Tag: delhi couple court

  • 40 ವರ್ಷಗಳ ಹಿಂದೆಯೇ ವಿವಾಹವಾಗಿದ್ದ ಜೋಡಿ ಕೋರ್ಟ್‌ ಮೆಟ್ಟಿಲೇರುವಂತೆ ಮಾಡಿದ ಸಾಫ್ಟ್‌ವೇರ್‌!

    40 ವರ್ಷಗಳ ಹಿಂದೆಯೇ ವಿವಾಹವಾಗಿದ್ದ ಜೋಡಿ ಕೋರ್ಟ್‌ ಮೆಟ್ಟಿಲೇರುವಂತೆ ಮಾಡಿದ ಸಾಫ್ಟ್‌ವೇರ್‌!

    ನವದೆಹಲಿ: 40 ವರ್ಷಗಳ ಹಿಂದೆಯೇ ವಿವಾಹವಾಗಿ ಹೆಸರು ನೋಂದಾಯಿಸಿಕೊಳ್ಳದಿದ್ದ ದಂಪತಿ ಈಗ ಕೋರ್ಟ್‌ ಮೆಟ್ಟಿಲೇರುವಂತಾಗಿದೆ. ವಿವಾಹ ನೋಂದಣಿ ಮಾಡಿಕೊಳ್ಳುವಂತೆ ಅವರು ಮಾಡಿರುವ ಮನವಿ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ನೀಡಿದೆ.

    ಹೌದು, ವಿವಾಹ ನೋಂದಣಿಗಾಗಿ ಕೋರ್ಟ್‌ ಮೆಟ್ಟಿಲೇರಿರುವ ದಂಪತಿ, 1981ರಲ್ಲೇ ವಿವಾಹವಾಗಿದ್ದರು. ಆದರೆ ಆಗ ಅವರಿಬ್ಬರೂ ಅಪ್ರಾಪ್ತರಾಗಿದ್ದರು. ಆದ್ದರಿಂದ ಈ ಜೋಡಿಯ ವಿವಾಹ ನೋಂದಣಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಾಫ್ಟ್‌ವೇರ್‌ ಪರಿಗಣಿಸಿರಲಿಲ್ಲ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡರೆ ವಾಷಿಂಗ್ ಮಶಿನ್, ಫ್ರಿಡ್ಜ್, ಟಿವಿ ಬಹುಮಾನ

    ಈಗ 40 ವರ್ಷಗಳ ನಂತರ ಈ ದಂಪತಿ ಎಲ್ಲಾ ದಾಖಲಾತಿಗಳೊಂದಿಗೆ ವಿವಾಹ ನೋಂದಣಿಗಾಗಿ ವಕೀಲ ಜೆ.ಎಸ್‌.ಮನ್‌ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್‌ ನೀಡಿದೆ. ನ್ಯಾಯಮೂರ್ತಿ ರೇಖಾ ಪಲ್ಲಿ ಅವರು, ಈ ಸಂಬಂಧ ಡಿಸೆಂಬರ್‌ 23ರೊಳಗೆ ಸ್ಪಷ್ಟನೆ ನೀಡಬೇಕು ಎಂದು ಸರ್ಕಾರ ತಿಳಿಸಿದ್ದಾರೆ.

    ವಿಶೇಷ ವಿವಾಹ ಕಾಯ್ದೆ 1954ರ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ನಮೂನೆಯಲ್ಲಿ ವಿವಾಹವನ್ನು ನೋಂದಾಯಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಅರ್ಜಿದಾರರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    1954ರ ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್‌ 15ರಲ್ಲಿ ಸೂಚಿಸಿರುವಂತೆ ವಿವಾಹ ನೋಂದಣಿಗೆ ಎಲ್ಲಾ ಷರತ್ತುಗಳನ್ನು ಪೂರೈಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ನಾವು ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಕೌಟುಂಬಿಕ ಜೀವನ ನಡೆಸುತ್ತಿದ್ದೇವೆ. ನಮಗೆ ನಾಲ್ಕು ಮಕ್ಕಳಿದ್ದಾರೆ ಎಂದು ಅರ್ಜಿದಾರರು ವಿವಾಹ ನೋಂದಣಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.