Tag: Delhi Capitals

  • RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ನವದೆಹಲಿ: ಫಿಲ್ ಸಾಲ್ಟ್ ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (DelhiCapitals) ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (RCB) 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತು. 182 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 16.4 ಓವರ್‌ಗಳಲ್ಲೇ 187ರನ್‌ ಸಿಡಿಸಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಇದನ್ನೂ ಓದಿ: IPLನಲ್ಲಿ 7 ಸಾವಿರ ರನ್‌ ಸಿಡಿಸಿ ದಾಖಲೆ ಬರೆದ ರನ್‌ ಮಿಷಿನ್‌ ಕೊಹ್ಲಿ

    ಗೆಲುವಿಗೆ 182 ರನ್‌ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ಶುರು ಮಾಡಿತು.‌ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ (Phil Salt) ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ದಂಡಿಸಿದರು. ಇದರಿಂದ ಆರ್‌ಸಿಬಿ ನೀಡಿದ ಬೃಹತ್‌ ಮೊತ್ತದ ಗುರಿಯನ್ನು ಡೆಲ್ಲಿ ನಿರಾಯಾಸವಾಗಿ ತಲುಪಿತು. ಡೇವಿಡ್‌ ವಾರ್ನರ್‌ (David Warner) 22 ರನ್‌ (14 ಎಸೆತ, 3 ಬೌಂಡರಿ, 1 ಸಿಕ್ಸರ್)‌, ಮಿಚೆಲ್‌ ಮಾರ್ಷ್‌ (Mitchell Marsh) 26 ರನ್‌ (17 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರು.

    ಆರ್‌ಸಿಬಿ ಬೌಲರ್‌ಗಳನ್ನ ಚೆಂಡಾಡಿದ ಫಿಲ್ ಸಾಲ್ಟ್ 45 ಎಸೆತಗಳಲ್ಲಿ ಸ್ಫೋಟಕ 87 ರನ್‌ (8 ಬೌಂಡರಿ, 6 ಸಿಕ್ಸರ್‌) ಚಚ್ಚಿದರು. ಕೊನೆಯಲ್ಲಿ ರಿಲೀ ರೋಸೌವ್ 22 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌, 1 ಬೌಂಡರಿ), ಅಕ್ಷರ್‌ ಪಟೇಲ್‌ 3 ಎಸೆತಗಳಲ್ಲಿ 8 ರನ್‌ ಗಳಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಜೋಶ್ ಹ್ಯಾಜಲ್ವುಡ್, ಕರ್ಣ್ ಶರ್ಮಾ ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಮಕಾಡೆ ಮಲಗಿದ ಮುಂಬೈ, ಚೆನ್ನೈಗೆ 6 ವಿಕೆಟ್‌ಗಳ ಜಯ – CSK ಪ್ಲೆ ಆಫ್‌ಗೆ ಇನ್ನೆರಡೇ ಹೆಜ್ಜೆ ಬಾಕಿ

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು. 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 182 ರನ್‌ಗಳ ಗುರಿಯನ್ನು ನೀಡಿತು.

    ಆರ್‌ಸಿಬಿ ಪರ ಆರಂಭಿಕರಾಗಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಹಾಗೂ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿದರು. ಡುಪ್ಲೆಸಿಸ್ 32 ಎಸೆತಗಳಲ್ಲಿ 45 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 46 ಎಸೆತಗಳಲ್ಲಿ 55 ರನ್ ಬಾರಿಸಿದರು. ಇನ್ನುಳಿದಂತೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಗೋಲ್ಡನ್ ಡಕ್ಔಟ್ ಆದರೆ, ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ 11 ರನ್ ಗಳಿಸಿ ಮತ್ತೆ ಪರದಾಡಿದರು. ಇದರಿಂದ ಆರ್‌ಸಿಬಿ 150ರನ್‌ಗಳ ಗಡಿ ದಾಟುವುದು ಕಷ್ಟವಾಗಿತ್ತು.

    ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೊಮ್ರೊರ್ (Mahipal Lomror) ಈ ಬಾರಿಯ ಇದೇ ಮೊದಲ ಬಾರಿಗೆ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಆಸರೆಯಾಗುವಂತಹ ಇನ್ನಿಂಗ್ಸ್ ಆಡಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೊಮ್ರೊರ್ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 54 ರನ್ ಗಳಿಸಿದರು. ಅನುಜ್ ರಾವತ್ 3 ಎಸೆತಗಳಲ್ಲಿ ಅಜೇಯ 8 ರನ್ ಗಳಿಸಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಮಾರ್ಷ್ ಎರಡು ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಹಾಗೂ ಮುಕೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.

  • ಪಾಂಡ್ಯ ಹೋರಾಟ ವ್ಯರ್ಥ – ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ರನ್‌ ರೋಚಕ ಜಯ

    ಪಾಂಡ್ಯ ಹೋರಾಟ ವ್ಯರ್ಥ – ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ರನ್‌ ರೋಚಕ ಜಯ

    ಅಹಮದಾಬಾದ್‌: ಕಳಪೆ ಬ್ಯಾಟಿಂಗ್‌ ಮಾಡಿದರೂ, ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದೆ.

    9 ಪಂದ್ಯಗಳ ಪೈಕಿ 6ರಲ್ಲಿ ಜಯ ಸಾಧಿಸಿರುವ ಟೈಟಾನ್ಸ್‌ ಪಡೆ ಈಗಾಗಲೇ ಪ್ಲೇ ಆಫ್‌ ತಲುಪುವ ಹಂತದಲ್ಲಿದೆ. ಆದರೆ 9ರಲ್ಲಿ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಉಳಿದೆಲ್ಲ ಪಂದ್ಯಗಳೂ ನಿರ್ಣಾಯಕವಾಗಿವೆ. ಒಂದು ವೇಳೆ ಇಂದಿನ ಪಂದ್ಯ ಸೋತಿದ್ದರೆ, ಬಹುತೇಕ ಪ್ಲೇ ಆಫ್‌ನಿಂದ ಹೊರಬೀಳುವುದು ಖಚಿತವಾಗುತ್ತಿತ್ತು. ಆದರೆ ಗೆಲುವಿನ ಮೂಲಕ ಪ್ಲೇ ಆಫ್‌ ಕನಸನ್ನ ಜೀವಂತವಾಗಿಸಿಕೊಂಡಿದೆ.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 130 ರನ್‌ ಗಳಿಸಿತು. ಗೆಲುವಿಗೆ 131 ರನ್‌ ಗುರಿ ಪಡೆದ ಗುಜರಾತ್‌ ಟೈಟಾನ್ಸ್‌ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 125 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಕೊನೆಯ ಎರಡು ಓವರ್‌ಗಳಲ್ಲಿ ಗುಜರಾತ್‌ ಟೈಟಾನ್ಸ್‌ ಗೆಲುವಿಗೆ 33 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಮೂರು ಎಸೆತಗಳಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಕೇವಲ 3 ರನ್‌ ಗಳಿಸಿದರು. ಇನ್ನೂ 9 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು. ತಂಡಕ್ಕೆ ಗಲುವು ಕಠಿಣ ವೆನಿಸಿತ್ತು. ಬಳಿಕ ಕ್ರೀಸ್‌ ಉಳಿಸಿಕೊಂಡ ರಾಹುಲ್‌ ತೆವಾಟಿಯಾ ಭರ್ಜರಿ ಹ್ಯಾಟ್ರಿಕ್‌ ಸಿಕ್ಸ್‌ ಚಚ್ಚಿದರು. ಇದರಿಂದ ತಂಡಕ್ಕೆ ಗೆಲುವು ಸುಲಭವೆನಿಸಿತ್ತು. ಆದ್ರೆ 6 ಎಸೆತಗಳಲ್ಲಿ 12 ರನ್‌ ಅಗತ್ಯವಿದ್ದಾಗ ಮೊದಲ ಎರಡು ಎಸೆತಗಳಲ್ಲಿ ಪಾಂಡ್ಯ ಮತ್ತೆ ಕೇವಲ 3ರನ್‌ ಗಳಿಸಿದರು. ಬಳಿಕ ಕ್ರಿಸ್‌ಗೆ ಬಂದ ತೆವಾಟಿಯಾ 4ನೇ ಎಸೆತ ಎದುರಿಸುವಲ್ಲಿ ವಿಫಲರಾಗಿ, ಮರು ಎಸೆತದಲ್ಲೇ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು.

