Tag: Delhi High Court

  • ಉದಯಪುರ ಫೈಲ್ಸ್ ಭಾರೀ ವಿವಾದ: 150 ಕಡೆ ಕತ್ತರಿ

    ಉದಯಪುರ ಫೈಲ್ಸ್ ಭಾರೀ ವಿವಾದ: 150 ಕಡೆ ಕತ್ತರಿ

    ದಯಪುರದಲ್ಲಿ ನಡೆದಿದ್ದ ಟ್ರೇಲರ್ ಕನ್ಹಯ್ಯ ಲಾಲ್ (Kanhaiya Lal) ಪ್ರಕರಣದ ಕುರಿತಂತೆ ಉದಯಪುರ ಫೈಲ್ಸ್ (Udaipur Files) ಸಿನಿಮಾ ರೆಡಿ ಆಗಿತ್ತು. ಈ ಸಿನಿಮಾ ಬಿಡುಗಡೆಗೂ ಸಿದ್ಧವಾಗಿತ್ತು. ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಜಮಿಯತ್ ಉಲಾಮ ಇ ಹಿಂದ್ ಅಧ್ಯಕ್ಷ ಮೌಲಾನಾ ಹರ್ಷದ್ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಸಿನಿಮಾ ರಿಲೀಸ್ ಮಾಡದಂತೆ ದೆಹಲಿ ಹೈಕೋರ್ಟ್  (Delhi High Court) ತಡೆದಿದೆ.

    ಜು. 11ಕ್ಕೆ ಉದಯಪುರ ಫೈಲ್ಸ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ದ್ವೇಷ ಕಾರುವ ಸಿನಿಮಾ ಇದಾಗಿದ್ದರಿಂದ, ಸಿನಿಮಾವನ್ನು ತಡೆಯಬೇಕು ಅಂತ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಧಾರ್ಮಿಕ ಪ್ರಚೋದನೆಯ ಕಾರಣದಿಂದಾಗಿ ದೆಹಲಿ ಹೈಕೋರ್ಟ್ ಸಿನಿಮಾ ಬಿಡುಗಡೆಯನ್ನು ತಡೆದಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬೇಕೇ, ಬೇಡವೇ ಅನ್ನುವುದನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು ಎಂದು ಒಂದು ವಾರ ಗಡವು ನೀಡಿದೆ. ಇದನ್ನೂ ಓದಿ: ಸೋಮವಾರ ಥೈಲ್ಯಾಂಡ್‌ಗೆ ಹಾರಲಿದ್ದಾರೆ ದರ್ಶನ್

    ಈ ಮಧ್ಯ ಸೆನ್ಸಾರ್ ಮಂಡಳಿಯು (CBFC) ಚಿತ್ರಕ್ಕೆ 150 ಕಡೆ ಕತ್ತರಿಸುವಂತೆ ಸೂಚಿಸಲಾಗಿದೆ ಅನ್ನುವ ಸುದ್ದಿಯೂ ಹರಿದಾಡುತ್ತಿದೆ. ಆಕ್ಷೇಪಾರ್ಹ ದೃಶ್ಯಗಳಿಗೆ ಮತ್ತು ಸಂಭಾಷಣೆಗಳಿಗೆ ಕತ್ತರಿ ಹಾಕಬೇಕು ಅಂತ ಸೂಚಿಸಲಾಗಿದೆಯಂತೆ. ಆದರೆ, ನಿರ್ಮಾಪಕರು ಇದಕ್ಕೆ ಒಪ್ಪಿಲ್ಲ ಎನ್ನುವ ಮಾತೂ ಇದೆ. ಒಟ್ಟಿನಲ್ಲಿ ಒಂದು ವಾರದ ಒಳಗೆ ಸಿನಿಮಾ ಬಿಡುಗಡೆ ಕುರಿತು ನಿರ್ಧಾರ ತಗೆದುಕೊಳ್ಳಬೇಕಿದೆ.

  • ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ರಾಷ್ಟ್ರಕ್ಕಾಗಿ ಮಾಡಿದ ಸೇವೆಗೆ – ದೆಹಲಿ ಹೈಕೋರ್ಟ್

    ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ರಾಷ್ಟ್ರಕ್ಕಾಗಿ ಮಾಡಿದ ಸೇವೆಗೆ – ದೆಹಲಿ ಹೈಕೋರ್ಟ್

    ನವದೆಹಲಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ (Disability Pension) ನೀಡುವುದನ್ನು ಪ್ರಶ್ನಿಸಿ ರಕ್ಷಣಾ ಸಚಿವಾಲಯ ಸಲ್ಲಿಸಿದ್ದ ಸುಮಾರು 300 ಅರ್ಜಿಗಳನ್ನು ದೆಹಲಿ ಹೈಕೋರ್ಟ್ (Delhi High Court) ಇತ್ತೀಚೆಗೆ ವಜಾಗೊಳಿಸಿದೆ. ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಹೊರಡಿಸಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾ. ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರಿದ್ದ ವಿಭಾಗೀಯ ಪೀಠವು ಸಶಸ್ತ್ರ ಪಡೆಗಳ ಸಿಬ್ಬಂದಿ ಅಂಗವೈಕಲ್ಯ ಪಿಂಚಣಿಗೆ ಅರ್ಹರು ಎಂದಿದೆ.

    ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ಬದಲಿಗೆ ರಾಷ್ಟ್ರಕ್ಕಾಗಿ ಅವರು ಮಾಡಿದ ತ್ಯಾಗಕ್ಕೆ ಸಲ್ಲಿಸಬೇಕಾದ ಗೌರವ ಎಂದು ನ್ಯಾಯಾಲಯ ಬುದ್ಧಿವಾದ ಹೇಳಿದೆ. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಪ್ರಧಾನಿ ಮೋದಿಗೆ ಹಲೋ ಹೇಳಲು 400 ಕಿಮೀ ಪ್ರಯಾಣಿಸಿದ ಭಾರತೀಯ

