಟ್ರೋ ರೈಲು (Metro Train) ಬರುತ್ತಿದ್ದಂತೆ ಹಳಿಗೆ (ಹಳದಿ ಮೆಟ್ರೋ ಲೇನ್) ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ದೆಹಲಿಯ ಉದ್ಯೋಗ ಭವನ ಮೆಟ್ರೋ ನಿಲ್ದಾಣದಲ್ಲಿ (Udyog Bhawan Metro Station) ಘಟನೆ ನಡೆದಿದೆ. ದೆಹಲಿ ವಿಶ್ವವಿದ್ಯಾಲಯದ ಕಡೆಗೆ ಹೋಗುತ್ತಿದ್ದ ರೈಲಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಸುಮಾರು 35 ನಿಮಿಷಗಳ ಕಾಲ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿತ್ತು ಎಂದು ಡಿಎಂಆರ್‌ಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
    ದೆಹಲಿ ಪೊಲೀಸರ (Delhi Police) ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ 39 ವರ್ಷದ ವ್ಯಕ್ತಿ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ. ಹಾಗಾಗಿಯೇ ಆತ್ಮಹತ್ಯೆಗೆ ಮುಂದಾಗಿದ್ದಾನೆ ಎಂದು ತಿಳಿಸಿದ್ದಾರೆ.

    ಬುಧವಾರ ಬೆಳಗ್ಗೆ 11:30ರ ಸುಮಾರಿಗೆ ಘಟನೆ ನಡೆದಿದೆ. ಬಳಿಕ ರಾಜೀವ್ ಚೌಕ್ ಪೊಲೀಸ್ ಠಾಣೆಗೆ ಪಿಸಿಆರ್ ದೂರವಾಣಿ ಕರೆ ಮಾಡಿ ಮೆಟ್ರೋ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ – ಭಾರತದ ಸಾಧನೆ ಒಪ್ಪಿಕೊಳ್ಳಲು ಡಿಎಂಕೆಗೆ ಆಗಲ್ಲ ಎಂದ ಮೋದಿ

    ದೆಹಲಿಯ ಮುಕುಂದಪುರದಲ್ಲಿ ವಾಸಿಸುತ್ತಿದ್ದ ಮೃತ ವ್ಯಕ್ತಿ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅನಾರೋಗ್ಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಕೆಲಸ ಮಾಡಲೂ ಆಗುತ್ತಿರಲಿಲ್ಲ ಎಂದು ಅವರ ಪತ್ನಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಮೃತದೇಹವನ್ನು ಆರ್‌ಎಂಎಲ್‌ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಸಿಆರ್‌ಪಿಸಿಯ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಅಡಿಯಲ್ಲಿ ವಿಚಾರಣೆ ಪ್ರಕ್ರಿಯೆಗಳು ನಡೆಯುತ್ತಿವೆ. ಇದರೊಂದಿಗೆ ಮೃತ ವ್ಯಕ್ತಿಯ ಜೇಬಿನಿಂದ ಸಿಕ್ಕ ಚೀಟಿಯಲ್ಲಿ ಮೊಬೈಲ್‌ ನಂಬರ್‌ ಪತ್ತೆಯಾಗಿದ್ದು, ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: 2026 ರ ಅಸೆಂಬ್ಲಿ ಚುನಾವಣೆ ಹೊತ್ತಿಗೆ ಕೆಲವೇ ಮುಸ್ಲಿಮರು ಕಾಂಗ್ರೆಸ್‌ನಲ್ಲಿ ಉಳಿಯುತ್ತಾರೆ: ಅಸ್ಸಾಂ ಸಿಎಂ

    ಕಳೆದ ತಿಂಗಳು ಜನವರಿಯಲ್ಲಿ ಬೆಂಗಳೂರಿನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಮೆಟ್ರೋ ರೈಲು ಮುಂದೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿತ್ತು. ಕೇರಳ ಮೂಲದ 23 ವರ್ಷದ ಶಾರೋನ್‌ ರಾತ್ರಿ 7.12ರ ವೇಳೆಗೆ ರೈಲು ಬಂದಾಗ ಉದ್ದೇಶಪೂರ್ವಕವಾಗಿಯೇ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಕಿಗೆ ಬಂದಿತ್ತು.

  • ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ

    ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ

    ನವದೆಹಲಿ: ದೆಹಲಿ ಮೆಟ್ರೋ (Delhi Metro) ರೈಲುಗಳಲ್ಲಿ ಪ್ರಯಾಣಿಕರು 2 ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು (Alcohol Bottle) ಪ್ರಯಾಣದ ವೇಳೆ ಸಾಗಿಸಲು ಅನುಮತಿ ನೀಡಿದ ಡಿಎಂಆರ್‌ಸಿ (DMRC) ನಿರ್ಧಾರಕ್ಕೆ ದೆಹಲಿ ಸರ್ಕಾರದ ಅಬಕಾರಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಅಬಕಾರಿ ನಿಯಮಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ನಿಯಮ ಬದಲಿಸಲು ಅದು ಸೂಚಿಸಿದೆ.

