ನವದೆಹಲಿ: ವ್ಯಕ್ತಿಯೊಬ್ಬ ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ಪರಿಹಾರ ಅಧಿವೇಶನದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ, ದೆಹಲಿ ಸಿಎಂ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಇದು ನನ್ನ ಮೇಲೆ ಮಾತ್ರವಲ್ಲ, ದೆಹಲಿ ಮತ್ತು ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಮಾಡಿದ ಹೇಡಿತನದ ಪ್ರಯತ್ನ ಎಂದು ಆರೋಪಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಶೀಘ್ರದಲ್ಲೇ ಕೆಲಸಕ್ಕೆ ಮರಳುತ್ತೇನೆ ಎಂದು ತಿಳಿಸಿದ್ದಾರೆ.
ಗುಜರಾತ್‌ನ ರಾಜ್‌ಕೋಟ್‌ನ ಸಕಾರಿಯಾ ರಾಜೇಶ್‌ಭಾಯ್ ಖಿಮ್ಜಿಭಾಯ್ ಎಂಬಾತ ಸಿಎಂಗೆ ಕಪಾಳಮೋಕ್ಷ ಮಾಡಿದ್ದ. ಅರ್ಜಿದಾರರ ಸೋಗಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗುವಾಗ, ಅವರ ಮೇಲೆ ಹಲ್ಲೆ ನಡೆಸಿದ್ದ.
ಸಿಎಂಗೆ ಕಪಾಳಮೋಕ್ಷ ಮಾಡಿ ತಳ್ಳಿದ್ದಾನೆ. ನಂತರ ಅವರ ಭದ್ರತಾ ಸಿಬ್ಬಂದಿ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವ್ಯಕ್ತಿ ಹಲ್ಲೆ ಯಾಕೆ ನಡೆಸಿದ ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಆರೋಪಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.
ಐತಿಹಾಸಿಕ ರಾಮಲೀಲಾ ಮೈದಾನದಲ್ಲಿಂದು ನಡೆದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi), ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಇತರ ಕೇಂದ್ರ ಸಚಿವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಿ.ಕೆ ಸಕ್ಸೆನಾ (VK Saxena) ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ಸಚಿವರಾಗಿ ಪರ್ವೇಶ್ ಸಾಹಿಬ್ ಸಿಂಗ್, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದರ್ ಇಂದ್ರಜ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಮತ್ತೆ ಅಚ್ಚರಿ ನೀಡಿದ ಮೋದಿ, ಶಾ ಜೋಡಿ – ರೇಖಾ ಗುಪ್ತಾ ಆಯ್ಕೆ ಹಿಂದಿದೆ ಭಾರೀ ಲೆಕ್ಕಾಚಾರ
#WATCH | Along with Delhi’s new cabinet, led by CM Rekha Gupta, Prime Minister Narendra Modi greets the crowd at Ramlila Maidan. pic.twitter.com/jiy2AbWjUd
ಸಮಾರಂಭದಲ್ಲಿ ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು, ಚಂದ್ರಬಾಬು ನಾಯ್ಡು ಸೇರಿದಂತೆ ಎನ್‌ಡಿಎ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಯಿತು. ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯೋಕೂ ಯೋಗ್ಯ: ಯೋಗಿ ಆದಿತ್ಯನಾಥ್
ರಾಜಧಾನಿಯ 4ನೇ ಮಹಿಳಾ ಸಿಎಂ:
ಈ ಹಿಂದೆ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ರೇಖಾ ಗುಪ್ತ, ಇದೀಗ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಧಾನಿಯ 4ನೇ ಮಹಿಳಾ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನಿಂದ ಶೀಲಾ ದೀಕ್ಷಿತ್ ಹಾಗೂ ಎಎಪಿಯಿಂದ ಅತಿಶಿ ದೆಹಲಿಯ ಮುಖ್ಯಮಂತ್ರಿಗಳಾಗಿದ್ದರು. ಇದೀಗ ರೇಖಾ ಗುಪ್ತಾ ಈ ಸ್ಥಾನ ಅಲಂಕರಿಸಿದ್ದು, ರಾಜಧಾನಿಯಲ್ಲಿ ಮಹಿಳೆಯರ ದರ್ಬಾರ್ ಮುಂದುವರಿಯಲಿದೆ. ಇದನ್ನೂ ಓದಿ: ಏಪ್ರಿಲ್ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್ – ಆರಂಭಿಕ ಬೆಲೆ ಎಷ್ಟು?
