Tag: delhi blast

  • ಪ್ರತೀಕಾರಕ್ಕೆ ಕೃತ್ಯ ಎಂದು ಪೋಸ್ಟ್‌ – ದೆಹಲಿ ಸ್ಫೋಟಕ್ಕೆ ಖಲಿಸ್ತಾನಿ ನಂಟು, ತನಿಖೆ ಆರಂಭ

    ಪ್ರತೀಕಾರಕ್ಕೆ ಕೃತ್ಯ ಎಂದು ಪೋಸ್ಟ್‌ – ದೆಹಲಿ ಸ್ಫೋಟಕ್ಕೆ ಖಲಿಸ್ತಾನಿ ನಂಟು, ತನಿಖೆ ಆರಂಭ

    ನವದೆಹಲಿ: ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿನ ಸಿಆರ್‌ಪಿಎಫ್ ಶಾಲೆಯ (CRPF) ಬಳಿ ನಡೆದ ಸ್ಫೋಟಕ್ಕೆ (Blast) ಖಲಿಸ್ತಾನಿ ನಂಟಿದ್ಯಾ ಎಂಬ ಶಂಕೆ ಈಗ ಎದ್ದಿದೆ.

    ಭಾರತೀಯ ಏಜೆಂಟರು ಖಲಿಸ್ತಾನ್ (Khalistani) ಪರ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಪ್ರತೀಕಾರವಾಗಿ ಸ್ಫೋಟ ನಡೆಸಿದ್ದೇವೆ ಎಂದು ಪಾಕಿಸ್ತಾನದ ಟೆಲಿಗ್ರಾಂ ಚಾನೆಲ್‌ನಲ್ಲಿ ಖಲಿಸ್ತಾನಿ ಗುಂಪು ಹೇಳಿಕೊಂಡಿದೆ.

    ಭಾನುವಾರ ನಡೆದ ಸ್ಫೋಟದ (Blast) ತೀವ್ರತೆಗೆ ಹತ್ತಿರದಲ್ಲಿದ್ದ ಕಟ್ಟಡಗಳು ಅದುರಿವೆ. ಸ್ಫೋಟದ ಶಬ್ಧ ಸುಮಾರು 2 ಕಿ.ಮೀ ದೂರದವರೆಗೆ ಕೇಳಿದೆ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದೆ.

    ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (IED) ಬಳಸಿ ಈ ಕೃತ್ಯ ಎಸಗಲಾಗಿದೆ. ಬಾಲ್‌ ಬೇರಿಂಗ್‌ ಇರಲಿಲ್ಲ. ಟೈಮರ್ ಅಥವಾ ರಿಮೋಟ್‌ನಿಂದ ಇದನ್ನು ನಿಯಂತ್ರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಉಗ್ರರು ಕೆನಡಾ ಗುಪ್ತಚರ ಸಂಸ್ಥೆಯ ಆಸ್ತಿ: ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಕಿಡಿ

    ಪೋಸ್ಟ್‌ನಲ್ಲಿ ಏನಿದೆ?
    ಭಾರತೀಯ ಹೇಡಿ ಸಂಸ್ಥೆ ಮತ್ತು ಮಾಸ್ತರ್‌ ನಮ್ಮ ಸದಸ್ಯರನ್ನು ಗುರಿಯಾಗಿಸಿ ಗುಂಡಾಗಳನ್ನು ನೇಮಿಸಿ ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದರೆ ಅದು ಮುರ್ಖತನವಾದಿತು. ನಾವು ಎಷ್ಟು ಹತ್ತಿರದಲ್ಲಿದ್ದೇವೆ ಮತ್ತು ನಾವು ಯಾವಾಗ ಬೇಕಾದರೂ ದಾಳಿ ನಡೆಸಲು ಸಮರ್ಥರಿದ್ದೇವೆ ಎಂದು ಜಸ್ಟೀಸ್‌ ಲೀಗ್‌ ಇಂಡಿಯಾ ಹೇಳಿಕೊಂಡಿದೆ. ಈ ಪೋಸ್ಟ್‌ನೊಂದಿಗೆ ಸ್ಫೋಟಗೊಳ್ಳುತ್ತಿರುವ ದೃಶ್ಯದ ವಿಡಿಯೋವನ್ನು ಅಪ್ಲೋಡ್‌ ಮಾಡಿ ಖಲಿಸ್ತಾನ ಜಿಂದಾಬಾದ್‌ ಎಂದು ಹೇಳಿದೆ.

    ಸ್ಫೋಟದ ನಂತರ, ರಾಷ್ಟ್ರೀಯ ತನಿಖಾ ದಳ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ದೆಹಲಿ ಪೊಲೀಸರ ತಂಡಗಳು ಪ್ರದೇಶವನ್ನು ಸುತ್ತುವರೆದಿವೆ. ವಿಧಿವಿಜ್ಞಾನ ತಜ್ಞರು ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟ ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಹತ್ತಿರದ ಅಂಗಡಿಗಳ ಕಿಟಕಿ ಗಾಜುಗಳನ್ನು ನಾಶಪಡಿಸಿದೆ ಮತ್ತು ಹತ್ತಿರದಲ್ಲಿ ನಿಲ್ಲಿಸಿದ್ದ ಕೆಲವು ಕಾರುಗಳನ್ನು ಹಾನಿಗೊಯಾಗಿದೆ.