    ಇಂತಹ ಪಿಂಚಣಿಯಿಂದ ಸೇವೆಯ ಕಾರಣಕ್ಕೆ ಅಂಗವೈಕಲ್ಯಕ್ಕೆ ತುತ್ತಾದ ಯೋಧನಿಗೆ ನೆರವು, ಆರ್ಥಿಕ ಭದ್ರತೆ ಹಾಗೂ ಘನತೆಯಿಂದ ಬದುಕಲು ಸಾಧ್ಯವಾಗುತ್ತದೆ. ಇದು ಧೈರ್ಯ ಮತ್ತು ಶ್ರದ್ಧೆಯಿಂದ ದೇಶಕ್ಕಾಗಿ ದುಡಿದ ಸೈನಿಕರೆಡೆಗೆ ಪ್ರಭುತ್ವ ನಿರ್ವಹಿಸಬೇಕಾದ ಜವಾಬ್ದಾರಿಯುತ ಕ್ರಮ ಎಂದು ತಿಳಿಸಿದೆ. ಇದನ್ನೂ ಓದಿ: ಫಾರ್ಮ್‌ ಹೌಸ್‌ನಲ್ಲಿ ಚಾಮುಂಡಿ ಪೂಜೆ ನೆರವೇರಿಸಿದ ದರ್ಶನ್

    ಅಂಗವೈಕಲ್ಯಕ್ಕೆ ತುತ್ತಾದ ಸೇನಾ ಸಿಬ್ಬಂದಿಯು ಸಂಘರ್ಷ ರಹಿತ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದರು ಎಂಬ ಒಂದೇ ಕಾರಣಕ್ಕೆ ಅವರಿಗೆ ಅಂಗವೈಕಲ್ಯ ಪಿಂಚಣಿ ನಿರಾಕರಿಸುವಂತಿಲ್ಲ. ಅತ್ಯಂತ ಕಠಿಣ ಹವಾಮಾನ ಮತ್ತು ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಲ್ಲಿ ಕಾಣಿಸಿಕೊಂಡ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ನ್ಯೂನತೆಗಳು ಸೇನಾ ಸೇವೆಯಿಂದ ಬಂದಿಲ್ಲ ಎಂದು ಸಾಬೀತುಪಡಿಸುವ ಜವಾಬ್ದಾರಿ ವೈದ್ಯಕೀಯ ಮಂಡಳಿಯ (RMB) ಮೇಲಿದೆ ಎಂದು ಹೇಳಿದೆ. ಇದನ್ನೂ ಓದಿ: ಕೊಡವ ಕಮ್ಯೂನಿಟಿಯಿಂದ ಇಂಡಸ್ಟ್ರಿಗೆ ಬಂದಿದ್ದು ನಾನೇ ಫಸ್ಟ್ – ರಶ್ಮಿಕಾ ಮತ್ತೊಂದು ಯಡವಟ್ಟು 

    ಸೇನಾ ಸಿಬ್ಬಂದಿಯ ನಿಯೋಜನೆಯ ಸ್ಥಳವನ್ನು ಆಧರಿಸಿ ಅವರ ಹಕ್ಕನ್ನು ಸಂಪೂರ್ಣವಾಗಿ ತಿರಸ್ಕರಿಸುವಂತಿಲ್ಲ ಎಂದ ನ್ಯಾಯಾಲಯ, ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತು. ಇದನ್ನೂ ಓದಿ: ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಸೇನೆಗೆ ಸಲ್ಲಿಸಿದ ಸೇವೆಯಿಂದಾಗಿ ಅರ್ಜಿದಾರ ಸೈನಿಕರಿಗೆ ಅಂಗವೈಕಲ್ಯ ಉಂಟಾಗಿಲ್ಲ. ಅವರು ಅಂಗವೈಕಲ್ಯ ಪಿಂಚಣಿಗೆ ಅರ್ಹರಲ್ಲ ಎಂದು ರಕ್ಷಣಾ ಸಚಿವಾಲಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೇಂದ್ರ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆರ್ ವೆಂಟಕರಮಣಿ ಸಚಿವಾಲಯದ ಪರವಾಗಿ ವಾದ ಮಂಡಿಸಿದ್ದರು.

  • ಪತಂಜಲಿ ಚವನ್‌ಪ್ರಾಶ್ ಉತ್ಪನ್ನದ ಜಾಹೀರಾತು ನಿಲ್ಲಿಸಲು ದೆಹಲಿ ಹೈಕೋರ್ಟ್ ಸೂಚನೆ

    ಪತಂಜಲಿ ಚವನ್‌ಪ್ರಾಶ್ ಉತ್ಪನ್ನದ ಜಾಹೀರಾತು ನಿಲ್ಲಿಸಲು ದೆಹಲಿ ಹೈಕೋರ್ಟ್ ಸೂಚನೆ

    ನವದೆಹಲಿ: ಪತಂಜಲಿಯ (Patanjali) ಚವನ್‌ಪ್ರಾಶ್ ಉತ್ಪನ್ನದ ಕುರಿತಾಗಿ ಯಾವುದೇ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ದೆಹಲಿ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಪತಂಜಲಿ ವಿರುದ್ಧ ಡಾಬರ್ (Dabur) ಸಂಸ್ಥೆ ಸಲ್ಲಿಸಿದ್ದ ಮಾನಹಾನಿ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

    ಜಾಹೀರಾತಿನಲ್ಲಿ, ಪತಂಜಲಿ ಆಯುರ್ವೇದ ಗ್ರಂಥಗಳು ಮತ್ತು ಶಾಸ್ತ್ರೀಯ ಗ್ರಂಥಗಳ ಪ್ರಕಾರ ಚವನ್‌ಪ್ರಾಶ್ (Chyawanprash) ತಯಾರಿಸಿದ ಏಕೈಕ ಸಂಸ್ಥೆ ಎಂದು ಹೇಳಿಕೊಂಡಿದ್ದು, ಡಾಬರ್‌ನಂತಹ ಇತರ ಬ್ರ‍್ಯಾಂಡ್‌ಗಳಿಗೆ ಅಧಿಕೃತ ಜ್ಞಾನದ ಕೊರತೆಯಿದೆ ಎಂದು ಸೂಚಿಸುತ್ತದೆ. ಈ ಜಾಹೀರಾತುಗಳಿಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ಕೋರಿ ಡಾಬರ್ ದೆಹಲಿ ಹೈಕೋರ್ಟ್ (Delhi High Court) ಮೊರೆ ಹೋಗಿ, ಬ್ರ‍್ಯಾಂಡ್‌ನ ಖ್ಯಾತಿಗೆ ಉಂಟಾದ ಹಾನಿಗೆ ಪರಿಹಾರವಾಗಿ 2 ಕೋಟಿ ರೂ.ಗಳನ್ನು ನೀಡುವಂತೆ ಕೋರಿತು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ

    ಜಾಹೀರಾತುಗಳು ಗ್ರಾಹಕರನ್ನು ದಾರಿ ತಪ್ಪಿಸುತ್ತವೆ. ಕಟ್ಟುನಿಟ್ಟಾದ ನಿಯಂತ್ರಕ ಮಾನದಂಡಗಳಿಂದ ನಿಯಂತ್ರಿಸಲ್ಪಡುವ ಉತ್ಪನ್ನಗಳ ಮೇಲಿನ ವಿಶ್ವಾಸವನ್ನು ದುರ್ಬಲಗೊಳಿಸುತ್ತವೆ ಎಂದು ಡಾಬರ್ ತನ್ನ ಅರ್ಜಿಯಲ್ಲಿ ವಾದಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ಮಧ್ಯಂತರ ಆದೇಶ ನೀಡಿದರು. ಮುಂದಿನ ವಿಚಾರಣೆಯು ಜುಲೈ 14ರಂದು ನಡೆಯಲಿದೆ. ಇದನ್ನೂ ಓದಿ: ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

    ಈ ಹಿಂದೆಯೂ ಕೋವಿಡ್ ವ್ಯಾಕ್ಸಿನ್ ಜಾಹೀರಾತು ವಿಚಾರದಲ್ಲೂ ಪತಂಜಲಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಪತಂಜಲಿ ವ್ಯಾಕ್ಸಿನ್‌ನಿಂದ ಕೊರೊನಾ ಗುಣಮುಖವಾಗಲಿದೆ ಎಂದು ಹೇಳಿಕೊಂಡಿತ್ತು. ಇದರ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಅರ್ಜಿ ಸಲ್ಲಿಸಿತ್ತು. ಬಳಿಕ ಇಂತಹ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಇತರ ಭರವಸೆ ನೀಡುವುದನ್ನು ನಿಲ್ಲಿಸಲು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಸೂಚಿಸಲಾಗಿತ್ತು. ಈ ಆದೇಶ ಪಾಲನೆ ಮಾಡದ ಹಿನ್ನೆಲೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಲಿ: ಸಂಸದ ಯದುವೀರ್

  • ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಇಬ್ಬರು ಆರೋಪಿಗಳಿಗೆ ಜಾಮೀನು

    ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಇಬ್ಬರು ಆರೋಪಿಗಳಿಗೆ ಜಾಮೀನು

    – ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿನ ಮನೋರಂಜನ್‌ಗೆ ಸಿಗದ ಬೇಲ್‌

    ನವದೆಹಲಿ: 2023ರ ಡಿಸೆಂಬರ್‌ 13ರಂದು ನಡೆದಿದ್ದ ಸಂಸತ್ತಿನ ಭದ್ರತಾ ಲೋಪ ಪ್ರಕರಣದ (Parliament Security Breach Case) ಇಬ್ಬರು ಆರೋಪಿಗಳಿಗೆ ದೆಹಲಿ ಹೈಕೋರ್ಟ್ (Delhi High Court) ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ.

    ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ದ್ವಿಸದಸ್ಯ ಪೀಠವು ನೀಲಂ ಆಜಾದ್, ಮಹೇಶ್ ಕುಮಾವತ್‌ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳಿಗೆ ತಲಾ 50,000 ರೂ. ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಸಲ್ಲಿಸುವಂತೆ ನಿರ್ದೇಶಿಸಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿಗ ಮನೋರಂಜನ್‌: ದೆಹಲಿ ಪೊಲೀಸರು

    Security breach in Lok Sabha

    ಪ್ರಕರಣ ಮುಗಿಯುವವರೆಗೆ ದೆಹಲಿ ಬಿಟ್ಟು ಹೋಗದಂತೆ ಸೂಚಿಸಿರುವ ಕೋರ್ಟ್‌ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 10 ಗಂಟೆ ವೇಳೆಗೆ ಗೊತ್ತುಪಡಿಸಿದ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದೆ. ಇದಕ್ಕೂ ಮುನ್ನ ವಿಚಾರಣೆ ನಡೆಸಿದ್ದ ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ (ASJ) ಹರ್ದೀಪ್ ಕೌರ್ ಆಜಾದ್ ಜಾಮೀಜು ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನೂ ಓದಿ: Tamil Nadu Custodial Death | ಕೊಲೆಗಾರರು ಹೀಗೆ ದಾಳಿ ಮಾಡಲ್ಲ – ಹೈಕೋರ್ಟ್‌ ಛೀಮಾರಿ; ಐವರು ಪೊಲೀಸರು ಅರೆಸ್ಟ್‌

    ಮೈಸೂರಿನ ಮನೋರಂಜನ್‌ಗೆ ಸಿಗದ ಜಾಮೀನು
    ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಕೋರ್ಟ್‌ ಮಾಸ್ಟರ್‌ ಮೈಂಡ್‌ಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್‌ಗೆ ಜಾಮೀನು ನಿರಾಕರಿಸಿದೆ. ಮೈಸೂರು ಮೂಲದ ಮನೋರಂಜನ್‌ ಅಂದಿನ ಸಂಸದ ಪ್ರತಾಪ್‌ ಸಿಂಹ ಅವರ ಮೂಲಕ ಪಾಸ್‌ ಪಡೆದು ಸಂಸತ್‌ ಪ್ರವೇಶಿಸಿದ್ದರು. ಇದನ್ನೂ ಓದಿ: ಓಲಾ, ಊಬರ್ ಬಳಕೆದಾರರಿಗೆ ಶಾಕ್ – ಪೀಕ್ ಅವರ್‌ನಲ್ಲಿ ದುಪ್ಪಟ್ಟು ದರ ವಿಧಿಸಲು ಕೇಂದ್ರ ಒಪ್ಪಿಗೆ

    Manoranjan

    ಏನಿದು ಪ್ರಕರಣ?
    2023ರ ಡಿಸೆಂಬರ್ 13 ರಂದು ಸಂಸತ್‌ ಭವನದಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಕೆಲವು ವ್ಯಕ್ತಿಗಳು ಸದನಕ್ಕೆ ನುಗ್ಗಿ ಸ್ಮೋಕ್‌ ಬಾಂಬ್‌ ಎಸೆದಿದ್ದರು. ಸಾಗರ್‌ ಶರ್ಮಾ ಮತ್ತು ಮನೋರಂಜನ್ ಎಂಬ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಬಂದು ಸ್ಮೋಕ್‌ ಬಾಂಬ್‌ ಎಸೆದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ದೆಹಲಿ ಪೊಲೀಸರು ಮಾಸ್ಟರ್ ಮೈಂಡ್, ಲಲಿತ್ ಝಾ ಮತ್ತು ಸಹ-ಆರೋಪಿ ಮಹೇಶ್ ಕುಮಾವತ್ ಸೇರಿ ಕೆಲವು ಆರೋಪಿಗಳನ್ನ ಬಂಧಿಸಿದ್ದರು. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಬಂಧನ

  • Boycott Turkey| ಕೇಂದ್ರದ ವಿರುದ್ಧ ಕೋರ್ಟ್‌ ಮೊರೆ ಹೋದ ಸೆಲಿಬಿ

    Boycott Turkey| ಕೇಂದ್ರದ ವಿರುದ್ಧ ಕೋರ್ಟ್‌ ಮೊರೆ ಹೋದ ಸೆಲಿಬಿ

    ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಾಥಮಿಕ ಹಂತದ ಸೇವೆಗಳನ್ನು ನೀಡಲು ನೀಡಿದ್ದ ಲೈಸನ್ಸ್‌ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟರ್ಕಿಯ (Turkey) ಸೆಲೆಬಿ (Celebi) ಕಂಪನಿ ದೆಹಲಿ ಹೈಕೋರ್ಟ್‌ (Delhi High Court) ಮೊರೆ ಹೋಗಿದೆ.

    ನಮ್ಮ ಕಂಪನಿ ರಾಷ್ಟ್ರೀಯ ಭದ್ರತೆಗೆ ಹೇಗೆ ಬೆದರಿಕೆಯಾಗಿದೆ ಎಂಬುದನ್ನು ವಿವರಿಸದೇ ಲೈಸನ್ಸ್‌ ರದ್ದುಗೊಳಿಸಿದ್ದು ಸರಿಯಲ್ಲ. ಇದರಿಂದಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 3,791 ಉದ್ಯೋಗಿಗಳು ಮತ್ತು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೆಲಿಬಿ ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಕಂಪನಿಗೆ ಯಾವುದೇ ಎಚ್ಚರಿಕೆ ನೀಡದೇ ನಿರ್ಧಾರ ಕೈಗೊಳ್ಳಲಾಗಿದೆ. ರದ್ದತಿಗೆ ಯಾವುದೇ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಕಂಪನಿ ಟರ್ಕಿಯಲ್ಲಿ ಹೆಸರು ನೋಂದಣಿಯಾಗಿದ್ದರೂ ಬಹುತೇಕ ಹೂಡಿಕೆದಾರು ಟರ್ಕಿ ಮೂಲವನ್ನು ಹೊಂದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಬಿಎಸ್‌ಎಫ್‌ ಯೋಧನಿಗೆ 20 ದಿನವೂ ಇನ್ನಿಲ್ಲದ ಟಾರ್ಚರ್‌ ನೀಡಿದ್ದ ಪಾಕ್‌

    ದೇಶದ 9 ವಿಮಾನ ನಿಲ್ದಾಣಗಳಲ್ಲಿ ಪ್ರಾಥಮಿಕ ಹಂತದ ಸೇವೆಗಳನ್ನು ನೀಡುತ್ತಿದ್ದ ಟರ್ಕಿಯ ಸೆಲೆಬಿ (Celebi) ಏವಿಯೇಷನ್ ಕಂಪನಿಗೆ ನೀಡಲಾಗಿದ್ದ ಸೇವಾ ಲೈಸನ್ಸ್ ಗಳನ್ನು ಭಾರತೀಯ ನಾಗರಿಕ ವಿಮಾನಯಾನ ಸುರಕ್ಷಾ ಬ್ಯೂರೋ (ಬಿಸಿಸಿಎಸ್) ಮೇ 15 ರದ್ದು ಮಾಡಿತ್ತು. ರಾಷ್ಟ್ರೀಯ ಭದ್ರತಾ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿತ್ತು.

    ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್‌, ಕೊಚ್ಚಿನ್‌, ಕಣ್ಣೂರು, ಚೆನ್ನೈ, ಗೋವಾದಲ್ಲಿ ಈ ಕಂಪನಿ ಪ್ರಾಥಮಿಕ ಸೇವೆ ನೀಡುತ್ತಿತ್ತು. ಸದ್ಯವೇ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಸೇವೆಗಳನ್ನು ನೀಡುವ ಗುತ್ತಿಗೆಯ ಆ ಕಂಪನಿ ಪಡೆಯಲು ಸಿದ್ಧತೆ ನಡೆಸಿತ್ತು. ಅಷ್ಟರಲ್ಲೇ ಭಾರತ ಸರ್ಕಾರ ಸೆಲೆಬಿಗೆ ನೀಡಲಾಗಿದ್ದ ಸೇವಾ ಲೈಸೆನ್ಸ್‌ ರದ್ದುಗೊಳಿಸಿದೆ. ಇದನ್ನೂ ಓದಿ: ಟರ್ಕಿಗೆ ಬೆಂಗಳೂರು ಶಾಕ್‌ – ಸೆಲೆಬಿ ಏವಿಯೇಷನ್‌ ಏರ್‌ಪೋರ್ಟ್‌ ಸೇವೆ ಸ್ಥಗಿತ

    ಸೆಲೆಬಿ ಏವಿಯೇಷನ್ ​​ಎರಡು ಪ್ರತ್ಯೇಕ ಘಟಕಗಳನ್ನು ಹೊಂದಿದೆ. ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ವಿಮಾನ ನಿಲ್ದಾಣ ನಿರ್ವಹಣೆ ಕಾರ್ಯಾಚರಣೆ ನಡೆಸುತ್ತಿದ್ದರೆ ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸೇವೆಗಳನ್ನು ಮೇಲ್ವಿಚಾರಣೆ ಮಾಡುತ್ತಿತ್ತು.

    ಸೆಲೆಬಿ 2008 ರಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಂಟಿ ಉದ್ಯಮದ ಮೂಲಕ ಭಾರತವನ್ನು ಪ್ರವೇಶಿಸಿತು. ಸೆಲೆಬಿ ಕಂಪನಿಗೆ ಕೆಲಸ ನಿರ್ವಹಿಸಲು ಯುಪಿಎ ಸರ್ಕಾರ ಅನುಮತಿ ನೀಡಿತ್ತು.

    ಮುಂಬೈ ದಾಳಿಯಾದ ನಂತರ ಬಾಳಾಸಾಹೇಬ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆಗೆ ಸಂಯೋಜಿತವಾಗಿರುವ ಅನೇಕ ವಾಯುಯಾನ ಕಾರ್ಮಿಕ ಸಂಘಗಳು, ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಸೆಲೆಬಿಗೆ ಅನುಮತಿ ನೀಡಿದ್ದನ್ನು ಭಾರೀ ವಿರೋಧಿಸಿದ್ದವು.

  • ಶರ್ಬತ್ ಜಿಹಾದ್: ಬಾಬಾ ರಾಮ್‌ದೇವ್ ವಿರುದ್ಧ ದೆಹಲಿ ಹೈಕೋರ್ಟ್ ಗರಂ

    ಶರ್ಬತ್ ಜಿಹಾದ್: ಬಾಬಾ ರಾಮ್‌ದೇವ್ ವಿರುದ್ಧ ದೆಹಲಿ ಹೈಕೋರ್ಟ್ ಗರಂ

    ನವದೆಹಲಿ: ಔಷಧ ಮತ್ತು ಆಹಾರ ಕಂಪನಿ ಹಮ್ದರ್ದ್ ಮತ್ತು ಅದರ ಜನಪ್ರಿಯ ಪಾನೀಯ ರೂಹ್ ಅಫ್ಝಾವನ್ನು ಗುರಿಯಾಗಿಸಿಕೊಂಡು ಕೋಮು ನಿಂದನೆಯ ಹೇಳಿಕೆ ನೀಡಿದ ಪತಂಜಲಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಅವರನ್ನು ದೆಹಲಿ ಹೈಕೋರ್ಟ್ (Delhi High Court) ತರಾಟೆಗೆ ತೆಗೆದುಕೊಂಡಿದೆ.

    ಪತಂಜಲಿ ಸಂಸ್ಥೆ ಮತ್ತು ರಾಮ್‌ದೇವ್ ವಿರುದ್ಧ ಹಮ್ದರ್ದ್ ದಾಖಲಿಸಿದ್ದ ಮೊಕದ್ದಮೆಯ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು, `ಕಠಿಣ ಆದೇಶದ’ ಎಚ್ಚರಿಕೆ ನೀಡಿದ್ದಾರೆ. ಇದು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವನ್ನುಂಟು ಮಾಡುತ್ತದೆ. ಇಂತಹ ಹೇಳಿಕೆ ಸಮರ್ಥನೀಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪತಿಯನ್ನು ಕೊಂದಿದ್ದೀರಿ, ನನ್ನನ್ನೂ ಕೊಂದುಬಿಡಿ – ಉಗ್ರರಿಂದ ಹತ್ಯೆಗೀಡಾದ ಉದ್ಯಮಿ ಪತ್ನಿಯ ಕಣ್ಣೀರು

    ಹಮ್ದರ್ದ್ ಕಂಪನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ರಾಮದೇವ್ ಹಮ್ದರ್ದ್ ವಿರುದ್ಧ ಯಾವುದೇ ಅಡೆತಡೆಯಿಲ್ಲದೆ ನಡೆದುಕೊಳ್ಳುತ್ತಿದ್ದಾರೆ. ಕಂಪನಿಯ ಮಾಲೀಕರ ಧರ್ಮದ ಮೇಲೆ ದಾಳಿ ಮಾಡಿದ್ದಾರೆ. ಇದು ಆಘಾತಕಾರಿ ಪ್ರಕರಣವಾಗಿದ್ದು, ಅವಹೇಳನವನ್ನು ಮೀರಿದೆ. ಇದು ದ್ವೇಷ ಭಾಷಣದಂತೆಯೇ ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಕರಣವಾಗಿದೆ. ದೇಶದಲ್ಲಿ ಈಗಾಗಲೇ ನಮಗೆ ಸಾಕಷ್ಟು ಸಮಸ್ಯೆಗಳಿವೆ. ಹಿಮಾಲಯ ಎಂಬ ಮತ್ತೊಂದು ಕಂಪನಿ ಮುಸ್ಲಿಂ ಒಡೆತನದಲ್ಲಿದೆ ಎಂಬ ಕಾರಣಕ್ಕಾಗಿ ರಾಮದೇವ್ ಅದರ ಮೇಲೆಯೂ ದಾಳಿ ನಡೆಸಿದ್ದಾರೆ. ಇಂತಹ ವಿಡಿಯೋಗಳು ಸಾಮಾಜಿಕ ವೇದಿಕೆಯಲ್ಲಿ ಒಂದು ನಿಮಿಷವೂ ಇರಬಾರದು. ಇಂತಹ ಹೇಳಿಕೆಗಳಿಗೆ ಕಾನೂನಿನ ರಕ್ಷಣೆ ನೀಡಬಾರದು ಎಂದು ವಾದಿಸಿದರು.

    ಏ.3 ರಂದು ತಮ್ಮ ಕಂಪನಿಯ ಉತ್ಪನ್ನವಾದ `ಗುಲಾಬ್ ಶರ್ಬತ್’ ಅನ್ನು ಪ್ರಚಾರ ಮಾಡುವಾಗ ರಾಮ್‌ದೇವ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ನೀವು ಆ ಶರಬತ್ತು ಕುಡಿದರೆ, ಮದರಸಾಗಳು ಮತ್ತು ಮಸೀದಿಗಳು ನಿರ್ಮಾಣವಾಗುತ್ತವೆ. ನೀವು ಪತಂಜಲಿಯ ಗುಲಾಬಿ ಸಿರಪ್ ಕುಡಿದರೆ, ಗುರುಕುಲಗಳು ರೂಪುಗೊಳ್ಳುತ್ತವೆ. ಆಚಾರ್ಯಕುಲಂ ಅಭಿವೃದ್ಧಿ ಹೊಂದುತ್ತದೆ, ಪತಂಜಲಿ ವಿಶ್ವವಿದ್ಯಾಲಯವು ವಿಸ್ತರಿಸುತ್ತದೆ ಮತ್ತು ಭಾರತೀಯ ಶಿಕ್ಷಣ ಮಂಡಳಿಯು ಪ್ರಗತಿ ಹೊಂದುತ್ತದೆ. ರೂಹ್ ಅಫ್ಜಾ ಸಿರಪ್ ಅನ್ನು ಲವ್ ಜಿಹಾದ್‌ಗೆ ಹೋಲಿಸಿ, ಲವ್ ಜಿಹಾದ್ ಇರುವಂತೆಯೇ, ಇದು ಕೂಡ ಒಂದು ರೀತಿಯ ಶರಬತ್ ಜಿಹಾದ್ ಆಗಿದೆ. ಈ ಶರ್ಬತ್ ಜಿಹಾದ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಸಂದೇಶ ಎಲ್ಲರಿಗೂ ತಲುಪಬೇಕು ಎಂದಿದ್ದರು.

