Tag: Delhi Capitals

  • ವಾರ್ನರ್ ಪಡೆಗೆ ಸೋಲು – ಫಸ್ಟ್ ಟೈಂ ಫೈನಲ್‍ಗೆ ಡೆಲ್ಲಿ ಎಂಟ್ರಿ

    ವಾರ್ನರ್ ಪಡೆಗೆ ಸೋಲು – ಫಸ್ಟ್ ಟೈಂ ಫೈನಲ್‍ಗೆ ಡೆಲ್ಲಿ ಎಂಟ್ರಿ

    – ಸ್ಟೊಯಿನಿಸ್, ರಬಾಡಾ ಬೌಲಿಂಗ್ ದಾಳಿಗೆ ಹೈದ್ರಾಬಾದ್ ತತ್ತರ
    – 21 ರನ್ ಅಂತರದಲ್ಲಿ 4 ವಿಕೆಟ್ ಪತನ

    ಅಬುಧಾಬಿ: ಇಂದು ನಡೆದ ಕ್ವಾಲಿಫಯರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 17 ರನ್‍ಗಳ ಅಂತರದಲ್ಲಿ ಗೆದ್ದು ಐಪಿಎಲ್-2020ಯ ಫೈನಲ್‍ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಮಂಗಳವಾರ ನಡೆಯಲಿರುವ ಫೈನಲ್ ಅಲ್ಲಿ ಮುಂಬೈ ಇಂಡಿಯನ್ಸ್ ತಂಡದ ಜೊತೆ ಸೆಣೆಸಾಡಲಿದೆ.

    ಅಬುಧಾಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಭರ್ಜರಿ ಆಟದಿಂದ ನಿಗದಿತ 20 ಓವರಿನಲ್ಲಿ 189 ರನ್‍ಗಳನ್ನು ಪೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ತೀವ್ರ ಪೈಪೋಟಿ ನೀಡಿದರೂ ಮಾರ್ಕಸ್ ಸ್ಟೊಯಿನಿಸ್ ದಾಳಿಗೆ ಸಿಲುಕಿದ ಹೈದರಾಬಾದ್ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.

    ಮೊದಲ ಬಾರಿಗೆ ಫೈನಲ್ ಪ್ರವೇಶ:
    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರಂಭದಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮವಾಗಿ ಆಡಿಕೊಂಡು ಬಂದಿತ್ತು. ನಾಯಕ ಶ್ರೇಯಸ್ ಐಯ್ಯರ್ ನೇತೃತ್ವದಲ್ಲಿ ಎರಡನೇ ತಂಡವಾಗಿ ಪ್ಲೇ ಆಫ್‍ಗೆ ಆಯ್ಕೆಯಾಗಿತ್ತು. ಈಗ ಹೈದರಾಬಾದ್ ವಿರುದ್ಧ ಕ್ವಾಲಿಫಯರ್-2 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ. 13 ಐಪಿಎಲ್ ಆವೃತ್ತಿಯಲ್ಲಿ ಆಡಿದ್ದರೂ ಡೆಲ್ಲಿ ತಂಡ ಎಂದು ಫೈನಲ್‍ಗೆ ಪ್ರವೇಶ ಮಾಡಿರಲಿಲ್ಲ. ಈ ಬಾರಿ ಫೈನಲ್ ಪ್ರವೇಶಿಸುವ ಮೂಲಕ ಕನಸನ್ನು ನನಸು ಮಾಡಿದೆ.

    ಸ್ಟೊಯಿನಿಸ್, ರಬಾಡಾ ಬೌಲಿಂಗ್ ದಾಳಿ
    ಇಂದಿನ ಪಂದ್ಯದಲ್ಲಿ ಡೆಲ್ಲಿ ವೇಗಿಗಳಾದ ಮಾರ್ಕಸ್ ಸ್ಟೊಯಿನಿಸ್, ಕಗಿಸೊ ರಬಾಡಾ ಉತ್ತಮ ಬೌಲಿಂಗ್ ದಾಳಿ ಮಾಡಿದರು. ತಮ್ಮ ಕೋಟಾದ ಮೂರು ಓವರ್ ಬೌಲ್ ಮಾಡಿದ ಸ್ಟೊಯಿನಿಸ್ 26 ರನ್ ನೀಡಿ ಮೂರು ವಿಕೆಟ್ ಕಿತ್ತರು. ಕೊನೆಯಲ್ಲಿ ಅಬ್ಬರಿಸಿದ ರಬಾಡಾ 19ನೇ ಓವರಿನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ನಾಲ್ಕು ಓವರ್ ಬೌಲ್ ಮಾಡಿ 29 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

    ಡೆಲ್ಲಿ ನೀಡಿದ 189 ರನ್‍ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸನ್‍ರೈಸರ್ಸ್ ಹೈದರಾಬಾದ್ ತಂಡದಿಂದ ನಾಯಕ ಡೇವಿಡ್ ವಾರ್ನರ್ ಮತ್ತು ಪ್ರಿಯಮ್ ಗರ್ಗ್ ಕಣಕ್ಕಿಳಿದರು. ಆದರೆ ಡೆಲ್ಲಿ ವೇಗಿ ಕಗಿಸೊ ರಬಾಡಾ ನಾಯಕ ಡೇವಿಡ್ ವಾರ್ನರ್ ಅನ್ನು ಎರಡನೇ ಓವರ್ ಮೊದಲ ಬಾಲಿನಲ್ಲೇ ಔಟ್ ಮಾಡಿ ಹೈದರಾಬಾದ್‍ಗೆ ಆರಂಭಿಕ ಆಘಾತ ನೀಡಿದ್ದರು. ಇವರ ಔಟ್ ನಂತರ ಜೊತೆಯಾದ ಮನೀಶ್ ಪಾಂಡೆ ಮತ್ತು ಪ್ರಿಯಮ್ ಗರ್ಗ್ ಸ್ಫೋಟಕ ಆಟಕ್ಕೆ ಮುಂದಾದರು.

    ಆದರೆ 4ನೇ ಓವರ್ ನಾಲ್ಕನೇ ಬಾಲಿನಲ್ಲಿ 17 ರನ್ ಸಿಡಿಸಿದ್ದ ಪ್ರಿಯಮ್ ಗರ್ಗ್ ಮಾರ್ಕಸ್ ಸ್ಟೊಯಿನಿಸ್‍ಗೆ ಕ್ಲೀನ್ ಬೌಲ್ಡ್ ಆದರು. ನಂತರ ಇದೇ ಓವರಿನಲ್ಲಿ 21 ರನ್ ಹೊಡೆದಿದ್ದ ಮನೀಶ್ ಪಾಂಡೆ ಕೂಡ ಮಾರ್ಕಸ್ ಸ್ಟೊಯಿನಿಸ್ ಔಟ್ ಮಾಡಿದ ಪೆವಿಲಿಯನ್‍ಗೆ ಅಟ್ಟಿದರು. ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್ 46 ರನ್‍ಗಳ ಜೊತೆಯಾಟವಾಡಿದರು. ಆದರೆ 11 ನೇ ಓವರ್ ನಾಲ್ಕನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಜೇಸನ್ ಹೋಲ್ಡರ್ ಅವರು ಔಟ್ ಆದರು.

    ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಅಬ್ದುಲ್ ಸಮದ್ ಐದನೇ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ 16ನೇ ಓವರ್ ನಾಲ್ಕನೇ ಬಾಲಿನಲ್ಲಿ 45 ಬಾಲಿಗೆ 67 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್ ಅವರು ಮಾರ್ಕಸ್ ಸ್ಟೊಯಿನಿಸ್ ಅವರಿಗೆ ಔಟ್ ಆದರು. ಇದಾದ ನಂತರ 16 ಬಾಲಿಗೆ 33 ರನ್ ಸಿಡಿಸಿ ಆಡುತ್ತಿದ್ದ ಅಬ್ದುಲ್ ಸಮದ್ ಅವರು ಕಗಿಸೊ ರಬಾಡಾ ಅವರ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಇವರ ಬೆನ್ನಲ್ಲೇ ರಶೀದ್ ಖಾನ್ ಅವರು ಔಟ್ ಆದರು.

    ಒಂದು ಹಂತದಲ್ಲಿ ಹೈದರಾಬಾದ್ 4 ಕೆಟ್ ಕಳೆದುಕೊಂಡು 147 ರನ್ ಗಳಿಸಿ ಗೆಲುವಿನತ್ತ ಮುನ್ನಡೆಯುತ್ತಿತ್ತು. ಆದರೆ 16.5 ಓವರಿನಲ್ಲಿ ಕೇನ್ ವಿಲಿಯಮ್ಸನ್ ಔಟ್ ಆಗುವುದರೊಂದಿಗೆ ಪತನ ಆರಂಭವಾಯಿತು. 21 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಕೈ ಚೆಲ್ಲಿತು.

  • ಡೆಲ್ಲಿಗೆ 6 ವಿಕೆಟ್‌ಗಳ ಜಯ – ಪ್ಲೇ ಆಫ್‌ ರೇಸ್‌ಗೆ ಆರ್‌ಸಿಬಿ ಎಂಟ್ರಿ

    ಡೆಲ್ಲಿಗೆ 6 ವಿಕೆಟ್‌ಗಳ ಜಯ – ಪ್ಲೇ ಆಫ್‌ ರೇಸ್‌ಗೆ ಆರ್‌ಸಿಬಿ ಎಂಟ್ರಿ

    ಅಬುಧಾಬಿ: ಡೆಲ್ಲಿ ವಿರುದ್ಧ ನಡೆದ ಇಂದಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಸೋತರೂ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. ಕೋಲ್ಕತ್ತಾಕ್ಕಿಂತ  ಉತ್ತಮ ರನ್‌ ರೇಟ್‌ ಹೊಂದಿದ್ದ ಕಾರಣ ಆರ್‌ಸಿಬಿಯ ಪ್ಲೇ ಆಫ್‌ ಕನಸು ನನಸಾಗಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು 7 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಡೆಲ್ಲಿ 19 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 154 ರನ್‌ ಹೊಡೆಯುವ ಮೂಲಕ ಗುರಿ ಮುಟ್ಟಿತು. ಡೆಲ್ಲಿ 6 ವಿಕೆಟ್‌ಗಳ ಜಯವನ್ನು ಸಾಧಿಸಿ 16 ಅಂಕ ಪಡೆಯುವ ಮೂಲಕ ಎರಡನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ.

    ಡೆಲ್ಲಿ ಪರ ಶಿಖರ್‌ ಧವನ್‌ 54 ರನ್‌(41 ಎಸೆತ,6 ಬೌಂಡರಿ), ಅಜಿಂಕ್ಯಾ ರಹಾನೆ 60 ರನ್‌(46 ಎಸೆತ, 5 ಬೌಂಡರಿ,1 ಸಿಕ್ಸ್‌) ಹೊಡೆದು ಔಟಾದರು.

    ಕೋಲ್ಕತ್ತಾದ ಪ್ಲೇ ಆಫ್‌ ಭವಿಷ್ಯ ನಾಳೆ ನಡೆಯಲಿರುವ ಪಂದ್ಯದ ಮೇಲೆ ನಿಂತಿದೆ. ಮುಂಬೈ ವಿರುದ್ಧ ಹೈದರಾಬಾದ್‌ ಸೋತರೆ ಕೋಲ್ಕತ್ತಾ 14 ಅಂಕದ ಆಧಾರದ ಮೇಲೆ 4ನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಲಿದೆ.

    ಇಂದಿನ ಪಂದ್ಯದಲ್ಲಿ ಒಂದು ವೇಳೆ 17.3 ಓವರ್ ಅಥವಾ ಅದಕ್ಕಿಂತ ಕಡಿಮೆ ಓವರಿನಲ್ಲಿ ಡೆಲ್ಲಿ ಗೆದ್ದಿದ್ದರೆ ಆರ್‌ಸಿಬಿ ನೆಟ್‌ ರನ್‌ ರೇಟ್‌ ಕೋಲ್ಕತ್ತಾಕ್ಕಿಂತ ಕಡಿಮೆ ಇರುತ್ತಿತ್ತು. ಒಂದು ವೇಳೆ ಆರ್‌ಸಿಬಿ 19 ರನ್‌ ಅಂತರದಿಂದ ಗೆದ್ದಿದ್ದರೆ ಡೆಲ್ಲಿ ನೆಟ್‌ ರನ್‌ ರೇಟ್‌ ಕೋಲ್ಕತ್ತಾಕ್ಕಿಂತ ಕಡಿಮೆ ಆಗುತ್ತಿತ್ತು.

    ಇಂದಿನ ಪಂದ್ಯಕ್ಕೂ ಮೊದಲು ಆರ್‌ಸಿಬಿ ನೆಟ್‌ ರನ್‌ ರೇಟ್‌ -0.145 ಇದ್ದರೆ ಡೆಲ್ಲಿ -0.159 ಇತ್ತು. ಆದರೆ ಈಗ ಆರ್‌ಸಿಬಿ ನೆಟ್‌ ರನ್‌ ರೇಟ್‌ -0.172ಗೆ ಜಾರಿದರೆ ಕೋಲ್ಕತ್ತಾ -0.214 ನೆಟ್‌ ರನ್‌ ರೇಟ್‌ ಹೊಂದಿದೆ.

    ಆರ್‌ಸಿಬಿ ಪರ ಪಡಿಕ್ಕಲ್‌ 50 ರನ್‌(41 ಎಸೆತ, 5 ಬೌಂಡರಿ), ಕೊಹ್ಲಿ 29 ರನ್‌(24 ಎಸೆತ, 2 ಬೌಂಡರಿ,1 ಸಿಕ್ಸರ್‌) ಎಬಿ ಡಿವಿಲಿರ್ಸ್‌ 35 ರನ್‌(21 ಎಸೆತ, 1 ಬೌಂಡರಿ, 2 ಸಿಕ್ಸರ್‌) ಶಿವಂ ದುಬೆ 17 ರನ್‌(11 ಎಸೆತ, 2 ಬೌಂಡರಿ,1 ಸಿಕ್ಸರ್‌) ಹೊಡೆದರು.

  • ಡಿ ಕಾಕ್, ಇಶಾನ್ ಕಿಶನ್ ಸ್ಫೋಟಕ ಆಟಕ್ಕೆ ಮಕಾಡೆ ಮಲಗಿದ ಡೆಲ್ಲಿ

    ಡಿ ಕಾಕ್, ಇಶಾನ್ ಕಿಶನ್ ಸ್ಫೋಟಕ ಆಟಕ್ಕೆ ಮಕಾಡೆ ಮಲಗಿದ ಡೆಲ್ಲಿ

    – ಬೌಲ್ಟ್, ಬುಮ್ರಾ ಬೌಲಿಂಗ್ ದಾಳಿಗೆ ಐಯ್ಯರ್ ಪಡೆ ತತ್ತರ

    ದುಬೈ: ಇಂದು ನಡೆದ ಸಖತ್ ಶನಿವಾರದ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್‍ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಭಧ್ರಪಡಿಸಿಕೊಂಡಿದೆ.

