Tag: Delhi Capital

  • ಫಸ್ಟ್ ಅಂಡ್ ಫೈನಲ್ ವಾರ್ನಿಂಗ್- ಮಂಕಡ್ ಔಟ್ ಕುರಿತು ಅಶ್ವಿನ್ ಬಹಿರಂಗ ಎಚ್ಚರಿಕೆ

    ಫಸ್ಟ್ ಅಂಡ್ ಫೈನಲ್ ವಾರ್ನಿಂಗ್- ಮಂಕಡ್ ಔಟ್ ಕುರಿತು ಅಶ್ವಿನ್ ಬಹಿರಂಗ ಎಚ್ಚರಿಕೆ

    ದುಬೈ: ಐಪಿಎಲ್ 2019ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮಂಕಡ್ ಅವರನ್ನು ಔಟ್ ಮಾಡಿದ ಆರ್.ಅಶ್ವಿನ್ ಅವರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಅಶ್ವಿನ್ ಬಹಿರಂಗವಾಗಿ ಮಂಕಡ್ ವಾರ್ನಿಂಗ್ ನೀಡಿದ್ದಾರೆ.

    ಅಶ್ವಿನ್ ಮಂಕಡ್ ಔಟ್ ವಿರುದ್ಧ ಟೀಕೆ ಮಾಡಿದ್ದ ಹಲವರು ಕ್ರೀಡಾ ಸ್ಫೂರ್ತಿ ಇಲ್ಲ ಎಂದಿದ್ದರು. ಆದರೆ ತಮ್ಮ ವಿರುದ್ಧ ವಿಮರ್ಶೆಗಳಿಗೆ ತಿರುಗೇಟು ನೀಡಿದ್ದ ಅಶ್ಚಿನ್, ನಿಯಮಗಳ ಅನ್ವಯ ನಾನು ಔಟ್ ಮಾಡಿದ್ದೇನೆ ಎಂದು ತಿರುಗೇಟು ನೀಡಿದ್ದರು. ಇದರ ನಡುವೆಯೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಶ್ವಿನ್‍ರನ್ನು ಕೈಬಿಟ್ಟಿತ್ತು. ಸದ್ಯ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ.

    ಕಳೆದ ವರ್ಷ ಕೇಳಿ ಬಂದಿದ್ದ ಟೀಕೆಗಳಿಂದ ನಿನ್ನೆಯ ಪಂದ್ಯದಲ್ಲಿ ಸ್ವಲ್ಪ ಹಿಂದೇಟು ಹಾಕಿರುವಂತೆ ಕಂಡ ಅಶ್ವಿನ್, ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆರಂಭಿಕರ ಆಟಗಾರ ಫಿಂಚ್‍ಗೆ ಎಚ್ಚರಿಕೆ ನೀಡಿದ್ದರು. ಪಂದ್ಯದ 3ನೇ ಓವರಿನ 4ನೇ ಎಸೆತದಲ್ಲಿ ನಾನ್‍ಸ್ಟ್ರೈಕ್‍ನಲ್ಲಿದ್ದ ಫಿಂಚ್, ಬೌಲರ್ ಬೌಲ್ ಮಾಡುವ ಮುನ್ನವೇ ಕ್ರಿಸ್ ಬಿಟ್ಟು ತೆರಳಿದ್ದರು. ಈ ಸಂದರ್ಭದಲ್ಲಿ ಫಿಂಚ್ ಅವರತ್ತ ನೋಡಿ ನಕ್ಕ ಅಶ್ವಿನ್ ಮಂಕಡ್ ವಾರ್ನಿಗ್ ನೀಡಿದರು. ಇದನ್ನೂ ಓದಿ: ಡೇಂಜರಸ್ ಬೀಮರ್- ಸೈನಿಯಿಂದ ಸಾರಿ ಹೇಳಿಸಿದ ಪಂತ್

    ಪಂದ್ಯದ ಬಳಿಕ ಘಟನೆ ಕುರಿತು ಟ್ವೀಟ್ ಮಾಡಿರುವ ಅಶ್ವಿನ್, ಇದು ಫಸ್ಟ್ ಅಂಡ್ ಫೈನಲ್ ವಾರ್ನಿಂಗ್ 2020. ಇದನ್ನು ಸ್ಪಷ್ಟಪಡಿಸುತ್ತಿದ್ದು, ನನ್ನನ್ನು ದೂಷಿಸಬೇಡಿ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕ್ಕಿ ಪಾಟಿಂಗ್‍ರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ನಾನು ಫಿಂಚ್ ಒಳ್ಳೆಯ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಅಶ್ವಿನ್ ಮತ್ತೆ ಮಂಕಡ್ ಪ್ರಯೋಗ ಮಾಡುತ್ತಾರೆ ಎಂಬುದು ಖಚಿತವಾಗಿದೆ.

  • ಸಿಕ್ಸರ್, ಬೌಂಡರಿಗಳ ಸುರಿಮಳೆ – ಕೊನೆಯವರೆಗೆ ಹೋರಾಡಿ ಸೋತಿತು ಕೋಲ್ಕತ್ತಾ

    ಸಿಕ್ಸರ್, ಬೌಂಡರಿಗಳ ಸುರಿಮಳೆ – ಕೊನೆಯವರೆಗೆ ಹೋರಾಡಿ ಸೋತಿತು ಕೋಲ್ಕತ್ತಾ

    – ಡೆಲ್ಲಿಗೆ 18 ರನ್ ಗಳ ಜಯ
    – ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ ಡೆಲ್ಲಿ

    ಶಾರ್ಜಾ: ಸಿಕ್ಸರ್, ಬೌಂಡರಿಗಳ ಸುರಿಮಳೆಯಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 18 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಡೆಲ್ಲಿ ಮೊದಲ ಸ್ಥಾನಕ್ಕೆ ಏರಿದರೆ, ಬೆಂಗಳೂರು ಎರಡನೇ ಸ್ಥಾನಕ್ಕೆ ಜಾರಿದೆ.

    ಗೆಲ್ಲಲು 229 ರನ್ ಗಳ ಕಠಿಣ ಗುರಿಯನ್ನು ಪಡೆದ ಕೋಲ್ಕತ್ತಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು. ಈ ಪಂದ್ಯದಲ್ಲಿ ಕೋಲ್ಕತ್ತಾ ಪರ 14 ಸಿಕ್ಸ್, 12 ಬೌಂಡರಿ ಬಂದರೆ ಡೆಲ್ಲಿ ಪರ14 ಸಿಕ್ಸ್, 18 ಬೌಂಡರಿ ಸಿಡಿಯಲ್ಪಟ್ಟಿತ್ತು.

    ತಂಡದ ಮೊತ್ತ 117 ರನ್ ಆಗಿದ್ದಾಗ ಬೌಲರ್ ಹರ್ಷಲ್ ಪಟೇಲ್ ನಿತೀಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಅವರ ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಕೊನೆಯಲ್ಲಿ ಮಾರ್ಗನ್ ಮತ್ತು ತ್ರಿಪಾಠಿ ಸಿಕ್ಸ್ ಬೌಂಡರಿಗಳನ್ನು ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ತಂಡದ ಮೊತ್ತ 200 ಆಗಿದ್ದಾಗ ಮಾರ್ಗನ್ 44 ರನ್ (18 ಎಸೆತ, 1 ಬೌಂಡರಿ, 5 ಸಿಕ್ಸ್) ಹೊಡೆದು ಕ್ಯಾಚ್ ನೀಡಿ ಔಟಾದರೆ 207 ರನ್ ಆಗಿದ್ದಾಗ 36ರನ್ (16 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದ ತ್ರಿಪಾಠಿ ಔಟದರು.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ 229 ರನ್‍ಗಳ ಭರ್ಜರಿ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಓವರಿನಲ್ಲೇ ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. ಪವರ್ ಪ್ಲೇ ಹಂತ ಮುಕ್ತಾಯವಾಗುವಷ್ಟರಲ್ಲಿ 59 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು.

    ನಿತೀಶ್ ರಾಣಾ (35 ಬಾಲ್‍ಗೆ 58 ರನ್) ಅರ್ಧ ಶತಕ ಬಾರಿಸಿ ಭರವಸೆ ಮೂಡಿಸಿದರು. 58 ರನ್‍ಗಳ ಪೈಕಿ 4 ಸಿಕ್ಸ್ ಹಾಗೂ 4 ಬೌಂಡರಿ ಚೆಚ್ಚಿದ್ದರು. 12.4ನೇ ಓವರಿನಲ್ಲಿ ರಾಣಾ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಸೋಲಿನ ಸುಳಿಗೆ ದೂಡಿದರು. ರಾಣಾ ಔಟಾಗುತ್ತಿದ್ದಂತೆ ಮುಂದಿನ ಬಾಲ್‍ಗೆ ದಿನೇಶ್ ಕಾರ್ತಿಕ್ ಸಹ ವಿಕೆಟ್ ಒಪ್ಪಿಸಿದರು.

