Tag: Delhi Daredevils

  • ಐಪಿಎಲ್‌ನಲ್ಲಿ ಅತೀ ಕಳಪೆ ಪ್ರದರ್ಶನ ನೀಡಿದ ಟಾಪ್-5 ತಂಡಗಳಿವು

    ಐಪಿಎಲ್‌ನಲ್ಲಿ ಅತೀ ಕಳಪೆ ಪ್ರದರ್ಶನ ನೀಡಿದ ಟಾಪ್-5 ತಂಡಗಳಿವು

    15ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಕ್ರಿಕೆಟ್ ಪ್ರೇಮಿಗಳ ಕಣ್ಣಿಗೆ ಹಬ್ಬ ಶುರುವಾಗಿದೆ. ಅತೀ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಹೊಳೆ ಹರಿಸುವ ಮೂಲಕ ಗಮನ ಸೆಳೆಯುವ ಈ ಟೂರ್ನಿಯನ್ನು ಕಣ್ತುಂಬಿಗೊಳ್ಳಲು ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಪ್ರಮುಖ ನಗರಗಳಲ್ಲಿ ಹೋಟೆಲ್‌ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತದೆ.

    ಆದರೆ, ಕೆಲವೊಮ್ಮೆ ಕ್ರೀಡಾ ಪ್ರೇಮಿಗಳ ನಿರೀಕ್ಷೆಯನ್ನು ಹುಸಿಗೊಳಿಸಿ ಅತಿ ಕಡಿಮೆ ರನ್ ಕಲೆಹಾಕಿರುವ ತಂಡಗಳೂ ಇವೆ. ಅವುಗಳ ಮಾಹಿತಿಯನ್ನಿಲ್ಲಿ ನೋಡಬಹುದಾಗಿದೆ.

    ಕಡಿಮೆ ರನ್ ಗಳಿಸಿದ ಟೀಂ ಗಳು!

    ipl

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
    2017ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 49 ರನ್‌ಗಳಿಗೆ ಆಲೌಟ್ ಆಗುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಕಡಿಮೆ ರನ್ ದಾಖಲಿಸಿರುವ ತಂಡಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಬರಲು ಕಾರಣವಾಯಿತು. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ

    ರಾಜಸ್ಥಾನ್ ರಾಯಲ್ಸ್ (RR)
    2008ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ್ ರಾಯಲ್ಸ್ ‌2009ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 58 ರನ್ ಕಲೆ ಹಾಕುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಕಲೆಹಾಕಿದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು.

    ipl

    ಡೆಲ್ಲಿ ಡೇರ್‌ಡೆವಿಲ್ಸ್ (DD)
    ಮೊದಲೇ ಹೇಳಿದಂತೆ ಡೆಲ್ಲಿ ಫ್ರಾಂಚೈಸಿ ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ತೀರಾ ಕೆಟ್ಟ ಪ್ರದರ್ಶನವನ್ನು ನೀಡಿದ್ದು, 66 ರನ್‌ಗಳ ಅಲ್ಪ ಮೊತ್ತ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. 2017ರ ಐಪಿಎಲ್ ಆವೃತ್ತಿಯ ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 66 ರನ್ ಕಲೆಹಾಕಿ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಗಳಿಸಿದ 3ನೇ ತಂಡ ಎಂದೂ ಕೂಡ ಎನಿಸಿಕೊಂಡಿದೆ. ಇದನ್ನೂ ಓದಿ: 2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ

    ಡೆಲ್ಲಿ ಕ್ಯಾಪಿಟಲ್ಸ್ (DK)
    2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡ ಡೆಲ್ಲಿ ಫ್ರಾಂಚೈಸಿ ಆ ಆವೃತ್ತಿಗೂ ಮುನ್ನ ಡೆಲ್ಲಿ ಡೇರ್‌ಡೆವಿಲ್ಸ್ ಎಂಬ ಹೆಸರನ್ನು ಹೊಂದಿತ್ತು. ಸದ್ಯ ಇತ್ತೀಚಿನ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿರುವ ಡೆಲ್ಲಿ ತಂಡ ಈ ಹಿಂದಿನ ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನವನ್ನು ನೀಡಿರುವ ಸಾಕಷ್ಟು ಉದಾಹರಣೆಗಳಿವೆ. 2017ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ತಂಡ 67ರನ್ ಕಲೆಹಾಕಿತ್ತು. ಈ ಮೊತ್ತ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ 4ನೇ ಕಡಿಮೆ ಮೊತ್ತ ಎನಿಸಿಕೊಂಡಿದೆ.

    ipl

    ಕೋಲ್ಕತ್ತಾ ನೈಟ್ ರೈಡರ್ಸ್ (KKR) 
    ಐಪಿಎಲ್ 2008ರ ಆವೃತ್ತಿಯಲ್ಲಿ ಕೆಕೆಆರ್ ಉತ್ತಮ ಪ್ರದರ್ಶನ ನೀಡಿದ್ದಕ್ಕಿಂತ ಕಳಪೆ ಪ್ರದರ್ಶನ ನೀಡಿದ್ದೇ ಹೆಚ್ಚು. ಇನ್ನು ಈ ಆವೃತ್ತಿಯಲ್ಲಿ ಇದೇ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಅಂದು ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಕೇವಲ 67 ರನ್‌ಗಳಿಗೆ ಆಲೌಟ್ ಆಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕಲೆಹಾಕಿದ್ದ ಈ ಮೊತ್ತ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ 5ನೇ ಕಡಿಮೆ ಮೊತ್ತ ಎನಿಸಿಕೊಂಡಿತು. ನಂತರ 2ನೇ ಆವೃತ್ತಿಯಲ್ಲಿ ಐಪಿಎಲ್ ಕಿರೀಟವನ್ನೇ ಮುಡಿಗೇರಿಸಿಕೊಂಡಿದ್ದನ್ನು ನೋಡಬಹುದು.

  • ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಕೊನೆ ಸ್ಥಾನದಲ್ಲಿ ಹೊರಬಿದ್ದ ತಂಡ ಎನಿಸಿಕೊಂಡರೂ ತಂಡದ ಯುವ ಆಟಗಾರ ರಿಷಭ್ ಪಂತ್ ವೈಯಕ್ತಿಕವಾಗಿ ದಾಖಲೆ ನಿರ್ಮಿಸಿದ್ದಾರೆ.

    ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ ಅರ್ಧ ಶತಕ (44 ಎಸೆತ, 64 ರನ್) ಸಿಡಿಸಿ ಮಿಂಚಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಸಹ ಪಡೆದರು. ಇನ್ನು ಟೂರ್ನಿಯಲ್ಲಿ ಒಟ್ಟಾರೆ 684 ರನ್ ಸಿಡಿಸಿದ ಪಂತ್ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ ಈ ಹಿಂದೆ ಕೆಕೆಆರ್ ಪರ 2014 ರಲ್ಲಿ ರಾಬಿನ್ ಉತ್ತಪ್ಪ (660 ರನ್) ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

    ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಪಂತ್ ದಾಖಲೆಯನ್ನು ಮುರಿಯುವ ಅವಕಾಶವಿತ್ತು. ಆದರೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ 7 ರನ್ ಗಳಿಸಿ ಟೂರ್ನಿಯಲ್ಲಿ ಒಟ್ಟಾರೆ 659 ರನ್ ಗಳೊಂದಿಗೆ ರಾಹುಲ್ ಈ ಐಪಿಎಲ್ ಆವೃತ್ತಿಯನ್ನು ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

    20 ವರ್ಷದ ಪಂತ್ ಟೂರ್ನಿಯಲ್ಲಿ 52.61 ಸರಾಸರಿ ಹಾಗೂ 173.60 ಸ್ಟ್ರೈಕ್ ರೇಟ್ ನಲ್ಲಿ 684 ರನ್ ಸಿಡಿಸಿದ್ದು, ಇದರಲ್ಲಿ 5 ಅರ್ಧ ಶತಕ ಹಾಗೂ ದಾಖಲೆಯ ಅಜೇಯ 128 ರನ್ ಗಳ ಶತಕವೂ ಸೇರಿದೆ. ಅಲ್ಲದೇ ಈ ಟೂರ್ನಿಯದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ಪಂತ್ ಹೊಂದಿದ್ದು, ಒಟ್ಟಾರೆ 37 ಸಿಕ್ಸರ್ ಸಿಡಿಸಿದ್ದಾರೆ.

    ಡೆಲ್ಲಿ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ತಂಡದವನ್ನು ಪ್ಲೇ ಆಫ್ ನಿಂದ ದೂರ ಮಾಡಿತ್ತು. ಇದರಲ್ಲಿ 64 ರನ್ ಸಿಡಿಸಿ ಪಂತ್ ತಂಡದ ಗೆಲುವಿಗೆ ಕಾರಣರಾಗಿದ್ದರು.

  • ಡೆಲ್ಲಿ ಟಾಸ್ ವೇಳೆ ಶ್ರೇಯಸ್ ನೋಡಿ ಧೋನಿ ನಕ್ಕಿದ್ದು ಏಕೆ ಗೋತ್ತಾ? ವಿಡಿಯೋ ನೋಡಿ

    ಡೆಲ್ಲಿ ಟಾಸ್ ವೇಳೆ ಶ್ರೇಯಸ್ ನೋಡಿ ಧೋನಿ ನಕ್ಕಿದ್ದು ಏಕೆ ಗೋತ್ತಾ? ವಿಡಿಯೋ ನೋಡಿ

    ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಡೆಲ್ಲಿ, ಚೆನ್ನೈ ತಂಡಗಳ ನಡುವಿನ ಪಂದ್ಯದ ಟಾಸ್ ವೇಳೆ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಚಿಮ್ಮಿದನ್ನು ನೋಡಿದ ಧೋನಿ ನಕ್ಕು ಸುಮ್ಮನಾಗಿದ್ದಾರೆ.

    ಈ ಮುನ್ನ ಇಬ್ಬರು ನಾಯಕರನ್ನು ಸಾಂಪ್ರದಾಯದಂತೆ ನ್ಯೂಜಿಲೆಂಡ್ ಕ್ರಿಕೆಟರ್ ಸೈಮನ್ ಪರಿಚಯಿಸಿದರು. ಬಳಿಕ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಕೈಗೆ ನಾಣ್ಯ ನೀಡಲಾಯಿತು. ಈ ವೇಳೆ ನಾಣ್ಯವನ್ನು ಚಿಮ್ಮಲು ಪ್ರಯಾಸ ಪಟ್ಟ ಶ್ರೇಯಸ್ ನೇರವಾಗಿ ಕ್ಯಾಮೆರಾ ಮುಂದೆ ಎಸೆದರು. ಇದನ್ನು ಕಂಡ ಧೋನಿ ಕ್ಷಣ ಕಾಲ ನಗೆ ಬೀರಿದ್ದರು. ಧೋನಿ ನಗು ಕಂಡ ಶ್ರೇಯಸ್ ಸಹ ಮುಗುಳ್ನಗೆ ಬೀರಿದರು.

