Tag: Delhi Election Results

  • ಮೈತ್ರಿ ಎಲ್ಲ ಕಾಲದಲ್ಲೂ ಒಂದೇ ರೀತಿ ಇರಲ್ಲ; ದೆಹಲಿ ಫಲಿತಾಂಶದ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ

    ಮೈತ್ರಿ ಎಲ್ಲ ಕಾಲದಲ್ಲೂ ಒಂದೇ ರೀತಿ ಇರಲ್ಲ; ದೆಹಲಿ ಫಲಿತಾಂಶದ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ

    ಬೆಂಗಳೂರು: ಮೈತ್ರಿ ಎಲ್ಲ ಕಾಲದಲ್ಲೂ ಒಂದೇ ರೀತಿ ಇರಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದರು.

    ಬೆಂಗಳೂರಿನಲ್ಲಿ (Bengaluru) ದೆಹಲಿ ಚುನಾವಣೆ ಫಲಿತಾಂಶ (Delhi Election Results) ವಿಚಾರವಾಗಿ ಮಾತನಾಡಿ, ಇನ್ನೂ ಮತ ಎಣಿಕೆ ಪೂರ್ಣವಾಗಿಲ್ಲ. ಸಂಪೂರ್ಣ ಫಲಿತಾಂಶ ಬರಲಿ. ಯಾವ ಕಾರಣಕ್ಕೆ ಹಿನ್ನಡೆಯಾಗಿದೆ ಎಂದು ಚರ್ಚೆ ಮಾಡೋಣ ಎಂದರು. ಇದನ್ನೂ ಓದಿ: Delhi Election Results | ನವದೆಹಲಿ ಕ್ಷೇತ್ರದಲ್ಲಿ ಹಾವು – ಏಣಿ ಆಟ; ಕೇಜ್ರಿವಾಲ್‌ಗೆ ಅಲ್ಪ ಮುನ್ನಡೆ

    ಆಯಾ ರಾಜ್ಯದ ಹಿನ್ನಡೆ ಪರಿಣಾಮ ಬೀರಲ್ಲ. ಪ್ರತಿ ಚುನಾವಣೆ ವಿಭಿನ್ನವಾಗಿ ಇರುತ್ತದೆ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ಚುನಾವಣೆ ಆಗುತ್ತದೆ. ರಾಜ್ಯದ ಚುನಾವಣೆ ಸ್ಥಳೀಯ ವಿಷಯಗಳ ಮೇಲೆ ಆಗುತ್ತದೆ. ಎರಡನ್ನು ಒಂದೇ ರೀತಿಯಲ್ಲಿ ನೋಡೋಣ ಎಂದು ನುಡಿದರು. ಇದನ್ನೂ ಓದಿ: 4ನೇ ಬಾರಿಗೂ ಕೇಜ್ರಿವಾಲ್‌ ಸಿಎಂ ಆಗ್ತಾರೆ – ಸಚಿವ ಸೌರಭ್ ಭಾರದ್ವಾಜ್ ವಿಶ್ವಾಸ

    ಯಾವ ಕಾರಣಕ್ಕೆ ಈ ರೀತಿ ಫಲಿತಾಂಶ ಬಂದಿದೆ ಎಂಬುದನ್ನ ಎಐಸಿಸಿ ಚರ್ಚೆ ಮಾಡುತ್ತದೆ. ಪ್ರತಿಯೊಂದು ಚುನಾವಣೆ ಕೂಡ ವಿಭಿನ್ನವಾಗಿರುತ್ತದೆ. ಮೈತ್ರಿ ಮಾಡುವಾಗ ಒಂದೊಂದು ಒಂದು ತರಹ ಇರುತ್ತದೆ. ಲೋಕಸಭೆ ಚುನಾವಣೆಯು ರಾಷ್ಟ್ರೀಯ ವಿಷಯಗಳ ಮೇಲೆ ಇರುತ್ತದೆ. ಈ ಚುನಾವಣೆಯಲ್ಲಿ ಇದ್ದ ವಿಷಯ ಮುಂದೆ ಐದು ವರ್ಷಕ್ಕೆ ಇರಲ್ಲ. ಸಂಪೂರ್ಣ ಫಲಿತಾಂಶ ಬರಲಿ ಎಂದು ಹೇಳಿದರು. ಇದನ್ನೂ ಓದಿ: Delhi Election Results | ಬಹುಮತದತ್ತ ಬಿಜೆಪಿ ದಾಪುಗಾಲು – ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲೂ ಕಮಲ ಕಿಲ ಕಿಲ

    ರಾಜ್ಯಪಾಲರಿಂದ ಸುಗ್ರೀವಾಜ್ಞೆ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಮಾಡಿದ್ದಾರೆ. ಸರ್ಕಾರ ಉತ್ತರ ಕೊಡುವ ಕೆಲಸ ಮಾಡುತ್ತದೆ. ತಪ್ಪು ಮಾಡಿದವರಿಗೆ ದಂಡ ಹಾಕುತ್ತಾರೆ. ಯಾವ ದೃಷ್ಟಿಕೋನದಲ್ಲಿ ವಾಪಸ್ ಕಳಿಸಿದ್ದಾರೆ ಗೊತ್ತಿಲ್ಲ. ಅವರು ಅಧಿವೇಶನದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಿ ಅಂದಿದ್ದಾರೆ. ಅವರು ಇದರ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಅಷ್ಟೆ. ಅವರು ಸಂಪೂರ್ಣ ವಾಪಸ್ ಕಳುಹಿಸಿದ್ದರೆ ನಮ್ಮ ಉತ್ತರ ಬೇರೆ ಇರುತ್ತಿತ್ತು. ರಾಜ್ಯಪಾಲರು ಸ್ಪಷ್ಟನೆ ಕೇಳಬಾರದು ಅಂತ ಏನು ಇಲ್ಲ. ಬೇರೆ ರಾಜ್ಯದಲ್ಲೂ ಹೀಗೆ ಆಗುತ್ತಿರುತ್ತದೆ ಎಂದು ಹೇಳಿದರು. ಇದನ್ನೂ ಓದಿ: Delhi Election Results | ಬಿಜೆಪಿಗೆ ಆರಂಭಿಕ ಮುನ್ನಡೆ – ಕೇಜ್ರಿವಾಲ್‌ ಸೇರಿ ಆಪ್‌ ಘಟಾನುಘಟಿ ನಾಯಕರಿಗೆ ಹಿನ್ನಡೆ

    ಅವರ ಆದೇಶವನ್ನ ಸೂಪರ್ ಸೀಡ್ ಮಾಡಿ ನಾವು ಸುಗ್ರೀವಾಜ್ಞೆ ಆದೇಶ ಹೊರಡಿಸಲು ಆಗಲ್ಲ. ಅಂಕಿತಕ್ಕೆ ರಾಜ್ಯಪಾಲರಿಗೆ ಕಳುಹಿಸಲೇಬೇಕಲ್ಲವೆ. ವಿಧಾನಸಭೆಯಲ್ಲೂ ಮಸೂದೆ ಮಂಡಿಸುತ್ತೇವೆ. ಅದಕ್ಕೆ ರಾಜ್ಯಪಾಲರನ್ನ ಕೇಳಲ್ಲ. ಮಸೂದೆ ಅಂಗೀಕಾರ ಆದ್ಮೇಲೆ ಕಳುಹಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸಮೀಕ್ಷೆ ಸುಳ್ಳಾಗಿ ಆಪ್ ಹ್ಯಾಟ್ರಿಕ್ ಕನಸು ಈಡೇರುತ್ತಾ..? – ಫಿನಿಕ್ಸ್‌ನಂತೆ ಎದ್ದು ಬರ್ತಾರಾ ಕೇಜ್ರಿವಾಲ್?

  • Delhi Election Results | ನವದೆಹಲಿ ಕ್ಷೇತ್ರದಲ್ಲಿ ಹಾವು – ಏಣಿ ಆಟ; ಕೇಜ್ರಿವಾಲ್‌ಗೆ ಅಲ್ಪ ಮುನ್ನಡೆ

    Delhi Election Results | ನವದೆಹಲಿ ಕ್ಷೇತ್ರದಲ್ಲಿ ಹಾವು – ಏಣಿ ಆಟ; ಕೇಜ್ರಿವಾಲ್‌ಗೆ ಅಲ್ಪ ಮುನ್ನಡೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ. ಒಂದೆಡೆ ಬಿಜೆಪಿ ಬಹುಮತದತ್ತ ದಾಪುಗಾಲಿಡುತ್ತಿದ್ದರೆ, ಕೆಲವು ಕ್ಷೇತ್ರಗಳಲ್ಲಿ ಆಪ್‌ ನೇರ ಪೈಪೋಟಿ ನೀಡುತ್ತಿದೆ. ಇನ್ನೂ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪ್ರತಿನಿಧಿಸಿರುವ ನವದೆಹಲಿ ಕ್ಷೇತ್ರದಲ್ಲಿ ಹಾವು-ಏಣಿ ಆಟ ನಡೆಯುತ್ತಿದೆ.

    ಆರಂಭಿಕ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಶಾಹಿಬ್‌ ಸಿಂಗ್‌ ವಿರುದ್ಧ 200ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಕೇಜ್ರಿವಾಲ್‌ ಸತತ 2 ಸುತ್ತುಗಳಲ್ಲಿ ಅಲ್ಪ ಮುನ್ನಡೆ ಕಂಡಿದ್ದಾರೆ. 2ನೇ ಸುತ್ತಿನಲ್ಲಿ ಒಟ್ಟು 254 ಹಾಗೂ 3ನೇ ಸುತ್ತಿನಲ್ಲಿ ಒಟ್ಟು 344 ಮತಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈವರೆಗೆ ಕೇಜ್ರಿವಾಲ್‌ ಒಟ್ಟು 6,442 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದರೆ, ಬಿಜೆಪಿ ಅಭ್ಯರ್ಥಿ ಪರ್ವೇಶ್‌ 6,099 ಮತಗಳನ್ನು ಪಡೆದು ಹಿನ್ನಡೆ ಕಾಯ್ದುಕೊಂಡಿದ್ದಾರೆ. ಕಲ್ಕಾಜಿ ಕ್ಷೇತ್ರದಲ್ಲಿ ಹಾಲಿ ಸಿಎಂ ಅತಿಶಿ 1,149 ಮತಗಳ ಹಿನ್ನಡೆ ಕಾಯ್ದುಕೊಂಡಿದ್ದಾರೆ.

    ಮ್ಯಾಜಿಕ್‌ ನಂಬರ್‌ ತಲುಪಿದ ಬಿಜೆಪಿ:
    ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಿದ್ದು, 10 ಗಂಟೆ ವೇಳೆಗೆ ಬಿಜೆಪಿ 42 ಸ್ಥಾನಗಳೊಂದಿಗೆ ಭರ್ಜರಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಆಪ್‌ 27 ಸ್ಥಾನಗಳನ್ನು ಪಡೆದು ಹಿನ್ನಡೆಯಲ್ಲಿದ್ದರೆ. ಕಾಂಗ್ರೆಸ್‌ ಇನ್ನೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಇದನ್ನೂ ಓದಿ:  Delhi Election Results | ಬಹುಮತದತ್ತ ಬಿಜೆಪಿ ದಾಪುಗಾಲು – ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲೂ ಕಮಲ ಕಿಲ ಕಿಲ

    2013ರ ಚುನಾವಣೆಯಲ್ಲಿ ಬಿಜೆಪಿ 31, ಆಪ್‌ 28, ಕಾಂಗ್ರೆಸ್‌ 08 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಇತರರು ಮೂರು ಸ್ಥಾನ ಗೆದ್ದಿದ್ದರು. ಆಪ್‌ಗೆ ಕಾಂಗ್ರೆಸ್‌ ಬೆಂಬಲ ನೀಡಿದ್ದರಿಂದ ಕೇಜ್ರಿವಾಲ್‌ (Arvind Kejriwal) ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ಇದನ್ನೂ ಓದಿ: Delhi Election Results | ಬಿಜೆಪಿಗೆ ಆರಂಭಿಕ ಮುನ್ನಡೆ – ಕೇಜ್ರಿವಾಲ್‌ ಸೇರಿ ಆಪ್‌ ಘಟಾನುಘಟಿ ನಾಯಕರಿಗೆ ಹಿನ್ನಡೆ

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ. ಇದನ್ನೂ ಓದಿ: ಸಮೀಕ್ಷೆ ಸುಳ್ಳಾಗಿ ಆಪ್ ಹ್ಯಾಟ್ರಿಕ್ ಕನಸು ಈಡೇರುತ್ತಾ..? – ಫಿನಿಕ್ಸ್‌ನಂತೆ ಎದ್ದು ಬರ್ತಾರಾ ಕೇಜ್ರಿವಾಲ್?

  • 4ನೇ ಬಾರಿಗೂ ಕೇಜ್ರಿವಾಲ್‌ ಸಿಎಂ ಆಗ್ತಾರೆ – ಸಚಿವ ಸೌರಭ್ ಭಾರದ್ವಾಜ್ ವಿಶ್ವಾಸ

    4ನೇ ಬಾರಿಗೂ ಕೇಜ್ರಿವಾಲ್‌ ಸಿಎಂ ಆಗ್ತಾರೆ – ಸಚಿವ ಸೌರಭ್ ಭಾರದ್ವಾಜ್ ವಿಶ್ವಾಸ

    ನವದೆಹಲಿ: ಅರವಿಂದ್‌ ಕೇಜ್ರಿವಾಲ್‌ (Arvind Kejriwal) 3ನೇ ಬಾರಿಗೆ ಸಿಎಂ ಆಗಿ ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತಾರೆ. 4ನೇ ಬಾರಿಗೂ ಸಿಎಂ ಆಗ್ತಾರೆ ಅನ್ನೋ ವಿಶ್ವಾಸ ನನಗಿದೆ ಎಂದು ಆಪ್‌ ಸಚಿವ ಸೌರಭ್ ಭಾರದ್ವಾಜ್ (Saurabh Bharadwaj) ಹೇಳಿದರು.

    ಗ್ರೇಟರ್‌ ಕೈಲಾಶ್‌ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಸಚಿವ ಸೌರಭ್ ಭಾರದ್ವಾಜ್ ಮತ ಎಣಿಕೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ಅರವಿಂದ್‌ ಕೇಜ್ರಿವಾಲ್‌ 4ನೇ ಬಾರಿಗೂ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಎಎಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ಬೇಕಾದ ಎಲ್ಲಾ ಪ್ರಯತ್ನಗಳನ್ನ ಬಿಜೆಪಿ ಮಾಡಿತು. ಇಡಿ, ಐಟಿ, ಸಿಬಿಐ, ಚುನಾವಣಾ ಆಯೋಗ, ಪೊಲೀಸ್‌ ಇಲಾಖೆ ಸೇರಿ ಎಲ್ಲಾ ಅಧಿಕಾರಿಗಳನ್ನು ಆಪ್‌ ವಿರುದ್ಧ ಪ್ರಯೋಗಿಸಿತು. ಆದ್ರೆ ಜನರ ಆಶೀರ್ವಾದ ಎಎಪಿಗೆ ಇದೆ. ಸಾರ್ವಜನಿಕರು ಕೇಜ್ರಿವಾಲ್‌ರನ್ನ 4ನೇ ಬಾರಿಗೂ ಸಿಎಂ ಮಅಡ್ತಾರೆ. ಶೀಘ್ರದಲ್ಲೇ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ವಿಶ್ವಾಸ ವ್ಯಕ್ತಪಡಿಸಿದರು.

    ಈ ಬಾರಿ ಆಪ್‌ ಕನಿಷ್ಠ 40-45 ಸ್ಥಾನಗಳನ್ನ ಪಡೆಯಲಿದೆ. ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂಬ ಮಾಹಿತಿ ವಿವಿಧ ಕ್ಷೇತ್ರಗಳಿಂದ ನಮಗೆ ಬರುತ್ತಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.

    ಸದ್ಯದ ವರದಿ ಪ್ರಕಾರ ಬಿಜೆಪಿ 48 ಕ್ಷೇತ್ರಗಳಲ್ಲಿ ಆಪ್‌ 21 ಹಾಗೂ ಕಾಂಗ್ರೆಸ್‌ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

  • Delhi Election Results | ಬಹುಮತದತ್ತ ಬಿಜೆಪಿ ದಾಪುಗಾಲು – ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲೂ ಕಮಲ ಕಿಲ ಕಿಲ

    Delhi Election Results | ಬಹುಮತದತ್ತ ಬಿಜೆಪಿ ದಾಪುಗಾಲು – ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲೂ ಕಮಲ ಕಿಲ ಕಿಲ

    – ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ-ಆಪ್‌ ನೇರಾನೇರ ಪೈಪೋಟಿ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಶುರುವಾಗಿದ್ದು, ಕೇಸರಿ ಪಡೆ ಭರ್ಜರಿ ಕಮಾಲ್‌ ಮಾಡಿದೆ. ಮತ ಎಣಿಕೆ ಆರಂಭದಲ್ಲೇ ಕಳೆಗಟ್ಟಿದ್ದು ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಇತ್ತ ಆಪ್‌ನಲ್ಲಿ ಘಟಾನುಘಟಿ ನಾಯಕರು ಹಿನ್ನಡೆ ಅನುಭವಿಸಿದ್ದರೂ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಬಿಜೆಪಿಗೆ ನೇರ ಪೈಪೋಟಿ ನೀಡುತ್ತಿದೆ.

    ಬೆಳಗ್ಗೆ 8:50ರ ಸುಮಾರಿಗೆ ಬಿಜೆಪಿ ಮ್ಯಾಜಿಕ್‌ ನಂಬರ್‌ ತಲುಪಿದೆ. ಬಿಜೆಪಿ 40, ಎಎಪಿ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ ಕಾಂಗ್ರೆಸ್‌ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಫಲಿತಾಂಶದ ಆರಂಭದಲ್ಲೇ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಹಾಲಿ ಸಿಎಂ ಅತಿಶಿ, ಮನೀಶ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌, ಕಪಿಲ್‌ ಮಿಶ್ರಾ ಸೇರಿ ಘಟಾನುಘಟಿ ನಾಯಕರು ಹಿನ್ನಡೆ ಅನುಭವಿಸಿದ್ದಾರೆ.

    ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.

    2013ರ ಚುನಾವಣೆಯಲ್ಲಿ ಬಿಜೆಪಿ 31, ಆಪ್‌ 28, ಕಾಂಗ್ರೆಸ್‌ 08 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಇತರರು ಮೂರು ಸ್ಥಾನ ಗೆದ್ದಿದ್ದರು. ಆಪ್‌ಗೆ ಕಾಂಗ್ರೆಸ್‌ ಬೆಂಬಲ ನೀಡಿದ್ದರಿಂದ ಕೇಜ್ರಿವಾಲ್‌ (Arvind Kejriwal) ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.

  • Delhi Election Results | ಬಿಜೆಪಿಗೆ ಆರಂಭಿಕ ಮುನ್ನಡೆ – ಕೇಜ್ರಿವಾಲ್‌ ಸೇರಿ ಆಪ್‌ ಘಟಾನುಘಟಿ ನಾಯಕರಿಗೆ ಹಿನ್ನಡೆ

    Delhi Election Results | ಬಿಜೆಪಿಗೆ ಆರಂಭಿಕ ಮುನ್ನಡೆ – ಕೇಜ್ರಿವಾಲ್‌ ಸೇರಿ ಆಪ್‌ ಘಟಾನುಘಟಿ ನಾಯಕರಿಗೆ ಹಿನ್ನಡೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ದೆಹಲಿ ಗದ್ದುಗೆ (Delhi Election Results) ಏರೋದ್ಯಾರು? ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

    ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. ಬೆಳಗ್ಗೆ 8:30ರ ಸುಮಾರಿಗೆ ಬಿಜೆಪಿ 31 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹ್ಯಾಟ್ರಿಕ್‌ ಕನಸು ಹೊತ್ತಿರುವ ಎಎಪಿ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ ಕಾಂಗ್ರೆಸ್‌ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

    ಫಲಿತಾಂಶದ ಆರಂಭದಲ್ಲೇ ಆಪ್‌ಗೆ ಆಘಾತವಾಗಿದೆ. ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಹಾಲಿ ಸಿಎಂ ಅತಿಶಿ, ಮನೀಶ್‌ ಸಿಸೋಡಿಯಾ ಸೇರಿ ಘಟಾನುಘಟಿ ನಾಯಕರು ಹಿನ್ನಡೆ ಅನುಭವಿಸಿದ್ದಾರೆ.

    ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆಲ್ಲ ಯಾವ ಪಕ್ಷ ಅಧಿಕಾರಕ್ಕೇರಲಿದೆ ಎಂಬುದು ಬಹುತೇಕ ಖಚಿತವಾಗಲಿದೆ.

    699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರ ಸೇರಿತ್ತು. ಬಹುತೇಕ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಗೆ (BJP) ಅಧಿಕಾರ ದಕ್ಕಲಿದೆ ಎಂದು ಹೇಳಿವೆ. ಈ ಸಮೀಕ್ಷೆಗಳನ್ನು ಒಪ್ಪದ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧವೇ ಆಪರೇಷನ್ ಕಮಲದ ಆರೋಪ ಮಾಡಿದೆ.

    2013ರ ಚುನಾವಣೆಯಲ್ಲಿ ಬಿಜೆಪಿ 31, ಆಪ್‌ 28, ಕಾಂಗ್ರೆಸ್‌ 08 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಇತರರು ಮೂರು ಸ್ಥಾನ ಗೆದ್ದಿದ್ದರು. ಆಪ್‌ಗೆ ಕಾಂಗ್ರೆಸ್‌ ಬೆಂಬಲ ನೀಡಿದ್ದರಿಂದ ಕೇಜ್ರಿವಾಲ್‌ (Arvind Kejriwal) ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.

  • ಸಮೀಕ್ಷೆ ಸುಳ್ಳಾಗಿ ಆಪ್ ಹ್ಯಾಟ್ರಿಕ್ ಕನಸು ಈಡೇರುತ್ತಾ..? – ಫಿನಿಕ್ಸ್‌ನಂತೆ ಎದ್ದು ಬರ್ತಾರಾ ಕೇಜ್ರಿವಾಲ್?

    ಸಮೀಕ್ಷೆ ಸುಳ್ಳಾಗಿ ಆಪ್ ಹ್ಯಾಟ್ರಿಕ್ ಕನಸು ಈಡೇರುತ್ತಾ..? – ಫಿನಿಕ್ಸ್‌ನಂತೆ ಎದ್ದು ಬರ್ತಾರಾ ಕೇಜ್ರಿವಾಲ್?

    ನವದೆಹಲಿ: ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಪರ ಬಂದಿವೆ. ದೆಹಲಿಯ ದೊರೆಯಾಗಲು ಈ ಬಾರಿ ಹ್ಯಾಟ್ರಿಕ್ ಕನಸು ಕಂಡಿದ್ದ ಆಮ್ ಆದ್ಮಿ ಪಕ್ಷದ ನಿರೀಕ್ಷೆ ಹುಸಿಯಾಗಲಿದೆ ಅನ್ನೋದು ಎಕ್ಸಿಟ್ ಪೋಲ್ ಫಲಿತಾಂಶ. ಅದರಂತೆ ದೆಹಲಿಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ. ದೆಹಲಿ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಅದರ ಭವಿಷ್ಯವಾಣಿಗಳನ್ನು ಎಎಪಿ ತಿರಸ್ಕರಿಸಿದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಹಾಗಿದ್ರೆ ಸಮೀಕ್ಷೆ ಸುಳ್ಳಾಗಿ ಆಪ್ ಕನಸು ಈಡೇರುತ್ತಾ? ಈ ನಡುವೆ ಕೇಜ್ರಿವಾಲ್ ಎದುರಿಸಿದ ಸವಾಲು ಸಂಕಷ್ಟಗಳೇನು? ಅನ್ನೋದನ್ನ ತಿಳಿಯಬೇಕಿದ್ರೆ ಮುಂದೆ ಓದಿ…

    ಎಎಪಿಯ ಮತದ ಪಾಲು ಯಾವಾಗಲೂ ಚುನಾವಣೋತ್ತರ ಸಮೀಕ್ಷೆಗಳಲ್ಲಿ ತೋರಿಸಿದ್ದಕ್ಕಿಂತ ಹೆಚ್ಚು ಬಂದಿದೆ. ಹೀಗಾಗಿ, ಈ ಬಾರಿಯೂ ಹೆಚ್ಚು ಸ್ಥಾನಗಳು ಬರಲಿವೆ ಎಂದು ಆಪ್ ಹೇಳಿದೆ.

    ಅಂದಹಾಗೇ ಆಪ್ ಹೇಳುತ್ತಿರುವುದು ಸತ್ಯವೂ ಹೌದು. ಈ ಹಿಂದೆ ನಡೆದ ಎರಡು ವಿಧಾನಸಭೆ ಚುನಾವಣೆಗಳ ಸಮಯದಲ್ಲಿ ಪ್ರಕಟವಾಗಿದ್ದ ಚುನಾವಣೊತ್ತರ ಸಮೀಕ್ಷೆಗಳಲ್ಲಿ ಆಪ್‌ಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆದರೆ ಫಲಿತಾಂಶ ಪ್ರಕಟವಾದಾಗ ಆಪ್ ಅಮೋಘವಾದ ಗೆಲುವು ದಾಖಲಿಸಿತ್ತು. ಈಗಲೂ ಆಪ್ ಅದೇ ನಿರೀಕ್ಷೆಯಲ್ಲಿದೆ. ಹ್ಯಾಟ್ರಿಕ್ ಗೆಲುವು ಎದುರು ನೋಡುತ್ತಿದೆ.

    ಅಷ್ಟಕ್ಕೂ ಮೂರು ಬಾರಿ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಈ ಅವಧಿಯಲ್ಲಿ ಅನುಭವಿಸಿದ ಸಂಕಷ್ಟ ಎದುರಿಸಿದ ಸವಾಲುಗಳು ಒಂದೇರಡಲ್ಲ.

    ಕೇಜ್ರಿ ಎದುರಿಸಿದ ಸಂಕಷ್ಟಗಳೇನು?

    * ಮದ್ಯನೀತಿಯಲ್ಲಿ ಭ್ರಷ್ಟಚಾರದ ಆರೋಪದಲ್ಲಿ ಜೈಲು
    * ತಾವು ಮಾತ್ರವಲ್ಲದೇ ಹಲವು ನಾಯಕರು ಜೈಲುಪಾಲು
    * ಆಪ್ ಬಹುತೇಕ ಮುಗಿದೆ ಹೊಯ್ತು ಎನ್ನುವ ಪರಿಸ್ಥಿತಿ ನಿರ್ಮಾಣ
    * ಜಾಮೀನು ಮೇಲೆ ಹೊಂದು ಸಿಎಂ ಹುದ್ದೆಗೆ ರಾಜೀನಾಮೆ
    * ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಮೇಲಿನ ದೌರ್ಜನ್ಯ ಪ್ರಕರಣ
    * ಪ್ರತಿ ಹಂತದಲ್ಲೂ ಲೆಪ್ಟಿನೆಂಟ್ ಗರ್ವನರ್ ಜೊತೆಗೆ ಸಂಘರ್ಷ
    * ಚುನಾವಣಾ ಅವಧಿಯಲ್ಲಿ ಶೀಷ್ ಮಹಲ್ ಆರೋಪ ಸದ್ದು
    * ಆಪ್‌ನ 8 ಶಾಸಕರು ಬಿಜೆಪಿ ಸೇರ್ಪಡೆಯಾಗಿ ಶಾಕ್

    ಹೀಗೆ ಆಪ್ ಸಂಚಾಲಕ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾಲು ಸಾಲು ಸವಾಲು ಎದುರಿಸಬೇಕಾಯ್ತು. ಹೀಗೆ ಜೈಲು ಸೇರಿ ಕಂಬಿಗಳ ಹಿಂದೆ ಕಾಲ ಕಳೆದ ಕೇಜ್ರಿವಾಲ್ ಅಲ್ಲಿಂದ ಹೊರ ಬಂದು ಹಲವು ಸವಾಲು ಎದುರಿಸಿದರು.

    ಜನರಿಂದ ಮಾನ್ಯತೆ ಪಡೆಯದೇ ಮತ್ತೆ ಸಿಎಂ ಕುರ್ಚಿ ಮೇಲೆ ಕೂರಲ್ಲ ಎಂದು ಶಪಥ ಮಾಡಿದ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಈ ಹೋರಾಟಗಳ ನಡುವೆ ಚುನಾವಣೆ ಎದುರಿಸಿರುವ ಟೋಪಿವಾಲಾ ಮತ್ತೊಂದು ಫಿನಿಕ್ಸ್ ನಂತೆ ಎದ್ದು ಬಂದು ಮಾಡಿದ ಶಪಥದಂತೆ ಜನರಿಂದ ಬಹುಮತ ಪಡೆದು ಸಿಎಂ ಹುದ್ದೆ ಅಲಂಕರಿಸುತ್ತಾರಾ ಅನ್ನೋದು ಫಲಿತಾಂಶ ಬಂದ್ಮೇಲೆ ಗೊತ್ತಾಗಲಿದೆ.