    ಭರ್ಜರಿ 229 ಟಾರ್ಗೆಟ್ ನೀಡಿದ್ದರೂ, ಬೌಲಿಂಗ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಡವಿತು. ಎನ್ರಿಚ್ ನಾಟ್ರ್ಜ್ ಮೂರು ವಿಕೆಟ್ ಕಬಳಿಸುವ ಮೂಲಕ ಮಿಂಚಿದರೆ, ಹರ್ಷಲ್ ಪಟೇಲ್ 2, ಅಮಿತ್ ಮಿಶ್ರಾ, ಕಗಿಸೊ ರಬಾಡ, ಮಾರ್ಕಸ್ ಸ್ಟೊಯ್ನಿಸ್ ತಲಾ ಒಂದು ವಿಕೆಟ್ ಕಬಳಿಸಿದರು.

    ಮಾರ್ಗನ್ ಅಬ್ಬರದ ಆಟ:
    ತಂಡ ಸಂಕಷ್ಟದಲ್ಲಿದ್ದಾಗ 13.5ನೇ ಓವರಿಗೆ ಆಗಮಿಸಿದ ಇಯಾನ್ ಮಾರ್ಗನ್ ತಂಡವನ್ನು ಗೆಲ್ಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಸ್ಟ್ರೈಕ್‍ಗೆ ಬರುತ್ತಿದ್ದಂತೆ ಮೊದಲ ಬಾಲ್ ಸಿಕ್ಸ್ ಚೆಚ್ಚಿದರು. ಆದರೆ ಕೊನೆಯ ಹಂತದಲ್ಲಿ 18.3ನೇ ಓವರಿನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಮಾರ್ಗನ್ ಕೇವಲ 18 ಬಾಲ್‍ಗೆ 44 ರನ್ ಸಿಡಿಸಿದ್ದರು. 5 ಸಿಕ್ಸ್ 1 ಬೌಂಡರಿ ಚಚ್ಚುವ ಮೂಲಕ ಗೆಲುವಿನ ಆಸೆ ಮೂಡಿಸಿದರು.

    ರಾಣಾ ಪವರ್ಫುಲ್ ಬ್ಯಾಟಿಂಗ್:
    ಶುಭಮನ್ ಗಿಲ್ ಔಟಾಗುತ್ತಿದ್ದಂತೆ 8.2 ಓವರಿಗೆ ಆಗಮಿಸಿದ ರಾಣಾ 35 ಬಾಲ್‍ಗೆ 58 ರನ್ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ರಾಣಾ ತಂಡ 117 ರನ್ ಗಳಿಸಿದ ಸಂದರ್ಭದಲ್ಲಿ 12 ಓವರಿನ 4ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.

    ಮಾರ್ಗನ್, ತ್ರಿಪಾಠಿ ಜೊತೆಯಾಟ:
    ಮಾರ್ಗನ್ ಹಾಗೂ ತ್ರಿಪಾಠಿ ಇಬ್ಬರೂ ಭರ್ಜರಿ ಜೊತೆಯಾಟ ಆರಂಭಿಸಿದ್ದರು. ಕೇವಲ 31 ಬಾಲ್‍ಗೆ 78 ರನ್ ಸಿಡಿಸುವ ಮೂಲಕ ತಂಡದ ದಿಕ್ಕನ್ನೇ ಬದಲಿಸಿದ್ದರು. 13ನೇ ಓವರಿಗೆ ಕಮ್ಮಿನ್ಸ್ ಔಟಾದ ಬಳಿಕ ಆಗಮಿಸಿದ್ದ ತ್ರಿಪಾಠಿ, ಮಾರ್ಗನ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದ್ದರು. ಇಬ್ಬರ ಜೊತೆಯಾಟದಲ್ಲಿ ಬರೋಬ್ಬರಿ 8 ಸಿಕ್ಸ್ 4 ಬೌಂಡರಿ ಚೆಚ್ಚಿದ್ದರು.

    ನಿತೀಶ್ ರಾಣಾ, ಶುಭಮನ್ ಗಿಲ್ ಜೊತೆಯಾಟ:
    ರಾಣಾ ಹಾಗೂ ಗಿಲ್ ತಮ್ಮ ಜೊತೆಯಾಟದಲ್ಲಿ 41 ಬಾಲ್‍ಗೆ 64 ರನ್ ಗಳಿಸಿದರು. ಇದರಲ್ಲಿ 5 ಸಿಕ್ಸ್ 6 ಬೌಂಡರಿ ಚಚ್ಚಿದ್ದರು. 8ನೆ ಓವರ್ ಆರಂಭವಾಗುತ್ತಿದ್ದಂತೆ ಗಿಲ್ ವಿಕೆಟ್ ಒಪ್ಪಿಸಿದರು.

    ಶುಭಮನ್ ಗಿಲ್ 22 ಬಾಲ್‍ಗೆ 28 ರನ್ ಗಳಿಸಿ ಔಟಾಗುತ್ತಿದ್ದಂತೆ 9.5ನೇ ಓವರ್ನಲ್ಲಿ ಆಂಡ್ರೆ ರಸೆಲ್ ಸಹ 8 ಬಾಲ್‍ಗೆ 13 ಹೊಡೆದು ವಿಕೆಟ್ ಒಪ್ಪಿಸಿದರು. ಹೀಗೆ ಡೆಲ್ಲಿ ತಂಡ ವೇಗವಾಗಿ ವಿಕೆಟ್ ಕಳೆದುಕೊಂಡಿತು. 13.3ನೇ ಓವರಿಗೆ ಪ್ಯಾಟ್ ಕಮ್ಮಿನ್ಸ್ ಸಹ 4 ಬಾಲ್‍ಗೆ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

  • 38 ಬಾಲ್‍ಗೆ 88 ರನ್, ಶ್ರೇಯಸ್ ಮಿಂಚಿನಾಟ- ಕೋಲ್ಕತ್ತಾಗೆ 229 ರನ್‍ಗಳ ಭರ್ಜರಿ ಟಾರ್ಗೆಟ್

    38 ಬಾಲ್‍ಗೆ 88 ರನ್, ಶ್ರೇಯಸ್ ಮಿಂಚಿನಾಟ- ಕೋಲ್ಕತ್ತಾಗೆ 229 ರನ್‍ಗಳ ಭರ್ಜರಿ ಟಾರ್ಗೆಟ್

    ಶಾರ್ಜಾ: ಮಿಂಚಿನ ಆಟವಾಡುವ ಮೂಲಕ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ಬೌಲರ್ ಗಳ ಬೆವರಿಳಿಸಿದ್ದು, 38 ಬಾಲ್‍ಗೆ ಬರೋಬ್ಬರಿ 88 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್‍ಗೆ 229 ರನ್‍ಗಳ ಭರ್ಜರಿ ಟಾರ್ಗೆಟ್ ನೀಡಿತು.

    ಶಿರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 16ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸಿಕ್ಸ್, ಫೋರ್ ಗಳ ಸುರಿಮಳೆಯೊಂದಿಗೆ ಕೋಲ್ಕತ್ತಾಗೆ ಸ್ಪರ್ಧಾತ್ಮಕ ಮೊತ್ತವನ್ನು ಟಾರ್ಗೆಟ್ ನೀಡಿದೆ. ಈ ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಹಾಗೂ ಪೃಥ್ವಿ ಶಾ ಕೋಲ್ಕತ್ತಾಗೆ ಭರ್ಜರಿ ಮೊತ್ತದ ಟಾರ್ಗೆಟ್ ನೀಡಿದರು.

    ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್, ಸಿಕ್ಸ್ ಫೋರ್ ಸಿಡಿಸುವ ಮೂಲಕ ಕೋಲ್ಕತ್ತಾ ಬೌಲರ್ ಗಳ ಬೆವರಿಳಿಸಿದರು. ಔಟಾಗದೆ 38 ಬಾಲ್‍ಗೆ ಬರೋಬ್ಬರಿ 88 ರನ್ ಸಿಡಿಸುವ ಮೂಲಕ ತಂಡದ ದಿಕ್ಕನ್ನೇ ಬದಲಿಸಿದರು. ಈ ಮೂಲಕ ಆರಂಭದಿಂದಲೂ ಉತ್ತಮವಾಗಿ ಆಟವಾಡಿಕೊಂಡು ಬಂದಿದ್ದ ತಂಡದ ಮೊತ್ತವನ್ನು ಇನ್ನೂ ಹೆಚ್ಚಿಸಿದರು. ಒಟ್ಟು 88 ರನ್‍ಗಳಲ್ಲಿ ಶ್ರೇಯಸ್ 6 ಸಿಕ್ಸ್ ಹಾಗೂ 7 ಬೌಂಡರಿ ಚೆಚ್ಚುವ ಮೂಲಕ ಮಿಂಚಿನ ಆಟವಾಡಿದರು.

    ಆರಂಭದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಹಾಗೂ ಪೃಥ್ವಿ ಉತ್ತಮ ಜೊತೆಯಾಟವಾಡಿದರೂ ಪೃಥ್ವಿ 66 ರನ್ ಗಳಿಸಿ ಔಟಾದರು. ಇದರಲ್ಲಿ 4 ಸಿಕ್ಸ್ ಹಾಗೂ 4 ಫೋರ್ ಚಚ್ಚಿ ಮಿಂಚಿದರು.

    ಪೃಥ್ವಿ, ಶ್ರೇಯಸ್ ಜೊತೆಯಾಟ:
    ಶಿಖರ್ ಧವನ್ ಆರಂಭದಲ್ಲಿ ಉತ್ತಮವಾಗಿ ಆಟವಾಡಿದರು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 5ನೇ ಓವರ್ ನ ಅಂತ್ಯದ ವೇಳೆ ಔಟಾದರು. ಧವನ್ 16 ಬಾಲ್‍ಗೆ 26ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಪೃಥ್ವಿ ಹಾಗೂ ಶ್ರೇಯಸ್ ಜೊತೆಯಾಟದಲ್ಲಿ 73 ರನ್ ಕಲೆ ಹಾಕಿದರು. ಪೃಥ್ವಿ ಹಾಗೂ ಶ್ರೇಯಸ್ ತಮ್ಮ ಮಿಂಚಿನಾದಿಂದಾಗಿ ಸಿಕ್ಸರ್, ಫೋರ್ ಗಳನ್ನು ಚಚ್ಚಿದರು. 41 ಬಾಲ್‍ಗೆ 73 ರನ್ ಕಲೆ ಹಾಕಿದರು. ನಂತರ ಪಂದ್ಯ ಒಂದು ಹಂತಕ್ಕೆ ತಲುಪಿತು. ಆಕ್ರಮಣಕಾರಿ ಆಟವಾಡಿದ್ದ ಪೃಥ್ವಿ 41 ಬಾಲ್‍ಗೆ 66 ರನ್ ಬಾರಿಸಿದ್ದರು. ವಿಕೆಟ್ ಕಾಯ್ದುಕೊಂಡಿದ್ದ ಪೃಥ್ವಿ, 12ನೇ ಓವರ್ ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಕ್ಯಾಚ್ ನೀಡಿದರು.

    ಶ್ರೇಯಸ್, ರಿಷಬ್ ಪಂತ್ ಜೊತೆಯಾಟ:
    ಪೃಥ್ವಿ ಅವರು ಔಟಾದ ಬಳಿಕ ಶ್ರೇಯಸ್ ಅವರಿಗೆ ಜೊತೆಯಾದ ರಿಷಬ್ ಪಂತ್, ಉತ್ತಮ ಪ್ರದರ್ಶನ ನೀಡಿದರು. ಇಬ್ಬರ ಜೊತೆಯಾಟದಲ್ಲಿ 31 ಬಾಲ್‍ಗೆ 72 ರನ್ ಸಿಡಿಸಿದರು. ನಂತರ 17ನೇ ಓವರ್ ಮುಗಿಯುವಷ್ಟರಲ್ಲಿ ಪಂತ್ 17 ಬಾಲ್‍ಗೆ 38 ರನ್ ಸಿಡಿಸಿ ಔಟಾದರು.

    ಆರಂಭದಲ್ಲಿ ಉತ್ತಮ ಆಟವಾಡಿದ್ದ ಧವನ್ ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದರು. ಧವನ್ 5ನೇ ಓವರ್ ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಪೃಥ್ವಿ ಹಾಗೂ ಶ್ರೇಯಸ್ ಅಬ್ಬರದ ಆಟವಾಡಿ, ಪವರ್ ಪ್ಲೇ ಮುಕ್ತಾಯದ ವೇಳೆಗೆ 61ರನ್ ಗಳಿಸಿದರು. ಈ ಮೂಲಕ ಪಂದ್ಯವನ್ನು ಗೆಲುವಿನ ಹಂತಕ್ಕೆ ತಂದರು. ಇದೇ ಸಂದರ್ಭದಲ್ಲಿ 12ನೇ ಓವರ್ ವೇಳೆಗೆ ಕಮಲೇಶ್ ನಾಗರಕೋಟಿ ಪೃಥ್ವಿಯರನ್ನು ಔಟ್ ಮಾಡಿದರು. ಈ ಮೂಲಕ 41 ಬಾಲ್‍ಗೆ 66 ರನ್ ಗಳಿಸಿ ಪೃಥ್ವಿ ಶಾ ಔಟಾದರು. ನಂತರ ಜೊತೆಯಾಟವಾಡಿದ ರಿಷಭ್ ಪಂತ್ ಹಾಗೂ ಶ್ರೇಯಸ್ ಐಯ್ಯರ್ 16 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 169ಕ್ಕೆ ಏರಿಸಿದ್ದರು.

    ವಿಕೆಟ್ ಕಾಯ್ದುಕೊಂಡು ಶ್ರೇಯಸ್ ಜೊತೆ ಉತ್ತಮ ಆಟವಾಡುತ್ತಿದ್ದ ರಿಷಬ್ ಪಂತ್ 17ನೇ ಓವರ್ ಮುಕ್ತಾಯದ ವೇಳೆಗೆ 17 ಬಾಲ್‍ಗೆ 38 ರನ್ ಸಿಡಿಸಿ ಔಟಾದರು. ಸಿಕ್ಸರ್ ಹಾಗೂ 5 ಬೌಂಡರಿ ಚೆಚ್ಚುವ ಮೂಲಕ ಶ್ರೇಯಸ್ ಅವರಿಗೆ ಸಾಥ್ ನೀಡಿದ್ದರು. ಆದರೆ 17ನೇ ಓವರ್ ಮುಕ್ತಾಯದ ವೇಳೆಗೆ ಆಂಡ್ರೆ ರಸಲ್ ಔಟ್ ಮಾಡಿದರು. ಈ ಮೂಲಕ ಕ್ಯಾಚ್ ನೀಡಿ ಪಂತ್ ಪೆವಿಲಿಯನ್ ಕಡೆ ನಡೆದರು. ನಂತರ ಆಗಮಿಸಿದ ಮಾರ್ಕಸ್ ಸ್ಟೊಯ್ನಿಸ್, 3 ಬಾಲ್‍ಗೆ 1 ರನ್ ಗಳಿಸಿ ಔಟಾದರು.

    ಆಂಡ್ರೆ ರಸಲ್ ಎಷ್ಟೇ ಪ್ರಯತ್ನಿಸಿದರೂ ಡೆಲ್ಲಿ ಆಟವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆದರೂ ಎರಡು ವಿಕೆಟ್ ಪಡೆದು ಸಮಾಧಾನ ಪಟ್ಟುಕೊಳ್ಳುವಂತೆ ಮಾಡಿದರು. ವರುಣ್ ಚಕ್ರವರ್ತಿ ಹಾಗೂ ಕಮಲೇಶ್ ನಾಗರಕೋಟಿ ತಲಾ ಒಂದು ವಿಕೆಟ್ ಪಡೆದರು.

