Tag: delhi

  • ದೆಹಲಿ ವಿವಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಕೇಸ್‌ಗೆ ಟ್ವಿಸ್ಟ್ – ಸುಳ್ಳು ಕಥೆ ಕಟ್ಟಿದ ತಂದೆ ಅರೆಸ್ಟ್

    ದೆಹಲಿ ವಿವಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಕೇಸ್‌ಗೆ ಟ್ವಿಸ್ಟ್ – ಸುಳ್ಳು ಕಥೆ ಕಟ್ಟಿದ ತಂದೆ ಅರೆಸ್ಟ್

    ನವದೆಹಲಿ: ದೆಹಲಿ (Delhi) ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೀಗ ತನಿಖೆ ನಡೆಸಿದ ಪೊಲೀಸರು ಸುಳ್ಳು ಕಥೆ ಕಟ್ಟಿದ ಆರೋಪದಲ್ಲಿ ವಿದ್ಯಾರ್ಥಿನಿಯ ತಂದೆಯನ್ನೇ ಬಂಧಿಸಿದ್ದಾರೆ.

    ನಕಲಿ ಆ್ಯಸಿಡ್ ದಾಳಿಯ ಸೂತ್ರಧಾರ ಅಕೀದ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ 20 ವರ್ಷದ ಮಗಳ ಕೈಗಳ ಮೇಲೆ ತಾನೇ ಟಾಯ್ಲೆಟ್ ಕ್ಲೀನರ್ ಸುರಿದು ಸುಳ್ಳು ಕಥೆ ಕಟ್ಟಿರುವುದಾಗಿ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ – 30 ಲಕ್ಷ ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್ ಅರೆಸ್ಟ್

    ಏನಿದು ಪ್ರಕರಣ?
    ಭಾನುವಾರ (ಅ.26) ದೆಹಲಿಯ ಲಕ್ಷ್ಮಿಬಾಯಿ ಕಾಲೇಜಿನ ಹೊರಗೆ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ (Acid Attack)  ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಬೈಕ್‌ನಲ್ಲಿ ಬಂದ ಮೂವರು ಆ್ಯಸಿಡ್ ಎಸೆದು ಪರಾರಿಯಾಗಿದ್ದಾರೆ. ಮುಖವನ್ನು ರಕ್ಷಿಸುವ ಭರದಲ್ಲಿ ತನ್ನ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಆರೋಪಿಗಳಲ್ಲಿ ಓರ್ವ ಮುಕುಂದ್‌ಪುರದ ನಿವಾಸಿ ಜಿತೇಂದ್ರ ಮತ್ತು ಆತನ ಮತ್ತಿಬ್ಬರು ಸ್ನೇಹಿತರಾದ ಇಶಾನ್ ಮತ್ತು ಅರ್ಮಾನ್ ಎಂದು ಆರೋಪಿಸಿದ್ದಳು. ಇದನ್ನೂ ಓದಿ: ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್

    ತನಿಖೆಯ ವೇಳೆ ವಿದ್ಯಾರ್ಥಿನಿಯ ಹೇಳಿಕೆಯಲ್ಲಿ ಗೊಂದಲವಿರುವುದನ್ನು ಪೊಲೀಸರು ಗಮನಿಸಿದ್ದರು. ಕೂಡಲೇ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ, ಆರೋಪಿ ಜಿತೇಂದ್ರ ಹಾಗೂ ಆತನ ಬೈಕ್ ಕೃತ್ಯ ನಡೆದಿದೆ ಎಂದು ಹೇಳಿದ ಸಮಯದಲ್ಲಿ ಬೇರೆ ಕಡೆ ಇರುವುದು ಕಂಡು ಬಂದಿತ್ತು. ಕರೆಗಳ ವಿವರ, ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳಿಂದ ಇದು ದೃಢಪಟ್ಟಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ರವೀಂದರ್ ಯಾದವ್ ತಿಳಿಸಿದ್ದಾರೆ.

    ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ವೇಳೆ ಘಟನೆಯ 2 ದಿನದ ಹಿಂದೆ ವಿದ್ಯಾರ್ಥಿನಿಯ ತಂದೆಯ ಮೇಲೆ ಜಿತೇಂದ್ರ ಪತ್ನಿ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ದೂರು ನೀಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆಯೂ ವಾಗ್ವಾದ ನಡೆದಿತ್ತು. ಇದೇ ಕಾರಣಕ್ಕಾಗಿ ವಿದ್ಯಾರ್ಥಿನಿಯ ತಂದೆಯು ಜಿತೇಂದ್ರ ವಿರುದ್ಧ ಸಂಚು ರೂಪಿಸಿ, ಆ್ಯಸಿಡ್ ದಾಳಿಯ ಸುಳ್ಳು ಕಥೆ ಕಟ್ಟಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.