    ಈ ಪಂದ್ಯದಲ್ಲಿ ಡೆಲ್ಲಿ ಬೌಲಿಂಗ್ ದಾಳಿಗೆ ಸಿಲುಕಿದ ಚೆನ್ನೈ ಬ್ಯಾಟಿಂಗ್ ಪಡೆ ಸೋಲುಂಡಿತ್ತು. ಪಂದ್ಯದ ಬಳಿಕ ಶ್ರೇಯಸ್ ಅಯ್ಯರ್, ಧೋನಿ ತಮ್ಮ ನಡುವೆ ನಡೆದ ಘಟನೆಯ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ.

    ಮಹೀ ಬಾಯ್ ಅವರು ಟೀಂ ಇಂಡಿಯಾ ಪದಾರ್ಪಣೆ ಮಾಡಿದ್ದ ವೇಳೆ ತನಗೆ ಕೇವಲ 13 ವರ್ಷ. ನಾವು ಅವರನ್ನು ಅದರ್ಶವಾಗಿ ತೆಗೆದುಕೊಂಡಿದ್ದೇವೆ. ಆದ್ರೆ ಪಂದ್ಯದಲ್ಲಿ ಧೋನಿ ಅವರ ಪಕ್ಕ ನಿಂತು ಟಾಸ್ ಮಾಡುವುದು ಊಹೆಯೂ ಮಾಡಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

  • ಗೌತಮ್ ಗಂಭೀರ್ 10 ವರ್ಷಗಳ ಹಿಂದಿನ ದಾಖಲೆ ಮುರಿದ ಪಂತ್

    ಗೌತಮ್ ಗಂಭೀರ್ 10 ವರ್ಷಗಳ ಹಿಂದಿನ ದಾಖಲೆ ಮುರಿದ ಪಂತ್

    ನವದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಡೆಲ್ಲಿ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಸೋಲುಂಡರೂ ಪಂತ್ ಬ್ಯಾಟ್ ನಿಂದ ಸರಾಗವಾಗಿ ರನ್ ಹರಿದು ಬಂದಿತ್ತು. ಈ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ತಮ್ಮ ಮೊದಲ ಶತಕ ಸಿಡಿಸಿದ್ದ ಪಂತ್ ಬೆಂಗಳೂರು ವಿರುದ್ಧವು ಅರ್ಧ ಶತಕ (61 ರನ್, 34 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ 582 ರನ್ ಗಳಿಸಿದರು.

    ಈ ಮೂಲಕ ಡೆಲ್ಲಿ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಪಂತ್ ಮಾಜಿ ನಾಯಕ ಗೌತಮ್ ಗಂಭೀರ್ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ನ ಮೊದಲ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಗಂಭೀರ್ 2008 ರಲ್ಲಿ 534 ರನ್ ಸಿಡಿಸಿದ್ದರು. 10 ವರ್ಷಗಳ ಬಳಿಕ ಡೆಲ್ಲಿ ಪರ 20 ವರ್ಷದ ಪಂತ್ ಈ ದಾಖಲೆಯನ್ನು ಮುರಿದಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಪಂತ್ ಒಟ್ಟಾರೆ 1 ಶತಕ ಹಾಗೂ ನಾಲ್ಕು ಅರ್ಧ ಶತಕ ಹಾಗೂ 61 ಬೌಂಡರಿ, 31 ಸಿಕ್ಸರ್ ಸಿಡಿಸಿದ್ದಾರೆ.

    ಐಪಿಎಲ್ ಚೊಚ್ಚಲ ಶತಕ ಸಿಡಿಸಿ ಟೂರ್ನಿಯಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ಮನಿಷ್ ಪಾಂಡೆ ಐಪಿಎಲ್ ನಲ್ಲಿ ಶತಕ ಗಳಿಸಿದ ಕಿರಿಯ ಆಟಗಾರರಾಗಿದ್ದಾರೆ. 2009 ರಲ್ಲಿ ಪಾಂಡೇ 19 ವರ್ಷ 253 ದಿನ ವಯಸ್ಸಿನಲ್ಲಿ ಶತಕ ಸಿಡಿಸಿದ್ದರು. ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ (22 ವರ್ಷ 151 ದಿನ) ಲ್ಲಿ 3ನೇ ಸ್ಥಾನ ಪಡೆದಿದ್ದಾರೆ.

