Tag: Delete

  • ಈ ಬಾರಿ 7.43 ಲಕ್ಷ ನಕಲಿ MGNREGA ಜಾಬ್ ಕಾರ್ಡ್ ಡಿಲೀಟ್ – ಯುಪಿಯಲ್ಲೇ ಅತಿ ಹೆಚ್ಚು

    ಈ ಬಾರಿ 7.43 ಲಕ್ಷ ನಕಲಿ MGNREGA ಜಾಬ್ ಕಾರ್ಡ್ ಡಿಲೀಟ್ – ಯುಪಿಯಲ್ಲೇ ಅತಿ ಹೆಚ್ಚು

    ನವದೆಹಲಿ: 2022-23ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿಯಲ್ಲಿ 7.43 ಲಕ್ಷಕ್ಕೂ ಹೆಚ್ಚು ನಕಲಿ ಉದ್ಯೋಗ ಕಾರ್ಡ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.

    ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿ ಈ ವಿವರಗಳನ್ನು ಹಂಚಿಕೊಂಡಿದ್ದಾರೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಕಲಿ ಜಾಬ್ ಕಾರ್ಡ್‌ಗಳನ್ನು ತೆಗೆದುಹಾಕುವಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. 2021-22 ರಲ್ಲಿ 3,06,944 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆ 7,43,457 ಕ್ಕೆ ಏರಿಕೆಯಾಗಿದೆ.

    ಈ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದಲ್ಲಿ 2.96 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ಎಂದು ವರದಿಯಾಗಿದೆ. ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಒದಗಿಸಿರುವ ವಿವರದಲ್ಲಿ, ಉತ್ತರ ಪ್ರದೇಶದಲ್ಲಿ 2,96,464 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸುವ ಮೂಲಕ ದೇಶದಲ್ಲೆ ಅಗ್ರ ಸ್ಥಾನದಲ್ಲಿದೆ. ಒಡಿಶಾದಲ್ಲಿ 1,14,333 ನಕಲಿ ಜಾಬ್ ಕಾರ್ಡ್ ಅಳಿಸುವ ಮೂಲಕ ನಂತರದ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಡಲಾಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ಬಂದ್

    ಜಾಬ್ ಕಾರ್ಡ್‌ಗಳನ್ನು ಅಳಿಸುವ ಮತ್ತು ಅಪ್ಡೇಟ್ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. MGNREGA ಕಾಯಿದೆಯ ಸೆಕ್ಷನ್ 25ರ ಪ್ರಕಾರ ಇದನ್ನು ಉಲ್ಲಂಘಿಸುವವರು 1,000 ರೂ.ವರೆಗೆ ದಂಡವನ್ನು ಕಟ್ಟಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ – ಇಬ್ಬರು ಶೂಟರ್ ಸೇರಿ ಮೂವರು ಅರೆಸ್ಟ್

  • ನಾನು ‘ಕೆಜಿಎಫ್ 2’ ಸಿನಿಮಾ ನೋಡಿಲ್ಲ, ನನ್ನ ಅಭಿರುಚಿಯ ಸಿನಿಮಾ ಅದಲ್ಲ : ನಟ ಕಿಶೋರ್

    ನಾನು ‘ಕೆಜಿಎಫ್ 2’ ಸಿನಿಮಾ ನೋಡಿಲ್ಲ, ನನ್ನ ಅಭಿರುಚಿಯ ಸಿನಿಮಾ ಅದಲ್ಲ : ನಟ ಕಿಶೋರ್

    ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಕಿಶೋರ್ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಸುಖಾಸುಮ್ಮನೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಕರಾವಳಿ ದೈವಗಳ ಬಗ್ಗೆ ಪೋಸ್ಟ್ ಮಾಡಿ, ನಂಬಿಕೆ ಅಪನಂಬಿಕೆ ಬಗ್ಗೆ ಮಾತನಾಡಿದ್ದರು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಕೆಜಿಎಫ್ 2 ಚಿತ್ರದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಅದು ಕೂಡ ವಿವಾದಕ್ಕೀಡಾಗಿದೆ. ಅವರ ನೇರ ನುಡಿಯ ಮಾತುಗಳು ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲವನ್ನೂ ಮೂಡಿಸುತ್ತಿವೆ.

    ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಕುರಿತು ಮಾತನಾಡಿರುವ ಅವರು, ‘ನಾನು ಕೆಜಿಎಫ್ 2 ಸಿನಿಮಾ ಈವರೆಗೂ ನೋಡಿಲ್ಲ. ನೋಡಬೇಕು ಅಂತ ಅನಿಸಿಲ್ಲ. ನಾನು ನೋಡುವ ಚಿತ್ರಗಳೇ ಬೇರೆ. ನನ್ನ ಅಭಿರುಚಿಯ ಸಿನಿಮಾದಲ್ಲಿ ಅದು ಇಲ್ಲ’ ಎಂದು ಹೇಳುವ ಮೂಲಕ ಯಶ್ ಫ್ಯಾನ್ಸ್ ಅನ್ನು ಅವರು ಕೆಣಕಿದ್ದಾರೆ. ಹಾಗಾದರೆ, ಕಿಶೋರ್ ಯಾವ ರೀತಿಯ ಚಿತ್ರಗಳನ್ನು ನೋಡುತ್ತಾರೆ ಎನ್ನುವ ಪಟ್ಟಿಯನ್ನು ಕೊಡಲಿ ಎಂದು ಯಶ್ ಫ್ಯಾನ್ಸ್ ನಟನ ಮೇಲೆ ಗರಂ ಆಗಿದ್ದಾರೆ. ಕಿಶೋರ್ ನಟಿಸಿರುವ ಸಿನಿಮಾಗಳು, ಅವರ ಅಭಿರುಚಿಗೆ ತಕ್ಕದ್ದಾದ ಚಿತ್ರಗಳಾ ಎಂದು ಪ್ರಶ್ನೆಯನ್ನೂ ಹಲವರು ಮಾಡಿದ್ದಾರೆ.

    ಈ ಹಿಂದೆಯೂ ಕಿಶೋರ್ ಅವರು ಕಾಂತಾರ ಸಿನಿಮಾದ ದೈವದ ಬಗ್ಗೆ ಕೆಲವು ಮಾತುಗಳನ್ನು ಬರೆದಿದ್ದರು. ನಂಬಿಕೆ, ಮೂಢನಂಬಿಕೆಗಳ ಬಗ್ಗೆ ಚರ್ಚೆ ಮಾಡಿದ್ದರು. ದೈವಗಳನ್ನು ಯಾರು ಹೇಗೆ ನಂಬಿದರೂ, ಮೂಢನಂಬಿಕೆಗಳ ಬಗ್ಗೆ ಜಾಗ್ರತೆ ಎನ್ನುವಂತೆ ಅವರ ಪೋಸ್ಟ್ ಹಿಂದಿನ ಕಾಳಜಿ ಆಗಿತ್ತು. ಆದರೆ, ಅದನ್ನು ಜನರು ಬೇರೆ ರೀತಿಯಲ್ಲೇ ತಗೆದುಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಹಿಡಿದು ಜಗ್ಗಾಡಿದರು. ಅದು ಪರ ವಿರೋಧದ ಚರ್ಚೆಯೂ ಆಗಿತ್ತು. ಇದೇ ಸಮಯದಲ್ಲೇ ಟ್ವಿಟರ್ ಖಾತೆ ಡಿಲಿಟ್ ಆಗಿ, ಅನೇಕ ಅನುಮಾನಗಳಿಗೂ ಕಾರಣವಾಗಿತ್ತು. ಇದನ್ನೂ ಓದಿ: ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

    ಪ್ರಗತಿಪರ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಕಿಶೋರ್, ಅನೇಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕಾಂತಾರ ವಿಷಯದಲ್ಲಿ ಪ್ರಗತಿಪರರೇ ಅವರಿಗೆ ಅನೇಕ ಪ್ರಶ್ನೆಗಳನ್ನು ಮಾಡಿದ್ದರು. ಇದು ಏನೇ ಇರಲಿ, ಕಿಶೋರ್ ಅವರ ಟ್ವಿಟರ್ ಖಾತೆಯನ್ನು ವಾಪಸ್ಸು ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಅತೀ ಶೀಘ್ರದಲ್ಲೇ ಅವರ ಖಾತೆ ಅವರಿಗೆ ವಾಪಸ್ಸು ಸಿಗಲಿದೆ. ಈ ಮೂಲಕ ಎದ್ದಿದ್ದ ಮತ್ತೊಂದು ವಿವಾದ ಸುಖಾಂತ್ಯ ಕಾಣಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ಕಿಶೋರ್ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರುವ ಅಸಲಿ ಕಾರಣ ಬಯಲು

    ನಟ ಕಿಶೋರ್ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರುವ ಅಸಲಿ ಕಾರಣ ಬಯಲು

    ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಕಿಶೋರ್ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರುವ ವಿಚಾರ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ದೈವದ ಕುರಿತಾಗಿ ಅವರು ಪೋಸ್ಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಟ್ವಿಟರ್ ಅಕೌಂಟ್ ಅನ್ನು ಡಿಲಿಟ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ನಡೆಯನ್ನು ಹಲವರು ಪ್ರಶ್ನಿಸಿದ್ದರು. ನೇರವಾಗಿ ಟ್ವಿಟರ್ ಸಂಸ್ಥೆಗೂ ಈ ವಿಷಯವನ್ನು ಮುಟ್ಟಿಸಿದ್ದರು. ಆದರೆ, ಅಕೌಂಟ್ ಡಿಲಿಟ್ ಆಗಿರುವುದಕ್ಕೆ ಬೇರೆ ಕಾರಣವೇ ಇದೆ. ಅದನ್ನು ಸ್ವತಃ ಕಿಶೋರ್ ಅವರೇ ಹಂಚಿಕೊಂಡಿದ್ದಾರೆ.