  • ‌ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ – ದೆಹಲಿ ಏರ್‌ಪೋರ್ಟ್‌ನಲ್ಲಿ ಮಹಿಳೆಯಿಂದ 1 ಕೆಜಿ ಗೋಲ್ಡ್‌ ಬಿಸ್ಕೆಟ್ ವಶಕ್ಕೆ

    ‌ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ – ದೆಹಲಿ ಏರ್‌ಪೋರ್ಟ್‌ನಲ್ಲಿ ಮಹಿಳೆಯಿಂದ 1 ಕೆಜಿ ಗೋಲ್ಡ್‌ ಬಿಸ್ಕೆಟ್ ವಶಕ್ಕೆ

    ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ (IGI Airport) ಯಾಂಗೋನ್‌ನಿಂದ ಬಂದ ಮಹಿಳಾ ಪ್ರಯಾಣಿಕಳೊಬ್ಬಳು ಚಿನ್ನ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.

    ಯಾಂಗೂನ್‌ನಿಂದ ಬಂದ ವಿಮಾನ 8M 620 ರಲ್ಲಿ ಮಹಿಳೆ ದೆಹಲಿಗೆ ಬಂದಿದ್ದಳು. ಒಳ ಉಡುಪುಗಳಲ್ಲಿ 997.5 ಗ್ರಾಂ ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ಅಡಗಿಸಿಟ್ಟುಕೊಂಡಿದ್ದಳು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿನ್ನ ಇರುವುದು ಪತ್ತೆಯಾಗಿತ್ತು.

    1962ರ ಕಸ್ಟಮ್ಸ್ ಕಾಯ್ದೆಯ ಅಡಿ ಚಿನ್ನವನ್ನು ಅಧಿಕಾರಿಗಳು ಸೀಜ್‌ ಮಾಡಿದ್ದಾರೆ.

  • ಅಕ್ರಮ ಸಂಬಂಧಕ್ಕೆ ಬಿತ್ತು 2 ಹೆಣ; ಗರ್ಭಿಣಿ ಹೆಂಡತಿಯನ್ನು ಕೊಂದ ಪ್ರಿಯಕರನ ಹತ್ಯೆಗೈದ ಪತಿ

    ಅಕ್ರಮ ಸಂಬಂಧಕ್ಕೆ ಬಿತ್ತು 2 ಹೆಣ; ಗರ್ಭಿಣಿ ಹೆಂಡತಿಯನ್ನು ಕೊಂದ ಪ್ರಿಯಕರನ ಹತ್ಯೆಗೈದ ಪತಿ

    ನವದೆಹಲಿ: ಅಕ್ರಮ ಸಂಬಂಧ ವಿಚಾರವಾಗಿ ಗರ್ಭಿಣಿ ಹಾಗೂ ಆಕೆಯ ಪ್ರಿಯಕರ ಹತ್ಯೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗರ್ಭಿಣಿಯನ್ನು ಆಕೆಯ ಪ್ರಿಯಕರನೇ ಇರಿದು ಕೊಂದಿದ್ದಾನೆ. ಪತ್ನಿಯ ಪ್ರಿಯಕರನನ್ನು ಆಕೆಯ ಪತಿ ಹತ್ಯೆ ಮಾಡಿದ್ದಾರೆ.

    ಬೆಚ್ಚಿಬೀಳಿಸುವ ಹತ್ಯೆ ಘಟನೆ ರಾಮ್‌ನಗರ ಪ್ರದೇಶದಲ್ಲಿ ನಡೆದಿದೆ. ಗೃಹಿಣಿ ಶಾಲಿನಿ (22) ಮತ್ತು ಆಕೆಯ ಪ್ರಿಯಕರ ಆಶು ಅಲಿಯಾಸ್‌ ಶೈಲೇಂದ್ರ (34) ಮೃತಪಟ್ಟವರು. ಮಹಿಳೆ ಪತಿ ಆಕಾಶ್‌ (24) ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

    ಶಾಲಿನಿ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದರು. ಆಕೆಯ ಪತಿ ಇ-ರಿಕ್ಷಾ ಚಾಲಕನಾಗಿದ್ದ. ಶಾಲಿನಿ ಜೊತೆ ಶೈಲೇಂದ್ರ ಅಕ್ರಮ ಸಂಬಂಧ ಹೊಂದಿದ್ದ. ಶಾಲಿನಿ ಗರ್ಭಿಣಿಯಾಗಿದ್ದಳು. ಪತಿ ಜೊತೆ ಜಗಳ ಮಾಡಿಕೊಂಡಿದ್ದಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಿನ್ನೆ ತಡರಾತ್ರಿ ಆಕಾಶ್ ಮತ್ತು ಶಾಲಿನಿ ಕುತುಬ್ ರಸ್ತೆಯಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಲು ಹೋಗಿದ್ದಾಗ ಪ್ರಿಯಕರ ದಾಳಿ ನಡೆಸಿದ್ದಾನೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಆಶು, ಆಕಾಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ. ನಂತರ ಇ-ರಿಕ್ಷಾದಲ್ಲಿ ಶಾಲಿನಿ ಇರುವುದನ್ನು ಗಮನಿಸಿ ಆಕೆಗೆ ಹಲವು ಬಾರಿ ಇರಿದಿದ್ದಾನೆ.