    ಇಂದು ದುಬೈ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 51ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರಿಗೆ ಕೇವಲ 110 ರನ್ ಪೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಸೂಪರ್ ಬ್ಯಾಟಿಂಗ್ ಫಲವಾಗಿ ಇನ್ನೂ 34 ಬಾಲ್ ಉಳಿಸಿಕೊಂಡು ಗುರಿಯನ್ನು ಮುಟ್ಟಿತು.

    ಡೆಲ್ಲಿ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಲು ಬಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಓಪನರ್ಸ್ ಆಗಿ ಬಂದ ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶನ್ ಪವರ್ ಪ್ಲೇ ಹಂತದಲ್ಲಿ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ ಒಂದು ವಿಕೆಟ್ ಕಳದುಕೊಳ್ಳದೇ 38 ರನ್ ಪೇರಿಸಿತು. ಈ ನಡುವೆ ವಿಕೆಟ್ ಪಡೆಯಲು ಡೆಲ್ಲಿ ಬೌಲರ್ ಗಳು ಪರದಾಡಿದರು.

    ಇದರ ಜೊತೆಗೆ ಎಂಟನೇ ಓವರಿನಲ್ಲಿ ಡಿಕಾಕ್ ಮತ್ತು ಇಶಾನ್ ಕಿಶನ್ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಆದರೆ 10ನೇ ಓವರ್ 2ನೇ ಬಾಲಿನಲ್ಲಿ 26 ರನ್ ಗಳಿಸಿ ಆಡುತ್ತಿದ್ದ ಕ್ವಿಂಟನ್ ಡಿ ಕಾಕ್ ಅವರು ಅನ್ರಿಚ್ ನಾಟ್ರ್ಜೆ ಅವರಿಗೆ ಬೌಲ್ಡ್ ಆಗಿ ಹೊರನಡೆದರು. ಆ ನಂತರ ಆರಂಭದಿಂದಲೂ ಅದ್ಭುತವಾಗಿ ಆಡಿದ ಇಶಾನ್ ಕಿಶನ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿತ್ತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ಯಾವ ಬ್ಯಾಟ್ಸ್ ಮನ್ ಕೂಡ ಉತ್ತಮ ರನ್ ಕಲೆ ಹಾಕಲಿಲ್ಲ. ಮಧ್ಯದಲ್ಲಿ ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಪತ್ರಿರೋಧ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಡೆಲ್ಲಿ 20 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 110 ರನ್ ಪೇರಿಸಿತ್ತು.

  • ಧೋನಿ ವಿರುದ್ಧ 3 ಸಿಕ್ಸ್‌ ಚಚ್ಚಿ ಸೇಡು ತೀರಿಸಿಕೊಂಡ ಅಕ್ಷರ್‌ ಪಟೇಲ್‌

    ಧೋನಿ ವಿರುದ್ಧ 3 ಸಿಕ್ಸ್‌ ಚಚ್ಚಿ ಸೇಡು ತೀರಿಸಿಕೊಂಡ ಅಕ್ಷರ್‌ ಪಟೇಲ್‌

    ಶಾರ್ಜಾ: ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ ಚಚ್ಚುವ ಮೂಲಕ ಅಕ್ಷರ್‌ ಪಟೇಲ್‌ ಅವರು ಧೋನಿ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾರೆ.

    ಹೌದು. ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯವನ್ನು ತಂದಿಟ್ಟ ಅಕ್ಷರ್‌ ಪಟೇಲ್‌ ಮೂರು ಸಿಕ್ಸ್‌ ಸಿಡಿಸುವ ಮೂಲಕ ಧೋನಿ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯವನ್ನು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    2016 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನಿಂದ ಅಮಾನತುಗೊಂಡಿದ್ದ ಹಿನ್ನೆಲೆಯಲ್ಲಿ ಧೋನಿ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದರು. ಈ ವೇಳೆ ಅಕ್ಷರ್‌ ಪಟೇಲ್‌ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಪರ ಆಡುತ್ತಿದ್ದರು.

    ವಿಶಾಖಪಟ್ಟಣದಲ್ಲಿ ಮೇ 21 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ 7 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು.

    173 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಪುಣೆ ತಂಡಕ್ಕೆ ಕೊನೆಯ ಓವರ್‌ನಲ್ಲಿ 23 ರನ್‌ಗಳು ಬೇಕಿತ್ತು. ಅಕ್ಷರ್‌ ಪಟೇಲ್‌ ಎಸೆದ ಈ ಓವರ್‌ನಲ್ಲಿ 3 ಸಿಕ್ಸ್‌, ಒಂದು ಬೌಂಡರಿ ಹೊಡೆಯುವ ಮೂಲಕ ಧೋನಿ 23 ರನ್‌ ಚಚ್ಚಿದ್ದರು. ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಧೋನಿ ಔಟಾಗದೇ 64 ರನ್‌(32 ಎಸೆತ, 4 ಬೌಂಡರಿ, 5 ಸಿಕ್ಸರ್‌) ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

    https://twitter.com/Romeo_theboss/status/1317547044068679682

    ಅಂದು ಮೂರು ಧೋನಿ 3 ಸಿಕ್ಸ್‌ ಹೊಡೆದಿದ್ದರೆ ಶನಿವಾರದ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಕೊನೆಯ ಓವರಿನಲ್ಲಿ 3 ಸಿಕ್ಸ್‌ ಹೊಡೆದಿದ್ದರು. 180 ರನ್‌ ಗಳ ಗುರಿಯನ್ನು ಪಡೆದ ಡೆಲ್ಲಿ ಕೊನೆಯ 12 ಎಸೆತಗಳಲ್ಲಿ 21 ರನ್‌ ಬೇಕಿತ್ತು. 19ನೇ ಓವರ್‌ ಎಸೆದ ಕರ್ರನ್‌ 4 ರನ್‌ ನೀಡಿ 1 ವಿಕೆಟ್‌ ಪಡೆದರು. ಕೊನೆಯ 6 ಎಸೆತದಲ್ಲಿ 17 ರನ್‌ ಬೇಕಿತ್ತು.

    ಕೊನೆಯ ಓವರ್‌ ಎಸೆದ ಜಡೇಜಾ ಮೊದಲ ಎಸೆತವನ್ನು ವೈಡ್‌ ಹಾಕಿದರು. ನಂತರದ ಎಸೆತದಲ್ಲಿ ಒಂದು ರನ್‌ ಬಂತು. ಸ್ಟ್ರೈಕ್‌ಗೆ ಅಕ್ಷರ್‌ ಪಟೇಲ್‌ ಬಂದರು. ನಂತರ 2 ಎಸೆತಗಳನ್ನು ಅಕ್ಷರ್‌ ಪಟೇಲ್‌ ಸಿಕ್ಸರ್‌ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್‌ ಬಂತು. ಐದನೇಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಡೆಲ್ಲಿ ತಂಡ 5 ವಿಕೆಟ್‌ಗಳ ಜಯವನ್ನು ಪಡೆದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    29 ಎಸೆತಗಳಲ್ಲಿ 50 ರನ್‌ ಹೊಡೆದ ಶಿಖರ್‌ ಧವನ್‌ ಅಜೇಯ 101 ರನ್‌(58 ಎಸೆತ, 14 ಬೌಂಡರಿ, 1ಸಿಕ್ಸರ್‌) ಚಚ್ಚಿದರು. ಸ್ಫೋಟಕ ಬ್ಯಾಟಿಂಗ್‌ ಮಾಡಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅಕ್ಷರ್‌ ಪಟೇಲ್‌ 21 ರನ್‌(5 ಎಸೆತ, 3 ಸಿಕ್ಸರ್‌) ಹೊಡೆದರು.