    ಅಬಕಾರಿ ಕಾಯ್ದೆಯ ಪ್ರಕಾರ 1 ಸೀಲ್ ಮಾಡಿದ ಮದ್ಯದ ಬಾಟಲಿಯ ರಮ್, ವೋಡ್ಕಾ ಮತ್ತು ವಿಸ್ಕಿಯನ್ನು ಮಾತ್ರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಬಹುದು. ಆದರೆ ಮೆಟ್ರೋದಲ್ಲಿ 2 ಬಾಟಲಿ ಸಾಗಿಸಲು ಅನುಮತಿ ನೀಡಿದೆ.

    ದೆಹಲಿಯಲ್ಲಿ ಸಂಚರಿಸುವ ಮೆಟ್ರೋ ಎನ್‌ಸಿಆರ್ ನಗರಗಳಾದ ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ ಮತ್ತು ಫರಿದಾಬಾದ್ ನಡುವೆ ಸಂಚರಿಸುತ್ತಿದೆ. ಇದು ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೆ ಸಂಪರ್ಕಿಸುವ ಹಿನ್ನೆಲೆ ರಾಜ್ಯದ ಅಬಕಾರಿ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಆಕ್ಷೇಪಿಸಿದೆ.

    ಅಲ್ಲದೆ ದೆಹಲಿಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಮದ್ಯವನ್ನು ಮಾರಾಟ ಮಾಡುವಂತಿಲ್ಲ. ಆದರೆ ಗುರುಗ್ರಾಮದಂತಹ ನಗರಗಳಲ್ಲಿ 18 ವರ್ಷ ವಯಸ್ಸಿನವರಿಗೆ ಮದ್ಯವನ್ನು ಮಾರಾಟ ಮಾಡಬಹುದು. ಮೆಟ್ರೋ ಹೊಸ ನಿಯಮದಿಂದ ಅಪ್ರಾಪ್ತ ವಯಸ್ಕರು ಇತರ ಸ್ಥಳಗಳಿಂದ ಮೆಟ್ರೋ ರೈಲುಗಳ ಮೂಲಕ ಮದ್ಯವನ್ನು ತಂದು ದೆಹಲಿಯಲ್ಲಿ ಸೇವಿಸಬಹುದು ಎಂದು ಅಧಿಕಾರಿಗಳು ಆರೋಪಿಸಿದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ಬಾಟಲಿಗಳನ್ನು ತಂದರೆ ಅಬಕಾರಿ ನಿಯಮ ಉಲ್ಲಂಘನೆಯಾಗದಂತೆ 2 ಮದ್ಯದ ಬಾಟಲಿಗಳನ್ನು ಒಯ್ಯುವ ನಿಯಮವನ್ನು ಬದಲಾಯಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದರು.

    ಅಬಕಾರಿ ಇಲಾಖೆಯ ಕಾಳಜಿಯ ಅನುಗುಣವಾಗಿ ಪರೀಕ್ಷಿಸಲು ಭದ್ರತಾ ಏಜೆನ್ಸಿಗೆ ತಿಳಿಸಲಾಗುವುದು. ಪ್ರಯಾಣಿಕರು ಗಡಿಯಾಚೆಗಿನ ಸಾಗಣೆಯ ಸಮಯದಲ್ಲಿ ಮದ್ಯವನ್ನು ಸಾಗಿಸಲು ಸಂಬಂಧಿಸಿದ ರಾಜ್ಯ ಅಬಕಾರಿ ಇಲಾಖೆಯ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನಿರೀಕ್ಷಿಸಲಾಗುತ್ತಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲಿದ್ಯಾ ರೂಪಾಯಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Delhi Metro: ಮೈಬಿಸಿ ಏರಿಸುವ ಬಟ್ಟೆ ತೊಟ್ಟು ಯುವತಿಯರ ಡಾನ್ಸ್‌ – ನೆಟ್ಟಿಗರಿಂದ ಫುಲ್‌ ಕ್ಲಾಸ್‌!

    Delhi Metro: ಮೈಬಿಸಿ ಏರಿಸುವ ಬಟ್ಟೆ ತೊಟ್ಟು ಯುವತಿಯರ ಡಾನ್ಸ್‌ – ನೆಟ್ಟಿಗರಿಂದ ಫುಲ್‌ ಕ್ಲಾಸ್‌!

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ರೀಲ್ಸ್‌ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್‌ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್‌ (Dance) ಮಾಡಿ ರೀಲ್ಸ್‌ ಕ್ರಿಯೇಟ್‌ ಮಾಡುವುದು ಟ್ರೆಂಡ್‌ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಂತಹ ಸ್ಥಳಗಳ ಪೈಕಿ ದೆಹಲಿ ಮೆಟ್ರೋ (Delhi Metro) ತಾಣವೂ ಒಂದಾಗಿದೆ.

