Tag: dehradun

  • ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ಮನೆಗಳು, ಐಟಿ ಪಾರ್ಕ್‌ ಜಲಾವೃತ – ಇಬ್ಬರು ಕಣ್ಮರೆ

    ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ಮನೆಗಳು, ಐಟಿ ಪಾರ್ಕ್‌ ಜಲಾವೃತ – ಇಬ್ಬರು ಕಣ್ಮರೆ

    ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ (Dehradun) ಮೇಘಸ್ಫೋಟ ಸಂಭವಿಸಿದ್ದು, ಮನೆಗಳು ಮತ್ತು ಐಟಿ ಪಾರ್ಕ್‌ ಪ್ರದೇಶ ಜಲಾವೃತಗೊಂಡಿದೆ. ತಪೋವನ್‌ನಲ್ಲಿ ಹಲವಾರು ಮನೆಗಳು ಮುಳುಗಿದ್ದು, ಇಬ್ಬರು ಕಣ್ಮರೆಯಾಗಿದ್ದಾರೆ.

    ಕಾರ್ಲಿಗಾಡ್ ನದಿಯಲ್ಲಿ ಉಂಟಾದ ಭಾರೀ ಪ್ರವಾಹದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹಾನಿ ಸಂಭವಿಸಿದೆ. ಆ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಹುಲ್ ಗಾಂಧಿ ಭೇಟಿ

    ಭಾರೀ ಮತ್ತು ನಿರಂತರ ಮಳೆಯಿಂದಾಗಿ ನದಿ ಅಪಾಯಕಾರಿ ಮಟ್ಟ ತಲುಪಿದ್ದು, ಸೋಮವಾರ ರಾತ್ರಿ ಪ್ರಮುಖ ಸೇತುವೆ ಕುಸಿದು ಬಿದ್ದಿದೆ. ನದಿಪಾತ್ರದಲ್ಲಿರುವ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದೆ.

    ಡೆಹ್ರಾಡೂನ್‌ನ ಸಹಸ್ರಧಾರದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಅಂಗಡಿಗಳು ಹಾನಿಗೊಳಗಾಗಿವೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಧಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಕೇಂದ್ರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದ ಪ್ರಧಾನಿ, ಈ ವಿಪತ್ತಿನ ಸಮಯದಲ್ಲಿ ಕೇಂದ್ರ ಸರ್ಕಾರ ಉತ್ತರಾಖಂಡದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆ ಸಾಧ್ಯತೆ – ರೆಡ್ ಅಲರ್ಟ್ ಘೋಷಣೆ

    ಭಾರೀ ಮಳೆಯಿಂದ ಉಂಟಾದ ಹಾನಿಯ ಕುರಿತು ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿಯೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಗೃಹ ಸಚಿವಾಲಯದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳಿಗೆ ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ತಿಳಿಸಿದ್ದಾರೆ.

  • ಪ್ರವಾಹ ಪೀಡಿತ ಉತ್ತರಾಖಂಡಕ್ಕೆ ಮೋದಿ ಭೇಟಿ – 1,200 ಕೋಟಿ ನೆರವು ಘೋಷಣೆ

    ಪ್ರವಾಹ ಪೀಡಿತ ಉತ್ತರಾಖಂಡಕ್ಕೆ ಮೋದಿ ಭೇಟಿ – 1,200 ಕೋಟಿ ನೆರವು ಘೋಷಣೆ

    ಡೆಹ್ರಾಡೂನ್: ಪ್ರವಾಹ (Flood) ಮತ್ತು ಭಾರೀ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಉತ್ತರಾಖಂಡಕ್ಕೆ (Uttarakhand) ಭೇಟಿ ನೀಡಿದರು.

    ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿಯವರನ್ನು ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರುಪ್ರೀತ್ ಸಿಂಗ್ ಸ್ವಾಗತಿಸಿದರು. ತಮ್ಮ ಭೇಟಿಯ ಸಮಯದಲ್ಲಿ ಮೋದಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಅಲ್ಲದೇ ಪ್ರವಾಹ ಪೀಡಿತ ಕುಟುಂಬಗಳೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಪ್ರವಾಹ ಮತ್ತು ಮಳೆ ಪೀಡಿತ ಪ್ರದೇಶಗಳಿಗೆ ಪ್ರಧಾನಿ ಮೋದಿ 1,200 ಕೋಟಿ ರೂ.ಗಳ ಆರ್ಥಿಕ ನೆರವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

    ಅಲ್ಲದೇ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಮತ್ತು ಗಾಯಗೊಂಡವರಿಗೆ 50,000 ರೂ.ಗಳ ಪರಿಹಾರವನ್ನು ಸಹ ಘೋಷಿಸಿದರು. ಪ್ರವಾಹ ಮತ್ತು ಭೂಕುಸಿತದಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿಯಲ್ಲಿ ಸಂಪೂರ್ಣ ಸಹಾಯ ನೀಡುವುದಾಗಿ ಮೋದಿ ಭರವಸೆ ನೀಡಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಹಿಂದುಳಿದ ಕಾಲೋನಿಗಳ ಅಭಿವೃದ್ಧಿಗೆ 398 ಕೋಟಿ ರಿಲೀಸ್ – ಸಂಪುಟ ನಿರ್ಧಾರಕ್ಕೆ ಬಿಜೆಪಿ ತೀವ್ರ ಟೀಕೆ