11 ದಿನಗಳ ಬಳಿಕ ಸಿಎಂ ಅಭ್ಯರ್ಥಿ ಘೋಷಣೆ:
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬರೋಬ್ಬರಿ 11 ದಿನಗಳ ಬಳಿಕ ನೂತನ ಮುಖ್ಯಮಂತ್ರಿ ಹೆಸರನ್ನು ಬಿಜೆಪಿ ಪ್ರಕಟಿಸಿತು. ಪ್ರಥಮ ಬಾರಿ ಶಾಸಕಿ ರೇಖಾ ಗುಪ್ತ ಅವರೇ ರಾಷ್ಟ್ರ ರಾಜಧಾನಿಯ ನೂತನ ಸಿಎಂ ಎಂದು ಪಕ್ಷ ಘೋಷಣೆ ಮಾಡಿತು. ಅಲ್ಲದೇ ಮಾಜಿ ಸಿಎಂ ಪುತ್ರ ಪರ್ವೇಶ್ ವರ್ಮಾ ಅವರನ್ನ ಡಿಸಿಎಂ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಿತು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅಧಿಕಾರ ಸ್ವೀಕಾರ
ನವದೆಹಲಿ: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತ (Rekha Gupta) ಅವರನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರೇಖಾ ಗುಪ್ತ ಬನಿಯಾ ಸಮುದಾಯಕ್ಕೆ ಸೇರಿದವರು. ಅರವಿಂದ್ ಕೇಜ್ರಿವಾಲ್ ಕೂಡ ಸೇರಿದವರು. ದೆಹಲಿಯಲ್ಲಿ ಎಬಿವಿಪಿ ಕೂಡ ರಾಜಕೀಯ ಆರಂಭಿಸಿದೆ.
ಇದೇ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಅವರು ಹರಿಯಾಣ ಮೂಲದವರು. ಆರ್‌ಎಸ್‌ಎಸ್ ಹಿನ್ನೆಲೆ ಕೂಡ ಇದೆ. ದೆಹಲಿಯಲ್ಲಿ ಬಿಜೆಪಿಯ ಎರಡನೇ ಮುಖ್ಯಮಂತ್ರಿ ಆಗಲಿದ್ದಾರೆ. ಇದಕ್ಕೂ ಮೊದಲು ಸುಷ್ಮಾ ಸ್ವರಾಜ್ ಬಿಜೆಪಿಯಿಂದ ಮಹಿಳಾ ಸಿಎಂ ಆಗಿದ್ದರು.
ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿ ಸಾಲಿಗೆ ಸೇರಿದ್ದಾರೆ. ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್, ಅತಿಶಿ ದೆಹಲಿ ಮಹಿಳಾ ಸಿಎಂ ಆಗಿದ್ದರು.
1996–1997 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 2007 ರಲ್ಲಿ ಉತ್ತರಿ ಪಿತಂಪುರನಿಂದ ದೆಹಲಿ ಕೌನ್ಸಿಲರ್ ಚುನಾವಣೆಗೆ ಆಯ್ಕೆಯಾದರು. 2012 ರಲ್ಲಿ ಉತ್ತರ ಪಿತಂಪುರದಿಂದ ಮರು ಆಯ್ಕೆಯಾಗಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಎಎಪಿಯ ಬಂದಾನ ಕುಮಾರಿ ಅವರನ್ನು ಸೋಲಿಸುವ ಮೂಲಕ 29,595 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ (Assembly Election) ಗೆಲುವು ಸಾಧಿಸಿದ ಬಿಜೆಪಿಯಲ್ಲಿ (BJP) ಮುಖ್ಯಮಂತ್ರಿ ಆಯ್ಕೆ ಕಸರತ್ತು ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಪ್ರವಾಸದಿಂದ ವಾಪಸ್ ಆದ ಬೆನ್ನಲ್ಲೇ ಸಿಎಂ ಸೇರಿದಂತೆ ಇತರೆ ಸಚಿವ ಸಂಪುಟ ರಚನೆ ಬಗ್ಗೆ ಸಭೆ ನಡೆದಿದೆ.
