Tag: Delhi Capitals

  • IPL 2025 | ಗೆಲುವಿನ ವಿದಾಯ ಹೇಳಿದ ಡೆಲ್ಲಿ ಕ್ಯಾಪಿಟಲ್ಸ್‌ – ಪಂಜಾಬ್‌ ವಿರುದ್ಧ 6 ವಿಕೆಟ್‌ಗಳ ಜಯ

    IPL 2025 | ಗೆಲುವಿನ ವಿದಾಯ ಹೇಳಿದ ಡೆಲ್ಲಿ ಕ್ಯಾಪಿಟಲ್ಸ್‌ – ಪಂಜಾಬ್‌ ವಿರುದ್ಧ 6 ವಿಕೆಟ್‌ಗಳ ಜಯ

    ಜೈಪುರ: ಸಂಘಟಿತ ಬೌಲಿಂಗ್‌ ಬ್ಯಾಟಿಂಗ್‌ ಪ್ರದರ್ಶನದ ನೆರವಿನೊಂದಿಗೆ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಆರು ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 18ನೇ ಆವೃತ್ತಿಗೆ ವಿದಾಯ ಹೇಳಿದೆ. ಆದ್ರೆ 13 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಪಡೆದಿರುವ ಪಂಜಾಬ್‌ 2ನೇ ಸ್ಥಾನ ಕಾಯ್ದುಕೊಂಡಿದೆ.

    ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ 66ನೇ ಐಪಿಎಲ್ (IPL 2025) ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟ್ ಬೀಸಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ಮೂಲಕ ಡೆಲ್ಲಿಗೆ 207 ರನ್‌ಗಳ ಗುರಿ ನೀಡಿತು. ಪಂಜಾಬ್ ತಂಡ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ ಗೆಲುವು ಸಾಧಿಸಿತು.

    ತಂಡದಿಂದ ಮೊದಲು ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಹಾಗೂ ಫಾಫ್ ಡುಪ್ಲೆಸಿಸ್ ಜೊತೆಯಾಟವಾಡಿ 33 ಎಸೆತಗಳಿಗೆ 55 ರನ್ ಗಳಿಸಿಕೊಟ್ಟರು. ಕೆಎಲ್ ರಾಹುಲ್ 21 ಎಸೆತಕ್ಕೆ 35 ರನ್ (6 ಬೌಂಡರಿ, 1 ಸಿಕ್ಸ್) ಗಳಿಸಿ ಮೊದಲ ವಿಕೆಟ್ ಒಪ್ಪಿಸಿದರೇ, ತಂಡದ ನಾಯಕ ಫಾಫ್ ಡುಪ್ಲೆಸಿಸ್ 15 ಎಸೆತಗಳಿಗೆ 23 ರನ್ (2 ಬೌಂಡರಿ, 1 ಸಿಕ್ಸ್) ಗಳಿಸಿ ಔಟಾದರು. ಸೇದಿಕುಲ್ಲಾ ಅಟಲ್ 16 (22) ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕರುಣ್ ನಾಯರ್ 27 ಎಸೆತಗಳಿಗೆ 44 ರನ್ (5 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ ಹಾಗೂ ಸಮೀರ್ ರಿಜ್ವಿ ಜೊತೆಯಾಟವಾಡಿ 30 ಎಸೆತಗಳಿಗೆ 62 ರನ್ ಗಳಿಸಿಕೊಟ್ಟು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರಿಜ್ವಿ 25 ಎಸೆತಗಳಿಗೆ 58 ರನ್ (3 ಬೌಂಡರಿ, 5 ಸಿಕ್ಸ್) ಗಳಿಸಿಕೊಟ್ಟು ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಮೊದಲಿಗೆ ಫೀಲ್ಡಿಗಿಳಿದ ಪಂಜಾಬ್ ತಂಡದ ಪ್ರಿಯಾಂಶ್ ಆರ್ಯ 9 ಎಸೆತಗಳಿಗೆ 6 ರನ್ (1 ಫೋರ್) ಗಳಿಸಿ ಔಟಾದರು. ಬಳಿಕ ಪ್ರಭಸಿಮ್ರನ್ ಸಿಂಗ್ ಹಾಗೂ ಜೋಶ್ ಇಂಗ್ಲಿಸ್ ಜೊತೆಯಾಟವಾಡಿ 21 ಎಸೆತಗಳಿಗೆ 47 ರನ್ ಸಿಡಿಸಿ ತಂಡವನ್ನು ಮುನ್ನಡೆಸಿದರು. ಜೋಶ್ ಇಂಗ್ಲಿಸ್ 12 ಎಸೆತಗಳಿಗೆ 32 ರನ್ (3 ಫೋರ್, 2 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು. ಪ್ರಭಸಿಮ್ರನ್ 18 ಎಸೆತಗಳಿಗೆ 28 ರನ್ (4 ಫೋರ್, 1 ಸಿಕ್ಸ್) ಗಳಿಸಿ ಔಟಾದರು. ಶಶಾಂಕ್ ಸಿಂಗ್ 10 (11) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗಿಳಿದ ತಂಡದ ನಾಯಕ ಶ್ರೇಯಸ್ ಅಯ್ಯರ್ 34 ಎಸೆತಗಳಿಗೆ 53 ರನ್ (5 ಫೋರ್, 2 ಸಿಕ್ಸ್) ಕಲೆಹಾಕಿ ಮಿಂಚಿದರು. ಶ್ರೇಯಸ್ ಐಯ್ಯರ್ ಹಾಗೂ ನೇಹಲ್ ವಧೇರಾ ಜೊತೆಯಾಟವಾಡಿ 28 ಎಸೆತಗಳಿಗೆ 41 ರನ್ ಗಳಿಸಿಕೊಟ್ಟರು. ನೇಹಲ್ ವಧೇರಾ 16 (16) ರನ್ ಗಳಿಸಿ ಔಟಾದರು. ಮಾರ್ಕಸ್ ಸ್ಟೊಯಿನಿಸ್ 16 ಬಾಲ್‌ಗಳಿಗೆ 44 ರನ್ (3 ಫೋರ್, 4 ಸಿಕ್ಸ್) ಹಾಗೂ ಹರ್‌ಪ್ರೀತ್ ಬ್ರಾರ್ 2 (7) ರನ್ ಗಳಿಸಿ ಅಜೇಯರಾಗಿ ಉಳಿದರು.

    ಡೆಲ್ಲಿ ಪರವಾಗಿ ಮುಸ್ತಾಫಿಜುರ್ ರಹಮಾನ್ 3 ವಿಕೆಟ್ ಕಿತ್ತರು. ವಿಪ್ರಾಜ್ ನಿಗಮ್ ಹಾಗೂ ಕುಲದೀಪ್ ಯಾದವ್ ತಲಾ ವಿಕೆಟ್ ಪಡೆದರು. ಮುಕೇಶ್ ಕುಮಾರು ಒಂದು ವಿಕೆಟ್ ಕಿತ್ತರು. ಪಂಜಾಬ್ ತಂಡದ ಪರ ಹರ್‌ಪ್ರೀತ್ ಬ್ರಾರ್ 2 ವಿಕೆಟ್ ಕಿತ್ತರೇ, ಮಾರ್ಕೋ ಜಾನ್ಸೆನ್ ಮತ್ತು ಪ್ರವೀಣ್ ದುಬೆ ತಲಾ ಒಂದು ವಿಕೆಟ್ ಕಿತ್ತರು.