  • 3 ವಿಕೆಟ್ ಪಡೆದು 14 ರನ್ ನೀಡಿದ ರಶೀದ್ – ಖಾನ್ ಸ್ಪಿನ್ ಮೋಡಿಗೆ ಡೆಲ್ಲಿ ಉಡೀಸ್

    3 ವಿಕೆಟ್ ಪಡೆದು 14 ರನ್ ನೀಡಿದ ರಶೀದ್ – ಖಾನ್ ಸ್ಪಿನ್ ಮೋಡಿಗೆ ಡೆಲ್ಲಿ ಉಡೀಸ್

    – ಭುವನೇಶ್ವರ್, ನಟರಾಜನ್ ಮಾರಕ ದಾಳಿಗೆ ಐಯ್ಯರ್ ಪಡೆ ತತ್ತರ

    ಅಬುಧಾಬಿ: ಮ್ಯಾಜಿಕಲ್ ಸ್ಪಿನ್ ಬೌಲರ್ ರಶೀದ್ ಖಾನ್ ಅವರ ಮಾರಕ ದಾಳಿಗೆ ನಲುಗಿದ ಡೆಲ್ಲಿ ಐಪಿಎಲ್-2020ಯ 11ನೇ ಪಂದ್ಯದಲ್ಲಿ ಸೋಲುಂಡಿದೆ. ಈ ಮೂಲಕ ಸನ್‍ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

    ಇಂದು ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಜಾನಿ ಬೈರ್‌ಸ್ಟೋವ್ ಅವರ ಉತ್ತಮ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 162 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ರೈಸರ್ಸ್ ಆಕ್ರಮಣಕಾರಿ ಬೌಲಿಂಗ್‍ಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 147 ರನ್ ಹೊಡೆದು 15 ರನ್‍ಗಳ ಅಂತರದಿಂದ ಸೋಲನ್ನು ಒಪ್ಪಿಕೊಂಡಿತು.

    ಟ್ವಿಸ್ಟ್ ನೀಡಿದ ರಶೀದ್ ಖಾನ್:
    ತಾನು ಮಾಡಿದ ಮೊದಲ ಓವರಿನಲ್ಲಿ ಸೆಟ್ ಬ್ಯಾಟ್ಸ್ ಮ್ಯಾನ್ ನಾಯಕ ಶ್ರೇಯಸ್ ಐಯ್ಯರ್ ಅವರನ್ನು ಔಟ್ ಮಾಡಿದ್ದ ರಶೀದ್ ಖಾನ್ ಮತ್ತೆ 12ನೇ ಓವರಿನಲ್ಲಿ ಮ್ಯಾಜಿಕ್ ಮಾಡಿದರು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದಿದ್ದ ಶಿಖರ್ ಧವನ್ ಅವರನ್ನು ಔಟ್ ಮಾಡಿದರು. ನಂತರ 16ನೇ ಓವರಿನಲ್ಲಿ ಸ್ಫೋಟಕ ಆಟಕ್ಕೆ ಮುಂದಾಗಿದ್ದ ರಿಷಬ್ ಪಂತ್ ಅವರನ್ನು ಔಟ್ ಮಾಡಿದರು. ಈ ಮೂಲಕ ನಾಲ್ಕು ಓವರ್ ಬೌಲ್ ಮಾಡಿ ಪ್ರಮುಖ ಮೂರು ವಿಕೆಟ್ ಕಿತ್ತು ಕೇವಲ 14 ರನ್ ನೀಡಿದರು.

    ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಅವರು ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 25 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ದೇಶೀಯ ಪ್ರತಿಭೆ ಟಿ ನಟರಾಜನ್ ನಾಲ್ಕು ಓವರ್ ಬೌಲ್ ಮಾಡಿ ಒಂದು ವಿಕೆಟ್ ಪಡೆದು, 25 ರನ್ ನೀಡಿದರು. ಜೊತೆಗೆ ಪ್ರಮುಖ 17ನೇ ಓವರ್ ಬೌಲ್ ಮಾಡಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು.

    ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದ ಭುವನೇಶ್ವರ್ ಕುಮಾರ್ ಅವರು ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ ಅವರನ್ನು ಔಟ್ ಮಾಡಿದರು. ಕೇವಲ ಎರಡು ರನ್ ಗಳಿಸಿದ್ದ ಶಾ ಜಾನಿ ಬೈರ್‌ಸ್ಟೋವ್ ಅವರಿಗೆ ಕ್ಯಾಚ್ ಇತ್ತು ಹೊರನಡೆದರು. ನಂತರ ಜೊತೆಯಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ಶಿಖರ್ ಧವನ್ ನಿಧಾನವಾಗಿ ಜೊತೆಯಾಟವಾಡಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಡೆಲ್ಲಿ ಒಂದು ವಿಕೆಟ್ ಕಳೆದುಕೊಂಡು 34 ರನ್ ಸೇರಿಸಿತು.

    ಈ ವೇಳೆ ಬೌಲಿಂಗ್‍ಗೆ ಇಳಿದ ರಶೀದ್ ಖಾನ್ ಅವರು ನಾಯಕ ಶ್ರೇಯಸ್ ಐಯ್ಯರ್ ವಿಕೆಟ್ ಕೀಳುವ ಮೂಲಕ ಡೆಲ್ಲಿ ಆಘಾತ ನೀಡಿದರು. ಈ ಮೂಲಕ 17 ರನ್ ಗಳಿಸಿದ್ದ ಐಯ್ಯರ್ ಅಬ್ದುಲ್ ಸಮದ್ ಅವರಿಗೆ ಕ್ಯಾಚ್ ನೀಡಿ ಹೊರನಡೆದರು. ಈ ನಡುವೆ ಹೈದರಾಬಾದ್ ಸ್ಪಿನ್ನರ್ ಗಳು ಬಿಗುವಿನ ಬೌಲಿಂಗ್ ದಾಳಿ ಮಾಡಿದರು. ಹೀಗಾಗಿ ರನ್ ಕದಿಯಲು ಡೆಲ್ಲಿ ಬ್ಯಾಟ್ಸ್ ಮ್ಯಾನ್‍ಗಳು ಕಷ್ಟಪಡಬೇಕಾಯ್ತು. 11 ಓವರ್ ಮುಕ್ತಾಯ ಡೆಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡು ಕೇವಲ 60 ರನ್ ಗಳಿಸಿತು.

    ನಂತರ ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದಿದ್ದ ಶಿಖರ್ ಧವನ್ (31 ಎಸೆತ, 34 ರನ್, 4 ಫೋರ್) ಅವರನ್ನು ಔಟ್ ಮಾಡಿದರು. ಈ ವೇಳೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ರಿಷಬ್ ಪಂತ್ ಅವರು ತಂಡದ ಮೊತ್ತಕ್ಕೆ ಸ್ವಲ್ಪ ವೇಗ ನೀಡಿದರು. ನಂತರ ಶಿಮ್ರಾನ್ ಹೆಟ್ಮಿಯರ್ ಅವರ ಕೂಡ 14ನೇ ಓವರಿನಲ್ಲಿ ಬ್ಯಾಕ್ ಟು ಬ್ಯಾಕ್ ಡೆಲ್ಲಿಯನ್ನು 100ರ ಗಡಿ ದಾಟಿಸಿದರು. ಆದರೆ ನಂತರ 15ನೇ ಓವರ್ ಬೌಲ್ ಮಾಡಿ ವನೇಶ್ವರ್ ಕುಮಾರ್ ಅವರು ಹೆಟ್ಮಿಯರ್ ಅವರನ್ನು ಔಟ್ ಮಾಡಿದರು. 12 ಬಾಲಿಗೆ 21 ರನ್ ಸಿಡಿಸಿ ಆಡುತ್ತಿದ್ದ ಶಿಮ್ರಾನ್ ಹೆಟ್ಮಿಯರ್ ಮನೀಶ್ ಪಾಂಡೆ ಹಿಡಿದ ಭರ್ಜರಿ ಕ್ಯಾಚಿಗೆ ಬಲಿಯಾದರು.

    ನಂತರ ದೊಡ್ಡ ಹೊಡೆತಕ್ಕೆ ಕೈಹಾಕಿದ ರಿಷಬ್ ಪಂತ್ ಅವರು, 16ನೇ ಓವರಿನಲ್ಲಿ 27 ಬಾಲಿಗೆ 28 ರನ್ ಸಿಡಿಸಿ ರಶೀದ್ ಖಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಂದ್ಯದ ಪ್ರಮುಖ ಘಟ್ಟದಲ್ಲಿ ರಶೀದ್ ಒಳ್ಳೆ ಬ್ರೇಕ್ ನೀಡಿದರು. ಈ ವೇಳೆ 17ನೇ ಓವರ್ ಬೌಲ್ ಮಾಡಿದ ಟಿ ನಟರಾಜನ್ ಅವರು ಡೇಂಜರ್ಸ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಔಟ್ ಮಾಡಿ ಕೇವಲ ಏಳು ರನ್ ನೀಡಿದ್ದು, ಸನ್‍ರೈಸರ್ಸ್ ತಂಡಕ್ಕೆ ಗೆಲುವಿನ ಅಡಿಪಾಯ ಹಾಕಿಕೊಟ್ಟಿತ್ತು.

