Tag: Delhi Liquor Policy Case

  • ಹೊಸ ಮಧ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ – ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂ ಜಾಮೀನು

    ಹೊಸ ಮಧ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ – ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂ ಜಾಮೀನು

    ನವದೆಹಲಿ: ಹೊಸ ಮಧ್ಯ ನೀತಿಯಲ್ಲಿ (Delhi liquor Policy Case) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಎಎಪಿ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್‌ (Sanjay Singh) ಅವರಿಗೆ ಸುಪ್ರಿಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

    ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರ ಕಸ್ಟಡಿ ಇನ್ನು ಮುಂದೆ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ (ED) ಹೇಳಿದ ನಂತರ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ತ್ರಿಸದಸ್ಯ ಪೀಠವು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿತು.

    ಇಡಿ ಬಂಧನ ಮತ್ತು ಜಾಮೀನು ಕೋರಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿ ಸದಸ್ಯ ಪೀಠ, ಜಾಮೀನು ನೀಡಲು ಆಕ್ಷೇಪಗಳಿವೆಯೇ ಎಂದು ಇಡಿಯನ್ನು ಪ್ರಶ್ನಿಸಿತು‌. ಇದಕ್ಕೆ ಉತ್ತರಿಸಿದ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್-3 ಮತ್ತು 4ರ ಅಡಿಯಲ್ಲಿ ತನಿಖಾ ವರದಿಯಿಂದ ಉಂಟಾಗುವ ವಿಚಾರಣೆಯ ಬಾಕಿ ಇರುವಾಗ ಸಂಜಯ್ ಸಿಂಗ್‌ಗೆ ಜಾಮೀನು ನೀಡಲು ಆಕ್ಷೇಪಿಸುವುದಿಲ್ಲ ಎಂದು ಹೇಳಿತು.

    ಇಡಿ ವಾದ ಆಲಿಸಿದ ಬಳಿಕ ಕೋರ್ಟ್ (Supreme Court) ಮಧ್ಯಂತರ ಜಾಮೀನು ಮಂಜೂರು ಮಾಡಿತು. ಷರತ್ತುಗಳನ್ನು ಕೆಳಹಂತದ ನ್ಯಾಯಲಯ ನಿರ್ಧರಿಸಲಿದೆ ಎಂದು ಹೇಳಿತು. ಜಾಮೀನಿನ ಅವಧಿಯಲ್ಲಿ ಸಿಂಗ್ ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ಕೋರ್ಟ್ ಸಂಜಯ್ ಸಿಂಗ್‌ಗೆ ತಾಕೀತು ಮಾಡಿದೆ. ಇದನ್ನೂ ಓದಿ: ಆಯುರ್ವೇದ ಉತ್ಪನ್ನ ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತು ಪ್ರಸಾರ; ಬಾಬಾ ರಾಮದೇವ್ ಕ್ಷಮೆ ಒಪ್ಪದ ಸುಪ್ರೀಂ

    ಸಂಜಯ್ ಸಿಂಗ್ ಪರ ವಾದ ಮಂಡಿಸಿದ ಅಭಿಷೇಕ್ ಮನುಸಿಂಘ್ವಿ, ಇತರೆ ಆರೋಪಿಗಳ ಹೇಳಿಕೆ ಆಧರಿಸಿ ದಾಳಿಯನ್ನು ನಡೆಸಲಾಗಿತ್ತು. ಈವರೆಗೂ ಯಾವುದೇ ನಗದು ಹಣ ಪತ್ತೆಯಾಗಿಲ್ಲ ಅಂತಹ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ವಾದಿಸಿದರು. ಇದನ್ನೂ ಓದಿ: ಜೈಲು ಸೇರಿರುವ ಸಂಜಯ್ ಸಿಂಗ್‍ಗೆ ಎಂಪಿಯಾಗಿ ಮುಂದುವರಿಸಲು ಆಪ್ ನಿರ್ಧಾರ

    ಏನಿದು ಪ್ರಕರಣ?
    ಕಳೆದ ವರ್ಷ ಅಕ್ಟೋಬರ್‌ 4 ರಂದು ಸಂಜಯ್ ಸಿಂಗ್ ಅವರನ್ನು ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು. ಇಡಿ ಬಂಧನವನ್ನು ಪ್ರಶ್ನಿಸಿ ಸಂಜಯ್ ಸಿಂಗ್ ಅರ್ಜಿ ಸಲ್ಲಿಸಿದ್ದರು, ಆದರೆ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ 6 ತಿಂಗಳ ಬಳಿಕ ಸುಪ್ರೀಂ ಕೋರ್ಟ್‌ ಸಂಜಯ್‌ ಸಿಂಗ್‌ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಕೇಂದ್ರದಿಂದ ಬಿಗ್‌ ರಿಲೀಫ್‌ – ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ

  • ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಕೇಜ್ರಿವಾಲ್‌ – ಆದೇಶದಲ್ಲಿ ಏನಿದೆ?

    ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಕೇಜ್ರಿವಾಲ್‌ – ಆದೇಶದಲ್ಲಿ ಏನಿದೆ?

    – ಜೈಲಿನಲ್ಲಿದ್ದರೂ ದೆಹಲಿ ಜನರದ್ದೇ ಚಿಂತೆ – ಸಚಿವೆ ಅತಿಶಿ ಭಾವುಕ

    ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Delhi Liquor Policy Case) ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ್ದಾರೆ ಎಂದು ಎಎಪಿ ಪಕ್ಷದ ಮೂಲಗಳು ತಿಳಿಸಿವೆ.

    ಈ ಮೂಲಕ ಅರವಿಂದ್‌ ಕೇಜ್ರಿವಾಲ್‌ ಇ.ಡಿ ಬಂಧನದಲ್ಲಿದ್ದುಕೊಂಡೇ ಆಡಳಿತ ನಡೆಸುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಇದು ರಾಷ್ಟ್ರ ರಾಜಧಾನಿಯ ನೀರು ಸರಬರಾಜಿಗೆ ಸಂಬಂಧಿಸಿದ ಆದೇಶವಾಗಿದೆ. ಜಲ ಸಂಪನ್ಮೂಲ ಸಚಿವೆಯೂ ಆಗಿರುವ ಅತಿಶಿ ಅವರಿಗೆ ಟಿಪ್ಪಣಿ ಮೂಲಕ ತಿಳಿಸಿದ್ದಾರೆ. ಅತಿಶಿ (Atishi) ಅವರಿಂದು ಆದೇಶವನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ನನ್ನ ಕಣ್ಣಲ್ಲಿ ನೀರು ತರಿಸಿದೆ:
    ಇಡಿ ಬಂಧನದಲ್ಲಿರುವ ಸಿಎಂ ಜೈಲಿನಲ್ಲಿದ್ದುಕೊಂಡೇ ಸರ್ಕಾರಿ ಆದೇಶ ಹೊರಡಿಸುವ ಬಗ್ಗೆ ಸಚಿವೆ ಅತಿಶಿ ಮಾಹಿತಿ ನೀಡಿದ್ದಾರೆ. ಇದು ನನ್ನ ಕಣ್ಣಲ್ಲಿ ನೀರು ತರಿಸಿದೆ. ಬಂಧನಕ್ಕೊಳಗಾದ ವ್ಯಕ್ತಿ ಈ ಕಷ್ಟದ ಸಮಯದಲ್ಲೂ ತಮ್ಮ ಕುರಿತು ಆಲೋಚಿಸದೇ, ದೆಹಲಿ ಜನರು ಮತ್ತು ಅವರ ಸಮಸ್ಯೆಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ – ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ರಿಲೀಸ್ 

    ದೆಹಲಿಯ ಕೆಲವು ಭಾಗಗಳಲ್ಲಿ ಜನರು ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ನಾನು ಚಿಂತಿತನಾಗಿದ್ದೇನೆ. ನಾನು ಜೈಲಿನಲ್ಲಿದ್ದೇನೆ ಎಂಬ ಕಾರಣಕ್ಕೆ ಜನರಿಗೆ ತೊಂದರೆ ಆಗಬಾರದು. ನೀರಿನ ಕೊರತೆ ಇರುವ ಸ್ಥಳಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಗತ್ಯವಿದ್ದರೆ ರಾಜ್ಯಪಾಲರಾದ ವಿ.ಕೆ ಸಕ್ಷೇನಾ ಅವರ ಸಹಾಯ ಪಡೆಯುವಂತೆ ತಮ್ಮ ನಿರ್ದೇಶನದಲ್ಲಿ ತಿಳಿಸಿರುವುದಾಗಿ ಅತಿಶಿ ಹೇಳಿದ್ದಾರೆ.

    ದೆಹಲಿ ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮಾರ್ಚ್‌ 21 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಮಾರ್ಚ್‌ 22 ರಂದು ನ್ಯಾಯಾಲಯವು ಕೇಜ್ರಿವಾಲ್‌ ಅವರಿಗೆ ಮಾ.28ರ ವರೆಗೆ ಇ.ಡಿ ವಶಕ್ಕೆ ನೀಡಿದೆ.

    ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್‌ ಅವರು ಶನಿವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಹೋಳಿ ರಜೆಯ ಕಾರಣ ನ್ಯಾಯಾಲಯವು 27ಕ್ಕೂ ಈ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

  • ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಹಣ ನೀಡಿದ ವ್ಯಕ್ತಿಯ ಹೇಳಿಕೆ ಆಧರಿಸಿ ಕೇಜ್ರಿವಾಲ್ ಬಂಧನ – ಇಡಿ ವಿರುದ್ಧ ಆಪ್ ಆರೋಪ

    ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಹಣ ನೀಡಿದ ವ್ಯಕ್ತಿಯ ಹೇಳಿಕೆ ಆಧರಿಸಿ ಕೇಜ್ರಿವಾಲ್ ಬಂಧನ – ಇಡಿ ವಿರುದ್ಧ ಆಪ್ ಆರೋಪ

    ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರದ ಕಿಂಗ್ ಪಿನ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಎಂದು ಜಾರಿ ನಿರ್ದೇಶನಾಲಯ (ED) ಆರೋಪಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯಕ್ಕೆ ಆಪ್‌ ನಾಯಕರು ತಿರುಗೇಟು ನೀಡಿದ್ದಾರೆ. ಚುನಾವಣಾ ಬಾಂಡ್ (Electoral Bonds) ಮೂಲಕ ಬಿಜೆಪಿಗೆ ಹಣ ನೀಡಿದ ವ್ಯಕ್ತಿಯಿಂದ ಪಡೆದ ಮಾಹಿತಿ ಮೇರೆಗೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ ಅತಿಶಿ (Atishi), ಅಬಕಾರಿ ನೀತಿ ಹಗರಣದಲ್ಲಿ, ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ ತನಿಖೆಗಳು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಈ 2 ವರ್ಷಗಳ ತನಿಖೆಯಲ್ಲಿ ಒಂದು ಪ್ರಶ್ನೆ ಮತ್ತೆ-ಮತ್ತೆ ಉದ್ಭವಿಸುತ್ತಿದೆ. ಹಣದ ಜಾಡು ಎಲ್ಲಿದೆ? ಹಣ ಎಲ್ಲಿಗೆ ಹೋಯಿತು? ಆಪ್‌ ಪಕ್ಷದ ಯಾವುದೇ ನಾಯಕ, ಮಂತ್ರಿ ಅಥವಾ ಕಾರ್ಯಕರ್ತರಿಂದ ಅಪರಾಧದ ಆದಾಯವನ್ನು ವಸೂಲಿ ಮಾಡಲಾಗಿಲ್ಲ, ಹಾಗಿದ್ದಾಗ ಹಣ ಎಲ್ಲಿ ಹೋಯಿತು? ಎಂದು ಪ್ರಶ್ನೆ ಮಾಡಿದ್ದಾರೆ.

    ಶರತ್ ಚಂದ್ರ ರೆಡ್ಡಿ ಎಂಬ ವ್ಯಕ್ತಿಯ ಹೇಳಿಕೆ ಆಧರಿಸಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಶರತ್ ಚಂದ್ರ ರೆಡ್ಡಿ ಅರಬಿಂದೋ ಫಾರ್ಮಾದ ಮಾಲೀಕರು ಮತ್ತು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಹಣ ಪಾವತಿಸಿದವರು ಎಂದು ಅತಿಶಿ ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಶ್ನೆಗಾಗಿ ಹಣ ಪಡೆದ ಆರೋಪ – ಮಹುವಾ ಮೊಯಿತ್ರಾ ಮನೆಯಲ್ಲಿ ಸಿಬಿಐ ಶೋಧ

    ನವೆಂಬರ್ 9, 2022 ರಂದು ರೆಡ್ಡಿ ಅವರನ್ನು ವಿಚಾರಣೆಗಾಗಿ ಕರೆಸಲಾಗಿತ್ತು. ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲಿಲ್ಲ ಅಥವಾ ಮಾತನಾಡಲಿಲ್ಲ ಮತ್ತು ಆಪ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಹೇಳಿಕೆ ಬೆನ್ನಲೆ ಅವರನ್ನು ಇಡಿ ಬಂಧಿಸಿ ಹಲವು ತಿಂಗಳು ಜೈಲಿನಲ್ಲಿದ್ದ ನಂತರ ಹೇಳಿಕೆ ಬದಲಿಸಿದ ಅವರು, ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಅಬಕಾರಿ ನೀತಿ ವಿಚಾರವಾಗಿ ಮಾತನಾಡಿದ್ದೇನೆ ಎಂದು ಹೇಳಿದರು. ಅವರು ಹೇಳಿದ ತಕ್ಷಣ ಜಾಮೀನು ಸಿಕ್ಕಿದೆ ಎಂದು ದೂರಿದ್ದಾರೆ.

