Tag: Delhi Airport

  • ಕ್ರಿಕೆಟ್‌ ದೇವರನ್ನು ಆಕಸ್ಮಿಕವಾಗಿ ಭೇಟಿಯಾದ ಸಿಎಂ – ಒಂದೇ ಫ್ರೇಮ್‌ನಲ್ಲಿ ಸಚಿನ್‌, ಸಿದ್ದು

    ಕ್ರಿಕೆಟ್‌ ದೇವರನ್ನು ಆಕಸ್ಮಿಕವಾಗಿ ಭೇಟಿಯಾದ ಸಿಎಂ – ಒಂದೇ ಫ್ರೇಮ್‌ನಲ್ಲಿ ಸಚಿನ್‌, ಸಿದ್ದು

    ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್‌ರನ್ನ (Sachin Tendulkar) ಆಕಸ್ಮಿಕವಾಗಿ ಭೇಟಿಯಾದ ಪ್ರಸಂಗ ನಡೆಯಿತು.

    ದೆಹಲಿಯ ವಿಮಾನ ನಿಲ್ದಾಣದಲ್ಲಿ (Delhi Airport) ಗುರುವಾರ ಸಚಿನ್‌ ತೆಂಡೂಲ್ಕರ್‌ ಅವರು ಆಕಸ್ಮಿಕವಾಗಿ ಎದುರಾದ ವೇಳೆ ಕುಶಲೋಪರಿ ವಿಚಾರಿಸಿ, ಪ್ರೀತಿಯಿಂದ ಬೀಳ್ಕೊಟ್ಟರು. ಈ ಸಂತಸವನ್ನು ಸಿಎಂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, ಸಚಿನ್ ತೆಂಡೂಲ್ಕರ್ ನನ್ನ ಅಚ್ಚುಮೆಚ್ಚಿನ ಆಟಗಾರ, ದಶಕಗಳ ಕಾಲ ತೆಂಡೂಲ್ಕರ್ ಅವರ ಆಟವನ್ನು ಆಸ್ವಾದಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Virat Kohli: ಸಚಿನ್‌ ತೆಂಡೂಲ್ಕರ್‌ ಮತ್ತೊಂದು ದಾಖಲೆ ಉಡೀಸ್‌ ಮಾಡಿದ ಕೊಹ್ಲಿ!

    ಟೀಂ ಇಂಡಿಯಾ ಮಾಜಿ ನಾಯಕರೂ ಆಗಿರುವ ಸಚಿನ್‌ ತೆಂಡೂಲ್ಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದ್ದಾರೆ. ಈಗಲೂ ಸಚಿನ್‌ ಹೆಸರಿನಲ್ಲಿರುವ ಮಹತ್ವದ ದಾಖಲೆಗಳು ಯಾರೂ ಮುರಿಯಲಾಗದೇ ಸಾರ್ವಕಾಲಿಕವಾಗಿ ಉಳಿದುಕೊಂಡಿವೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 15,921 ರನ್‌ ಸಿಡಿಸಿರುವ ತೆಂಡೂಲ್ಕರ್‌, ಬರೋಬ್ಬರಿ 51 ಶತಕಗಳನ್ನು ಸಿಡಿಸಿದ್ದಾರೆ. ಸುದೀರ್ಘ ಸ್ವರೂಪದಲ್ಲಿ ಇಷ್ಟೊಂದು ಶತಕ ಯಾರೂ ಸಿಡಿಸಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳೊಂದಿಗೆ 18,426 ರನ್‌ಗನ್‌ಗಳ ಪೇರಿಸಿ ವಿಶ್ವದ ಗರಿಷ್ಠ ರನ್‌ಗಳಿಸಿದ ಏಕೈಕ ಆಟಗಾರನಾಗಿದ್ದಾರೆ.

    2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸಚಿವ್‌ ಅವರ 49 ಶತಕಗಳ ದಾಖಲೆಯನ್ನ ನುಚ್ಚುನೂರು ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ 50ನೇ ಶತಕ ದಾಖಲಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಆಟಗಾರನೊಬ್ಬ ಸಿಡಿಸಿದ ಅತಿಹೆಚ್ಚು ಶತಕಗಳಾಗಿವೆ. ಆದ್ರೆ ಅವರ ಒಟ್ಟಾರೆ ಗರಿಷ್ಠ ಸ್ಕೋರ್‌ ದಾಖಲೆಯನ್ನು ಈವರೆಗೆ ಯಾರೂ ಮುರಿದಿಲ್ಲ. ಇದನ್ನೂ ಓದಿ: 20 ವರ್ಷಗಳ ಹಿಂದಿನ ಸಚಿನ್‌ ವಿಶ್ವದಾಖಲೆಯನ್ನು ಮುರಿದ ಕೊಹ್ಲಿ

  • ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ – American Airlines ನಲ್ಲಿ ಮತ್ತೊಂದು ಕೇಸ್‌

    ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ – American Airlines ನಲ್ಲಿ ಮತ್ತೊಂದು ಕೇಸ್‌

    ವಾಷಿಂಗ್ಟನ್‌: ಇತ್ತೀಚೆಗೆ ವಿಮಾನಗಳಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಏರ್ ಇಂಡಿಯಾ (Air India), ಗೋ ಫಸ್ಟ್‌ ಬಳಿಕ ಅಮೆರಿಕನ್ ಏರ್‌ಲೈನ್ಸ್ (American Airlines) ವಿಮಾನದಲ್ಲೂ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.‌

    ಅಮೆರಿಕನ್‌ ಏರ್‌ಲೈನ್ಸ್‌ನ ನ್ಯೂಯಾರ್ಕ್‌-ನವದೆಹಲಿ (New York-Delhi Flight) ವಿಮಾನದಲ್ಲಿ ಭಾರತದ ಪ್ರಯಾಣಿಕನೊಬ್ಬ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಮಾನ ದೆಹಲಿಗೆ ಬಂದಿಳಿದ ನಂತರ ಆರೋಪಿಯನ್ನ ಸಿಐಎಸ್ಎಫ್ ಅಧಿಕಾರಿಗಳು ಬಂಧಿಸಿದ್ದಾರೆ.

    Air India

    ವಿಮಾನಯಾನ ಸಂಸ್ಥೆ ಸಹಪ್ರಯಾಣಿಕನ ಹೇಳಿಕೆಯನ್ನ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ನಾಗರಿಕ ವಿಮಾನಯಾನ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ: ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ – ಯಾತ್ರಾರ್ಥಿಗಳಿಗೆ ಬಾಗಿಲು ತೆರೆದ ದೇವಾಲಯ

    ಏನಿದು ಘಟನೆ?
    ಅಮೆರಿಕನ್‌ ಏರ್‌ಲೈನ್ಸ್‌ನ AA-292 ವಿಮಾನವು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿತ್ತು. ಈ ವೇಳೆ ಭಾರತದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಸಂಬಂಧ ಅಮೆರಿಕನ್‌ ಏರ್‌ಲೈನ್ಸ್‌ ವಿಮಾನ ಲ್ಯಾಂಡಿಂಗ್‌ ಆಗುವ ಮೊದಲೇ ದೆಹಲಿ ವಿಮಾನ ನಿಲ್ದಾಣಕ್ಕೆ (Delhi Airport) ವಿಷಯ ವರದಿ ಮಾಡಿತ್ತು. ಭಾನುವಾರ ರಾತ್ರಿ 9 ಗಂಟೆಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಯಾವುದೇ ಅಹಂ ಇಲ್ಲ, ಬಿಜೆಪಿ ವಿರುದ್ಧ ಹೋರಾಡಲು ಸಿದ್ಧ: ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ನಿತೀಶ್

    ಕಳೆದ ವರ್ಷ ನವೆಂಬರ್‌ನಲ್ಲಿ ಏರ್‌ ಇಂಡಿಯಾದಲ್ಲಿ ವ್ಯಕ್ತಿಯೊಬ್ಬ ಸಹ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಮತ್ತೊಂದು ಘಟನೆಯಲ್ಲಿ ಡಿಸೆಂಬರ್‌ 6 ರಂದು ಪ್ಯಾರಿಸ್-ನವದೆಹಲಿ ಏರ್‌ ಇಂಡಿಯಾ ವಿಮಾನದಲ್ಲೂ ಇದೇ ಘಟನೆ ನಡೆದಿತ್ತು. ಈ ವರ್ಷದ ಮಾರ್ಚ್‌ ತಿಂಗಳಲ್ಲೂ ಅಮೆರಿಕನ್‌ ಏರ್‌ಲೈನ್ಸ್‌ನಲ್ಲಿ ಇದೇ ರೀತಿ ಘಟನೆ ವರದಿಯಾಗಿತ್ತು.

  • ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಕರೆ – ಬ್ರಿಟಿಷ್ ಏರ್‌ವೇಸ್ ಟ್ರೈನಿ ಅರೆಸ್ಟ್

    ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಕರೆ – ಬ್ರಿಟಿಷ್ ಏರ್‌ವೇಸ್ ಟ್ರೈನಿ ಅರೆಸ್ಟ್

    ನವದೆಹಲಿ: ಸ್ಪೈಸ್ ಜೆಟ್ ವಿಮಾನಕ್ಕೆ (Spice Jet flight) ಗುರುವಾರ ಬಾಂಬ್ ಕರೆ (Bomb Threat) ನೀಡಿದ್ದ ಬ್ರಿಟಿಷ್ ಏರ್‌ವೇಸ್‌ನ (British Airways) ಟ್ರೈನಿ ಟಿಕೆಟ್ ಏಜೆಂಟ್‌ನನ್ನು ಶುಕ್ರವಾರ ಅಧಿಕಾರಿಗಳು ಬಂಧಿಸಿದ್ದಾರೆ.