  • ಎಬಿ ಡಿವಿಲಿಯರ್ಸ್ ಸಿಕ್ಸರ್ ಗೆ ಕೊಹ್ಲಿ ಪ್ರತಿಕ್ರಿಯೆ-ವಿಡಿಯೋ ವೈರಲ್

    ಎಬಿ ಡಿವಿಲಿಯರ್ಸ್ ಸಿಕ್ಸರ್ ಗೆ ಕೊಹ್ಲಿ ಪ್ರತಿಕ್ರಿಯೆ-ವಿಡಿಯೋ ವೈರಲ್

    ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಸಿಡಿಸಿದ ಸಿಕ್ಸರ್ ನೋಡಿ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಉತ್ತಮ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು. ಇಬ್ಬರ 8ನೇ ಶತಕದ ಜೊತೆಯಾಟದಲ್ಲಿ ತಂಡ 118 ರನ್ ಗಳಿಸಿತ್ತು. ಈ ವೇಳೆ ಕೊಹ್ಲಿ ಔಟಾಗಿ ಪೆವಿಲಿಯನ್ ಸೇರಿದ್ದರು. ಆದರೂ ಡಿವಿಲಿಯರ್ಸ್ ತಮ್ಮ ಸ್ಫೋಟಕ ಆಟವನ್ನು ಮುಂದುವರಿಸಿ ತಂಡದ ಜಯಗಳಿಸಲು ಕಾರಣವಾದರು.

    ಪಂದ್ಯದ 19 ಓವರ್ ವೇಳೆ ಡೆಲ್ಲಿ ಬೌಲರ್ ಬೋಲ್ಟ್ ಎಸೆತವನ್ನು ಎಬಿಡಿ ಸಿಕ್ಸರ್ ಬಾರಿಸಿದರು. ಇದನ್ನು ಕಂಡ ಕೊಹ್ಲಿ ಕುಳಿತಲ್ಲೇ ಅಚ್ಚರಿ ವ್ಯಕ್ತಪಡಿಸಿದ್ದರು. ಬಳಿಕ ಆರ್ ಸಿಬಿ ಡೆಲ್ಲಿ ವಿರುದ್ಧ 5 ವಿಕೆಟ್ ಗೆಲುವು ಪಡೆಯಿತು. ಡೆಲ್ಲಿ ವಿರುದ್ಧದ ಗೆಲುವಿನಿಂದ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಅಲ್ಲದೇ ಈ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿರಿದೆ.

    ಟೂರ್ನಿಯಲ್ಲಿ ಆರ್ ಸಿಬಿ ಇನ್ನು 3 ಪಂದ್ಯಗಳನ್ನು ಆಡಬೇಕಿದ್ದು, ಈ ಪಂದ್ಯಗಳಲ್ಲಿ ಗೆಲುವು ಪಡೆದರೆ 14 ಅಂಕಗಳನ್ನು ಪಡೆಯಲಿದೆ. ಸದ್ಯ ಇದುವರೆಗೂ ಹೈದರಾಬಾದ್ ತಂಡ ಮಾತ್ರ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದೆ. ಆಡಿರುವ 11 ಪಂದ್ಯಗಳಲ್ಲಿ ಹೈದರಾಬಾದ್ 18 ಅಂಕ ಪಡೆದು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಉಳಿದಂತೆ ಚೆನ್ನೈ 14 ಹಾಗೂ ಪಂಜಾಬ್, ಕೋಲ್ಕತ್ತಾ ತಂಡಗಳು ತಲಾ 12 ಅಂಕಗಳನ್ನು ಪಡೆದಿದೆ. ಆದ್ರೆ ಕೋಲ್ಕತ್ತಾ 12 ಪಂದ್ಯಗಳನ್ನು ಆಡಿದೆ.

    https://twitter.com/SPOVDO/status/995523259394281472?

  • ಧೋನಿ ಬಳಿಕ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ- ವಿಡಿಯೋ ನೋಡಿ

    ಧೋನಿ ಬಳಿಕ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ- ವಿಡಿಯೋ ನೋಡಿ

    ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಮೈದಾನ ಪ್ರವೇಶಿಸಿದ ಅಭಿಮಾನಿಯೊಬ್ಬ ಸಿಎಸ್‍ಕೆ ತಂಡದ ನಾಯಕ ಎಂಎಸ್ ಧೋನಿ ಕಾಲಿಗೆ ಬಿದ್ದಿದ್ದ. ಆದರೆ ಈಗ ಬಿಗಿ ರಕ್ಷಣೆಯ ನಡುವೆಯೂ ಅಭಿಮಾನಿಯೊಬ್ಬ ಮೈದಾನಕ್ಕೆ ಪ್ರವೇಶಿಸಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದಿದ್ದಾನೆ.

    ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಘಟನೆ ನಡೆದಿದೆ. ಕೊಹ್ಲಿ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಕೇವಲ 40 ಎಸೆತಗಳಲ್ಲಿ 70 ರನ್ ಸಿಡಿಸಿದರು. ಈ ವೇಳೆ ಅಭಿಮಾನಿಯೊಬ್ಬ ರಕ್ಷಣಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೈದಾನದಲ್ಲಿದ್ದ ಕೊಹ್ಲಿ ಕಡೆ ಓಡಿ ಬಂದು ಕಾಲಿಗೆ ಬಿದ್ದಿದ್ದಾನೆ. ಬಳಿಕ ಎಚ್ಚೆತ್ತ ರಕ್ಷಣಾ ಸಿಬ್ಬಂದಿ ಅಭಿಮಾನಿಯನ್ನು ತಡೆಯಲು ಯತ್ನಿಸಿದರು. ಆದರೆ ಕೊಹ್ಲಿ ಅಭಿಮಾನಿಯ ಆಸೆಯಂತೆ ಸೆಲ್ಫಿಗೆ ಫೋಸ್ ನೀಡಿದರು.

