Tag: Delhi Market

  • ಹೊನ್ನಾವರ ರೈತರಿಂದ ಪಾಕ್‌ಗೆ ರಫ್ತಾಗುತ್ತಿದ್ದ ವೀಳ್ಯದೆಲೆ ನಿರ್ಬಂಧ

    ಹೊನ್ನಾವರ ರೈತರಿಂದ ಪಾಕ್‌ಗೆ ರಫ್ತಾಗುತ್ತಿದ್ದ ವೀಳ್ಯದೆಲೆ ನಿರ್ಬಂಧ

    ಕಾರವಾರ: ಪಹಲ್ಗಾಮ್ ಉಗ್ರರ ನರಮೇಧದ ನಂತರ ಪಾಕ್‌ ವಿರುದ್ಧ ಭಾರತ ಹಲವು ರೀತಿಯ ಕ್ರಮಗಳನ್ನು ಜರುಗಿಸಿದೆ. ಪಾಕ್ ಧ್ವಜ, ಸರಕುಗಳ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳಿಗೆ ವಾರ್ನಿಂಗ್‌ ಸಹ ಕೊಟ್ಟಿದೆ. ಈ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರೈತರು (Farmers) ಪಾಕಿಸ್ತಾನಕ್ಕೆ ರಫ್ತಾಗುತಿದ್ದ ವೀಳ್ಯದೆಲೆ (Betel) ಉತ್ಪನ್ನಕ್ಕೆ ಶಾಶ್ವತವಾಗಿ ನಿರ್ಬಂಧ ಹೇರಲು ನಿರ್ಧರಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಪಾತ್ರದ ರೈತರಿಂದ ದೆಹಲಿ ವರ್ತಕರು ವೀಳ್ಯದೆಲೆ ಖರೀದಿಸಿ ಪಾಕಿಸ್ತಾನಕ್ಕೆ (Pakistan) ರಫ್ತು ಮಾಡುತಿದ್ದರು. ಆದರೀಗ ನಮಗೆ ನಷ್ಟವಾದರೂ ಪರ್ವಾಗಿಲ್ಲ ಪಾಕಿಸ್ತಾನಕ್ಕೆ ವೀಳ್ಯದೆಲೆ ಕಳುಹಿಸುವುದನ್ನ ನಿರ್ಬಂಧ ಮಾಡ್ತೀವಿ ಅಂತ ಒಕ್ಕೊರಲಿನಿಂದ ಹೇಳ್ತಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾರತದ ಮುಂದೆ ಮಂಡಿಯೂರಿದ ಪಾಕ್‌ – ಶಾಂತಿ ಮಾತುಕತೆಗೆ ಪಾಕ್‌ ಪ್ರಧಾನಿ ಆಹ್ವಾನ

    ಹೊನ್ನಾವರದ (Honnavar) ಶರಾವತಿ ನದಿ ತೀರ ಭಾಗದಲ್ಲಿ ಬೆಳೆಯುವ ವೀಳ್ಯದೆಲೆ ದೇಶ-ವಿದೇಶಗಳಲ್ಲೂ ಹೆಸರುವಾಸಿ. ʻರಾಣಿ ವೀಳ್ಯದೆಲೆʼ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ವೀಳ್ಯದೆಲೆ ಹೆಚ್ಚು ಕಾಲ ಬಾಳಿಕೆ, ವಿಶೇಷ ಕಾರ ಮತ್ತು ಸ್ವಾದ ಹೊಂದಿದೆ. ಈ ವೀಳ್ಯೆದೆಲೆಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆಯಾಗಿದೆ. ಇದನ್ನೂ ಓದಿ: Namma Metro: ಹಳದಿ ಮಾರ್ಗಕ್ಕೆ 3ನೇ ರೈಲು – ಜೂನ್‌ನಲ್ಲಿ ಸಂಚಾರ ಆರಂಭ ಸಾಧ್ಯತೆ

    ಈ ಮೊದಲು ಮುಂಬೈ ಮಾರುಕಟ್ಟೆ ಮೂಲಕ ಪಾಕಿಸ್ತಾನಕ್ಕೆ ವೀಳ್ಯದೆಲೆ ರಫ್ತಾಗುತಿತ್ತು. ನಂತರ ದೆಹಲಿ ಮಾರುಕಟ್ಟೆ ಮೂಲಕ ಪಾಕಿಸ್ತಾನಕ್ಕೆ ರಫ್ತಾಗುತಿತ್ತು. ಐತಿಹಾಸಿಕ ರಫ್ತು ವಹಿವಾಟು ಹೊಂದಿದ್ದ ಈ ವೀಳ್ಯದೆಲೆ ಪಾಕಿಸ್ತಾನಿಯರ ಅಚ್ಚುಮೆಚ್ಚು ಕೂಡ ಆಗಿತ್ತು. ಹಾಗಾಗಿಯೇ ಇಲ್ಲಿನ ರೈತರು ಪ್ರತಿ ಎಕರೆಗೆ ಕನಿಷ್ಠ 3 ಲಕ್ಷ ರೂ.ನಷ್ಟು ಲಾಭ ಗಳಿಸುತ್ತಿದ್ದರು. ಇದೀಗ ರೈತರ ಈ ನಿರ್ಧಾರದಿಂದ ಒಂದು ಎಲೆ 3 ರೂ. 30 ಪೈಸೆಗೆ ಕುಸಿದಿದೆ. ಇದನ್ನೂ ಓದಿ: ಡಮ್ಮಿ ಜೆಟ್‌, 15 ಬ್ರಹ್ಮೋಸ್‌ ಕ್ಷಿಪಣಿ ದಾಳಿ, 11 ಏರ್‌ಬೇಸ್‌ ಧ್ವಂಸ – ಪಾಕ್‌ ಕರೆಯ ಹಿಂದಿದೆ ಭಾರತದ ಪರಾಕ್ರಮದ ಕಥೆ

