Tag: Delhi Meeting

  • ದಕ್ಷಿಣ ಕನ್ನಡದಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢ

    ದಕ್ಷಿಣ ಕನ್ನಡದಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢ

    ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಇಂದು ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಕೊರೊನಾ ಸೋಂಕಿನಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದರು, ದಿನೇ ದಿನೇ ಸೋಂಕು ಜಾಸ್ತಿಯಾಗುತ್ತಾನೆ ಇದೆ. ಹಾಗೇಯೇ ಇಂದು ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಬ್ಬರು ದೆಹಲಿಯಲ್ಲಿ ನಡೆದ ಧಾರ್ಮಿಕರ ಸಭೆಯಲ್ಲಿ ಭಾಗವಹಿಸಿ ಬಂದಿದ್ದರು ಎಂದು ತಿಳಿದು ಬಂದಿದೆ.

    ತೊಕ್ಕೊಟ್ಟು ಮೂಲದ ಆಟೋ ಚಾಲಕನೋರ್ವ ಇತ್ತೀಚೆಗೆ ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಾಲಕ ಇದ್ದ ವಸತಿ ಸಂಕೀರ್ಣವನ್ನು ಪೂರ್ತಿ ಲಾಕ್ ಡೌನ್ ಮಾಡಲು ಉಳ್ಳಾಲ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಸ್ಥಳೀಯರಿಂದ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

  • ದೆಹಲಿಗೆ ಹಾಸನದಿಂದಲೂ 16 ಜನ ಹೋಗಿದ್ದು, 6 ಜನ ವಾಪಸ್ ಆಗಿದ್ದಾರೆ: ಡಿಸಿ

    ದೆಹಲಿಗೆ ಹಾಸನದಿಂದಲೂ 16 ಜನ ಹೋಗಿದ್ದು, 6 ಜನ ವಾಪಸ್ ಆಗಿದ್ದಾರೆ: ಡಿಸಿ

    ಹಾಸನ: ಕೊರೊನಾ ಸೋಂಕಿನ ಹಾಟ್‍ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ದೆಹಲಿ ಧಾರ್ಮಿಕ ಸಭೆಗೆ ಹಾಸನದಿಂದ 16 ಜನ ಹೋಗಿದ್ದು, ಅವರಲ್ಲಿ 6 ಜನ ಮರಳಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.

    ವಾಪಸ್ ಬಂದ ಎಲ್ಲರನ್ನೂ ನಾವು ಗುರುತಿಸಿದ್ದೇವೆ. ಉಳಿದವರು ದೆಹಲಿ, ವಾರಂಗಲ್, ಕುಂದಾಪುರ, ಜಮ್ಮು ಕಾಶ್ಮೀರದಲ್ಲಿ ಇರುವ ಮಾಹಿತಿ ಲಭ್ಯವಾಗಿದೆ. ಹಾಸನ ಜಿಲ್ಲೆಯಲ್ಲಿ ಇರುವವರನ್ನು ಪ್ರತ್ಯೇಕಿಸಿ ನಿಗಾವಹಿಸಲಾಗುತ್ತಿದೆ. ಯಾರಿಗೂ ಈವರೆಗೆ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಇರುವ ಆರು ಮಂದಿಯಲ್ಲಿ ಒಬ್ಬರು ಕೊಡಗಿನವರಾಗಿದ್ದು, ಅವರೂ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ದೆಹಲಿಗೆ ಹೋಗಿ ಬಂದವರ ಬಗ್ಗೆ ಜಿಲ್ಲೆಯ ಜನರಿಗೆ ತಿಳಿದಿದ್ದರೆ ಅವರ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ನೇರವಾಗಿ ಬಂದು ತಿಳಿಸಬಹುದು ಅಥವಾ ಹೆಲ್ಪ್‍ಲೈನ್ ಮುಖಾಂತರ ಮಾಹಿತಿ ನಿಡಬಹುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇದುವರೆಗೂ ಯಾರಿಗೂ ಕೊರೊನ ಪಾಸಿಟಿವ್ ಕಂಡುಬಂದಿಲ್ಲ, ಜಿಲ್ಲೆಯ ಜನ ಧೈರ್ಯವಾಗಿರುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.