  • ಕೊನೆಯ ಓವರ್‌ ಜಡೇಜಾಗೆ ನೀಡಿದ್ದು ಯಾಕೆ- ಬಹಿರಂಗ ಪಡಿಸಿದ ಧೋನಿ

    ಕೊನೆಯ ಓವರ್‌ ಜಡೇಜಾಗೆ ನೀಡಿದ್ದು ಯಾಕೆ- ಬಹಿರಂಗ ಪಡಿಸಿದ ಧೋನಿ

    ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ ರವೀಂದ್ರ ಜಡೇಜಾ ಅವರಿಗೆ ನೀಡಿದ್ದು ಯಾಕೆ ಎಂಬುದನ್ನು ಧೋನಿ ಬಹಿರಂಗ ಪಡಿಸಿದ್ದಾರೆ.

    ಕೊನೆಯ ಓವರ್‌ ಸ್ಪಿನ್ನರ್‌ ಜಡೇಜಾ ಅವರಿಗೆ ನೀಡಿದ್ದರಿಂದ ಚೆನ್ನೈಗೆ ಸೋಲಾಗಿದೆ. ಧೋನಿ ನಿರ್ಧಾರವೇ ಚೆನ್ನೈಗೆ ಮುಳುವಾಯಿತು ಎಂಬ ಟೀಕೆ ಸಿಎಸ್‌ಕೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಈಗ ಧೋನಿ ನಾನು ಯಾಕೆ ಈ ನಿರ್ಧಾರಕ್ಕೆ ಬಂದೆ ಎಂಬುದನ್ನು ತಿಳಿಸಿದ್ದಾರೆ.

    ಬ್ರಾವೋ ಫಿಟ್‌ ಇರಲಿಲ್ಲ. ಗಾಯಗೊಂಡು ಮೈದಾನ ತೊರೆದ ನಂತರ ಮತ್ತೆ ಬರಲಿಲ್ಲ. ನನ್ನ ಬಳಿ ಕರ್ರನ್‌ ಮತ್ತು ಜಡೇಜಾ ಆಯ್ಕೆ ಮಾತ್ರ ಇತ್ತು. ಹೀಗಾಗಿ ಕೊನೆಯ ಓವರ್‌ ಅನ್ನು ಜಡೇಜಾ ಅವರಿಗೆ ನೀಡಿದೆ ಎಂದು ಹೇಳಿದರು. ಪಂದ್ಯದ ನಂತರ ಕೋಚ್‌ ಸ್ಟಿಫನ್‌ ಫ್ಲೇಮಿಂಗ್‌ ಸಹ ಈ ಮಾತನ್ನೇ ಆಡಿದರು.180 ರನ್‌ ಗಳ ಗುರಿಯನ್ನು ಪಡೆದ ಡೆಲ್ಲಿ ಕೊನೆಯ 12 ಎಸೆತಗಳಲ್ಲಿ 21 ರನ್‌ ಬೇಕಿತ್ತು. 19ನೇ ಓವರ್‌ ಎಸೆದ ಕರ್ರನ್‌ 4 ರನ್‌ ನೀಡಿ 1 ವಿಕೆಟ್‌ ಪಡೆದರು. ಕೊನೆಯ 6 ಎಸೆತದಲ್ಲಿ 17 ರನ್‌ ಬೇಕಿತ್ತು.

    ಕೊನೆಯ ಓವರ್‌ ಎಸೆದ ಜಡೇಜಾ ಮೊದಲ ಎಸೆತವನ್ನು ವೈಡ್‌ ಹಾಕಿದರು. ನಂತರದ ಎಸೆತದಲ್ಲಿ ಒಂದು ರನ್‌ ಬಂತು. ಸ್ಟ್ರೈಕ್‌ಗೆ ಅಕ್ಷರ್‌ ಪಟೇಲ್‌ ಬಂದರು. ನಂತರ 2 ಎಸೆತಗಳನ್ನು ಅಕ್ಷರ್‌ ಪಟೇಲ್‌ ಸಿಕ್ಸರ್‌ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್‌ ಬಂತು. ಐದನೇಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಡೆಲ್ಲಿ ತಂಡ 5 ವಿಕೆಟ್‌ಗಳ ಜಯವನ್ನು ಪಡೆದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು.

    29 ಎಸೆತಗಳಲ್ಲಿ 50 ರನ್‌ ಹೊಡೆದ ಶಿಖರ್‌ ಧವನ್‌ ಅಜೇಯ 101 ರನ್‌(58 ಎಸೆತ, 14 ಬೌಂಡರಿ, 1ಸಿಕ್ಸರ್‌) ಚಚ್ಚಿದರು. ಸ್ಫೋಟಕ ಬ್ಯಾಟಿಂಗ್‌ ಮಾಡಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅಕ್ಷರ್‌ ಪಟೇಲ್‌ 21 ರನ್‌(5 ಎಸೆತ, 3 ಸಿಕ್ಸರ್‌) ಹೊಡೆದರು.

    ಚೆನ್ನೈ ಪರ 6 ಮಂದಿ ಬೌಲಿಂಗ್‌ ಮಾಡಿದ್ದರು. ದೀಪಕ್‌ ಚಹರ್‌, ಸ್ಯಾಮ್‌ ಕರ್ರನ್‌, ಶಾರ್ದೂಲ್‌ ಠಾಕೂರ್‌, ಜಡೇಜಾ, ಕರ್ಣ್‌ ಶರ್ಮಾ, ಬ್ರಾವೋ ಬೌಲಿಂಗ್‌ ಮಾಡಿದ್ದರು. ಬ್ರಾವೋ 3 ಓವರ್‌ ಬೌಲ್‌ ಮಾಡಿ 23 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು. ಜಡೇಜಾ 1.5 ಓವರ್‌ ಬೌಲ್‌ ಮಾಡಿ 35 ರನ್‌ ನೀಡಿದ್ದರು.

  • ಡಿ ಕಾಕ್, ಯಾದವ್ ಸ್ಫೋಟಕ ಆಟಕ್ಕೆ ತಲೆಬಾಗಿದ ಡೆಲ್ಲಿ – ಮೊದಲ ಸ್ಥಾನಕ್ಕೆ ಜಿಗಿದ ಮುಂಬೈ

    ಡಿ ಕಾಕ್, ಯಾದವ್ ಸ್ಫೋಟಕ ಆಟಕ್ಕೆ ತಲೆಬಾಗಿದ ಡೆಲ್ಲಿ – ಮೊದಲ ಸ್ಥಾನಕ್ಕೆ ಜಿಗಿದ ಮುಂಬೈ

    – ಮುಂಬೈಗಾಗಿ 150ನೇ ಪಂದ್ಯ ಗೆಲ್ಲಿಸಿಕೊಟ್ಟ ರೋಹಿತ್

    ಅಬುಧಾಬಿ: ಇಂದು ನಡೆದ ಸಂಡೇ ಧಮಾಕದ ಎರಡನೇ ಪಂದ್ಯದಲ್ಲಿ ಚೇಸಿಂಗ್‍ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ ತಂಡ ಸುಲಭವಾಗಿ ಜಯವನ್ನು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

    ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಅರ್ಧಶತಕದಿಂದ ನಿಗದಿತ 20 ಓವರಿನಲ್ಲಿ 162 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ ಇನ್ನಿಂಗ್ಸ್ ನ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಸೂರ್ಯಕುಮಾರ್ ಯಾದವ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕದ ನೆರವಿನಿಂದ ಇನ್ನೂ ಎರಡು ಬಾಲ್ ಉಳಿಸಿ 5 ವಿಕೆಟ್‍ಗಳ ಜಯವನ್ನು ಸಾಧಿಸಿತು.