    ನಂತರ ಕ್ರೀಸ್‌ಗೆ ಬಂದ ರಶೀದ್‌ ಕಾನ್‌ 5ನೇ ಎಸೆತದಲ್ಲಿ 2 ರನ್‌ ಕದ್ದರು. ಕೊನೆಯ ಎಸೆತಕ್ಕೆ 7 ರನ್‌ಗಳ ಅಗತ್ಯವಿತ್ತು. ಫುಲ್‌ಟಾಸ್‌ ಬಂದರೂ ರಶೀದ್‌ ಸಿಕ್ಸ್‌ಗೆ ಅಟ್ಟುವಲ್ಲಿ ವಿಫಲರಾದರು. ಈ ಹಿನ್ನೆಲೆಯಲ್ಲಿ ಟೈಟಾನ್ಸ್‌ ಸೋಲನ್ನು ಎದುರಿಸಿತು. ಚೇಸಿಂಗ್‌ ಆರಂಭಿಸಿದ ಬಲಿಷ್ಠ ಟೈಟಾನ್ಸ್‌ ಪಡೆಯ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿದ್ದು, ತಂಡದ ಸೋಲಿಗೆ ಕಾರಣವಾಯಿತು.

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗುಜರಾತ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. ಮೊದಲ 10 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಕೇವಲ 54 ರನ್‌ಗಳನ್ನಷ್ಟೇ ಗಳಿಸಿತ್ತು. ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಹಾಯದಿಂದ 130 ರನ್‌ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಮನ್ ಹಕೀಮ್ ಖಾನ್ 44 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿದರೆ, ಅಕ್ಷರ್‌ ಪಟೇಲ್‌ 30 ಎಸೆತಗಳಲ್ಲಿ 1 ಸಿಕ್ಸರ್‌, 2 ಬೌಂಡರಿಯೊಂದಿಗೆ 27 ರನ್‌ ಗಳಿಸಿದರು. ಇನ್ನೂ ರಿಪಾಲ್‌ ಪಟೇಲ್‌ 13 ಎಸೆತಗಳಲ್ಲಿ 23 ರನ್‌ ಗಳಿಸಿದರು.

    ಗುಜರಾತ್‌ ಟೈಟಾನ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಹಾರ್ದಿಕ್‌ ಪಾಂಡ್ಯ 53 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 59 ರನ್‌ ಗಳಿಸಿದರೆ, ಅಭಿನವ್‌ ಮನೋಹರ್‌ 26 ರನ್‌, ರಾಹುಲ್‌ ತೆವಾಟಿಯಾ 7 ಎಸೆತಗಳಲ್ಲಿ ಸ್ಫೋಟಕ 20 ರನ್‌ ಗಳಿಸಿದರು.

    ಟೈಟಾನ್ಸ್‌ ಪರ ಮೊಹಮ್ಮದ್‌ ಶಮಿ 4 ವಿಕೆಟ್‌ ಪಡೆದರೆ, ಮೋಹಿತ್‌ ಶರ್ಮಾ 2 ವಿಕೆಟ್‌ ಹಾಗೂ ರಶೀದ್‌ ಖಾನ್‌ 1 ವಿಕೆಟ್‌ ಕಿತ್ತರು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಖಲೀಲ್‌ ಅಹ್ಮದ್‌ ಹಾಗೂ ಇಶಾಂತ್‌ ಶರ್ಮಾ ತಲಾ 2 ವಿಕೆಟ್‌ ಪಡೆದರೆ, ಅನ್ರಿಚ್ ನಾರ್ಟ್ಜೆ ಹಾಗೂ ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಗೆಲುವಿಗೆ ಕಾರಣರಾದರು.

  • ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

    ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

    ನವದೆಹಲಿ: ವಾರ್ನರ್ 50 ಎಸೆತಗಳನ್ನು ಆಡಿದ್ದರೆ 50 ರನ್‍ಗಳಿಂದ ಡೆಲ್ಲಿ  (Delhi Capitals) ಸೋಲುತ್ತಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಗುಡುಗಿದ್ದಾರೆ.

    16ನೇ ಆವೃತ್ತಿಯ 8 ಐಪಿಎಲ್ (IPL) ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳೊಂದಿಗೆ ಡೇವಿಡ್ ವಾರ್ನರ್ (David Warner)ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ಹೋಗುವ ಸಾಧ್ಯತೆ ಕ್ಷೀಣಿಸಿದೆ. ತಂಡದ ಕಳಪೆ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ ಹರ್ಭಜನ್ ಇದರ ಸಂಪೂರ್ಣ ಹೊಣೆಯನ್ನು ವಾರ್ನರ್ ಮೇಲೆ ಹಾಕಿದ್ದಾರೆ. ಇದನ್ನೂ ಓದಿ: ಅಭಿಷೇಕ್‌ ಶರ್ಮಾ, ಕ್ಲಾಸೆನ್‌ ಕ್ಲಾಸಿಕ್‌ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್‌ ಜಯ