    ರಾಮದೇವ್ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಕಳೆದ ವಾರ ಭೋಪಾಲ್‌ನಲ್ಲಿ ಧಾರ್ಮಿಕ ದ್ವೇಷವನ್ನು ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ರಾಮ್‌ದೇವ್ ತಮ್ಮ ಕೋಮುವಾದಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ತಮ್ಮ ವಿಡಿಯೋದಲ್ಲಿ ಯಾವುದೇ ನಿರ್ದಿಷ್ಟ ಬ್ರ‍್ಯಾಂಡ್ ಅನ್ನು ಹೆಸರಿಸಿಲ್ಲ ಎಂದಿದ್ದರು.ಇದನ್ನೂ ಓದಿ: ಕೃತಿ ಸನೋನ್‌ಗೆ ಬಂಪರ್ ಆಫರ್- ಸ್ಟಾರ್ ನಟನ ಜೊತೆ ರೊಮ್ಯಾನ್ಸ್

  • ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಆಸ್ತಿ ವಿವರ ಬಹಿರಂಗ – ವೆಬ್‍ಸೈಟ್‌ಲ್ಲಿ ಮಾಹಿತಿ ಅಪ್ಲೋಡ್‍ಗೆ ನಿರ್ಧಾರ

    ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಆಸ್ತಿ ವಿವರ ಬಹಿರಂಗ – ವೆಬ್‍ಸೈಟ್‌ಲ್ಲಿ ಮಾಹಿತಿ ಅಪ್ಲೋಡ್‍ಗೆ ನಿರ್ಧಾರ

    – ದೆಹಲಿ ಕೋರ್ಟ್ ಜಡ್ಜ್ ಬಂಗ್ಲೆಯಲ್ಲಿ ಹಣ ಸಿಕ್ಕ ಬೆನ್ನಲ್ಲೇ ಮಹತ್ವದ ತೀರ್ಮಾನ

    ನವದೆಹಲಿ: ನ್ಯಾಯಾಂಗದ ಪಾರದರ್ಶಕತೆ ಮತ್ತು ನಂಬಿಕೆಯನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ (Supreme Court) ನ್ಯಾಯಾಧೀಶರು ತಮ್ಮ ಆಸ್ತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು (Assets Declarations) ಮತ್ತು ನ್ಯಾಯಾಲಯದ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಲು ಒಪ್ಪಿಕೊಂಡಿದ್ದಾರೆ. ಸಾರ್ವಜನಿಕರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

    ನ್ಯಾಯಾಧೀಶರು ಏ.1 ರಂದು ನ್ಯಾಯಾಲಯದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸೇರಿ 30 ನ್ಯಾಯಮೂರ್ತಿಗಳು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಡಿಕ್ಲರೇಷನ್ ಸಲ್ಲಿಸಿದ್ದಾರೆ. ಈ ವಿವರಗಳನ್ನು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್ ಮಾಡಲಾಗುತ್ತದೆ. ನ್ಯಾಯಾಧೀಶರ ಆಸ್ತಿ ಘೋಷಣೆಗಳನ್ನು ಪ್ರಕಟಿಸಲು ನಿರ್ದಿಷ್ಟ ವಿಧಾನಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

    ನ್ಯಾಯಾಧೀಶರ ಒಡೆತನದ ಆಸ್ತಿಗಳ ಕುರಿತ ಪ್ರಶ್ನೆಗಳಿಗೆ ಕಾನೂನು ಸಚಿವಾಲಯ ಸಂಸತ್ತಿನಲ್ಲಿ ಉತ್ತರಿಸಿದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಕೇಂದ್ರ ಸರ್ಕಾರವು, ನ್ಯಾಯಾಧೀಶರ ಆಸ್ತಿಗಳ ಯಾವುದೇ ದಾಖಲೆಯನ್ನು ನಿರ್ವಹಿಸುತ್ತಿಲ್ಲ ಎಂದು ಮಾ.27ರಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿತ್ತು.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ತಮ್ಮ ಆಸ್ತಿ ವಿವರಗಳನ್ನು ಸಿಜೆಐಗೆ ಸಲ್ಲಿಸಬೇಕು ಎಂಬ ನಿಯಮವಿದೆ. ಇದನ್ನು ಬಹಿರಂಗ ಮಾಡಬೇಕು ಎಂಬ ಕಡ್ಡಾಯ ನಿಯಮವೇನು ಇಲ್ಲ. ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ನ್ಯಾಯಮೂರ್ತಿಗಳ ಆಸ್ತಿ ಡಿಕ್ಲರೇಷನ್‌ಗಾಗಿ ಈಗಾಗಲೇ ಪ್ರತ್ಯೇಕ ಸೆಕ್ಷನ್ ಇದೆ. ಕಳೆದ ಕೆಲ ವರ್ಷಗಳಿಂದ ಯಾವುದೇ ಅಪ್‌ಡೇಟ್ ಇರಲಿಲ್ಲ.