  • ಡೆಲ್ಲಿ ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ಸನ್‍ರೈಸರ್ಸ್ – ಐಯ್ಯರ್ ಪಡೆಗೆ 163 ರನ್‍ಗಳ ಗುರಿ

    ಡೆಲ್ಲಿ ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ಸನ್‍ರೈಸರ್ಸ್ – ಐಯ್ಯರ್ ಪಡೆಗೆ 163 ರನ್‍ಗಳ ಗುರಿ

    ಅಬುಧಾಬಿ: ಡೆಲ್ಲಿ ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ವಾರ್ನರ್ ಪಡೆ ಉತ್ತಮ ಆರಂಭ ಕಂಡರು ಡೆಲ್ಲಿಗೆ ದೊಡ್ಡ ಟಾರ್ಗೆಟ್ ನೀಡುವಲ್ಲಿ ವಿಫಲವಾಗಿದೆ.

    ಇಂದು ಅಬುಧಾಬಿ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 11ನೇ ಮ್ಯಾಚಿನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ದೆಹಲಿ ಕ್ಯಾಪಿಟಲ್ ತಂಡಕ್ಕೆ 163 ರನ್‍ಗಳ ಸಾಧಾರಣ ಟಾರ್ಗೆಟ್ ನೀಡಿದೆ. ಹೈದರಾಬಾದ್ ತಂಡ ಆರಂಭದಲ್ಲಿ ಉತ್ತಮ ಲಯದಲ್ಲಿದ್ದರೂ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲವಾಯ್ತು. ಡೆಲ್ಲಿ ಪರ ಅಮಿತ್ ಮಿಶ್ರಾ ಮತ್ತು ಕಗಿಸೊ ರಬಡಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

    ಮೊದಲಿನಿಂದಲೇ ಹೈದರಾಬಾದ್ ಮಂದಗತಿಯ ಬ್ಯಾಟಿಂಗ್ ಮಾಡಿತು. ಡೆಲ್ಲಿ ಬೌಲರ್ ಗಳ ಬಿಗಿ ಬೌಲಿಂಗ್ ದಾಳಿಗೆ ಮಂಕಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‍ಸ್ಟೋವ್ ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ ಕೇವಲ 38 ರನ್ ಗಳಿಸಿದರು. ನಿಧಾನವಾಗಿಯೇ ತಂಡಕ್ಕೆ ರನ್ ಕಲೆಹಾಕುತ್ತಿದ್ದ ನಾಯಕ ಡೇವಿಡ್ ವಾರ್ನರ್ ಅವರು 33 ಎಸೆತಗಳಲ್ಲಿ 45 ರನ್ ಗಳಿಸಿ ಅಮಿತ್ ಮಿಶ್ರಾ ಅವರಿಗೆ ವಿಕೆಟ್ ನೀಡಿದರು.

    ಇದಾದ ಬಳಿಕ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮನೀಶ್ ಪಾಂಡೆ ಕೇವಲ ಮೂರು ರನ್ ಗಳಿಸಿ ಅಮಿತ್ ಮಿಶ್ರಾ ಅವರಿಗೆ ಎರಡನೇ ಬಲಿಯಾಗಿ ಪೆವಿಲಿಯನ್ ಸೇರಿದರು. ನಂತರ ಒಂದಾದ ಕೇನ್ ವಿಲಿಯಮ್ಸನ್ ಹಾಗೂ ಜಾನಿ ಬೈರ್‍ಸ್ಟೋವ್ ಉತ್ತಮವಾಗಿ ಬ್ಯಾಟ್ ಬೀಸಿದರು. ಇದೇ ವೇಳೆ ಮೊದಲಿನಿಂದಲೂ ಉತ್ತಮವಾಗಿ ಆಡಿದ ಜಾನಿ ಬೈರ್ ಸ್ಟೋವ್ ಅವರು 45 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಇದೇ ವೇಳೆ ಕೇನ್ ಮತ್ತು ಜಾನಿ ಜೋಡಿ 36 ಬಾಲಿಗೆ ಅರ್ಧಶತಕದ ಜೊತೆಯಾಟವಾಡಿತು.

    ನಂತರ ಅರ್ಧಶತಕ ಸಿಡಿಸಿದ ಜಾನಿ ಬೈರ್ ಸ್ಟೋವ್ 53 ರನ್ ಗಳಿಸಿ ಕಗಿಸೊ ರಬಡಾ ಅವರಿಗೆ ಔಟ್ ಆಗಿ ಹೊರನಡೆದರು. ನಂತರ ಜೊತೆಯಾದ ಅಬ್ದುಲ್ ಸಮದ್ ಮತ್ತು ಕೇನ್ ವಿಲಿಯಮ್ಸನ್ ಅವರು ಕೊನೆಯ ಎರಡು ಓವರಿನಲ್ಲಿ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಕಗಿಸೊ ರಬಡಾ ಅವರ ಕೊನೆಯ ಓವರಿನಲ್ಲಿ 41 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್ ಔಟ್ ಆದರು.

  • ರಬಡಾ ಬೌಲಿಂಗ್‍ಗೆ ಧೋನಿ ಬಾಯ್ಸ್ ತತ್ತರ – ಚೆನ್ನೈಗೆ ಎರಡನೇ ಸೋಲು

    ರಬಡಾ ಬೌಲಿಂಗ್‍ಗೆ ಧೋನಿ ಬಾಯ್ಸ್ ತತ್ತರ – ಚೆನ್ನೈಗೆ ಎರಡನೇ ಸೋಲು

    ದುಬೈ: ಡೆಲ್ಲಿ ಕ್ಯಾಪಿಟಲ್ ತಂಡದ ಶಿಸ್ತುಬದ್ಧವಾದ ಬೌಲಿಂಗ್ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-2020ಯಲ್ಲಿ ಎರಡನೇ ಸೋಲು ಕಂಡಿದೆ. ಈ ಮೂಲಕ ಡೆಲ್ಲಿ ತಂಡ 44 ರನ್‍ಗಳ ಅಂತರದಲ್ಲಿ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಡೆಲ್ಲಿ ಕ್ಯಾಪಿಟಲ್ ತಂಡ ಪೃಥ್ವಿ ಶಾ ಅವರು ಭರ್ಜರಿ ಅರ್ಧಶತಕ ಮತ್ತು ಪಂತ್ ಅವರ ಸೂಪರ್ ಬ್ಯಾಟಿಂಗ್ ಫಲದಿಂದ ನಿಗದಿತ 20 ಓವರಿನಲ್ಲಿ 175 ರನ್ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಆರಂಭದಿಂದಲೂ ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ ಕೇವಲ 131 ಗಳಿಸಿ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು. ಕೊನೆಯಲ್ಲಿ ಧೋನಿ ಇದ್ದರೂ ಯಾವುದೇ ಮ್ಯಾಜಿಕ್ ನಡೆಯಲಿಲ್ಲ.

    ಡೆಲ್ಲಿ ಕ್ಯಾಪಿಟಲ್ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬಾಲಿಂಗ್ ಮಾಡಿದರು. ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ ಅಕ್ಷರ್ ಪಟೇಲ್ ಪಟೇಲ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ 18 ರನ್ ಕೊಟ್ಟು ಒಂದು ವಿಕೆಟ್ ಪಡೆದರು. ಇವರ ನಂತರ ಅನ್ರಿಚ್ ನಾಟ್ರ್ಜೆ ಅವರು 4 ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಕೇವಲ 21 ರನ್ ನೀಡಿದರು. ಡೆತ್ ಓವರಿನಲ್ಲಿ ಉತ್ತಮವಾಗಿ ಬೌಲ್ ಮಾಡಿದ ರಬಡಾ ನಾಲ್ಕು ಓವರ್ ಎಸೆದು ಮೂರು ವಿಕೆಟ್ ಕಿತ್ತು 26 ರನ್ ನೀಡಿದರು.

    ಚೆನ್ನೈಗೆ ಆರಂಭಿಕ ಅಘಾತ ನೀಡಿದ ಅಕ್ಷರ್ ಪಟೇಲ್ 14 ರನ್‍ಗಳಿಸಿ ಆಡುತ್ತಿದ್ದ ಶೇನ್ ವ್ಯಾಟ್ಸನ್ ಹೆಟ್ಮಿಯರ್ ಅವರಿಗೆ ಕ್ಯಾಚ್ ಇತ್ತು ಔಟ್ ಆದರು. ನಂತರ ಪವರ್ ಪ್ಲೇ ಮುಕ್ತಾಯದ ಕೊನೆ ಬಾಲಿನಲ್ಲಿ ಮುರಳಿ ವಿಜಯ್ ಅವರು ಕೂಡ ಅನ್ರಿಚ್ ನಾಟ್ರ್ಜೆ ಅವರಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ಮೂಲಕ ಚೆನ್ನೈ ಆರು ಓವರ್ ಮುಕ್ತಾಯದ ವೇಳೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಕೇವಲ 34 ರನ್ ಪೇರಿಸಿತು.