    ವಾರ್ನರ್ ತಂಡವನ್ನು ಮುನ್ನೆಡೆಸಲು ವಿಫಲರಾಗಿದ್ದಾರೆ. ಇದು ತುಂಬಾ ನಿರಾಶಾದಾಯಕವಾಗಿದೆ. ಈಗಲೂ ವಾರ್ನರ್, ಇತರ ಆಟಗಾರರ ತಪ್ಪುಗಳ ಬಗ್ಗೆ ಹೇಳುತ್ತಾರೆ. ಆದರೆ ನೀವು ಏನು ಮಾಡಿದ್ದೀರಿ? ನೀವು ಯಾವುದೇ ಉತ್ತಮ ಪ್ರದರ್ಶನ ತೋರಿಸಲಿಲ್ಲ. ದೆಹಲಿ ಕುಸಿಯಲು ಕಾರಣವನ್ನು ಹುಡುಕಲು ವಾರ್ನರ್ ಕನ್ನಡಿಯಲ್ಲಿ ನೋಡಬೇಕು ಎಂದು ಹರ್ಭಜನ್ ಗರಂ ಆಗಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್‍ಗೆ (Axar Patel) ತಂಡದ ನಾಯಕತ್ವವನ್ನು ನೀಡಬೇಕೆಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್‍ನ ಉಳಿದ ಲೀಗ್ ಹಂತದಲ್ಲಿ ಕೇವಲ 6 ಪಂದ್ಯಗಳು ಬಾಕಿಯಿದ್ದು, ಪ್ಲೇಆಫ್‍ಗಳ ಬೇಟೆಯಲ್ಲಿ ಉಳಿಯಬೇಕಾದರೆ ಡೆಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ.

    ಈ ಋತುವಿನಲ್ಲಿ ವಾರ್ನರ್ 8 ಪಂದ್ಯಗಳಲ್ಲಿ 38.5 ರ ಸರಾಸರಿಯಲ್ಲಿ 306 ರನ್ ಗಳಿಸಿದ್ದಾರೆ. ಶನಿವಾರದ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ರನ್‍ಗಳಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB

  • ಅಭಿಷೇಕ್‌ ಶರ್ಮಾ, ಕ್ಲಾಸೆನ್‌ ಕ್ಲಾಸಿಕ್‌ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್‌ ಜಯ

    ಅಭಿಷೇಕ್‌ ಶರ್ಮಾ, ಕ್ಲಾಸೆನ್‌ ಕ್ಲಾಸಿಕ್‌ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್‌ ಜಯ

    ನವದೆಹಲಿ: ಆರಂಭದಲ್ಲಿ ಬ್ಯಾಟರ್‌ಗಳ ಅಬ್ಬರದ ಬ್ಯಾಟಿಂಗ್‌ ನಂತರ ಬೌಲರ್‌ಗಳ ಬಿಗಿ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) 9 ರನ್‌ಗಳ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 6 ವಿಕೆಟ್‌ ನಷ್ಟಕ್ಕೆ 197 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಡೆಲ್ಲಿ ನಾಯಕ ಡೇವಿಡ್‌ ವಾರ್ನರ್‌ (David Warner) ಶೂನ್ಯಕ್ಕೆ ಔಟಾದರೂ 2ನೇ ವಿಕೆಟಿಗೆ ಫಿಲ್‌ ಸಾಲ್ಟ್‌ ಮತ್ತು ಮಿಚೆಲ್‌ ಮಾರ್ಷ್‌ 68 ಎಸೆತಗಳಿಗೆ 112 ರನ್‌ ಜೊತೆಯಾಟವಾಟವಾಡಿದರು. ಆದರೆ ಫಿಲ್‌ ಸಾಲ್ಟ್‌ ಔಟಾದ ಬೆನ್ನಲ್ಲೇ ಡೆಲ್ಲಿ ಕುಸಿತ ಆರಂಭವಾಯಿತು. ಮಧ್ಯಮ ಕ್ರಮಾಂಕದ ಅಕ್ಷರ್‌ ಪಟೇಲ್‌ ಹೊರತು ಪಡಿಸಿ ಉಳಿದ ಬ್ಯಾಟರ್‌ಗಳಿಂದ ಯಾವುದೇ ಪ್ರತಿರೋಧ ಬಾರದ ಕಾರಣ ಡೆಲ್ಲಿ ಈ ಪಂದ್ಯದಲ್ಲೂ ಸೋಲನ್ನು ಅನುಭವಿಸಿದೆ.  ಇದನ್ನೂ ಓದಿ: IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್‌ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ

    ಡೆಲ್ಲಿ ಪರ ಫಿಲ್‌ ಸಾಲ್ಟ್‌ 59 ರನ್‌(35 ಎಸೆತ, 9 ಬೌಂಡರಿ) ಮಿಚೆಲ್‌ ಮಾರ್ಷ್‌ 63 ರನ್‌(39 ಎಸೆತ, 1 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ ಔಟಾಗದೇ 29 ರನ್‌ (14 ಎಸೆತ, 1 ಬೌಂಡರಿ, 2 ಸಿಕ್ಸರ್‌) ಬಾರಿಸಿ ಗೆಲುವಿನದ ದಡದತ್ತ ತಂದರು.

    ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್‌ (IPL) ಅಂಕಪಟ್ಟಿಯಲ್ಲಿ ಹೈದರಾಬಾದ್‌ 6 ಅಂಕದೊಂದಿಗೆ 8ನೇ ಸ್ಥಾನಕ್ಕೆ ಜಿಗಿದರೆ ಡೆಲ್ಲಿ 4 ಅಂಕಗಳೊಂದಿಗೆ 10ನೇ ಸ್ಥಾನದಲ್ಲೇ ಮುಂದುವರಿದಿದೆ.

    ಹೈದರಾಬಾದ್‌ ಪರ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ 67 ರನ್‌(36 ಎಸೆತ, 12 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್‌ ಕ್ಲಾಸೆನ್‌ ಔಟಾಗದೇ 53 ರನ್‌(27 ಎಸೆತ, 2 ಬೌಂಡರಿ, 4 ಸಿಕ್ಸರ್‌), ಅಬ್ದುಲ್‌ ಸಮದ್‌ 28 ರನ್‌(21 ಎಸೆತ, 1 ಬೌಂಡರಿ, 1 ಸಿಕ್ಸರ್)‌ ಹೊಡೆದ ಪರಿಣಮಾಮ ತಂಡದ ಮೊತ್ತ 190 ರನ್‌ ಗಡಿ ದಾಟಿತು.

