Tag: Delhi High Court

  • ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

    ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

    – ನ್ಯಾ.ವರ್ಮಾರ ಎಲ್ಲಾ ತೀರ್ಪುಗಳನ್ನು ಪರಿಶೀಲಿಸಿ ಎಂದ ಅಲಹಾಬಾದ್ ಬಾರ್ ಅಸೋಸಿಯೇಷನ್‌

    ನವದೆಹಲಿ: ನ್ಯಾ.ಯಶವಂತ್ ವರ್ಮಾ (Justice Yashwant Varma) ಅವರ ಮನೆಯಲ್ಲಿ ನಗದು ಪತ್ತೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸೋಮವಾರ ಅವರ ನ್ಯಾಯಾಂಗ ಕೆಲಸವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ. ಈ ಸಂಬಂಧ ಹೈ ಕೋರ್ಟ್‌ ಸುತ್ತೋಲೆ ಹೊರಡಿಸಿದೆ.

    ಮಾ.14 ರಂದು ನ್ಯಾ.ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತ್ತು. ಈ ಸಮಯದಲ್ಲಿ ಅವರ ಮನೆಯ ಸ್ಟೋರ್‌ ರೂಂನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಅಗ್ನಿ ಅವಘಡದ ವೇಳೆ ನಾನು ಭೋಪಾಲ್‌ನಲ್ಲಿದ್ದೆ ಎಂದು ನ್ಯಾ.ವರ್ಮಾ ಹೇಳಿಕೊಂಡಿದ್ದರು.

    ಶನಿವಾರ, ಸುಪ್ರೀಂ ಕೋರ್ಟ್ (Supreme Court) ಈ ಸಂಬಂಧ ಒಂದು ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಗದು ಪತ್ತೆಯಾದ ವೀಡಿಯೊ ಮತ್ತು 3 ಫೋಟೋಗಳು ಸಹ ಇದ್ದವು. ಈ ವೀಡಿಯೊ ಮತ್ತು ಫೋಟೋಗಳಲ್ಲಿ ಸುಟ್ಟ ಹಣದ ತುಂಡುಗಳನ್ನು ಸಿಬ್ಬಂದಿ ಹೊರತೆಗೆಯುತ್ತಿರುವುದನ್ನು ನೋಡಬಹುದಾಗಿದೆ.

    ಇನ್ನೂ ದೆಹಲಿ ಹೈಕೋರ್ಟ್ (Delhi High Court) ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಶುಕ್ರವಾರ ವರ್ಮಾ ಅವರಿಗೆ ಪತ್ರ ಬರೆದು, ನಗದು ಇರುವಿಕೆಯನ್ನು ಲೆಕ್ಕ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾ.ವರ್ಮಾ ಅವರು, ನಾನು ಅಥವಾ ನನ್ನ ಕುಟುಂಬದ ಸದಸ್ಯರು ಆ ಕೋಣೆಯಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇನ್ನೂ ವರ್ಮಾ ವಿರುದ್ಧದ ಆರೋಪಗಳನ್ನು ತನಿಖೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

    ಯಾವ ನ್ಯಾಯಾಲಯವು ಕಸದ ತೊಟ್ಟಿಯಲ್ಲ
    ಈ ಎಲ್ಲಾ ಬೆಳವಣಿಗೆಗಳ ನಡುವೆ, ನ್ಯಾ.ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ (Allahabad High Court) ವರ್ಗಾಯಿಸದಂತೆ ಮುಖ್ಯ ನ್ಯಾಯಾಧೀಶರಿಗೆ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್‌ ಮನವಿ ಮಾಡಿದೆ.

    ಯಾವುದೇ ನ್ಯಾಯಾಲಯವು ಕಸದ ತೊಟ್ಟಿಯಲ್ಲ. ವಿಚಾರಣೆಗಳು ಪೂರ್ಣಗೊಳ್ಳುವವರೆಗೆ ಅವರು ಸುಪ್ರೀಂ ಕೋರ್ಟ್‌ನ ಕಣ್ಗಾವಲಿನಲ್ಲಿ ದೆಹಲಿಯಲ್ಲಿರಬೇಕು ಎಂದು ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ಅನಿಲ್ ತಿವಾರಿ ಆಗ್ರಹಿಸಿದ್ದಾರೆ. ಅಲ್ಲದೇ, ಸಾರ್ವಜನಿಕ ವಿಶ್ವಾಸವನ್ನು ಮತ್ತೆ ಗಳಿಸಲು ನ್ಯಾ.ವರ್ಮಾ ಅವರು ನೀಡಿದ ಎಲ್ಲಾ ತೀರ್ಪುಗಳನ್ನು ಪರಿಶೀಲಿಸಬೇಕು ಎಂದಿದ್ದಾರೆ.

  • ನಗದು ಪತ್ತೆ ಕೇಸ್‌ – ತನಿಖಾ ವರದಿ ಬಿಡುಗಡೆ ಮಾಡಿದ ಸುಪ್ರೀಂ; ಆರೋಪ ನಿರಾಕರಿಸಿದ ನ್ಯಾ. ವರ್ಮಾ

    ನಗದು ಪತ್ತೆ ಕೇಸ್‌ – ತನಿಖಾ ವರದಿ ಬಿಡುಗಡೆ ಮಾಡಿದ ಸುಪ್ರೀಂ; ಆರೋಪ ನಿರಾಕರಿಸಿದ ನ್ಯಾ. ವರ್ಮಾ

    ನವದೆಹಲಿ: ಬೆಂಕಿ ನಂದಿಸುವ ಸಮಯದಲ್ಲಿ ನ್ಯಾ. ವರ್ಮಾ ಅವರ ನಿವಾಸದಲ್ಲಿ ಪತ್ತೆಯಾದ ನೋಟಿನ ಕಂತೆಗಳ ಕುರಿತು ಸುಪ್ರೀಂ ಕೋರ್ಟ್ (Supreme Court) ಶನಿವಾರ ರಾತ್ರಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರು ಸಲ್ಲಿಸಿದ ತನಿಖಾ ವರದಿಯನ್ನು ಬಿಡುಗಡೆ ಮಾಡಿದೆ.