    ತಮ್ಮ ಟ್ವಿಟರ್ ಖಾತೆಯು ಡಿಲಿಟ್ ಆಗಿರುವ ಕಾರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಶೋರ್, ‘ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೇ ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು. ನನ್ನ ಯಾವ ಪೋಸ್ಟ್ ನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಖು ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ.

    ಇದನ್ನೂ ಓದಿ: ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

    ಕಿಶೋರ್ ಅವರು ಕಾಂತಾರ ಸಿನಿಮಾದ ದೈವದ ಬಗ್ಗೆ ಕೆಲವು ಮಾತುಗಳನ್ನು ಬರೆದಿದ್ದರು. ನಂಬಿಕೆ, ಮೂಢನಂಬಿಕೆಗಳ ಬಗ್ಗೆ ಚರ್ಚೆ ಮಾಡಿದ್ದರು. ದೈವಗಳನ್ನು ಯಾರು ಹೇಗೆ ನಂಬಿದರೂ, ಮೂಢನಂಬಿಕೆಗಳ ಬಗ್ಗೆ ಜಾಗ್ರತೆ ಎನ್ನುವಂತೆ ಅವರ ಪೋಸ್ಟ್ ಹಿಂದಿನ ಕಾಳಜಿ ಆಗಿತ್ತು. ಆದರೆ, ಅದನ್ನು ಜನರು ಬೇರೆ ರೀತಿಯಲ್ಲೇ ತಗೆದುಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಹಿಡಿದು ಜಗ್ಗಾಡಿದರು. ಅದು ಪರ ವಿರೋಧದ ಚರ್ಚೆಯೂ ಆಗಿತ್ತು. ಇದೇ ಸಮಯದಲ್ಲೇ ಟ್ವಿಟರ್ ಖಾತೆ ಡಿಲಿಟ್ ಆಗಿ, ಅನೇಕ ಅನುಮಾನಗಳಿಗೂ ಕಾರಣವಾಗಿತ್ತು.

    ಪ್ರಗತಿಪರ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಕಿಶೋರ್, ಅನೇಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕಾಂತಾರ ವಿಷಯದಲ್ಲಿ ಪ್ರಗತಿಪರರೇ ಅವರಿಗೆ ಅನೇಕ ಪ್ರಶ್ನೆಗಳನ್ನು ಮಾಡಿದ್ದರು. ಇದು ಏನೇ ಇರಲಿ, ಕಿಶೋರ್ ಅವರ ಟ್ವಿಟರ್ ಖಾತೆಯನ್ನು ವಾಪಸ್ಸು ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಅತೀ ಶೀಘ್ರದಲ್ಲೇ ಅವರ ಖಾತೆ ಅವರಿಗೆ ವಾಪಸ್ಸು ಸಿಗಲಿದೆ. ಈ ಮೂಲಕ ಎದ್ದಿದ್ದ ಮತ್ತೊಂದು ವಿವಾದ ಸುಖಾಂತ್ಯ ಕಾಣಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಕಾಂತಾರ’ ಸಿನಿಮಾದ ವರಾಹ ರೂಪಂ ಹಾಡು ಡಿಲಿಟ್: ಕಾಪಿ ವಿವಾದಕ್ಕೆ ಟ್ವಿಸ್ಟ್

    ‘ಕಾಂತಾರ’ ಸಿನಿಮಾದ ವರಾಹ ರೂಪಂ ಹಾಡು ಡಿಲಿಟ್: ಕಾಪಿ ವಿವಾದಕ್ಕೆ ಟ್ವಿಸ್ಟ್

    ಕಾಂತಾರ (Kantara) ಸಿನಿಮಾದ ವರಾಹ ರೂಪಂ (Varaha Rupam) ಹಾಡನ್ನು ಕಾಪಿ ಮಾಡಲಾಗಿದೆ ಎನ್ನುವ ವಿಚಾರ ಹಲವು ದಿನಗಳಿಂದ ಸದ್ದು ಮಾಡುತ್ತಿದೆ. ನಮ್ಮ ಹಾಡನ್ನು ಕಾಪಿ ಮಾಡಲಾಗಿದೆ ಎಂದು ಮಲಯಾಳಂ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಂಪನಿಯು ಹೇಳಿತ್ತು. ನ್ಯಾಯಾಲಯಕ್ಕೂ ದೂರು ಸಲ್ಲಿಕೆಯಾಗಿತ್ತು. ಆದರೆ, ನಿರ್ದೇಶಕ ರಿಷಬ್ ಶೆಟ್ಟಿ ಅದಕ್ಕೆ ಒಪ್ಪಿರಲಿಲ್ಲ. ನವರಸಮ್ ಆಲ್ಬಂನಿಂದ ಕದ್ದಿಲ್ಲ ಎಂದೇ ಹೇಳುತ್ತಾ ಬಂದಿದ್ದರು. ಆದರೆ, ನಿನ್ನೆಯಿಂದ ನಿರ್ಮಾಣ ಸಂಸ್ಥೆಯ ಯ್ಯೂಟ್ ನಿಂದ ಹಾಡನ್ನು ಡಿಲಿಟ್ (Delete) ಮಾಡಲಾಗಿದೆ.

    ಕಾಂತಾರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬರುವ ವರಾಹ ರೂಪಂ ಹಾಡನ್ನು (Song) ನಾವು ಕದ್ದಿಲ್ಲ. ಸುಖಾಸುಮ್ಮನೆ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾರೇ ಕೇಳಿದರೂ, ನಾವು ಅದನ್ನು ಕದ್ದ ಹಾಡಲ್ಲ ಎಂದು ಸಾಬೀತು ಪಡಿಸುತ್ತೇವೆ ಎಂದು ರಿಷಬ್ ಶೆಟ್ಟಿ (Rishabh Shetty) ಪ್ರತಿಕ್ರಿಯೆ ನೀಡಿದ್ದರು. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅವರು, ಯಾವುದೇ ಕಾರಣಕ್ಕೂ ಅದು ಕದ್ದ ಮ್ಯೂಸಿಕ್ ಅಲ್ಲ ಎಂದು ನುಡಿದಿದ್ದರು. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ಕಾಂತಾರ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹಾಡು ‘ವರಾಹ ರೂಪಂ’ ಗೀತೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಈ ಗೀತೆಯು ಸಿನಿಮಾದ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ್ಲೈಮ್ಯಾಕ್ಸ್ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಕಾರಣವೂ ಆಗಿತ್ತು. ಈ ಹಾಡಿನ ವಿರುದ್ಧ ಟ್ಯೂನ್ ಕದ್ದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‍ ನ ಸದಸ್ಯರು ಕೋರ್ಟಿಗೆ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ಈ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು.

    ಆದರೂ, ಕಾಂತರ ಸಿನಿಮಾದ ತಂಡ ನಾವು ಯಾವುದೇ ರೀತಿಯಲ್ಲಿ ಹಾಡನ್ನು ಕಾಪಿ ಮಾಡಿಲ್ಲ. ಹಾಗಾಗಿ ಚಿತ್ರದಲ್ಲಿ ಆ ಹಾಡು ಇರತ್ತೆ ಎಂದು ಈವರೆಗೂ ಥಿಯೇಟರ್ ನಲ್ಲಿ ಅದನ್ನು ಮುಂದುವರೆಸಿಕೊಂಡು ಬಂದಿದ್ದರು. ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಮತ್ತೆ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿತ್ತು.

    ಇನ್ನೂ ಕೋರ್ಟ್ ಆದೇಶದ ಪ್ರತಿ ಚಿತ್ರತಂಡಕ್ಕೆ ಸಿಗದೇ ಇರುವ ಕಾರಣದಿಂದಾಗಿ ಥಿಯೇಟರ್ ನಲ್ಲಿ ಈ ಹಾಡು ಕೇಳಿ ಬರುತ್ತಿದೆ. ಆದೇಶ ಪ್ರತಿ ಸಿಕ್ಕ ನಂತರ ಯಾವ ನಿರ್ಧಾರ ತಗೆದುಕೊಳ್ಳುತ್ತಾರೋ ಕಾದು ನೋಡಬೇಕು. ಅಷ್ಟೇ ಅಲ್ಲದೇ, ಮೊನ್ನೆಯಷ್ಟೇ ಬ್ಯಾಂಡ್ ನ ಸದಸ್ಯರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡು, ‘ಕ್ರೆಡಿಟ್ ಕೊಟ್ಟು ಈ ಹಾಡನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ, ಮ್ಯೂಸಿಕ್ ಸಂಸ್ಥೆ ಆ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ.

    ಎರಡೆರಡು ಕೋರ್ಟಿನಿಂದ ಈ ಹಾಡಿಗೆ ತಡೆಯಾಜ್ಞೆ ನೀಡಿದೆ. ಆದರೂ, ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ಮಾತಿಗೆ ಚಿತ್ರತಂಡ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆಯೋ ಕಾದು ನೋಡಬೇಕು. ಅಷ್ಟರಲ್ಲಿ ಸಂಧಾನ ಏನಾದರೂ ನಡೆದರೂ ಅಚ್ಚರಿ ಪಡಬೇಕಿಲ್ಲ ಎನ್ನಲಾಗುತ್ತಿದೆ. ಆದರೆ, ಹಾಡನ್ನೇ ಹೊಂಬಾಳೆ ಸಂಸ್ಥೆ ತಗೆದುಹಾಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾಗಚೈತನ್ಯ ನೆನಪುಗಳನ್ನು ಅಳಿಸಿ ಹಾಕಿದ ಸಮಂತಾ

    ನಾಗಚೈತನ್ಯ ನೆನಪುಗಳನ್ನು ಅಳಿಸಿ ಹಾಕಿದ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ, ನಾಗಚೈತನ್ಯ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡುವ ಮೂಲಕ ಮಾಜಿ ಪತಿಯ ನೆನಪುಗಳನ್ನು ಅಳಿಸಿ ಹಾಕಿದ್ದಾರೆ.

    ಟಾಲಿವುಡ್ ಕ್ಯೂಟ್ ಪೇರ್ ಎಂದೇ ಫೇಮಸ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನಾ ಪಡೆದ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಸದ್ಯ ದಾಂಪತ್ಯ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆಯಲು ಸಮಂತಾ ಪ್ರವಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಿಷಿಕೇಷಕ್ಕೆ ಭೇಟಿ ನೀಡಿದ್ದ ಅವರು, ಇದೀಗ ದುಬೈಗೆ ಹಾರಿದ್ದಾರೆ. ಇದನ್ನೂ ಓದಿ:  ‘ಪುಷ್ಪ’ ಸಾಂಗ್ ನಲ್ಲಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ ರಶ್ಮಿಕಾ

    ವಿಚ್ಛೇದನ ಬಳಿಕ ಪ್ರವಾಸ ಕೈಗೊಂಡಿರುವ ಸಮಂತಾ ತಮ್ಮ ದಿನಚರಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರ ಜೊತೆಗೆ ವಿವಿಧ ಸಾಲುಗಳನ್ನು ಹಾಕುವ ಮೂಲಕ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

    ಬಹುವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಸಾಕಷ್ಟು ಸಮಯ ಒಟ್ಟಿಗೆ ಕಳೆದಿದ್ದಾರೆ. ಈ ವೇಳೆ ಇಬ್ಬರು ಹಲವಾರು ರೀತಿಯ ಸಾಕಷ್ಟುಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಇವುಗಳನ್ನು ಒಂದಷ್ಟು ಚೆಂದದ ಫೋಟೋಗಳನ್ನು ಸಮಂತಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ನಾಗಚೈತನ್ಯಯಿಂದ ದೂರ ಇರುವ ಸಮಂತಾ ಅವರ ಜೊತೆ ಕಳೆದ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಿದ್ದು, ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಾಜಿ ಪತಿ ಜೊತೆಗಿರುವ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

    ವಿಶೇಷವೆಂದರೆ ಸಮಂತಾ ನಾಗಚೈತನ್ಯ ಜೊತೆಗಿರುವ ಫೋಟೋಗಳನ್ನು ಮಾತ್ರ ಡಿಲೀಟ್ ಮಾಡಿದ್ದಾರೆ. ಆದರೆ ಇಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ಪರಸ್ಪರ ಫಾಲೋ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಪಡೆದ ಬೆನ್ನಲ್ಲೇ ಆಶ್ರಮಕ್ಕೆ ಹೋಗಿದ್ದಾರಾ ಸಮಂತಾ?

  • ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಜಗ್ಗೇಶ್ ಸ್ಪಷ್ಟನೆ

    ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಜಗ್ಗೇಶ್ ಸ್ಪಷ್ಟನೆ

    ಬೆಂಗಳೂರು: ಮಗನ ಕಾರ್ ಅಪಘಾತದ ಕುರಿತು ಟ್ವೀಟ್ ಮಾಡಿದ್ದ ನಟ ಜಗ್ಗೇಶ್, ಬಳಿಕ ಡಿಲೀಟ್ ಮಾಡಿದ್ದರು. ಇದರಿಂದಾಗಿ ಹಲವು ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಇದೀಗ ಜಗ್ಗೇಶ್ ಟ್ವೀಟ್ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ.

    ಮಗನ ಕಾರ್ ಅಪಘಾತದ ಚಿತ್ರ ನೋಡಿದರೆ ನನಗೆ ಹೃದಯ ಬಡಿತ ಹೆಚ್ಚಾಗುತ್ತಿದೆ. ಕೆಟ್ಟ ಭಯ ಆವರಿಸುತ್ತದೆ. ಬೆಳಗ್ಗೆಯಿಂದ ಏನೂ ತಿನ್ನಲಾಗದೆ, ಕೆಟ್ಟ ಕಲ್ಪನೆಗಳು ನನ್ನ ಕಾಡುತ್ತಿವೆ. ಮನೆಯವರು ಅದನ್ನು ನೋಡದಂತೆ ವಿನಂತಿ ಮಾಡಿದರು. ಹೀಗಾಗಿ ಹಾಕಿದ ವಿಷಯ ಡಿಲೀಟ್ ಮಾಡಿದೆ ಎಂದು ತಿಳಿಸಿದ್ದಾರೆ.