    ಹೌದು. ದೆಹಲಿ ಮೆಟ್ರೋದಲ್ಲಿ ನಡೆಯುವ ಘಟನೆಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇವೆ. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಬಿಕಿನಿ ತೊಟ್ಟು ಓಡಾಡಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ನಂತರ ಮೆಟ್ರೋ ಪ್ಲಾಫ್‌ಫಾರ್ಮ್‌ನಲ್ಲೇ ಪ್ರೇಮಿಗಳಿಬ್ಬರು ಲಿಪ್‌ ಲಾಕ್‌ ಮಾಡಿದ್ದ ದೃಶ್ಯ ವೈರಲ್‌ ಆಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಟ್ರಾನ್ಸ್​ಪರೆಂಟ್​ ಹಾಟ್‌ ಉಡುಗೆ ತೊಟ್ಟು ಡಾನ್ಸ್‌ ಮಾಡಿ ಪೇಚಿಗೆ ಸಿಲುಕಿದ್ದಳು. ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: Threadಗೆ ಸ್ಟಾರ್‌ ಕ್ರಿಕೆಟಿಗರಿಂದ ಫುಲ್‌ ಸಪೋರ್ಟ್‌ – ಎಲೋನ್‌ ಮಸ್ಕ್‌ಗೆ ಟಾಂಗ್‌ ಕೊಟ್ಟ ಅಶ್ವಿನ್‌

    ನೋಡುಗರ ಕಣ್ಣುಕುಕ್ಕುವಂತೆ ಹಾಟ್‌ ಉಡುಗೆ ತೊಟ್ಟು ಯುವತಿಯರಿಬ್ಬರು ಬಾಲಿವುಡ್‌ ಸಾಂಗ್‌ಗೆ ಡಾನ್ಸ್‌ ಮಾಡಿ ರೀಲ್ಸ್‌ ಮಾಡಿದ್ದಾರೆ. ಮೆಟ್ರೋ ಕೋಚ್​ ಒಳಗೆ ಪ್ರಯಾಣಿಕರು ಇದ್ದಾರೆ ಎಂಬ ಪರಿಜ್ಞಾನವೂ ಇಲ್ಲದೇ ಮೈಬಿಸಿ ಏರಿಸುವಂತೆ ಇಬ್ಬರೂ ಹಾಟ್‌ ಡ್ಯಾನ್ಸ್‌ ಮಾಡಿದ್ದಾರೆ. ಇದನ್ನೂ ಓದಿ: ಅಚ್ಚರಿಯಾದ್ರೂ ಸತ್ಯ- ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆ ಕಳ್ಳತನ!

    ಇದೇ ತಿಂಗಳ ಜುಲೈ 6ರಂದು ಹಸ್ನಾಜರೂರಿಹೈ ಹೆಸರಿನ ಟ್ವಿಟ್ಟರ್‌ ಖಾತೆಯಲ್ಲಿ ಯುವತಿಯರ ಡಾನ್ಸ್‌ ವೀಡಿಯೋ ಹಂಚಿಕೊಳ್ಳಲಾಗಿದ್ದು, 1.75 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮೊದಲು ಈ ವಿಡಿಯೋ ಕಂಡಾಗ ಆಕೆ ಡ್ಯಾನ್ಸ್‌ ಮೇಲೆ ಕೆಲ ನೆಟ್ಟಿಗರ ಗಮನ ಸೆಳೆದಿದ್ದು, ಆಕೆಯ ಬಟ್ಟೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಆಕೆಯ ನಡವಳಿಕೆ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ. ದೆಹಲಿ ಮೆಟ್ರೋ ರೈಲು ನಿಗಮಕ್ಕೂ (DMRC) ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ದೆಹಲಿ ಗಂಭೀರವಾಗಿ ಚೆಕಪ್‌ ಮಾಡಬೇಕು. ಇತ್ತೀಚೆಗೆ ದೆಹಲಿ ಮೆಟ್ರೋ ರೀಲ್ಸ್‌ ಮೇಕರ್ಸ್‌ಗಳಿಗೆ ಹೊಸ ಸ್ಥಳ ಆಗ್ಬಿಟ್ಟಿದೆ. ಡಿಎಂಆರ್‌ಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಹಿಂದೆ ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಬಿಕಿನಿ ತೊಟ್ಟು ಸಂಚರಿಸಿದ್ದಾಗ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಎಚ್ಚರಿಕೆ ನೀಡಿತ್ತು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇದನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿ ಮೆಟ್ರೋದಲ್ಲಿ ಯುವತಿ ಹಾಟ್‌ ಡ್ಯಾನ್ಸ್‌ – ನೆಟ್ಟಿಗರು ಶಾಕ್‌

    ದೆಹಲಿ ಮೆಟ್ರೋದಲ್ಲಿ ಯುವತಿ ಹಾಟ್‌ ಡ್ಯಾನ್ಸ್‌ – ನೆಟ್ಟಿಗರು ಶಾಕ್‌

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ರೀಲ್ಸ್‌ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್‌ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್‌ (Dance) ಮಾಡಿ ರೀಲ್ಸ್‌ ಕ್ರಿಯೇಟ್‌ ಮಾಡುವುದು ಟ್ರೆಂಡ್‌ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಂತಹ ಸ್ಥಳಗಳ ಪೈಕಿ ದೆಹಲಿ ಮೆಟ್ರೋ (Delhi Metro) ತಾಣವೂ ಒಂದಾಗಿದೆ.