  • ಡೆಲ್ಲಿಯಲ್ಲಿ ರೈಡರ್ಸ್‌ ಸವಾರಿ- ಕೋಲ್ಕತ್ತಾಗೆ 14 ರನ್‌ಗಳ ಜಯ

    ಡೆಲ್ಲಿಯಲ್ಲಿ ರೈಡರ್ಸ್‌ ಸವಾರಿ- ಕೋಲ್ಕತ್ತಾಗೆ 14 ರನ್‌ಗಳ ಜಯ

    ನವದೆಹಲಿ: ಕಳೆದ 2 ಪಂದ್ಯಗಳಲ್ಲಿ ಸತತ ಸೋಲುಕಂಡಿದ್ದ ಕೆಕೆಆರ್ ತಂಡ ಆಲ್‌ರೌಂಡರ್‌ ಆಟ ಪ್ರದರ್ಶಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 14 ರನ್‌ಗಳ ಜಯಗಳಿಸಿತು.

    ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತ್ತು. ನಂತರ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್‌ನಲ್ಲಿ 190ರನ್ ಗಳಿಸಿ ಕೆಕೆಆರ್ ತಂಡಕ್ಕೆ ಶರಣಾಯಿತು.

    205 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 45 ಬಾಲ್‌ಗೆ 62 ರನ್ (7 ಬೌಂಡರಿ, 2 ಸಿಕ್ಸ್) ಸಿಡಿಸುವ ಮೂಲಕ ಆಕರ್ಷಕ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಬ್ಯಾಟರ್‌ಗಳು ಕೆಕೆಆರ್ ಬೌಲರ್‌ಗಳ ದಾಳಿಗೆ ತತ್ತರಿಸಿದರು.

    ಕರುಣ್ ನಾಯರ್ ಕೇವಲ 15 ರನ್ ಗಳಿಸಿ ಔಟಾದರೆ, ಕನ್ನಡಿಗ ಕೆ.ಎಲ್ ರಾಹುಲ್ 7 ರನ್‌ಗಳಿಸಿ ರನೌಟ್‌ ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಬಳಿಕ ಬಂದ ತಂಡದ ನಾಯಕ ಅಕ್ಷರ್ ಪಟೇಲ್ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಶ್ರಮಿಸಿದರು. ಅಕ್ಷರ್ 23 ಬಾಲ್‌ಗೆ 43 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ವಿಪ್ರಜ್ ನಿಗಮ್ 19 ಬಾಲ್‌ಗೆ 38ರನ್ ಸಿಡಿಸಿದರು.

    ಸುನಿಲ್ ನರೈನ್ 3 ವಿಕೆಟ್ ಕಬಳಿಸಿದರೆ, ವರುಣ್ ಚಕ್ರವರ್ತಿ 2 ವಿಕೆಟ್‌ ಕಿತ್ತರು. ಅನುಕುಲ್ ರಾಯ್ ಹಾಗೂ ವೈಭವ್ ಅರೋರ ತಲಾ 1 ವಿಕೆಟ್ ಪಡೆಯುವ ಮೂಲಕ ಡೆಲ್ಲಿ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

    ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಕೆಕೆಆರ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಆರಂಭಿಕ ಆಟಗಾರರಾದ ರೆಹಮಾನುಲ್ಲ ಗುರ್ಬಾಜ್(26) ಮತ್ತು ಸುನಿಲ್ ನರೈನ್(27) ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು.

    ಬಳಿಕ ಬಂದ ನಾಯಕ ಅಜಿಂಕ್ಯ ರಹಾನೆ(26) ರನ್ ಕಲೆ ಹಾಕಿ ಔಟಾದರು. ಅಂಗ್‌ಕ್ರಿಶ್ ರಘುವಂಶಿ 32 ಬಾಲ್‌ಗೆ 44 ರನ್ (3 ಬೌಂಡರಿ, 2ಸಿಕ್ಸ್) ಬಾರಿಸುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ರಿಂಕು ಸಿಂಗ್ 36 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿದ ಆಂಡ್ರೆ ರಸೆಲ್(17) ತಂಡದ ಮೊತ್ತ 200ರ ದಾಟಿ ದಾಟುವಲ್ಲಿ ನೆರವಾದರು.

    ಡೆಲ್ಲಿ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ 3, ವಿಪ್ರಾಜ್ ನಿಗಮ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ವಿಕೆಟ್‌ಕಿತ್ತರು.

  • ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ; 6 ವಿಕೆಟ್‌ಗಳ ಅಮೋಘ ಜಯ – ನಂ.1 ಪಟ್ಟಕ್ಕೇರಿದ ಬೆಂಗಳೂರು

    ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಆರ್‌ಸಿಬಿ; 6 ವಿಕೆಟ್‌ಗಳ ಅಮೋಘ ಜಯ – ನಂ.1 ಪಟ್ಟಕ್ಕೇರಿದ ಬೆಂಗಳೂರು

    ನವದೆಹಲಿ: ಕೃನಾಲ್‌ ಪಾಂಡ್ಯ (Krunal Pandya), ವಿರಾಟ್‌ ಕೊಹ್ಲಿ (Virat Kohli) ಶತಕದ ಜೊತೆಯಾಟ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

    ಸೂಪರ್‌ ಸಂಡೇ ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಹೈವೋಲ್ಟೇಜ್‌ ಪಂದ್ಯ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಏಕೆಂದರೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಗೆದ್ದಾಗ ಕೆ.ಎಲ್‌ ರಾಹುಲ್‌ ಸಂಭ್ರಮಿಸಿದ ರೀತಿ ಇದಕ್ಕೆ ಕಾರಣವಾಗಿತ್ತು. ಅಂದಿನಿಂದಲೇ ಕೊಹ್ಲಿ ಸೇಡು ತೀರಿಸಿಕೊಳ್ಳಲಿದ್ದಾರೆ ಅನ್ನೋ ಪೋಸ್ಟರ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೆಂಡಿಂಗ್‌ನಲ್ಲಿತ್ತು. ಇದೀಗ ಆರ್‌ಸಿಬಿ ಗೆಲುವು ಅಭಿಮಾನಿಗಳ ಪಾಲಿಗೆ ಬಹುದೊಡ್ಡ ಗೆಲುವಾಗಿದೆ. ಅಲ್ಲದೇ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದು, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದೆ.