ಪಕ್ಷದ ಶಾಸಕಾಂಗ ಸಭೆಯ ನಂತರ ಫೆಬ್ರವರಿ 19ರಂದು ದೆಹಲಿಯ ಮುಖ್ಯಮಂತ್ರಿಯನ್ನು ಬಿಜೆಪಿ ಘೋಷಿಸುವ ಸಾಧ್ಯತೆಯಿದೆ. ಫೆಬ್ರವರಿ 20ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಸುತ್ತಿಗೆಯಿಂದ ತಲೆ ಒಡೆದು ಅತ್ತೆಯನ್ನು ಹತ್ಯೆಗೈದ ಅಳಿಯ!
ವಿಧಾನಸಭಾ ಚುನಾವಣೆಯಲ್ಲಿ ಗೆದ್ದ 48 ಬಿಜೆಪಿ ಶಾಸಕರ ಪೈಕಿ 15 ಹೆಸರುಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಅದರಲ್ಲಿ ಒಂಬತ್ತು ಜನರನ್ನು ಮುಖ್ಯಮಂತ್ರಿ, ರಾಜ್ಯ ಕ್ಯಾಬಿನೆಟ್ ಸಚಿವರು ಮತ್ತು ಸ್ಪೀಕರ್‌ನಂತಹ ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ಸದ್ಯ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಹಲವು ನಾಯಕರು ಮುಂಚೂಣಿಯಲ್ಲಿದ್ದಾರೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ಕೇಂದ್ರ ನಾಯಕರೊಂದಿಗಿನ ನಿಕಟ ಸಂಬಂಧಗಳಿಗೆ ಹೆಸರುವಾಸಿಯಾದ ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಪ್ರಮುಖ ಮಹಿಳಾ ಮುಖ ರೇಖಾ ಗುಪ್ತಾ, ಹಿರಿಯ ಬಿಜೆಪಿ ನಾಯಕ ಮತ್ತು ದೆಹಲಿ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಪ್ರಮುಖ ಬ್ರಾಹ್ಮಣ ನಾಯಕ ಮತ್ತು ಮಾಜಿ ರಾಜ್ಯಾಧ್ಯಕ್ಷ ಸತೀಶ್ ಉಪಾಧ್ಯಾಯ, ವೈಶ್ಯ ಸಮುದಾಯದ ಪ್ರಬಲ ಮತ್ತು ಆರ್‌ಎಸ್‌ಎಸ್ ಪ್ರತಿನಿಧಿ ಜಿತೇಂದ್ರ ಮಹಾಜನ್ ಹೆಸರು ಚಾಲ್ತಿಯಲ್ಲಿದೆ.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ಪರ್ವೇಶ್ ವರ್ಮಾ, ನಾನು ಆಧ್ಯಾತ್ಮಿಕ ವ್ಯಕ್ತಿ. ಹಾಗಾಗಿ ನಾನು ಹೆಚ್ಚು ಸಂತೋಷಪಡುವುದಿಲ್ಲ ಮತ್ತು ಹೆಚ್ಚು ದುಃಖಿಸುವುದಿಲ್ಲ. ಪಕ್ಷದ ಹೈಕಮಾಂಡ್ ಏನು ನಿರ್ಧರಿಸಿದರೂ, ನಾನು ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಚೀನಾ ನಮ್ಮ ಶತ್ರು ದೇಶವಲ್ಲ: ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ
ನವದೆಹಲಿ: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ದೆಹಲಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ (BJP) ಸೋಮವಾರ (ಫೆ.17) ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಉನ್ನತಮಟ್ಟದ ಸಭೆ ಆಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರ ನೇತೃತ್ವದಲ್ಲಿ ದೆಹಲಿ ಪ್ರಧಾನ ಕಚೇರಿಯಲ್ಲಿ ನಿರ್ಣಾಯಕ ಸಭೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಕ್ಷದ ಎಲ್ಲಾ ಶಾಸಕರು ಹಾಗೂ ದೆಹಲಿಯ ಎಲ್ಲಾ 7 ಸಂಸದರೂ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಭೆಯಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದು, ಮಂಗಳವಾರ (ಫೆ.18) ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲಾ ಎನ್‌ಡಿಎ ಮೈತ್ರಿಕೂಟದ ನಾಯಕರು ಭಾಗವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದೆಹಲಿಯ ನೂತನ ಸಿಎಂ ಯಾರು?