    ಸದ್ಯ ಕೋಲ್ಕತ್ತಾ, ಉತ್ತರ ಪ್ರದೇಶ ಮಾರುಕಟ್ಟೆಗಳಿಗೆ ಮಾತ್ರ ಎಲೆಯನ್ನ ಸರಬರಾಜು ಮಾಡಲಾಗುತ್ತಿದೆ. ಇತ್ತ ದೆಹಲಿ ವರ್ತಕರ ಜೊತೆಗೆ ಪಾಕಿಸ್ತಾನಕ್ಕೆ ರಪ್ತು ಮಾಡುವ ದಳ್ಳಾಳಿಗಳಿಗೂ ಶಾಶ್ವತ ನಿರ್ಬಂಧ ಹೇರಿದ್ದಾರೆ. ಇದನ್ನೂ ಓದಿ: ‘ಆಂಧ್ರ ಕಿಂಗ್’ ಆದ ಉಪೇಂದ್ರ ಕಟೌಟ್ ಮುಂದೆ ರಾಮ್ ಪೋತಿನೇನಿ ಸಂಭ್ರಮ- ಟೀಸರ್ ಔಟ್

  • ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ

    ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ

    ನವದೆಹಲಿ: ಕಳೆದ ಕೆಲವು ದಿನಗಳಿಂದ ದೆಹಲಿ, ಮುಂಬೈ (Delhi, Mumbai) ಸೇರಿ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಗಗನಕ್ಕೇರುತ್ತಿದ್ದು, ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 40 ರಿಂದ 50 ರೂ.ನಷ್ಟಿದ್ದ ಈರುಳ್ಳಿ ಬೆಲೆ (Onion Price) ಸಗಟು ಮಾರುಕಟ್ಟೆಯಲ್ಲಿ 70 ರಿಂದ 80 ರೂ.ಗಳಿಗೆ ಏರಿಕೆಯಾಗಿದೆ.

    ಈರುಳ್ಳಿ ಬೆಲೆ ಏರಿಕೆ ಕಂಡಿರುವುದು ರೈತರ (Farmers) ಮೊಗದಲ್ಲಿ ಸಂಸತ ತಂದರೆ, ಮತ್ತೊಂದೆಡೆ ಜನರಿಗೆ ಕಣ್ಣೀರು ತರಿಸುವಂತಾಗಿದೆ. ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ (Metro Cities), ಪ್ರತಿ ಕೆಜಿ ಈರುಳ್ಳಿ ಬೆಲೆ ನವೆಂಬರ್‌ನಲ್ಲಿ 80 ರೂ.ಗಳಿಗೆ ತಲುಪಿದ್ದು, ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದಂತಾಗಿದೆ. ಇದನ್ನೂ ಓದಿ: Manipur | ಭದ್ರತಾ ಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿ – 11 ಶಂಕಿತ ಕುಕಿ ಬಂಡುಕೋರರು ಬಲಿ!

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾರಾಟಗಾರರೊಬ್ಬರು, ʻಈರುಳ್ಳಿ ಬೆಲೆ ಪ್ರತಿ ಕೆಜಿಗೆ 60 ರಿಂದ 70, 80 ರೂ.ಗಳಿಗೆ ಏರಿಕೆಯಾಗಿದೆ. ನಾವು ಮಾರಾಟ ಮಾಡಲು ಮಂಡಿಯಿಂದ ಪಡೆಯುತ್ತಿವೆ. ಅಲ್ಲಿ ಪಡೆಯುವ ಬೆಲೆ ಹಾಗೂ ಮಾರಾಟ ಮಾಡುವ ಬೆಲೆಗಳಿಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಬೆಲೆ ಏರಿಕೆಯಾದಂತೆ ಕೊಳ್ಳುವವರ ಸಂಖ್ಯೆ ಇಳಿಕೆಯಾಗುತ್ತಿತ್ತು. ಆದ್ರೆ ಈರುಳ್ಳಿ ಅಗತ್ಯ ವಸ್ತುಗಳಲ್ಲಿ ಒಂದಾಗಿರುವುದರಿಂದ ಜನರು ಖರೀದಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ತಿಳಿಸಿದ್ದಾರೆ.

    ಇನ್ನೂ ಗ್ರಾಹಕರೊಬ್ಬರು ಬೆಲೆ ಏರಿಕೆ ಬಗ್ಗೆ ಮಾತನಾಡಿ, ತಮ್ಮ ಸಂಕಟ ಹಂಚಿಕೊಂಡಿದ್ದಾರೆ. ಈರುಳ್ಳಿಯ ಬೆಲೆಯು ಸೀಸನ್‌ಗೆ ಅನುಗುಣವಾಗಿ ಕಡಿಮೆಯಾಗಬೇಕಿದ್ದರೂ ಏರಿಕೆಯಾಗಿದೆ. ಆದ್ರೆ ಇಂದು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 80 ರೂ. ಆಗಿದೆ. ಇದು ಮನೆಯ ಆರ್ಥಿಕ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು