ನವದೆಹಲಿ: ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ (Delhi Election) ಸೋಲು ಕಂಡ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಅತಿಶಿ (Atishi) ರಾಜೀನಾಮೆ ಸಲ್ಲಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಜಯ ಘೋಷಿಸಿದ ಒಂದು ದಿನದ ನಂತರ ಅಶಿತಿ, ರಾಜ್ಯಪಾಲ ವಿ.ಕೆ ಸಕ್ಸೇನಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿ ಅಮೆರಿಕ ಪ್ರವಾಸದ ಬಳಿಕವೇ ದೆಹಲಿಯಲ್ಲಿ ಸರ್ಕಾರ ರಚನೆ?
ಈ ಬಾರಿ ಚುನಾವಣೆಯಲ್ಲಿ ಮಾಜಿ ಸಿಎಂ ಕೇಜ್ರಿವಾಲ್ ಸೇರಿದಂತೆ ಘಟಾನುಘಟಿ ನಾಯಕರೇ ಸೋತು ಸುಣ್ಣವಾದ ಹೊರತಾಗಿಯೂ ಅತಿಶಿ ತನ್ನ ಕಲ್ಕಾಜಿ ಕ್ಷೇತ್ರವನ್ನು ಉಳಿಸಿಕೊಂಡರು. ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ವಿರುದ್ಧ ತೀವ್ರ ಹಿನ್ನಡೆ ಅನುಭವಿಸಿದ್ದ ಅತಿಶಿ 8-9ನೇ ಸುತ್ತಿನ ಬಳಿಕ ಸತತವಾಗಿ ಮುನ್ನಡೆ ಕಾಯ್ದುಕೊಂಡು ಗೆಲುವು ಸಾಧಿಸಿದ್ರು.
ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ (Delhi Election Results) ಶನಿವಾರ ಪ್ರಕಟವಾಗಿದ್ದು, 27 ವರ್ಷಗಳ ಬಳಿಕ ಬಿಜೆಪಿ (BJP) ಅಧಿಕಾರಕ್ಕೇರಿದೆ. ಆದ್ರೆ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಪ್ ಸೋಲು ಕಂಡಿದ್ದರೆ, ʻಕೈʼ ಪಾಳಯ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ. ಇದೇ ಫೆ.12, 13ರಂದು ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಬಳಿಕ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೊಪ್ಪಳ: ಸೋಲನ್ನ ಒಪ್ಕೋತೀವಿ ಆದ್ರೆ ಈಗಲೂ ನಮಗೆ ಇವಿಎಂ (EVM) ಮೇಲೆ ಅನುಮಾನ ಇದೆ ಎಂದು ಸಚಿವ ಶಿವರಾಜ ತಂಗಡಗಿ (Shivaraj Tangadagi) ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಕುರಿತು ಕನಕಗಿರಿಯಲ್ಲಿ (Kanakagiri) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ತಮಗೆ ಬೇಕಾದ ಕಡೆಯಲ್ಲಿ ಇವಿಎಂ ಮೂಲಕ ಗೆಲ್ಲುತ್ತಾರೆ. ಅವರು ಇವಿಎಂನಿಂದಲೇ ಗೆಲ್ಲೋದು. ಬೇರೆ ಯಾವುದರಿಂದಲೂ ಗೆಲ್ಲಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಮೋದಿ ಅಮೆರಿಕ ಪ್ರವಾಸದ ಬಳಿಕವೇ ದೆಹಲಿಯಲ್ಲಿ ಸರ್ಕಾರ ರಚನೆ?
ದಾವಣಗೆರೆ: ದೆಹಲಿಯಲ್ಲಿ ಕಾಂಗ್ರೆಸ್ (Congress) ಸೋಲಿಗೆ ಇವಿಎಂ (EVM) ಕಾರಣ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ (Priyanka Satish Jarkiholi) ಆರೋಪಿಸಿದ್ದಾರೆ.
ದಾವಣಗೆರೆ (Davanagere) ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ದೆಹಲಿ ಚುನಾವಣಾ ಫಲಿತಾಂಶದ ವಿಚಾರವಾಗಿ, ಬಿಜೆಪಿಯವರದ್ದು ಗೋತ್ತಲ್ಲ, ಇವಿಯಂನ ಗೊಂದಲ ಮಾಡಿಕೊಂಡು ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕೂಡ ಅದೇ ರೀತಿ ಮಾಡಿ ಗೆದ್ದಿದ್ದಾರೆ ಎಂದರು.
ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಕೂಡ ಇದೇ ಆರೋಪ ಮಾಡಿದ್ದಾರೆ. ಒಂದೇ ತಿಂಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ, ಹೈಕಮಾಂಡ್ ಸಿಎಂ ಬದಲಾವಣೆ ವಿಚಾರದಲ್ಲಿ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಏನು ಹೇಳುತ್ತೋ ಅದೇ ಅಂತಿಮ. ಬದಲಾವಣೆ ಆದ್ರೆ ನಮ್ಮ ತಂದೆಗೆ ಅವಕಾಶ ಇದೆ. ನಮ್ಮ ತಂದೆಯವರಿಗೆ (Satish Jarkiholi) ಅವಕಾಶ ಸಿಕ್ಕರೆ ರಾಜ್ಯವನ್ನು ಒಳ್ಳೆಯ ರೀತಿ ಕೊಂಡೊಯ್ಯುತ್ತಾರೆ ಎಂದು ತಿಳಿಸಿದ್ದಾರೆ.
ನವದೆಹಲಿ: ದೆಹಲಿ ಜನತೆ ಬಿಜೆಪಿ ಆಯ್ಕೆ ಮಾಡಿ ಆಪ್ ತಿರಸ್ಕರಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ (Eranna Kadadi) ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯನ್ನು ಬಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನು ತಿರಸ್ಕರಿಸಿದ್ದು, ಆ ಪಕ್ಷದ ನೇತಾರ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಮತ್ತು ಉಪಮುಖ್ಯಮಂತ್ರಿ ಮನಿಷ್ ಸೀಸೋಡಿಯಾ ಸೋಲುವ ಮೂಲಕ ಬಾರಿ ಹಿನ್ನೆಡೆ ಉಂಟಾಗಿದೆ. ಹೀಗಾಗಿ, ಬಿಜೆಪಿಗೆ ಆಶೀರ್ವದಿಸಿದ ಮತದಾರ ಬಂಧುಗಳಿಗೆ ಹಾಗೂ ಬಿಜೆಪಿಯನ್ನು ಗೆಲ್ಲಿಸುವಲ್ಲಿ ವಿಶೇಷ ಶ್ರಮವಹಿಸಿದ ದೆಹಲಿ ಬಿಜೆಪಿ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನ ಬಿಜೆಪಿ ಗೆಲ್ಲಿಸಿದ್ದಾರೆ: ಬೊಮ್ಮಾಯಿ
ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಅಣ್ಣಾ ಹಜಾರೆ ಮತ್ತು ಅವರ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷದ ಸಚಿವ ಸಂಪುಟದ ಹಲವಾರು ಸಚಿವರು ಭ್ರಷ್ಟಾಚಾರ ಕಳಕಿಂತರಾಗಿ ಜೈಲು ಪಾಲಾಗಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ಸುಳ್ಳಿನ ಅರಮನೆಯನ್ನೇ ನಿರ್ಮಿಸಿ ಅಧಿಕಾರಕ್ಕೆ ಬಂದ ಅರವಿಂದ್ ಕ್ರೇಜಿವಾಲ್ ಅವರನ್ನು ದೆಹಲಿ ಜನ ತಿರಸ್ಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಜನ ಆಯ್ಕೆ ಮಾಡುವ ಮೂಲಕ ದೆಹಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದರು.
ಮಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election Results) ಬಿಜೆಪಿ ಭರ್ಜರಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಮಂಗಳೂರಲ್ಲಿ (Mangaluru) ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
ಬೆಂಗಳೂರು: ದೆಹಲಿ ಚುನಾವಣೆಯಲ್ಲಿ (Delhi Election Result) ಬಿಜೆಪಿ ಗೆಲುವು ಸಾಧಿಸಿದ ಕುರಿತು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ (Sudhakar Reddy) ಸಂತೋಷ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಜನತೆಗೆ ಅಭಿನಂದನೆ ಕೋರಿರುವ ಅವರು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯನ್ನೇ ಧ್ಯೇಯವಾಗಿಸಿಕೊಂಡ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಜೀ (Narendra Modi) ಅವರ ನಾಯಕತ್ವವನ್ನು ದೇಶ ಒಪ್ಪಿಕೊಂಡಿದೆ. ದೇಶದಲ್ಲಿ ಬಿಜೆಪಿ ಮೋದಿಯವರು ನುಡಿದಂತೆ ನಡೆದು ತೋರಿಸುತ್ತಿದ್ದಾರೆ. ಇದರಿಂದ ಬಿಜೆಪಿ ಕುರಿತು ಜನರಲ್ಲಿ ನಂಬಿಕೆ – ವಿಶ್ವಾಸ ವೃದ್ಧಿಸಿದೆ. ಈ ವಿಷಯ ದೆಹಲಿ ಚುನಾವಣೆ ಫಲಿತಾಂಶದ ಮೂಲಕ ಸಾಬೀತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವಾಗ ಏಕಾಏಕಿ ಕಾಡಾನೆ ದಾಳಿ – ಮಹಿಳೆ ಸಾವು
ಆಪ್ ಪ್ರತಿ ಸಂದರ್ಭದಲ್ಲೂ ಸುಳ್ಳು ಹೇಳುತ್ತಿತ್ತು. ಆಪ್ ಮುಖಂಡರು ಭ್ರಷ್ಟ ಸರ್ಕಾರವನ್ನು ನಡೆಸುತ್ತಿದ್ದರು. ಮುಂದಿನ ದಿನಗಳಲ್ಲಿ ದೆಹಲಿ ಜನತೆಗೆ ಒಳಿತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚುನಾವಣೆಯ ಗೆಲುವಿಗೆ ಕಾರಣಕರ್ತರಾದ ಮತದಾರರು, ಶ್ರಮಿಸಿದ ಪಕ್ಷದ ಕಾರ್ಯಕರ್ತರು, ನಾಯಕರನ್ನು ಅಭಿನಂದಿಸಿದ್ದಾರೆ. ಇದನ್ನೂ ಓದಿ: ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು: ರಾಷ್ಟ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಆಡಳಿತಾರೂಢ ಎಎಪಿ ಸೋಲಿನ ಬಗ್ಗೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದ ಆಮ್ ಆದ್ಮಿ ಪಾರ್ಟಿ ಈ ಸಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಈ ಬಗ್ಗೆ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ಈ ಸೋಲನ್ನ ಹೀನಾಯ ಸೋಲು ಅಂತ ಹೇಳುವುದಿಲ್ಲ ಎಂದಿದ್ದಾರೆ.
ಗೆದ್ದಿರೋರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷ ಸೋತಿರೋದು ನಿಜ. ಅದರೆ, ಇದು ಸಂಪೂರ್ಣವಾದ ಸೋಲಲ್ಲ. ನಮ್ಮ ಪಕ್ಷದವರನ್ನೂ ಜನ ಗೆಲ್ಲಿಸಿದ್ದಾರೆ. ಜನರಲ್ಲಿ ನಮ್ಮ ಪಕ್ಷದ ಮೇಲೆ ನಂಬಿಕೆ ಇದೆ ಎಂದಿದ್ದಾರೆ.
ಬಿಜೆಪಿ ಇಡೀ ಸರ್ಕಾರವೇ ದೆಹಲಿಯ ಚುನಾವಣೆಯಲ್ಲಿ ನಿಂತಿತ್ತು. ಜೊತೆಗೆ ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರೋ ಸಂಸ್ಥೆಗಳನ್ನ ಬಳಸಿಕೊಂಡು ನಮ್ಮ ಪಕ್ಷವನ್ನ ಹೇಗಾದ್ರು ಮಾಡಿ ನಿರ್ನಾಮ ಮಾಡಬೇಕು ಅಂತ ಪಣ ತೊಟ್ಟಿದ್ದರು. ಐಟಿ, ಇಡಿ, ಚುನಾವಣಾ ಆಯೋಗವನ್ನ ಬಳಿಸಿಕೊಂಡರು ಎಂದು ಆರೋಪಿಸಿದ್ದಾರೆ.
ಹಣ ಬಲ, ತೋಳ್ಬಲದಿಂದ ಬಿಜೆಪಿ ಗೆದ್ದಿದೆ. ಗೆದ್ದ ಪಕ್ಷ ಜನರಿಗೆ ನೀಡಿರುವ ಭರವಸೆಯನ್ನ ಈಡೇರಿಸಬೇಕು. ಅಭಿವೃದ್ಧಿ ಕಾರ್ಯಗಳನ್ನ ಮಾಡಬೇಕು. ಸೋಲನ್ನು ನಾವು ಸ್ವೀಕಾರ ಮಾಡುತ್ತೇವೆ ಎಂದು ಎಂದು ತಿಳಿಸಿದ್ದಾರೆ.
ಮಿಡ್ಲ್ ಕ್ಲಾಸ್ ಹಾರ್ಟ್ ಗೆದ್ದವರೇ ದಿಲ್ಲಿ ಗದ್ದುಗೆ ಗೆದ್ದು ಬಿಟ್ಟರಾ? 27 ವರ್ಷಗಳ ಕಾಲ ಅಧಿಕಾರ ಹಿಡಿಯಲು ತಿಣುಕಾಡಿದ್ದ ಬಿಜೆಪಿ (BJP) ಈಗ ಕ್ಯಾಪಿಟಲ್ ಕ್ಯಾಪ್ಟನ್. ಮೋದಿ-ಶಾ (Modi – Amit Shah) ಜೋಡಿಯ ಚತುರೋಪಾಯಗಳು ದೈತ್ಯ ಕೇಜ್ರಿʻವಾಲ್ʼ ಕೆಡವಿ ಮಕಾಡೆ ಮಲಗಿಸಿಬಿಟ್ಟಿವೆ. ಹಾಗಾದ್ರೆ ಡೆಲ್ಲಿಯಲ್ಲಿ ಏನಾಯ್ತು? ಗೆಲುವಿನ ಸರದಾರರ ಒಳ ರಹಸ್ಯಗಳೇನು? ಇನ್ ಸೈಡ್ ಡಿಟೇಲ್ಸ್ ಇಲ್ಲಿದೆ.
50ರ ತನಕ ಮೋದಿಗೆ ಜಾಗವಿಲ್ಲ ಎಂದಿದ್ದ ಆಪ್ ಮಲಗಿತು ಮಕಾಡೆ:
ಅಂದು ಭ್ರಷ್ಟಾಚಾರ ವಿರೋಧಿ ಆಂದೋಲನವೇ ಎಎಪಿ ಉದಯಕ್ಕೆ ಕಾರಣ. ಆದ್ರೆ ಇಂದು ಭ್ರಷ್ಟಾಚಾರ ಆರೋಪವೇ ಎಎಪಿ ಪತನಕ್ಕೆ ನಾಂದಿ. ಅವರದೇ ಕಸಪೊರಕೆಯಿಂದ ಎಎಪಿ ಗುಡಿಸಿ ಗುಡ್ಡೇ ಹಾಕಿದೆ ಬಿಜೆಪಿ. ಇದನ್ನ ಭಾರತದ ಪ್ರಜಾಪ್ರಭುತ್ವದ ಬ್ಯೂಟಿ ಅನ್ನಬೇಕೋ? ಚುನಾವಣಾ ಚದುರಂಗದಾಟದ ಫಲಿತಾಂಶ ಅನ್ನಬೇಕೋ..? ಆದ್ರೆ ಗೆಲುವು ಗೆಲುವೇ. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್ʼ – ಬಿಜೆಪಿ ಚಾಂಪಿಯನ್!
ಮೋದಿ-ಶಾ ಚತುರೋಪಾಯಗಳೇ ಡೆಲ್ಲಿ ಗೆಲ್ಲಿಸಿತಾ?
ಅಂದಹಾಗೆ ಡೆಲ್ಲಿ ಚುನಾವಣೆಯಲ್ಲಿ ಸಾಮ, ದಾನ, ಭೇದ, ದಂಡ ಮಂತ್ರಗಳನ್ನ ಬಿಜೆಪಿ ಪಠಿಸಿದಂತೆ ಕಾಣುತ್ತೆ. ಡೆಲ್ಲಿಯನ್ನ ಗೆದ್ದೇ ಗೆಲ್ಲಬೇಕೆಂಬ ಹಠ ಮೋದಿ ಅವರಿಗಿತ್ತು. ಆ ಕಾರಣಕ್ಕಾಗಿಯೇ ಕೇಜ್ರಿವಾಲ್ ವಿರುದ್ಧ ಎಲ್ಲ ಶಕ್ತಿಗಳನ್ನ ಒಟ್ಟುಗೂಡಿಸಿದ್ದು ಮೋದಿ, ಶಾ. ಲೋಕಸಭೆಯಲ್ಲಿ ದೂರಾಗಿದ್ದವರಿಗೂ ಮಣೆ ಹಾಕುವುದರ ಜೊತೆಗೆ ಜಾತಿ ಆಧಾರಿತ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರ ಫಲಿಸಿದೆ. ಕೇಜ್ರಿವಾಲ್ ಸುತ್ತ ಗಿರಕಿ ಹೊಡೆದ ಎಎಪಿಗೆ ಮೋದಿ ಟೀಂನಿಂದ ಬಿಟ್ಟ ಭ್ರಷ್ಟಾಚಾರ ಬಾಣ ನಾಟಿರುವುದು ಸ್ಪಷ್ಟ. ಇದನ್ನೂ ಓದಿ: ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ: ಕೇಜ್ರಿವಾಲ್
ಡೆಲ್ಲಿ ವಾರ್.. ಬಿಜೆಪಿಯೇ ಸ್ಟಾರ್ – ಎಎಪಿ ಢಮಾರ್:
ಯೆಸ್, ಎಎಪಿಯನ್ನ ಮಣಿಸಲು ಬಿಜೆಪಿ ಮಾಡಿದ ಹಲವು ಕ್ಯಾಂಪೇನ್‌ಗಳು ಸಕ್ಸಸ್ ಆದಂತೆ ಕಾಣ್ತಿದೆ. ಎಎಪಿ ವಿರುದ್ಧ ಭ್ರಷ್ಟಾಚಾರ ಕ್ಯಾಂಪೇನ್, ಡೆಲ್ಲಿ ಜಾತಿ ಸಮೀಕರಣ ತಂತ್ರ, ಟ್ಯಾಕ್ಸ್ ರಿಲ್ಯಾಕ್ಸ್ -ಮಿಡ್ಲ್ ಕ್ಲಾಸ್ ಟಾರ್ಗೆಟ್, ಪ್ರಧಾನಿ ನರೇಂದ್ರ ಫೇಸ್+ಡೆವಲಪ್ಮೆಂಟ್ ವಿಶನ್, ಕುಂಭಮೇಳ ಮತ್ತು ಧರ್ಮಾಧಾರಿತ ವಿಷಯಗಳನ್ನು ಬಿಜೆಪಿ ಕ್ಯಾಂಪೇನ್ ಮಾಡಿತ್ತು. ಆದ್ರೆ ಎಎಪಿ ಆಯ್ಕೆ ಕೇಜ್ರಿವಾಲ್ ಜೈಲಿನ ಅನುಂಕಪ ನೆಚ್ಚಿಕೊಳ್ಳುವುದರ ಜೊತೆಗೆ ಭ್ರಷ್ಟಾಚಾರ ಕೂಪದ ಆರೋಪದಿಂದ ಹೊರಬರಲು ವಿಲವಿಲ ಎನ್ನುವಂತಾಯ್ತು ಎಂಬುದು ರಾಜಕೀಯ ಪಡಸಾಲೆಯ ಚರ್ಚೆ. ಇದನ್ನೂ ಓದಿ: ಶೀಷ್ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್ ಸೋತಿದ್ದೇಕೆ?
ಒಟ್ಟಿನಲ್ಲಿ ಡೆಲ್ಲಿ ಪೊಲಿಟಿಕಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೋದಿ-ಶಾ ರಕ್ಷಣಾತ್ಮಕ ಜೊತೆಯಾಟದಿಂದ ಎಎಪಿ ಕಟ್ಟಿದ ಕೇಜ್ರಿ ‘ವಾಲ್’ ಛಿದ್ರ ಛಿದ್ರವಾಗಿದ್ರೆ, ಬಜೆಟ್ ಡೇ ಸೂಪರ್ ಓವರ್ ನಲ್ಲಿ ನಿರ್ಮಲಾ ಸೀತಾರಾಮನ್ ಸೂಪರ್ ಸಿಕ್ಸ್ ನಿಂದ ಬಿಜೆಪಿಗೆ ಬೂಸ್ಟ್ ಸಿಕ್ಕಿ 27 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕೇರಿದೆ. ಆದ್ರೆ ಎಎಪಿ ಟೀಂನಲ್ಲಿ ಕ್ಯಾಪ್ಟನ್ ತಂತ್ರ ಕೈ ಕೊಡುವುದರ ಜೊತೆಗೆ ಹಿಟ್ ವಿಕೆಟ್ ಗಳು ಜಾಸ್ತಿ ಆಗಿ, ಚಾಂಪಿಯನ್ ಪಟ್ಟದಿಂದ ಎಎಪಿ ಔಟ್ ಆಗಿದ್ರೆ, ‘ಕೈ’ ಜಾರಿದ ಮೈತ್ರಿ ಕ್ಯಾಚ್ ನಿಂದ ಕಂಗೆಟ್ಟಿದ್ದ ಟೀಂ ಕಾಂಗ್ರೆಸ್ ಕಳಪೆ ಪ್ರದರ್ಶನನಿಂದ ಮತ್ತೆ ಡಕ್ ಔಟ್ ಆಗಿರೋದಂತೂ ಸತ್ಯ. ಇದನ್ನೂ ಓದಿ: ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಿದೆ, ಡಿಕೆಶಿ ಗ್ಯಾರಂಟಿ ಠುಸ್ ಪಟಾಕಿ ಆಗಿದೆ: ವಿಜಯೇಂದ್ರ ವ್ಯಂಗ್ಯ
ನವದೆಹಲಿ: ಬಿಜೆಪಿಯ ‘ಶೀಷ್ ಮಹಲ್’ (Sheesh Mahal) ಆರೋಪ, ಹೊಸ ಅಬಕಾರಿ ನೀತಿ (Liquor Policy) ಹಗರಣದಲ್ಲಿ ಘಟಾನುಘಟಿ ನಾಯಕರೇ ಜೈಲುಪಾಲು.. ಹೀಗೆ ಆಡಳಿತಾವಧಿಯಲ್ಲಿ ಕೊನೇ ಘಳಿಗೆಯಲ್ಲಿ ಎದುರಾದ ಆರೋಪಗಳೇ ದೆಹಲಿಯಲ್ಲಿ ಆಪ್ ಸೋಲಿಗೆ ಪ್ರಮುಖ ಕಾರಣಗಳು ಎಂದು ವಿಶ್ಲೇಷಿಸಲಾಗಿದೆ.
ಆಡಳಿತ ವಿರೋಧಿ
2015 ಮತ್ತು 2020 ರ ಚುನಾವಣೆಗಳಲ್ಲಿ ದೆಹಲಿಯಲ್ಲಿ ಎಎಪಿ ದೊಡ್ಡ ಗೆಲುವು ಸಾಧಿಸಿತು. ಎರಡು ಅವಧಿಗಳಲ್ಲಿ ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಅಭೂತಪೂರ್ವ ಕೆಲಸಗಳು ಆದವು. ವಿದ್ಯುತ್ ಮತ್ತು ನೀರಿನ ಸಬ್ಸಿಡಿಗಳು ಮತದಾರರನ್ನು ಸಂತೋಷಪಡಿಸಿದವು. ಈ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರೂ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ನೆಲ ಕಂಡುಕೊಳ್ಳಲು ಹೆಣಗಾಡಿತು.
ಕಾಲಾನಂತರದಲ್ಲಿ, ದೆಹಲಿಯ ವಾಯುಮಾಲಿನ್ಯ ಸೇರಿದಂತೆ ಈಡೇರದ ಭರವಸೆಗಳು ದೆಹಲಿ ನಿವಾಸಿಗಳನ್ನು ಕಾಡಲು ಪ್ರಾರಂಭಿಸಿದವು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಕಾರ್ಯನಿರ್ವಹಣೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಆಡಳಿತಾರೂಢ ಎಎಪಿ ಆರೋಪಿಸಿತು. ಆದರೆ, 10 ವರ್ಷ ಆಡಳಿತ ನಡೆಸಿದ ಎಎಪಿ ನೆಪವಾಗಿ ಹೀಗೆ ಆರೋಪ ಮಾಡುತ್ತಿದೆ ಎಂದೇ ಜನರು ಭಾವಿಸಿದರು. ಕೇಂದ್ರದೊಂದಿಗೆ ಎಎಪಿಯ ನಿರಂತರ ಜಟಾಪಟಿ ಹೊತ್ತಿನಲ್ಲೇ ಬಿಜೆಪಿಯ ‘ಡಬಲ್ ಎಂಜಿನ್’ ಭರವಸೆ ಜನಸಾಮಾನ್ಯರಿಗೆ ಇಷ್ಟವಾಯಿತು. ಅದೀಗ, ಫಲಿತಾಂಶದಲ್ಲಿ ಕಂಡುಬಂದಿದೆ. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್ʼ – ಬಿಜೆಪಿ ಚಾಂಪಿಯನ್!
ಶೀಷ್ ಮಹಲ್
ಚುನಾವಣೆ ಸಮೀಪದ ಹೊತ್ತಲ್ಲೇ, ಕೇಜ್ರಿವಾಲ್ ಮತ್ತು ದೆಹಲಿ ಸಿಎಂ ಅತಿಶಿ ಅವರಿಗೆ ನೀಡಿದ್ದ ಬಂಗ್ಲೆ (ಶೀಷ್ ಮಹಲ್) ವಿಚಾರವಾಗಿ ಎಎಪಿ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯಿತು. ಈ ಶೀಷ್ ಮಹಲ್‌ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಿಸಲಾಯಿತು. ಚುನಾವಣೆ ಹೊತ್ತಲ್ಲೇ ಬಿಜೆಪಿಯ ಗಂಭೀರ ಆರೋಪವು ಎಎಪಿಗೆ ನುಂಗಲಾರದ ತುತ್ತಾಗಿತ್ತು.
ದೆಹಲಿ ಮುಖ್ಯಮಂತ್ರಿ ಕಚೇರಿ ನಿರ್ಮಾಣಕ್ಕೆ 33 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಮೂರು ಬಾರಿ ದುಬಾರಿ ವಸ್ತುಗಳನ್ನು ಬಳಸಿಯೇ ಈ ಮನೆ ನವೀಕರಣ ಮಾಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಇದು ಕೂಡ ದೆಹಲಿ ಚುನಾವಣಾ ಫಲಿತಾಂಶದಲ್ಲಿ ಪರಿಣಾಮ ಬೀರಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸುಳ್ಳಿನ ಆಳ್ವಿಕೆ ಕೊನೆಗೊಂಡಿದೆ: ಅಮಿತ್ ಶಾ
ಬಿಜೆಪಿಯ ‘ಶೀಷ್ ಮಹಲ್’ ಆರೋಪಕ್ಕೆ ‘ರಾಜಮಹಲ್’ ಎಂಬ ಪ್ರತ್ಯಾರೋಪವನ್ನು ಎಎಪಿ ಆಗ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಶ್ರೀಮಂತ ಜೀವನಶೈಲಿ ನಡೆಸುತ್ತಿದ್ದಾರೆಂದು ಪ್ರತಿದಾಳಿ ನಡೆಸಿತ್ತು. ಆದರೆ, ಬಿಜೆಪಿಯ ನಿರಂತರ ಪ್ರಚಾರವು ಮತದಾರರ ಮೇಲೆ ಪ್ರಭಾವ ಬೀರಿದೆ.
