Tag: Delhi Liquor Policy Scam

  • ಸಾಕ್ಷ್ಯಗಳಿದ್ದ 9 ಫೋನ್‌ ನಾಶ – ಸ್ಟಾರ್‌ ಹೋಟೆಲ್‌ನಲ್ಲಿ 10 ಲಕ್ಷ ರೂ. ಮೌಲ್ಯದ ರೂಮ್‌ನಲ್ಲಿ ವಾಸ!

    ಸಾಕ್ಷ್ಯಗಳಿದ್ದ 9 ಫೋನ್‌ ನಾಶ – ಸ್ಟಾರ್‌ ಹೋಟೆಲ್‌ನಲ್ಲಿ 10 ಲಕ್ಷ ರೂ. ಮೌಲ್ಯದ ರೂಮ್‌ನಲ್ಲಿ ವಾಸ!

    ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ (Delhi liquor Policy Scam) ಬಂಧನಕ್ಕೊಳಗಾಗಿರುವ ಬಿಆರ್‌ಎಸ್‌ ಶಾಸಕಿ ಕೆ.ಕವಿತಾ, ಪ್ರಕರಣದ ಸಾಕ್ಷ್ಯಾಧಾರಗಳಿದ್ದ 9 ಫೋನ್‌ಗಳನ್ನ ನಾಶ ಮಾಡಿದ್ದರು. ಜೊತೆಗೆ 10 ಲಕ್ಷ ರೂ. ಮೌಲ್ಯದ ಸ್ಟಾರ್‌ ಹೋಟೆಲ್‌ನಲ್ಲಿ ರೂಮ್‌ ಬುಕ್‌ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ (Delhi liquor Policy Scam) ಉಲ್ಲೇಖಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಅಲ್ಲದೇ ಕವಿತಾ ಅವರು ಈ ಹಿಂದೆಯೇ ದೆಹಲಿಯಲ್ಲಿ ಆಡಳಿತಾರೂಢ ಆಪ್‌ ಪಕ್ಷಕ್ಕೆ ಮದ್ಯದ ಪರವಾನಿಗೆಗೆ ಬದಲಾಗಿ 100 ಕೋಟಿ ರೂ. ಪಾವತಿಸಲು ಸೌತ್ ಗ್ರೂಪ್ ಜೊತೆಗೂಡಿ ಪಿತೂರಿ ನಡೆಸಿದ್ದಾರೆ. ಜೊತೆಗೆ ಇಂಡೋ ಸ್ಪೀರಿಟ್‌ನ ಸ್ಟಾಕ್‌ನಲ್ಲಿ ಪಾಲನ್ನು ಧೀನಪಡಿಸಿಕೊಳ್ಳಲು ಸಂಚು ಹೂಡಿದ್ದರು. ಒಟ್ಟಾರೆ ಅಬಕಾರಿ ನೀತಿ ರದ್ದಾಗುವುದಕ್ಕೆ ಮುನ್ನ 192. 8 ಕೋಟಿ ರೂ.ಗಳಷ್ಟು ಲಾಭ ಗಳಿಸಿದ್ದಾರೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.

    ವಿವಿಧ ರೂಪದಲ್ಲಿ ಪಡೆದ 100 ಕೋಟಿ ರೂ. ಕಿಕ್‌ಬ್ಯಾಕ್‌ ಹಣವನ್ನ ಅಕ್ರಮ ಮಾರ್ಗಗಳ ಮೂಲಕ ಗೋವಾಕ್ಕೆ ಆಪ್‌ ಚುನಾವಣೆಗೆ ವರ್ಗಾವಣೆ ಮಾಡಲಾಗಿದೆ. ಕವಿತಾ ಮತ್ತು ಸಮೀರ್ ಮಹೇಂದ್ರು ಸೇರಿದಂತೆ ಇತರ ಸೌತ್ ಗ್ರೂಪ್ ಸದಸ್ಯರು ತಮ್ಮ ಈ ಅವ್ಯವಹಾರದ ಅಪರಾಧ ಮುಚ್ಚಿ ಹಾಕಲು ಎಲ್ಎನ್‌ಡೋ ಸ್ಪಿರಿಟ್ಸ್ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂಬ ಅಚ್ಚರಿ ಸಂಗತಿಗಳನ್ನೂ ಇಡಿ ತೆರೆದಿಟ್ಟಿದೆ.

