Tag: Delhi Coaching Centre

  • ಕೋಚಿಂಗ್ ಸೆಂಟರ್‌ಗೆ ಮಳೆ ನೀರು ನುಗ್ಗಿ ಮೂವರು UPSC ಆಕಾಂಕ್ಷಿಗಳು ಸಾವು – ಮಾಲೀಕ ಸೇರಿ ಇಬ್ಬರು ಅರೆಸ್ಟ್‌

    ಕೋಚಿಂಗ್ ಸೆಂಟರ್‌ಗೆ ಮಳೆ ನೀರು ನುಗ್ಗಿ ಮೂವರು UPSC ಆಕಾಂಕ್ಷಿಗಳು ಸಾವು – ಮಾಲೀಕ ಸೇರಿ ಇಬ್ಬರು ಅರೆಸ್ಟ್‌

    ನವದೆಹಲಿ: ಇಲ್ಲಿನ ಹಳೇ ರಾಜೇಂದ್ರ ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ಗೆ (Delhi Coaching Centre) ಮಳೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚಿಂಗ್‌ ಸೆಂಟರ್‌ ಮಾಲೀಕ ಹಾಗೂ ಸಂಯೋಜಕನನ್ನ ದೆಹಲಿ ಪೊಲೀಸರು (Delhi Police) ಬಂಧಿಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

    ಕೋಚಿಂಗ್‌ ಸೆಂಟರ್‌ ಮಾಲೀಕ ಅಭಿಷೇಕ್‌ ಗುಪ್ತಾ ಹಾಗೂ ಸಂಯೋಜಕ ದೇಶ್‌ಪಾಲ್‌ ಸಿಂಗ್‌ ಬಂಧಿತರು. ಕೇರಳ ಮೂಲದ ನವೀನ್‌, ಉತ್ತರ ಪ್ರದೇಶದ ಶ್ರೇಯಾ, ತೆಲಂಗಾಣದ ತಾನಿಯಾ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ವೀಕ್ಷಿಸಿ ಸಹೋದರಿಯ ಅತ್ಯಾಚಾರಗೈದು ಹತ್ಯೆ – ಪ್ರಕರಣ ಮುಚ್ಚಿಡಲು ತಾಯಿ, ಹಿರಿಯ ಸಹೋದರಿಯರ ಸಾಥ್

    ನಿಯಮ ಉಲ್ಲಂಘನೆ ಕಾರಣ:
    ಕೋಚಿಂಗ್‌ ಸೆಂಟರ್‌ನಿಂದ ನೆಲಮಾಳಿಗೆಯಲ್ಲಿ ಪಾರ್ಕಿಂಗ್‌ ಮತ್ತು ಸ್ಟೋರ್‌ ರೂಮ್‌ಗಳಿಗಾಗಿ ಅನುಮತಿ ಪಡೆಯಲಾಗಿತ್ತು. 2 ನೆಲಮಾಳಿಗೆಗಳನ್ನ ಪಾರ್ಕಿಂಗ್ ಮತ್ತು ಸ್ಟೋರ್‌ ರೂಮ್‌ಗಾಗಿ ಇದೇ ತಿಂಗಳ ಜುಲೈ 9ರಂದು ಎನ್‌ಒಸಿ ಪಡೆದುಕೊಂಡಿತ್ತು. ಆದರೆ ನಿಯಮಕ್ಕೆ ವಿರುದ್ಧವಾಗಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್

    ಈ ಗ್ರಂಥಾಲದಲ್ಲಿ 7 ವಿದ್ಯಾರ್ಥಿಗಳು ಓದುತ್ತಿದ್ದಾಗ ಏಕಾಏಕಿ ನೀರು ನುಗ್ಗಿದ ಪರಿಣಾಮ, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೇಂದ್ರ ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಈ ಕುರಿತ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಘಟನೆಯಲ್ಲಿ ಮೃತಪಟ್ಟವರಿಗೆ ಆಪ್‌ ಸಚಿವೆ ಅತಿಶಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

  • ದೆಹಲಿಯಲ್ಲಿ ಕೋಚಿಂಗ್ ಸೆಂಟರ್‌ಗೆ ನುಗ್ಗಿದ ನೀರು – ಮೂವರು ವಿದ್ಯಾರ್ಥಿಗಳು ದುರ್ಮರಣ

    ದೆಹಲಿಯಲ್ಲಿ ಕೋಚಿಂಗ್ ಸೆಂಟರ್‌ಗೆ ನುಗ್ಗಿದ ನೀರು – ಮೂವರು ವಿದ್ಯಾರ್ಥಿಗಳು ದುರ್ಮರಣ

    ನವದೆಹಲಿ: ಇಲ್ಲಿನ (Delhi) ಕೋಚಿಂಗ್ ಸೆಂಟರ್ (Coaching Centre) ಒಂದರ ನೆಲಮಾಳಿಗೆಗೆ ಪ್ರವಾಹದ ನೀರು ಹಠಾತ್ ಆಗಿ ನುಗ್ಗಿದ ಪರಿಣಾಮ 3 ವಿದ್ಯಾರ್ಥಿಗಳು (Students) ಸಾವನ್ನಪ್ಪಿದ್ದಾರೆ.

    ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ನೆಲಮಾಳಿಗೆಯಲ್ಲಿ ಸಿಲುಕಿರುವ ಬಗ್ಗೆ ತಮಗೆ ಕರೆ ಬಂದಿತ್ತು. ರಕ್ಷಣಾ ಕಾರ್ಯಾಚರಣೆಗೆ ಐದು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿತ್ತು. ಆದರೆ ಮೂವರು ವಿದ್ಯಾರ್ಥಿಗಳು ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

    ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಸುಮಾರು 7 ಅಡಿಯಷ್ಟು ನೀರಿದ್ದು, ನೀರನ್ನು ಪಂಪ್‌ಸೆಟ್ ಮೂಲಕ ಹೊರಗೆ ಹಾಕಲಾಗುತ್ತಿದೆ. ಇದರ ನಡುವೆ ವಿದ್ಯಾರ್ಥಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಕ್ಕೆ ಅಡ್ಡಿಪಡಿಸದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ನೆಲಮಾಳಿಗೆಯಿಂದ 30 ವಿದ್ಯಾರ್ಥಿಗಳು ಪಾರಾಗಿದ್ದಾರೆ. ಮೂವರು ಮಾತ್ರ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇನ್ನೂ ಯಾರಾದರೂ ಸಿಲುಕಿದ್ದಾರೆಯೇ ಎಂದು ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಘಟನೆ ಸಂಬಂಧ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಬನ್ಸುರಿ ಸ್ವರಾಜ್ ಅವರು, ದುರಂತವನ್ನು ತಪ್ಪಿಸಬಹುದಿತ್ತು ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಎಎಪಿ ಶಾಸಕ ದುರ್ಗೇಶ್ ಪಾಠಕ್ ಅವರನ್ನು ಪದೇ ಪದೇ ಈ ಪ್ರದೇಶದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ಹೂಳು ತೆಗೆಯುವಂತೆ ಮನವಿ ಮಾಡಿದ್ದರು. ಹೂಳು ತೆಗೆದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.