ಹೊಸ ಅಬಕಾರಿ ನೀತಿ ಹಗರಣ
ದೆಹಲಿ ಆಡಳಿತಾವಧಿಯಲ್ಲಿ ಎಎಪಿ ವಿರುದ್ಧ ಕೇಳಿಬಂದ ಆರೋಪ ಅಬಕಾರಿ ನೀತಿ ಹಗರಣ. ದೆಹಲಿಯಲ್ಲಿ ಈಗ ರದ್ದುಗೊಂಡಿರುವ ಮದ್ಯ ನೀತಿಯ ಸುತ್ತಲಿನ ಭ್ರಷ್ಟಾಚಾರ ಆರೋಪಗಳು ಎಎಪಿಯಲ್ಲಿ ಕೋಲಾಹಲ ಸೃಷ್ಟಿಸಿತು. ಹೊಸ ನೀತಿಯು ಮದ್ಯದ ಬಾಟಲಿಗಳ ಮೇಲೆ ‘ಒಂದನ್ನು ಖರೀದಿಸಿದರೆ, ಮತ್ತೊಂದು ಉಚಿತ’ ಎಂದು ಬರೆದು ನೀಡುತ್ತಿದೆ. ಕೇಜ್ರಿವಾಲ್ ಸರ್ಕಾರವು ‘ದೆಹಲಿಯನ್ನು ಕುಡುಕರ ನಗರವನ್ನಾಗಿ ಪರಿವರ್ತಿಸುತ್ತಿದೆ’ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೇ, ಮದ್ಯ ನೀತಿ ಹಗರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ದೂರಿತ್ತು. ಇದನ್ನೂ ಓದಿ: ಮುಸ್ಲಿಮ್ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
ಕೇಂದ್ರ ಸಂಸ್ಥೆಗಳ ತನಿಖೆಗಳು ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಉನ್ನತ ನಾಯಕರನ್ನು ಬಂಧಿಸಲು ಕಾರಣವಾಯಿತು. ಸಿಸೋಡಿಯಾ ಬಂಧನದ ಬಳಿಕ ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಎಎಪಿ ತನ್ನ ಸಂಪುಟವನ್ನು ಪುನರ್ರಚಿಸಬೇಕಾಯಿತು. ನಂತರ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು. ಐದು ತಿಂಗಳು ಜೈಲಿನಲ್ಲಿಯೇ ಇದ್ದರು. ಪ್ರಮುಖ ನಾಯಕರ ಬಂಧನವು ಎಎಪಿ ಪ್ರಬಲ್ಯ ಕಳೆದುಕೊಳ್ಳಲು ಕಾರಣವಾಯಿತು.
ಈ ಎಲ್ಲಾ ಕಾರಣಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕುರ್ಚಿ ಕಳೆದುಕೊಳ್ಳಲು ಕಾರಣವಾಯಿತು. ಆಪ್ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ಚುನಾವಣೆ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಬಿಜೆಪಿ ನೀಡಿದ ಭರವಸೆಗಳು ಕೆಲಸ ಮಾಡಿವೆ. ದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಯಲ್ಲಿ ಮಧ್ಯಮ ವರ್ಗದ ಜನರಿದ್ದಾರೆ. ಬಜೆಟ್ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಿದ್ದು, ಬಿಜೆಪಿಗೆ ವರದಾನವಾಗಿದೆ. ಇದನ್ನೂ ಓದಿ: ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ
ನವದೆಹಲಿ: ಬಜೆಟ್ (Budget 2025) ಡೇ ಸೂಪರ್ ಓವರ್‌ನಲ್ಲಿ ನಿರ್ಮಲಾ ಸೀತಾರಾಮನ್ (Nirmala sitharaman) ʻಸೂಪರ್ ಸಿಕ್ಸ್ʼ ಸಿಡಿಸಿದ ಪರಿಣಾಮ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದೆ ಎಂಬ ವಿಶ್ಲೇಷಣೆ ಈಗ ಕೇಳಿ ಬಂದಿದೆ.