    ಪತ್ನಿಯನ್ನು ರಕ್ಷಿಸಲು ಮುಂದಾದ ಆಕಾಶ್‌ಗೂ ಚಾಕುವಿನಿಂದ ಇರಿಯುತ್ತಾನೆ. ಈ ವೇಳೆ ಆಶುವಿನಿಂದ ಚಾಕು ಕಸಿದುಕೊಂಡು ಆತನಿಗೆ ಇರಿದು ಆಕಾಶ್‌ ಹತ್ಯೆ ಮಾಡುತ್ತಾನೆ. ಶಾಲಿನಿಯ ಸಹೋದರ ರೋಹಿತ್ ತಕ್ಷಣ ಆಕೆ ಮತ್ತು ಆಕೆಯ ಪತಿಯನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಪೊಲೀಸರು ಆಶುನನ್ನು ಅದೇ ಆಸ್ಪತ್ರೆಗೆ ದಾಖಲಿಸುತ್ತಾರೆ. ಆಸ್ಪತ್ರೆಯಲ್ಲಿ ಶಾಲಿನಿ ಮತ್ತು ಪ್ರಿಯಕರ ಆಶು ಸಾವನ್ನಪ್ಪುತ್ತಾರೆ. ಪತ್ನಿಯನ್ನು ಉಳಿಸುವಾಗ ಆಕಾಶ್‌ಗೆ ಹಲವು ಇರಿತದ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ತಿಳಿಸಿದ್ದಾರೆ.

    ಶಾಲಿನಿಯ ತಾಯಿ ಶೀಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಕೊಲೆ ಮತ್ತು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಶಾಲಿನಿ ಮತ್ತು ಪತಿ ಆಕಾಶ್ ನಡುವೆ ಜಗಳವಾಗಿ ಇಬ್ಬರ ಸಂಬಂಧ ಹದಗೆಟ್ಟಿತ್ತು. ನಂತರ ಆಕೆ ಮನೆಯನ್ನು ಬಿಟ್ಟಿದ್ದಳು. ಈ ವೇಳೆ ಆಶಯ ಪರಿಚಯವಾಗಿ ಆತನೊಟ್ಟಿಗೆ ಇದ್ದಳು. ಶಾಲಿನಿ ಮತ್ತು ಆಕಾಶ್ ನಂತರ ರಾಜಿ ಮಾಡಿಕೊಂಡು ತಮ್ಮ ಇಬ್ಬರು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸಲು ಮುಂದಾದರು. ಇದು ಆಶು ಕೋಪಕ್ಕೆ ಕಾರಣವಾಯಿತು. ಶಾಲಿನಿಯ ಗರ್ಭದಲ್ಲಿರುವ ಮಗುವಿನ ತಂದೆ ನಾನೇ ಎಂದು ಹೇಳಿದ್ದ. ಈ ವಿಚಾರವಾಗಿ ಮಹಿಳೆ ಮತ್ತು ಪ್ರಿಯಕರನ ನಡುವೆ ಜಗಳವಾಗಿತ್ತು. ಕೊನೆಗೆ ಆಕೆಯ ಹತ್ಯೆಗೆ ಪ್ರಿಯಕರ ಯೋಜನೆ ರೂಪಿಸಿದ್ದ.

  • ದೆಹಲಿಯಲ್ಲಿ ಪತ್ನಿ ಜೊತೆ ‘ಕಾಂತಾರ’ ವೀಕ್ಷಿಸಿದ ಹೆಚ್.ಡಿ.ಕುಮಾರಸ್ವಾಮಿ

    ದೆಹಲಿಯಲ್ಲಿ ಪತ್ನಿ ಜೊತೆ ‘ಕಾಂತಾರ’ ವೀಕ್ಷಿಸಿದ ಹೆಚ್.ಡಿ.ಕುಮಾರಸ್ವಾಮಿ

    ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಪತ್ನಿ ಜೊತೆ ದೆಹಲಿಯಲ್ಲಿ ಕಾಂತಾರ ಚಾಪ್ಟರ್‌ 1 ಸಿನಿಮಾ ವೀಕ್ಷಿಸಿದ್ದಾರೆ.

    ಬಿಡುಗಡೆಯಾದ ಎಲ್ಲಾ ಕಡೆ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ‌. ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆಗೆ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಣೆ ನಂತರ ‘ಕಾಂತಾರ’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

    ‘ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನಿಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವದ ಪರಂಪರೆಯ ವಿರಾಟ್ ಅನಾವರಣ. ಈ ಚಿತ್ರ ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ‌. ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ & ನಟ ರಿಷಬ್ ಶೆಟ್ಟಿ ಹಾಗೂ ಮತ್ತವರ ತಂಡದ ಪ್ರಯತ್ನಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಅತ್ಯುತ್ತಮ ಚಿತ್ರಗಳು ಮೂಡಿಬರಲಿ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಕಾಂತಾರ ಚಿತ್ರವನ್ನ ಹೊಗಳಿದ್ದಾರೆ.