    ಗುರುವಾರ ಸಂಜೆ ದೆಹಲಿಯಿಂದ (Delhi) ಪುಣೆಗೆ (Pune) ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆ ಅಧಿಕಾರಿಗಳು ತೀವ್ರವಾಗಿ ಶೋಧ ನಡೆಸಿದ್ದರು. ಆದರೆ ವಿಮಾನದಲ್ಲಿ ಅಂತಹ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಇನ್ನೆಲೆ ಇದನ್ನು ಹುಸಿ ಬಾಂಬ್ ಕರೆ ಎಂದು ಘೋಷಿಸಲಾಯಿತು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿರು. ಬಳಿಕ ಕರೆ ಮಾಡಿದ ವ್ಯಕ್ತಿಯನ್ನು ಬ್ರಿಟಿಷ್ ಏರ್‌ವೇಸ್ ಟಿಕೆಟ್ ಕೌಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಅಭಿನವ್ ಪ್ರಕಾಶ್ (24) ಎಂದು ಗುರುತಿಸಿದ್ದಾರೆ.

    ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆರೋಪಿ ಬಾಂಬ್ ಬೆದರಿಕೆ ಕರೆ ನೀಡಲು ಕಾರಣವೇನು ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ತನ್ನ ಬಾಲ್ಯದ ಗೆಳೆಯರಾದ ರಾಕೇಶ್ ಹಾಗೂ ಕುನಾಲ್ ಸೆಹ್ರಾವತ್‌ಗೆ ತಮ್ಮ ಗೆಳತಿಯರೊಂದಿಗೆ ಇನ್ನಷ್ಟು ಸಮಯ ಕಳೆಯಲು ಅವಕಾಶ ಮಾಡಿಕೊಡುವ ಸಲುವಾಗಿ ಬೆದರಿಕೆ ಕರೆ ಮಾಡಿದ್ದೆ. ಆ ಇಬ್ಬರು ಗೆಳತಿಯರು ಗುರುವಾರ ಬೆದರಿಕೆ ಹಾಕಲಾದ ಸ್ಪೈಸ್ ಜೆಟ್ ವಿಮಾನದಲ್ಲಿಯೇ ಪುಣೆಗೆ ತೆರಳಬೇಕಿತ್ತು ಎಂದು ಬಹಿರಂಗಪಡಿಸಿದ್ದಾನೆ. ಇದನ್ನೂ ಓದಿ: ತಿರುಪತಿಗೆ ಹುಂಡಿಯಿಂದಲೇ 1,450 ಕೋಟಿ ರೂ. ಸಂಗ್ರಹ

    ನನ್ನ ಗೆಳೆಯರು ತಮ್ಮ ಗೆಳತಿಯರೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸಿದ್ದಾಗಿ ಹೇಳಿದ್ದು, ವಿಮಾನವನ್ನು ವಿಳಂಬಗೊಳಿಸಲು ಉಪಾಯ ಹುಡುಕುವಂತೆ ನನ್ನನ್ನು ಒತ್ತಾಯಿಸಿದ್ದರು. ಬಳಿಕ ನಾವು ಸ್ಪೈಸ್ ಜೆಟ್ ಏರ್‌ಲೈನ್ಸ್ನ ಕಾಲ್ ಸೆಂಟರ್‌ಗೆ ಕರೆ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕಲು ಸಂಚು ರೂಪಿಸಿದೆವು ಎಂದು ಆರೋಪಿ ತಿಳಿಸಿದ್ದಾನೆ.

    ಗುರುವಾರ ಸಂಜೆ 6:30ಕ್ಕೆ ದೆಹಲಿ-ಪುಣೆ ಸ್ಪೈಸ್ ಜೆಟ್ ವಿಮಾನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಆದರೆ ವಿಮಾನ ಟೇಕ್ ಆಫ್ ಆಗುವುದಕ್ಕೂ ಕೆಲವೇ ನಿಮಿಷಗಳ ಮೊದಲು ಬಾಂಬ್ ಇರುವ ಬಗ್ಗೆ ಕರೆ ಬಂದಿತ್ತು. ತಕ್ಷಣವೇ ಪ್ರಯಾಣಿಕರ ಬೋರ್ಡಿಂಗ್ ಅನ್ನು ನಿಲ್ಲಿಸಿ, ವಿಮಾನದಲ್ಲಿ ತೀವ್ರವಾದ ತಪಾಸಣೆ ಮಾಡಲಾಗಿತ್ತು. ಇದನ್ನೂ ಓದಿ: 15 ಸಿಮ್‌ ಕಾರ್ಡ್‌ ಬದಲಾಯಿಸಿ, ವಿಗ್‌ ತೆಗೆದು, ಮೀಸೆ ಬೋಳಿಸಿದ್ದ ಸ್ಯಾಟ್ರೋ ರವಿ ಕೊನೆಗೂ ಸಿಕ್ಕಿಬಿದ್ದ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಯಾವುದು ಗೊತ್ತಾ?

    ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಯಾವುದು ಗೊತ್ತಾ?

    ನವದೆಹಲಿ: ಅಕ್ಟೋಬರ್ 01 ರಂದು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5G ಟೆಲಿಕಾಂ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ದೆಹಲಿ ವಿಮಾನ ನಿಲ್ದಾಣವೂ (Delhi Airport) ಸಿದ್ಧವಾಗಿದ್ದು, ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಅಕ್ಟೋಬರ್ 1 ರಿಂದಲೇ 5G ಸೇವೆಗಳ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಟರ್ಮಿನಲ್ 1 ಮತ್ತು 2 ರಲ್ಲೂ ಸಿದ್ಧತೆಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣ ವಿಮಾನ ನಿಲ್ದಾಣವು 5G ಇಂಟರ್ನೆಟ್ ಬಳಕೆಗೆ ಮುಕ್ತವಾಗಲಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಈಗಾಗಲೇ 5G ಸೆಕ್ಟ್ರಮ್ ಹರಾಜು ಪ್ರಕ್ರಿಯೆ ಅಂತ್ಯವಾಗಿದ್ದು ಜಿಯೋ, ಏರ್ಟೆಲ್, ವೊಡಾಫೋನ್ ಸೆಕ್ಟ್ರಮ್‌ಗಳನ್ನು ಖರೀದಿಸಿದೆ. ಅ.1 ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಸೇವೆಗೆ ಚಾಲನೆ ನೀಡಲಿದ್ದು, ಅ.12 ರೊಳಗೆ ಮಹಾನಗರಗಳಲ್ಲಿ 5G ಸೇವೆಗಳನ್ನು ನೀಡಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.

    ಮೊದಲ ಹಂತದಲ್ಲಿ ಮೆಟ್ರೋ ಸಿಟಿಗಳು, ದೊಡ್ಡ ನಗರಗಳಲ್ಲಿ 5G ಸೇವೆ ಆರಂಭವಾಗಲಿದ್ದು, ಹಂತ ಹಂತವಾಗಿ ಗ್ರಾಮೀಣ ಪ್ರದೇಶಗಳಿಗೂ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಸೇವಾ ಶುಲ್ಕದಲ್ಲಿ ಭಾರಿ ದೊಡ್ಡ ವ್ಯತ್ಯಾಸವಾಗದು ಎಂದು ಟೆಲಿಕಾಂ ಸಂಸ್ಥೆಗಳು ಮುನ್ಸೂಚನೆ ನೀಡಿವೆ. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ

    Live Tv
    [brid partner=56869869 player=32851 video=960834 autoplay=true]

  • ಲೆಹೆಂಗಾ ಬಟನ್‌ನಲ್ಲಿ ಲಕ್ಷ – ಲಕ್ಷ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದವನ ಬಂಧನ

    ಲೆಹೆಂಗಾ ಬಟನ್‌ನಲ್ಲಿ ಲಕ್ಷ – ಲಕ್ಷ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದವನ ಬಂಧನ

    ನವದೆಹಲಿ: ವಿದೇಶಿ ಕರೆನ್ಸಿಯನ್ನಯನ್ನು ಲೆಹೆಂಗಾ ಗುಂಡಿಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದವನನ್ನು ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, 41 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಪ್ರಯಾಣಿಕ ಮಿಸಾಮ್ ರಾಝಾ ಎಂದು ಗುರುತಿಸಲಾಗಿದೆ. ಈತ ಸ್ಪೈಸ್‌ಜೆಟ್ ವಿಮಾನದಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದನು. ಸೆಂಟ್ರಲ್ ಇಂಡಸ್ಟ್ರಿಯಲ್‌ ಸೆಕ್ಯುರಿಟಿ (ಸಿಐಎಸ್‌ಎಫ್) ಹಾಗೂ ವಿಮಾನ ನಿಲ್ದಾಣದಲ್ಲಿನ ಗುಪ್ತಚರ ಅಧಿಕಾರಿಗಳು ಟರ್ಮಿನಲ್-3ರಲ್ಲಿ ನಿಂತಿದ್ದ ಈ ವ್ಯಕ್ತಿಯ ವರ್ತನೆಯನ್ನು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಈತನ ಚಟುವಟಿಕೆಗಳನ್ನು ಗಮನಿಸಿದ್ದಾರೆ. ಅನುಮಾನದ ಮೇಲೆ ಆತನ ಲಗೇಜ್‌ಗಳನ್ನು ಪರಿಶೀಲಿಸಲಾಯಿತು. ಇದನ್ನೂ ಓದಿ: ನಿಮಗೆ ಅಧಿಕಾರದ ಅಮಲೇರಿದೆ: ಕೇಜ್ರಿವಾಲ್‍ಗೆ ಅಣ್ಣಾ ಹಜಾರೆ ಪತ್ರ