    ಮೊದಲಿನಿಂದಲೂ ಡೆಲ್ಲಿ ಬೌಲರ್ ಚೆನ್ನೈ ಬ್ಯಾಟ್ಸ್ ಮ್ಯಾನ್‍ಗಳ ಮೇಲೆ ಒತ್ತಡ ಹಾಕಿದರು. ಇದೇ ವೇಳೆ ಇಲ್ಲದ ರನ್ ಕದಿಯಲು ಹೋಗಿ ಋತುರಾಜ್ ಗಾಯಕವಾಡ್ ಅವರು ರನ್ ಔಟ್ ಆದರು. ನಂತರ ಜೊತೆಯಾದ ಕೇದಾರ್ ಜಾಧವ್ ಮತ್ತು ಫಾಫ್ ಡು ಪ್ಲೆಸಿಸ್ ತಾಳ್ಮೆಯ ಆಟಕ್ಕೆ ಮುಂದಾದರು. ಈ ವೇಳೆ ಪ್ಲೆಸಿಸ್ ಅವರಿಗೆ ಹೆಟ್ಮಿಯರ್ ಅವರು ಒಂದು ಜೀವದಾನ ಕೂಡ ನೀಡಿದರು.

    ಇದೇ ವೇಳೆ 39 ಬಾಲಿಗೆ 54 ರನ್ ಸಿಡಿಸಿದ್ದ ಜೊತೆಯಾಟವನ್ನು ಅನ್ರಿಚ್ ನಾಟ್ರ್ಜೆ ಮುರಿದು ಹಾಕಿದರು. 26 ರನ್ ಗಳಿಸಿ ಆಡುತ್ತಿದ್ದ ಜಾಧವ್ ಅವರನ್ನು ನಾಟ್ರ್ಜೆ ಅವರು ಎಲ್‍ಬಿಡಬ್ಯ್ಲೂಗೆ ಬೀಳಿಸಿದರು. ನಂತರ ರಬಡಾ ಅವರ ಬೌಲಿಂಗ್‍ನಲ್ಲಿ 43ರನ್ ಸಿಡಿಸಿದ್ದ ಫಾಫ್ ಡು ಪ್ಲೆಸಿಸ್ ಅವರು ಔಟ್ ಆದರು. ಇದಾದ ನಂತರ ಕೊನೆಯ ಓವರಿನಲ್ಲಿ ನಾಯಕ ಧೋನಿಯವರು ಪಂತ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಇದಾದ ನಂತರ ಜಡೇಜಾ ಅವರು ಕೂಡ ರಬಡಾ ಬೌಲಿಂಗ್‍ಗೆ ಬಲಿಯಾದರು.

  • ಪೃಥ್ವಿ ಶಾ ಅರ್ಧಶತಕ, ಪಂತ್ ಅಬ್ಬರ – ಚೆನ್ನೈಗೆ 176 ರನ್ ಟಾರ್ಗೆಟ್

    ಪೃಥ್ವಿ ಶಾ ಅರ್ಧಶತಕ, ಪಂತ್ ಅಬ್ಬರ – ಚೆನ್ನೈಗೆ 176 ರನ್ ಟಾರ್ಗೆಟ್

    ದುಬೈ: ಆರಂಭಿಕ ಆಟಗಾರ ಪೃಥ್ವಿ ಶಾ ಅವರ ಮಿಂಚಿನ ಅರ್ಧಶತಕ ಮತ್ತು ರಿಷಭ್ ಪಂತ್ ಅವರು ಅಬ್ಬರದ ಬ್ಯಾಟಿಂಗ್ ಫಲವಾಗಿ ಐಪಿಎಲ್ ಏಳನೇ ಮ್ಯಾಚಿನಲ್ಲಿ ಡೆಲ್ಲಿ ತಂಡ ಚೆನ್ನೈಗೆ 176 ರನ್‍ಗಳ ಟಾರ್ಗೆಟ್ ನೀಡಿದೆ.

    ಡೆಲ್ಲಿಗೆ ಸಾಧಾರಣ ಆರಂಭ ನೀಡಿದ ಪೃಥ್ವಿ ಶಾ ಮತ್ತು ಶಿಖರ್ ಧವನ್, ಪವರ್ ಪ್ಲೇ ಮುಕ್ತಾಯದ ವೇಳೆಗೆ ಒಂದು ವಿಕೆಟ್ ಕಳೆದುಕೊಳ್ಳದೇ ಡೆಲ್ಲಿ 36 ರನ್ ಸೇರಿಸಿತು. ಪವರ್ ಪ್ಲೇ ವೇಳೆ ಚೆನ್ನೈ ತಂಡ ಉತ್ತಮವಾಗಿ ಫೀಲ್ಡಿಂಗ್ ಮಾಡಿತು. ನಂತರ ಚೆನ್ನೈ ಸ್ಪಿನ್ನರ್ ಗಳನ್ನು ದಂಡಿಸಿದ ಧವನ್ ಮತ್ತು ಪೃಥ್ವಿ ಶಾ ಬ್ಯಾಕ್ ಟು ಬ್ಯಾಕ್ ಫೋರ್ ಹೊಡೆದು ಮಿಂಚಿದರು. ಈ ವೇಳೆ ಭರ್ಜರಿಯಾಗಿ ಆಡಿದ ಪೃಥ್ವಿ ಶಾ 35 ಎಸೆತಗಳಲ್ಲಿ ಐದನೇ ಐಪಿಎಲ್ ಅರ್ಧಶತಕ ಪೂರ್ಣಗೊಳಿಸಿದರು.

    ಸಿಕ್ಸರ್ ಮತ್ತು ಫೋರುಗಳ ಸುರಿಮಳೆಗೈದ ಡೆಲ್ಲಿ ಆರಂಭಿಕ ಬ್ಯಾಟ್ಸ್ ಮ್ಯಾನ್‍ಗಳು, 10 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 88 ರನ್ ಸಿಡಿಸಿದರು. ಈ ವೇಳೆ 35 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಧವನ್ ಅವರು ಸಲ್ಲದ ಹೊಡೆತಕ್ಕೆ ಕೈ ಹಾಕಿ ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ 43 ಎಸೆತಗಳಿಗೆ 64 ರನ್ (9 ಫೋರ್, 1 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ಪೃಥ್ವಿ ಶಾ ಧೋನಿಯವರ ಸ್ಟಂಪಿಂಗ್‍ಗೆ ಬಲಿಯಾದರು.

    15 ಓವರಿನ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡ 124 ರನ್ ಕಲೆಹಾಕಿತು. ಬಳಿಕ ಒಂದಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ರನ್ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಟ್ ಬೀಸಿದರು. ಜೊತೆಗೆ ಈ ಜೋಡಿ 35 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಆದರೆ 18ನೇ ಓವರಿನ ಕೊನೆಯ ಬಾಲಿನಲ್ಲಿ ಧೋನಿ ಹಿಡಿದ ಸೂಪರ್ ಕ್ಯಾಚಿಗ್ 26 ರನ್ ಗಳಿಸಿದ್ದ ಐಯ್ಯರ್ ಬಲಿಯಾದರು.

    ಈ ವೇಳೆ ಮಿಂಚಿನ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಅವರು, 25 ಬಾಲಿಗೆ 37 ರನ್ ಸಿಡಿಸಿ ಡೆಲ್ಲಿ ತಂಡ 170 ಗಡಿ ದಾಟಲು ಸಹಾಯಕವಾದರು. ಈ ಇನ್ನಿಂಗ್ಸ್‍ನಲ್ಲಿ ಪಂತ್ 6 ಭರ್ಜರಿ ಫೋರ್ ಚಚ್ಚಿದರು. ಚೆನ್ನೈ ತಂಡ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಇಂದಿನ ಪಂದ್ಯದಲ್ಲಿ ಚೆನ್ನೈ ತಂಡದ ಫೀಲ್ಡಿಂಗ್ ಕ್ಲಿಕ್ ಆಯ್ತು.

  • ಚೆನ್ನೈ, ಡೆಲ್ಲಿ ತಂಡಗಳ ಬಲಾಬಲ- ಧೋನಿ ಬ್ಯಾಟಿಂಗ್ ಕ್ರಮಾಂಕ ಬದಲಾಗುತ್ತಾ?