    ಗೆಲುವಿಗೆ 163 ರನ್‌ಗಳ ಗುರಿ ಪಡೆದ ಆರ್‌ಸಿಬಿ ಪವರ್‌ ಪ್ಲೇ ನಲ್ಲೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮೊದಲ 4 ಓವರ್‌ಗಳಲ್ಲಿ 26 ರನ್‌ಗಳಿಗೆ ಜಾಕೋಬ್‌ ಬೇಥಲ್‌ (12 ರನ್‌), ರಜತ್‌ ಪಾಟೀದಾರ್‌ (6 ರನ್‌), ದೇವದತ್‌ ಪಡಿಕಲ್‌ (0) ವಿಕೆಟ್‌ ಕಳೆದುಕೊಂಡು ಆರ್‌ಸಿಬಿ ಸಂಕಷ್ಟಕ್ಕೀಡಾಯಿತು. 10 ಓವರ್‌ ಕಳೆದರೂ 100 ರನ್‌ಗಳ ಗಡಿ ದಾಟದ ಆರ್‌ಸಿಬಿ ಪಂದ್ಯ ಗೆಲ್ಲುವುದು ಅನುಮಾನ ಎಂದೇ ಹೇಳಲಾಗುತ್ತಿತ್ತು. ಆದ್ರೆ ವಿರಾಟ್‌ ಕೊಹ್ಲಿ ಹಾಗೂ ಕೃನಾಲ್‌ ಪಾಂಡ್ಯ ಅವರ ಶತಕದ ಜೊತೆಯಾಟ ತಂಡದ ಗೆಲುವಿನ ಹಾದಿಯನ್ನು ಸುಗಮವಾಗಿಸಿತು.

    4ನೇ ವಿಕೆಟಿಗೆ ಕೃನಾಲ್‌ ಪಾಂಡ್ಯ, ವಿರಾಟ್‌ ಕೊಹ್ಲಿ ಜೋಡಿ 84 ಎಸೆತಗಳಲ್ಲಿ 119 ರನ್‌ಗಳ ಜೊತೆಯಾಟ ನೀಡಿತು. ಇದು ತಂಡದ ಗೆಲುವಿಗೆ ಕಾರಣವಾಯಿತು. ಇನ್ನೂ ಕೊನೆಯಲ್ಲಿ ಟಿಮ್‌ ಡೇವಿಡ್‌ ಅವರ ಸಿಕ್ಸರ್‌ ಬೌಂಡರಿ ಆಟದಿಂದ ಆರ್‌ಸಿಬಿಗೆ ಗೆಲುವು ಸುಲಭವಾಯಿತು. ಆರ್‌ಸಿಬಿ ಪರ ಕೃನಾಲ್‌ ಪಾಂಡ್ಯ ಅಜೇಯ 73 ರನ್‌ (47 ಎಸೆತ, 5 ಬೌಂಡರಿ, 4 ಸಿಕ್ಸರ್)‌, ವಿರಾಟ್‌ ಕೊಹ್ಲಿ 51 ರನ್‌ (47 ಎಸೆತ, 4 ಬೌಂಡರಿ) ಗಳಿಸಿದ್ರೆ, ಟಿಮ್‌ ಡೇವಿಡ್‌ 5 ಎಸೆತಗಳಲ್ಲಿ 19 ರನ್‌ ಗಳಿಸಿ ಮಿಂಚಿದರು.

    ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ಆರಂಭವನ್ನೇ ಪಡೆಯಿತು. ಅಭಿಷೇಕ್ ಪೊರೇಲ್ 28 ಮತ್ತು ಫಫ್ ಡುಪ್ಲೆಸಿ 22 ರನ್ ಸಿಡಿಸಿದರು. ಕರುಣ್ ನಾಯರ್ 4 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಉತ್ತಮವಾಗಿ ಆಡಿದ ಕೆ.ಎಲ್. ರಾಹುಲ್ 41 (39 ಎಸೆತ) ರನ್‌ಗಳ ಕೊಡುಗೆ ನೀಡಿದರು. ಒಂದು ಹಂತದಲ್ಲಿ 200ರ ಸಮೀಪಕ್ಕೆ ತಲುಪಬಹುದು ಎನ್ನುವಂತಿದ್ದ ರನ್ ಗತಿ ಆರ್‌ಸಿಬಿ ಬೌಲರ್‌ಗಳ ಬಿಗಿ ಹಿಡಿತಕ್ಕೆ ರನ್‌ ಕದಿಯಲು ತಿಣುಕಾಡುತ್ತಾ ಸಾಗಿತು. ಅತ್ತ ರನ್‌ ಬರದ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತೊಂದೆಡೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತು. ಆದ್ರೆ ಕೊನೆಯಲ್ಲಿ ಅಬ್ಬರಿಸಿದ ಟ್ರಿಸ್ಟನ್‌ ಸ್ಟಬ್ಸ್‌ 18 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಡೆಲ್ಲಿ 163 ರನ್‌ಗಳ ಗುರಿ ನೀಡಲು ನೆರವಾದರು.

    ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 33 ರನ್ ನೀಡಿ 3 ವಿಕೆಟ್ ಕಿತ್ತರೆ, ಹೇಜಲ್ವುಡ್‌ 36 ರನ್ ನೀಡಿ 2 ವಿಕೆಟ್ ಪಡೆದರು.

    ರಾಹುಲ್‌ vs ಕೊಹ್ಲಿ:
    ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿಯನ್ನು ಸೋಲಿಸಿತ್ತು. ಆಗ ಗೆಲುವಿನ ರುವಾರಿಯಾಗಿದ್ದ ಕೆ.ಎಲ್ ರಾಹುಲ್ ಅವರು, ʻಇದು ನನ್ನ ಗ್ರೌಂಡ್‌ʼ ಎಂದು ʻಕಾಂತಾರʼ ಚಲನಚಿತ್ರದ ದೃಶ್ಯದ ಮಾದರಿಯನ್ನು ಅನುಕರಿಸಿದ್ದರು. ಇದೀಗ ಗೆದ್ದು ಆರ್‌ಸಿಬಿ ಸೋಲಿಗೆ ಸೇಡು ತೀರಿಸಿಕೊಂಡಿದೆ.

  • ರಾಹುಲ್‌, ಪೋರೆಲ್‌ ಅಮೋಘ ಫಿಫ್ಟಿ – ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು

    ರಾಹುಲ್‌, ಪೋರೆಲ್‌ ಅಮೋಘ ಫಿಫ್ಟಿ – ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು

    – ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದ ಲಕ್ನೋ ಸೂಪರ್‌ ಜೈಂಟ್ಸ್‌

    ನವದೆಹಲಿ: ಅಭಿಷೇಕ್‌ ಪೊರೆಲ್‌ (Abishek Porel) ಹಾಗೂ ಕೆಎಲ್‌ ರಾಹುಲ್‌ (KL Rahul) ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೆಂಟ್ಸ್‌ (Lucknow Super Giants) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) 8 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿದ್ದರೆ, ಲಕ್ನೋ ತಂಡ 5ನೇ ಸ್ಥಾನಕ್ಕೆ ಕುಸಿದಿದೆ.

    ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ ಜೆಂಟ್ಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಲಕ್ನೋ ನೀಡಿದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ 17.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿ ಗೆಲುವು ಸಾಧಿಸಿದೆ.ಇದನ್ನೂ ಓದಿ: ಜಾತಿ‌ ಜನಗಣತಿ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲಿ: ಸಿ.ಟಿ ರವಿ ಆಗ್ರಹ

    ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಪರ ಕರುಣ್‌ ನಾಯರ್‌ 9 ಎಸೆತಗಳಲ್ಲಿ 15, ಅಭಿಷೇಕ್‌ ಪೊರೆಲ್‌ 36 ಎಸೆತಗಳಲ್ಲಿ 51, ಕೆಎಲ್‌ ರಾಹುಲ್‌ ಔಟಾಗದೇ 42 ಎಸೆತಗಳಲ್ಲಿ 57 ರನ್‌, ಅಕ್ಷರ್‌ ಪಟೇಲ್‌ ಔಟಾಗದೇ 20 ಎಸೆತಗಳಲ್ಲಿ 34 ರನ್‌ಗಳಿಸಿತು. ಲಕ್ನೋ ಪರ ಏಡನ್‌ ಮಾರ್ಕ್ರಮ್‌ 2 ವಿಕೆಟ್‌ ಕಬಳಿಸಿದರು.