    ಇನ್ನು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಆಪ್ದಾ ಮಿತ್ರ ಸ್ವಯಂಸೇವಕರೊಂದಿಗೆ ಸಂವಾದ ನಡೆಸಿದ ಮೋದಿ ಅವರ ನಿರಂತರ ಕೆಲಸ ಹಾಗೂ ಪ್ರಯತ್ನವನ್ನು ಶ್ಲಾಘಿಸಿದರು. ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಮೂಲಸೌಕರ್ಯಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದೆ. ಹವಾಮಾನ ವೈಪರೀತ್ಯದಿಂದಾಗಿ ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

  • ಉತ್ತರಾಖಂಡ | ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

    ಉತ್ತರಾಖಂಡ | ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಡೆಹ್ರಾಡೂನ್‌ನಲ್ಲಿ ಶನಿವಾರ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಭಾಗಿಯಾಗಿದ್ದರು.

    `ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಥೀಮ್‌ನಲ್ಲಿ ಆಚರಿಸಲಾಗುತ್ತಿರುವ ಅಂತರರಾಷ್ಟ್ರೀಯ ಯೋಗ ದಿನದ (Yoga Day) ಅಂಗವಾಗಿ ಡೆಹ್ರಾಡೂನ್‌ನ (Dehradun) ಪೊಲೀಸ್ ಲೈನ್ಸ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ರಾಷ್ಟ್ರಪತಿಯವರು ಭಾಗವಹಿಸಿ ಯೋಗ ಮಾಡಿದ್ದಾರೆ. ಇದನ್ನೂ ಓದಿ: ಸಂಘರ್ಷ ತಾಂಡವ ಆಡ್ತಿರೋ ಜಗತ್ತಲ್ಲಿ ಯೋಗ ಶಾಂತಿ ತರಬಹುದು: ಮೋದಿ

    ರಾಷ್ಟ್ರಪತಿಯವರು ಮೂರು ದಿನಗಳ ಉತ್ತರಾಖಂಡ ಪ್ರವಾಸದಲ್ಲಿದ್ದರು. ಈ ಪ್ರವಾಸ ಇಂದು ಕೊನೆಗೊಳ್ಳಲಿದೆ. ಜೂನ್ 20ರಂದು ಉತ್ತರಾಖಂಡಕ್ಕೆ ಆಗಮಿಸಿದ್ದ ರಾಷ್ಟ್ರಪತಿ ಮುರ್ಮು ಅವರು ಸಾರ್ವಜನಿಕ ವೀಕ್ಷಣೆಗಾಗಿ ರಾಷ್ಟ್ರಪತಿ ನಿಕೇತನವನ್ನು ಉದ್ಘಾಟಿಸಿದ್ದರು. ಇದನ್ನೂ ಓದಿ: Diamond League | ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ

    ಬಳಿಕ ದೃಷ್ಟಿ ವಿಕಲಚೇತನರ ರಾಷ್ಟ್ರೀಯ ಸಬಲೀಕರಣ ಸಂಸ್ಥೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ವಸ್ತು ಪ್ರದರ್ಶನ ಮತ್ತು ಮಾದರಿ ಶಾಲೆಯ ವಿಜ್ಞಾನ ಪ್ರಯೋಗಾಲಯವನ್ನು ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ರಾಷ್ಟ್ರಪತಿಯವರು ನೈನಿತಾಲ್‌ನ ರಾಜಭವನಕ್ಕೆ 125 ವರ್ಷಗಳು ಪೂರ್ಣಗೊಳಿಸಿದ ಸಲುವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು.

  • ಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆ

    ಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆ

    ಚಂಡೀಗಢ: ಉತ್ತರಾಖಂಡದ ಡೆಹ್ರಾಡೂನ್‌ನ ಒಂದೇ ಕುಟುಂಬದ 7 ಮಂದಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ (Haryana) ಪಂಚಕುಲದ ಸೆಕ್ಟರ್ 27ರಲ್ಲಿ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಸಾಲದ ಸುಳಿಗೆ ಸಿಲುಕಿ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

    ಉತ್ತರಾಖಂಡ ಡೆಹ್ರಾಡೂನ್‌ನ (Dehradun) ಪ್ರವೀಣ್ ಮಿತ್ತಲ್ (42) ಅವರ ಪತ್ನಿ, ಪೋಷಕರು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ ಮೃತರೆಂದು ಗುರುತಿಸಲಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಕಾರಿನ ಮೇಲೆ ಬಿತ್ತು ಬೃಹತ್‌ ಮರ, ನಾಲ್ವರು ಪಾರು