    ನ್ಯಾ. ಯಶ್ವಂತ್‌ ವರ್ಮಾ (Yashwant Varma) ಅವರ ನಿವಾಸದಲ್ಲಿ ಲೆಕ್ಕವಿಲ್ಲದಷ್ಟು ನೋಟು ಪತ್ತೆಯಾದ ಆರೋಪಗಳನ್ನು ದೃಢೀಕರಿಸುವ ಫೋಟೋಗಳು ಮತ್ತು ವೀಡಿಯೊ ಸೇರಿದಂತೆ ಹಲವು ದಾಖಲೆಗಳನ್ನು ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಮಾರ್ಚ್ 14 ರಂದು ನಡೆದ ಅಗ್ನಿಶಾಮಕ ಕಾರ್ಯಾಚರಣೆಯ ಸಮಯದಲ್ಲಿ ದೆಹಲಿ ಪೊಲೀಸರು (Delhi Police) ಈ ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಇದನ್ನೂ ಓದಿ: ಅಮೆರಿಕ | ಗುಜರಾತ್‌ ಮೂಲದ ಅಪ್ಪ-ಮಗಳಿಗೆ ಗುಂಡಿಕ್ಕಿ ಹತ್ಯೆ – ಶೂಟರ್‌ ಅರೆಸ್ಟ್‌

    ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ವರ್ಮಾ, ನಾನು ಅಥವಾ ನನ್ನ ಕುಟುಂಬ ಸದಸ್ಯರು ಆ ಕೋಣೆಯಲ್ಲಿ ಯಾವುದೇ ಹಣವನ್ನು ಇರಿಸಿಲ್ಲ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಆಪಾದಿತ ನಗದು ನಮಗೆ ಸೇರಿದೆ ಎಂಬ ಸಲಹೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ನಗದನ್ನು ನಾವು ಸಂಗ್ರಹಿಸಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣವಾಗಿ ಅಸಂಬದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್‌

    ಸಿಬ್ಬಂದಿ ಕ್ವಾರ್ಟರ್ಸ್ ಬಳಿ ಅಥವಾ ಔಟ್‌ಹೌಸ್‌ನಲ್ಲಿ ತೆರೆದ, ಮುಕ್ತವಾಗಿ ಪ್ರವೇಶಿಸಬಹುದಾದ ಮತ್ತು ಸಾಮಾನ್ಯವಾಗಿ ಬಳಸುವ ಸ್ಟೋರ್‌ರೂಮ್‌ನಲ್ಲಿ ಹಣ ಸಂಗ್ರಹಿಸಬಹುದು ಎಂಬ ಆರೋಪ ನಂಬಲಾಗದಂತಿದೆ ಎಂದಿದ್ದಾರೆ. ಇದು ನನ್ನ ವಾಸಸ್ಥಳದಿಂದ ಪ್ರತ್ಯೇಕವಾಗಿರುವ ಕೋಣೆಯಾಗಿದೆ. ಗೋಡೆಯೊಂದು ನನ್ನ ವಾಸಸ್ಥಳವನ್ನು ಆ ಔಟ್‌ಹೌಸ್‌ನಿಂದ ಪ್ರತ್ಯೇಕಿಸುತ್ತದೆ. ಪತ್ರಿಕೆಗಳಲ್ಲಿ ನನ್ನ ಮೇಲೆ ಆರೋಪ ಹೊರಿಸಿ ಮಾನಹಾನಿಯಾಗುವ ಮೊದಲು ಮಾಧ್ಯಮವು ಸ್ವಲ್ಪ ವಿಚಾರಣೆ ನಡೆಸಬೇಕಿತ್ತು ಎಂದು ನಾನು ಬಯಸುತ್ತೇನೆ ಎಂದು ನ್ಯಾ. ವರ್ಮಾ ಹೇಳಿದರು. ಇದನ್ನೂ ಓದಿ: ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ – ಏರ್‌ ಇಂಡಿಯಾ ವಿರುದ್ಧ ಡೇವಿಡ್‌ ವಾರ್ನರ್‌ ಗರಂ!

  • ಅಲಹಾಬಾದ್ ಹೈಕೋರ್ಟ್ ಕಸದ ಬುಟ್ಟಿನಾ? – ನ್ಯಾ.ಯಶವಂತ್ ವರ್ಮಾ ವರ್ಗಾಯಿಸಿದ್ದಕ್ಕೆ ಬಾರ್ ಕೌನ್ಸಿಲ್ ಗರಂ

    ಅಲಹಾಬಾದ್ ಹೈಕೋರ್ಟ್ ಕಸದ ಬುಟ್ಟಿನಾ? – ನ್ಯಾ.ಯಶವಂತ್ ವರ್ಮಾ ವರ್ಗಾಯಿಸಿದ್ದಕ್ಕೆ ಬಾರ್ ಕೌನ್ಸಿಲ್ ಗರಂ

    ಗಾಂಧಿನಗರ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ 15 ಕೋಟಿ ರೂ. ನಗದು ಪತ್ತೆ ಬೆನ್ನಲ್ಲೇ ಅವರನ್ನು ಅಲಹಾಬಾದ್ ಹೈಕೋರ್ಟ್‍ಗೆ ವರ್ಗ ಮಾಡಲಾಗಿದೆ. ಇದಕ್ಕೆ ಅಲಹಾಬಾದ್ ಹೈಕೋರ್ಟ್ ವಕೀಲರು ಗರಂ ಆಗಿದ್ದಾರೆ.