     

    View this post on Instagram

     

    A post shared by Angel (@pari_sharma2319)

    ಹೌದು. ದೆಹಲಿ ಮೆಟ್ರೋದಲ್ಲಿ ನಡೆಯುವ ಘಟನೆಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇವೆ. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಮಾಜಿ ಬಿಗ್‌ಬಾಸ್‌ ತಾರೆ ಉರ್ಫಿ ಜಾವೇದ್‌ ನಂತೆಯೇ ಬಿಕಿನಿ ತೊಟ್ಟು ಓಡಾಡಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ನಂತರ ಮೆಟ್ರೋ ಪ್ಲಾಫ್‌ಫಾರ್ಮ್‌ನಲ್ಲೇ ಪ್ರೇಮಿಗಳಿಬ್ಬರು ಲಿಪ್‌ ಲಾಕ್‌ ಮಾಡಿದ್ದ ದೃಶ್ಯ ವೈರಲ್‌ ಆಗಿತ್ತು. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

    ಇದೀಗ ದೆಹಲಿ ಮೆಟ್ರೋ ಒಳಗೆ ಯುವತಿಯೊಬ್ಬಳು ಮೈಕಾಣುವ ಹಾಗೆ ಕಪ್ಪು ಬಣ್ಣದ ಟ್ರಾನ್ಸ್​ಪರೆಂಟ್​ ಬಟ್ಟೆ ಧರಿಸಿ, ಬಾಲಿವುಡ್​ನ ಗುಂಡೆ ಚಿತ್ರದ ಅಸ್ಸಲಾಮೆ ಇಷ್ಕ್‌ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾಳೆ. ಮೆಟ್ರೋ ಕೋಚ್​ ಒಳಗೆ ಪ್ರಯಾಣಿಕರು ಇದ್ದಾರೆ ಎಂಬ ಪರಿಜ್ಞಾನವೂ ಇಲ್ಲದೇ ಮೈಬಿಸಿ ಏರಿಸುವಂತೆ ಹಾಟ್‌ ಡ್ಯಾನ್ಸ್‌ ಮಾಡಿದ್ದಾಳೆ.

    ಕಳೆದ ಮೇ 21 ರಂದು ಅಪ್‌ಲೋಡ್‌ ಮಾಡಿದ್ದ ವೀಡಿಯೋ ಈಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮೊದಲು ಈ ವಿಡಿಯೋ ಕಂಡಾಗ ಆಕೆ ಡ್ಯಾನ್ಸ್‌ ಮೇಲೆ ಕೆಲ ನೆಟ್ಟಿಗರ ಗಮನ ಸೆಳೆದಿದ್ದು, ಆಕೆಯ ಬಟ್ಟೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಆಕೆಯ ನಡವಳಿಕೆ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ. ದೆಹಲಿ ಮೆಟ್ರೋ ರೈಲು ನಿಗಮ (DMRC) ಸೋಷಿಯಲ್ ಮೀಡಿಯಾ ಖಾತೆಗೆ ಈ ವಿಡಿಯೋ ಟ್ಯಾಗ್​ ಮಾಡಿ, ಯುವತಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Delhi Metro: ಮೆಟ್ರೋ ರೈಲಿನಲ್ಲಿ ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್‌

    ಈ ನಡುವೆ ಕೆಲವರು ಯುವತಿ ಹಿಂದೆ ನಿಂತಿದ್ದ ಅಂಕಲ್‌ ಒಬ್ಬರ ರಿಯಾಕ್ಷನ್‌ ಕಂಡು ಬಿದ್ದು ಬಿದ್ದು ನಗುತ್ತಿದ್ದಾರೆ. ಇದ್ದಕ್ಕಿದ್ದಂತೆ ಯುವತಿಯ ಡ್ಯಾನ್ಸ್‌ ಕಂಡು ಅಂಕಲ್‌ ಶಾಕ್‌ ಆಗಿ ನೋಡುತ್ತಿರುವುದು ಪೇಚಿಗೆ ಸಿಲುಕಿದೆ.

    ಈ ಹಿಂದೆ ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಬಿಕಿನಿ ತೊಟ್ಟು ಸಂಚರಿಸಿದ್ದಾಗ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಎಚ್ಚರಿಕೆ ನೀಡಿತ್ತು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇದನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿತ್ತು.

  • Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

    Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

    – `ಉರ್ಫಿ ಜಾವೇದ್ ಯಾರೂ ಅಂತಾನೇ ಗೊತ್ತಿರಲಿಲ್ಲ’

    ನವದೆಹಲಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಫ್ಯಾಷನ್ ತಾರೆ ಉರ್ಫಿ ಜಾವೇದ್ (Urfi Javed) ರೀತಿಯಲ್ಲಿ 19ರ ಯುವತಿ ಬಿಕಿನಿ ತೊಟ್ಟು ದೆಹಲಿ ಮೆಟ್ರೋದಲ್ಲಿ (Delhi Metro) ಸಂಚರಿಸಿದ್ದಳು. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಹರಿದಾಡಿತ್ತು. ಯುವತಿಯ ನಡೆಗೆ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

    ಘಟನೆ ಬೆಳಕಿಗೆ ಬಂದ ಒಂದು ದಿನದ ಬಳಿಕ ಯುವತಿ ನೆಟ್ಟಿಗರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟಿದ್ದಾಳೆ. ನಾನು ಏನು ಬೇಕಾದರೂ ಧರಿಸುತ್ತೇನೆ, ಅದು ನನ್ನ ಸ್ವಾತಂತ್ರ್ಯ. ಆದ್ರೆ ನಾನು ಇದನ್ನು ಪ್ರಚಾರಕ್ಕಾಗಿ, ಸ್ಟಂಟ್ ಮಾಡೋಕಾಗಲಿ ಅಥವಾ ಫೇಮಸ್ ಆಗ್ಬೇಕು ಅಂತಾ ಮಾಡಿಲ್ಲ ಎಂದು ಹೇಳಿದ್ದಾಳೆ