  • ಉಚಿತ ಭರವಸೆಗಳಿಂದಲೇ ಸದ್ದು ಮಾಡಿದ ದೆಹಲಿ ರಣಾಂಗಣ – ಯಾರ ಕೈ ಹಿಡಿಯುತ್ತೆ ʻಗ್ಯಾರಂಟಿʼ?

    ಉಚಿತ ಭರವಸೆಗಳಿಂದಲೇ ಸದ್ದು ಮಾಡಿದ ದೆಹಲಿ ರಣಾಂಗಣ – ಯಾರ ಕೈ ಹಿಡಿಯುತ್ತೆ ʻಗ್ಯಾರಂಟಿʼ?

    ನವದೆಹಲಿ: ವಿಧಾನಸಭೆ ಚುನಾವಣೆ ಫಲಿತಾಂಶ (Delhi Election Results) ಇಂದು ಪ್ರಕಟವಾಗಲಿದೆ. ರಾಷ್ಟ್ರ ರಾಜಧಾನಿಯ ಚುನಾವಣಾ ಕಣದಲ್ಲಿ ಈ ಬಾರಿ ಗ್ಯಾರಂಟಿ ಯೋಜನೆಗಳು ಭಾರೀ ಸದ್ದು ಮಾಡಿವೆ. ನೀರು ಕರೆಂಟ್ ಫ್ರೀ ಕೊಟ್ಟಿದ್ದ ಆಪ್ (AAP) ಇನ್ನೊಂದು ಹೆಜ್ಜೆ ಮುಂದೆ ಹೋದರೆ, ಕಾಂಗ್ರೆಸ್ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನೇ ಚೂರು ಬದಲಿಸಿ ಪ್ರಕಟಿಸಿದೆ. ಇನ್ನೂ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾ ಬಂದಿದ್ದ ಬಿಜೆಪಿ (BJP) ಕೂಡ ಈ ಬಾರಿ ಗ್ಯಾರಂಟಿ ಅಸ್ತ್ರದೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದೆ. ಒಟ್ಟಿನಲ್ಲಿ ಈ ಬಾರಿ ದೆಹಲಿ ಚುನಾವಣಾ ಕಣ ಗ್ಯಾರಂಟಿಗಳಿಂದಲೇ ಸದ್ದು ಮಾಡುತ್ತಿದೆ ಅನ್ನೋದಂತೂ ಸುಳ್ಳಲ್ಲ.

    ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅದನ್ನೆ ಚುನಾವಣಾ ಬಂಡವಾಳ ಮಾಡಿಕೊಂಡಿದೆ. ಮಧ್ಯಪ್ರದೇಶ, ಮಹರಾಷ್ಟ್ರದಲ್ಲಿ ಗ್ಯಾರಂಟಿ ರೀತಿಯ ಯೋಜನೆಗಳಿಂದ ಗೆಲುವಿನ ರುಚಿ ನೋಡಿದ್ದ ಬಿಜೆಪಿ ಅದನ್ನು ವಿರೋಧಿಸುತ್ತಲೇ ದೆಹಲಿಯಲ್ಲಿ ಹತ್ತಾರು ಭರವಸೆ ನೀಡಿದೆ. ಇನ್ನೂ ಗ್ಯಾರಂಟಿ ಜನಕ ಅಂತಲೇ ಕರೆಸಿಕೊಳ್ಳುವ ಆಪ್ ನೀರು ವಿದ್ಯುತ್ ಜೊತೆಗೆ ಈಗ ಹಲವು ಹೆಚ್ಚುವರಿ ಭರವಸೆ ಘೋಷಿಸಿದೆ.

    ಈಗ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ಪರಸ್ಪರ ಜಿದ್ದಿಗೆ ಬಿದ್ದಿದ್ದು ಜನರಿಗೆ ಭರಪೂರ ಕೊಡುಗೆಗಳನ್ನು ಘೋಷಿಸಿದೆ. ಆ ಪೈಕಿ ಯಾರ್ಯಾರ ಭರವಸೆ ಏನು..? ಕಾಂಗ್ರೆಸ್ (Congress), ಬಿಜೆಪಿ, ಆಪ್ ಘೋಷಿಸಿದ ಗ್ಯಾರಂಟಿ ಯೋಜನೆಗಳು ಅಂತಾ ಏನು ಅನ್ನೋದನ್ನ ತಿಳಿಯಬೇಕಿದ್ದರೆ ಮುಂದೆ ಓದಿ…

    ಆಪ್‌ ಗ್ಯಾರಂಟಿಗಳು ಯಾವುವು?

    * ಮಹಿಳಾ ಸಮ್ಮಾನ್ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2100
    * ಹಿರಿಯರಿಗೆ ಉಚಿತ ಚಿಕಿತ್ಸೆಯ ‘ಸಂಜೀವಿನಿ’ ಯೋಜನೆ ಜಾರಿ
    * ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಸ್ಕಾಲರ್‌ಶಿಪ್
    * ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ
    * ಮೆಟ್ರೋ ಪ್ರಯಾಣ ದರದಲ್ಲಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿ
    * ಅರ್ಚಕರು ಮತ್ತು ಗುರುದ್ವಾರದ ಗ್ರಂಥಿಗಳ ಮಾಸಿಕ 18,000 ರೂ.
    * ಪ್ರತಿ ಮನೆಗೂ 24*7 ಶುದ್ಧ ಮತ್ತು ಸ್ವಚ್ಛ ನೀರಿನ ಪೂರೈಕೆ
    * ವಿಶ್ವದರ್ಜೆಯ ರೋಡ್‌ಗಳ ನಿರ್ಮಾಣ
    * ಯಮುನಾ ನದಿ ಸ್ವಚ್ಛತೆ ಮುಂದುವರಿಕೆ

    ಬಿಜೆಪಿ ಗ್ಯಾರಂಟಿಗಳೇನು?

    * ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ 2,500 ರೂ.
    * ಬಡ ಮಹಿಳೆಯರಿಗೆ 500 ರೂ.ಗೆ ಎಲ್‌ಪಿಜಿ, ವರ್ಷಕ್ಕೆರೆಡು ಉಚಿತ ಸಿಲಿಂಡರ್
    * ಮಹಿಳೆಯರಿಗೆ 6 ಪೌಷ್ಠಿಕಾಂಶ ಕಿಟ್‌ಗಳು, ಗರ್ಭಿಣಿಯರಿಗೆ 21,000
    * ಮೊದಲ ಸಂಪುಟದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನ
    * 60-70 ವರ್ಷದ ಹಿರಿಯ ನಾಗರಿಕರಿಗೆ 2,000-2,500 ರೂ. ಪಿಂಚಣಿ
    * 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3,000 ರೂ. ಪಿಂಚಣಿ ಯೋಜನೆ
    * ದೆಹಲಿ ನಾಗರಿಕರಿಗೆರ 25 ಲಕ್ಷದ ಆರೋಗ್ಯ ವಿಮೆ

    ಕಾಂಗ್ರೆಸ್‌ ಭರವಸೆಗಳೇನು?

    * ಪ್ಯಾರಿದೀದಿ ಯೋಜನೆ – ಮಹಿಳೆಯರಿಗೆ ಮಾಸಿಕ 2,500 ರೂ.
    * ನಿರುದ್ಯೋಗ ಯುವಕರಿಗೆ ತಿಂಗಳಿಗೆ 8,500 ರೂ. ಭತ್ಯೆ
    * ಅರ್ಹ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್
    * 500 ರೂ.ಗೆ ಒಂದು ಎಲ್‌ಪಿಜಿ ಸಿಲಿಂಡರ್
    * ಉಚಿತ ಪಡಿತರ ಕಿಟ್‌ನೊಂದಿಗೆ 1 ವರ್ಷದ ತರಬೇತಿ ಕಾರ್ಯಕ್ರಮ
    * 15 ಸಾವಿರ ನಾಗರಿಕ ರಕ್ಷಣಾ ಸ್ವಯಂ ಸೇವಕರನ್ನು ಪುನಸ್ಥಾಪನೆ
    * ಮಹಿಳೆಯರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇ.33ರಷ್ಟು ಮೀಸಲು
    * ಹಿರಿಯ ನಾಗರಿಕರು, ವಿಧವೆಯರು, ದಿವ್ಯಾಂಗರಿಗೆ 5,000 ಪಿಂಚಣಿ

    ಹೀಗೆ ಆಡಳಿತರೂಢ ಆಪ್ ಅನ್ನು ಕಟ್ಟಿಹಾಕಲು ಬಿಜೆಪಿ ಕಾಂಗ್ರೆಸ್ ಭಾರೀ ಕೊಡುಗೆಗಳನ್ನೇ ನೀಡಿದೆ. ಈ ಮೂರು ಪಕ್ಷಗಳ ಭರವಸೆಗಳಲ್ಲಿ ಯಾರ ಭರವಸೆಯನ್ನು ಜನರು ನಂಬಿದ್ದಾರೆ ಅನ್ನೋದು ಇಂದಿನ ಫಲಿತಾಂಶದಲ್ಲಿ ತಿಳಿಯಲಿದೆ.

  • ಸೋತಾಗ ‘ಫಾದರ್ ಪ್ರಾಪರ್ಟಿ’ ಕಳೆದುಕೊಂಡಂತೆ ಆಡೋದು ನಮ್ಮ ಜಾಯಮಾನವಲ್ಲ: ಸಿ.ಟಿ.ರವಿ

    ಸೋತಾಗ ‘ಫಾದರ್ ಪ್ರಾಪರ್ಟಿ’ ಕಳೆದುಕೊಂಡಂತೆ ಆಡೋದು ನಮ್ಮ ಜಾಯಮಾನವಲ್ಲ: ಸಿ.ಟಿ.ರವಿ

    ಚಿಕ್ಕಮಗಳೂರು: ದೊಡ್ಡ ಪರಂಪರೆಯ ಕಾಂಗ್ರೆಸ್ ದೆಹಲಿಯಲ್ಲಿ ಅವಸಾನದ ಅಂಚಿನಲ್ಲಿದೆ. ಇನ್ನಾದರೂ ಕಾಂಗ್ರೆಸ್ಸಿರು ಟೀಕೆಯನ್ನೇ ಉದ್ಯೋಗ ಮಾಡಿಕೊಳ್ಳುವುದನ್ನು ಬಿಡಲಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

    ಜಿಲ್ಲಾ ಪಂಚಾಯತಿ ಸಭಾಗಂಣದಲ್ಲಿ ಮಾತನಾಡಿದ ಅವರು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ತೀರ್ಪನ್ನು ಸ್ವಾಗತಿಸುತ್ತೇವೆ ಎಂದರು. ಅಲ್ಲದೇ ಸೋಲಿನಲ್ಲೂ ಕಾಂಗ್ರೆಸ್‍ಗೆ ತಿವಿದಿದ್ದಾರೆ. ಫಲಿಶಾಂತ ಏನೇ ಇರಲಿ. ಜನಾಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಕೆಲವರಿಗೆ ಒಂದು ಕಾಯಿಲೆ ಇರುತ್ತೆ. ಗೆದ್ದಾಗ ಮೋದಿ ವಿರುದ್ಧ, ಬಿಜೆಪಿ ವಿರುದ್ಧ ಎಂದು ಸಂಭ್ರಮಿಸಿ, ಸೋತಾಗ ಇವಿಎಂ ಮೇಲೆ ಆರೋಪ ಮಾಡುತ್ತಾರೆ. ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದರು. ಇದನ್ನು ಓದಿ: ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್