    ಅಲಹಾಬಾದ್ ಹೈಕೋರ್ಟ್ ಕಸದ ಬುಟ್ಟಿನಾ ಎಂದು ವಕೀಲರು ಪ್ರಶ್ನಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ಸಿಜೆ ಮತ್ತು ಇತರೆ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಬಾರ್ ಕೌನ್ಸಿಲ್ (Allahabad HC bar Association), ಕೊಲಿಜಿಯಂ ನಿರ್ಧಾರ ಅಚ್ಚರಿ ತಂದಿದೆ. ಹಲವು ಪ್ರಶ್ನೆ ಹುಟ್ಟು ಹಾಕಿದೆ. ಈ ಬೆಳವಣಿಗೆ ಕಳವಳಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

    ಅಲಹಾಬಾದ್ ಹೈಕೋರ್ಟ್ ವಿಭಜಿಸುವ ಪಿತೂರಿಯೂ ನಡೆದಿದೆ ಎಂದು ಆರೋಪಿಸಿರುವ ಬಾರ್ ಕೌನ್ಸಿಲ್, ಸೋಮವಾರ ಸಭೆ ನಡೆಸಲಿದೆ. ಅಂದ ಹಾಗೇ, ಉತ್ತರಪ್ರದೇಶದ ಸಕ್ಕರೆ ಕಾರ್ಖಾನೆಯೊಂದಕ್ಕೆ ಸಂಬಂಧಿಸಿದ ಕೇಸಲ್ಲಿ ಇದೇ ನ್ಯಾಯಮೂರ್ತಿ ವಿರುದ್ಧ ಸಿಬಿಐ 2018ರಲ್ಲಿ ಎಫ್‍ಐಆರ್ ದಾಖಲಿಸಿದ್ದ ವಿಚಾರ ಬಹಿರಂಗಗೊಂಡಿದೆ.

    ಈ ಬೆಳವಣಿಗೆ ನಡುವೆಯೇ ನ್ಯಾ. ವರ್ಮಾ (Justice Yashwant Varma) ಅವರ ನಿವಾಸದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಾಚರಣೆ ಸಮಯದಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ ಎಂದು ನಾನು ಹೇಳಿಲ್ಲ ಎಂದು ದೆಹಲಿ ಅಗ್ನಿಶಾಮಕ ದಳದ (ಡಿಎಫ್‌ಎಸ್) ಮುಖ್ಯಸ್ಥ ಅತುಲ್ ಗರ್ಗ್ (Atul Garg) ಸ್ಪಷ್ಟಪಡಿಸಿದ್ದಾರೆ.

    ಗುರುವಾರ ರಾತ್ರಿ ನಡೆದ ಅಗ್ನಿ ಅವಘಡದ ಸಂದರ್ಭದಲ್ಲಿ ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್ (Supreme Court) ಕೊಲಿಜಿಯಂ ಇಡೀ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಹಣ ಸಿಕ್ಕಿಲ್ಲ ಎಂದು ಹೇಳೇ ಇಲ್ಲ, ನನ್ನ ಹೆಸರು ಯಾಕೆ ಉಲ್ಲೇಖಿಸಿದ್ದಾರೆ ಗೊತ್ತಿಲ್ಲ ಎಂದ ಅಗ್ನಿಶಾಮಕ ದಳದ ಮುಖ್ಯಸ್ಥ

  • ಜಡ್ಜ್ ಮನೆಯಲ್ಲಿ ಹಣ ಸಿಕ್ಕಿಲ್ಲ ಎಂದು ಹೇಳೇ ಇಲ್ಲ, ನನ್ನ ಹೆಸರು ಯಾಕೆ ಉಲ್ಲೇಖಿಸಿದ್ದಾರೆ ಗೊತ್ತಿಲ್ಲ ಎಂದ ಅಗ್ನಿಶಾಮಕ ದಳದ ಮುಖ್ಯಸ್ಥ

    ಜಡ್ಜ್ ಮನೆಯಲ್ಲಿ ಹಣ ಸಿಕ್ಕಿಲ್ಲ ಎಂದು ಹೇಳೇ ಇಲ್ಲ, ನನ್ನ ಹೆಸರು ಯಾಕೆ ಉಲ್ಲೇಖಿಸಿದ್ದಾರೆ ಗೊತ್ತಿಲ್ಲ ಎಂದ ಅಗ್ನಿಶಾಮಕ ದಳದ ಮುಖ್ಯಸ್ಥ

    ನವದೆಹಲಿ: ದೆಹಲಿ ಹೈಕೋರ್ಟ್ (Delhi High Court) ನ್ಯಾಯಾಧೀಶ ಯಶವಂತ್ ವರ್ಮಾ (Justice Yashwant Varma) ಅವರ ನಿವಾಸದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಾಚರಣೆ ಸಮಯದಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ ಎಂದು ನಾನು ಹೇಳಿಲ್ಲ ಎಂದು ದೆಹಲಿ ಅಗ್ನಿಶಾಮಕ ದಳದ (ಡಿಎಫ್‌ಎಸ್) ಮುಖ್ಯಸ್ಥ ಅತುಲ್ ಗರ್ಗ್ (Atul Garg) ಸ್ಪಷ್ಟಪಡಿಸಿದ್ದಾರೆ.

    ನ್ಯಾಯಾಧೀಶರ ಅಧಿಕೃತ ನಿವಾಸದಲ್ಲಿ ಬೆಂಕಿ ನಂದಿಸುವಾಗ ಯಾವುದೇ ನಗದು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ ಎಂದು ತಮ್ಮ ಹೆಸರು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ನನ್ನ ಹೆಸರು ಯಾಕೆ ಉಲ್ಲೇಖಿಸಿದ್ದಾರೆ ಎಂದು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

    ಅಗ್ನಿಶಾಮಕ ದಳದವರು ಸ್ಥಳದಲ್ಲಿ ಯಾವುದೇ ನಗದು ಕಂಡುಬಂದಿಲ್ಲ ಎಂದು ಯಾವುದೇ ಮಾಧ್ಯಮಗಳಿಗೆ ಹೇಳಿಲ್ಲ. ವರದಿಗಳಲ್ಲಿ ಏಕೆ ನನ್ನ ಹೆಸರು ಉಲ್ಲೇಖಿಸಲಾಗಿದೆ ಎಂಬುದು ನನಗೆ ಏಕೆ ಗೊತ್ತಿಲ್ಲ. ಈಗಾಗಲೇ ಸುದ್ದಿ ಪ್ರಕಟಿಸಿದ ಮಾಧ್ಯಮ ಸಂಸ್ಥೆಗಳಿಗೆ ಸ್ಪಷ್ಟೀಕರಣ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.