    ಅಲ್ಲದೇ ನನಗೆ ಉರ್ಫಿ ಜಾವೇದ್ ಯಾರೂ ಅಂತಾನೆ ಗೊತ್ತಿರಲಿಲ್ಲ. ನನ್ನ ಸ್ನೇಹಿತೆ ಆಕೆಯ ಫೋಟೋ ತೋರಿಸಿದಳು. ಆಮೇಲೆ ಆಕೆ ಸ್ಟೋರಿ ನನಗೆ ಗೊತ್ತಾಗಿದ್ದು ಎಂದು ತಿಳಿಸಿದ್ದಾಳೆ.

    ನನಗೆ ಈ ರೀತಿ ಮಾಡಬೇಕು ಎಂಬ ಯೋಚನೆ ಬಂದಿದ್ದು ಒಂದು ದಿನದಲ್ಲಿ ಅಲ್ಲ. ನಾನು ಸಹ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ್ದೇನೆ. ಅಲ್ಲಿ ನನಗೆ ಬೇಕಾದ್ದನ್ನು ಮಾಡಲು ಅವಕಾಶ ಇರಲಿಲ್ಲ. ಆದ್ದರಿಂದ ಒಂದು ದಿನ ನಾನು ಬಯಸಿದಂತೆ ಇರಬೇಕು ಅಂತಾ ಹೀಗೆ ಮಾಡಿದೆ. ಕೆಲವು ತಿಂಗಳಿನಿಂದ ನಾನು ಹೀಗೆಯೇ ಓಡಾಡುತ್ತಿದ್ದೇನೆ, ಆದ್ರೆ ಈಗ ವೈರಲ್ ಆಗಿದೆ. ದೆಹಲಿ ನೇರಳೆ ಮಾರ್ಗದಲ್ಲಿ ಮಾತ್ರ ನನಗೆ ಪ್ರಯಾಣಿಸಲು ಅನುಮತಿ ನೀಡಲಿಲ್ಲ. ಉಳಿದೆಲ್ಲೂ ಎಲ್ಲೂ ನನಗೆ ಸಮಸ್ಯೆಯಾಗಿಲ್ಲ ಎಂದು 19ರ ಯುವತಿ ಸ್ಪಷ್ಟನೆ ನೀಡಿದ್ದಾಳೆ.

    ಈ ಕುರಿತು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಹೇಳಿಕೆ ಬಿಡುಗಡೆ ಮಾಡಿದ್ದು, ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇಧನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಬಿಕಿನಿ ಗರ್ಲ್; ಉರ್ಫಿ ಜಾವೇದ್ ತಂಗಿ ಎಂದ ನೆಟ್ಟಿಗರು

    ಏನಿದು ಘಟನೆ?
    ಎರಡು ದಿನಗಳ ಹಿಂದೆಯಷ್ಟೇ ದೆಹಲಿಯ ಮೆಟ್ರೋದಲ್ಲಿ ಯುವತಿಯೊಬ್ಬಳು ಬಿಕಿನಿ ತೊಟ್ಟು ಓಡಾಡಿದ್ದಳು. ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಸುಮಾರು 9 ಸೆಕೆಂಡುಗಳ ವೀಡಿಯೋದಲ್ಲಿ, ಯುವತಿ ಬಿಕಿನಿ ಧರಿಸಿ ಸಂಚರಿಸುತ್ತಿರುವುದು ಕಂಡುಬಂದಿತ್ತು.

    ಯುವತಿ ಮೆಟ್ರೋದಲ್ಲಿ ಸಂಚರಿಸುತ್ತಿದ್ದ ವೇಳೆ ತೊಡೆಯ ಮೇಲೆ ಬ್ಯಾಗ್ ಇಟ್ಟುಕೊಂಡು ಕುಳಿತಿದ್ದಳು. ಆಕೆ ಎದ್ದು ನಿಂತಾಗ ಬಿಕಿನಿ ಧರಿಸಿರುವುದು ಕಂಡಿದೆ, ತಕ್ಷಣವೇ ಚಾಲಾಕಿಯೊಬ್ಬ ವೀಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದನು.

    ನೆಟ್ಟಿಗರಿಂದ ಫುಲ್ ಕ್ಲಾಸ್:
    ದೆಹಲಿ ಯುವತಿಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಕೆಲವರು ಇದು ಪ್ರಜಾಪ್ರಭುತ್ವ, ಸ್ವಾತಂತ್ರ‍್ಯದ ಹಕ್ಕು ಎಂದು ಆಕೆಯನ್ನು ಬೆಂಬಲಿಸಿದರೆ ಉಳಿದವರು ಆಕೆಯ ನಡವಳಿಕೆಯನ್ನು ಖಂಡಿಸಿದ್ದರು. ಇದನ್ನೂ ಓದಿ: ಸಿಸಿ ಕ್ಯಾಮೆರಾಗೆ ಬಟ್ಟೆ ಮುಚ್ಚಿ ಹುಂಡಿ ಕಳ್ಳತನ- ಅರ್ಚಕರಿಂದಲೇ ಕೃತ್ಯ ಆರೋಪ