  • ಸ್ವಾಮಿ ಚೈತನ್ಯಾನಂದಗೆ ಸಹಕರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಡ – ಮೂವರು ಸಹಾಯಕಿಯರು ಅರೆಸ್ಟ್‌

    ಸ್ವಾಮಿ ಚೈತನ್ಯಾನಂದಗೆ ಸಹಕರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಡ – ಮೂವರು ಸಹಾಯಕಿಯರು ಅರೆಸ್ಟ್‌

    ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ (Sexual Harassment Case) ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿಯ (Swami Chaitanyananda) ಮೂವರು ಆಪ್ತ ಸಹಾಯಕಿಯರನ್ನು ದೆಹಲಿಯ ವಸಂತ್ ಕುಂಜ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಮೂವರು ಮಹಿಳಾ ಸಹಾಯಕಿಯರನ್ನು ಶ್ವೇತಾ ಶರ್ಮಾ (ಅಸೋಸಿಯೇಟ್ ಡೀನ್), ಭಾವನಾ ಕಪಿಲ್ (ಕಾರ್ಯನಿರ್ವಾಹಕ ನಿರ್ದೇಶಕಿ) ಹಾಗೂ ಕಾಜಲ್ (ಹಿರಿಯ ಅಧ್ಯಾಪಕಿ) ಎಂದು ಗುರುತಿಸಲಾಗಿದೆ. ಈ ಮೂವರು ಸ್ವಾಮೀಜಿ ನಿರ್ದೇಶನದ ಮೇಲೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹಾಕುತ್ತಿದ್ದರು. ಶಿಸ್ತು ಮತ್ತು ಸಮಯಪಾಲನೆ ನೆಪದಲ್ಲಿ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ಅಪರಾಧ ಕೃತ್ಯಕ್ಕೆ ಪ್ರಚೋದನೆ, ದೂರುದಾರರಿಗೆ ಬೆದರಿಕೆ, ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದರ ನಡುವೆ ವಿದ್ಯಾರ್ಥಿನಿಯರೊಂದಿಗೆ ಸ್ವಾಮೀಜಿ ತಂಗಿದ್ದರು ಎನ್ನಲಾದ ಉತ್ತರಾಖಂಡದ ಅಲ್ಮೋರಾದಲ್ಲಿರುವ ಅತಿಥಿ ಗೃಹಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶಿಲನೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ ದಾಖಲಾಗುತ್ತಿದ್ದಂತೆ ಬ್ಯಾಂಕ್‌ನಿಂದ 55 ಲಕ್ಷ ವಿತ್‌ಡ್ರಾ ಮಾಡಿದ ಸ್ವಾಮಿ ಚೈತನ್ಯಾನಂದ

  • 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ಲಕ್ನೋ: ಆಶ್ರಮದಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ (Swami Chaitanyananda Saraswati) ಅವರನ್ನು ಪೊಲೀಸರು ಉತ್ತರಪ್ರದೇಶದ ಆಗ್ರಾದಲ್ಲಿ (Agra) ಬಂಧಿಸಿದ್ದಾರೆ. ಅವರ ವಿರುದ್ಧ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ, ಬಲವಂತದ ದೈಹಿಕ ಸಂಪರ್ಕ ನಡೆಸಿದ ಆರೋಪಗಳಿವೆ.

    ದೆಹಲಿಯ (Delhi) ಶಾರದಾ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನ ನಿರ್ವಹಣಾ ಸಮಿತಿಯ ಸದಸ್ಯರಾಗಿರುವ ಆರೋಪಿಯು ಈ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದರು. ಇವರ ವಿರುದ್ಧ 2009 ಮತ್ತು 2016 ರಲ್ಲಿ ಸಹ ಎರಡು ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದವು. ಸ್ವಾಮೀಜಿ, ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಕರೆಸಿಕೊಂಡು ಉಚಿತ ವಿದೇಶ ಪ್ರವಾಸಗಳ ಆಮಿಷ ಒಡ್ಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು. ಮಹಿಳಾ ಹಾಸ್ಟೆಲ್‌ನಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆರೋಪಗಳು ಹೊರಬಿದ್ದ ನಂತರ, ಆಶ್ರಮದ ಆಡಳಿತ ಮಂಡಳಿ ಚೈತನ್ಯಾನಂದರನ್ನು ಅವರ ಹುದ್ದೆಯಿಂದ ಹೊರಹಾಕಿತ್ತು. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ ದಾಖಲಾಗುತ್ತಿದ್ದಂತೆ ಬ್ಯಾಂಕ್‌ನಿಂದ 55 ಲಕ್ಷ ವಿತ್‌ಡ್ರಾ ಮಾಡಿದ ಸ್ವಾಮಿ ಚೈತನ್ಯಾನಂದ

    ವಿದ್ಯಾರ್ಥಿನಿಯರ ದೂರು ಏನು?
    ಸ್ವಾಮಿ ಚೈತನ್ಯಾನಂದ ಸರಸ್ವತಿ ಪಾರ್ಥ ಸಾರಥಿ, ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಪಿಜಿಡಿಎಂ ಕೋರ್ಸ್‌ಗಳನ್ನು ಕಲಿಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಅಶ್ಲೀಲ ಭಾಷೆಯನ್ನು ಬಳಸಿ ನಿಂದಿಸುತ್ತಿದ್ದರು, ಮತ್ತು ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನ ಕಳಿಸುತ್ತಿದ್ದರು. ಅಲ್ಲದೇ ದೈಹಿಕ ಸಂಪರ್ಕಕ್ಕೂ ಪ್ರಯತ್ನಿಸಿದ್ದರು. ಸಂಸ್ಥೆಯಲ್ಲಿನ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಅವರ ಬೇಡಿಕೆ ಈಡೇರಿಸುವಂತೆ ಮಹಿಳಾ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದಾಗಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದರು.

    ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ಪೈಕಿ 17 ಮಂದಿ ತಮ್ಮ ಮೇಲೆ ನಿಂದನೆಯ ಭಾಷೆ ಬಳಸಿದ್ದಾರೆ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ನಾವು ವಿರೋಧ ಮಾಡಿದಾಗ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಸಹಕರಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು. ಇದು ಒಂದು ದಿನದ ಸಮಸ್ಯೆಯಲ್ಲ ದೀರ್ಘಕಾಲದ ಸಮಸ್ಯೆ ಎಂದು ಹೇಳಿಕೊಂಡಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದರು. ಇದನ್ನೂ ಓದಿ: ಸ್ವಾಮಿ ಚೈತನ್ಯಾನಂದ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

  • ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು: ಡಿಕೆಶಿ ಬಾಂಬ್‌

    ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು: ಡಿಕೆಶಿ ಬಾಂಬ್‌

    – ವಾಸ್ತವಾಂಶ ಜನರಿಗೆ ತಿಳಿಸಬೇಕು, ವರದಿ ಬಂದ ನಂತ್ರ ಮಾತಾಡ್ತೇನೆ; ಡಿಸಿಎಂ

    ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಧರ್ಮಸ್ಥಳ ಪ್ರಕರಣ (Dharmasthala Case) ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ಎಂದಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಈಗ ಬುರುಡೆ ಗ್ಯಾಂಗ್‌ ಷಡ್ಯಂತ್ರದ ಕುರಿತು ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆಯನ್ನ ದೆಹಲಿಗೆ ಎತ್ತಿಕೊಂಡು ಹೋಗಿದ್ದೂ ಗೊತ್ತು, ಸುಪ್ರೀಂ ಕೋರ್ಟ್‌ಗೆ (Supreme Court) ಹೋಗಿದ್ದೂ ಗೊತ್ತು ಎಂದು ಬಾಂಬ್‌ ಸಿಡಿಸಿದ್ದಾರೆ.

    ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ (DK Shivakumar), ವಾಸ್ತವಾಂಶ ಜನರಿಗೆ ತಿಳಿಸಬೇಕು ಅನ್ನೋದು ನಮ್ಮ ಆಸೆ. ರಾಜಕೀಯ ಯಾರೂ ಏನ್ ಬೇಕಾದರೂ ಮಾತಾಡಬಹುದು. ನಾನು ಮಾತಾಡಿದ್ರೆ ಸರ್ಕಾರದ ಹೇಳಿಕೆ ಆಗುತ್ತೆ. ಅಂತಿಮ ವರದಿ ಬರಲಿ, ಮಾತಾಡ್ತೀನಿ. ಹೋಮ್ ಮಿನಿಸ್ಟರ್, ಸಿಎಂ ಅಧಿಕೃತ ಸ್ಟೇಟ್ಮೆಂಟ್ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ

    Dharmasthala Chinnayya

    ಮುಂದುವರಿದು… ಬುರುಡೆ ಡೆಲ್ಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತೂ, ನಮಗೆ ಆ ಮಾಹಿತಿ ಇದೆ. ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು. ಪಿಐಎಲ್ ಹಾಕಿದ್ದು ಗೊತ್ತು, ಅಲ್ಲಿ ರಿಜೆಕ್ಟ್ ಆಗಿದ್ದು ಗೊತ್ತು. ಆದ್ರೆ ಪೊಲೀಸ್ ಇಲಾಖೆ ಅವರು ತನಿಖೆ ಮಾಡ್ತಿದ್ದಾರೆ, ವರದಿ ಕೊಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

    ಸರ್ಕಾರವನ್ನೇ ಯಾಮಾರಿಸಿದ್ದ ಬುರುಡೆ ಗ್ಯಾಂಗ್‌
    ಸುಪ್ರೀಂ (Supreme Court) ಆದೇಶ ಮುಚ್ಚಿಚ್ಚು ರಾಜ್ಯ ಸರ್ಕಾರವನ್ನೇ (Karnataka Government) ಈ ಬುರುಡೆ ಗ್ಯಾಂಗ್‌ ಯಾಮಾರಿಸಿತ್ತು. ಅರ್ಜಿ ವಜಾಗೊಂಡಿದ್ದರೂ ಎಸ್‌ಐಟಿ ರಚನೆ ಮಾಡಿಸಿಕೊಂಡು ತನಿಖೆ ಮಾಡಿಸಿತ್ತು ಅನ್ನೋ ರಹಸ್ಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ‘ಹಣದ ಆಸೆಗೆ ಬಲಿಯಾಗಿದ್ದೇನೆ, ದಯಾಮಾಡಿ ಬಚಾವ್ ಮಾಡಿ’ – ಸುಂದರ ಗೌಡರ ಕಾಲಿಗೆ ಬಿದ್ದು ಗೋಗರೆದಿದ್ದ ಚಿನ್ನಯ್ಯ

    supreme Court 1

    ಸುಪ್ರೀಂ ಕೋರ್ಟ್ ಆದೇಶ ಮುಚ್ಚಿಟ್ಟು ಮೋಸ
    ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡುವುದಕ್ಕೆ ಮುನ್ನವೇ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್‌ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದ್ರೆ ಮೇ 5ರಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ನ್ಯಾ.ಸತೀಶ್ ಚಂದ್ರ ನೇತೃತ್ವದ ಪೀಠ ಅರ್ಜಿ ವಜಾ ಮಾಡಿತ್ತು. ಆದ್ರೂ ಇದನ್ನ ಮುಚ್ಚಿಟ್ಟು ಬುರುಡೆ ಗ್ಯಾಂಗ್‌ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಎಸ್ಪಿಗೂ ದೂರು ನೀಡಲಾಗಿತ್ತು.