    ಲಕ್ನೋ ಸೂಪರ್‌ ಜೆಂಟ್ಸ್‌ ಪರ ಏಡನ್‌ ಮಾರ್ಕ್ರಮ್‌ 33 ಎಸೆತಗಳಲ್ಲಿ 52, ಮಿಚೆಲ್‌ ಮಾರ್ಷ್‌ 36 ಎಸೆತಗಳಲ್ಲಿ 45, ಆಯುಷ್‌ ಬಡೋನಿ 21 ಎಸೆತಗಳಲ್ಲಿ 36 ಹಾಗೂ ಡೇವಿಡ್‌ ಮಿಲ್ಲರ್‌ ಔಟಾಗದೇ 15 ಎಸೆತಗಳಲ್ಲಿ 14 ರನ್‌ಗಳಿಸಿ, 160 ರನ್‌ಗಳ ಗೆಲುವಿನ ಗುರಿ ನೀಡುವಲ್ಲಿ ನೆರವಾದರು.

    ಡೆಲ್ಲಿ ಪರ ಮುಖೇಶ್‌ ಕುಮಾರ್‌ 4, ಮಿಚೆಲ್‌ ಸ್ಟಾರ್ಕ್‌ ಹಾಗೂ ದುಷ್ಮಂತ ಚಮೀರ ತಲಾ 1 ವಿಕೆಟ್‌ ಕಬಳಿಸಿದರು.ಇದನ್ನೂ ಓದಿ: ಕಾಂಗ್ರೆಸ್ಸಿಗರಿಂದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ, ಇದು ಜಾಹೀರಾತಿನ ಸರ್ಕಾರ: ಬಿವೈವಿ

  • ಬಟ್ಲರ್‌ ಬೆಂಕಿಯಾಟಕ್ಕೆ ಗುಜರಾತ್‌ನಲ್ಲಿ ಡೆಲ್ಲಿ ಬರ್ನ್‌!

    ಬಟ್ಲರ್‌ ಬೆಂಕಿಯಾಟಕ್ಕೆ ಗುಜರಾತ್‌ನಲ್ಲಿ ಡೆಲ್ಲಿ ಬರ್ನ್‌!

    ಅಹಮದಾಬಾದ್‌: ಜೋಸ್‌ ಬಟ್ಲರ್‌ (Jos Buttler) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ (Gujarat Titans) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 8 ವಿಕೆಟ್‌ ನಷ್ಟಕ್ಕೆ 203 ರನ್‌ ಹೊಡೆಯಿತು. ಕಠಿಣ ಮೊತ್ತವಾದರೂ ಇನ್ನೂ 4 ಎಸೆತ ಬಾಕಿ ಇರುವಂತೆ ಗುಜರಾತ್‌ 3 ವಿಕೆಟ್‌ ಕಳೆದುಕೊಂಡು 204 ರನ್‌ ಹೊಡೆದು ಜಯಗಳಿಸಿತು.

    ನಾಯಕ ಶುಭಮನ್‌ ಗಿಲ್‌ 7 ರನ್‌ ಗಳಿಸಿ ಔಟಾದಾಗ ಗುಜರಾತ್‌ಗೆ ಆರಂಭದಲ್ಲೇ ಹಿನ್ನಡೆಯಾಗಿತ್ತು. ಎರಡನೇ ವಿಕೆಟಿಗೆ ಸಾಯಿ ಸುದರ್ಶನ್‌ ಮತ್ತು ಬಟ್ಲರ್‌ 35 ಎಸೆತಗಳಲ್ಲಿ 60 ರನ್‌ ಹೊಡೆಯುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಸಾಯಿ ಸುದರ್ಶನ್‌ 36 ರನ್‌ (21 ಎಸೆತ, 5 ಬೌಂಡರಿ, 1 ಸಿಕ್ಸ್‌ )ಸಿಡಿಸಿ ಔಟಾದರು.

    ಮೂರನೇ ವಿಕೆಟಿಗೆ ಬಟ್ಲರ್‌ ಮತ್ತು ರುದರ್‌ರ್ಫೋರ್ಡ್‌ 69 ಎಸೆತಗಳಲ್ಲಿ 119 ರನ್‌ ಚಚ್ಚುವಾಗಲೇ ಗುಜರಾತ್‌ ಗೆಲುವು ಖಚಿತವಾಯಿತು.

    ಕೊನೆಯಲ್ಲಿ ಸಿಕ್ಸ್‌ ಸಿಡಿಸಲು ಹೋಗಿ ರುದರ್‌ಫೋರ್ಡ್‌ 43 ರನ್‌(34 ಎಸೆತ, 1 ಬೌಂಡರಿ, 3 ಸಿಕ್ಸ್‌) ಹೊಡೆದು ಔಟಾದರು. ನಂತರ ಬಂದ ತವಾಟಿಯಾ ಔಟಾಗದೇ 11 ರನ್‌ (3 ಎಸೆತ, 1 ಬೌಂಡರಿ, 1 ಸಿಕ್ಸ್‌) ಸಿಡಿಸಿ ಜಯವನ್ನು ತಂದುಕೊಟ್ಟರು. ಬಟ್ಲರ್‌ಗೆ ಶತಕ ಕೈ ತಪ್ಪಿದರೂ ಅಜೇಯ 97 ರನ್‌(54 ಎಸೆತ, 11 ಬೌಂಡರಿ, 4 ಸಿಕ್ಸ್‌) ಹೊಡೆಯುವ ಮೂಲಕ ತಂಡದ ಜಯದಲ್ಲಿ ಪ್ರದಾನ ಪಾತ್ರ ವಹಿಸಿದರು.


    ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಪರ ನಾಯಕ ಅಕ್ಷರ್‌ ಪಟೇಲ್‌ 39 ರನ್‌ (22 ಎಸೆತ, 1 ಬೌಂಡರಿ, 2 ಸಿಕ್ಸ್‌), ಅಶುತೋಶ್‌ ಶರ್ಮಾ 37 ರನ್‌ (19 ಎಸೆತ, 2 ಬೌಂಡರಿ, 3 ಸಿಕ್ಸ್)‌ ಕೆಎಲ್‌ ರಾಹುಲ್‌ 28 ರನ್‌(14 ಎಸೆತ, 4 ಬೌಂಡರಿ, 1 ಸಿಕ್ಸ್‌) ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಗುಜರಾತ್‌ ಪರ ಪ್ರಸಿದ್ಧ್‌ ಕೃಷ್ಣ 4 ವಿಕೆಟ್‌ ಕಿತ್ತರು.