    ಗುರುವಾರ ರಾತ್ರಿ ನಡೆದ ಅಗ್ನಿ ಅವಘಡದ ಸಂದರ್ಭದಲ್ಲಿ ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್ (Supreme Court) ಕೊಲಿಜಿಯಂ ಇಡೀ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ.

    ನ್ಯಾಯಮೂರ್ತಿ ವರ್ಮಾ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ನ್ಯಾ.ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿದ್ದಕ್ಕೂ ಅವರ ಅಧಿಕೃತ ನಿವಾಸದಲ್ಲಿ ನಗದು ಪತ್ತೆಯಾಗಿದ್ದಕ್ಕೂ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ ಸ್ಪಷ್ಟೀಕರಣ ನೀಡಿದೆ. ಈ ಬಗ್ಗೆ ನಡೆಯುತ್ತಿರುವ ತನಿಖೆಯಿಂದ ಸ್ವತಂತ್ರವಾಗಿ ವರ್ಗಾವಣೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವರ್ಗಾವಣೆ ಕ್ರಮದ ಭಾಗವಲ್ಲ ಎಂದ ಸುಪ್ರೀಂ

  • ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

    ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

    ನವದೆಹಲಿ: ನಿವಾಸದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿ ಸುದ್ದಿಯಲ್ಲಿರುವ ದೆಹಲಿ ಹೈಕೋರ್ಟ್‌ (Delhi High Court) ನ್ಯಾ. ಯಶವಂತ ವರ್ಮಾ (Justice Yaswant Varma) ಅವರ ಹೆಸರನ್ನು ಪ್ರಕರಣ ಒಂದರಲ್ಲಿ ಸಿಬಿಐ (CBI) ಆರೋಪಿಯನ್ನಾಗಿಸಿ ಎಫ್‌ಐಆರ್‌ ದಾಖಲು ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಬ್ಯಾಂಕ್‌ನಿಂದ ಪಡೆದ ಸಾಲವನ್ನು ದುರುಪಯೋಗ ಮಾಡಿಕೊಂಡ ಆರೋಪದ ಅಡಿ ಸಿಂಭಾವೋಲಿ ಶುಗರ್ಸ್ ಕಂಪನಿ ವಿರುದ್ಧ 2018 ರಲ್ಲಿ ಸಿಬಿಐ ಮತ್ತು ಇಡಿ ಎಫ್‌ಐಆರ್‌ ದಾಖಲಿಸಿತ್ತು. ಅಲಹಾಬಾದ್‌ ಹೈಕೋರ್ಟ್‌ ಆದೇಶದ ಮೇರೆಗೆ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಈ ಕಂಪನಿಯಲ್ಲಿ ಯಶವಂತ ವರ್ಮಾ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಸಿಬಿಐ ವರ್ಮಾ ಅವರನ್ನು 10ನೇ ಆರೋಪಿಯನ್ನಾಗಿ ಉಲ್ಲೇಖಿಸಿತ್ತು. ಕ್ರಿಮಿನಲ್ ದುರ್ನಡತೆ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಅಡಿ ಎಫ್‌ಐಆರ್‌ ದಾಖಲಾಗಿತ್ತು.

    ಯಶವಂತ ವರ್ಮಾ ಅವರು 2014 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆಯುವ ಮೊದಲು ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಸಿಬಿಐ ತನಿಖೆಗೆ ಆದೇಶಿಸಿದ್ದ ಅಲಹಾಬಾದ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಕಳೆದ ವರ್ಷ ರದ್ದುಗೊಳಿಸಿತ್ತು.  ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವರ್ಗಾವಣೆ ಕ್ರಮದ ಭಾಗವಲ್ಲ ಎಂದ ಸುಪ್ರೀಂ

    ಎಫ್‌ಐಆರ್ ದಾಖಲಾದ ಸ್ವಲ್ಪ ಸಮಯದ ನಂತರ ಸಿಬಿಐ ವರ್ಮಾ ಅವರ ಹೆಸರನ್ನು ಎಫ್‌ಐಆರ್‌ನಿಂದ ತೆಗೆದುಹಾಕಿತ್ತು. ಈ ವಿಚಾರವನ್ನು ಕೋರ್ಟ್‌ ಗಮನಕ್ಕೆ ತಂದಿತ್ತು. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ನಂದಿಸಲು ಹೋದಾಗ ಸಿಕ್ಕಿದ್ದು ಕಂತೆ ಕಂತೆ ನೋಟು

    ಎಫ್‌ಐಆರ್‌ ದಾಖಲಾಗಿದ್ದು ಯಾಕೆ?
    ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಿಂದ ಸಿಂಭಾವೋಲಿ ಶುಗರ್ಸ್ ರೈತರ ಕೃಷಿ ಉಪಕರಣಗಳು ಮತ್ತು ಇತರ ಅಗತ್ಯಗಳಿಗಾಗಿ ಸಾಲವನ್ನು ಪಡೆದುಕೊಂಡಿತ್ತು. ಈ ಸಾಲವನ್ನು ಕಂಪನಿ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದ ಆರೋಪ ಕೇಳಿ ಬಂದಿತ್ತು. ಕ್ರಿಮಿನಲ್ ನಂಬಿಕೆ ಉಲ್ಲಂಘನೆಯ ಕಾರಣಕ್ಕಾಗಿ 97.85 ಕೋಟಿ ರೂ.ಹಣವನ್ನು ವಂಚನೆ ಮಾಡಲಾಗಿದೆ ಎಂದು ಬ್ಯಾಂಕ್‌ ಘೋಷಿಸಿ 2015 ರಲ್ಲಿ ಆರ್‌ಬಿಐಗೆ ವರದಿ ನೀಡಿತ್ತು.