    ದೆಹಲಿ ಹೈಕೋರ್ಟ್ (Delhi High Court) ನ್ಯಾಯಾಧೀಶ ಯಶವಂತ್ ವರ್ಮಾ (Justice Yashwant Varma) ಅವರ ಅಧಿಕೃತ ನಿವಾಸದಲ್ಲಿ ಮಾ.14 ರಂದು ಅಗ್ನಿ ಅವಘಡ ಸಂಭವಿಸಿತ್ತು. ಅವಘಡದ ನಂತರ ಸುಟ್ಟಿದ್ದ ಕಂತೆ ಕಂತೆ ನಗದು ಹಣ ಪತ್ತೆಯಾಗಿತ್ತು ಎನ್ನಲಾಗಿದೆ. ಆದರೆ ನ್ಯಾ. ವರ್ಮಾ ನಾನು, ನನ್ನ ಕುಟುಂಬ ಯಾವುದೇ ಹಣ ಅಲ್ಲಿ ಇರಿಸಿಲ್ಲ ಎಂದು ಹೇಳಿಕೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ನ್ಯಾಯಾಧೀಶರ ಆಸ್ತಿ ಘೋಷಣೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಜಡ್ಜ್‌ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸುಪ್ರೀಂ ಕೋರ್ಟ್‌ ಸಮಿತಿಯಿಂದ ತನಿಖೆ ಆರಂಭ

  • ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ನಿಷೇಧ – ಸಿಸಿಪಿಎ ಮಾರ್ಗಸೂಚಿ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

    ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ನಿಷೇಧ – ಸಿಸಿಪಿಎ ಮಾರ್ಗಸೂಚಿ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

    – ಗ್ರಾಹಕರೇ ಸ್ವಇಚ್ಛೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದು
    – ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೂಚನೆ

    ನವದೆಹಲಿ: ದೇಶದಾದ್ಯಂತ ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಎಂಬ ಮಹತ್ತರ ತೀರ್ಪನ್ನು ದೆಹಲಿ ಹೈಕೋರ್ಟ್ (Delhi High Court) ಶುಕ್ರವಾರ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಎತ್ತಿ ಹಿಡಿದಿದೆ.

    ಹೋಟೆಲ್‌ಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಧಿಸಲಾಗುತ್ತಿದ್ದ ಸೇವಾ ಶುಲ್ಕ ನಿಷೇಧಿಸಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) 2019ರ ಕಾನೂನಿನ ಅನ್ವಯ ಈ ಹಿಂದೆ ಮಾರ್ಗಸೂಚಿ ಹೊರಡಿಸಿತ್ತು. ಆದರೆ, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ(ಎನ್‌ಆರ್‌ಆಐ) ಮತ್ತು ಫೆಡರೇಶನ್ ಆಫ್ ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆಗಳು ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಇದನ್ನೂ ಓದಿ: 50 ಲಕ್ಷ ಹಾಕಿದ್ರೂ ಮತ್ತಷ್ಟು ಬೇಡಿಕೆ – ಸೈಬರ್‌ ವಂಚಕರ ಕಾಟ, ವೃದ್ಧ ದಂಪತಿ ಆತ್ಮಹತ್ಯೆ

    ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಹೊರಡಿಸಿದ್ದ ಸೇವಾ ಶುಲ್ಕ ನಿಷೇಧ ಮಾರ್ಗಸೂಚಿ ಮತ್ತು ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್ ವಾದವನ್ನು ಆಲಿಸಿ ಅಂತಿಮವಾಗಿ ಸಿಸಿಪಿಎ (CCPA) ಹೊರಡಿಸಿದ ಮಾರ್ಗಸೂಚಿಯನ್ನು ಎತ್ತಿ ಹಿಡಿದು ತೀರ್ಪು ಪ್ರಕಟಿಸಿದೆ. ಅಲ್ಲದೇ, ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್‌ಗೆ ದಂಡ ಸಹ ವಿಧಿಸಿದೆ. ಇದನ್ನೂ ಓದಿ: ಅಂಬೇಡ್ಕರ್‌ ಜಯಂತಿ: ಏ.14 ರಂದು ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

    ಸ್ವಯಂ ಪ್ರೇರಣೆಯಿಂದ ಕೊಟ್ಟರಷ್ಟೇ ತೆಗೆದುಕೊಳ್ಳಿ:

    ಹೈಕೋರ್ಟ್ ತೀರ್ಪಿನ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ಹೈಕೋರ್ಟ್ ತೀರ್ಪಿನ ಅನ್ವಯ ಇನ್ನು ಮುಂದೆ ದೇಶದ ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಅಥವಾ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಗ್ರಾಹಕರೇ ಸ್ವಯಂ ಪ್ರೇರಣೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ಸಿಬಿಐ ವರದಿ

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿದೆ. ಕೇಂದ್ರ ಗ್ರಾಹಕ ಸಚಿವಾಲಯ ಗ್ರಾಹಕರ ಹಿತರಕ್ಷಣೆಗಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ 2019ರ ಕಾನೂನಿನ ಅನ್ವಯ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಸೇವಾ ಶುಲ್ಕ ವಿಧಿಸುವುದನ್ನು ನಿಷೇಧಿಸಿ ಮಾರ್ಗಸೂಚಿ ಹೊರಡಿಸಿತ್ತು. ಹೋಟೆಲ್, ರೆಸ್ಟೋರೆಂಟ್ ಸಂಘಟನೆಗಳು ದೆಹಲಿ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್ ಗ್ರಾಹಕರ ಪರ ತೀರ್ಪು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

    ದೆಹಲಿ ಹೈಕೋರ್ಟ್ ಆದೇಶದಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಇನ್ನು ಮುಂದೆ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ಗ್ರಾಹಕರಿಗೆ ಕಡ್ಡಾಯವಾಗಿ ಅಥವಾ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಗ್ರಾಹಕರೇ ಸ್ವ ಇಚ್ಛೆಯಿಂದ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದು ಎಂದು ಸೂಚಿಸಿದರು.

  • ನ್ಯಾ.ವರ್ಮಾ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್‌ – ಪೊಲೀಸರಿಂದ 8 ಮೊಬೈಲ್‌ ಸೀಜ್‌!

    ನ್ಯಾ.ವರ್ಮಾ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್‌ – ಪೊಲೀಸರಿಂದ 8 ಮೊಬೈಲ್‌ ಸೀಜ್‌!