    ನಾವು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುವುದಿಲ್ಲ. ಫಲಿತಾಂಶವನ್ನು ತಿರುವಿ ಹಾಕೋಕೆ ಇವಿಎಂಗೆ ನೆಟ್ ಕನೆಕ್ಷನ್ ಇರೋದಿಲ್ಲ. ಅದು ಅವರಿಗೂ ಗೊತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೀರ್ಘ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೆಹಲಿಯಲ್ಲಿ ಶೂನ್ಯ ಸಂಪಾದಿಸಿದೆ. ನಾವು ಸೋಲು-ಗೆಲುವು ಎರಡನ್ನೂ ಕಂಡಿದ್ದೇವೆ. ಅದು ಸ್ವಾಭಾವಿಕ ಕೂಡ. ಲೀಡರ್ ಶಿಪ್, ಸಮಸ್ಯೆ, ಸ್ಥಳೀಯ ನಾಯಕತ್ವವನ್ನ ಆಧಾರಿಸಿ ಮತ ಹಾಕ್ತಾರೆ ಎಂಬುವದು ಸ್ಪಷ್ಟವಾಗುತ್ತೆ ಎಂದು ತಿಳಿಸಿದರು. ಇದನ್ನು ಓದಿ: ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ನಮ್ಮದು ವಿರೋಚಿತ ಹೋರಾಟ, ಅಸಹಾಯಕತೆಯ ಶರಣಾಗತಿಯಲ್ಲ. ವಿಪಕ್ಷಗಳು ಒಂದಾದಾಗ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಸಂದೇಶವನು ಈ ಚುನಾವಣೆ ನೀಡಿದೆ. ನಾವು ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುತ್ತೇವೆ. ನಮ್ಮದು ಚುನಾವಣೆ ಫಲಿತಾಂಶಕ್ಕಾಗಿ ಹುಟ್ಟಿರೋ ಪಕ್ಷವಲ್ಲ. ದೇಶವನ್ನು ಸಮರ್ಥವಾಗಿ ಉಳಿಸಬೇಕೆಂಬ ಉದ್ದೇಶದಿಂದ ಹುಟ್ಟಿರೋ ಪಕ್ಷ. ಆರಂಭದಲ್ಲಿ ಠೇವಣಿ ಕಳೆದುಕೊಂಡೇ ನಮ್ಮ ಪಕ್ಷವನ್ನು ಕಟ್ಟಿರೋದು. ನಾವು ಸೋಲು-ಗೆಲುವಿನಿಂದ ವಿಚಲಿತರಾಗುವುದಿಲ್ಲ. ಸೋಲಿನಿಂದ ವಿಚಲಿತರಾಗೋದು, ಅಧಿಕಾರ ಕಳೆದುಕೊಂಡ ತಕ್ಷಣ ‘ಫಾದರ್ ಪ್ರಾಪರ್ಟಿ’ ಕಳೆದುಕೊಂಡಂತೆ ಆಡೋದು ನಮ್ಮ ಪಕ್ಷದ ಜಾಯಮಾನವಲ್ಲ ಎಂದರು.

  • ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್

    ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್

    -ಡಬಲ್ ಸಂಭ್ರಮದಲ್ಲಿ ಕೇಜ್ರಿವಾಲ್
    -ನನ್ನೊಂದಿಗೆ ನೀವೆಲ್ಲರೂ ಇರಬೇಕು

    ನವದೆಹಲಿ: ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಎಎಪಿ ಪಕ್ಷದ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರು ಮತ್ತು ದೆಹಲಿಯ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

    ದೆಹಲಿ ಜನತೆ ತಮ್ಮ ಮಗನಿಗೆ ಮೂರನೇ ಬಾರಿ ಆಶೀರ್ವಾದ ಮಾಡಿದ್ದಾರೆ. ದೆಹಲಿಯಲ್ಲಿ 24 ಗಂಟೆ ವಿದ್ಯುತ್, ಪ್ರತಿ ಮಗುವಿನ ಶಿಕ್ಷಣ, ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕುಟುಂಬಗಳ ಗೆಲವು ಇದಾಗಿದೆ. ಇಂದು ದೆಹಲಿಯ ಜನತೆ ಹೊಸ ರಾಜಕೀಯ ಜನ್ಮ ನೀಡಿದ್ದು, ಕೆಲಸ ಮಾಡಿದವರಿಗೆ ತಮ್ಮ ಮತ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿ ಧನ್ಯವಾದ ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ಇದು ನಮ್ಮ ಗೆಲುವಲ್ಲ, ದೆಹಲಿಯ ಪ್ರತಿಯೊಂದು ಕುಟುಂಬ, ಭಾರತ ಮಾತೆಯ ಗೆಲುವು. ಇಂದು ಮಂಗಳವಾರ, ಆಂಜನೇಯನವಾರ. ಇಂದು ಆಂಜನೇಯ ನಮ್ಮೆಲ್ಲರಿಗೂ ಆಶೀರ್ವಾದ ಮಾಡಿದ್ದಾನೆ. ಮುಂದಿನ ಐದು ವರ್ಷಗಳಲ್ಲಿಯೂ ನಮ್ಮ ಸರ್ಕಾರ ಜನತೆಯ ಆಶಯದಂತೆ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ದೆಹಲಿಯನ್ನು ಮತ್ತಷ್ಟು ಸುಂದರವಾಗಿಸೋಣ. ಇದೇ ವೇಳೆ ತಮ್ಮ ಪತ್ನಿಯ ಹುಟ್ಟುಹಬ್ಬವಿದೆ ಎಂಬ ವಿಚಾರವನ್ನು ತಿಳಿಸಿ ಡಬಲ್ ಖುಷಿಯಲ್ಲಿದ್ದೇನೆ ಎಂದರು.

    ದೆಹಲಿಯ ಜನತೆ ಬಹಳ ಆಸೆಗಳಿಂದ ನಮಗೆ ಮತ ನೀಡಿದ್ದು, ಆ ನಿಟ್ಟಿನಲ್ಲಿ ನಮ್ಮ ಕೆಲಸ ಇರಲಿದೆ. ಕೇವಲ ನನ್ನಿಂದ ಮಾತ್ರ ಇದು ಸಾಧ್ಯವಲ್ಲ. ಪ್ರತಿಯೊಬ್ಬರು ನನ್ನ ಕೆಲಸದೊಂದಿಗೆ ಕೈ ಜೋಡಿಸಿದ್ರೆ ದೆಹಲಿಯನ್ನು ಇನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಸಾಧ್ಯ ಎಂದು ತಿಳಿಸಿದರು.