    ಸಾಂದರ್ಭಿಕ ಚಿತ್ರ

    ಎಕ್ಸ್ರೇ ಮೂಲಕ ಲಗೇಜ್ ಬ್ಯಾಗ್ ಅನ್ನು ತಪಾಸಣೆ ನಡೆಸಿದಾಗ ದೊಡ್ಡ ಗಾತ್ರದ ಗುಂಡಿಗಳು ಪತ್ತೆಯಾಗಿದೆ. ಅದನ್ನು ಪರಿಶೀಲಿಸಿದಾಗ ಕರೆನ್ಸಿ ನೋಟುಗಳನ್ನೇ ಗುಂಡಿ ರೂಪದಲ್ಲಿಟ್ಟು ಸಾಗಿಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ. ಬ್ಯಾಗ್‌ನಿಂದ ಹೊರತೆಗೆದಾಗ 1,85,500 ಸೌದಿ ರಿಯಾಲ್(41 ಲಕ್ಷ ರೂ.) ಲೆಹೆಂಗಾ ಬಟನ್‌ನಲ್ಲಿ ಇದ್ದದ್ದು ಕಂಡುಬಂದಿದೆ.

    ಸಿಐಎಸ್‌ಎಫ್ ಸಿಬ್ಬಂದಿ ಕಸ್ಟಮ್ಸ್ ಕಚೇರಿಗೆ ಆತನನ್ನು ಕರೆತಂದಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • 45 ಪಿಸ್ತೂಲ್‌ಗಳನ್ನು ಸಾಗಿಸುತ್ತಿದ್ದ ದಂಪತಿ ದೆಹಲಿ ಏರ್‌ಪೋರ್ಟ್‌ನಲ್ಲಿ ಅರೆಸ್ಟ್‌

    45 ಪಿಸ್ತೂಲ್‌ಗಳನ್ನು ಸಾಗಿಸುತ್ತಿದ್ದ ದಂಪತಿ ದೆಹಲಿ ಏರ್‌ಪೋರ್ಟ್‌ನಲ್ಲಿ ಅರೆಸ್ಟ್‌

    ನವದೆಹಲಿ: 45 ಪಿಸ್ತೂಲ್‌ಗಳನ್ನು ಒಯ್ಯುತ್ತಿದ್ದ ದಂಪತಿಯನ್ನು ನವದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಈ ಪಿಸ್ತೂಲ್‌ಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗಿತ್ತು. ಆದರೆ ಇವು ಅಸಲಿ ಬಂದೂಕುಗಳು ಎಂದು ಭಯೋತ್ಪಾದನಾ ನಿಗ್ರಹ ಘಟಕದ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ವರದಿ ಮಾಡಿದ್ದಾರೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ ಉಚಿತ: ಕೇಂದ್ರ

    ಜಗಜಿತ್‌ ಸಿಂಗ್‌ ಮತ್ತು ಜಸ್ವಿಂದರ್‌ ಕೌರ್‌ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇವರು ಜುಲೈ 10 ರಂದು ವಿಯೆಟ್ನಾಂನಿಂದ ಭಾರತಕ್ಕೆ ಮರಳಿದ್ದರು. ಜಗಜಿತ್ ಸಿಂಗ್ ಎರಡು ಬ್ಯಾಗ್‌ಗಳಲ್ಲಿ ಪಿಸ್ತೂಲ್‌ಗಳನ್ನು ಇಟ್ಟುಕೊಂಡಿದ್ದ.

    ಫ್ರಾನ್ಸ್‌ನ ಪ್ಯಾರಿಸ್‌ನಿಂದ ಭಾರತಕ್ಕೆ ಬಂದಿಳಿದ ನಂತರ ಮಂಜಿತ್ ಸಿಂಗ್ ಎಂಬಾತ ವಿಯೆಟ್ನಾಂನಲ್ಲಿರುವ ತನ್ನ ಸಹೋದರ ಜಗಜಿತ್ ಸಿಂಗ್‌ಗೆ ಈ ಬ್ಯಾಗ್‌ಗಳನ್ನು ನೀಡಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮದುವೆಯಾದ 3 ದಿನದವರೆಗೆ ಈ ದೇಶದಲ್ಲಿ ವಧು, ವರ ಟಾಯ್ಲೆಟ್‍ಗೆ ಹೋಗುವಂತಿಲ್ಲ!