  • ಕೊನೆಯ ಓವರ್‌ನಲ್ಲಿ ಮುಕೇಶ್‌ ಮ್ಯಾಜಿಕ್‌, ಅಕ್ಷರ್‌ ಆಲ್‌ರೌಂಡರ್‌ ಆಟ – ಡೆಲ್ಲಿಗೆ 7 ರನ್‌ಗಳ ರೋಚಕ ಜಯ

    ಕೊನೆಯ ಓವರ್‌ನಲ್ಲಿ ಮುಕೇಶ್‌ ಮ್ಯಾಜಿಕ್‌, ಅಕ್ಷರ್‌ ಆಲ್‌ರೌಂಡರ್‌ ಆಟ – ಡೆಲ್ಲಿಗೆ 7 ರನ್‌ಗಳ ರೋಚಕ ಜಯ

    ಹೈದರಾಬಾದ್‌: ಕೊನೆಗೆ ಬೌಲರ್‌ಗಳು ನೀಡಿದ ಅತ್ಯುತ್ತಮ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಹೈದರಾಬಾದ್‌ ಸನ್‌ ರೈಸರ್ಸ್‌ (Sunrisers Hyderabad) ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 144 ರನ್‌ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ್ದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 137 ರನ್‌ ಹೊಡೆದು ಸೋಲೊಪ್ಪಿಕೊಂಡಿತು. ಐಪಿಎಲ್‌ (IPL) ಅಂಕಪಟ್ಟಿಯಲ್ಲಿ 7 ಪಂದ್ಯ ಆಡಿ 2 ರಲ್ಲಿ ಜಯಗಳಿಸಿರುವ ಡೆಲ್ಲಿ 4 ಅಂಕ ಪಡೆದು 10ನೇ ಸ್ಥಾನದಲ್ಲೇ ಮುಂದುವರೆದರೆ ಹೈದರಾಬಾದ್‌ 2 ಜಯ ಸಾಧಿಸಿ 4 ಅಂಕ ಪಡೆದು 9ನೇ ಸ್ಥಾನದಲ್ಲಿ ಮುಂದುವರೆದಿದೆ.

    ಕೊನೆಯ 30 ಎಸೆತಗಳಲ್ಲಿ ಹೈದರಾಬಾದ್‌ ತಂಡಕ್ಕೆ 51 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 13 ರನ್‌ ಬಂದರೆ 18ನೇ ಓವರ್‌ನಲ್ಲಿ 15 ರನ್‌ ಬಂದಿತ್ತು. 19ನೇ ಓವರ್‌ನಲ್ಲಿ10 ರನ್‌ ಬಂದರೂ ಹೆನ್ರಿಕ್ ಕ್ಲಾಸೆನ್ ಔಟಾದ ಪರಿಣಾಮ ಪಂದ್ಯ ರೋಚಕ ಘಟ್ಟಕ್ಕೆ ತಿರುಗಿತು.

    ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿತ್ತು. ಮುಕೇಶ್‌ ಕುಮಾರ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿ ಕೇವಲ 5 ರನ್‌ ಬಿಟ್ಟುಕೊಡುವ ಮೂಲಕ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಹೈದರಾಬಾದ್‌ ಪರ ಮಯಾಂಕ್‌ ಅಗರ್‌ವಾಲ್‌ 49 ರನ್‌ (39 ಎಸೆತ, 7 ಬೌಂಡರಿ), ಹೆನ್ರಿಕ್ ಕ್ಲಾಸೆನ್ 31 ರನ್‌ (19 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು. ವಾಷಿಂಗ್ಟನ್‌ ಸುಂದರ್‌ ಔಟಾಗದೇ 24 ರನ್‌(15 ಎಸೆತ, 3 ಬೌಂಡರಿ) ಹೊಡೆದರು.

    ಅಕ್ಷರ್‌ ಪಟೇಲ್‌ ಮತ್ತು ಅನ್ರಿಚ್‌ ನೋರ್ಕಿಯ ತಲಾ 2 ವಿಕೆಟ್‌ ಪಡೆದರೆ, ಇಶಾಂತ್‌ ಶರ್ಮಾ, ಕುಲದೀಪ್‌ ಯಾದವ್‌ ತಲಾ ಒಂದು ವಿಕೆಟ್‌ ಪಡೆದರು.  ಇದನ್ನೂ ಓದಿ: Mood Of Karnataka ಚಾಪ್ಟರ್‌ 2 – ಕಾಂಗ್ರೆಸ್ಸಿಗಿಲ್ಲ ಬಹುಮತ, ಮೊದಲಿಗಿಂತ ಬಿಜೆಪಿ ಸ್ವಲ್ಪ ಸುಧಾರಣೆ

    ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ನಾಯಕ ಡೇವಿಡ್‌ ವಾರ್ನರ್‌ 21 ರನ್‌, ಮಿಷೆಲ್‌ ಮಾರ್ಷ್‌ 25 ರನ್‌(15 ಎಸೆತ, 5 ಬೌಂಡರಿ), ಮನೀಷ್‌ ಪಾಂಡ 34 ರನ್‌(27 ಎಸೆತ), ಅಕ್ಷರ್‌ ಪಟೇಲ್‌ 34 ರನ್‌ (34 ಎಸೆತ, 4 ಬೌಂಡರಿ) ಹೊಡೆದು ಔಟಾದರು.

  • ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು – ಬೆಂಗಳೂರಿನಲ್ಲಿ ಇಬ್ಬರ ಬಂಧನ

    ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು – ಬೆಂಗಳೂರಿನಲ್ಲಿ ಇಬ್ಬರ ಬಂಧನ

    ಬೆಂಗಳೂರು: ಹದಿನಾರನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯ ಐದು ಪಂದ್ಯಗಳನ್ನು ಸೋತು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ಕಿಟ್ ಕೂಡ ಕಳೆದುಕೊಂಡು ಆಘಾತಕ್ಕೀಡಾಗಿತ್ತು. ಅದರಲ್ಲೂ ತಂಡದ ಎಲ್ಲಾ ಆಟಗಾರರಿಗೆ ಹೊಸ ಕಿಟ್‍ನೊಂದಿಗೆ ಏ.20ರ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ತನ್ನ ಮೊದಲ ಗೆಲುವನ್ನು ಸಂಭ್ರಮಿಸಿತ್ತು. ಆದರೆ ಇದೀಗ ಡೆಲ್ಲಿ ತಂಡ ಸಂಭ್ರಮ ದುಪ್ಪಟ್ಟಾಗಿದೆ. ಕಳುವಾಗಿದ್ದ ಬ್ಯಾಟ್‍ಗಳು ಮತ್ತು ಕಿಟ್‍ಗಳನ್ನು ಪತ್ತೆ ಮಾಡುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು (Cubbon Park Police) ಯಶಸ್ವಿಯಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

    ಕಿಟ್ ಪತ್ತೆಯಾದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ (David Warner) ಅಧಿಕೃತ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕಳ್ಳರನ್ನು ಪತ್ತೆ ಮಾಡಲಾಗಿದೆ, ಕೆಲ ವಸ್ತುಗಳು ಇನ್ನು ಲಭ್ಯವಾಗಿಲ್ಲ, ಪೊಲೀಸರಿಗೆ ಧನ್ಯವಾದಗಳು ಎಂದು ವಾರ್ನರ್ ತಮ್ಮ ಇನ್‍ಸ್ಟಾ ವಾಲ್ ಮೇಲೆ ಶುಕ್ರವಾರ ಪ್ರಕಟಿಸಿದ್ದರು. ಇದನ್ನೂ ಓದಿ: ಜಡೇಜಾ ಜಾದು, ಕಾನ್ವೆ ಕಿಕ್‌ – ತವರಿನಲ್ಲಿ ತಿಣುಕಾಡಿ ಗೆದ್ದ ಚೆನ್ನೈ; ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳ ಜಯ

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಏ.15 ರಂದು ನಡೆದ ಪಂದ್ಯದಲ್ಲಿ 23 ರನ್‍ಗಳ ಸೋಲುಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಮನೆಯಂಗಣಕ್ಕೆ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಡೆಲ್ಲಿ ತಂಡದ 17 ಕಿಟ್‍ಗಳು ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಪ್ರತಿ ಕಿಟ್ ಕನಿಷ್ಠ 1 ಲಕ್ಷ ರೂ. ಬೆಲೆ ಬಾಳುತ್ತವೆ ಎಂದು ಅಂದಾಜಿಸಲಾಗಿತ್ತು. ಅದರಲ್ಲೂ ವಿದೇಶಿ ಆಟಗಾರರು ಬಳಕೆ ಮಾಡುವ ಬ್ಯಾಟ್‍ಗಳು ಒಂದು ಕನಿಷ್ಠ 1 ಲಕ್ಷ ರೂ. ಮೌಲ್ಯದ್ದು ಎಂದು ಹೇಳಲಾಗಿತ್ತು.

    ಇದೀಗ ಪೊಲೀಸರ ಚುರುಕು ಕಾರ್ಯಾಚರಣೆಯಿಂದಾಗಿ ಕಳುವಾಗಿದ್ದ ಕಿಟ್‍ಗಳು ಪತ್ತೆಯಾಗಿವೆ. ಒಟ್ಟಾರೆ 17 ಬ್ಯಾಟ್‍ಗಳು, ಜೊತೆಗೆ ಗ್ಲೌಸ್, ಹೆಲ್ಮೆಟ್ ಸೇರಿ ಹಲವು ವಸ್ತುಗಳು ಪತ್ತೆ ಮಾಡುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೂ ಕೆಲ ಸಾಮಗ್ರಿಗಳು ಕಾಣಿಸುತ್ತಿಲ್ಲ ಎಂದು ಡೇವಿಡ್ ವಾರ್ನರ್ ಬರೆದುಕೊಂಡಿದ್ದಾರೆ.

    ಹಳೆಯ ಕಿಟ್ ಕಳುವಾಗಿ, ಹೊಸ ಕಿಟ್‍ನೊಂದಿಗೆ ಅಂಗಳಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಓವರ್‍ವರೆಗೂ ಪ್ರಯತ್ನ ನಡೆಸಿ 4 ವಿಕೆಟ್‍ಗಳ ಜಯ ದಕ್ಕಿಸಿಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಎದುರು ಏ.24 ರಂದು ಪೈಪೋಟಿ ನಡೆಸಲಿದೆ.

    ಕಿಟ್‍ಗಳು ಕಳುವಾಗಿರುವ ವಿಚಾರ ಒಂದು ದಿನದ ಬಳಿಕ ಗಮನಕ್ಕೆ ಬಂದಿದೆ. ನಾಯಕ ಡೇವಿಡ್ ವಾರ್ನರ್ ಮತ್ತು ಸ್ಟಾರ್ ಬ್ಯಾಟರ್ ಮಿಚೆಲ್ ಸ್ಟಾರ್ಕ್ ತಲಾ 2 ಬ್ಯಾಟ್ ಕಳೆದುಕೊಂಡರೆ ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಮೂರು ಬ್ಯಾಟ್ ಕಳೆದುಕೊಂಡಿದ್ದರು. ಯುವ ಬ್ಯಾಟ್ಸ್‍ಮನ್ ಯಶ್ ಧುಲ್ 5 ಬ್ಯಾಟ್‍ಗಳನ್ನು ಕಳೆದುಕೊಂಡಿದ್ದರು ಎಂದು ಈ ಮೊದಲು ವರದಿಯಾಗಿತ್ತು. ಆಟಗಾರರ ಸರಕು ಸಾಗಾಟದ ಒಪ್ಪಂದವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿತ್ತು. ಹೀಗಾಗಿ ಆಟಗಾರರು ಕಿಟ್‍ಗಳ ಬಗ್ಗೆ ವೈಯಕ್ತಿಕವಾಗಿ ಗಮನ ಕೊಡುವುದಿಲ್ಲ. ಸರಕು ನಿರ್ವಹಣೆಯ ಸಂಸ್ಥೆಯು ಒಂದು ದಿನ ತಡವಾಗಿ ಕಳ್ಳತನದ ಸಂಗತಿಯನ್ನು ಡೆಲ್ಲಿ ಫ್ರಾಂಚೈಸಿಗೆ ತಿಳಿಸಿತ್ತು.

    ನಂತರ ಎಚ್ಚೆತ್ತುಕೊಂಡ ಡೆಲ್ಲಿ ಫ್ರಾಂಚೈಸಿ ಪೊಲೀಸರಿಗೆ ದೂರು ನೀಡಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕಿಟ್ ಕಳುವಾಗಿರುವ ವಿಚಾರ ಮುಟ್ಟಿಸಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಕಿಟ್ ಕಳುವಾದ ಶಂಕೆಯಿಂದ ಇಲ್ಲಿನ ಪೊಲೀಸರಿಗೆ ತಂಡ ಮಾಹಿತಿ ರವಾನಿಸಿತ್ತು. ಇದರ ಫಲವಾಗಿ ಬಹುತೇಕ ವಸ್ತುಗಳನ್ನು ಮರಳಿ ಪಡೆಯಲು ಸಾಧ್ಯವಾಗಿದೆ.

    ಕೆಕೆಆರ್ (KKR) ವಿರುದ್ಧದ ಪಂದ್ಯದಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಾ 2 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು. 2021ರ ಬಳಿಕ ಐಪಿಎಲ್‍ಗೆ ಮರಳಿದ್ದ ಇಶಾಂತ್ ಮೊದಲ ಪಂದ್ಯದಲ್ಲೇ ತಮ್ಮ ಅನುಭವ ಪ್ರದರ್ಶಿಸಿ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ. ಪಂದ್ಯದಲ್ಲಿ ನಾಯಕ ಡೇವಿಡ್ ವಾರ್ನರ್ ಕೂಡ ಮನಮೋಹಕ ಅರ್ಧಶತಕ ಸಿಡಿಸಿ ಗೆಲುವಿಗೆ ಸಹಕರಿಸಿದ್ದರು. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

  • ಬೆಂಗಳೂರಲ್ಲಿ ಆರ್‌ಸಿಬಿ, ಚೆನ್ನೈ ಮ್ಯಾಚ್ – ಟಿಕೆಟ್‍ಗಾಗಿ ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಚಾರ್ಜ್