    ಜು.3ರ ವರೆಗೆ ನ್ಯಾಯಾಂಗ ಬಂಧನ:
    ದೆಹಲಿ ಮದ್ಯದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಜುಲೈ 3ರವರೆಗೆ ವಿಸ್ತರಿಸಿದೆ.

    ಇದೇ ಪ್ರಕರಣದ ಇತರ ಮೂವರು ಆರೋಪಿಗಳಾದ ರಾಜಕುಮಾರ್, ಅರವಿಂದ್ ಮತ್ತು ದಾಮೋದರ್ ಅವರಿಗೆ ರೋಸ್ ಅವೆನ್ಯೂ ಕೋರ್ಟ್‌ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ. ಸೋಮವಾರ (ಜೂ.3) ಕವಿತಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ನ್ಯಾಯಾಂಗ ಬಂಧನ ವಿಸ್ತರಿಸಿದರು.

    ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಮೇ 15ರಂದು ಕವಿತಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕವಿತಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಿಬಿಐ ಮತ್ತು ಇಡಿ, ಕವಿತಾ ಅವರು ಹೆಚ್ಚು ಪ್ರಭಾವಿ ಮತ್ತು ಶಕ್ತಿಯುತರಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿತ್ತು.

    ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಒಟ್ಟು 18 ಮಂದಿಯನ್ನು ಇಡಿ ಬಂಧಿಸಿದೆ.

  • ದೆಹಲಿ ಮದ್ಯ ಹಗರಣ – ಬಿಆರ್‌ಎಸ್ ನಾಯಕಿ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ

    ದೆಹಲಿ ಮದ್ಯ ಹಗರಣ – ಬಿಆರ್‌ಎಸ್ ನಾಯಕಿ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ

    ನವದೆಹಲಿ: ದೆಹಲಿ ಮದ್ಯದ ಹಗರಣಕ್ಕೆ (Delhi Liquor Scam) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ (BRS) ನಾಯಕಿ ಕೆ.ಕವಿತಾ (K Kavitha) ಅವರ ನ್ಯಾಯಾಂಗ ಬಂಧನವನ್ನು (Judicial Custody) ದೆಹಲಿ ನ್ಯಾಯಾಲಯ ಜುಲೈ 3ರವರೆಗೆ ವಿಸ್ತರಿಸಿದೆ.

    ಇದೇ ಪ್ರಕರಣದ ಇತರ ಮೂವರು ಆರೋಪಿಗಳಾದ ರಾಜಕುಮಾರ್, ಅರವಿಂದ್ ಮತ್ತು ದಾಮೋದರ್ ಅವರಿಗೆ ರೋಸ್ ಅವೆನ್ಯೂ ನ್ಯಾಯಾಲಯವು 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ. ಸೋಮವಾರ ಕವಿತಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದರು. ಇದನ್ನೂ ಓದಿ: ಮದರ್ ಡೈರಿ ಶಾಕ್‌ – ಇಂದಿನಿಂದ ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಳ!

    ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಮೇ 15ರಂದು ಕವಿತಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕವಿತಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಿಬಿಐ ಮತ್ತು ಇಡಿ, ಕವಿತಾ ಅವರು ಹೆಚ್ಚು ಪ್ರಭಾವಿ ಮತ್ತು ಶಕ್ತಿಯುತರಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿತ್ತು. ಇದನ್ನೂ ಓದಿ: ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಒಟ್ಟು 18 ಮಂದಿಯನ್ನು ಇಡಿ ಬಂಧಿಸಿದೆ. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

  • ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್‌ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್‌ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    ನವದೆಹಲಿ: ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಕೋರಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ (Arvind Kejriwal) ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದೆ.