    ಪಿಸ್ತೂಲ್‌ಗಳ ಒಟ್ಟು ಮೌಲ್ಯ 22.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಹಿಂದೆಯೂ 25 ಪಿಸ್ತೂಲ್‌ಗಳನ್ನು ಭಾರತಕ್ಕೆ ತಂದಿರುವುದಾಗಿ ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿತ್ತು 28 ಕೋಟಿ ಮೌಲ್ಯದ ಕೊಕೇನ್ – ಬೆಚ್ಚಿಬಿದ್ದ ಪೊಲೀಸರು

    ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿತ್ತು 28 ಕೋಟಿ ಮೌಲ್ಯದ ಕೊಕೇನ್ – ಬೆಚ್ಚಿಬಿದ್ದ ಪೊಲೀಸರು

    ನವದೆಹಲಿ: ತಮಿಳಿನ ಖ್ಯಾತ ನಟ ಸೂರ್ಯ ಅಭಿನಯದ ಅಯನ್ ಸಿನಿಮಾದಲ್ಲಿರುವ ದೃಶ್ಯದಂತೆ ತಮ್ಮ ಹೊಟ್ಟೆಯೊಳಗೆ ಸುಮಾರು 28 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ಸಾಗಿಸುತ್ತಿದ್ದ ಇಬ್ಬರು ಚಾಲಾಕಿ ಮಹಿಳೆಯರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಉಗಾಂಡಾದಿಂದ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿ 181 ಕ್ಯಾಪ್ಸುಲ್‌ಗಳಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 28 ಕೋಟಿ ಮೌಲ್ಯದ ಕೊಕೇನ್ ಪತ್ತೆಯಾಗಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಡ್ರೋನ್ ಹಾರಿಸಿ ಉತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

    ಇಬ್ಬರು ಮಹಿಳೆಯರು ಸುಮಾರು 2 ಕೆಜಿ ಕೊಕೇನ್ ಅನ್ನು ಮಾತ್ರೆಗಳಲ್ಲಿ ಅಡಗಿಸಿಟ್ಟು ನುಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್

    ಒಬ್ಬ ಮಹಿಳೆ ನಿನ್ನೆ ಸಿಕ್ಕಿಬಿದ್ದಿದ್ದರು. ಈಕೆ ತನ್ನ ಹೊಟ್ಟೆಯೊಳಗೆ 81 ಮಾತ್ರೆಗಳನ್ನು ತುಂಬಿಕೊಂಡಿದ್ದರು. ಆಕೆಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸುಮಾರು 891 ಗ್ರಾಂ ತೂಕದ ತೂಕದ ಕೊಕೇನ್ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 13.6 ಕೋಟಿಗಳಷ್ಟಿದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಮೇ 22 ರಂದು ಬಂಧಿತ ಮಹಿಳೆಯ ಹೊಟ್ಟೆಯಲ್ಲಿ ಸುಮಾರು 80 ಕ್ಯಾಪ್ಸುಲ್‌ಗಳು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. ಆಕೆಯನ್ನು ಇದೇ ಆಸ್ಪತ್ರೆಗೆ ದಾಖಲಿಸಿ 0.957 ಕೆಜಿ ತೂಕದ ಕೊಕೇನ್ ಇರುವುದನ್ನು ಪತ್ತೆ ಹಚ್ಚಿ ಅದನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 14 ಕೋಟಿಗಳಷ್ಟಿತ್ತು ಎಂದು ಅಂದಾಜಿಸಿದ್ದರು.

  • ಕೋಟ್ಯಂತರ ಮೌಲ್ಯದ ಚಿನ್ನವನ್ನು ಬೆಲ್ಟ್‌ನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಖತರ್ನಾಕ್ ಕಳ್ಳ ಅಂದರ್!

    ನವದೆಹಲಿ: ಕೋಟ್ಯಂತರ ಮೌಲ್ಯದ ಚಿನ್ನವನ್ನು ಬೆಲ್ಟ್‌ನಲ್ಲಿಟ್ಟುಕೊಂಡು ಕಳ್ಳಸಾಗಣಿಕೆ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದುಬೈಯಿಂದ ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ಪ್ರಯಾಣಿಕನೊಬ್ಬ ಲೆದರ್ ಬೆಲ್ಟ್‌ನಲ್ಲಿ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಶನಿವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಜರ್ಮನಿಯಿಂದ ಭಾರತಕ್ಕೆ ಬಂತು ಟರ್ನ್‌ಟೇಬಲ್‌ ಲ್ಯಾಡರ್ ಅಗ್ನಿಶಾಮಕ ಯಂತ್ರ – ಏನಿದರ ವಿಶೇಷತೆ?