    ಚೆನ್ನೈ, ಡೆಲ್ಲಿ ತಂಡಗಳ ಬಲಾಬಲ- ಧೋನಿ ಬ್ಯಾಟಿಂಗ್ ಕ್ರಮಾಂಕ ಬದಲಾಗುತ್ತಾ?

    ದುಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಗೆಲುವು ಮತ್ತು ಸೋಲಿನ ರುಚಿ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

    ಟೂರ್ನಿಯ ಡೆಬ್ಯು ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಗೆಲುವು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದುವರೆಗೂ 21 ಬಾರಿ ಚೆನ್ನೈ ತಂಡದೊಂದಿಗೆ ಮುಖಾಮುಖಿಯಾಗಿದೆ. ಇದರಲ್ಲಿ ಚೆನ್ನೈ ತಂಡ 15 ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿದೆ.

    ಕಳೆದ ಪಂದ್ಯದಲ್ಲಿ ನಂ.7 ಬ್ಯಾಟಿಂಗ್ ಕ್ರಮದಲ್ಲಿ ಕಣಕ್ಕಿಳಿದು ಭಾರೀ ಟೀಕೆಗೆ ಗುರಿಯಾಗಿದ್ದ ಧೋನಿ ಈ ಪಂದ್ಯದಲ್ಲಿ ಬಡ್ತಿ ಪಡೆಯುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಹರ್ಭಜನ್ ಸಿಂಗ್ ಗೈರು ಹಾಜರಿಯಲ್ಲಿ ಚೆನ್ನೈ ತಂಡದ ಬೌಲಿಂಗ್ ಪಡೆ ಬಲಗೈ ಬ್ಯಾಟ್ಸ್ ಮನ್‍ಗಳನ್ನು ಹೇಗೆ ಎದುರಿಸಲಿದೆ ಎಂಬ ಪ್ರಶ್ನೆಗೆ ಉತ್ತರ ಲಭಿಸಬೇಕಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಬೌಲಿಂಗ್‍ಗಳು ದುಬಾರಿಯಾಗಿದ್ದರು.

    ಸ್ಯಾಮ್ ಕರ್ರನ್ ಚೆನ್ನೈ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಇವರ ಬೌಲಿಂಗ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದೆ. ಐಪಿಎಲ್ ಟೂರ್ನಿಯ ಪವರ್ ಪ್ಲೇಗಳಲ್ಲಿ ಹೆಚ್ಚು ವಿಕೆಟ್ ಪಡೆದಿರುವ ಚಹರ್ ತಮ್ಮ ಫಾರ್ಮ್ ಗೆ ಮರಳಬೇಕಿದ್ದು, ಚೆನ್ನೈ ಭರವಸೆಯನ್ನಟ್ಟಿದೆ.

    ಕಳೆದ ಪಂದ್ಯದಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಸಾಮಥ್ರ್ಯವನ್ನು ತೋರಿದ್ದು, ಅಯ್ಯರ್ ಹೇಗೆ ಅವರನ್ನು ನಿಯಂತ್ರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ರಾಯುಡು ಅಲಭ್ಯರಾಗಿರುವ ಕಾರಣ ಮತ್ತೊಮ್ಮೆ ಗಾಯಕ್ವಾಡ್ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ. ಡುಪ್ಲೆಸಿಸ್ ಚೆನ್ನೈ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದು, ರೈನಾ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ.

    ಇತ್ತ ಶ್ರೇಯರ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ತಂಡ ಉತ್ತಮ ಆತ್ಮವಿಶ್ವಾಸವನ್ನು ಹೊಂದಿದೆ. ಆಲ್‍ರೌಂಡರ್ ಸ್ಟೋಯ್ನಿಸ್, ರಬಾಡ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ಅಶ್ವಿನ್ ಅಲಭ್ಯರಾಗಿದ್ದು, ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. ಧವನ್ ಚೆನ್ನೈ ವಿರುದ್ಧ 122.56ರ ಸ್ಟ್ರೈಕ್ ರೇಟ್‍ನಲ್ಲಿ 641 ರನ್ ಗಳಿಸಿದ್ದಾರೆ. ಉಳಿದಂತೆ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಡೆಲ್ಲಿ ತಂಡದ ಒಮ್ಮೆಯೂ ಫೈನಲ್ ಪ್ರವೇಶ ಮಾಡಿಲ್ಲ. 4 ಬಾರಿ ಸೆಮಿಸ್/ಪ್ಲೇಅಫ್ ತಲುಪಿದ್ದರೆ, ಚೆನ್ನೈ 3 ಬಾರಿ ಪ್ರಶಸ್ತಿಯನ್ನು ಗೆದ್ದಿದೆ.

    ಸಂಭಾವ್ಯ ತಂಡ:
    ಚೆನ್ನೈ: ಧೋನಿ (ನಾಯಕ), ವಾಟ್ಸನ್, ಮುರಳಿ ವಿಜಯ್, ಡುಪ್ಲೆಸಿಸ್, ಕರ್ರನ್, ಋತುರಾಜ್ ಗಾಯಕ್ವಾಡ್, ಕೇದಾರ್ ಜಾದವ್, ಜಡೇಜಾ, ಚಹರ್, ಪಿಯೂಷ್ ಚಾವ್ಲಾ, ಲುಂಗಿ ಎನ್’ಗಿಡಿ.

    ಡೆಲ್ಲಿ ಕ್ಯಾಪಿಟಲ್ಸ್: ಶ್ರೇಯಸ್ ಅಯ್ಯರ್ (ನಾಯಕ), ರಿಷಬ್ ಪಂತ್, ಧವನ್, ಪೃಥ್ವಿ ಶಾ, ಅಕ್ಷರ್, ರಬಡಾ, ಸ್ಟೋಯ್ನಿಸ್, ಮೋಹಿತ್ ಶರ್ಮಾ/ಅವೇಶ್ ಖಾನ್, ಹೆಟ್ಮಾಯರ್, ಅಕ್ಷರ್ ಪಟೇಲ್, ಅನ್ರಿಕ್.

  • ವಿವಾದಕ್ಕೀಡಾದ ಡೆಲ್ಲಿ ಕ್ಯಾಪ್ಟನ್ ಹೇಳಿಕೆ- ಗಂಗೂಲಿಯನ್ನ ಸಂಕಷ್ಟಕ್ಕೆ ಸಿಲುಕಿಸಿದ ಅಯ್ಯರ್

    ವಿವಾದಕ್ಕೀಡಾದ ಡೆಲ್ಲಿ ಕ್ಯಾಪ್ಟನ್ ಹೇಳಿಕೆ- ಗಂಗೂಲಿಯನ್ನ ಸಂಕಷ್ಟಕ್ಕೆ ಸಿಲುಕಿಸಿದ ಅಯ್ಯರ್

    ದುಬೈ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯರ್ ಅಯ್ಯರ್ ನೀಡಿದ ಒಂದು ಹೇಳಿಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ರೋಚಕ ಗೆಲುವು ಪಡೆದಿತ್ತು. ಆದರೆ ಪಂದ್ಯದ ಟಾಸ್ ಸಂದರ್ಭದಲ್ಲಿ ಮಾತನಾಡಿದ್ದ ಅಯ್ಯರ್, ತನಗೆ ಮಾರ್ಗದರ್ಶನ ನೀಡಲು ಪಾಂಟಿಂಗ್ ಹಾಗೂ ಗಂಗೂಲಿ ಇರುವುದು ನನ್ನ ಅದೃಷ್ಟ. ತಂಡಕ್ಕೂ ಗಂಗೂಲಿ ಅವರ ಮಾರ್ಗದರ್ಶನ ಹಾಗೂ ಸಹಕಾರ ಲಭಿಸುತ್ತಿದೆ ಎಂದು ಹೇಳಿದ್ದರು.

    ಶ್ರೇಯರ್ ಅಯ್ಯರ್ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ನಡುವೆಯೇ ಟ್ವೀಟ್ ಮಾಡಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅಯ್ಯರ್, ಯುವ ನಾಯಕನಾಗಿ ಕಳೆದ ಆವೃತ್ತಿಯಲ್ಲಿ ನನಗೆ ಪಾಂಟಿಂಗ್ ಹಾಗೂ ಗಂಗೂಲಿ ಸಹಕಾರ ನೀಡಿದ್ದರು. ಆದ್ದರಿಂದ ನಾನು ಅವರಿಗೆ ಧನ್ಯವಾದ ಹೇಳುವ ಕ್ರಮದಲ್ಲಿ ಆ ರೀತಿ ಮಾತನಾಡಿದ್ದೇನೆ ಅಷ್ಟೇ. ನನ್ನ ವೈಯುಕ್ತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಬ್ಬರಿಗೂ ಧನ್ಯವಾದ ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಅಯ್ಯರ್ ಸ್ಪಷ್ಟಪಡಿಸಿದ್ದಾರೆ.