    ರೋಹಿತ್ 150ನೇ ಪಂದ್ಯ
    2011ರ ಐಪಿಎಲ್‍ನಲ್ಲಿ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದ್ದರು. ಅಂದಿನಿಂದ ನಾಯಕನಾಗಿ ಉತ್ತಮವಾಗಿ ಆಡಿಕೊಂಡು ಬಂದಿರುವ ರೋಹಿತ್ ಶರ್ಮಾ ಮುಂಬೈ ತಂಡ ನಾಲ್ಕು ಬಾರಿ ಚಾಂಪಿಯನ್ ಆಗುವಂತೆ ಮಾಡಿದರು. 2013, 2015, 2017 ಮತ್ತು 2019ರ ಐಪಿಎಲ್‍ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಇವತ್ತಿನ ಪಂದ್ಯದ ಮೂಲಕ ಮುಂಬೈ ತಂಡಕ್ಕಾಗಿ 150ನೇ ಪಂದ್ಯವನ್ನು ಆಡಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸ್ಪರ್ಧಾತ್ಮಕ ಟಾರ್ಗೆಟ್ ಅನ್ನು ಬೆನ್ನಟ್ಟಲು ಬಂದ ಮುಂಬೈ ಇಂಡಿಯನ್ಸ್‍ಗೆ ಆಕ್ಸರ್ ಪಟೇಲ್ ಅವರು ಆರಂಭದಲ್ಲೇ ಶಾಕ್ ನೀಡಿದರು. 4ನೇ ಓವರಿನ ಕೊನೆ ಬಾಲಿನಲ್ಲಿ ದೊಡ್ಡ ಹೊಡತಕ್ಕೆ ಕೈಹಾಕಿದ ಮುಂಬೈ ನಾಯಕ ರೊಹೀತ್ ಶರ್ಮಾ ಅವರು ಐದು ರನ್ ಗಳಿಸಿ ಔಟ್ ಆದರು. ನಂತರ ಡಿ ಕಾಕ್ ಅವರು ಅಬ್ಬರ ಬ್ಯಾಟಿಂಗ್ ಮಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯಕ್ಕೆ ಮುಂಬೈ ತಂಡ ಒಂದು ವಿಕೆಟ್ ಕಳೆದುಕೊಂಡು 44 ರನ್ ಗಳಸಿತು.

    ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಕ್ವಿಂಟನ್ ಡಿ ಕಾಕ್ ಅವರು 33 ಎಸೆತದಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ 9ನೇ ಓವರಿನ ಐದನೇ ಬಾಲಿನಲ್ಲಿ 36 ಬಾಲಿಗೆ 53 ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಅವರು ರವಿಚಂದ್ರನ್ ಅಶ್ವಿನ್ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಸೇರಿಕೊಂಡು ತಂಡವನ್ನು 100ರ ಗಡಿ ದಾಟಿಸಿದರು.

    ಅಬ್ಬರ ಆಟವಾಡಿದ ಸೂರ್ಯಕುಮಾರ್ ಯಾದವ್ ಅವರು, ಕೇವಲ 30 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಸಿಕ್ಸರ್ ಹೊಡೆಯುವ ಮೂಲಕ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ನಂತರದ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಯಾದವ್ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಅವರು ಸೊನ್ನೆ ಸುತ್ತಿ ಮಾರ್ಕಸ್ ಸ್ಟೊಯಿನಿಸ್ ಅವರ ಬೌಲಿಂಗ್‍ನಲ್ಲಿ ಕೀಪರ್ ಕ್ಯಾಚ್ ಕೊಟ್ಟು ವಾಪಸ್ ಆದರು.

    15 ಬಾಲಿಗೆ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಸಮೇತ 28 ರನ್ ಸಿಡಿಸಿ ಆಡುತ್ತಿದ್ದ ಇಶಾನ್ ಕಿಶನ್ ಅವರು ಕಗಿಸೊ ರಬಡಾ ಅವರ ಬೌಲಿಂಗ್‍ನಲ್ಲಿ ಔಟ್ ಆಗಿ ನಿರ್ಗಮಿಸಿದರು. ನಂತರ ಜೊತೆಯಾದ ಕೀರನ್ ಪೊಲಾರ್ಡ್ ಮತ್ತು ಕ್ರುನಾಲ್ ಪಾಂಡ್ಯ ಮುಂಬೈಯನ್ನು ಜಯದ ದಡವನ್ನು ಸೇರಿಸಿದರು.

  • ಬುಮ್ರಾ, ಪಾಂಡ್ಯ ಭರ್ಜರಿ ಬೌಲಿಂಗ್, ಧವನ್ ಫಿಫ್ಟಿ – ಮುಂಬೈಗೆ 163 ರನ್‍ಗಳ ಗುರಿ

    ಬುಮ್ರಾ, ಪಾಂಡ್ಯ ಭರ್ಜರಿ ಬೌಲಿಂಗ್, ಧವನ್ ಫಿಫ್ಟಿ – ಮುಂಬೈಗೆ 163 ರನ್‍ಗಳ ಗುರಿ

    ಅಬುಧಾಬಿ: ಇಂದು ವೀಕೆಂಡ್ ಧಮಾಕದ ಎರಡನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 163 ರನ್‍ಗಳ ಟಾರ್ಗೆಟ್ ನೀಡಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ನಾಯಕ ಶ್ರೇಯಸ್ ಐಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು 52 ಬಾಲಿಗೆ ಒಂದು ಸಿಕ್ಸ್ ಮತ್ತು ಆರು ಬೌಂಡರಿಗಳ ನೆರವಿನಿಂದ ಧವನ್ ಅವರು ಸಿಡಿಸಿದ 69 ರನ್‍ಗಳಿಂದ 20 ಓವರಿನಲ್ಲಿ 162 ರನ್ ಕೆಲಹಾಕಿದೆ. ಈ ಮೂಲಕ ಬಲಿಷ್ಠ ಬ್ಯಾಟಿಂಗ್ ಲೈನ್‍ಅಫ್ ಇರುವ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಟಾರ್ಗೆಟ್ ಆಗಿ ನೀಡಿದೆ.