    ಪಂದ್ಯದಲ್ಲಿ ಆರ್ ಸಿಬಿ ಪರ ಉತ್ತಮ ಜೊತೆಯಾಟ ನೀಡಿದ ನಾಯಕ ಕೊಹ್ಲಿ ಹಾಗೂ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ (37 ಎಸೆತ, 72 ರನ್) ತಂಡದ ಗೆಲುವಿಗೆ ಕಾರಣರಾದರು. ಕೇವಲ 64 ಎಸೆತಳನ್ನು ಎದುರಿಸಿದ ಈ ಜೋಡಿ 118 ರನ್ ಸಿಡಿಸಿದರು.

    ಸರಣಿಯಲ್ಲಿ ಸತತ ಸೋಲುಗಳ ಮೂಲಕ ನಿರಾಸ ಪ್ರದರ್ಶನ ನೀಡಿದ ಆರ್ ಸಿಬಿ ತಂಡದ ಡೆಲ್ಲಿ ವಿರುದ್ಧ ಗೆಲುವಿನ ಬಳಿಕ ಆಡಿರುವ 11 ಪಂದ್ಯದಲ್ಲಿ 4 ರಲ್ಲಿ ಗೆಲುವು ಪಡೆದು 8 ಅಂಕಗಳೊಂದಿಗೆ 7ನೇ ಸ್ಥಾನ ಪಡೆದಿದೆ.

    https://www.instagram.com/p/BisFZAvH-OV/?utm_source=ig_embed

  • ದಾಖಲೆಯ ಶತಕ ಸಿಡಿಸಿದ ರಿಷಭ್ ಪಂತ್ – ಕ್ರಿಕೆಟ್ ಅಭಿಮಾನಿಗಳು ಫಿದಾ

    ದಾಖಲೆಯ ಶತಕ ಸಿಡಿಸಿದ ರಿಷಭ್ ಪಂತ್ – ಕ್ರಿಕೆಟ್ ಅಭಿಮಾನಿಗಳು ಫಿದಾ

    ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಡೆಲ್ಲಿ ತಂಡದ ಯುವ ಆಟಗಾರ ರಿಷಭ್ ಪಂತ್ ದಾಖಲೆ ಶತಕ ಸಿಡಿಸಿದ್ದು, ಐಪಿಎಲ್ ನ 50 ನೇ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಫಿರೋಜ್ ಶಾ ಕೋಟ್ಲಾ ಮೈಧಾನದಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ ರಿಷಭ್ 63 ಎಸೆತಗಳಲ್ಲಿ 128 ರನ್ (15 ಬೌಂಡರಿ, 7 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ವಿಶೇಷವಾಗಿ ಇನ್ನಿಂಗ್ಸ್ ನ ಕೊನೆಯ ಓವರ್ ಎಸೆದ ಭುವನೇಶ್ವರ್ ಬೌಲಿಂಗ್ ನಲ್ಲಿ 26 ರನ್ ಸಿಡಿಸಿದರು.

    ಈ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರಿಷಭ್ ಐಪಿಎಲ್ ನಲ್ಲಿ ಶತಕ ಗಳಿಸಿದ 31 ಆಟಗಾರ ಹಾಗೂ ಭಾರತದ 13ನೇ ಆಟಗಾರ ಎನಿಸಿಕೊಂಡರು. ಅಲ್ಲದೇ ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಕೂಡ ಆಗಿದ್ದಾರೆ. ಅಲ್ಲದೇ ಭಾರತದ ಪರ ಐಪಿಎಲ್ ನಲ್ಲಿ ಆತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ರಿಷಬ್ ಶತಕ ನಡುವೆಯೂ ಹೈದರಾಬಾದ್ ತಂಡ ಪಂದ್ಯದಲ್ಲಿ ಗೆಲುವು ಪಡೆಯಿತು.

    ಭಾರತೀಯ ಆಟಗಾರರ ಪೈಕಿ ಕಿಂಗ್ಸ್ ಇಲೆವನ್ ಪಂಜಾಬ್‍ನ ಮುರಳಿ ವಿಜಯ್ 128 ರನ್ ಗಳಿಸಿದ್ದರೆ, ಈ ಹಿಂದೆ ಪಂಜಾಬ್ ಪರ ಆಡಿದ್ದ ಸೆಹ್ವಾಗ್ 122 ರನ್ ಹೊಡೆದಿದ್ದರು.

    ಈ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಕೀ ಬೌಲರ್ ಎಂದೇ ಕರೆಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಹಾಗೂ ರಷೀದ್ ಖಾನ್ ಬೌಲಿಂಗ್ ನಲ್ಲೇ ಅತೀ ರನ್ ಸಿಡಿಸಿದ ಪಂತ್ ಬ್ಯಾಟಿಂಗ್ ಹಲವು ಅಭಿಮಾನಿಗಳು ಫಿದಾ ಆಗಿದ್ದಾರೆ. ಐಪಿಎಲ್ ನಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿರುವ ಪಂತ್ 1 ಸಾವಿರ ರನ್ ಪೂರ್ಣಗೊಳಿಸಿದರು. ಈ ಹಿಂದೆ 2009 ರಲ್ಲಿ ಮನೀಶ್ ಪಾಂಡೆ ಆರ್‌ಸಿಬಿ ಪರ ಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈ ಟೂರ್ನಿಯ 11 ಪಂದ್ಯಗಳಲ್ಲಿ 521 ರನ್ ಗಳಿಸಿರುವ ಪಂತ್ ಪಂಜಾಬ್ ಕೆಎಲ್ ರಾಹುಲ್ ಜೊತೆ ಆರೆಂಜ್ ಕ್ಯಾಪ್ ಪಡೆದಿದ್ದಾರೆ.