    Dharmasthala Mass Burial Case 6 hour operation in Point 13

    ಎಸ್‌ಐಟಿ ರಚನೆ ಮಾಡುವಂತೆ ಅರ್ಜಿ ಸಲ್ಲಿಸಿದ್ದ ಗ್ಯಾಂಗ್‌
    ಕಳೆದ ಏಪ್ರಿಲ್‌ 30 ರಂದು ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯಿಸಿ ಬುರುಡೆ ಗ್ಯಾಂಗ್‌ ಅರ್ಜಿ ಸಲ್ಲಿಕೆ ಮಾಡಿತ್ತು. ಆದ್ರೆ ಮೇ 5ರಂದೇ ಸುಪ್ರೀಂ ಕೋರ್ಟ್‌ ಬುರುಡೆ ಗ್ಯಾಂಗ್‌ಗೆ ಛೀಮಾರಿ ಹಾಕಿ ಅರ್ಜಿ ವಜಾಗೊಳಿಸಿತ್ತು. ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ, ವೈಯಕ್ತಿಕ ಹಿತಾಸಕ್ತಿ ಕಾಣಿಸುತ್ತಿದೆ. ಇದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಎಂದು ಬುರುಡೆ ಗ್ಯಾಂಗ್‌ಗೆ ತಪರಾಕಿ ಹಾಕಿತ್ತು. ನಾಚಿಕೆ ಮಾನಾ ಮರ್ಯಾದೆ ಎಲ್ಲವನ್ನೂ ಬಿಟ್ಟು ಬಂದು ದೂರು ನೀಡಿದ್ದೀರಿ ಎಂದು ಗ್ಯಾಂಗನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸಾರಾಸಗಟಾಗಿ ಅರ್ಜಿಯನ್ನ ತಿರಸ್ಕರಿಸಿತ್ತು. ಇದೆಲ್ಲವನ್ನೂ ಮುಚ್ಚಿಟ್ಟಿದ್ದ ಬುರುಡೆ ಗ್ಯಾಂಗ್‌ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಬಳಿಕ ಎಸ್ಪಿಗೂ ದೂರು ನೀಡಿ ಪ್ರಕರಣ ಮುನ್ನೆಲೆಗೆ ತಂದಿದೆ ಅನ್ನೋದು ಈಗ ಬಯಲಾಗಿತ್ತು. ಈ ಬೆನ್ನಲ್ಲೇ ಡಿಕೆಶಿ ಹೇಳಿಕೆ ವಿಪಕ್ಷಗಳ ಬಾಯಿಗೂ ಆಹಾರವಾಗಿದೆ.

  • ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ನವದೆಹಲಿ: ದೀಪಾವಳಿ (Deepavali) ಸನಿಹವಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಮತ್ತೆ ವಾಯು ಮಾಲಿನ್ಯದ (Pollution) ಆತಂಕ ಶುರುವಾಗಿದೆ. ಈ ನಡುವೆ ಈ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ದೆಹಲಿ – ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ಪಟಾಕಿಗಳ (Firecrackers) ಮಾರಾಟವನ್ನು ನಿಷೇಧಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠವು, ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಪಟಾಕಿಗಳ ಮಾರಾಟ ಮತ್ತು ತಯಾರಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಹೇಳಿತು. ಇದನ್ನೂ ಓದಿ: Andhra Pradesh | ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

    ಸುಪ್ರೀಂಕೋರ್ಟ್ (Supreme Court) ದೆಹಲಿಯಲ್ಲಿ ಪಟಾಕಿ ತಯಾರಕರಿಗೆ ಹಸಿರು ಪಟಾಕಿಗಳನ್ನು ತಯಾರಿಸಲು ಅನುಮತಿ ನೀಡಿತು. ಆದಾಗ್ಯೂ, ಮುಂದಿನ ಆದೇಶದವರೆಗೆ ಈ ಪಟಾಕಿಗಳನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಮಾರಾಟ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಹಸಿರು ಪಟಾಕಿ ಪ್ರಮಾಣಪತ್ರ ಹೊಂದಿರುವ ತಯಾರಕರು ಮಾತ್ರ ಪಟಾಕಿಗಳನ್ನು ತಯಾರಿಸಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ. ಈ ಪ್ರಮಾಣಪತ್ರವನ್ನು NEERI ಮತ್ತು PESOನಂತಹ ಅಧಿಕೃತ ಏಜೆನ್ಸಿಗಳು ನೀಡಬೇಕು ಎಂದು ಹೇಳಿದೆ. ಇದನ್ನೂ ಓದಿ: ಲಡಾಖ್‌ ಹಿಂಸಾಚಾರಕ್ಕೆ ಪ್ರಚೋದನೆ – ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅರೆಸ್ಟ್‌