    ಬುಮ್ರಾ ಬೌಲಿಂಗ್ ಜಾದು
    ಇಂದಿನ ಪಂದ್ಯದಲ್ಲಿ ಮುಂಬೈ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಡೆಲ್ಲಿ ತಂಡದ ಇನ್ ಫಾರ್ಮ್ ಆಟಗಾರರನ್ನು ಕೇವಲ 162 ರನ್‍ಗಳಲ್ಲಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ನಾಲ್ಕು ಓವರ್ ಬೌಲ್ ಮಾಡಿದ ಜಸ್ಪ್ರೀತ್ ಬುಮ್ರಾ ಕೇವಲ 26 ರನ್ ಕೊಟ್ಟು ಉತ್ತಮವಾಗಿ ಬೌಲ್ ಮಾಡಿದರು. ಇವರಿಗೆ ಉತ್ತಮ ಸಾತ್ ಕೊಟ್ಟ ಕ್ರುನಾಲ್ ಪಾಂಡ್ಯ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಪಡೆದು ಕೇವಲ 26 ರನ್ ನೀಡಿದರು. ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದುಕೊಂಡರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಬಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಆರಂಭಿಕ ಆಘಾತ ನೀಡಿದರು. ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ ಅವರನ್ನು ಮೊದಲ ಓವರಿನಲ್ಲೇ ಔಟ್ ಮಾಡಿದರು. ನಂತರ ಬಂದು ತಾಳ್ಮೆಯ ಆಟಕ್ಕೆ ಮುಂದಾದ ಅಜಿಂಕ್ಯ ರಹಾನೆ ಅವರು ಐಪಿಎಲ್-2020ಯ ತಮ್ಮ ಮೊದಲ ಮ್ಯಾಚಿನಲ್ಲಿ 15 ಬಾಲಿಗೆ 15 ರನ್ ಸಿಡಿಸಿ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿ ಔಟ್ ಆದರು. ಪವರ್ ಪ್ಲೇ ಮುಕ್ತಾಯಕ್ಕೆ ಡೆಲ್ಲಿ ಎರಡು ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತ್ತು.

    ನಂತರ ಜೊತೆಯಾದ ಶಿಖರ್ ಧವನ್ ಮತ್ತು ನಾಯಕ ಶ್ರೇಯಸ್ ಐಯ್ಯರ್ ಉತ್ತಮ ಜೊತೆಯಾಟವಾಡಿದರು. ಜೊತೆಗೆ 33 ಬಾಲಿಗೆ ಅರ್ಧಶತಕ ಜೊತೆಯಾಟವಾಡಿ ಮಿಂಚಿದರು. ನಂತರ ಧವನ್ ಮತ್ತು ಐಯ್ಯರ್ 13.1 ಓವರಿನಲ್ಲಿ ಪಂದ್ಯದ ಮೊತ್ತವನ್ನು 100ರ ಗಡಿ ದಾಟಿಸಿದರು. ನಂತರ 14ನೇ ಓವರಿನ 4ನೇ ಬಾಲಿನಲ್ಲಿ 33 ಬಾಲಿಗೆ 42 ರನ್ ಗಳಿಸಿ ಆಡುತ್ತಿದ್ದ ನಾಯ ಶ್ರೇಯಸ್ ಐಯ್ಯರ್ ಅವರನ್ನು ಕ್ರುನಾಲ್ ಪಾಂಡ್ಯ ಅವರು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು. ನಂತರ ಮಾರ್ಕಸ್ ಸ್ಟೊಯಿನಿಸ್ ಅವರು ಔಟ್ ಆಗಿ ಹೊರನಡೆದರು.

  • ಬೌಲಿಂಗ್, ಫೀಲ್ಡಿಂಗ್‍ನಲ್ಲಿ ಡೆಲ್ಲಿ ಮಿಂಚಿಂಗ್ – ರಬಾಡಾ ದಾಳಿಗೆ ರಾಜಸ್ಥಾನ್ ಆಲೌಟ್

    ಬೌಲಿಂಗ್, ಫೀಲ್ಡಿಂಗ್‍ನಲ್ಲಿ ಡೆಲ್ಲಿ ಮಿಂಚಿಂಗ್ – ರಬಾಡಾ ದಾಳಿಗೆ ರಾಜಸ್ಥಾನ್ ಆಲೌಟ್

    – ಪೆವಿಲಿಯನ್ ಪೆರೇಡ್ ನಡೆಸಿದ ರಾಯಲ್ಸ್ ಆಟಗಾರರು
    – 10 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಡೆಲ್ಲಿ

    ಶಾರ್ಜಾ: ಐಪಿಎಲ್ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಹೀನಾಯವಾಗಿ ಸೋತಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 46 ರನ್‍ಗಳ ಭರ್ಜರಿ ಜಯ ಸಾಧಿಸಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ಇಂದು ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ ಡೆಲ್ಲಿ ತಂಡ ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ 184 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ಪರಿಣಾಮ 19.4 ಓವರಿನಲ್ಲಿ ಆಲೌಟ್ ಆಯ್ತು. 46 ರನ್‍ಗಳ ಅಂತರದಲ್ಲಿ ಗೆದ್ದ ಡೆಲ್ಲಿ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದರೆ, 8 ಅಂಕಗಳಿಸಿದ ಮುಂಬೈ 2ನೇ ಸ್ಥಾನಕ್ಕೆ ಜಾರಿತು.

    ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಡೆಲ್ಲಿ ಕಮಾಲ್
    ಆರಂಭದಲ್ಲಿ ವಿಕೆಟ್ ಕಳೆದುಕೊಂಡರು ಡೆಲ್ಲಿ ಕೊನೆಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತ ಕಲೆಹಾಕಿತು. ಅಂತೆಯೇ ಬೌಲಿಂಗ್‍ನಲ್ಲೂ ಕಮಾಲ್ ಮಾಡಿದ ಡೆಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಉತ್ತಮವಾಗಿ ಬೌಲ್ ಮಾಡಿದ ಕಗಿಸೊ ರಬಾಡಾ ಮೂರು ವಿಕೆಟ್ ಪಡೆದರೆ ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಆಕ್ಸರ್ ಪಟೇಲ್, ಹರ್ಷಲ್ ಪಟೇಲ್ ಮತ್ತು ಅನ್ರಿಕ್ ನಾಟ್ರ್ಜೆ ಒಂದು ವಿಕೆಟ್ ಕಿತ್ತರು. ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡಿದ ಹೆಟ್ಮೆಯರ್ ಉತ್ತಮ ಎರಡು ಕ್ಯಾಚ್ ಹಿಡಿದರು.

    ಡೆಲ್ಲಿ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ರಾಜಸ್ಥಾನದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದರು. ಆದರೆ ಮೂರನೇ ಓವರಿಗೆ ಬೌಲಿಂಗ್ ಬಂದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು, ಎಂಟು ಬಾಲಿಗೆ 13 ರನ್ ಸಿಡಿಸಿದ್ದ ಬಟ್ಲರ್ ಅವರನ್ನು ಔಟ್ ಮಾಡಿದರು. ನಂತರ ಒಂದಾದ ನಾಯಕ ಸ್ಟೀವ್ ಸ್ಮಿತ್ ಮತ್ತು ಯಶಸ್ವಿ ಜೈಸ್ವಾಲ್ ತಾಳ್ಮೆಯ ಆಟಕ್ಕೆ ಮುಂದಾದರು. ಪರಿಣಾಮ ರಾಜಸ್ಥಾನ್ ತಂಡ ಆರು ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು 41 ರನ್ ಸೇರಿಸಿತು.

    ನಂತರ ಜೈಸ್ವಾಲ್ ಮತ್ತು ಸ್ಮಿತ್ 34 ಬಾಲಿನಲ್ಲಿ 42 ರನ್‍ಗಳ ಜೊತೆಯಾಟವಾಡಿದರು. ಆದರೆ 8ನೇ ಓವರಿನ ಮೊದಲ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಸ್ಮಿತ್ ಅನ್ರಿಕ್ ನಾಟ್ರ್ಜೆ ಅವರಿಗೆ ವಿಕೆಟ್ ಒಪ್ಪಿಸಿದರು. 17 ಬಾಲಿಗೆ 24 ರನ್ ಸಿಡಿಸಿ ಬೌಂಡರಿ ಬಳಿ ಶಿಮ್ರಾನ್ ಹೆಟ್ಮಿಯರ್ ಹಿಡಿದು ಸೂಪರ್ ಕ್ಯಾಚಿಗೆ ಸ್ಮಿತ್ ಬಲಿಯಾದರು. ನಂತರ 10ನೇ ಓವರಿನ 3ನೇ ಬಾಲಿನಲ್ಲಿ ಐದು ರನ್ ಗಳಿಸಿ ಸಂಜು ಸ್ಯಾಮ್ಸನ್ ಅವರು ಪೆವಿಲಿಯನ್ ಸೇರಿದರು.