  • ಸ್ಟಾರ್ಕ್ ಮ್ಯಾಜಿಕ್‌, ಸೂಪರ್‌ ಓವರ್‌ನಲ್ಲಿ ಗೆದ್ದ ಡೆಲ್ಲಿ – ಪಂದ್ಯ ಟೈ ಆಗಿದ್ದು ಹೇಗೆ?

    ಸ್ಟಾರ್ಕ್ ಮ್ಯಾಜಿಕ್‌, ಸೂಪರ್‌ ಓವರ್‌ನಲ್ಲಿ ಗೆದ್ದ ಡೆಲ್ಲಿ – ಪಂದ್ಯ ಟೈ ಆಗಿದ್ದು ಹೇಗೆ?

    ನವದೆಹಲಿ: ಮಿಚೆಲ್‌ ಸ್ಟಾರ್ಕ್ ಮ್ಯಾಜಿಕ್‌ ಬೌಲಿಂಗ್‌ ನೆರವಿನಿಂದ ಸೂಪರ್‌ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ರಾಜಸ್ಥಾನ ರಾಯಲ್ಸ್‌ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲೂ ಗೆದ್ದು ಬೀಗಿದೆ.

    ಸೂಪರ್‌ ಓವರ್‌ ಹೇಗಿತ್ತು?
    ರಾಜಸ್ಥಾನ ಪರ ಹೆಟ್ಮೇಯರ್ ಮತ್ತು ಪರಾಗ್‌ ಕ್ರೀಸ್‌ಗೆ ಆಗಮಿಸಿದರು. ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್‌ ಬಂದಿಲ್ಲ, ಎರಡನೇ ಎಸೆತದಲ್ಲಿ ಬೌಂಡರಿ ಹೊಡೆದ ಹೆಟ್ಮೇಯರ್‌ ಮೂರನೇ ಎಸೆತದಲ್ಲಿ ಒಂದು ರನ್‌ ತೆಗೆದರು. 4 ಎಸೆತವನ್ನು ಪರಾಗ್‌ ಬೌಂಡರಿಗೆ ಅಟ್ಟಿದ್ದರು. ಆದರೆ ಈ ಎಸೆತ ನೋಬಾಲ್‌ ಆಗಿತ್ತು. ಮರು ಎಸೆತದಲ್ಲಿ ಯಾವುದೇ ರನ್‌ ಬಂದಿಲ್ಲ. ಆದರೆ ಹೆಟ್ಮೇಯರ್‌ ಓಡಿದ್ದರಿಂದ ಪರಾಗ್‌ ರನೌಟ್‌ ಆದರು. 5ನೇ ಎಸತದಲ್ಲಿ ಹೆಟ್ಮೆಯರ್‌ 2 ರನ್‌ ಕದಿಯಲು ಮುಂದಾಗಿದ್ದರು. ಆದರೆ 2 ರನ್‌ ಓಡುವ ವೇಳೆ ಜೈಸ್ವಾಲ್‌ ರನೌಟ್‌ ಆದರು. ಎರಡು ವಿಕೆಟ್‌ ಪತನಗೊಂಡ ಪರಿಣಾಮ ರಾಜಸ್ಥಾನದ ಇನ್ನಿಂಗ್ಸ್‌ 11 ರನ್‌ಗಳಿಗೆ ಅಂತ್ಯವಾಯಿತು.

    ಡೆಲ್ಲಿ ಪರ ಕ್ರೀಸ್‌ಗೆ ರಾಹುಲ್‌ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಬಂದಿದ್ದರು. ಸಂದೀಪ್‌ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್‌ 2 ರನ್‌, ಎರಡನೇ ಎಸೆತದಲ್ಲಿ 4 ರನ್‌, ಮೂರನೇ ಎಸೆತದಲ್ಲಿ ಒಂದು ರನ್‌ ಓಡಿದರು. 4ನೇ ಎಸೆತವನ್ನು ಸ್ಟಬ್ಸ್ ಸಿಕ್ಸ್‌ಗೆ ಅಟ್ಟುವ ಮೂಲಕ ಡೆಲ್ಲಿ ತಂಡಕ್ಕೆ ರೋಚಕ ಜಯವನ್ನು ತಂದುಕೊಟ್ಟರು.

    ಟೈ ಆಗಿದ್ದು ಹೇಗೆ?
    ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ (Rajasthan Royals) ಗೆಲುವಿಗೆ 9 ರನ್‌ ಬೇಕಿತ್ತು. ಆದರೆ ಮಿಚೆಕ್‌ ಮಿಚೆಲ್ ಸ್ಟಾರ್ಕ್ ಕೇವಲ 8 ರನ್‌ ನೀಡಿದ್ದರಿಂದ ಪಂದ್ಯ ಟೈನಲ್ಲಿ ಅಂತ್ಯವಾಯಿತು.

    ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ಓವರ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸುವ ಮೂಲಕ ಮ್ಯಾಚ್‌ ಟೈ ಆಗುವ ಮೂಲಕ ಪಂದ್ಯ ರೋಚಕ ಘಟಕ್ಕೆ ತಿರುಗಿತು ಇದನ್ನೂ ಓದಿ: ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಕರಿನೆರಳು | ಹೈದರಾಬಾದ್‌ ಉದ್ಯಮಿ ಸಂರ್ಪಕಿಸಿದ್ರೆ ಕೂಡ್ಲೇ ತಿಳಿಸಿ – ಆಟಗಾರರಿಗೆ ವಾರ್ನಿಂಗ್‌

    ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್ 5 ಬಾಲ್‌ಗೆ 9 ರನ್‌ ಹೊಡೆದು ಪೆವಿಲಿಯನ್‌ ಸೇರಿದರು. ಬಳಿಕ ಬಂದ ಕರುಣ್‌ ನಾಯರ್‌ ರನ್‌ ಔಟ್‌ ಆಗುವ ಮೂಲಕ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದರು. ನಂತರ ಕ್ರೀಸ್‌ಗಿಳಿದ ಕನ್ನಡಿಗ ಕೆ ಎಲ್‌ ರಾಹುಲ್‌ ಹಾಗೂ ಅಭಿಷೇಕ್‌ ಪೋರೆಲ್‌ 57 ಎಸೆತಗಳಲ್ಲಿ 63 ರನ್ ಜೊತೆಯಾಟವಾಡಿದರು. 38 ರನ್‌ ಕಲೆ ಹಾಕಿದ ಕೆ ಎಲ್‌ ರಾಹುಲ್‌, ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಯುವ ಆಟಗಾರ ಅಭಿಷೇಕ್‌ ಪೊರೆಲ್‌ 49 ರನ್‌ಗೆ ಔಟ್‌ ಆಗುವ ಮೂಲಕ ಅರ್ಧಶತಕ ಬಾರಿಸುವಲ್ಲಿ ವಿಫಲರಾದರು.