    ಯಾವುದೇ ತನಿಖೆ ಅಗತ್ಯವಿಲ್ಲದ ಕಾರಣ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಆದೇಶಿಸುವಲ್ಲಿ ಹೈಕೋರ್ಟ್ ತಪ್ಪು ಮಾಡಿದೆ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಹೇಳಿತ್ತು.

  • ದೆಹಲಿ ಹೈಕೋರ್ಟ್ ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವರ್ಗಾವಣೆ ಕ್ರಮದ ಭಾಗವಲ್ಲ ಎಂದ ಸುಪ್ರೀಂ

    ದೆಹಲಿ ಹೈಕೋರ್ಟ್ ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವರ್ಗಾವಣೆ ಕ್ರಮದ ಭಾಗವಲ್ಲ ಎಂದ ಸುಪ್ರೀಂ

    ನವದೆಹಲಿ: ದೆಹಲಿ ಹೈಕೋರ್ಟ್ (Delhi High Court) ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆಯಾಗಿದೆ ಎಂಬ ವಿಚಾರಕ್ಕೂ, ಅವರ ವರ್ಗಾವಣೆ ಮತ್ತು ತನಿಖೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳು ಹರಡುತ್ತಿವೆ. ಸೂಚಿಸಿದ ಕಾರ್ಯವಿಧಾನದ ಪ್ರಕಾರ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ (Supreme Court) ಹೇಳಿದೆ.

    ದೆಹಲಿ ಹೈಕೋರ್ಟ್‌ನಲ್ಲಿ ಎರಡನೇ ಹಿರಿಯ ನ್ಯಾಯಾಧೀಶ ಮತ್ತು ಕೊಲಿಜಿಯಂ ಸದಸ್ಯರಾಗಿರುವ ನ್ಯಾ.ವರ್ಮಾ (Yashwant Varma) ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ (Allahabad High Court) ವರ್ಗಾವಣೆ ಮಾಡುವ ಪ್ರಸ್ತಾವನೆಯು ಸ್ವತಂತ್ರವಾಗಿದೆ. ಇದು ಆಂತರಿಕ ವಿಚಾರಣಾ ಕಾರ್ಯವಿಧಾನದಿಂದ ಪ್ರತ್ಯೇಕವಾಗಿದೆ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ನಂದಿಸಲು ಹೋದಾಗ ಸಿಕ್ಕಿದ್ದು ಕಂತೆ ಕಂತೆ ನೋಟು

    ನ್ಯಾಯಮೂರ್ತಿ ವರ್ಮಾ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಒಂಬತ್ತನೇ ಹಿರಿಯ ನ್ಯಾಯಮೂರ್ತಿಯಾಗಿರುತ್ತಾರೆ. ಈ ಪ್ರಸ್ತಾವನೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡ ಕೊಲಿಜಿಯಂ ಮಾ.20ರಂದು ಪರಿಶೀಲಿಸಿತ್ತು ಎಂದು ನ್ಯಾಯಾಲಯ ಹೇಳಿದೆ.

    ನ್ಯಾ.ವರ್ಮಾ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ವೇಳೆ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ತೆರಳಿದ್ದಾಗ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪತ್ತೆಯಾದ ಹಣದ ಮೊತ್ತದ ಮಾಹಿತಿ ತಿಳಿದಿಲ್ಲ.

    ದೆಹಲಿ ಹೈಕೋರ್ಟ್ ವೆಬ್‌ಸೈಟ್‌ನ ಮಾಹಿತಿ ಪ್ರಕಾರ ನ್ಯಾ.ವರ್ಮಾ ಅವರು ಆಗಸ್ಟ್ 1992 ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. ಅಕ್ಟೋಬರ್ 2014 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಫೆಬ್ರವರಿ 2016 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು, ನಂತರ ಅಕ್ಟೋಬರ್ 2021 ರಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು.

  • ʻದೈಹಿಕ ಸಂಬಂಧʼ ಅಂದ್ರೆ ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ – ಪೋಕ್ಸೋ ಕೇಸ್‌ ಆರೋಪಿ ಖುಲಾಸೆಗೊಳಿಸಿದ ದೆಹಲಿ ಹೈಕೋರ್ಟ್

    ʻದೈಹಿಕ ಸಂಬಂಧʼ ಅಂದ್ರೆ ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ – ಪೋಕ್ಸೋ ಕೇಸ್‌ ಆರೋಪಿ ಖುಲಾಸೆಗೊಳಿಸಿದ ದೆಹಲಿ ಹೈಕೋರ್ಟ್

    ನವದೆಹಲಿ: ಪೋಕ್ಸೊ ಪ್ರಕರಣದಲ್ಲಿ (POCSO case) ಬಂಧಿತನಾಗಿದ್ದ ಆರೋಪಿಯನ್ನು ದೆಹಲಿ ಹೈಕೋರ್ಟ್‌ (Delhi High Court) ಇತ್ತೀಚೆಗೆ ಖುಲಾಸೆಗೊಳಿಸಿದೆ. ಅಲ್ಲದೇ ʻದೈಹಿಕ ಸಂಬಂಧʼ ಅಂದ್ರೆ ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ ಎಂದು ಕೋರ್ಟ್‌ ಹೇಳಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರತಿಬಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ಪೀಠವು, ಸಂತ್ರಸ್ತೆಯ ಹೇಳಿಕೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ದೌರ್ಜನ್ಯವನ್ನು ಸೂಚಿಸುತ್ತಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ – ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು, ಸಾವಿನ ಸಂಖ್ಯೆ 6ಕ್ಕೇರಿಕೆ!