    ಬೆಂಗಳೂರಲ್ಲಿ ಆರ್‌ಸಿಬಿ, ಚೆನ್ನೈ ಮ್ಯಾಚ್ – ಟಿಕೆಟ್‍ಗಾಗಿ ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಚಾರ್ಜ್

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಹೊರಗಡೆ ಐಪಿಎಲ್ (IPL) ಟಿಕೆಟ್‍ಗೆ ಮುಗಿಬಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    ಸೋಮವಾರ ನಡೆಯಲಿರುವ ಆರ್‌ಸಿಬಿ (RCB) ಹಾಗೂ ಚೆನ್ನೈ ಹೈವೋಲ್ಟೇಜ್ (CSK) ಐಪಿಎಲ್ ಮ್ಯಾಚ್ ವೀಕ್ಷಿಸಲು ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: IPLಗೆ ಸೆಡ್ಡು ಹೊಡೆಯಲು ಸೌದಿ ಮಾಸ್ಟರ್ ಪ್ಲ್ಯಾನ್ – BCCI ಹೇಳಿದ್ದೇನು?

    ಟಿಕೆಟ್ ಕೆಲವೇ ಕ್ಷಣದಲ್ಲಿ ಖಾಲಿಯಾಗಿದ್ದಕ್ಕೆ ಕ್ರೀಡಾಂಗಣದ ಟಿಕೆಟ್ ಕೌಂಟರ್‍ಗೆ ಸೋಲ್ಡ್ ಔಟ್ ಬೋರ್ಡ್ ಹಾಕಲಾಗಿತ್ತು. ಈ ಬೋರ್ಡ್ ನೋಡಿದ ಅಭಿಮಾನಿಗಳು ಸೋಲ್ಡ್ ಔಟ್ ಬೋರ್ಡ್‍ನ್ನು ಕಿತ್ತು ಹಾಕಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ತೀವ್ರ ಕಸರತ್ತು ನಡೆಸಿದ್ದು ನಿಯಂತ್ರಣಕ್ಕಾಗಿ ಲಾಠಿ ಬೀಸಿದ್ದಾರೆ.

    ಐಪಿಎಲ್‍ನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕೆ ಟಿಕೆಟ್ ಬೇಗನೇ ಮಾರಾಟವಾಗಿದೆ.

    ಶನಿವಾರ ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ( Delhi Capitals) ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ 23 ರನ್‍ಗಳ ಗೆಲುವು ಸಾಧಿಸಿತ್ತು. ಈ ಮೂಲಕ ಡೆಲ್ಲಿಯನ್ನು ಸತತ ಐದನೇ ಸೋಲಿನತ್ತ ನೂಕಿತು. ಈ ಟೂರ್ನಿಯಲ್ಲಿ ವಿರಾಟ್ ಕೋಹ್ಲಿ ಮೂರನೇ ಅರ್ಧ ಶತಕ ಸಿಡಿಸಿದ್ದರು.

    ಬೆಂಗಳೂರು (Bengaluru) ಮತ್ತು ಚೆನ್ನೈ ತಲಾ 4 ಪಂದ್ಯವನ್ನು ಆಡಿದ್ದು ಎರಡೂ ತಂಡಗಳು ಎರಡು ಜಯ ದಾಖಲಿಸಿದೆ. ಚೆನ್ನೈ ತಂಡದ ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ ಬೆಂಗಳೂರು 7ನೇ ಸ್ಥಾನದಲ್ಲಿದೆ. ಇದನ್ನೂ ಓದಿ: IPL 2023: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಆಟ – ಲಕ್ನೋ ತವರಿನಲ್ಲಿ ಗೆದ್ದು ಬೀಗಿದ ಪಂಜಾಬ್‌

  • IPL 2023: ಡೆಲ್ಲಿಗೆ ಸತತ 5ನೇ ಸೋಲು – ತವರಿನಲ್ಲಿ RCBಗೆ 23 ರನ್‌ಗಳ ಭರ್ಜರಿ ಜಯ

    IPL 2023: ಡೆಲ್ಲಿಗೆ ಸತತ 5ನೇ ಸೋಲು – ತವರಿನಲ್ಲಿ RCBಗೆ 23 ರನ್‌ಗಳ ಭರ್ಜರಿ ಜಯ

    ಬೆಂಗಳೂರು: ವಿರಾಟ್‌ ಕೊಹ್ಲಿ (Virat Kohli) ಅರ್ಧ ಶತಕದ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 23 ರನ್‌ ಭರ್ಜರಿ ಜಯ ಸಾಧಿಸಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) 2023ರ ಐಪಿಎಲ್‌ನಲ್ಲಿ ಸತತ 5ನೇ ಸೋಲು ಎದುರಿಸಿ ತೀವ್ರ ಮುಖಭಂಗ ಅನುಭವಿಸಿದೆ.

    ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಉತ್ತಮ ರನ್‌ ಕಲೆಹಾಕಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. 175 ರನ್‌ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 151 ರನ್‌ಗಳಿಸಿ ಸತತ 5ನೇ ಸೋಲು ಕಂಡಿತು.

    ಚೇಸಿಂಗ್‌ ಆರಂಭಿಸುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಆರ್‌ಸಿಬಿ ಬೌಲರ್‌ಗಳ ದಾಳಿಗೆ ತರಗೆಲೆಗಳಂತೆ ಉದುರಿದರು. ಪೃಥ್ವಿ ಶಾ, ಮಿಚೆಲ್‌ ಮಾರ್ಷ್‌ ಶೂನ್ಯಕ್ಕೆ ಔಟಾದರೆ, ಯಶ್‌ ಧುಲ್‌ ಕೇವಲ 1 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ನಾಯಕ ಡೇವಿಡ್‌ ವಾರ್ನರ್‌ (David Warner) ಸಹ 13 ಎಸೆತಗಳಲ್ಲಿ 19 ರನ್‌ ಗಳಿಸಿ ಸಿಂಪಲ್‌ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು. ಇದರಿಂದ ತಂಡ ಸೋಲುವುದು ಬಹುತೇಕ ಖಚಿತವಾಯಿತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮನಿಷ್‌ ಪಾಂಡೆ (Manish Pandey) 38 ಎಸೆತಗಳಲ್ಲಿ 50 ರನ್‌ (5 ಬೌಂಡರಿ, 1 ಸಿಕ್ಸರ್‌) ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.