    ಬೆಳಗ್ಗೆ ಟ್ವೀಟ್ ಮಾಡಿದ್ದ ನಟ ಜಗ್ಗೇಶ್, ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲ, ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಯತಿರಾಜ್ ಮನೆಯಿಂದ ಹೋರ ಹೋಗಿದ್ದನು. ಪ್ರತಿಬಾರಿ ಅವನ ಇಷ್ಟದ ಬೆಂಗಳೂರು-ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಕಾರ್ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದೆ. ರಾಯರ ದಯೆ ಹಾಗೂ ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ.

    ರಾಯರು ನನ್ನ ಜೊತೆ ಸದಾ ಇರುತ್ತಾರೆ, ಇದ್ದಾರೆ. ಇಂಥ ಘಟನೆಗಳು ಚಮತ್ಕಾರ ನನ್ನ ಬದುಕಲ್ಲಿ ನಡೆಯುವುದೇ ನಾನಿದ್ದೀನೋ, ಇರುತ್ತೀನೋ ನಿನ್ನ ಜೊತೆ ಯಾವಾಗಲು ಎಂದು ರಾಯರು ಅವರ ಪವಾಡ ನಿರೂಪಿಸಲು. ನಿನ್ನೆ ಪೂಜೆಯಲ್ಲಿ ಕುಟುಂಬದ ರಕ್ಷಣೆಗೆ ಪ್ರಾರ್ಥಿಸಿದ್ದೆ. ಸದಾ ಅವರ ಸ್ಮರಣೆಯಲ್ಲೇ ಬದುಕುವ ನನಗೆ ಇದು ಮತ್ತೊಂದು ಪವಾಡ. ನಂಬಿ ಕೆಟ್ಟವರಿಲ್ಲಾ ಗುರುರಾಯರ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

    ಅಪಘಾತ ಆಗಿದ್ದೇಗೆ?: ಚಿಕ್ಕಬಳ್ಳಾಪುರ ನಗರ ಹೊರವಲಯದ ಬೆಂಗಳೂರು ಹೈದರಾಬಾದ್ ಹೈವೆಯಲ್ಲಿ ಅಗಲಗುರ್ಕಿ ಸೇತುವೆ ಬಳಿ ನಟ ಜಗ್ಗೇಶ್ ಪುತ್ರ ಯತಿರಾಜ್ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಯತಿರಾಜ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಬರ್ತಿದ್ದ ವೇಳೆ ಅಗಲಗುರ್ಕಿ ಸೇತುವೆ ಅಂತ್ಯಕ್ಕೆ ಯೂ ಟರ್ನ್ ಇದೆ. ಅಡ್ಡ ಬಂದ ನಾಯಿ/ಬೈಕ್ ತಪ್ಪಿಸಲು ಹೋಗಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರು ಚಲಿಸುತ್ತಿದ್ದ ವಿರುದ್ಧ ದಿಕ್ಕಿನ ರಸ್ತೆಗೆ ಜಂಪ್ ಮಾಡಿದೆ. ತದನಂತರ ರಸ್ತೆ ಬದಿ 200-300 ಮೀಟರ್ ದೂರ ಕಾರು ರಭಸವಾಗಿ ನುಗ್ಗಿದ್ದು, ಕೊನೆಯಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ.

    ಅಪಘಾತದ ರಭಸಕ್ಕೆ ಮರದ ಕೊಂಬೆ ಸಹ ಮುರಿದಿದ್ದು, ಮರಕ್ಕೆ ಡಿಕ್ಕಿ ಹೊಡೆದು ಮತ್ತೆ ರಸ್ತೆ ಬದಿಗೆ ಉಲ್ಟಾ ತಿರುಗಿ ನಿಂತಿದೆ. ಪರಿಣಾಮ ಕಾರಿನಲ್ಲಿದ್ದ 4 ಏರ್ ಬ್ಯಾಗ್ ಗಳು ಬಿಚ್ಚಿಕೊಂಡಿವೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಯತಿರಾಜ್ ಕೆಳಗಿಳಿದಿದ್ದು ಅಷ್ಟರಲ್ಲೇ ಅಲ್ಲೇ ರಸ್ತೆ ಬದಿ ಜಮೀನಿನಲ್ಲಿ ವಿದ್ಯುತ್ ಕಂಬ ಆಳವಡಿಸುತ್ತಿದ್ದ ಕಾರ್ಮಿಕರು ಯತಿರಾಜ್ ರಕ್ಷಣೆಗೆ ಧಾವಿಸಿದ್ದಾರೆ. ತತ್ ಕ್ಷಣ ನೀರು ಕುಡಿಸಿ ಗಾಬರಿಯಾಗಿದ್ದ ಯತಿರಾಜ್ ರನ್ನ ಸಮಾಧಾನ ಮಾಡಿ ಆಟೋ ಮೂಲಕ ಕರೆದುಕೊಂಡು ಆಸ್ಪತ್ರೆಯತ್ತ ಹೋಗಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋದ್ರಾ ಇಲ್ಲ ಎಂಬುದು ತಿಳಿದುಬಂದಿಲ್ಲ. ವಿಷಯ ತಿಳಿದು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಘಟನಾ ಸ್ಥಳದಲ್ಲಿದ್ದ ಕಾರನ್ನ ಪೊಲೀಸ್ ಠಾಣಾ ಆವರಣಕ್ಕೆ ಶಿಫ್ಟ್ ಮಾಡಿದ್ದಾರೆ.