ಫೆಬ್ರವರಿ ಕೊನೆಯವರೆಗೂ ಆಪ್ ಮತ್ತು ಬಿಜೆಪಿ ಮಧ್ಯೆ ನೆಕ್ ಟು ನೆಕ್ ಪೈಪೋಟಿ ಇತ್ತು. ಈ ಸಂದರ್ಭದಲ್ಲಿ ಕೇಂದ್ರ ಬಜೆಟ್ ಬಂದಿತ್ತು. ಮಧ್ಯಮ ವರ್ಗದವರನ್ನು ಗುರಿಯಾಗಿಸಿ ನಿರ್ಮಲಾ ಸೀತಾರಾಮನ್ ಘೋಷಿಸಿದ ತೆರಿಗೆ ವಿನಾಯಿತಿ ಈ ಚುನಾವಣೆಯಲ್ಲಿ ಬೂಸ್ಟ್ ನೀಡಿದ ಪರಿಣಾಮ ಈಗ ದೆಹಲಿಯಲ್ಲಿ (Delhi) 27 ವರ್ಷದ ಬಳಿಕ ಬಿಜೆಪಿ ಅಧಿಕಾರಕ್ಕೆ ಏರಿದೆ.
ಇದೇ ತಿಂಗಳು ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ 12 ಲಕ್ಷ ರೂ. ವರೆಗೂ ತೆರಿಗೆ ವಿನಾಯಿತಿ ಘೋಷಿಸಿದರು. ಇದು ರಾಷ್ಟ್ರ ರಾಜಧಾನಿಯಲ್ಲಿರುವ ಮಧ್ಯಮ ವರ್ಗದ 45% ಮತದಾರರ ಮೇಲೆ ಪರಿಣಾಮ ಬೀರಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಆರ್.ಅಶೋಕ್
ದೆಹಲಿ ಚುನಾವಣೆಯ (Delhi Election) ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಜೆಟ್‌ನಲ್ಲಿ ಯಾವುದೇ ದೆಹಲಿ ಸಂಬಂಧ ಯೋಜನೆಗಳನ್ನು ಪ್ರಕಟಿಸಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಹೀಗಿದ್ದರೂ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಬಿಜೆಪಿ ಮಧ್ಯಮ ವರ್ಗದ ಜನ ಹೆಚ್ಚಾಗಿರುವ ದೆಹಲಿಯನ್ನ ಕೇಂದ್ರೀಕರಿಸಿ ತೆರಿಗೆಯಲ್ಲಿ ವಿನಾಯತಿ ನೀಡಿತ್ತು. ಇದು ಕೇಸರಿ ಪಡೆಗೆ ದೊಡ್ಡ ಶಕ್ತಿ ತಂದುಕೊಟ್ಟಿತು. 2020ರಲ್ಲಿ ಮಧ್ಯಮ ವರ್ಗದ ಬೆಂಬಲದಿಂದಲೇ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿತ್ತು.
2024ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಇದೇ ಮಧ್ಯಮ ವರ್ಗ ಸಂಪೂರ್ಣ ಬೆಂಬಲ ನೀಡಿತ್ತು. ಈ ಬಜೆಟ್‌ನಲ್ಲೂ ಪ್ರಧಾನಿ ಮೋದಿ ಮಧ್ಯಮ ವರ್ಗವನ್ನು ಕೇಂದ್ರೀಕರಿಸಿ ಆದಾಯ ತೆರಿಗೆ ಮಿತಿ ಸಡಿಲಿಕೆ ನೀಡಿದ್ದರಿಂದಲೇ ದೆಹಲಿ ಜನರ ಒಲವು ಬಿಜೆಪಿಯತ್ತ ವಾಲಿತು.
ಮಧ್ಯಮ ವರ್ಗದವರ ಆಕ್ರೋಶ ತಣ್ಣಗೆ ಮಾಡಲು ನಿರ್ಮಲಾ ಸೀತಾರಾಮನ್ 2024 ಜುಲೈನಲ್ಲೇ 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಘೋಷಿಸಬಹುದಿತ್ತು. ಆದ್ರೆ ಆ ಸಂದರ್ಭದಲ್ಲಿ ಯಾವುದೇ ಮಹತ್ವದ ತೆರಿಗೆ ವಿನಾಯಿತಿ ಘೋಷಣೆ ಮಾಡದ ಸೀತಾರಾಮನ್ ಈ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು. ಚುನಾವಣೆಯ ಹತ್ತಿರ ಇರುವಾಗಲೇ ಈ ಐತಿಹಾಸಿಕ ಘೋಷಣೆ ಪ್ರಕಟವಾದ್ದರಿಂದ ದೆಹಲಿಯ ಮತದಾರರು ಈ ಬಾರಿ ಬಿಜೆಪಿ ಕೈ ಹಿಡಿದಿದ್ದಾರೆ.
ಇನ್ನೂ ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿತ್ತು. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿತ್ತು. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿತ್ತು. ಆದ್ರೆ ಒಂದೂ ಖಾತೆ ತೆರೆಯದೆ ಕಾಂಗ್ರೆಸ್ ಮಕಾಡೆ ಮಲಗಿತು.