    105 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ನಾಯಕ ಅಕ್ಸರ್‌ ಪಟೇಲ್‌ ಆಸರೆಯಾದರು. ಈ ಜೋಡಿ 19 ಎಸೆತಗಳಲ್ಲಿ 41 ರನ್‌ ಕಲೆ ಹಾಕುವ ಮೂಲಕ ತಂಡ ಮೊತ್ತವನ್ನು ಹೆಚ್ಚಿಸಿದರು ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 34 ರನ್ ಬಾರಿಸಿ ಔಟಾದರು. ಟ್ರಿಸ್ಟಾನ್ ಸ್ಟಬ್ಸ್ ಅಜೇಯ 34 ರನ್‌ ಗಳಿಸಿದರು. ಬಳಿಕ ಬ್ಯಾಟಿಂಗ್‌ ಮಾಡಿದ ಅಶುತೋಷ್‌ ಶರ್ಮಾ ಅಜೇಯ 15 ರನ್‌ ಬಾರಿಸಿ ತಂಡಕ್ಕೆ ಕೊಡುಗೆ ನೀಡಿದರು.

    ರಾಜಸ್ಥಾನ ಪರ ಜೋಫ್ರಾ ಆರ್ಚರ್ 2 ವಿಕೆಟ್‌ ಉರುಳಿಸಿದರು. ಉಳಿದಂತೆ ಮಹೇಶ್ ತೀಕ್ಷಣ್, ವನಿಂದು ಹಸರಂಗಾ ತಲಾ ಒಂದು ವಿಕೆಟ್‌ಗಳಿಸಿದರು.

    ಡೆಲ್ಲಿ ನೀಡಿದ 189 ರನ್‌ ಗುರಿ ಬೆನ್ನಟ್ಟಿದ ರಾಜಸ್ಥಾನ್‌ ಆರಂಭಿಕ ಬ್ಯಾಟ್ಸ್‌ಮೆನ್‌ ಯಶಸ್ವಿ ಜೆಸ್ವಾಲ್‌ ಮತ್ತು ನಾಯಕ ಸಂಜು ಸ್ಯಾಮ್ಸನ್‌ 34 ಬಾಲ್‌ಗೆ 61 ರನ್‌ ಜೊತೆಯಾಟವಾಡುವ ಮೂಲಕ ಡೆಲ್ಲಿ ಬೌಲರ್ಸ್‌ಗಳ ಬೆವರಿಳಿಸಿದರು. ಸಂಜು 19 ಬಾಲ್‌ಗೆ 31 ರನ್‌ ಗಳಿಸಿ ಗಾಯಗೊಂಡ ಬಳಿಕ ನಿವೃತ್ತಿಗೊಂಡರು.

    ರಿಯಾನ್‌ ಪರಾಗ್‌ 8 ರನ್‌ ಗಳಿಸಿ ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಜೆಸ್ವಾಲ್‌ ಹಾಗೂ ನಿತೀಶ್‌ ರಾಣಾ ತಲಾ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ದು ಓಟಾದರು. 17 ರನ್‌ ಗೆ ಜುರೇಲ್‌ 26 ರನ್‌ ಗಳಿಸಿ ಕೊನೆಯ ಬಾಲ್‌ನಲ್ಲಿ ರನ್‌ ಔಟಾದರು. ಹೆಟ್ಮೇಯರ್‌ 15 ರನ್‌ ಗಳಿಸುವ ಅಜೇಯರಾಗಿ ಉಳಿದರು.

  • `ಕಾಂತಾರ’ ನನ್ನ ಫೆವರಿಟ್ ಸಿನಿಮಾ, ಅದರಲ್ಲಿರುವಂತೆ ಮಾಡಿದೆ – ಆರ್‌ಸಿಬಿ ವಿರುದ್ಧ ಗೆದ್ದು ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ ಕೆಎಲ್ ರಾಹುಲ್

    `ಕಾಂತಾರ’ ನನ್ನ ಫೆವರಿಟ್ ಸಿನಿಮಾ, ಅದರಲ್ಲಿರುವಂತೆ ಮಾಡಿದೆ – ಆರ್‌ಸಿಬಿ ವಿರುದ್ಧ ಗೆದ್ದು ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ ಕೆಎಲ್ ರಾಹುಲ್

    ಬೆಂಗಳೂರು: ಗುರುವಾರ ನಡೆದ ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಗೆಲುವು ಸಾಧಿಸಿತ್ತು. ಗೆಲುವಿನ ಸಂಭ್ರಮದಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಇದೀಗ `ಕಾಂತಾರ’ (Kantara) ನನ್ನ ಫೆವರಿಟ್ ಸಿನಿಮಾ. ಸಿನಿಮಾದಲ್ಲಿರುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

    ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 163 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ 17.5 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆಲುವು ಸಾಧಿಸಿತ್ತು. ಡೆಲ್ಲಿ ಪರ ಆಡಿದ ಕೆಎಲ್ ರಾಹುಲ್ ಅಜೇಯರಾಗಿ 53 ಎಸೆತಗಳಲ್ಲಿ ಭರ್ಜರಿ 93 ರನ್ ಗಳಿಸಿದ್ದರು.ಇದನ್ನೂ ಓದಿ: It Is My Territory – ಉಗ್ರಂ ಶೈಲಿಯಲ್ಲಿ ವೃತ್ತ ಬರೆದು ರಾಹುಲ್‌ ಸಂಭ್ರಮ

    ಗೆಲುವಿನ ಸಂಭ್ರಮದಲ್ಲಿದ್ದ ಕೆಎಲ್ ರಾಹುಲ್ ಬ್ಯಾಟ್‌ನಿಂದ ಸುತ್ತು ಗೆರೆ ಎಳೆದು, ಬ್ಯಾಟ್ ಅನ್ನು ಗೆರೆ ನಡುವೆ ನೆಲಕ್ಕೆ ಗುದ್ದಿ ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದಲ್ಲದೇ ಚರ್ಚೆಗೆ ಗ್ರಾಸವಾಗಿತ್ತು.

    ಇದೀಗ ಹೊಸ ಸ್ಟೈಲ್‌ ಹಿಂದಿನ ಕಾರಣವನ್ನು ಬಿಚ್ಚಿಟ್ಟಿರುವ ಕೆಎಲ್ ರಾಹುಲ್, ಇದು ನನಗೆ ವಿಶೇಷವಾದ ಜಾಗ, ಕಾಂತಾರ ಸಿನಿಮಾ ನೆನಪಿಸಿಕೊಂಡೆ. ನಾನು ಸಿನಿಮಾ ನೋಡಿದ್ದೇನೆ. ಸಿನಿಮಾದ ದೃಶ್ಯವೊಂದು ನನ್ನೊಳಗೆ ಹಾಗೆಯೇ ಇದೆ. ಪಂದ್ಯದಲ್ಲಿ ಗೆದ್ದಾಗ ನನಗೆ ಆ ಸಿನಿಮಾದ ದೃಶ್ಯ ನೆನಪಾಯಿತು. ಹಾಗಾಗಿ ನಾನು ಅದೇ ರೀತಿ ಮಾಡಿದೆ. ಅದು ನನ್ನ ನೆಚ್ಚಿನ ಸಿನಿಮಾ. ಈ ಕ್ರೀಡಾಂಗಣ, ಈ ನೆಲ ಇದೆಲ್ಲ ನಾನು ಹುಟ್ಟಿ ಬೆಳೆದ ಜಾಗ. ಇದೆಲ್ಲ ನನ್ನದು ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: RCB | ಪಾಟಿದಾರ್‌ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ – ಡಿಕೆಗೆ ಕೊಹ್ಲಿ ದೂರು?