    ದೆಹಲಿ-ಎನ್‌ಸಿಆರ್‌ನಲ್ಲಿ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪಟಾಕಿ ತಯಾರಕರು ಲಿಖಿತ ಭರವಸೆ ನೀಡಬೇಕಾಗುತ್ತದೆ. ದೀಪಾವಳಿಯ ಸಮಯದಲ್ಲಿ ಈ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುವುದರಿಂದ ನ್ಯಾಯಲಯ ಈ ಷರತ್ತು ವಿಧಿಸಿದೆ. ಈ ವಿಷಯದ ಕುರಿತು ಮುಂದಿನ ವಿಚಾರಣೆಯಲ್ಲಿ, ಮಾರಾಟವನ್ನು ತಡೆಯಲು ಮುಂದಿನ ಹಂತದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸುಪ್ರೀಂಕೋರ್ಟ್ ನಿರ್ಧರಿಸಲಿದೆ.  ಇದನ್ನೂ ಓದಿ: ಮಿಗ್ -21 ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ: ರಾಜನಾಥ್ ಸಿಂಗ್

  • ನೀನು ಸುಂದರವಾಗಿ ಕಾಣ್ತೀಯಾ, ಬೇಬಿ I Love You: ಕಾಲೇಜು ವಿದ್ಯಾರ್ಥಿನಿಯರ ಬೆನ್ನುಬಿದ್ದಿದ್ದ ಸ್ವಾಮೀಜಿ

    ನೀನು ಸುಂದರವಾಗಿ ಕಾಣ್ತೀಯಾ, ಬೇಬಿ I Love You: ಕಾಲೇಜು ವಿದ್ಯಾರ್ಥಿನಿಯರ ಬೆನ್ನುಬಿದ್ದಿದ್ದ ಸ್ವಾಮೀಜಿ

    ನವದೆಹಲಿ: ದೆಹಲಿಯ ಸ್ವಾಮಿ ಚೈತನ್ಯಾನಂದ ಸರಸ್ವತಿಯ ಒಂದೊಂದೆ ಕರ್ಮಕಾಂಡ ಬಯಲಾಗಿದೆ. ‘ನೀನು ಸುಂದರವಾಗಿ ಕಾಣ್ತೀಯಾ.. ಬೇಬಿ ಐ ಲವ್ಯೂ’ ಅಂತ ಕಾಲೇಜು ವಿದ್ಯಾರ್ಥಿನಿಯರ ಬೆನ್ನುಬಿದ್ದಿದ್ದರು ಸ್ವಾಮೀಜಿ ಎಂಬ ಆರೋಪ ಕೇಳಿಬಂದಿದೆ.

    62 ವರ್ಷದ ಸ್ವಾಮೀಜಿಯು ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಲೈಂಗಿಕ ಕಿರುಕುಳ ಆರೋಪದ ಮೇಲೆ ದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಸ್ವಾಮೀಜಿ ಬಯಕೆ ಈಡೇರಿಸುವಂತೆ ಮಹಿಳಾ ಅಧ್ಯಾಪಕರಿಂದ್ಲೇ ವಿದ್ಯಾರ್ಥಿನಿಯರ ಮೇಲೆ ಒತ್ತಡ – ತನಿಖೆ ತೀವ್ರ

    ಎಫ್‌ಐಆರ್‌ನಲ್ಲಿ ಕಿರುಕುಳ ನೀಡಿರುವ ಬಗ್ಗೆ ಯುವತಿಯರ ಹೇಳಿಕೆ ಉಲ್ಲೇಖವಾಗಿದೆ. EWS ಕೋಟಾದಡಿ ಬಂದ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಟಾರ್ಗೆಟ್ ಮಾಡುತ್ತಿದ್ದರು. ಸ್ಕಾಲರ್‌ಶಿಪ್‌ ಕೊಡಿಸುವ, ಅಂಕಗಳನ್ನು ಕಟ್ ಮಾಡುವ, ಮಾರ್ಕ್ಸ್ ಕಾರ್ಡ್ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

    ವಿದೇಶ ಪ್ರವಾಸದ ಆಫರ್ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ತಡರಾತ್ರಿ ಮೆಸೇಜ್ ಮಾಡಿ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸುತ್ತಿದ್ದರು. ಕಾಲೇಜಿನ ಡೀನ್ ಕೂಡ ಸ್ವಾಮೀಜಿಗೆ ಸಾಥ್ ನೀಡುತ್ತಿದ್ದರು. ಡೀನ್‌ಗೆ ದೂರು ನೀಡಲು ಬಂದರೆ, ಮೆಸೇಜ್‌ಗೆ ಪ್ರತಿಕ್ರಿಯೆ ನೀಡುವಂತೆ ಸಲಹೆ ನೀಡುತ್ತಿದ್ದರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