    ಸಚಿವ ಸೌರಭ್ ಭಾರದ್ವಾಜ್ ಮಾತನಾಡಿ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆ ಪ್ರಾರಂಭವಾದಾಗಿನಿಂದ, ಬಿಜೆಪಿ, ಎಸ್‌ಬಿಐ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವು ವಿವರಗಳನ್ನು ಬಹಿರಂಗಪಡಿಸದಿರಲು ಪ್ರಯತ್ನಿಸುತ್ತಿದೆ. ಆದರೀಗ ಈಗ ಅದನ್ನ ಬಹಿರಂಗಪಡಿಸಲಾಗಿದೆ, ಇದು ವಿವಿಧ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2047ಕ್ಕೆ ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿಗೆ ಸರ್ಕಾರ ಮಾಸ್ಟರ್‌ಪ್ಲಾನ್‌

  • ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

    ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಆಪ್‌ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ 7 ಆಮ್ ಆದ್ಮಿ ಪಕ್ಷದ ಶಾಸಕರನ್ನ (AAP MLAs) ಖರೀದಿಸಲು ಪ್ರಯತ್ನಿಸುತ್ತಿದೆ. 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್‌ ನೀಡಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ದೆಹಲಿ ಪೊಲೀಸರ ಅಪರಾಧ ವಿಭಾಗದ ನೋಟಿಸ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ ದೆಹಲಿ ಪೊಲೀಸರ ಕ್ರೈಂ ಬ್ರ್ಯಾಂಚ್‌ ತಂಡ ನೋಟಿಸ್‌ ನೀಡಿದೆ ಎಂದು ಹೇಳಲಾಗಿದೆ. ಆದ್ರೆ ದೆಹಲಿ ಮುಖ್ಯಮಂತ್ರಿಗಳ ಕಚೇರಿ, ಅಪರಾಧ ವಿಭಾಗದ ಅಧಿಕಾರಿಗಳು ಯಾವುದೇ ರೀತಿಯ ನೋಟಿಸ್‌ ನೀಡಿಲ್ಲ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌ – ಕೇಜ್ರಿವಾಲ್‌ ಹೊಸ ಬಾಂಬ್‌

    7 ಆಮ್ ಆದ್ಮಿ ಪಕ್ಷದ ಶಾಸಕರನ್ನ ಖರೀದಿಸಲು ಬಿಜೆಪಿ ತಲಾ 25 ಕೋಟಿ ರೂ. ಆಫರ್‌ ನೀಡಿದೆ ಎಂದು ಕಳೆದವಾರ ಕೇಜ್ರಿವಾಲ್‌ ಆರೋಪಿಸಿದ್ದರು. ಇದರ ವಿರುದ್ಧ ದೆಹಲಿ ಬಿಜೆಪಿ ನಿಯೋಗವು ಅಪರಾಧ ವಿಭಾಗಕ್ಕೆ ದೂರು ನೀಡಿತ್ತು. ಅಲ್ಲದೇ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವಂತೆ ಬಿಜೆಪಿ ನಿಯೋಗ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರ್ಯಾಂಚ್‌ ತಂಡವು ಇಂದು ಕೇಜ್ರಿವಾಲ್‌ ಅವರ ನಿವಾದಕ್ಕೆ ಭೇಟಿ ನೀಡಿ ನೋಟಿಸ್‌ ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

    ಕೇಜ್ರಿವಾಲ್‌ ಆರೋಪ ಏನು?
    ರಾಷ್ಟ್ರರಾಜಧಾನಿಯಲ್ಲಿ ಆಪ್‌ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ 7 ಆಮ್ ಆದ್ಮಿ ಪಕ್ಷದ ಶಾಸಕರನ್ನ ಖರೀದಿಸಲು ಪ್ರಯತ್ನಿಸುತ್ತಿದೆ. 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್‌ ನೀಡಿದೆ. ಬಿಜೆಪಿ ಆಪ್‌ ಶಾಸಕರೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಆಪ್‌ ಸರ್ಕಾರವನ್ನು ಸಂಪೂರ್ಣವಾಗಿ ಮುಗಿಸಲು ಪ್ಲ್ಯಾನ್‌ ಮಾಡಿದೆ. ಆದ್ದರಿಂದ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ (Delhi liquor Policy Case) ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದೆ. ಇದನ್ನೂ ಓದಿ: 5ನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು

    ದೆಹಲಿಯ ಆಪ್‌ ಸರ್ಕಾರವನ್ನ ಸಂಪೂರ್ಣವಾಗಿ ಉರುಳಿಸುತ್ತೇವೆ. ಈಗಾಗಲೇ 21 ಶಾಸಕರೊಟ್ಟಿಗೆ ಮಾತುಕತೆ ನಡೆಸಿದ್ದೇವೆ. ನೀವೂ ಬಂದುಬಿಡಿ, ಪ್ರತಿಯೊಬ್ಬರಿಗೆ ತಲಾ 25 ಕೋಟಿ ರೂ. ಕೊಡುತ್ತೇವೆ. ಜೊತೆಗೆ ಬಿಜೆಪಿಯಿಂದ ಟಿಕೆಟ್‌ ನೀಡುತ್ತೇವೆ ಎಂದು ಆಮಿಷ ತೋರಿಸಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಚಾರ ಮಾಡೋದನ್ನು ತಡೆಯಲು ಸಮನ್ಸ್‌: ಕೇಜ್ರಿವಾಲ್‌ ಕಿಡಿ

  • 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌ – ಕೇಜ್ರಿವಾಲ್‌ ಹೊಸ ಬಾಂಬ್‌

    7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌ – ಕೇಜ್ರಿವಾಲ್‌ ಹೊಸ ಬಾಂಬ್‌

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಆಪ್‌ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ 7 ಆಮ್ ಆದ್ಮಿ ಪಕ್ಷದ ಶಾಸಕರನ್ನ (AAP MLAs) ಖರೀದಿಸಲು ಪ್ರಯತ್ನಿಸುತ್ತಿದೆ. 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್‌ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಹೊಸ ಬಾಂಬ್‌ ಸಿಡಿಸಿದ್ದಾರೆ.

    ಈ ಕುರಿತು ಸೋಶಿಯಲ್‌ ಮೀಡಿಯಾ X ಖಾತೆಯಲ್ಲಿ ಸುದೀರ್ಘ‌ ಪೋಸ್ಟ್‌ ಹಂಚಿಕೊಂಡಿರುವ ಕೇಜ್ರಿವಾಲ್‌, ಬಿಜೆಪಿ (BJP) ಆಪ್‌ ಶಾಸಕರೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಆಪ್‌ ಸರ್ಕಾರವನ್ನು ಸಂಪೂರ್ಣವಾಗಿ ಮುಗಿಸಲು ಪ್ಲ್ಯಾನ್‌ ಮಾಡಿದೆ. ಆದ್ದರಿಂದ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ (Delhi liquor Policy Case) ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮರಾಠ ಮೀಸಲಾತಿ ಹೋರಾಟಕ್ಕೆ ಜಯ – ಬೇಡಿಕೆಗಳಿಗೆ ಮಹಾರಾಷ್ಟ್ರ ಸರ್ಕಾರ ಅಸ್ತು

    ಸರ್ಕಾರವನ್ನೇ ಮುಗಿಸೋದಕ್ಕೆ ಬಿಜೆಪಿ ಪ್ಲ್ಯಾನ್‌:
    ಇತ್ತೀಚೆಗೆ ಬಿಜೆಪಿ ನಾಯಕರು ಎಎಪಿಯ 7 ಶಾಸಕರನ್ನ ಸಂಪರ್ಕಿಸಿದ್ದಾರೆ. ಕೆಲ ದಿನಗಳ ನಂತರ ನಾವು ಕೇಜ್ರಿವಾಲ್‌ ಅವರನ್ನ ಬಂಧಿಸುತ್ತೇವೆ. ನಂತರ ಶಾಸಕರನ್ನ ಇಬ್ಭಾಗ ಮಾಡುತ್ತೇವೆ. ದೆಹಲಿಯ ಆಪ್‌ ಸರ್ಕಾರವನ್ನ ಸಂಪೂರ್ಣವಾಗಿ ಉರುಳಿಸುತ್ತೇವೆ. ಈಗಾಗಲೇ 21 ಶಾಸಕರೊಟ್ಟಿಗೆ ಮಾತುಕತೆ ನಡೆಸಿದ್ದೇವೆ. ನೀವೂ ಬಂದುಬಿಡಿ, ಪ್ರತಿಯೊಬ್ಬರಿಗೆ ತಲಾ 25 ಕೋಟಿ ರೂ. ಕೊಡುತ್ತೇವೆ. ಜೊತೆಗೆ ಬಿಜೆಪಿಯಿಂದ ಟಿಕೆಟ್‌ ನೀಡುತ್ತೇವೆ ಎಂದು ಆಮಿಷ ತೋರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಎಂಜಿ ರೋಡ್- ಬೈಯಪ್ಪನಹಳ್ಳಿ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತ- ಪ್ರಯಾಣಿಕರ ಪರದಾಟ