     

  • ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ನವದೆಹಲಿ: ಐಪಿಎಲ್ 2018 ರ 11ನೇ ಆವೃತ್ತಿಯಲ್ಲಿ ಸತತ ನಿರಾಸ ಪ್ರದರ್ಶನ ತೋರಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದು, ಯುವ ಆಟಗಾರ ಶ್ರೇಯಸ್ ಅಯ್ಯರ್ ಗೆ ನಾಯಕತ್ವ ಪಟ್ಟ ನೀಡಲಾಗಿದೆ.

    ಡೆಲ್ಲಿ ತಂಡದ ನಾಯಕತ್ವ ವಹಿಸಿದ್ದ ಗೌತಮ್ ಗಂಭೀರ್ ತಂಡದ ನಿರಾಸ ಪ್ರದರ್ಶನದ ಹೊಣೆ ಹೊತ್ತು ಸ್ವತಃ ನಾಯಕತ್ವ ಪಟ್ಟದಿಂದ ಬುಧವಾರ ಹಿಂದೆ ಸರಿದಿದ್ದಾರೆ. ಗಂಭೀರ್ ನಾಯಕತ್ವ ಪಟ್ಟದಿಂದ ಕೆಳಗಿಳಿದ ಕಾರಣ ಡೆಲ್ಲಿ ತಂಡದ ಮ್ಯಾನೇಜ್‍ಮೆಂಟ್ ಶ್ರೇಯಸ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಂಭೀರ್ ನಾಯಕತ್ವ ತೊರೆಯುವ ಸಂಗತಿ ನನ್ನ ಸ್ವತಃ ನಿರ್ಧಾರವಾಗಿದ್ದು, ತನ್ನ ಮೇಲೆ ಯಾರ ಒತ್ತಡವು ಇಲ್ಲ. ಅಲ್ಲದೇ ನನ್ನ ನಿರ್ಧಾರದ ಕುರಿತು ತಂಡದ ಮ್ಯಾನೇಜ್ ಮೆಂಟ್ ಗೆ ತಿಳಿಸಿದ ಬಳಿಕ ಹಲವು ಸುತ್ತು ಚರ್ಚೆಗಳು ನಡೆಸಲಾಗಿದೆ ಎಂದರು.

    ಟೂರ್ನಿಯಲ್ಲಿ ಇದುವರೆಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ 6 ಪಂದ್ಯಗಳನ್ನು ಆಡಿದೆ. ಉಳಿದಂತೆ 8 ರ ಘಟಕ್ಕೆ ತಲುಪಲು ಇನ್ನು 8 ಪಂದ್ಯಗಳನ್ನು ಆಡಬೇಕಿದೆ. ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಪಡೆದಿದೆ. ಟೂರ್ನಿಯಲ್ಲಿಯ ಮಧ್ಯದಲ್ಲಿ ತಂಡದ ನಾಯತ್ವ ಬದಲಾವಣೆ ಮಾಡುವುದು ತಂಡದ ಮೇಲೆ ಋಣಾತ್ಮಕ ಪ್ರಭಾವ ಉಂಟು ಮಾಡಲಿದೆ ಎಂಬ ಅಂಶದ ಬಳಿಕವೂ ಗಂಭೀರ್ ಅವರ ನಿರ್ಧಾರದ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದ ಸೋಲಿನ ಬಳಿಕ ಗಂಭೀರ್ ತಂಡದ ನಾಯಕತ್ವ ತೊರೆಯುವ ನಿರ್ಧಾರವನ್ನು ತಂಡದ ಮ್ಯಾನೇಜ್ ಮೆಂಟ್ ಮುಂದೇ ತಿಳಿಸಿದ್ದರು. ಬಳಿಕ ಹಲವು ಬಾರಿ ಚರ್ಚೆ ನಡೆಸಿ ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಟಿಂಗ್ ಹಾಗೂ ಗಂಭೀರ್ ಜಂಟಿಯಾಗಿ ನಿರ್ಧಾರ ಪ್ರಕಟಿಸಿದ್ದಾರೆ.

    ನಾಯಕತ್ವದ ಬದಲಾವಣೆ ನಿರ್ಧಾರದಿಂದ ಮುಂದಿನ ಕೊಲ್ಕತ್ತಾ ವಿರುದ್ಧದ ಪಂದ್ಯವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಗಂಭೀರ್ ಅವರ ಈ ನಿರ್ಧಾರಕ್ಕೆ ವೈಯಕ್ತಿಕವಾಗಿ ಅವರು ತಂಡಕ್ಕೆ ರನ್ ಕೊಡುಗೆ ನೀಡದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಟೂರ್ನಿಯಲ್ಲಿ ಗಂಭೀರ್ ಒಂದು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು, ಬಳಿಕ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಟೂರ್ನಿಯಲ್ಲಿ ಒಟ್ಟಾರೆ 6 ಪಂದ್ಯಗಳಿಂದ ಗಂಭೀರ್ 85 ರನ್ ಗಳಿಸಿದ್ದಾರೆ. ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಕೊಲ್ಕತ್ತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಎರಡು ಬಾರಿ ಕಪ್ ಗೆಲ್ಲಲು ಕಾರಣರಾಗಿದ್ದರು.

    ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ ಕಳೆದ ಆರ್ ಸಿಬಿ ಹಾಗೂ ಚೆನ್ನೈ ತಂಡಗಳ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದ್ದರು. ಆದರೆ ಈ ಎರಡು ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಪಡೆಯಲು ವಿಫಲವಾಗಿತ್ತು.

  • ಅಣ್ಣನ ಬೌಲಿಂಗ್‍ನಲ್ಲಿ ಸೂಪರ್ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ

    ಅಣ್ಣನ ಬೌಲಿಂಗ್‍ನಲ್ಲಿ ಸೂಪರ್ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ

    ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್, ಕೃನಾಲ್ ಎಸೆತದಲ್ಲಿ ಸಿಡಿಸಿದ ಚೆಂಡನ್ನು ಡೈವ್ ಮಾಡಿ ಹಿಡಿಯುವ ಮೂಲಕ ಹಾರ್ದಿಕ್ ಪಾಂಡ್ಯ ಸೂಪರ್ ಕ್ಯಾಚ್ ಹಿಡೆದಿದ್ದಾರೆ. ಈ ಮೂಲಕ ಪಾಂಡ್ಯ ಸಹೋದರರು ಮೋಡಿ ಮಾಡಿದ್ದಾರೆ.

    ಮುಂಬೈ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡದ ಪರ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಮ್ಯಾಕ್ಸ್ ವೆಲ್ ಕೇವಲ 6 ಎಸೆತಗಳಲ್ಲಿ 13 ರನ್ ಸಿಡಿಸಿದ್ದರು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಕೃನಾಲ್ ಪಾಂಡ್ಯ ಮ್ಯಾಕ್ಸ್ ವೆಲ್ ರನ್ನು ಔಟ್ ಮಾಡಿದರು. ಕೃನಾಲ್ ೆಸೆತದಲ್ಲಿ  13 ಓವರ್ 2ನೇ ಬಾರಿ ಹೊಡೆತಕ್ಕೆ ಮುಂದಾದ ಮಾಕ್ಸ್ ವೆಲ್ ಬೌಂಡರಿಯತ್ತ ಬಾಲ್ ಸಿಡಿಸಿದರು. ಈ ವೇಳೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ರನ್ನಿಂಗ್ ಡೈವ್ ಹೊಡೆದು ಕ್ಯಾಚ್ ಹಿಡಿದರು.

    ಇದಕ್ಕೂ ಮುನ್ನ ಕೇವಲ 25 ರನ್ ಎಸೆತಗಳಿಂದ 47 ಸಿಡಿಸಿದ್ದ ರಿಷಭ್ ಪಂತ್ ರ ವಿಕೆಟನ್ನು ಕೃನಾಲ್ ಪಾಂಡ್ಯ ಪಡೆದಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದ್ದು, ಪಾಂಡ್ಯ ಸಹೋದರರಿಗೆ ಅಭಿಮಾನಿಗಳು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಮುಂಬೈ ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಸೋಲುವ ಮೂಲಕ ಟೂರ್ನಿಯಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದೆ. ಮತ್ತೊಂದೆಡೆ ಮುಂಬೈ ವಿರುದ್ಧದ ಗೆಲುವಿನ ಸವಿ ಪಡೆದ ಡೆಲ್ಲಿ  7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಜಯದ ಖಾತೆ ತೆರೆದಿದೆ.

  • ಲಾಸ್ಟ್ ಬಾಲ್ ಫಿನಿಷ್- ಡೆಲ್ಲಿ ಡೇರ್ ಡೆವಿಲ್ಸ್ ಗೆ ರೋಚಕ ಗೆಲುವು

    ಲಾಸ್ಟ್ ಬಾಲ್ ಫಿನಿಷ್- ಡೆಲ್ಲಿ ಡೇರ್ ಡೆವಿಲ್ಸ್ ಗೆ ರೋಚಕ ಗೆಲುವು

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸತತ ಎರಡು ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಜಯ ಗಳಿಸಿದೆ.

    ಗೆಲ್ಲಲು 195 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡ ಆರಂಭಿಕ ಜೇಸನ್ ರಾಯ್ ಬಿರುಸಿನ ಅರ್ಧ ಶತಕ 91 ರನ್ (53 ಎಸೆತ, ತಲಾ 6 ಬೌಂಡರಿ, 6 ಸಿಕ್ಸರ್) ಹಾಗೂ ರಿಷಬ್ ಪಂತ್ (47) ಬ್ಯಾಟಿಂಗ್ ನೆರವಿನೊಂದಿಗೆ ಗೆಲುವು ಪಡೆಯಿತು.

    ಡೆಲ್ಲಿ ಪರ ಉತ್ತಮ ಆರಂಭ ನೀಡಿದ ರಾಯ್ ಹಾಗೂ ಗಂಭೀರ್ ಜೋಡಿ 50 ರನ್ ಗಳ ಜೊತೆಯಾಟ ನೀಡಿತು. ಈ ವೇಳೆ ನಾಯಕ ಗಂಭೀರ್ 15 ರನ್ ಗಳಿಸಿ ರೆಹಮಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 25 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್  ನೆರವಿನಿಂದ 47 ರನ್ ಸಿಡಿಸಿ ಕುನಲ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು.