ಸದ್ಯ ದೆಹಲಿ ಸಿಎಂ ಪಟ್ಟಕ್ಕೆ ಹಲವರ ಹೆಸರು ರೇಸ್‌ನಲ್ಲಿವೆ. ನವದೆಹಲಿ ಕ್ಷೇತ್ರದಲ್ಲಿ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಮತ್ತು ಕಲ್ಕಾಜಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಅತಿಶಿ ಅವರನ್ನು ಸೋಲಿಸಿದ ರಮೇಶ್ ಬಿಧೂರಿ ಸೇರಿದಂತೆ ಐವರ ಹೆಸರು ರೇಸ್‌ನಲ್ಲಿದೆ. ಇದರೊಂದಿಗೆ ಬಿಜೆಪಿ ಸಂಸದ ಮನೋಜ್ ತಿವಾರಿ, ಕಪಿಲ್ ಮಿಶ್ರಾ, ಆಶಿಶ್ ಸೂದ್, ರೇಖಾ ಗುಪ್ತಾ, ಮತ್ತು ವಿಜೇಂದರ್ ಗುಪ್ತಾ ಅವರ ಹೆಸರುಗಳೂ ಕೇಳಿಬಂದಿವೆ.
ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೇನಾ (Atishi) ಅವರಿಗೆ ಜಾರಿ ಮಾಡಲಾದ ಸಮನ್ಸ್ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಪುರಸ್ಕರಿಸಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದಾಗ ಅತಿಶಿ, ‘ಬಿಜೆಪಿಗೆ ಸಂಬಂಧಿಸಿದ ನಾಯಕರು ನನ್ನ ಮತ್ತು ಇತರ ಎಎಪಿ ನಾಯಕರನ್ನು ಸಂಪರ್ಕಿಸಿ, ಪಕ್ಷಕ್ಕೆ ಸೇರಬೇಕೆಂದು ಒತ್ತಾಯಿಸಿದ್ದರು. ಇಲ್ಲದಿದ್ದರೆ ಒಂದು ತಿಂಗಳೊಳಗೆ ಜಾರಿ ನಿರ್ದೇಶನಾಲಯದಿಂದ ಬಂಧನ ಎದುರಿಸಬೇಕಾಗುತ್ತದೆ ಎಂದಿದ್ದರೆಂದು ಆರೋಪಿಸಿದ್ದರು.