  • ಸ್ವಾಮೀಜಿ ಬಯಕೆ ಈಡೇರಿಸುವಂತೆ ಮಹಿಳಾ ಅಧ್ಯಾಪಕರಿಂದ್ಲೇ ವಿದ್ಯಾರ್ಥಿನಿಯರ ಮೇಲೆ ಒತ್ತಡ – ತನಿಖೆ ತೀವ್ರ

    ಸ್ವಾಮೀಜಿ ಬಯಕೆ ಈಡೇರಿಸುವಂತೆ ಮಹಿಳಾ ಅಧ್ಯಾಪಕರಿಂದ್ಲೇ ವಿದ್ಯಾರ್ಥಿನಿಯರ ಮೇಲೆ ಒತ್ತಡ – ತನಿಖೆ ತೀವ್ರ

    – ಕೇಸ್‌ ದಾಖಲಾಗ್ತಿದ್ದಂತೆ ತಲೆ ಮರೆಸಿಕೊಂಡ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ
    – 32 ವಿದ್ಯಾರ್ಥಿನಿಯರ ಹೇಳಿಕೆ ದಾಖಲು

    ನವದೆಹಲಿ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಲವಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ (Chaitanyananda Saraswati Swamiji) ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    ಇದೇ ಆಗಸ್ಟ್‌ 4ದಂದು ವಸಂತ್ ಕುಂಜ್ ಉತ್ತರ ಪೊಲೀಸ್ (Vasant Kunj North Police) ಠಾಣೆಯಲ್ಲಿ 17 ವಿದ್ಯಾರ್ಥಿನಿಯರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಶಾರದಾ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನ ನಿರ್ವಹಣಾ ಸಮಿತಿಯ ಸದಸ್ಯರೂ ಆಗಿರುವ ಆರೋಪಿಯು ಈ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದಾನೆ. ಈತನ ಕ್ರಿಮಿನಲ್‌ ಹಿನ್ನೆಲೆ ಕೆದಕಿದಾಗ 2009 ಮತ್ತು 2016 ರಲ್ಲಿ ಸ್ವಾಮೀಜಿ ವಿರುದ್ಧ ಎರಡು ಲೈಂಗಿಕ ಕಿರುಕುಳದ ದೂರು ದಾಖಲಾಗಿವೆ ಅನ್ನೋದು ಬೆಳಕಿಗೆ ಬಂದಿದೆ.  ಇದನ್ನೂ ಓದಿ: 17 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ – ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ FIR

    ವಿದ್ಯಾರ್ಥಿನಿಯರ ದೂರು ಏನು?
    ಸ್ವಾಮಿ ಚೈತನ್ಯಾನಂದ ಸರಸ್ವತಿ ಪಾರ್ಥ ಸಾರಥಿ, ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಪಿಜಿಡಿಎಂ ಕೋರ್ಸ್‌ಗಳನ್ನು ಕಲಿಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಅಶ್ಲೀಲ ಭಾಷೆಯನ್ನು ಬಳಸಿ ನಿಂದಿಸುತ್ತಿದ್ದರು, ಮತ್ತು ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನ ಕಳಿಸುತ್ತಿದ್ದರು. ಅಲ್ಲದೇ ದೈಹಿಕ ಸಂಪರ್ಕಕ್ಕೂ ಪ್ರಯತ್ನಿಸಿದ್ದರು. ಸಂಸ್ಥೆಯಲ್ಲಿನ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಅವರ ಬೇಡಿಕೆ ಈಡೇರಿಸುವಂತೆ ಮಹಿಳಾ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದಾಗಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದಾರೆ.

    ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ಪೈಕಿ 17 ಮಂದಿ ತಮ್ಮ ಮೇಲೆ ನಿಂದನೆಯ ಭಾಷೆ ಬಳಸಿದ್ದಾರೆ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ನಾವು ವಿರೋಧ ಮಾಡಿದಾಗ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಸಹಕರಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು. ಇದು ಒಂದು ದಿನದ ಸಮಸ್ಯೆಯಲ್ಲ ದೀರ್ಘಕಾಲದ ಸಮಸ್ಯೆ ಎಂದು ಹೇಳಿಕೊಂಡಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ರಾಷ್ಟ್ರಧ್ವಜ ಹಾರಿಸೋದನ್ನ ತಡೆಯಲು ಬಹುಮಾನ ಘೋಷಿಸಿದ್ದ ಪನ್ನುನ್ ವಿರುದ್ಧ ಕೇಸ್

    ತನಿಖೆ ತೀವ್ರ
    ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಘಟನಾ ಸ್ಥಳ ಮತ್ತು ಆರೋಪಿಯ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದಾರೆ. ಸ್ವಾಮೀಜಿ ಮನೆಯಲ್ಲಿದ್ದ ಕಂಪ್ಯೂಟರ್‌ನಿಂದ ಹಾರ್ಡ್‌ ಡಿಸ್ಕ್‌ ವಶಕ್ಕೆ ಪಡೆದು ಅದನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೋಟರ್‌ ಐಡಿ ದುರುಪಯೋಗ ತಡೆಗೆ ಪರಿಹಾರ; ಇ-ಸೈನ್ ವ್ಯವಸ್ಥೆ ಆರಂಭಿಸಿದ ಚುನಾವಣಾ ಆಯೋಗ