    ನಂತರ ಬಂದ ಮಹಿಪಾಲ್ ಲೋಮರ್ ಅವರು ಕೇವಲ ಒಂದು ರನ್ ಗಳಿಸಿ ಬಂದ ದಾರಿಯಲ್ಲೇ ಪೆವಿಲಯನ್ ಸೇರಿದರು. ಈ ಮೂಲಕ 12 ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 82 ರನ್ ಸೇರಿಸತು. ಆದರೆ 12ನೇ ಓವರಿನ ಮೊದಲ ಬಾಲಿನಲ್ಲೇ 36 ಬಾಲಿಗೆ 34 ರನ್ ಸಿಡಿಸಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಅವರು ಮಾರ್ಕಸ್ ಸ್ಟೋಯಿನಿಸ್ ಅವರ ಎಸೆತಕ್ಕೆ ಬೌಲ್ಡ್ ಆದರು.

    ಜೈಸ್ವಾಲ್ ಔಟ್ ಆದ ನಂತರ ಕಣಕ್ಕಿಳಿದ ಆಂಡ್ರ್ಯೂ ಟೈ ಅವರು ಲೆಗ್ ಸೈಡ್ ಕಡೆ ದೊಡ್ಡ ಹೊಡೆತಕ್ಕೆ ಕೈಹಾಕಿ ಕಗಿಸೊ ರಬಾಡಾ ಹಿಡಿದ ಡೇಯ್ ಕ್ಯಾಚಿಗೆ ಬಲಿಯಾದರು. ನಂತರ 14ನೇ ಓವರಿನ 5ನೇ ಬಾಲಿನಲ್ಲಿ ಎರಡು ರನ್ ಹೊಡೆದು ಜೋಫ್ರಾ ಆರ್ಚರ್ ಅವರು ಔಟ್ ಆಗಿ ಡಗೌಟ್ ಸೇರಿದರು. ನಂತರ 17ನೇ ಓವರ್ ಎರಡನೇ ಬಾಲಿನಲ್ಲಿ ಶ್ರೇಯಾಸ್ ಗೋಪಾಲ್ ಅವರು ಔಟ್ ಆದರು. ನಂತರ ಬಮದ ಯಾವ ಬ್ಯಾಟ್ಸ್ ಮ್ಯಾನ್ ಕೂಡ ಕ್ರೀಸಿನಲ್ಲಿ ನಿಲ್ಲಲಿಲ್ಲ.

  • 2 ರನೌಟ್, ಹೆಟ್ಮಿಯರ್, ಸ್ಟೋಯಿನಿಸ್ ಅಬ್ಬರ – ರಾಜಸ್ಥಾನಕ್ಕೆ 185 ರನ್‍ಗಳ ಟಾರ್ಗೆಟ್

    2 ರನೌಟ್, ಹೆಟ್ಮಿಯರ್, ಸ್ಟೋಯಿನಿಸ್ ಅಬ್ಬರ – ರಾಜಸ್ಥಾನಕ್ಕೆ 185 ರನ್‍ಗಳ ಟಾರ್ಗೆಟ್

    ಶಾರ್ಜಾ: ಇಂದು ಶಾರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 23ನೇ ಮ್ಯಾಚಿನಲ್ಲಿ ಡೆಲ್ಲಿ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 185 ರನ್‍ಗಳ ಟಾರ್ಗೆಟ್ ನೀಡಿದೆ.

    ಆರಂಭದಲ್ಲೇ ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಔಟ್ ಆಗಿ ಡೆಲ್ಲಿ ತಂಡಕ್ಕೆ ಆಘಾತ ನೀಡಿದರು. ಟಾಪ್ ಆರ್ಡರ್ ಬ್ಯಾಟ್ಸ್‍ಮ್ಯಾನ್‍ಗಳನ್ನು ಕಳೆದುಕೊಂಡ ಡೆಲ್ಲಿ ತಂಡಕ್ಕೆ ಮಿಡಲ್ ಆರ್ಡರ್ ಬ್ಯಾಟ್ಸ್ ಮ್ಯಾನ್‍ಗಳು ಕೈ ಹಿಡಿದರು. ಅಬ್ಬರದ ಬ್ಯಾಟಿಂಗ್ ಮುಂದಾದ ಮಾರ್ಕಸ್ ಸ್ಟೋಯಿನಿಸ್ 39 ಮತ್ತು ಶಿಮ್ರಾನ್ ಹೆಟ್ಮಿಯರ್ ಅವರು 45 ರನ್ ಹೊಡೆದು ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾದರು.

    ಟಾಸ್ ಸೋತು ಬ್ಯಾಟ್ ಮಾಡಲು ಬಂದ ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ, ಜೋಫ್ರಾ ಆರ್ಚರ್ ಅವರು ಆರಂಭಿಕ ಆಘಾತ ನೀಡಿದರು. ಓಪನರ್ ಆಗಿ ಕಾಣಕ್ಕೆ ಬಂದ ಅನುಭವಿ ಆಟಗಾರ ಶಿಖರ್ ಧವನ್ ಕೇವಲ 5 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಅವರು ಹಿಡಿದು ಸೂಪರ್ ಕ್ಯಾಚಿಗೆ ಬಲಿಯಾದರು. ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ ಮತ್ತು ಪೃಥ್ವಿ ಶಾ ಅಬ್ಬರದ ಆಟಕ್ಕೆ ಮುಂದಾದರು. ಆದರೆ ಜೋಫ್ರಾ ಆರ್ಚರ್ ಬೌನ್ಸರ್ ಗೆ 19 ರನ್ ಗಳಿಸಿ ಆಡುತ್ತಿದ್ದ ಪೃಥ್ವಿ ಶಾ ಕ್ಯಾಚ್ ಕೊಟ್ಟು ಹೊರನಡೆದರು.

    ಇದಾದ ನಂತರ 5ನೇ ಓವರಿನ 5ನೇ ಬಾಲಿನಲ್ಲಿ 18 ಬಾಲಿಗೆ 22 ರನ್ ಗಳಿಸಿದ ನಾಯಕ ಶ್ರೇಯಸ್ ಐಯ್ಯರ್ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡು 51 ರನ್ ಸೇರಿಸಿತು. ನಂತರ ತಾಳ್ಮೆಯ ಆಟಕ್ಕೆ ಮುಂದಾದ ರಿಷಭ್ ಪಂತ್ ಅವರು 9 ಬಾಲಿಗೆ ಐದು ರನ್ ಗಳಿಸಿ ರನ್ ಔಟ್ ಆಗಿ ಪೆವಿಲಿಯನ್ ಸೇರಿದರು.