    ಸಂತ್ರಸ್ತೆ ವಾಸ್ತವವಾಗಿ ದೈಹಿಕ ಸಂಬಂಧ ಎಂಬ ಪದಗುಚ್ಛ ಬಳಸಿದ್ದು, ಈ ಪದವನ್ನು ಆಕೆ ಹೇಗೆ ಅರ್ಥೈಸಿದ್ದಾಳೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪೋಕ್ಸೋ ಕಾಯ್ದೆಯ ಸೆಕ್ಷನ್-3 ಅಥವಾ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಅಪರಾಧ ಸಾಬೀತಾಗಲು ʻಸಂಬಂಧ ಏರ್ಪಟ್ಟಿತ್ತುʼ ಎಂಬ ಪದ ಬಳಕೆ ಸಾಲದು. ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರೆ ಒಪ್ಪಿಗೆ ಅಪ್ರಸ್ತುತವಾಗಿದ್ದರೂ ಲೈಂಗಿಕ ದೌರ್ಜನ್ಯ ನಡೆಯದೇ ಇರುವಾಗ ದೈಹಿಕ ಸಂಬಂಧ ಎಂಬ ಪದಗುಚ್ಛವನ್ನು ಲೈಂಗಿಕ ಸಂಭೋಗ ಎಂದು ತನ್ನಿಂತಾನೇ ಪರಿವರ್ತಿಸಲಾಗದು ಎಂದು ಕೋರ್ಟ್‌ ವಿವರಿಸಿದೆ.

    ಅಪ್ರಾಪ್ತ ಸಂತ್ರಸ್ತೆಯು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಇಲ್ಲವೇ ಆಕೆಯ ಹೇಳಿಕೆಯನ್ನು ಬೆಂಬಲಿಸುವಂತಹ ಸಾಕ್ಷ್ಯಗಳೂ ಇಲ್ಲ. ಆಕೆ ಸ್ವಯಂಪ್ರೇರಣೆಯಿಂದ ಮೇಲ್ಮನವಿದಾರರೊಂದಿಗೆ ತೆರಳಿದ್ದಾಳೆ ಎಂಬ ಅಂಶವನ್ನೂ ಪ್ರಶ್ನಿಸಲಾಗಿಲ್ಲ. ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವುದನ್ನು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕೆ ಹೊರತು ಊಹೆಯಿಂದ ಅದನ್ನ ನಿರ್ಣಯಿಸಲಾಗದು. ಅಂತಹ ಪ್ರಕರಣಗಳಲ್ಲಿ, ಶಂಕೆಯ ಲಾಭವು ಆರೋಪಿಯ ಪರವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ. ಇದನ್ನೂ ಓದಿ: ಸಾರಿಗೆ ಮುಷ್ಕರ ಕೈಬಿಡುವಂತೆ ಸರ್ಕಾರ ಮನವಿ – ಸಿಎಂ 2,000 ಕೋಟಿ ಬಿಡುಗಡೆ ಮಾಡಿದ್ದಾರೆ: ರಾಮಲಿಂಗಾ ರೆಡ್ಡಿ

    ಅಲ್ಲದೇ ಸಂತ್ರಸ್ತೆ ತನ್ನ ಮೇಲೆ ದೈಹಿಕ ಹಲ್ಲೆ ಇಲ್ಲವೇ ತಪ್ಪು ಕೆಲಸ ನಡೆದಿಲ್ಲ ಎಂದು ಹೇಳಿರುವುದನ್ನು ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ದೈಹಿಕ ಗಾಯ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವ ಚಿಹ್ನೆಗಳಿಲ್ಲ ಎಂಬುದನ್ನು ಗಮನಿಸಿದ ಕೋರ್ಟ್‌ ವಿಚಾರಣಾ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ಯಾವುದೇ ತರ್ಕ ಒದಗಿಸಿಲ್ಲ ಎಂದು ತಿಳಿಸಿತು. ಮೇಲ್ಮನವಿದಾರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ವಿಚಾರಣಾ ನ್ಯಾಯಾಲಯ ಯಾವ ರೀತಿ ತೀರ್ಮಾನಿಸಿತು ಎಂಬುದು ಅಸ್ಪಷ್ವವಾಗಿದೆ. ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂಬ ಅಂಶ ಒಳಪ್ರವೇಶಿಕೆಯ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ತೀರ್ಮಾನಕ್ಕೆ ಕಾರಣವಾಗದು ಎಂದ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತು. ಇದನ್ನೂ ಓದಿ: ಪಾಕ್‌ ವಿರುದ್ಧ ರೋಚಕ ಜಯ – WTC ಫೈನಲ್‌ಗೆ ದ.ಆಫ್ರಿಕಾ, ಭಾರತಕ್ಕೆ ಗೆಲುವೊಂದೇ ದಾರಿ

  • ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

    ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

    – ಪ್ರತಿಯೊಂದು ಆಸ್ಪತ್ರೆಯೂ ವೈದ್ಯಕೀಯ ಸೌಲಭ್ಯಗಳ ಫಲಕ ಅಳವಡಿಸುವಂತೆ ಸೂಚನೆ

    ನವದೆಹಲಿ: ಸರ್ಕಾರಿ, ಖಾಸಗಿ ಆಸ್ಪತ್ರೆಗಳು (Government And Private Hospitals) ಮತ್ತು ನರ್ಸಿಂಗ್ ಹೋಂಗಳು ಅತ್ಯಾಚಾರ, ಆಸಿಡ್ ದಾಳಿ ಮತ್ತು ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನಿರಾಕರಿಸುವಂತಿಲ್ಲ, ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಚಿಕಿತ್ಸೆ ನಿರಾಕರಿಸುವುದು ಅಪರಾಧವಾಗಿದ್ದು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ದಂಡ ವಿಧಿಸಬಹುದು ಎಂದು ದೆಹಲಿ ಹೈಕೋರ್ಟ್ (Delhi High Court) ಮಹತ್ವದ ಅದೇಶ ನೀಡಿದೆ.