    9 ವರ್ಷಗಳಿಂದಲೂ ಷಡ್ಯಂತ್ರ ಫಲಿಸಿಲ್ಲ:
    ಇದು ಬಿಜೆಪಿಯ ನಡವಳಿಕೆಯನ್ನು ತೋರಿಸುತ್ತದೆ. ಮದ್ಯ ನೀತಿ ಹಗರಣ ತನಿಖೆಯಲ್ಲಿ ನನ್ನನ್ನು ಬಂಧಿಸಲಾಗುತ್ತಿಲ್ಲ. ಆದ್ದರಿಂದ ಆಪ್‌ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸುತ್ತಿದ್ದಾರೆ. ಅವರ ಷಡ್ಯಂತ್ರ ಇದೇ ಮೊದಲೇನಲ್ಲ. ಕಳೆದ 9 ವರ್ಷಗಳಿಂದಲೂ ಇಂತಹ ಅನೇಕ ಷಡ್ಯಂತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಯಾವುದೂ ಸಕ್ಸಸ್‌ ಆಗಿಲ್ಲ. ಏಕೆಂದರೆ ದೇವರು ಮತ್ತು ಈ ರಾಜ್ಯದ ಜನತೆ ಸದಾ ನಮ್ಮನ್ನ ಬೆಂಬಲಿಸಿದ್ದಾರೆ. ನಮ್ಮ ಎಲ್ಲ ಶಾಸಕರೂ ಬಲವಾಗಿ ಜೊತೆಯಲ್ಲಿದ್ದು ಆಫರ್‌ ಅನ್ನು ದೃಢವಾಗಿ ತಿರಸ್ಕರಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ: ಮೋದಿ ಹೊಗಳಿದ ರೆಡ್ಡಿ 

  • ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್‌ ಹಿಂಪಡೆಯಿರಿ: EDಗೆ ಕೇಜ್ರಿವಾಲ್‌ ಪ್ರತಿಕ್ರಿಯೆ

    ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್‌ ಹಿಂಪಡೆಯಿರಿ: EDಗೆ ಕೇಜ್ರಿವಾಲ್‌ ಪ್ರತಿಕ್ರಿಯೆ

    ನವದೆಹಲಿ: ನನಗೆ ನೀಡಿರುವ ನೋಟಿಸ್‌ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ. ಇ.ಡಿ (Enforcement Directorate) ಕೂಡಲೇ ಸಮನ್ಸ್‌ ಹಿಂಪಡೆಯಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಹೇಳಿದ್ದಾರೆ.

    ಸಮನ್ಸ್‌ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌, ಬಿಜೆಪಿಯ ಒತ್ತಾಯದ ಮೇರೆಗೆ ನೋಟಿಸ್ ಕಳುಹಿಸಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೋಟಿಸ್ ಕಳುಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

    ಕೇಜ್ರಿವಾಲ್ ಅವರು ಬೆಳಿಗ್ಗೆ 11 ಗಂಟೆಗೆ ಕೇಂದ್ರ ತನಿಖಾ ಸಂಸ್ಥೆಯ ದೆಹಲಿ ಕಚೇರಿಯ ಮುಂದೆ ಹಾಜರಾಗಬೇಕಿತ್ತು. ಆದರೆ ಅವರು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಪತ್ರ ಬರೆದು ಸಮನ್ಸ್ ಅನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ.