    ನಂತರ ಹೊಂದಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರಾನ್ ಹೆಟ್ಮಿಯರ್ ಬಿರುಸಿನ ಆಟಕ್ಕೆ ಮುಂದಾದರು. ಪರಿಣಾಮ 13 ಓವರ್ ಮುಕ್ತಾಯಕ್ಕೆ ಡೆಲ್ಲಿ ಕ್ಯಾಪಿಟಲ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 107 ರನ್ ಸೇರಿಸಿತ್ತು. ಆದರೆ 13ನೇ ಓವರಿನ ಮೂರನೇ ಬಾಲಿನಲ್ಲಿ 30 ಎಸೆತಕ್ಕೆ 39 ರನ್ ಗಳಿಸಿ ಆಡುತ್ತಿದ್ದ ಮಾರ್ಕಸ್ ಸ್ಟೋಯಿನಿಸ್ ಅವರನ್ನು ರಾಹುಲ್ ತೇವಟಿಯಾ ಅವರು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.

    ನಂತರ 24 ಬಾಲಿಗೆ 45 ರನ್ ಸಿಡಿಸಿ ಅಬ್ಬರಿಸುತ್ತಿದ್ದ ಶಿಮ್ರಾನ್ ಹೆಟ್ಮಿಯರ್ 16ನೇ ಓವರಿನ ಕೊನೆಯ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಗೆರಯ ಬಳಿ ರಾಹುಲ್ ತೇವಟಿಯಾ ಅವರಿಗೆ ಕ್ಯಾಚ್ ನೀಡಿದರು. ನಂತರ 18ನೇ ಓವರಿನ ಕೊನೆಯ ಬಾಲಿನಲ್ಲಿ ಅಕ್ಷರ್ ಪಟೇಲ್ ಅವರು ಎಂಟು ಬಾಲಿಗೆ 17 ರನ್ ಸಿಡಿಸಿ ಕೀಪರ್ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಕೊನೆ ಓವರಿನಲ್ಲಿ ಹರ್ಷಲ್ ಪಟೇಲ್ ಅವರು ಕೂಡ ಕ್ಯಾಚ್ ಕೊಟ್ಟು ಹೊರನಡೆದರು.

  • ಡೇಂಜರಸ್ ಬೀಮರ್- ಸೈನಿಯಿಂದ ಸಾರಿ ಹೇಳಿಸಿದ ಪಂತ್

    ಡೇಂಜರಸ್ ಬೀಮರ್- ಸೈನಿಯಿಂದ ಸಾರಿ ಹೇಳಿಸಿದ ಪಂತ್

    ದುಬೈ: ಐಪಿಎಲ್ 2020ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನವದೀಪ್ ಸೈನಿ ತಮ್ಮ ವೇಗ ಬೌಲಿಂಗ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಗಂಟೆಗೆ 147 ಕಿಮೀ ವೇಗದಲ್ಲಿ ಬೌಲ್ ಮಾಡುತ್ತಿರುವ ಸೈನಿ ಟೂರ್ನಿಯ ಫಾಸ್ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಆದರೆ ಪ್ರತಿ ಪಂದ್ಯದಲ್ಲಿ ಯಾರ್ಕರ್ ಎಸೆಯುವ ಸಂದರ್ಭದಲ್ಲಿ ಬೀಮರ್ ಎಸೆಯುವ ಮೂಲಕ ಸೈನಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಸೈನಿ ಡೇಂಜರಸ್ ಬೀಮರ್ ಎಸೆಯುವ ಮೂಲಕ ಎದುರಾಳಿ ತಂಡದ ಆಟಗಾರರು ಗರಂ ಆಗಲು ಕಾರಣರಾಗಿದ್ದರು. ಇನ್ನಿಂಗ್ಸ್ ನ 15ನೇ ಓವರ್ ಎಸೆತ ಸೈನಿ ಐದನೇ ಎಸೆತವನ್ನು ಫುಲ್ ಟಾಸ್ ರೂಪದಲ್ಲಿ ಬೀಮರ್ ಎಸೆದಿದ್ದರು. ಇದನ್ನು ಆನ್‍ಫೀಲ್ಡ್ ಅಂಪೈರ್ ನೋಬಾಲ್ ಎಂದು ಪ್ರಕಟಿಸಿದ್ದರು.

    ಸ್ಟ್ರೈಕ್‍ನಲ್ಲಿದ್ದ ಸ್ಟೋಯ್ನಿಸ್ ಸೋಂಟದ ಭಾಗಗಿಂತಲೂ ಎತ್ತರದಲ್ಲಿ ಬಂದ ಚೆಂಡನ್ನು ಎದುರಿಸುವ ಬರದಲ್ಲಿ ಕೈಗೆ ತಾಗಿ ಗಾಯವಾಗಿತ್ತು. ಸಾಮಾನ್ಯವಾಗಿ ಯಾವುದೇ ಬೌಲರ್ ಬೀಮರ್ ಎಸೆದ ಸಂದರ್ಭದಲ್ಲಿ ಕೂಡಲೇ ಬ್ಯಾಟ್ಸ್ ಮನ್ ಬಳಿ ಕ್ಷಮೆ ಕೇಳುತ್ತಾರೆ. ಆದರೆ ಸೈನಿ ಘಟನೆ ನಡೆದ ಬಳಿಕ ಯಾವುದೇ ರೀತಿ ಕ್ಷಮೆ ಕೇಳಿರಲಿಲ್ಲ. ಕ್ರಿಕೆಟ್ ವಿಶ್ಲೇಷಣೆ ನೀಡುತ್ತಿದ್ದ ವೀಕ್ಷಕ ವಿವರಣೆಗಾರ ಕೂಡ ಸೈನಿ ನಡೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು.

    ಸೈನಿ ನಡೆಯ ವಿರುದ್ಧ ಸೋಯ್ನಿಸ್ ಹಾಗೂ ನಾನ್‍ಸ್ಟ್ರೈಕ್‍ನಲ್ಲಿದ್ದ ಪಂತ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಓವರ್ ಮುಕ್ತಾಯದ ಬಳಿಕ ಪಂತ್, ಸ್ಟೋಯ್ನಿಸ್ ಬಳಿ ಕ್ಷಮೆ ಕೇಳುವಂತೆ ಸೈನಿಗೆ ಸೂಚಿಸಿದ್ದರು. ಈ ವೇಳೆ ಕೊನೆಗೂ ಸೈನಿ ಕ್ಷಮೆ ಕೋರಿದ್ದರು. ಇನ್ನಿಂಗ್ಸ್ ನ 17ನೇ ಓವರ್ ಬೌಲ್ ಮಾಡಲು ಮತ್ತೆ ಆಗಮಿಸಿದ ಸೈನಿ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ ಪಂತ್, ಸ್ಟೋಯ್ನಿಸ್ 18 ರನ್ ಸಿಡಿಸಿ ತಿರುಗೇಟು ನೀಡಿದ್ದರು. ಉಳಿದಂತೆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 59 ರನ್ ಗೆಲುವು ಪಡೆದಿತ್ತು.

    ಇದಕ್ಕೂ ಮುನ್ನ ಸೈನಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಬೀಮರ್ ಎಸೆದಿದ್ದರು. ಸೈನಿ ಬೀಮರ್ ಎದುರಿಸಿದ್ದ ಆಲ್‍ರೌಂಡರ್ ರಾಹುಲ್ ತೆವಾಟಿಯಾ ಕುಸಿದು ಬಿದಿದ್ದರು. ಆದರೆ ಅಂದು ಯಾವುದೇ ಪ್ರಮಾದ ನಡೆದಿರಲಿಲ್ಲ. ಇದರ ಬೆನಲ್ಲೇ ಮತ್ತೆ ಸೈನಿ ಬೀಮರ್ ಎಸೆದಿರುವುದು ಸಾಕಷ್ಟು ಮಂದಿಗೆ ಅಚ್ಚರಿ ತಂದಿದೆ.