Tag: Dehradun Airport

  • ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ

    ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ

    ಡೆಹ್ರಾಡೂನ್: ಸೂಕ್ತ ದಾಖಲೆಗಳಿಲ್ಲದೆ ಸ್ಯಾಟಲೈಟ್ ಫೋನ್ (Satellite Phone) ಅನ್ನು ಸಾಗಿಸುತ್ತಿದ್ದ ರಷ್ಯಾದ ಮಾಜಿ ಸಚಿವರನ್ನು (Ex Russian Minister) ಉತ್ತರಾಖಂಡದ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ (Dehradun Airport) ಭಾನುವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಯಾವುದೇ ಪೂರ್ವಾನುಮತಿ ಇಲ್ಲದೇ ಉಪಗ್ರಹ ಫೋನ್‌ಗಳನ್ನು ವಿಮಾನ ನಿಲ್ದಾಣದಲ್ಲಿ ಅನುಮತಿಸಲಾಗುವುದಿಲ್ಲ. ಹೀಗಾಗಿ 1998 ರಿಂದ 1999ರ ವರೆಗೆ ರಷ್ಯಾದ ಕೃಷಿ ಮತ್ತು ಆಹಾರ ಸಚಿವರಾಗಿದ್ದ ವಿಕ್ಟರ್ ಸೆಮೆನೋವ್ (Victor Semenov) (64) ಅವರನ್ನು ಡೆಹ್ರಾಡೂನ್‌ನ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಸಂದರ್ಭದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ತಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧರ್ಮ ದಂಗಲ್ – ಹಿಂದೂ ಸಂಘಟನೆಯ 25ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ

    ಮಾಸ್ಕೋದಲ್ಲಿ ನೆಲೆಸಿರುವ ಸೆಮೆನೋವ್ ಅವರು ಇಂಡಿಗೋ ವಿಮಾನದಲ್ಲಿ ದೆಹಲಿಗೆ ತೆರಳಬೇಕಿತ್ತು. ತಪಾಸಣೆ ವೇಳೆ ಸ್ಯಾಟಲೈಟ್ ಫೋನ್ ಹೊಂದಿರುವುದರ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಕೇಳಿದಾಗ ಅವರು ನೀಡಲು ಸಾಧ್ಯವಾಗಿಲ್ಲ. ತುರ್ತು ಸಂದರ್ಭದಲ್ಲಿ ವೈಯಕ್ತಿಕ ಬಳಕೆಗಾಗಿ ತಾವು ಸ್ಯಾಟಲೈಟ್ ಫೋನ್ ಅನ್ನು ಕೊಂಡೊಯ್ಯುತ್ತಿದ್ದುದಾಗಿ ಸೆಮೆನೋವ್ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಭಾರತದಾದ್ಯಂತ 20 ಕಡೆ NIA ದಾಳಿ

    Live Tv
    [brid partner=56869869 player=32851 video=960834 autoplay=true]