    ಕೇಜ್ರಿವಾಲ್ ಅವರು ತಮ್ಮ ಮಧ್ಯಂತರ ಜಾಮೀನನ್ನು 7 ದಿನಗಳ ಕಾಲ ವಿಸ್ತರಿಸುವಂತೆ ಕೋರಿ ಸಲ್ಲಿಸಿರುವ ಮನವಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಅದರಂತೆ ಎಎಪಿ ಮುಖ್ಯಸ್ಥರು ಜೂನ್ 2 ರಂದು ತಿಹಾರ್ ಜೈಲಿಗೆ ಹಿಂತಿರುಗಬೇಕಾಗಿದೆ. ಇದನ್ನೂ ಓದಿ: ಸ್ವಾತಿ ಮಲಿವಾಲ್ ದೌರ್ಜನ್ಯ ಪ್ರಕರಣ – ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ

    ನಿನ್ನೆಯಷ್ಟೆ ತುರ್ತು ವಿಚಾರಣೆ ರಜಾಕಾಲದ ಪೀಠ ನಿರಾಕರಿಸಿತ್ತು. ತುರ್ತು ವಿಚಾರಣೆ ಸಿಜೆಐ ನಿರ್ಧರಿಸಲಿದ್ದಾರೆ ಎಂದು ಪೀಠ ಹೇಳಿತ್ತು.

    ನಿಯಮಿತ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಮುಖ್ಯಮಂತ್ರಿಗೆ ಸ್ವಾತಂತ್ರ್ಯ ನೀಡಲಾಗಿರುವುದರಿಂದ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿತು. ಕೇಜ್ರಿವಾಲ್ ಮೇ 10 ರಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಜೂನ್ 2 ರಂದು ತಿಹಾರ್ ಜೈಲಿಗೆ ಶರಣಾಗುವಂತೆ ಹೇಳಲಾಗಿತ್ತು. ಪಿಎಂಎಲ್‌ಎ ಪ್ರಕರಣದಲ್ಲಿ ಇಡಿ ಅವರ ಬಂಧನದ ಸಿಂಧುತ್ವವನ್ನು ಪ್ರಶ್ನಿಸಿ ಪೀಠವು ಮೇ 17 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದನ್ನೂ ಓದಿ: ಕೇಜ್ರಿವಾಲ್‌ಗೆ ಕ್ಯಾನ್ಸರ್ ಗಂಭೀರ ಹಂತದಲ್ಲಿಯೇ?- ಜಾಮೀನು ವಿಸ್ತರಣೆ ಅರ್ಜಿಯ ಕುರಿತು ಅತಿಶಿ ಹೇಳಿದ್ದೇನು?

    ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ನ್ಯಾಯಾಲಯ, ಬಂಧನದ ಸವಾಲಿನ ಮೇಲೆ ತೀರ್ಪನ್ನು ಈಗಾಗಲೇ ಕಾಯ್ದಿರಿಸಿರುವುದರಿಂದ ಮಧ್ಯಂತರ ಜಾಮೀನು ವಿಸ್ತರಣೆಗೆ ಕೇಜ್ರಿವಾಲ್ ಅವರ ಮನವಿಗೂ ಮುಖ್ಯ ಅರ್ಜಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿತು.

    ಕೇಜ್ರಿವಾಲ್ ಬಂಧನದ ನಂತರ 7 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಅವರ ದೇಹದಲ್ಲಿ ಕೀಟೋನ್ ಮಟ್ಟವು ತುಂಬಾ ಹೆಚ್ಚಾಗಿದೆ ಎಂದು ಅರ್ಜಿಯನ್ನು ಸಲ್ಲಿಸಿದ ಎಎಪಿ ಹೇಳಿದೆ. ‘ಇವು ಕೆಲವು ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು. ಮ್ಯಾಕ್ಸ್ ಆಸ್ಪತ್ರೆ ವೈದ್ಯರು ಅವರನ್ನು ಪರೀಕ್ಷಿಸಿದರು. ಅವರು PET-CT ಸ್ಕ್ಯಾನ್ ಮತ್ತು ಇತರ ಹಲವು ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ತನಿಖೆಯನ್ನು ಪೂರ್ಣಗೊಳಿಸಲು ಅವರು 7 ದಿನಗಳ ಕಾಲಾವಕಾಶ ಕೋರಿದ್ದಾರೆ’ ಎಂದು ಎಎಪಿ ಹೇಳಿದೆ.

    ಮೇ 10 ರಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಕೇಜ್ರಿವಾಲ್‌ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿತು. ಆದೇಶದ ಪ್ರಕಾರ, ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಕೇಜ್ರಿವಾಲ್ ಜೂನ್ 2 ರಂದು ಶರಣಾಗಬೇಕಾಗಿದೆ.