    ಶನಿವಾರ ಬೆಳಗ್ಗೆ ದುಬೈಯಿಂದ ಆಗಮಿಸಿದ್ದ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಪಾಸಣೆಯ ಸಂರ್ಭದಲ್ಲಿ ಪ್ರಯಾಣಿಕ ಲೆದರ್ ಬೆಲ್ಟ್‌ನಲ್ಲಿ ಬಚ್ಚಿಟ್ಟಿದ್ದ ಸರದ ರೂಪದ 2.330 ಕೆ.ಜಿ. ಚಿನ್ನವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಠ ಮಾಡುವ ಗುರುಗಳಿಗೆ ಇನ್ಮುಂದೆ ಸರ್, ಮೇಡಂ ಎನ್ನುವಂತಿಲ್ಲ!

    ವಿಚಾರಣೆ ವೇಳೆ ಆರೋಪಿ ಈ ಹಿಂದೆ 4 ಬಾರಿ ಇದೇ ರೀತಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಒಟ್ಟು 2.6 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • 11.44 ಕೋಟಿ ಬೆಲೆಯ ಡ್ರಗ್ಸ್ ಸಾಗಿಸುತ್ತಿದ್ದ ಅಫ್ಘಾನಿಯರ ಬಂಧನ

    11.44 ಕೋಟಿ ಬೆಲೆಯ ಡ್ರಗ್ಸ್ ಸಾಗಿಸುತ್ತಿದ್ದ ಅಫ್ಘಾನಿಯರ ಬಂಧನ

    ನವದೆಹಲಿ: ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಅಫ್ಘಾನಿಸ್ಥಾನದವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಬರೋಬ್ಬರಿ 11.44 ಕೋಟಿ ರೂ. ಬೆಲೆಯ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

    ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಡಿ.25ರಂದು ದುಬೈನಿಂದ ಆಗಮಿಸಿದ್ದರು. ಒಟ್ಟು 208 ಕ್ಯಾಪ್ಸಲ್ಸ್ ಗಳಲ್ಲಿ 1.635 ಕೆ.ಜಿ. ಹೆರಾಯಿನ್ ರೂಪದ ಡ್ರಗ್ಸ್ ನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 11.44 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.

    ನಾರ್ಕೋಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಕ್ ಸಬ್‍ಸ್ಟೇನ್ಸಸ್ ಆಕ್ಟ್-1985 ಅಡಿ ಪ್ರಕರಣ ದಾಖಲಾಗಿದ್ದು, ಜನವರಿ 25ರಂದು ಇಕೆ 512 ವಿಮಾನದಲ್ಲಿ ಆಗಮಿಸಿದ ಇಬ್ಬರು ಅಫ್ಘಾನಿಸ್ಥಾನದವರನ್ನು ದೆಹಲಿ ಕಸ್ಟಮ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 208 ಕ್ಯಾಪ್ಸಲ್ಸ್ ಒಟ್ಟು 1,635 ಗ್ರಾಂ. ವೈಟ್ ಪೌಡರ್ ರೀತಿಯ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

  • ಅಮೆರಿಕಕ್ಕೆ ಹಾರಲು 81ರ ಅಜ್ಜನಾದ 32ರ ವ್ಯಕ್ತಿ ಕನ್ನಡಕದಿಂದ ಸಿಕ್ಕಿಬಿದ್ದ!

    ಅಮೆರಿಕಕ್ಕೆ ಹಾರಲು 81ರ ಅಜ್ಜನಾದ 32ರ ವ್ಯಕ್ತಿ ಕನ್ನಡಕದಿಂದ ಸಿಕ್ಕಿಬಿದ್ದ!

    ನವದೆಹಲಿ: ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ 81 ವರ್ಷದ ಅಜ್ಜನ ರೀತಿ ವೇಷ ಧರಿಸಿ, ನಕಲಿ ಪಾಸ್‍ಪೋರ್ಟ್ ಇಟ್ಟುಕೊಂಡು ಬಂದಿದ್ದ 32 ವರ್ಷದ ವ್ಯಕ್ತಿಯೊಬ್ಬ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಸಿಬ್ಬಂದಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.