    ಭಾನುವಾರ ಬೆಳಗ್ಗೆ 7:35ರಿಂದ 7:40ರ ನಡುವೆ ಬಾಂಬ್ ಸ್ಫೋಟಗೊಂಡಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದರಿಂದ ತಡರಾತ್ರಿ ಬಾಂಬ್ ಇರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

     

  • ಕ್ಲೋರೇಟ್, ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ CRPF ಶಾಲೆ ಬಳಿ ಸ್ಫೋಟ – NIA ತೀವ್ರ ಶೋಧ

    ಕ್ಲೋರೇಟ್, ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ CRPF ಶಾಲೆ ಬಳಿ ಸ್ಫೋಟ – NIA ತೀವ್ರ ಶೋಧ

    ನವದೆಹಲಿ: ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಶಾಲೆಯ ಬಳಿ ನಡೆದ ಸ್ಫೋಟದಲ್ಲಿ ಕಡಿಮೆ ದರ್ಜೆಯ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    ಸ್ಫೋಟ ನಡೆದ ಸ್ಥಳದಲ್ಲಿ ದೆಹಲಿ ಪೊಲೀಸರು, ಫೋರೆನ್ಸಿಕ್ ತಂಡ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಂಪೂರ್ಣ ಪರಿಶೀಲನೆ ನಡೆಸಿದೆ. ಇಲ್ಲಿ ಯಾವುದೇ ಟೈಮರ್ ಪತ್ತೆಯಾಗಿಲ್ಲ. ಸುಧಾರಿತ ಸ್ಫೋಟಕ ಸಾಧನದಲ್ಲಿ (IED) ಟೈಮರ್ ಬಳಕೆಯಾಗುತ್ತದೆ. ಪ್ರಾಥಮಿಕ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಕ್ಲೋರೇಟ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣವನ್ನು ಬಳಸಿ ಸ್ಫೋಟ ನಡೆಸಲಾಗಿದೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸ್ಫೋಟದಲ್ಲಿ ಬಳಕೆಯಾದ ಕಚ್ಚಾ ಬಾಂಬ್ ಬೆಂಕಿಯನ್ನು ಉಂಟುಮಾಡುವ ಸಾಧನದಂತೆ ತೋರುತ್ತಿಲ್ಲ. ಅದನ್ನು ತಿನಿಸುಗಳ ಸಮೀಪದಲ್ಲಿ ಇರಿಸಲಾಗಿತ್ತು. ಇದರ ಸ್ಫೋಟದಿಂದ ಅಂಗಡಿಗಳ ಗಾಜು ಹಾಗೂ ವಾಹನಗಳ ಗಾಜು ಒಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಫೊರೆನ್ಸಿಕ್ ಪುರಾವೆಗಳನ್ನು ಹೆಚ್ಚಿನ ಪರೀಕ್ಷೆಗಾಗಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಸ್ಫೋಟಕಗಳ ಕುರಿತು ಅಂತಿಮ ವರದಿ ಎರಡು ವಾರಗಳಲ್ಲಿ ಸಿಗುವ ಸಾಧ್ಯತೆ ಇದೆ. ದೆಹಲಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಭಯೋತ್ಪಾದಕ ದಾಳಿಯಂತೆ ಕಾಣುತ್ತಿಲ್ಲ. ಇನ್ನೂ ಯುಎಪಿಎಯನ್ನು ಅಡಿಯಲ್ಲಿ ಈ ಪ್ರಕರಣ ಸೇರಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಘಟನೆ ನಡೆದ ಸ್ಥಳದ ಪರಿಶೀಲನೆಗೆ ದೆಹಲಿ ಪೊಲೀಸರಿಗೆ ಸಹಾಯ ಮಾಡಿದೆ. ವಿಕಿರಣ ತಪಾಸಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ಸಹ ನಿಯೋಜಿಸಲಾಗಿದೆ. ಇಲ್ಲಿಯವರೆಗೆ ಫೋರೆನ್ಸಿಕ್ ಸಾಕ್ಷ್ಯವು ದೇಶದಲ್ಲಿ ಇತ್ತೀಚಿನ ಸ್ಫೋಟಗಳೊಂದಿಗೆ ಯಾವುದೇ ಸಾಮಾನ್ಯತೆ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ದೆಹಲಿಯಲ್ಲಿ ಸ್ಫೋಟ – ಮೂರು ಕಾರುಗಳಿಗೆ ಹಾನಿ

    ದೆಹಲಿಯಲ್ಲಿ ಸ್ಫೋಟ – ಮೂರು ಕಾರುಗಳಿಗೆ ಹಾನಿ

    ನವದೆಹಲಿ: ರಾಜಧಾನಿ ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಶುಕ್ರವಾರ ಸಂಜೆ  ಬ್ಲಾಸ್ಟ್‌ ಸಂಭವಿಸಿದೆ. ಕಡಿಮೆ ಪ್ರಮಾಣ ಐಇಡಿ ಸ್ಫೋಟಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಕನ್ನಡಿಗಳು ಮುರಿ ಬಿದ್ದಿದೆ. ಯಾವುದೇ ಗಾಯಗಳು ವರದಿಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

    ರಾಷ್ಟ್ರಪತಿ ರಾಮನಾಥ್‌ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿರುವ ಸೇನೆಯ ಬೀಟಿಂಗ್ ರಿಟ್ರೀಟ್ ಸಮಾರಂಭ ನಡೆಯುತ್ತಿರುವ ವಿಜಯ್‌ ಚೌಕ್‌ನಿಂದ 1.8 ಕಿ.ಮೀ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.

    ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ದಳ(ಎನ್‌ಎಸ್‌ಜಿ) ಆಗಮಿಸಿದೆ. ಸ್ಫೋಟದಿಂದ ಮೂರು ಕಾರುಗಳಿಗೆ ಹಾನಿಯಾಗಿದೆ.