ದೆಹಲಿ ಮುಖ್ಯಮಂತ್ರಿ ಕಚೇರಿಯಿಂದ ಅತಿಶಿ ಅವರ ವಸ್ತುಗಳನ್ನು ಬಿಜೆಪಿ ಆಜ್ಞೆಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರು ಬಲವಂತವಾಗಿ ತೆಗೆಸಿದ್ದಾರೆ ಎಂದು ಎಎಪಿ ಆರೋಪಿಸಿದೆ. ಆದರೆ ಸಕ್ಸೇನಾ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ನಿವಾಸವನ್ನು ತೆರವು ಮಾಡಲಾಗಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್, ಮುಖ್ಯಮಂತ್ರಿ ಅತಿಶಿ ಅವರ ವಸ್ತುಗಳನ್ನು ಮುಖ್ಯಮಂತ್ರಿ ನಿವಾಸದಿಂದ ಬಲವಂತವಾಗಿ ತೆಗೆದುಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಆರೋಪಿಸಿದ್ದಾರೆ. ಇದನ್ನೂ ಓದಿ: ವೈಜಾಗ್ ಸ್ಟೀಲ್ ಪುನಶ್ಚೇತನ ವಿಚಾರ – ನಿರ್ಮಲಾ ಸೀತಾರಾಮನ್, ನಾಯ್ಡು ಜೊತೆಗೆ ಹೆಚ್‌ಡಿಕೆ ಚರ್ಚೆ
ಮುಖ್ಯಮಂತ್ರಿ ಅತಿಶಿ ಅವರಿಗೆ ಈ ಮನೆಯನ್ನು (ಸಿವಿಲ್ ಲೈನ್ಸ್‌ನ 6, ಫ್ಲ್ಯಾಗ್ ಸ್ಟಾಪ್ ರಸ್ತೆಯಲ್ಲಿರುವ ಸಿಎಂ ನಿವಾಸ) ಇನ್ನೂ ಮಂಜೂರು ಮಾಡಿಲ್ಲ. ಅವರಿಗೆ ಮಂಜೂರು ಮಾಡಿದ ನಿವಾಸವು ಇನ್ನೂ 17 ಎಬಿ ಮಥುರಾ ರಸ್ತೆಯಾಗಿದೆ. ಎರಡು ಮನೆಗಳನ್ನು ಹೇಗೆ ಮಂಜೂರು ಮಾಡಲು ಸಾಧ್ಯ ಎಂದು ಗವರ್ನರ್ ಕಚೇರಿ ಮೂಲಗಳು ತಿಳಿಸಿವೆ.
ನವದೆಹಲಿ: ದೆಹಲಿಯ ನೂತನ ಸಿಎಂ ಆಗಿ ಆಮ್ ಆದ್ಮಿ ಪಕ್ಷದ (AAP) ಅತಿಶಿ ಸಿಂಗ್ ಮರ್ಲೆನಾ (Atishi Singh Marlena) ಪ್ರಮಾಣವಚನ ಸ್ವೀಕರಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ನಿವಾಸವಾದ ರಾಜಭವನದಲ್ಲಿ ಅತಿಶಿ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅತಿಶಿಯವರೊಂದಿಗೆ ಆಮ್ ಆದ್ಮಿ ಪಕ್ಷದ ಐವರು ಶಾಸಕರು ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೊದಲು ಸೆ.26-27ರ ಅಧಿವೇಶನದ ವೇಳೆ ಪ್ರಮಾಣವಚನ ಸ್ವೀಕರಿಸಲು ಚಿಂತಿಸಲಾಗಿತ್ತು. ಇದನ್ನೂ ಓದಿ: Jammu Kashmir Election| ಈದ್, ಮೊಹರಂ ಹಬ್ಬಕ್ಕೆ 2 ಸಿಲಿಂಡರ್ ಫ್ರೀ : ಶಾ ಘೋಷಣೆ
ಎಎಪಿ ಆರಂಭದಲ್ಲಿ ಅತಿಶಿ ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ಯೋಜಿಸಿತ್ತು. ಇಂದು ಅತಿಶಿ ಮಂತ್ರಿಮಂಡಲದೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿಂದಿನ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿದ್ದ ಎಎಪಿ ನಾಯಕರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರು ಸಚಿವರಾಗಿ ಮುಂದುವರೆಯಲಿದ್ದು, ಪಕ್ಷದ ಇಬ್ಬರು ಶಾಸಕರನ್ನು ಸಹ ಹೊಸ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲಾಗಿದೆ. ಶಾಸಕ ಮುಖೇಶ್ ಅಹ್ಲಾವತ್ ಅವರು ಹೊಸದಾಗಿ ಅತಿಶಿ ಅವರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಮುನಿರತ್ನ ಕೇಸ್‌ನ ಎಸ್‌ಐಟಿ ರಚನೆ ಬಗ್ಗೆ ನನಗೆ ಮಾಹಿತಿ ಇಲ್ಲ: ಡಿಕೆಶಿ
ಧಾರವಾಡ: ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ದೆಹಲಿ ಸಿಎಂ (Delhi CM) ಅರವಿಂದ್ ಕೇಜ್ರಿವಾಲ್ (Arvind Kejriwal) ಆಗಮಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ರಾಜ್ಯ ಕಾರ್ಯದರ್ಶಿ ಎಂ ಅರವಿಂದ್ (M Aravind) ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಫೆಬ್ರವರಿ 26 ರಂದು ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಬ್ಲಾಕ್ ಪದಾಧಿಕಾರಿಗಳ ಶಪಥ ಕಾರ್ಯಕ್ರಮ ಇದೆ. ಅದಕ್ಕೆ ಕೇಜ್ರಿವಾಲ್ ಬರುತ್ತಿದ್ದಾರೆ ಎಂದು ತಿಳಿಸಿದರು.
ಫೆಬ್ರವರಿ ಬಳಿಕ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ಕೂಡಾ ಅವರು ಬರಲಿದ್ದಾರೆ. ಫೆಬ್ರವರಿ 26ರ ನಂತರ ಕೇಜ್ರಿವಾಲ್ ಅವರ ಟೂರ್ ಪ್ರೋಗ್ರಾಮ್ ಮಾಡುತ್ತಿದ್ದೇವೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕೇಜ್ರಿವಾಲ್ ಅವರ ಕಾರ್ಯಕ್ರಮಗಳು ಇರಲಿದೆ. ಚುನಾವಣೆಗೆ ಮೊದಲೇ ಈ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುವುದಕ್ಕಿಂತ ಸಾಯುತ್ತೇನೆ: ನಿತೀಶ್ ಕುಮಾರ್
ನಾನು ಕೂಡಾ 2 ದಿನಗಳಲ್ಲಿ ದೆಹಲಿಗೆ ಹೋಗುತ್ತಿದ್ದೇನೆ. ಸದ್ಯ ಕೇಜ್ರಿವಾಲ್ ಅವರ ತಾತ್ಕಾಲಿಕ ಭೇಟಿಯ ಪಟ್ಟಿ ಮಾಡಿದ್ದೇವೆ. ಅವರು ಯಾವ ದಿನಾಂಕಕ್ಕೆ ಸಿಗುತ್ತಾರೆ ಎಂಬುದನ್ನು ನೋಡಿಕೊಂಡು ಫೈನಲ್ ಪಟ್ಟಿ ಮಾಡುತ್ತೇವೆ ಎಂದು ಆಪ್ ರಾಜ್ಯ ಕಾರ್ಯದರ್ಶಿ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಬಾವ ಎಎಪಿಗೆ ಸೇರ್ಪಡೆ
Live Tv
[brid partner=56869869 player=32851 video=960834 autoplay=true]
ಗಾಂಧಿನಗರ: ಮುಂದಿನ ಚುನಾವಣೆಯಲ್ಲಿ (Eelection) ಗುಜರಾತ್‌ನಲ್ಲಿ ಎಎಪಿ (AAP) ಅಧಿಕಾರಕ್ಕೆ ಬಂದರೆ ಪ್ರಾದೇಶಿಕ ಸಾರಿಗೆ ಕಚೇರಿಯ (RTO) ಸೇವೆಗಳನ್ನು ಆಟೋ ರಿಕ್ಷಾ ಚಾಲಕರ (Auto Drivers) ಮನೆಬಾಗಿಲಿಗೇ ತಲುಪಿಸುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಭರವಸೆ ನೀಡಿದ್ದಾರೆ.