    16 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರ ಪೀಠ ಹಲವು ನಿರ್ದೇಶನಗಳನ್ನು ನೀಡಿದೆ. ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‌ಗಳು, ವೈದ್ಯಕೀಯ ಕೇಂದ್ರಗಳು ಅತ್ಯಾಚಾರ ಸಂತ್ರಸ್ತರು/ಬದುಕುಳಿದವರು, ಪೋಕ್ಸೋ ಪ್ರಕರಣದಲ್ಲಿ ಬದುಕುಳಿದವರು ಮತ್ತು ಲೈಂಗಿಕ ದಾಳಿಗಳಿಂದ ಬದುಕುಳಿದವರು ಇತ್ಯಾದಿಗಳಿಗೆ ಉಚಿತ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸುವುದು ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

    STOP RAPE

    ದೆಹಲಿಯ ಪ್ರತಿಯೊಂದು ಆಸ್ಪತ್ರೆಯೂ ವೈದ್ಯಕೀಯ ಸೌಲಭ್ಯಗಳ ಫಲಕ ಅಳವಡಿಸಬೇಕು, ಮುಖ್ಯವಾಗಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿಯ ಬಲಿಪಶುಗಳು/ ಬದುಕುಳಿದವರಿಗೆ ಉಚಿತ ಹೊರರೋಗಿ ಮತ್ತು ಒಳರೋಗಿ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸುವ ಬೋರ್ಡ್ ಅನ್ನು ಹಾಕಬೇಕು. ಅಪರಾಧಗಳಲ್ಲಿ ಬದುಕುಳಿದವರನ್ನು ತಕ್ಷಣವೇ ಪರೀಕ್ಷಿಸಬೇಕು ಮತ್ತು ಅಗತ್ಯವಿದ್ದರೆ HIV ಯಂತಹ ಲೈಂಗಿಕವಾಗಿ ಹರಡುವ ರೋಗಗಳಿಗೆ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

    ಅಂತಹ ಬಲಿಪಶು/ಬದುಕುಳಿದವರಿಗೆ ದೈಹಿಕ ಮತ್ತು ಮಾನಸಿಕ ಸಮಾಲೋಚನೆ ನೀಡಬೇಕು, ತುರ್ತು ಸಂದರ್ಭಗಳಲ್ಲಿ ಸಂತ್ರಸ್ತೆಯನ್ನು ದಾಖಲಿಸಲು ಸಂಬಂಧಪಟ್ಟ ವೈದ್ಯಕೀಯ ಸಂಸ್ಥೆಯು ಗುರುತಿನ ಪುರಾವೆಯನ್ನು ಒತ್ತಾಯಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

    ಮಗಳ ಮೇಲೆ ಅತ್ಯಾಚಾರವೆಸಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಯ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ನ್ಯಾಯಾಲಯ ಮತ್ತು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್‌ಎಸ್‌ಎ) ಪುನರಾವರ್ತಿತ ಹಸ್ತಕ್ಷೇಪದ ಹೊರತಾಗಿಯೂ ಬದುಕುಳಿದವರು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕಾಯಬೇಕಾಯಿತು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.

  • ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ನವದೆಹಲಿ: ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ (Puja Khedkar) ಅವರಿಗೆ ದೆಹಲಿ ಹೈಕೋರ್ಟ್ (Delhi High Court) ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದೆ.

    ದೈಹಿಕ ನ್ಯೂನತೆ ಬಗ್ಗೆ ಸುಳ್ಳು ಹೇಳಿ ಹೆಸರು ಮತ್ತು ಉಪನಾಮವನ್ನು ಬದಲಿಸಿ ನಕಲಿ ಒಬಿಸಿ ಪ್ರಮಾಣಪತ್ರವನ್ನು ಮಾಡಿಸಿಕೊಂಡಿದ್ದ ಆರೋಪ ಅವರ ಮೇಲಿದೆ. ಈ ಸಂಬಂಧ ಅವರು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಉದ್ದೇಶಗಳು ಅಧಿಕಾರಿಗಳನ್ನು ವಂಚಿಸುವುದಾಗಿತ್ತು. ಅವಳ ನಿರ್ಧಾರ ದೊಡ್ಡ ಪಿತೂರಿಯ ಭಾಗವಾಗಿತ್ತು ಎಂದು ಹೇಳಿದೆ.

    ಆಕೆಯ ವಿರುದ್ಧದ ಆರೋಪಗಳು ಅಧಿಕಾರಿಗಳಿಗೆ ಮಾತ್ರವಲ್ಲದೆ, ರಾಷ್ಟ್ರದ ದೊಡ್ಡ ವಂಚನೆಗೆ ಉದಾಹರಣೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕಳೆದ ತಿಂಗಳು ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

    ಆಕೆಯ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ನಡೆದಿದ್ದ ಪ್ರಾಥಮಿಕ ತನಿಖೆ ವೇಳೆ ಆಕೆ ತಪ್ಪಿತಸ್ಥೆ ಎಂದು ಕಂಡು ಬಂದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು.

  • ನಿಮಗೆ ಇಷ್ಟವಾಗದೇ ಇದ್ರೆ ಭಾರತದಲ್ಲಿ ಕೆಲಸ ಮಾಡಬೇಡಿ – ವಿಕಿಪೀಡಿಯಗೆ ಹೈಕೋರ್ಟ್‌ ಎಚ್ಚರಿಕೆ

    ನಿಮಗೆ ಇಷ್ಟವಾಗದೇ ಇದ್ರೆ ಭಾರತದಲ್ಲಿ ಕೆಲಸ ಮಾಡಬೇಡಿ – ವಿಕಿಪೀಡಿಯಗೆ ಹೈಕೋರ್ಟ್‌ ಎಚ್ಚರಿಕೆ

    ನವದೆಹಲಿ: ನಿಮಗೆ ಭಾರತ (India) ಇಷ್ಟವಾಗದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ. ನಿಮ್ಮ ಸೈಟ್ ಅನ್ನು ನಿರ್ಬಂಧಿಸಲು ನಾವು ಸರ್ಕಾರವನ್ನು ಸೂಚಿಸುತ್ತೇವೆ ಎಂದು ಉಚಿತ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಗೆ (Wikipedia) ದೆಹಲಿ ಹೈಕೋರ್ಟ್ (Delhi High Court) ಎಚ್ಚರಿಕೆ ನೀಡಿದೆ.