    ಮೆಟ್ರೋ ಸಿಬ್ಬಂದಿ ಆಕೆಯನ್ನು ಹೇಗಾದರೂ ಒಳಗೆ ಬಿಟ್ಟರು? ಐಪಿಸಿ ಸೆಕ್ಷನ್ 293 (ಯುವ ವ್ಯಕ್ತಿಗೆ ಅಶ್ಲೀಲ ವಸ್ತುಗಳನ್ನು ಮಾರಾಟ ಮಾಡುವುದು), ಸೆಕ್ಷನ್ 294ರ (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಅಡಿಯಲ್ಲಿ ಕೇಸ್ ದಾಖಲಿಸಬಹುದು ಎಂದು ಕಾಮೆಂಟ್ ಮಾಡಿದ್ದರು. ಈ ಮಧ್ಯೆ ಮತ್ತಷ್ಟು ಮಂದಿ ಆಕೆ? ದೆಹಲಿಯ ಮೆಟ್ರೊ ಹುಡುಗಿ’, ಉರ್ಫಿ ಜಾವೇದ್‌ನಿಂದ ಪ್ರೇರಣೆ ಪಡೆದಿರಬೇಕು, ಪಾಪ ಬಟ್ಟೆ ಖರೀದಿಸಲು ಹಣವಿಲ್ಲ ಅನ್ನಿಸುತ್ತೆ ಎಂದು ಹಾಸ್ಯ ಮಾಡಿದ್ದರು.

  • ಮೆಟ್ರೋದಲ್ಲಿ ಬಿಕಿನಿ ಗರ್ಲ್; ಉರ್ಫಿ ಜಾವೇದ್ ತಂಗಿ ಎಂದ ನೆಟ್ಟಿಗರು

    ಮೆಟ್ರೋದಲ್ಲಿ ಬಿಕಿನಿ ಗರ್ಲ್; ಉರ್ಫಿ ಜಾವೇದ್ ತಂಗಿ ಎಂದ ನೆಟ್ಟಿಗರು

    ನವದೆಹಲಿ: ಬಿಗ್‌ ಬಾಸ್ ಮಾಜಿ ಸ್ಪರ್ಧಿ, ಫ್ಯಾಷನ್‌ ತಾರೆ ಉರ್ಫಿ ಜಾವೇದ್ (Urfi Javed) ತನ್ನ ವಿಭಿನ್ನ ಉಡುಗೆಗಳಿಂದಲೇ ಫೇಮಸ್‌ ಆಗಿದ್ದಾರೆ. ಅದೇ ರೀತಿ ದೆಹಲಿಯಲ್ಲಿ ಯುವತಿಯೊಬ್ಬಳು ಬಿಕಿನಿ (Bikini) ತೊಟ್ಟು ದೆಹಲಿ ಮೆಟ್ರೋದಲ್ಲಿ ಸಂಚರಿಸಿರುವುದು ಕಂಡುಬಂದಿದೆ.

    ಎನ್‌ಸಿಎಂ ಇಂಡಿಯಾ ಕೌನ್ಸಿಲ್‌ ಫಾರ್‌ ಮೆನ್‌ ಅಫೇರ್ಸ್‌ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಸುಮಾರು 9 ಸೆಕೆಂಡುಗಳ ವೀಡಿಯೋದಲ್ಲಿ, ಯುವತಿ ಬಿಕಿನಿ ಧರಿಸಿ ಸಂಚರಿಸಿರುವುದು ಕಂಡುಬಂದಿದೆ. ಇದನ್ನೂ ಓದಿ: ಮೈತುಂಬಾ ಬಟ್ಟೆ ಹಾಕುವೆ ಎನ್ನುತ್ತಾ ಏಪ್ರಿಲ್ ಫೂಲ್ ಮಾಡಿದ ಉರ್ಫಿ

    ಯುವತಿ ದೆಹಲಿ ಮೆಟ್ರೋದಲ್ಲಿ (Delhi Metro Girl) ಸಂಚರಿಸುತ್ತಿದ್ದ ವೇಳೆ ತೊಡೆಯ ಮೇಲೆ ಬ್ಯಾಗ್‌ ಇಟ್ಟುಕೊಂಡು ಕುಳಿತಿದ್ದಳು. ಆಕೆ ಎದ್ದು ನಿಂತಾಗ ಬಿಕಿನಿ ತೊಟ್ಟಿರುವುದು ಕಂಡಿದೆ. ತಕ್ಷಣವೇ‌ ಚಾಲಾಕಿಯೊಬ್ಬ ವೀಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. 