  • RCB | ಪಾಟಿದಾರ್‌ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ – ಡಿಕೆಗೆ ಕೊಹ್ಲಿ ದೂರು?

    RCB | ಪಾಟಿದಾರ್‌ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ – ಡಿಕೆಗೆ ಕೊಹ್ಲಿ ದೂರು?

    ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೂರು ಐತಿಹಾಸಿಕ ಗೆಲುವು ಕಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ತವರಿನಲ್ಲಿ ನಡೆದ ಎರಡೂ ಪಂದ್ಯಗಳಲ್ಲೂ ಹೀನಾಯ ಸೋಲು ಕಂಡಿದೆ. ಆದ್ರೆ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ತಂಡದಲ್ಲೇ ಆಂತರಿಕ ಕಲಹ ಉಂಟಾಗಿದೆ ಅನ್ನೋ ವದಂತಿ ಹೆಚ್ಚು ಸದ್ದು ಮಾಡುತ್ತಿದೆ.

    ಹೌದು. ಚೇಸಿಂಗ್‌ ವೇಳೆ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಆರ್‌ಸಿಬಿ ಆರಂಭದಲ್ಲಿ ಪ್ರಬಲ ಪೈಪೋಟಿ ನೀಡಿತ್ತು. 4.3 ಓವರ್‌ಗಳಲ್ಲಿ 30 ರನ್‌ಗಳಿಗೆ 3 ವಿಕೆಟ್‌, 58 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಆರ್‌ಸಿಬಿ ಪಡೆದುಕೊಂಡಿತ್ತು. ಆ ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಕೆ.ಎಲ್‌ ರಾಹುಲ್‌ (KL Rahul_ ಮತ್ತು ಟ್ರಿಸ್ಟನ್‌ ಸ್ಟಬ್ಸ್‌ ಮುರಿಯದ 5ನೇ ವಿಕೆಟ್‌ಗೆ 55 ಎಸೆತಗಳಲ್ಲಿ ಸ್ಫೋಟಕ 111 ರನ್‌ಗಳ ಜೊತೆಯಾಟ ನೀಡುವ ಮೂಲಕ ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಪಂದ್ಯ ಕೊನೆಯ ಹಂತದಲ್ಲಿರುವಾಗ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್‌ ಕೋಚ್‌ ದಿನೇಶ್ ಕಾರ್ತಿಕ್ (Dinesh Karthik) ಅವರೊಂದಿಗೆ ಕೋಪ ಮತ್ತು ಬೇಸರಿಂದ ಗಾಢ ಚರ್ಚೆಯಲ್ಲಿ ತೊಡಗಿದ್ರು, ಫೀಲ್ಡ್‌ ಸೆಟ್‌ನತ್ತ ಕೈತೋರಿಸುತ್ತಾ ಮಾತನಾಡುತ್ತಿದ್ದರು. ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್‌ ಚಚ್ಚಿದ ಸಾಲ್ಟ್‌ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್‌

    ಅಲ್ಲದೇ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೇ ರಜತ್‌ ಪಾಟಿದಾರ್‌ (Rajat Patidar) ನಾಯಕತ್ವದ ಬಗ್ಗೆ ಕೊಹ್ಲಿ ಅತೃಪ್ತರಾಗಿದ್ದಾರೆ ಎಂಬ ವದಂತಿಗಳು ಸದ್ದು ಮಾಡತೊಡಗಿದೆ. ವಿಡಿಯೋದಲ್ಲಿ, ಕೊಹ್ಲಿ, ನಾಯಕನ ಕೆಲವು ನಿರ್ಧಾರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಕಾಮೆಂಟೇಟರ್ ಆಕಾಶ್ ಚೋಪ್ರಾ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಮಾತನಾಡಿದರು. ಕೊಹ್ಲಿಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾಯಕ ಪಾಟಿದಾರ್ ಅವರಿಗೆ ಹೇಳಬೇಕು, ಏಕೆಂದರೆ ಈಗ ಕೊಹ್ಲಿ ತಂಡದ ನಾಯಕನಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: RCBvsDC | ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ – 8 ಮಂದಿ ಸಿಸಿಬಿ ಬಲೆಗೆ

    ಅಲ್ಲದೇ ಈ ಬಗ್ಗೆ ಕ್ರಿಕೆಟ್‌ ತಜ್ಞರು ಹಾಗೂ ಕ್ರಿಕೆಟ್‌ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚಿಸುತ್ತಾ, ಕೊಹ್ಲಿ ನಾಯಕನ ನಿರ್ಧಾರಗಳಿಂದ ಕೋಪಗೊಂಡಿದ್ದಾರೆ. ದಿನೇಶ್‌ ಕಾರ್ತಿಕ್‌ ಅವರೊಂದಿಗೆ ಬೌಲಿಂಗ್ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ ಸ್ಟೆಟರ್ಜಿಕ್‌ ಟೈಮ್‌ ವೇಳೆ ಕೊಹ್ಲಿ ಕೆಲವು ನಿರ್ಧಾರಗಳ ಬಗ್ಗೆ ಕಾರ್ತಿಕ್, ಅನುಭವಿ ಬೌಲರ್ ಭುವನೇಶ್ವರ್ ಕುಮಾರ್, ಟಿಮ್‌ ಡೇವಿಡ್‌ ಅವರೊಂದಿಗೂ ಮಾತನಾಡಿದ್ದಾರೆ. ಆದ್ರೆ ಕೊಹ್ಲಿ, ದಿನೇಶ್‌ ಕಾರ್ತಿಕ್‌ ನಡುವಿನ ಸಂಭಾಷಣೆ ಕುರಿತು ನಿಖರ ಕಾರಣ ತಿಳಿದುಬಂದಿಲ್ಲ. ಆರ್‌ಸಿಬಿ ಫ್ರಾಂಚೈಸಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪ್ರತಿ ಬಾರಿಯೂ ಆರ್‌ಸಿಬಿ ಒಂದಿಲ್ಲೊಂದು ವಿವಾದಗಳಿಗೆ ಹೆಸರಾಗುತ್ತಲೇ ಇರುತ್ತದೆ. ಕಳೆದ ಬಾರಿ ಪಂಜಾಬ್‌ ಕಿಂಗ್ಸ್‌ ಆಟಗಾರನಿಗೆ ಟಾಂಗ್‌ ಕೊಡುವ ಮೂಲಕ ಕೊಹ್ಲಿ ಅವರ ನಡೆ ಸದ್ದು ಮಾಡಿತ್ತು. ಇದಕ್ಕೂ ಮುನ್ನ 2023ರಲ್ಲಿ ಗೌತಮ್‌ ಗಂಭೀರ್‌ ಅವರೊಂದಿಗಿನ ಕಲಹ ದೊಡ್ಡ ಸದ್ದು ಮಾಡಿತ್ತು. ಆದ್ರೆ ಇದೇ ಮೊದಲಬಾರಿಗೆ ತಂಡದಲ್ಲೇ ಆಂತರಿಕ ಕಲಹ ಬಿರುಗಾಳಿ ಎಬ್ಬಿಸಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ತವರಲ್ಲಿ ಮತ್ತೆ ಸೋತ ಆರ್‌ಸಿಬಿ – ಕೆ.ಎಲ್‌.ರಾಹುಲ್‌ ಮಿಂಚು; ಡೆಲ್ಲಿಗೆ 6 ವಿಕೆಟ್‌ಗಳ ಜಯ

  • ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್‌ ಚಚ್ಚಿದ ಸಾಲ್ಟ್‌ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್‌

    ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್‌ ಚಚ್ಚಿದ ಸಾಲ್ಟ್‌ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್‌

    ಬೆಂಗಳೂರು:‌ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಆರಂಭಿಕ ಆಟ ಇಂದು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

    ಹೌದು. ಡೆಲ್ಲಿ ವಿರುದ್ಧ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ (Phil Salt) 3ನೇ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ಗೆ (Mitchell Starc) 30 ರನ್‌ ಚಚ್ಚಿದರು. ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ ಸಾಲ್ಟ್‌, ಬಳಿಕ 4, 4, ನೋಬಾಲ್‌+4, 6, 1LB, 4LB ಬಾರಿಸುವ ಮೂಲಕ ಒಂದೇ ಓವರ್‌ನಲ್ಲಿ 30 ರನ್‌ ಬಾರಿಸಿದ್ರು, ಫಿಲ್‌ ಸಾಲ್ಟ್‌ ಅವರ ಈ ಆಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

    ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ.

    ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು (RCB Fans) ಇವರಾಗಿದ್ದಾರೆ. ಆರ್‌ಸಿಬಿ… ಆರ್‌ಸಿಬಿ ಎಂದು ಕೂಗುತ್ತಾ ಆಟಗಾರರನ್ನು ಹುರಿದುಂಬಿಸುತ್ತಾರೆ. ಅದೇ ರೀತಿ ಫ್ಯಾನ್ಸ್‌ ಫಿಲ್‌ ಸಾಲ್ಟ್‌ ಅವರನ್ನು ಹುರಿದುಂಬಿಸುತ್ತಿದ್ದರು. ಆದ್ರೆ 4ನೇ ಓವರ್‌ನ 5ನೇ ಎಸೆತದಲ್ಲಿ ಅನಗತ್ಯ ರನ್‌ ಕದಿಯಲು ಯತ್ನಿಸಿ ಸಾಲ್ಟ್‌ ರನೌಟ್‌ಗೆ ತುತ್ತಾದರು.

  • ಚೆನ್ನೈ ತಂಡದಿಂದ ರುತುರಾಜ್‌ ಔಟ್‌ – ತಲಾ ಮತ್ತೆ ಕ್ಯಾಪ್ಟನ್‌

    ಚೆನ್ನೈ ತಂಡದಿಂದ ರುತುರಾಜ್‌ ಔಟ್‌ – ತಲಾ ಮತ್ತೆ ಕ್ಯಾಪ್ಟನ್‌

    ಚೆನ್ನೈ: ಲೆಜೆಂಡ್‌ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಉಸಿರಾಗಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತೆ ಸಿಎಸ್‌ಕೆ ತಂಡದ ನಾಯಕನಾಗಿ ಕಂಬ್ಯಾಕ್‌ ಮಾಡಿದ್ದಾರೆ.

    ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹಾಲಿ ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರು ಮೊಣಕೈ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಇಡೀ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಹೀಗಾಗಿ ಬಾಕಿ ಉಳಿದಿರುವ 9 ಪಂದ್ಯಗಳಿಗೆ ಎಂ.ಎಸ್‌ ಧೋನಿ ಅವರೇ ನಾಯಕತ್ವ ವಹಿಸಲಿದ್ದಾರೆ ಎಂದು ಮುಖ್ಯಕೋಚ್‌ ಸ್ಟೀಫನ್ ಫ್ಲೆಮಿಂಗ್ ಖಚಿತಪಡಿಸಿದ್ದಾರೆ. ನಾಳೆ (ಏ.11) ಕೋಲ್ಕತ್ತಾ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಸರದಿಯ 6ನೇ ಪಂದ್ಯವನ್ನಾಡಲಿದೆ. ಇದನ್ನೂ ಓದಿ: 2028 Olympics | 128 ವರ್ಷಗಳ ಬಳಿಕ ಕ್ರಿಕೆಟ್‌ – ಒಲಿಂಪಿಕ್ಸ್‌ನಲ್ಲಿ 6 ತಂಡಗಳ ಸ್ಪರ್ಧೆ

    MS Dhoni 1

    ಇತ್ತೀಚೆಗೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ತುಷಾರ್‌ ದೇಶ್‌ಪಾಂಡೆ ಅವರ ಬೌಲಿಂಗ್‌ನಲ್ಲಿ ಚೆಂಡು ರುತುರಾಜ್‌ ಅವರ ಬಲ ಮೊಣಕೈಗೆ ಬಲವಾಗಿ ಬಡಿದಿತ್ತು. ಈ ವೇಳೆ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದ ರುತುರಾಜ್‌ ತಂಡಕ್ಕಾಗಿ ಬ್ಯಾಟಿಂಗ್‌ ಮುಂದುವರಿಸಿದ್ದರು. ಆದ್ರೆ ಆ ಪಂದ್ಯದಲ್ಲಿ ಸಿಎಸ್‌ಕೆ ಸೋಲು ಕಂಡಿತು. ಇನ್ನೂ ಏಪ್ರಿಲ್‌ 8ರಂದು ಪಂಬಾಜ್‌ ಕಿಂಗ್ಸ್‌ (Punjab Kings) ವಿರುದ್ಧದ ಪಂದ್ಯದಲ್ಲಿಯೂ ರುತುರಾಜ್‌ ಬ್ಯಾಟಿಂಗ್‌ ವೈಫಲ್ಯ ಎದುರಿದರು. ಇದೀಗ ಮೊಣಕೈ ಗಾಯದ ಸಮಸ್ಯೆ ಉಲ್ಬಣಗೊಂಡಿದ್ದು, ಪ್ರಸ್ತುತ ಐಪಿಎಲ್‌ ಟೂರ್ನಿಯಿಂದಲೇ ಅವರು ಹೊರಗುಳಿಯಲಿದ್ದಾರೆ ಎಂದು ಸಿಎಸ್‌ಕೆ ಮುಖ್ಯಕೋಚ್‌ ತಿಳಿಸಿದ್ದಾರೆ. ಇದನ್ನೂ ಓದಿ: IPL 2025 | ಜಿಟಿ ವಿರುದ್ಧ ಸೋಲಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

    2023ರ ಆವೃತ್ತಿಯಲ್ಲಿ ಸಿಎಸ್‌ಕೆ ಎಂ.ಎಸ್‌ ಧೋನಿ ನಾಯಕತ್ವದಲ್ಲಿ 5ನೇ ಬಾರಿಗೆ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಆ ಬಳಿಕ ಧೋನಿ ತಮ್ಮ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. 2024ರ ಆವೃತ್ತಿಯಿಂದ ರುತುರಾಜ್‌ ಗಾಯಕ್ವಾಡ್‌ ಸಿಎಸ್‌ಕೆ ತಂಡದ ನಾಯಕನಾಗಿ ಮುಂದುವರಿಯುತ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ 5 ಪಂದ್ಯಗಳನ್ನಾಡಿರುವ ಸಿಎಸ್‌ಕೆ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದನ್ನೂ ಓದಿ: IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್