    ಸುದ್ದಿ ಸಂಸ್ಥೆ ಎಎನ್‌ಐ (ANI) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ವಿಕಿಪೀಡಿಯಗೆ ನ್ಯಾಯಾಂಗ ನಿಂದನೆ ನೋಟಿಸ್ (Contempt of Court) ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಎಎನ್‌ಐಗೆ ಸಂಬಂಧಿಸಿದ ಪೇಜ್‌ ಎಡಿಟ್‌ ಮಾಡದಂತೆ ಸೂಚಿಸಿದೆ.

    ತನ್ನನ್ನು ಭಾರತ ಸರ್ಕಾರದ ಪ್ರಚಾರ ಸಾಧನ (The Propaganda Tool) ಎಂದು ಉಲ್ಲೇಖಿಸಿದ್ದನ್ನು ಪ್ರಶ್ನಿಸಿ ಎಎನ್‌ಐ ಕೋರ್ಟ್‌ ಮೊರೆ ಹೋಗಿದೆ. ಈ ಪೇಜ್‌ ಅನ್ನು ಎಡಿಟ್‌ ಮಾಡಿದ ಮೂರು ಖಾತೆಗಳ ವಿವರವನ್ನು ಬಹಿರಂಗಪಡಿಸಲು ವಿಕಿಪೀಡಿಯಗೆ ಸೂಚಿಸಿತ್ತು. ಆದರೆ ವಿಕೀಪಿಡಿಯಾ ಈ ಮಾಹಿತಿ ನೀಡಿಲ್ಲ. ಈ ಪ್ರಕರಣದಲ್ಲಿ ಹೆಸರಿಸಲಾದ ಮೂವರು ವ್ಯಕ್ತಿಗಳು ತನ್ನ ಸಂಪಾದಕರಲ್ಲ ಎಂದು ವಿಕಿಪೀಡಿಯಾ ಹೇಳಿಲ್ಲ ಎಂದು ಎಎನ್‌ಐ ತಿಳಿಸಿದೆ.  ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    court order law

    ಅರ್ಜಿ ವಿಚಾರಣೆ ವೇಳೆ ವಿಕಿಪೀಡಿಯ ಪರ ವಕೀಲರು, ತನ್ನ ಕಡೆಯಿಂದ ಕೆಲವು ದಾಖಲೆಗಳ ಸಲ್ಲಿಕೆ ಮಾಡಬೇಕಿದೆ. ವಿಕಿಪೀಡಿಯ ಭಾರತ ಮೂಲದ ಸಂಸ್ಥೆ ಅಲ್ಲದ ಕಾರಣ ಮಾಹಿತಿ ಸಲ್ಲಿಕೆಗೆ ವಿಳಂಬವಾಗಿದೆ ಎಂದು ತಿಳಿಸಿದರು.

    ಈ ಉತ್ತರಕ್ಕೆ ಸಿಟ್ಟಾದ ಹೈಕೋರ್ಟ್‌, ನೀವು ಭಾರತದ ಸಂಸ್ಥೆ ಅಲ್ಲ ಎನ್ನುವುದು ಪ್ರಶ್ನೆಯಲ್ಲ. ಕೋರ್ಟ್‌ ಸೂಚಿಸಿದಾಗ ಮಾಹಿತಿ ನೀಡಬೇಕು. ನಿಮ್ಮ ವ್ಯಾಪಾರ ವಹಿವಾಟುಗಳನ್ನು ನಾವು ಇಲ್ಲಿ ಬಂದ್‌ ಮಾಡುತ್ತೇವೆ. ನೀವು ಭಾರತದಲ್ಲಿ ಇರಬೇಕಾದರೆ ದೇಶದ ಕಾನೂನುಗಳನ್ನು ಪಾಲನೆ ಮಾಡಬೇಕು. ನಿಮಗೆ ಭಾರತ ಇಷ್ಟವಿಲ್ಲದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ ಎಂದು ಸೂಚಿಸಿತು.

    ಮುಂದಿನ ವಿಚಾರಣೆ ವೇಳೆ ವಿಕಿಪೀಡಿಯ ಪ್ರತಿನಿಧಿ ಹಾಜರಾಗಬೇಕು ಎಂದು ಸೂಚಿಸಿ ಅಕ್ಟೋಬರ್‌ಗೆ ವಿಚಾರಣೆಯನ್ನು ಮುಂದೂಡಿತು.

    ವಿಕಿಪೀಡಿಯ ವಿರುದ್ಧ ಎಎನ್‌ಐ 2 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದೆ. 2001 ರಲ್ಲಿ ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್ ಅವರು ವಿಕಿಪೀಡಿಯವನ್ನುಸ್ಥಾಪಿಸಿದ್ದಾರೆ. ವಿಕಿಮೀಡಿಯಾ ಫೌಂಡೇಶನ್‌ನಿಂದ ಇದು ನಡೆಯುತ್ತಿದ್ದು ಅಮೆರಿಕ ಮತ್ತು ಫ್ರಾನ್ಸಿನಲ್ಲಿ ನೆಲೆಗೊಂಡಿದೆ. ವಿಶ್ವಾದ್ಯಂತ  ಲಕ್ಷಕ್ಕೂ ಅಧಿಕ ಸ್ವಯಂಸೇವಕರು ವಿಕಿಪೀಡಿಯ ಪುಟದಲ್ಲಿ ಮಾಹಿತಿಯನ್ನು ಅಪ್‌ಡೇಟ್‌ ಮಾಡುತ್ತಿರುತ್ತಾರೆ.