  • ಯುಟ್ಯೂಬ್‍ನಿಂದ ದಿಢೀರ್ ಡಿಲೀಟ್ ಆಯ್ತು ಚಂದನವನ ತಾರೆಯರೆಲ್ಲ ಅಭಿನಯಿಸಿದ್ದ ಹಾಡು

    ಯುಟ್ಯೂಬ್‍ನಿಂದ ದಿಢೀರ್ ಡಿಲೀಟ್ ಆಯ್ತು ಚಂದನವನ ತಾರೆಯರೆಲ್ಲ ಅಭಿನಯಿಸಿದ್ದ ಹಾಡು

    ಬೆಂಗಳೂರು: ಇತ್ತೀಚೆಗೆ ಬದಲಾಗು ನೀನು ಬದಲಾಯಿಸು ನೀನು ಹಾಡಿನ ಮೂಲಕ ಸ್ಯಾಂಡಲ್‍ವುಡ್ ಎಲ್ಲ ತಾರೆಯರು ಸೇರಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದ್ದರು.

    ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುತ ಪಡಿಸಿದ್ದ ಹಾಡನ್ನು ಪವರ್ ಓಡೆಯರ್ ನಿರ್ದೇಶನ ಮಾಡಿದ್ದರು. ಎಲ್ಲ ಕಲಾವಿದರ ಮನೆಗೆ ಹೋಗಿ ಹಾಡನ್ನು ಚಿತ್ರೀಕರಣ ಮಾಡಿದ್ದರು. ಅಂತಯೇ ಜೂನ್ 5ರಂದು ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ದಿ ಬೀಟ್ ಆಡಿಯೋದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು.

    ಆದರೆ ಈಗ ಏಕಾಏಕಿ ಬದಲಾಗು ನೀನು ಬದಲಾಯಿಸು ನೀನು ಹಾಡು ಡಿಲೀಟ್ ಆಗಿದೆ. ಈ ಒಂದು ಹಾಡಿನಲ್ಲಿ ಸುದೀಪ್ ಅವರನ್ನು ಹೊರತು ಪಡಿಸಿ ದರ್ಶನ್, ಯಶ್, ಅಪ್ಪು, ಶಿವಣ್ಣ, ಗಣೇಶ್, ಸುಮಲತಾ, ಅಬಿಷೇಕ್, ಉಪೇಂದ್ರ ಸೇರಿದಂತೆ ಬಹುತೇಕ ಕನ್ನಡದ ಕಾಲವಿದರು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಹಾಡಿ ದಿಢೀರ್ ಡಿಲೀಟ್ ಆಗಿರೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

    ಸಾರ್ವಜನಿಕರಲ್ಲಿ ಕೊರೊನಾ ನಂತರದ ದಿನಗಳ ಬಗ್ಗೆ ಅರಿವು ಮೂಡಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈ ಹಾಡನ್ನು ಮಾಡಿಸಲಾಗಿತ್ತು. ಸ್ಯಾಂಡಲ್‍ವುಡ್‍ನ ಎಲ್ಲಾ ಗಾಯಕರು ಇದರಲ್ಲಿ ಧನಿಯಾಗಿದ್ದರು. ಈ ಹಾಡು ಪವನ್ ಒಡೆಯರ್ ಮತ್ತು ಇಮ್ರಾನ್ ಸರ್ಧರಿಯಾ ಅವರ ನೇತೃತ್ವದಲ್ಲಿ ಮೂಡಿ ಬಂದಿತ್ತು. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಸಾಥ್ ನೀಡಿದ್ದರು. ಜೊತೆಗೆ ರಾಜಕಾರಣಿಗಳು ಕೂಡ ಸಾಂಗಿನಲ್ಲಿ ಕಾಣಿಸಿಕೊಂಡಿದ್ದರು.

  • ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!

    ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!

    ಮೈಸೂರು: ಮತದಾನದ ಹಕ್ಕಿನಿಂದ ಹಾಸ್ಯನಟ ಚಿಕ್ಕಣ್ಣ ವಂಚಿತರಾಗಿದ್ದಾರೆ.