    ಬಳಿಕ ಆರಂಭಿಕ ರಾಯ್ ರನ್ನು ಕೂಡಿ ಕೊಂಡ ಶೇಯಸ್ ಅಯ್ಯರ್ (27 ರನ್) ಡೆಲ್ಲಿ ಗೆಲುವಿಗೆ ಪ್ರಮುಖ ಕಾರಣರಾದರು. ಕೊನೆಯ 6 ಓವರ್ ಗಳಲ್ಲಿ 58 ರನ್ ಗಳಿಸುವ ಗುರಿ ಪಡೆದ ಈ ಜೋಡಿ ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊನೆಯ 6 ಎಸೆತಗಳಲ್ಲಿ 11 ರನ್ ಗಳಿಸುವ ಒತ್ತಡದಲ್ಲಿದ್ದ ರಾಯ್, ಬೌಲರ್ ರೆಹಮಾನ್ ಓವರ್ ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ಆದರೆ ಬಳಿಕ ರೆಹಮಾನ್ ಮೂರು ಎಸೆತಗಳು ಡಾಟ್ ಮಾಡುವ ಮೂಲಕ ಪಂದ್ಯದ ಕೊನೆಯ ಎಸೆತವರೆಗೆ ರೋಚಕತೆ ಉಳಿಯುವಂತೆ ಮಾಡಿದರು. ಕೊನೆಯ ಎಸೆತದಲ್ಲಿ ರಾಯ್ ಒಂದು ರನ್ ಗಳಿಸಿ ಡೆಲ್ಲಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯುವಲ್ಲಿ ಕಾರಣರಾದರು. ಮುಂಬೈ ಪರ ಪಾಂಡ್ಯ 2, ರೆಹಮಾನ್ 1 ವಿಕೆಟ್ ಪಡೆದರು. ಹಾಲಿ ಚಾಂಪಿಯನ್ ಮುಂಬೈ ಟೂರ್ನಿಯಲ್ಲಿ ಸತತ 3ನೇ ಸೋಲು ಪಡೆಯಿತು.

    ಇದಕ್ಕೂ ಮುನ್ನ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಮುಂಬಯಿ ಇಂಡಿಯನ್ಸ್ ಪರ ಕಣಕ್ಕೆ ಇಳಿದ ಆರಂಭಿಕರಾದ ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಎವಿನ್ ಲೂಯಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಉತ್ತಮ ಆರಂಭ ನೀಡಿದರು.

    ಮೊದಲ ಪವರ್ ಪ್ಲೇ ನಲ್ಲಿ ಡೆಲ್ಲಿ ಬೌಲರ್ ಗಳ ಬೆವರಿಳಿಸದ ಲೂಯಿಸ್, ಯಾದವ್ ಜೋಡಿ 84 ರನ್ ಸಿಡಿಸಿದರು. ಅಲ್ಲದೇ ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಪರ ದಾಖಲೆ ನಿರ್ಮಿಸಿತು. ಈ ವೇಳೆ 32 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನೊಂದಿಗೆ 53 ರನ್ ಗಳಿಸಿದ್ದ ಯಾದವ್ ಹಾಗೂ 48 ರನ್ ಗಳಿಸಿದ್ದ ಎಲ್ವಿನ್ ಲೂಯಿಸ್ ರಾಹುಲ್, ತಿವಟಿಯ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿದರು. ಮುಂಬೈ ಮೊದಲ 6 ಓವರ್ ರನ್ – 15, 10, 15, 12, 14, 18 ಒಟ್ಟು 84 ರನ್

    ಇತ್ತ ಬಿರುಸಿನ ಬ್ಯಾಟಿಂಗ್ ನಡೆಸಿದ ಇಶನ್ ಕಿಶನ್ ಕೇವಲ 23 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 44 ರನ್ ಸಿಡಿಸಿ ತಂಡದ ಮೊತ್ತವನ್ನು 15 ಓವರ್ ಗಳಲ್ಲಿ 160 ರನ್ ಗಡಿದಾಟಲು ನೆರವಾದರು. ಈ ವೇಳೆ ಬೌಲರ್ ಡೆನಿಯಲ್ ಕ್ರಿಸ್ಟನ್ ಎಸೆತದಲ್ಲಿ ಬಾರಿ ಒಡೆತಕ್ಕೆ ಕೈ ಹಾಕಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮರು ಎಸೆತದಲ್ಲೇ ಪೊಲಾಡ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು.

    ಬಳಿಕ ಬಂದ ನಾಯಕ ರೋಹಿತ್ ಶರ್ಮಾ (18), ಕುಶಲ್ ಪಾಂಡ್ಯ (11) ಹೋರಾಟ ಬಹುಬೇಗ ಅಂತ್ಯವಾಯಿತು. ಬೌಲರ್ ಗಳಾದ ಧನಂಜಯ್ ಹಾಗೂ ಮಾರ್ಕಡೆ ತಲಾ ರನ್ ಗಳಿಸಿ ಆಜೇಯರಾಗಿ ಉಳಿದರು. ಡೆಲ್ಲಿ ಪರ ಬೌಲ್ಟ್, ಡೆನಿಯಲ್, ರಾಹುಲ್ ತಲಾ 2, ಶಮಿ 1 ವಿಕೆಟ್ ಪಡೆದರು.