    ನಂತರ ಕಣಕ್ಕಿಳಿದ ಅಕ್ಷರ್‌ ಪಟೇಲ್‌ (Axar Pate) 21 ರನ್‌, ಅಮನ್‌ ಹಕೀಮ್‌ ಖಾನ್‌ 18 ರನ್‌ ಹಾಗೂ ಅಭಿಷೇಕ್ ಪೊರೆಲ್ ಕೇವಲ 5ರನ್‌ ಗಳಿಸಿದ್ದು ಬಿಟ್ಟರೇ ಉಳಿದ ಯಾರೊಬ್ಬರು ಕ್ರೀಸ್‌ನಲ್ಲಿ ಹೆಚ್ಚುಹೊತ್ತು ಉಳಿಯಲಿಲ್ಲ. ಕೊನೆಯಲ್ಲಿ ಅನ್ರಿಚ್ ನಾರ್ಟ್ಜೆ 23 ರನ್‌ ಹಾಗೂ ಕುಲ್‌ದೀಪ್‌ ಯಾದವ್‌ 7 ರನ್‌ ಗಳಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ವಿಜಯಕುಮಾರ್ ವೈಶಾಕ್ ಭರ್ಜರಿ 4 ಓವರ್‌ಗಳಲ್ಲಿ 20 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಕಿತ್ತರೆ, ವೇಯ್ನ್ ಪಾರ್ನೆಲ್, ವಾನಿಂದು ಹಸರಂಗ (Wanindu Hasaranga) ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ ಮತ್ತು ಫಾಫ್‌ ಡು ಪ್ಲೆಸಿಸ್‌ ಆರಂಭದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದರು. ಮೊದಲ ವಿಕೆಟ್‌ ಪತನಕ್ಕೆ ಈ ಜೋಡಿ 4.4 ಓವರ್‌ಗಳಲ್ಲಿ 42 ರನ್‌ ಕಲೆಹಾಕಿತ್ತು. ಈ ವೇಳೆ 16 ಎಸೆತಗಳಲ್ಲಿ 22 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿದ್ದ ನಾಯಕ ಡುಪ್ಲೆಸಿಸ್ ವಿಕೆಟ್ ಒಪ್ಪಿಸಿದರು.

    ನಂತರ ಬಂದ ಮಹಿಪಾಲ್ ಲೊಮ್ರೊರ್ 18 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಸಮೇತ 26 ರನ್ ಗಳಿಸಿ ಔಟಾದರು. ಈ ಬೆನ್ನಲ್ಲೇ ವಿರಾಟ್‌ 34 ಎಸೆತಗಳಲ್ಲಿ 50 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸಿ, ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು.

    ವಿರಾಟ್ ಕೊಹ್ಲಿ ಬಳಿಕ ಕ್ರೀಸ್‌ಗೆ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರು. 13 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್‌ನೊಂದಿಗೆ 24 ರನ್ ಬಾರಿಸಿದ್ದರು. ತಾವು ಎದುರಿಸಿದ 14ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿ ಔಟಾದರು. ಇದರಿಂದ 200 ರನ್‌ಗಳ ಗಡಿ ತಲುಪುವ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ತಂಡಕ್ಕೆ ನಿರಾಸೆಯಾಯಿತು.

    ನಂತರ ಕಣಕ್ಕಿಳಿದವರಲ್ಲಿ ಹರ್ಷಲ್‌ ಪಟೇಲ್‌ 6ರನ್‌, ಅನುಜ್ ರಾವತ್ 15 ರನ್‌ ಗಳಿಸಿದರೆ, ಶಹಬಾಜ್‌ ಅಹ್ಮದ್‌ 20 ರನ್‌ ಗಳಿಸಿ ಅಜೇಯರಾಗುಳಿದರು. ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ದಿನೇಶ್‌ ಕಾರ್ತಿಕ್‌ ಒಂದೇ ಎಸೆತದಲ್ಲಿ ಡಕೌಟ್‌ ಆದರು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಮಿಚೆಲ್ ಮಾರ್ಷ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರೆ, ಕುಲ್‌ದೀಪ್ ಯಾದವ್ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್, ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

  • IPL 2023: ಅಬ್ಬರಿಸಲು ನಾವ್‌ ರೆಡಿ ಎಂದ ಹಸರಂಗ – ಈ ಸಲ ಕಪ್‌ ನಮ್ದೆ ಅಂದ್ರು ಫ್ಯಾನ್ಸ್‌

    IPL 2023: ಅಬ್ಬರಿಸಲು ನಾವ್‌ ರೆಡಿ ಎಂದ ಹಸರಂಗ – ಈ ಸಲ ಕಪ್‌ ನಮ್ದೆ ಅಂದ್ರು ಫ್ಯಾನ್ಸ್‌

    – ಆರ್‌ಸಿಬಿಗೆ ಎಂಟ್ರಿಕೊಟ್ಟ ಸ್ಪಿನ್‌ ಮಾಂತ್ರಿಕ

    ಮುಂಬೈ: ಶ್ರೀಲಂಕಾ ತಂಡದ ಸ್ಪಿನ್‌ ಮಾಂತ್ರಿಕ ವಾನಿಂದು ಹಸರಂಗ (Wanindu Hasaranga) ಆರ್‌ಸಿಬಿಗೆ (RCB) ತಂಡಕ್ಕೆ ಮರಳಿದ್ದು, 2023ರ ಐಪಿಎಲ್‌ನಲ್ಲಿ (IPL 2023) ಮೊದಲ ಪಂದ್ಯವನ್ನಾಡಲು ಉತ್ಸುಕರಾಗಿದ್ದಾರೆ.

    ಇತ್ತೀಚೆಗೆ ನ್ಯೂಜಿಲೆಂಡ್‌ ಜೊತೆಗಿನ ದ್ವಿಪಕ್ಷಿಯ ಸರಣಿ ಹಿನ್ನೆಲೆಯಲ್ಲಿ ಹಸರಂಗ ಶ್ರೀಲಂಕಾ (SriLanka) ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದರು. ಹಾಗಾಗಿ ಆರ್‌ಸಿಬಿ ತಂಡದಿಂದ ಹೊರಗುಳಿದಿದ್ದರು. ಆದರೀಗ ಆರ್‌ಸಿಬಿ ತಂಡವನ್ನ ಕೂಡಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅಬ್ಬರಿಸಲು ನಾವ್‌ ರೆಡಿ ಎಂಬ ಖಡಕ್‌ ಸಂದೇಶವನ್ನ ಎದುರಾಳಿಗಳಿಗೆ ರವಾನಿಸಿದ್ದಾರೆ. ಇದನ್ನೂ ಓದಿ: ಮ್ಯಾಜಿಕ್‌ ಮಹಿಗೆ 200ರ ಸಂಭ್ರಮ – ಕೊನೆಯ IPLನಲ್ಲಿ ವಿಶೇಷ ಸಾಧನೆ ಮಾಡಿದ ಧೋನಿ!