    ನವದೆಹಲಿ: ದೆಹಲಿ ಹೈಕೋರ್ಟ್‌ (Delhi High Court) ನ್ಯಾ.ಯಶವಂತ್ ವರ್ಮಾ (Yashwant Varma) ಅವರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೊಬೈಲ್‌ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮಾ.14ರಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಕಂತೆ ಕಂತೆ ಹಣದ ರಾಶಿ ಪತ್ತೆಯಾಗಿತ್ತು ಎನ್ನಲಾಗಿದೆ. ಈ ವೀಡಿಯೊ ಸಹ ವೈರಲ್‌ ಆಗಿತ್ತು. ಈ ಸಂಬಂಧ ತನಿಖೆಯ ಭಾಗವಾಗಿ ದೆಹಲಿ ಪೊಲೀಸರು, ತುಘಲಕ್ ರಸ್ತೆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಫೋನ್‌ ಸೇರಿದಂತೆ 8 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ‌ ಇದನ್ನೂ ಓದಿ: ಜಡ್ಜ್‌ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸುಪ್ರೀಂ ಕೋರ್ಟ್‌ ಸಮಿತಿಯಿಂದ ತನಿಖೆ ಆರಂಭ

    ಅಗ್ನಿ ಅವಘಡ ಸಮಯದಲ್ಲಿ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದ ಸಿಬ್ಬಂದಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆಯೇ? ಈ ವೀಡಿಯೊಗಳನ್ನು ತಿರುಚಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆಹಚ್ಚಲು ಎಲ್ಲಾ 8 ಪೊಲೀಸ್ ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

    ಮಾ.25ರಂದು ನ್ಯಾ.ಯಶವಂತ್ ವರ್ಮಾ ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆಯಾದ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ ಮೂವರು ಸದಸ್ಯರ ಸಮಿತಿ ಜಡ್ಜ್‌ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

    ಇದೆಲ್ಲ ಬೆಳವಣಿಗೆಗಳ ನಡುವೆ ಅಗ್ನಿ ಅವಘಡದ ಸಮಯದಲ್ಲಿ ನಾನು ಮಧ್ಯಪ್ರದೇಶದಲ್ಲಿದ್ದೆ ಎಂದು ನ್ಯಾ.ವರ್ಮಾ ಹೇಳಿದ್ದರು. ನಾನು ಮತ್ತು ನಮ್ಮ ಕುಟುಂಬದ ಯಾವುದೇ ಸದಸ್ಯರು ಸ್ಟೋರ್ ರೂಂನಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದು ಹೇಳುವ ಮೂಲಕ ಅವರು ಆರೋಪಗಳನ್ನು ನಿರಾಕರಿಸಿದ್ದರು. ಇದನ್ನೂ ಓದಿ: ನಗದು ಪತ್ತೆ ಕೇಸ್‌ – ತನಿಖಾ ವರದಿ ಬಿಡುಗಡೆ ಮಾಡಿದ ಸುಪ್ರೀಂ; ಆರೋಪ ನಿರಾಕರಿಸಿದ ನ್ಯಾ. ವರ್ಮಾ

  • ಜಡ್ಜ್‌ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸುಪ್ರೀಂ ಕೋರ್ಟ್‌ ಸಮಿತಿಯಿಂದ ತನಿಖೆ ಆರಂಭ

    ಜಡ್ಜ್‌ ಬಂಗ್ಲೆಯಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸುಪ್ರೀಂ ಕೋರ್ಟ್‌ ಸಮಿತಿಯಿಂದ ತನಿಖೆ ಆರಂಭ

    – ನ್ಯಾ.ವರ್ಮಾ ನಿವಾಸದಲ್ಲಿ ನ್ಯಾಯಾಧೀಶರಿಂದ ಪರಿಶೀಲನೆ

    ನವದೆಹಲಿ: ದೆಹಲಿ ಹೈಕೋರ್ಟ್‌ ( Delhi High Court) ಜಡ್ಜ್‌ ನ್ಯಾ.ಯಶವಂತ್ ವರ್ಮಾ (Yashwant Varma) ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆಯಾದ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ ಮೂವರು ಸದಸ್ಯರ ಸಮಿತಿ ಜಡ್ಜ್‌ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ದೆಹಲಿಯ ತುಘಲಕ್ ಕ್ರೆಸೆಂಟ್‌ನಲ್ಲಿರುವ ಜಡ್ಜ್‌ ನಿವಾಸಕ್ಕೆ ನ್ಯಾ.ಶೀಲಾ ನಾಗು (ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ), ನ್ಯಾ.ಜಿ.ಎಸ್. ಸಂಧವಾಲಿಯಾ (ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ) ಮತ್ತು ನ್ಯಾ. ಅನು ಶಿವರಾಮನ್ (ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರು) ಭೇಟಿ ನೀಡಿದ್ದಾರೆ. ಜಡ್ಜ್‌ ನಿವಾಸದಲ್ಲಿ ಸುಮಾರು 30-35 ನಿಮಿಷಗಳ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್

    ಮಾ.14 ರಂದು ನ್ಯಾ.ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತ್ತು. ಈ ಸಮಯದಲ್ಲಿ ಅವರ ಮನೆಯ ಸ್ಟೋರ್‌ ರೂಂನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಅಗ್ನಿ ಅವಘಡದ ವೇಳೆ ನಾನು ಭೋಪಾಲ್‌ನಲ್ಲಿದ್ದೆ ಎಂದು ನ್ಯಾ.ವರ್ಮಾ ಹೇಳಿಕೊಂಡಿದ್ದರು.

    ಸುಪ್ರೀಂ ಕೋರ್ಟ್ (Supreme Court) ಈ ಸಂಬಂಧ ಒಂದು ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಗದು ಪತ್ತೆಯಾದ ವೀಡಿಯೊ ಮತ್ತು 3 ಫೋಟೋಗಳು ಸಹ ಇದ್ದವು. ಈ ವೀಡಿಯೊ ಮತ್ತು ಫೋಟೋಗಳಲ್ಲಿ ಸುಟ್ಟ ಹಣದ ತುಂಡುಗಳನ್ನು ಸಿಬ್ಬಂದಿ ಹೊರತೆಗೆಯುತ್ತಿರುವುದನ್ನು ದಾಖಲಾಗಿತ್ತು.

    ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್ (Delhi High Court) ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಶುಕ್ರವಾರ ವರ್ಮಾ ಅವರಿಗೆ ಪತ್ರ ಬರೆದು, ನಗದು ಇರುವಿಕೆಯ ಬಗ್ಗೆ ಪ್ರತಿಕ್ರಿಯೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾ.ವರ್ಮಾ ಅವರು, ನಾನು ಅಥವಾ ನನ್ನ ಕುಟುಂಬದ ಸದಸ್ಯರು ಆ ಕೋಣೆಯಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದಿದ್ದರು. ಇದನ್ನೂ ಓದಿ: ನಗದು ಪತ್ತೆ ಕೇಸ್‌ – ತನಿಖಾ ವರದಿ ಬಿಡುಗಡೆ ಮಾಡಿದ ಸುಪ್ರೀಂ; ಆರೋಪ ನಿರಾಕರಿಸಿದ ನ್ಯಾ. ವರ್ಮಾ