    ಯಾರೇ ಆದರೂ ಇ.ಡಿ ಸಮನ್ಸ್‌ಗಳನ್ನು ಗರಿಷ್ಠ ಮೂರು ಬಾರಿ ತಿರಸ್ಕರಿಸಬಹುದು. ಬಳಿಕ ಇ.ಡಿ ಜಾಮೀನು ರಹಿತ ವಾರಂಟ್ ನೀಡಬಹುದು. ಇ.ಡಿ ಕಟ್ಟುನಿಟ್ಟಾದ ಅಕ್ರಮ ಹಣ ವರ್ಗಾವಣೆ ಆಕ್ಟ್ ಅಥವಾ PMLA ಅಡಿಯಲ್ಲಿ ಸಮನ್ಸ್ ನೀಡಬಹುದು. ಇದನ್ನೂ ಓದಿ: ತಲೈವಾಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ ದೇವ್ರು – 250Kg ತೂಕದ ರಜನಿಕಾಂತ್‌ ವಿಗ್ರಹ ಸ್ಥಾಪನೆ

    ದೆಹಲಿ ಉಪ ಮುಖ್ಯಮಂತ್ರಿ ಆಗಿದ್ದ ಮನೀಸ್‌ ಸಿಸೋಡಿಯಾ ಅವರನ್ನು ಬಂಧಿಸಿದೆ. ಈಗ ಬಿಜೆಪಿ ಆಜ್ಞೆಯ ಮೇರೆಗೆ ನನಗೆ ನೋಟಿಸ್‌ ನೀಡಿದೆ. ಇದು ಅಕ್ರಮ ಮತ್ತು ರಾಜಕೀಯ ಪ್ರೇರಿತ. ನೋಟಿಸ್‌ ಹಿಂಪಡೆಯಬೇಕು ಎಂದು ಕೇಜ್ರಿವಾಲ್‌ ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿ ಅಬಕಾರಿ ನೀತಿ ಪ್ರಕರಣ – CBIನಿಂದ ಡಿಸಿಎಂ ಮನೀಶ್‌ ಸಿಸೋಡಿಯಾ ಅರೆಸ್ಟ್

    ದೆಹಲಿ ಅಬಕಾರಿ ನೀತಿ ಪ್ರಕರಣ – CBIನಿಂದ ಡಿಸಿಎಂ ಮನೀಶ್‌ ಸಿಸೋಡಿಯಾ ಅರೆಸ್ಟ್

    ನವದೆಹಲಿ: ದೆಹಲಿಯ ಅಬಕಾರಿ ನೀತಿ (Delhi Liquor Policy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ (Manish Sisodia) ಅವರನ್ನು CBI ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ಸಿಸೋಡಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

    ದೆಹಲಿಯ ಹಣಕಾಸು, ಅಬಕಾರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬೆಳಗ್ಗೆಯಿಂದ ವಿಚಾರಣೆ ನಡೆಸಿದ್ದರು. ಒಂಭತ್ತು ಗಂಟೆಗಳ ನಂತರ ಬಂಧನವಾಗಿದೆ. ಸತ್ಯೇಂದ್ರ ಜೈನ್ ನಂತರ ಬಂಧನಕ್ಕೊಳಗಾದ ಎರಡನೇ ದೆಹಲಿ ಸಚಿವ ಸಿಸೋಡಿಯಾ ಆಗಿದ್ದಾರೆ. ಇದನ್ನೂ ಓದಿ: ಕೆಲ ತಿಂಗಳು ಜೈಲಲ್ಲಿದ್ರೂ I Don’t Care- ವಿಚಾರಣೆಗೆ ಸಿಬಿಐ ಕಚೇರಿ ತಲುಪಿದ ಸಿಸೋಡಿಯಾ

    ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಸಿಸೋಡಿಯಾ ಅವರ ಮನೆ ಮತ್ತು ಸಿಬಿಐ ಕಚೇರಿಯ ಹೊರಗೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.

    ಸಿಸೋಡಿಯಾ ಬಂಧನಕ್ಕೆ ಆಮ್‌ ಆದ್ಮಿ ಪಕ್ಷದಿಂದ (AAP) ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮನೀಶ್ ಸಿಸೋಡಿಯಾ ಭ್ರಷ್ಟ ಎಂದು ಬಿಜೆಪಿ ಹೇಳುತ್ತಿದೆ. ಆದರೆ ನೀವು ಅವರ ಮನೆ ಅಥವಾ ಬ್ಯಾಂಕ್ ಖಾತೆಗಳಿಂದ ಏನನ್ನೂ ಪಡೆದಿಲ್ಲ. ಅವರ ವಿರುದ್ಧದ ಯಾವುದೇ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಅವರ ಬಂಧನವು ಎಎಪಿ ಮತ್ತು ಕೇಜ್ರಿವಾಲ್ ಅವರ ಜನಪ್ರಿಯತೆಯ ಮೇಲೆ ದಾಳಿ ಮಾಡುವ ಉದ್ದೇಶದಿಂದ ಕೂಡಿದೆ ಎಂದು ಆಮ್ ಆದ್ಮಿ ಪಕ್ಷದ ಅತಿಶಿ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ಆಯ್ತು.. ಈಗ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಗೆ ಕಾಂಗ್ರೆಸ್‌ ಪ್ಲಾನ್‌

    ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಕಳೆದ ವರ್ಷ ಅಕ್ಟೋಬರ್‌ 17 ರಂದು ವಿಚಾರಣೆ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ಅವರ ಮನೆ ಮತ್ತು ಬ್ಯಾಂಕ್‌ ಲಾಕರ್‌ಗಳನ್ನೂ ಶೋಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ಶೀಟ್‌ ಸಲ್ಲಿಸಿದ ಸುಮಾರು 3 ತಿಂಗಳ ಬಳಿಕ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಅವರನ್ನು ಇಂದು ಬಂಧಿಸಿದ್ದಾರೆ. ‌

  • ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ

    ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ

    ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ (Liquor Policy Case) ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಸಲ್ಲಿಸಿದ ಜಾರ್ಜ್‍ಶೀಟ್‍ನಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಹೆಸರು ದಾಖಲಾಗಿಲ್ಲ.

    ಈ ಹಿಂದೆ ಮನೀಶ್ ಸಿಸೋಡಿಯಾ ಹೆಸರು ಹಗರಣದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಈ ಬಗ್ಗೆ ಸಿಬಿಐ ಸಿಸೋಡಿಯಾ ಮನೆ ಮೇಲೆ ದಾಳಿ ನಡೆಸಿತ್ತು. ವಿಚಾರಣೆಗೂ ಒಳಪಡಿಸಿತ್ತು. ಇದೀಗ ಸಿಬಿಐ ಸಲ್ಲಿಸಿರುವ ಚಾರ್ಚ್‍ಶೀಟ್‍ನಲ್ಲಿ (Chargesheet) ಮನೀಶ್ ಸಿಸೋಡಿಯಾ ಹೆಸರನ್ನು ಹೊರತು ಪಡಿಸಿ ಇತರ 7 ಮಂದಿ ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ. ಇದನ್ನೂ ಓದಿ: ದೆಹಲಿ ಸಿಎಂ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು – ಮನೀಶ್ ಸಿಸೋಡಿಯಾ ಆರೋಪ

    ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶ ಎಂ.ಕೆ ನಾಗ್ಪಾಲ್ ಅವರ ಮುಂದೆ ಸಿಬಿಐ ಸಲ್ಲಿಸಿರುವ ಮೊದಲ ಜಾರ್ಜ್‍ಶೀಟ್‍ನಲ್ಲಿ ಎಎಪಿ ಮಾಧ್ಯಮ ಉಸ್ತುವಾರಿ ವಿಜಯ್ ನಾಯರ್, ಹೈದರಾಬಾದ್ ಮೂಲದ ಉದ್ಯಮಿ ಅಭಿಷೇಕ್ ಬೋನಪಲ್ಲಿ, ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರ, ಬೋನಪಲ್ಲಿಯ ಸಹಾಯಕ ಅರುಣ್ ಪಿಳ್ಳೈ, ಮುತ್ತು ಗೌತಮ್ ಮತ್ತು ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಪಾಕ್ ಪರ ಘೋಷಣೆ – ಬಿಜೆಪಿ ಆರೋಪ

    ಇದು ಸಿಬಿಐ ಸಲ್ಲಿಸಿರುವ ಮೊದಲ ಆರೋಪ ಪಟ್ಟಿಯಾಗಿದ್ದು, ವಿಚಾರಣೆ ನಡೆಯುತ್ತಿರುವ ಕಾರಣ ಹೆಚ್ಚಿನ ವಿಚಾರಣೆ ಬಳಿಕ ಇನ್ನಷ್ಟು ಆರೋಪಿಗಳ ಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ. ಸಿಬಿಐ 10,000 ಪುಟಗಳ ಆರೋಪ ಪಟ್ಟಿಯನ್ನು ಕೋರ್ಟ್‍ಗೆ ಸಲ್ಲಿಸಿದ್ದು ನ.30ಕ್ಕೆ ವಿಚಾರಣೆ ಮುಂದೂಡಲಾಗಿದೆ.

    ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಹಾಗೂ ಇತರೆ 8 ಮಂದಿ ವಿರುದ್ಧ ಈ ಹಿಂದೆ ಸಿಬಿಐ ಲುಕ್‍ಔಟ್ ನೋಟಿಸ್ ಜಾರಿಯಾಗಿತ್ತು.

    Live Tv
    [brid partner=56869869 player=32851 video=960834 autoplay=true]