    ಬಿಸಿಸಿಯ ಅಧ್ಯಕ್ಷರಾಗಿರುವ ಗಂಗೂಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಲಹೆಗಾರರಾಗಲೂ ಹೇಗೆ ಸಾಧ್ಯ, ನಿಯಮಗಳ ಅನ್ವಯ ಇದು ಕಾನ್‍ಫ್ಲಿಕ್ಟ್ ಆಫ್ ಇಂಟ್ರಸ್ಟ್ ಆಗುತ್ತೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಕಳೆದ ಆವೃತ್ತಿಯಲ್ಲಿ ಗಂಗೂಲಿ, ಡೆಲ್ಲಿ ತಂಡದ ಮೆಂಟರ್ ಆಗಿದ್ದರು. ಆ ಹಿನ್ನೆಲೆಯಲ್ಲಿ ಅಯ್ಯರ್ ಕೃತಜ್ಞತೆ ತಿಳಿಸಿದ್ದರೆ ಸಾಕಾಗಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಲವರು, ಶ್ರೇಯಸ್ ಅಯ್ಯರ್ ಬಾಯಿ ತಪ್ಪಿ ಹೇಳಿದ್ದಾರೆ. ಅದನ್ನು ದೊಡ್ಡ ವಿವಾದ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ಗಂಗೂಲಿ ಅವರ ವಿರುದ್ಧ ಕಾನ್‍ಫ್ಲಿಕ್ಟ್ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ ಡ್ರಿಮ್ 11 ಟೈಟಲ್ ಪ್ರಯೋಕತ್ವ ನೀಡುತ್ತಿದೆ. ಇದರ ನಡುವಯೇ ಗಂಗೂಲಿ ಆ್ಯಪ್ ಮೈ ಸರ್ಕಿಲ್ 11 ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಪ್ರಯೋಕತ್ವ ಹೊಂದಿರುವ ಬೈಜೂಸ್ ಗೆ ಪೈಪೋಟಿ ನೀಡುತ್ತಿರುವ ಆನ್‍ಲೈನ್ ಶಿಕ್ಷಣದ ಆ್ಯಪ್ ಜಾಹೀರಾತಿನಲ್ಲೂ ಗಂಗೂಲಿ ಕಾಣಿಸುತ್ತಿದ್ದಾರೆ. ಬಿಸಿಸಿಐಗೆ ಪ್ರಯೋಜಕತ್ವ ನೀಡುತ್ತಿರುವ ಅಂಬುಜಾ ಸಿಮೆಂಟ್ಸ್ ಬದಲಾಗಿ ಜೆಎಸ್‍ಡಬ್ಲ್ಯೂ ಸಿಮೆಂಟ್ಸ್ ಪರ ಗಂಗೂಲಿ ಪ್ರಚಾರ ಮಾಡುತ್ತಿರುವುದು ತಪ್ಪು ಎಂಬ ವಿಮರ್ಶೆಗಳು ಕೇಳಿ ಬಂದಿದೆ.

  • ಡೆಬ್ಯು ಪಂದ್ಯದ ಮೊದ್ಲ ಓವರ್‌ನಲ್ಲೇ 2 ವಿಕೆಟ್ ಕಬಳಿಸಿ ಗಂಭೀರವಾಗಿ ಗಾಯಗೊಂಡ ಅಶ್ವಿನ್

    ಡೆಬ್ಯು ಪಂದ್ಯದ ಮೊದ್ಲ ಓವರ್‌ನಲ್ಲೇ 2 ವಿಕೆಟ್ ಕಬಳಿಸಿ ಗಂಭೀರವಾಗಿ ಗಾಯಗೊಂಡ ಅಶ್ವಿನ್

    ಅಬುಧಾಬಿ: ಐಪಿಎಎಲ್ 2020 ಆವೃತ್ತಿಯ ಮೊದಲ ಪಂದ್ಯದಲ್ಲೇ ತಮ್ಮ ಬೌಲಿಂಗ್‍ನೊಂದಿಗೆ ಎದುರಾಳಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಆರ್ ಅಶ್ವಿನ್ ಭುಜಕ್ಕೆ ಗಾಯವಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಎದುರಿನ ಆಟದ ವೇಳೆ ಎಡ ಭುಜಕ್ಕೆ ಗಾಯವಾಗಿದೆ.

    2020ರ ಐಪಿಎಲ್ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ಡೆಬ್ಯು ಪಂದ್ಯದ ಇನ್ನಿಂಗ್ಸ್ ನ 6ನೇ ಓವರ್ ಬೌಲ್ ಮಾಡಿದ ಅಶ್ವಿನ್, ಮೊದಲ ಎಸೆತದಲ್ಲೇ ಕರುಣ್ ನಾಯರ್ ವಿಕೆಟ್ ಪಡೆದರು. ಅಲ್ಲದೇ ಇದೇ ಓವರ್ ನಲ್ಲಿ ನಿಕೋಲಸ್ ಪೂರನ್ ಅವರನ್ನು ಶೂನ್ಯಕ್ಕೆ ಬೋಲ್ಡ್ ಮಾಡುವ ಮೂಲಕ ಮಿಂಚಿಸಿದ್ದರು. ಈ ಓವರ್ ನಲ್ಲಿ ಅಶ್ವಿನ್ 2 ರನ್ ಮಾತ್ರ ನೀಡಿದ್ದರು. ಈವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಅಶ್ವಿನ್ ಭಾರೀ ಹೊಡೆತವನ್ನೇ ನೀಡಿ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು.

    ಆದರೆ ಪವರ್ ಪ್ಲೇ ವೇಳೆ ಬೌಲಿಂಗ್ ಮಾಡುತ್ತಿದ್ದಾಗ ಓವರ್ ನ ಅಂತಿಮ ಎಸೆತದಲ್ಲಿ ಸಿಂಗಲ್ ರನ್ ತಡೆಯಲು ಯತ್ನಿಸಿ ಡೈವ್ ಮಾಡಿದ್ದರು, ಈ ವೇಳೆ ಅವರ ಎಡಭುಜಕ್ಕೆ ಗಾಯವಾಗಿದೆ. ಕೂಡಲೇ ಅವರು ಮೈದಾನದಿಂದ ತೆರಳಿದ್ದರು.

    ಆ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಅಶ್ವಿನ್, ಎಡಗೈಗೆ ಪಟ್ಟಿ ಹಾಕಿಕೊಂಡು, ಭುಜದ ಮೇಲೆ ಐಸ್ ಪ್ಯಾಕ್ ಹಾಕಲಾಗಿತ್ತು. ಸೂಪರ್ ಓವರ್ ನಲ್ಲಿ ರೋಚಕ ಗೆಲುವು ಪಡೆದ ಡೆಲ್ಲಿ ತಂಡದ ನಾಯಕಿಗೆ ಅಶ್ವಿನ್ ಅವರ ಗಾಯದ ಭೀತಿ ಎದುರಾಗಿತ್ತು. ಪಂದ್ಯದ ಬಳಿಕ ಅಶ್ವಿನ್ ಗಾಯಗೊಂಡ ಕುರಿತು ಪ್ರತಿಕ್ರಿಯೆ ನೀಡಿದ ಡೆಲ್ಲಿ ತಂಡದ ನಾಯಕ ಅಯ್ಯರ್, ಅನುಭವಿ ಆಟಗಾರ ಅಶ್ವಿನ್ ಮುಂದಿನ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಆ ಓವರ್ ಆಟದ ದಿಕ್ಕನ್ನೇ ಬದಲಿಸಿತ್ತು ಎಂದು ಹೇಳಿದ್ದರು.

    ಇತ್ತ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಫೋಟಕವಾಗಿ ಆಡಿದ್ದರೂ ವಿಜಯ ಲಕ್ಷ್ಮಿ ಪಂಜಾಬ್ ತಂಡದ ಕೈ ಹಿಡಿಯಲಿಲ್ಲ. ಸೂಪರ್ ಓವರಿನಲ್ಲಿ ಡೆಲ್ಲಿ ತಂಡ ಪಂಜಾಬ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಇದನ್ನೂ ಓದಿ: ಕನ್ನಡಿಗ ಅಗರ್ವಾಲ್ ಸ್ಫೋಟಕ ಆಟ – ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