    ನೆಟ್ಟಿಗರಿಂದ ಫುಲ್‌ ಕ್ಲಾಸ್‌: ದೆಹಲಿ ಯುವತಿಯ ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದಂತೆ ನೆಟ್ಟಿಗರು ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೆಲವರು ಇದು ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಹಕ್ಕು ಎಂದು ಆಕೆಯನ್ನು ಬೆಂಬಲಿಸಿದರೆ ಉಳಿದವರು ಆಕೆಯ ನಡವಳಿಕೆಯನ್ನು ಖಂಡಿಸಿದ್ದಾರೆ. ಇದನ್ನೂ ಓದಿ: IPL 2023 – ಚಿಯರ್‌ ಗರ್ಲ್ಸ್‌ ಝಲಕ್‌ ನೋಡಿ

    ಮೆಟ್ರೋ ಸಿಬ್ಬಂದಿ ಆಕೆಯನ್ನು ಹೇಗಾದರೂ ಒಳಗೆ ಬಿಟ್ಟರು? ಐಪಿಸಿ ಸೆಕ್ಷನ್‌ 293 (ಯುವ ವ್ಯಕ್ತಿಗೆ ಅಶ್ಲೀಲ ವಸ್ತುಗಳನ್ನು ಮಾರಾಟ ಮಾಡುವುದು), ಸೆಕ್ಷನ್‌ 294ರ (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಅಡಿಯಲ್ಲಿ ಕೇಸ್‌ ದಾಖಲಿಸಬಹುದು ಎಂದು‌ ಕಾಮೆಂಟ್‌ ಮಾಡಿದ್ದಾರೆ. ಈ ಮಧ್ಯೆ ಮತ್ತಷ್ಟು ಮಂದಿ ಆಕೆಗೆ ʻದೆಹಲಿಯ ಮೆಟ್ರೊ ಹುಡುಗಿʼ ಅಂತಾ ಬಿರುದು ಕೊಟ್ಟಿದ್ದು, ಉರ್ಫಿ ಜಾವೇದ್‌ನಿಂದ ಪ್ರೇರಣೆ ಪಡೆದಿರಬೇಕು, ಪಾಪ ಬಟ್ಟೆ ಖರೀದಿಸಲು ಹಣವಿಲ್ಲ ಅನ್ನಿಸುತ್ತೆ ಎಂದು ಹಾಸ್ಯ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಂಆರ್‌ಸಿ ನಿರ್ದೇಶಕ ಅನುಜ್ ದಯಾಳ್, ಪ್ರತಿದಿನ 60 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಆಕೆಯೊಬ್ಬಳನ್ನೇ ಪತ್ತೆಹಚ್ಚಲು ಸಾಧ್ಯವಿಲ್ಲ. ಆದರೆ ಆಕೆ ಅನುಚಿತ ಉಡುಗೆ ಧರಿಸಿರುವುದಕ್ಕಾಗಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.

  • ಮೆಟ್ರೋದಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿದ್ದ ಟೆಕ್ಕಿಯ ಬಂಧನ

    ಮೆಟ್ರೋದಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿದ್ದ ಟೆಕ್ಕಿಯ ಬಂಧನ

    -ಮಹಿಳೆ ಬಳಿ ಬಂದು ಪ್ಯಾಂಟ್ ಜಿಪ್ ಬಿಚ್ಚಿದ್ದ ಯುವಕ
    -ಟ್ವಿಟ್ಟರ್ ನಲ್ಲಿ ಮಹಿಳೆಯಿಂದ ದೂರು
    -28 ವರ್ಷದ ಅವಿವಾಹಿತ ಸಿವಿಲ್ ಇಂಜಿನಿಯರ್

    ನವದೆಹಲಿ: ಮೆಟ್ರೋದಲ್ಲಿ ಪ್ಯಾಂಟ್ ಜಿಪ್ ಬಿಚ್ಚಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ 28 ವರ್ಷದ ಟೆಕ್ಕಿಯನ್ನು ಬಂಧಿಸಲಾಗಿದೆ.

    ಗುರುಗ್ರಾಮದ ಸೆಕ್ಟರ್ 22ರ ನಿವಾಸಿ ಅಭಿಲಾಷ್ (28) ಬಂಧಿತ ಸಿವಿಲ್ ಇಂಜಿನಿಯರ್. ಕರನಾಲದ ಮೂಲ ನಿವಾಸಿಯಾಗಿರುವ ಅಭಿಲಾಷ್ ಪ್ರತಿಷ್ಟಿತ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಗುರುಗ್ರಾಮದಲ್ಲಿ ವಾಸವಾಗಿದ್ದನು. ಟೆಕ್ಕಿಯ ಬಂಧನ ಡಿಎಂಆರ್ ಸಿ ತನ್ನ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದೆ.