    ಚಿಕ್ಕಣ್ಣ ಮೈಸೂರಿನ ಬಲ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರಾಗಿದ್ದರು. ಅಲ್ಲದೇ ಹುಟ್ಟೂರಿನಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಂಡಿದ್ದರು. ಮತದಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೂ ಕೂಡ ಆಗಮಿಸಿದ್ದರು.

    ಚಿಕ್ಕಣ್ಣ ಇಂದು ಮತಗಟ್ಟೆಗೆ ಭೇಟಿ ನೀಡಿದಾಗ ತನ್ನ ಹೆಸರಿನ ಮೇಲೆ ಡಿಲೀಟ್ ಎಂದು ಉಲ್ಲೇಖಿಸಿದ್ದಾರೆ. ವಾಸವಿಲ್ಲದ ಕಾರಣ ಡಿಲೀಟ್ ಆಗಿದೆ ಎಂದು ಮತಗಟ್ಟೆ ಸಿಬ್ಬಂದಿಗಳು ಸಬೂಬು ಹೇಳಿದ್ದಾರೆ. ಅಲ್ಲದೇ ಗ್ರಾಮದ ಹಲವರ ಹೆಸರನ್ನು ಡಿಲೀಟ್ ಮಾಡಿರುವ ಬಗ್ಗೆ ಆರೋಪಿಸಿದ್ದಾರೆ.

    ಕೊನೆಗೂ ಚಿಕ್ಕಣ ತಮ್ಮ ಮತದಾನ ಮಾಡದೆ ವಾಪಸ್ ಆಗಿದ್ದಾರೆ. ಚಿಕ್ಕಣ್ಣ ಮತದಾನಕ್ಕಾಗಿಯೇ ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದರು ಆದರೆ ಈಗ ಬೇಸರದಿಂದ ವಾಪಸ್ ಆಗಿದ್ದಾರೆ.

  • ಕ್ಲಾಸ್ ಟೀಚರ್ ಮೊಬೈಲ್ ನಲ್ಲಿ ಫೋಟೋ ಡಿಲೀಟ್ ಮಾಡಿ ಮನೆ ಬಿಟ್ಟು ಓಡಿ ಹೋದ ಬಾಲಕ!

    ಕ್ಲಾಸ್ ಟೀಚರ್ ಮೊಬೈಲ್ ನಲ್ಲಿ ಫೋಟೋ ಡಿಲೀಟ್ ಮಾಡಿ ಮನೆ ಬಿಟ್ಟು ಓಡಿ ಹೋದ ಬಾಲಕ!

    ದಾವಣಗೆರೆ: ಕ್ಲಾಸ್ ಟೀಚರ್ ಮೊಬೈಲ್ ನಲ್ಲಿ ಇದ್ದ ಫೋಟೋ ಡಿಲೀಟ್ ಮಾಡಿದ್ದಕ್ಕೆ, ಪೋಷಕರು ಹೊಡೆಯುತ್ತಾರೆ ಎಂದು ಹೆದರಿ ಬಾಲಕನೊಬ್ಬ ಮನೆ ಬಿಟ್ಟು ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಣ್ಣೀಗೆರೆ ಗ್ರಾಮದಲ್ಲಿ ನಡೆದಿದೆ.

    ಪ್ರಜ್ವಲ್(15) ಮನೆ ಬಿಟ್ಟು ಪರಾರಿಯಾದ ಬಾಲಕನಾಗಿದ್ದು, ಬುಧವಾರ ಕ್ಲಾಸ್ ನಲ್ಲಿ ಟೀಚರ್ ನ ಮೊಬೈಲ್ ತೆಗೆದುಕೊಂಡಿದ್ದ ಪ್ರಜ್ವಲ್ ಅದರಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದನು. ಇದರಿಂದ ಸಿಟ್ಟಾದ ಟೀಚರ್ ನಿಮ್ಮ ಮನೆಯವರಿಗೆ ಹೇಳುತ್ತೇನೆ ಎಂದು ಹೆದರಿಸಿದ್ದಾರೆ.

    ಮನೆಗೆ ಹೋದರೆ ಎಲ್ಲಿ ತನ್ನ ತಾಯಿ ಹೊಡೆಯುತ್ತಾರೆ ಎಂದು ಹೆದರಿ ಪ್ರಜ್ವಲ್ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಓಡಿ ಹೋದ ಮಗನನ್ನು ನೋಡಬೇಕೆಂದು ಪ್ರಜ್ವಲ್ ತಾಯಿ ರೋಧನೆ ಅನುಭವಿಸುತ್ತಿದ್ದಾರೆ.

    ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬಾಲಕನಿಗಾಗಿ ಪೊಲೀಸರು ಹಾಗೂ ಬಾಲಕನ ಸಂಬಂಧಿಕರು ಹುಡುಕಾಟ ನಡೆಸುತ್ತಿದ್ದಾರೆ.