    ವಾನಿಂದು ಹಸರಂಗ ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ ಅವರು 26 ವಿಕೆಟ್‌ ಉರುಳಿಸಿ, 7.54ರ ಸರಾಸರಿಯಲ್ಲಿ ಬೌಲಿಂಗ್ ನಡೆಸಿದ್ದರು ಈ ಮೂಲಕ 2022ರ ಐಪಿಎಲ್‌ನಲ್ಲಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆಯನ್ನೂ ಹಸರಂಗ ಮಾಡಿದ್ದರು. ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಸೇರಿಕೊಂಡ ಹಸರಂಗ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಇದನ್ನೂ ಓದಿ: IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

    ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ವಾನಿಂದು ಹಸರಂಗ, ಆರ್‌ಸಿಬಿ ತಂಡವನ್ನು ಕೂಡಿಕೊಳ್ಳಲು ಹರ್ಷವಾಗುತ್ತಿದೆ. ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ಉತ್ಸಾಹದಿಂದ ಕಾಯುತ್ತಿದ್ದೆ. ತಂಡದ ಆಟಗಾರರು ಅತ್ಯುತ್ತಮವಾಗಿ ಸಿದ್ಧತೆ ನಡೆಸುತ್ತಿದ್ದು ಹರ್ಷ ಮೂಡಿಸಿದೆ. ಈ ಬಾರಿ ಆರ್‌ಸಿಬಿ ತಂಡದ ಪರವಾಗಿ ಮೊದಲ ಬಾರಿಗೆ ಬೌಲಿಂಗ್ ಮಾಡಲಿದ್ದೇನೆ. ವೈಯಕ್ತಿಕವಾಗಿ ಈ ಸವಾಲನ್ನು ಎದುರಿಸಲು ಸಜ್ಜಾಗಿದ್ದೇನೆ ಎಂದು ಹೇಳಿದ್ದಾರೆ.

    ಏಪ್ರಿಲ್‌ 15ರಂದು ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ಸೆಣಸಲಿದೆ. ಈಗಾಗಲೇ ಸತತ 4 ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಖಾತೆ ತೆರೆಯುವ ತವಕದಲ್ಲಿದ್ದರೆ, ಸತತ ಎರಡು ಸೋಲು ಅನುಭವಿಸಿರುವ ಆರ್‌ಸಿಬಿ ತಂಡ ಹ್ಯಾಟ್ರಿಕ್‌ ಸೋಲಿನಿಂದ ತಪ್ಪಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿದೆ. ಆರ್‌ಸಿಬಿ ಉತ್ತಮ ಕಮ್‌ಬ್ಯಾಕ್‌ ಆಗುವ ನಿರೀಕ್ಷೆಯೊಂದಿಗೆ ಅಭಿಮಾನಿಗಳು ಈ ಸಲ ಕಪ್‌ ನಮ್ದೆ ಎಂದು ಮತ್ತೆ – ಮತ್ತೆ ಹೇಳ್ತಿದ್ದಾರೆ.

  • IPL 2023: ಖಾತೆ ತೆರೆದ ಮುಂಬೈ – ಡೆಲ್ಲಿ ಕ್ಯಾಪಿಟಲ್ಸ್‌ಗೆ ಸತತ 4ನೇ ಸೋಲು

    IPL 2023: ಖಾತೆ ತೆರೆದ ಮುಂಬೈ – ಡೆಲ್ಲಿ ಕ್ಯಾಪಿಟಲ್ಸ್‌ಗೆ ಸತತ 4ನೇ ಸೋಲು

    ಮಂಬೈ: ನಾಯಕ ರೋಹಿತ್‌ ಶರ್ಮಾ (Rohit Sharma) ಭರ್ಜರಿ ಅರ್ಧ ಶತಕ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 2023 ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಆದರೆ ಡೆಲ್ಲಿ ಸತತ 4ನೇ ಸೋಲಿನೊಂದಿಗೆ ಮುಖಭಂಗ ಅನುಭವಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 19.4 ಓವರ್‌ಗಳಲ್ಲಿ 172 ರನ್‌ ಗಳಿಸಿ ಸರ್ವಪತನ ಕಂಡಿತು. 173 ರನ್‌ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 173 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: IPL 2023: ಸೋಲಿನ ಬೆನ್ನಲ್ಲೇ RCBಗೆ ಶಾಕ್‌ – ನಾಯಕ ಡುಪ್ಲೆಸಿಸ್‌ಗೆ 12 ಲಕ್ಷ ದಂಡ

    ಮುಂಬೈ ಇಂಡಿಯನ್ಸ್‌ ಪರ ರೋಹಿತ್‌ ಶರ್ಮಾ 45 ಎಸೆತಗಳಲ್ಲಿ 65 ರನ್‌ (6 ಬೌಂಡರಿ, 4 ಸಿಕ್ಸರ್‌), ಇಶಾನ್‌ ಕಿಶನ್‌ 31 ರನ್‌ ಹಾಗೂ ತಿಲಕ್‌ ವರ್ಮಾ 29 ಎಸೆತಗಳಲ್ಲಿ 4 ಸಿಕ್ಸರ್‌, 1 ಬೌಂಡರಿ ನೆರವಿನೊಂದಿಗೆ 41 ರನ್‌ ಗಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳಿಂದಲೇ 50 ರನ್‌ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್‌

    ಇನ್ನೂ ಡೆಲ್ಲಿ ಕ್ಯಾಪಿಟಲ್ಸ್‌ ಪರ ಡೇವಿಡ್‌ ವಾರ್ನರ್‌ (David Warner) ಮಂದಗತಿಯ ಬ್ಯಾಟಿಂಗ್‌ ನಡೆಸಿ 47 ಎಸೆತಗಳಲ್ಲಿ 51 ರನ್‌ ಗಳಿಸಿದರೆ, ಕೊನೆಯಲ್ಲಿ ಅಕ್ಷರ್‌ ಪಟೇಲ್‌ (Axar Patel) 25 ಎಸೆತಗಳಲ್ಲಿ ಸ್ಫೋಟಕ 54 ರನ್‌ (5 ಸಿಕ್ಸರ್‌, 4 ಬೌಂಡರಿ) ಚಚ್ಚಿ ತಂಡದ ಮೊತ್ತ 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಮುಂಬೈ ಇಂಡಿಯನ್ಸ್‌ ಪರ ಪಿಯೂಷ್‌ ಚಾವ್ಲಾ, ಜೇಸನ್ ಬೆಹ್ರೆನ್ಡಾರ್ಫ್ ತಲಾ ಮೂರು ವಿಕೆಟ್‌ ಕಿತ್ತರೆ, ರಿಲೆ ಮೆರೆಡಿತ್ 2 ವಿಕೆಟ್‌, ಹೃತಿಕ್ ಶೋಕೀನ್ ಒಂದು ವಿಕೆಟ್‌ ಕಿತ್ತರು. ಇನ್ನೂ ಡೆಲ್ಲಿ ಪರ ಮುಕೇಶ್‌ ಕುಮಾರ್‌ 2 ವಿಕೆಟ್‌ ಕಿತ್ತರೆ ಮುಸ್ತಫರ್‌ ರೆಹ್ಮಾನ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.