    ಕೆಲವು ದಿನಗಳ ಹಿಂದೆ ದೆಹಲಿ ಮೆಟ್ರೋದ ಹಳದಿ ಮಾರ್ಗದಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆ ಬಳಿ ಬಂದ ಟೆಕ್ಕಿ ತನ್ನ ಪ್ರೈವೇಟ್ ಪಾರ್ಟ್ ತೋರಿಸಿ ಅಸಭ್ಯವಾಗಿ ವರ್ತಿಸಿದ್ದನು. ಯುವಕನ ಅಸಭ್ಯ ವರ್ತನೆ ಕಂಡ ಮಹಿಳೆ ಆತನ ಫೋಟೋ ಕ್ಲಿಕ್ಕಿಸಿ ಟ್ವೀಟ್ ಮೂಲಕ ಡಿಎಂಆರ್ ಸಿ ಗೆ ದೂರು ಸಲ್ಲಿಸಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ, ಅಭಿಲಾಶ್ ಬಳಸುತ್ತಿದ್ದ ಮೆಟ್ರೋ ಕಾರ್ಡ್, ಫೋನ್ ನಂಬರ್ ಮೂಲಕ ಆತನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಿಳೆಯ ಟ್ವೀಟ್: ಆ ಯುವಕ ನನ್ನ ಬಳಿ ಯಾವಾಗ ಬಂದ ಅಂತ ಗೊತ್ತಾಗಲೇ ಇಲ್ಲ. ಬಂದವನೇ ತನ್ನ ಪ್ಯಾಂಟ್ ಜಿಪ್ ಬಿಚ್ಚಿ ಪ್ರೈವೇಟ್ ಪಾರ್ಟ್ ಹೊರಗಡೆ ತೆಗೆದನು. ಆ ಸಮಯದಲ್ಲಾದ ಕೆಟ್ಟ ಅನುಭವ ನನಗೆ ಇನ್ನು ನೆನಪಿದೆ. ಹಾಗಾಗಿ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಟೆಕ್ಕಿಯ ಫೋಟೋ ಟ್ವೀಟ್ ಮಾಡಿದ್ದರು.

    ಡಿಎಂಆರ್ ಸಿ ಪ್ರತಿಕ್ರಿಯೆ: ಸುಲ್ತಾನಪುರ ಪ್ರಕರಣಕ್ಕೆ ಸಂಬಂಧಿಸಿದ ಓರ್ವನನ್ನು ಡಿಎಂಆರ್‍ಸಿ ಭದ್ರತಾ ಸಿಬ್ಬಂದಿ ಪೊಲೀಸರ ಸಹಾಯದೊಂದಿಗೆ ಬಂಧಿಸಿದ್ದಾರೆ. ಮೆಟ್ರೋ ಪ್ರಯಾಣದಲ್ಲಿ ನಿಮ್ಮೊಂದಿಗೆ ಯಾರಾದ್ರೂ ಅಸಭ್ಯವಾಗಿ ವರ್ತಿಸಿದ್ರೆ ಎಮೆರ್ಜಿನ್ಸಿ ಬಟನ್ ಒತ್ತಬಹುದು. ಕೂಡಲೇ ನೀವು ಟ್ರೈನ್ ಆಪರೇಟರ್ ನ್ನು ಸಂಪರ್ಕಿಸಿ ಕೋಚ್ ನಂಬರ್ ನೀಡಬೇಕು. ಅಂತಹ ವ್ಯಕ್ತಿಯನ್ನು ನಿಲ್ದಾಣದಲ್ಲಿ ಹೊರಹೋಗುವ ಮೊದಲೇ ಬಂಧಿಸಲಾಗುವುದು.

  • ಮೆಟ್ರೋ ನಿಲ್ದಾಣದಲ್ಲಿ 4.64 ಲಕ್ಷ ರೂ. ನಕಲಿ ನೋಟು ಪತ್ತೆ

    ಮೆಟ್ರೋ ನಿಲ್ದಾಣದಲ್ಲಿ 4.64 ಲಕ್ಷ ರೂ. ನಕಲಿ ನೋಟು ಪತ್ತೆ

    ನವದೆಹಲಿ: ಸಿಐಎಸ್‍ಎಫ್ (Central Industrial Security Force) ಅಧಿಕಾರಿಗಳು ದೆಹಲಿಯ ಕಾಶ್ಮೇರ್ ಮೆಟ್ರೋ ನಿಲ್ದಾಣದ ಗೇಟ್ ಬಳಿ 500 ರೂ. ಮುಖಬೆಲೆಯ 4,64,000 ರೂ. ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

    ಶನಿವಾರ ಸಂಜೆ 5.30ಕ್ಕೆ ಕಾಶ್ಮೇರ್ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 8ರಲ್ಲಿ ಅನುಮಾನಸ್ಪಾದ ಬ್ಯಾಗ್ ಪತ್ತೆಯಾಗಿತ್ತು. ಕೂಡಲೇ ನಿಲ್ದಾಣದ ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಬ್ ಇನ್‍ಸ್ಪೆಕ್ಟರ್ ಬೀರೇಂದ್ರ ಕುಮಾರ್ ಸ್ಥಳೀಯ ಪೊಲೀಸರಿಗೆ ಮತ್ತು ಬಾಂಬ್ ನಿಷ್ಕಿಯ ತಂಡಕ್ಕೆ ಮಾಹಿತಿ ರವಾನಿಸಿದ್ದಾರೆ.

    ಬ್ಯಾಗ್ ಪತ್ತೆಯಾದ ಕೂಡಲೇ ಗೇಟ್ ನಂಬರ್ 8 ರಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದಾಗ ನಕಲಿ ನೋಟುಗಳ ಕಂತೆ ಪತ್ತೆಯಾಗಿದೆ. ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮೆಟ್ರೋ ನಿಲ್ದಾಣದ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

    ಇಂದು ಸಿಐಎಸ್‍ಎಫ್ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದು, ಬ್ಯಾಗಿನಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ದೊರೆತಿಲ್ಲ. ಬ್ಯಾಗಿನಲ್ಲಿ 500 ರೂ. ಮುಖಬೆಲೆಯ 4.64 ಲಕ್ಷ ರೂ. ನಕಲಿ ನೋಟು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.