  • ದೆಹಲಿ ಅಬಕಾರಿ ನೀತಿ ಹಗರಣ ಕೇಸ್‌ – ದೇಶದಲ್ಲೇ ಮೊದಲ ಬಾರಿಗೆ `ಎಎಪಿ’ ಅನ್ನು ಆರೋಪಿ ಎಂದು ಹೆಸರಿಸಿದ ಇಡಿ!

    ದೆಹಲಿ ಅಬಕಾರಿ ನೀತಿ ಹಗರಣ ಕೇಸ್‌ – ದೇಶದಲ್ಲೇ ಮೊದಲ ಬಾರಿಗೆ `ಎಎಪಿ’ ಅನ್ನು ಆರೋಪಿ ಎಂದು ಹೆಸರಿಸಿದ ಇಡಿ!

    – ದೆಹಲಿ ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

    ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯ (ED) ಪ್ರಕರಣವೊಂದರಲ್ಲಿ ರಾಜಕೀಯ ಪಕ್ಷವನ್ನು ಆರೋಪಿ ಎಂದು ಹೆಸರಿಸಿದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಇಡಿ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಆಮ್‌ ಆದ್ಮಿ ಪಕ್ಷವನ್ನು ಆರೋಪಿ ಎಂದು ಹೆಸರಿಸಿದೆ.

    ಜಾರಿ ನಿರ್ದೇಶನಾಲಯವು ದೆಹಲಿಯ ವಿಶೇಷ ಕೋರ್ಟ್‌ಗೆ ಪೂರಕ ದಾಖಲೆಗಳೊಂದಿಗೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ 8ನೇ ಚಾರ್ಜ್‌ಶೀಟ್‌ ಇದಾಗಿದ್ದು, ಒಟ್ಟು 18 ಮಂದಿಯನ್ನ ಬಂಧಿಸಲಾಗಿದೆ. ಎಎಪಿ ನಾಯಕರು, ಇತರ ವ್ಯಕ್ತಿಗಳೊಂದಿಗೆ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಇಡಿ ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

    ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಸೇರಿ ಹಲವು ನಾಯಕರು ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದಾರೆ. ಲಾಭದ ಸ್ವಲ್ಪ ಮೊತ್ತವನ್ನು ಎಎಪಿಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೂ ಬಳಸಲಾಗಿದೆ. ಅಲ್ಲದೇ ಈ ಪ್ರಕರಣದ ಮಾತುಕತೆ ನಡೆಸಲು ಕೇಜ್ರಿವಾಲ್ ಅವರು ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂಬುದಕ್ಕೆ ನಮ್ಮ ಬಳಿ ಪೂರಕ ದಾಖಲೆಗಳಿವೆ. ಅವರು ತಂಗಿದ್ದ ಹೋಟೆಲ್‌ ಬಿಲ್‌ ಅನ್ನು ಪ್ರಕರಣದ ಆರೋಪಿಯೊಬ್ಬರು ಭಾಗಶಃ ಪಾವತಿಸಿದ್ದಾರೆ ಎಂಬುದಕ್ಕೂ ಪುರಾವೆಗಳಿವೆ ಎಂಬ ಮಾಹಿತಿಯನ್ನ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.

    ಮತ್ತೊಂದೆಡೆ, ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ. ನ್ಯಾ. ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ತೀರ್ಪನ್ನು ಕಾಯ್ದಿರಿಸಿದ್ದರೂ, ಕಕ್ಷಿದಾರರ ವಾದಗಳಿಗೆ ಯಾವುದೇ ಧಕ್ಕೆಯಾಗದಂತೆ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಕೇಜ್ರಿವಾಲ್ ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದೆ.

    ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಕಳೆದ ಮಾರ್ಚ್ 21 ರಂದು ಬಂಧಿಸಲಾಗಿತ್ತು. ಸದ್ಯ ಜೂ.1 ರ ವರೆಗೆ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಮೇ 25 ರಂದು ದೆಹಲಿಯ 7 ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಮತ್ತು ಇಂಡಿಯಾ ಬ್ಲಾಕ್‌ ಪರ ಕೇಜ್ರಿವಾಲ್‌ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.