ವರ್ಷಾಂತ್ಯದ ವೇಳೆಗೆ ನಡೆಯಲಿರುವ ಗುಜರಾತ್ ಚುನಾವಣೆಯಲ್ಲಿ (Gujarat Election) ಆಮ್‌ಆದ್ಮಿ ಪಕ್ಷ ಭರ್ಜರಿ ಜಯ ಸಾಧಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ಅದಕ್ಕಾಗಿ ಭರ್ಜರಿ ಪ್ರಚಾರ ಕಾಯಕ್ರಮಗಳನ್ನೂ ನಡೆಸುತ್ತಿದೆ.
ಈ ಸಂಬಂಧ ಅಹಮದಾಬಾದ್‌ನಲ್ಲಿಂದು ನಡೆದ ಚುನಾವಣಾ ಪ್ರಚಾರ (Election Meeting) ಸಭೆಯನ್ನುದ್ದೇಶಿ ಮಾತನಾಡಿದ ಕೇಜ್ರಿವಾಲ್, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಆಟೋ ಚಾಲಕರ ಮೇಲೆ ಆಗುತ್ತಿರುವ ಕಿರುಕುಳ ತಪ್ಪಿಸಲು ಪ್ರಾದೇಶಿಕ ಸಾರಿಗೆ ಕಚೇರಿಯ (RTO) ಸೇವೆಗಳನ್ನು ಆಟೋ ರಿಕ್ಷಾ ಚಾಲಕರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ ಅಬ್ಬರ ಶುರು – ಮೊದಲ ದಾಳಿಯಲ್ಲೇ BBMP ಜಂಟಿ ಆಯುಕ್ತ ಅರೆಸ್ಟ್
ಪರವಾನಗಿ ನವೀಕರಣ, ಮಾಲೀಕತ್ವ ಬದಲಾವಣೆ, ಅನುಮತಿಯಂತ ಕೆಲಸಗಳಿಗಾಗಿ ದೆಹಲಿಯಲ್ಲಿ (New Delhi) ಆಟೋ ಚಾಲಕರು ಆರ್‌ಟಿಒ ಕಚೇರಿಗೆ ಹೋಗಬೇಕಿಲ್ಲ. ನಾವು ಒಂದು ದೂರವಾಣಿ ಸಂಖ್ಯೆ ನೀಡಿದ್ದೇವೆ. ಆ ಸಂಖ್ಯೆಗೆ ಕರೆ ಮಾಡಿದರೆ ಅಧಿಕಾರಿಗಳೇ ಚಾಲಕರ ಮನೆ ಬಾಗಿಲಿಗೆ ಬಂದು ಕೆಲಸ ಮಾಡಿಕೊಡುತ್ತಾರೆ. ಇದರಿಂದ ಪೊಲೀಸರು, ಅಧಿಕಾರಿಗಳಿಗೆ ಲಂಚ ನೀಡುವುದು ತಪ್ಪುತ್ತದೆ. ಇವೆಲ್ಲವೂ ಗುಜರಾತ್‌ನಲ್ಲೂ ಆಗಬೇಕು ಎಂದರೆ ಎಎಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಅವರು ಹೇಳಿದ್ದಾರೆ.
ದೆಹಲಿಯ ಸುಮಾರು 1.5 ಲಕ್ಷ ಆಟೊ ಚಾಲಕರಿಗೆ ಕೋವಿಡ್ ಲಾಕ್‌ಡೌನ್ ವೇಳೆ ದೆಹಲಿ ಸರ್ಕಾರ ಎರಡು ಬಾರಿ 5 ಸಾವಿರ ರೂ. ಸಹಾಯಧನ ನೀಡಿತ್ತು. ಗುಜರಾತ್‌ನಲ್ಲೂ ಎಎಪಿ ಅಧಿಕಾರಕ್ಕೆ ಬಂದರೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಮತ್ತು 300 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂಬ ಆಶ್ವಾಸನೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]