    81 ವರ್ಷದ ವೃದ್ಧ ಪ್ರಯಾಣಿಕನ ಸೋಗಿನಲ್ಲಿ ನಕಲಿ ಪಾಸ್‍ಪೋರ್ಟ್ ಹೊಂದಿದ್ದ ವ್ಯಕ್ತಿಯ ಮುಖವಾಡವನ್ನು ದೆಹಲಿ ವಿಮಾನ ನಿಲ್ದಾಣದ ಸಿಐಎಸ್‍ಎಫ್ ಸಿಬ್ಬಂದಿ ಬಟಾಬಯಲು ಮಾಡಿದ್ದಾರೆ. ಭಾನುವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುಜರಾತಿನ ಅಹಮದಾಬಾದ್‍ನ ನಿವಾಸಿಯಾಗಿರುವ ಜಯೇಶ್ ಪಟೇಲ್(32) ವೃದ್ಧನಂತೆ ವೇಷ ಧರಿಸಿ ಅಮೆರಿಕಕ್ಕೆ ಹಾರಲು ಪ್ಲಾನ್ ಮಾಡಿದ್ದ. ಆದರೆ ಆತನ ಪ್ಲಾನ್‍ಗೆ ಸಿಐಎಸ್‍ಎಫ್ ಸಿಬ್ಬಂದಿ ತಣ್ಣೀರು ಎರೆಚಿದ್ದಾರೆ. ಜಯೇಶ್ ತನ್ನ ತಲೆಗೂದಲು ಮತ್ತು ಗಡ್ಡಕ್ಕೆ ಬಿಳಿ ಬಣ್ಣ ಹಚ್ಚಿಕೊಂಡು, ವೃದ್ಧನಂತೆ ಬಟ್ಟೆ ಧರಿಸಿ, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ನ್ಯೂಯಾರ್ಕಿಗೆ ತೆರಳಲು ವೀಲ್ ಚೇರ್‌ನಲ್ಲಿ ಬಂದಿದ್ದನು.

    ಆರೋಪಿ ಅಮ್ರಿಕ್ ಸಿಂಗ್(81) ಹೆಸರಿನ ನಕಲಿ ಪಾಸ್‍ಪೋರ್ಟ್ ಕೂಡ ಹೊಂದಿದ್ದನು. ವಿಮಾನ ನಿಲ್ದಾಣಕ್ಕೆ ಆತ ಬರುತ್ತಿದ್ದಂತೆ ಆತನ ನಡವಳಿಕೆ ನೋಡಿ ಸಿಐಎಸ್‍ಎಫ್ ಸಿಬ್ಬಂದಿಗೆ ಅನುಮಾನ ಬಂದಿತ್ತು. ಪರಿಶೀಲನೆ ನಡೆಸುತ್ತಿದ್ದ ವೇಳೆ ವೀಲ್ ಚೇರ್‌ನಿಂದ ಏಳಲು ತನಗೆ ಆಗಲ್ಲ ಎಂದು ಸಿಬ್ಬಂದಿಗೆ ಮುಖಕೊಟ್ಟು ಮಾತನಾಡಲು ನಿರಾಕರಿಸಿದ್ದ. ಆದ್ದರಿಂದ ಆತನ ಮೇಲೆ ಅನುಮಾನ ಹೆಚ್ಚಾಗಿ ಸಿಬ್ಬಂದಿ ಆತನ ದಾಖಲೆಗಳನ್ನು ಹೆಚ್ಚು ವಿವರವಾಗಿ ಪರಿಶೀಲನೆ ನಡೆಸಿದಾಗ ಆತನ ನಿಜಬಣ್ಣ ಬಯಲಾಗಿದೆ.

    ಪಾಸ್‍ಪೋರ್ಟ್‍ನಲ್ಲಿ ಆತನ ವಯಸ್ಸು 81 ಎಂದು ಉಲ್ಲೇಖಿಸಿದ್ದರೂ ಆತನ ಚರ್ಮವನ್ನು ನೋಡಿದಾಗ ಸಿಬ್ಬಂದಿಗೆ ಆತನಿಗೆ ಅಷ್ಟೆಲ್ಲಾ ವಯಸ್ಸಿನಂತೆ ಕಾಣಿಸಲಿಲ್ಲ. ಅಲ್ಲದೆ ಆತ ವಯಸ್ಸಾದಂತೆ ಕಾಣುವುದಕ್ಕೆ ಝೀರೋ ಪವರ್ ಕನ್ನಡಕವನ್ನು ಧರಿಸಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಆತನ ನಿಜರೂಪ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

    ನಕಲಿ ಪಾಸ್‍ಪೋರ್ಟ್ ಬಳಕೆ ಹಾಗೂ ಮಾರು ವೇಷ ಧರಿಸಿದ್ದಕ್ಕೆ ಆರೋಪಿಯನ್ನು ಸಿಬ್ಬಂದಿ ವಲಸೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಈ ರೀತಿ ಜಯೇಶ್ ಮಾಡಲು ಕಾರಣವೇನು? ಆತ ಅಮೆರಿಕಕ್ಕೆ ಯಾಕೆ ಹೋಗುತ್ತಿದ್ದ ಎನ್ನುವ ಬಗ್ಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಸದ್ಯ ತನಿಖೆ ಮುಂದುವರಿದಿದೆ.