    ಹರಿಯಾಣದ ಪಂಚಕುಲದ (Panchakula) ಸೆಕ್ಟರ್27ರಲ್ಲಿ ಸೋಮವಾರ ರಾತ್ರಿ ಕಾರೊಂದನ್ನು ಪಾರ್ಕ್ ಮಾಡಲಾಗಿತ್ತು. ಆ ಕಾರಿನಲ್ಲಿದ್ದ 6 ಮಂದಿ ಅಸ್ವಸ್ಥರಾಗಿ ಪರದಾಡುತ್ತಿದ್ದರು. ಕಾರಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ವಿಚಾರಿಸಿದಾಗ ಆತ, ನಾನು ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ. ಹಾಗಾಗಿ ನನ್ನ ಕುಟುಂಬದವರೆಲ್ಲರೂ ವಿಷ ಸೇವಿಸಿದ್ದೇವೆ. ಇನ್ನು 5 ನಿಮಿಷದಲ್ಲಿ ನಾನೂ ಸಾಯುತ್ತೇನೆ ಎಂದು ಹೇಳಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸಕಲೇಶಪುರ | ಮಳೆಗೆ ರಸ್ತೆ ಕಾಣದೇ ಡಿವೈಡರ್‌ಗೆ ಕಾರು ಡಿಕ್ಕಿ – ಬೆಂಗಳೂರಿನ ಇಬ್ಬರು ಸಾವು

    ಆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳೀಯರು ಕಾರಿನಲ್ಲಿದ್ದ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಪರಲ್ಲಾಗಲೇ 6 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಇನ್ನು ಕಾರಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಸಹ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಇದನ್ನೂ ಓದಿ: ಚಾಕ್ಲೇಟ್ ಕಲರ್ ಕಟ್ ಔಟ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್- ಬೆಂಕಿ ಲುಕ್ ಎಂದ ಫ್ಯಾನ್ಸ್

    ಡೆಹ್ರಾಡೂನ್ ಮೂಲದ ಪ್ರವೀಣ್ ಮಿತ್ತಲ್ ಅವರ ಕುಟುಂಬವು ಸೋಮವಾರ ರಾತ್ರಿ ಪಂಚಕುಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಹಿಂತಿರುಗುವಾಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿದೆ. ಕಾರಿನಲ್ಲಿ ಸಿಕ್ಕ ಡೆತ್‌ನೋಟ್‌ನಲ್ಲಿ ಸಾಲಭಾದೆಯಿಂದ ಕುಟುಂಬಸ್ಥರೆಲ್ಲರು ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಬರೆಯಲಾಗಿದೆ. ಕಾರಿನಲ್ಲಿದ್ದ 7 ಮಂದಿಯೂ ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಯೆಂದು ತಿಳಿದುಬಂದಿದೆ. ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಡಿಸಿಪಿ ಹಿಮಾದ್ರಿ ಕೌಶಿಕ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಕ್ಲೇಟ್ ಕಲರ್ ಕಟ್ ಔಟ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್- ಬೆಂಕಿ ಲುಕ್ ಎಂದ ಫ್ಯಾನ್ಸ್

    ಘಟನಾ ಸ್ಥಳಕ್ಕೆ ಡಿಸಿಪಿ ಹಿಮಾದ್ರಿ ಕೌಶಿಕ್ ಹಾಗೂ ಪಂಚಕುಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪಂಚಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 11 ನಗರಗಳ ಹೆಸರು ಮರುನಾಮಕರಣ – ಉತ್ತರಾಖಂಡ ಸಿಎಂ ಧಾಮಿ ಆದೇಶ

    11 ನಗರಗಳ ಹೆಸರು ಮರುನಾಮಕರಣ – ಉತ್ತರಾಖಂಡ ಸಿಎಂ ಧಾಮಿ ಆದೇಶ

    – ಔರಂಗಜೇಬಪುರವನ್ನು ಶಿವಾಜಿ ನಗರವಾಗಿ ಮರುನಾಮಕರಣ
    – ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಹೆಸರು ಬದಲಾವಣೆ ಎಂದ ಸಿಎಂ

    ಡೆಹ್ರಾಡೂನ್: 4 ಜಿಲ್ಲೆಯ 11 ನಗರಗಳ ಹೆಸರು ಮರುನಾಮಕರಣಕ್ಕೆ ಉತ್ತರಾಖಂಡ (Uttarakhand) ಸಿಎಂ ಪುಷ್ಕರ್ ಸಿಂಗ್ ಧಾಮಿ(Pushkar Singh Dhami) ಅವರು ಆದೇಶ ಹೊರಡಿಸಿದ್ದಾರೆ.

    ಹರಿದ್ವಾರ, ಡೆಹ್ರಾಡೂನ್, ನೈನಿತಾಲ್ ಮತ್ತು ಉಧಮ್ ಸಿಂಗ್ ಸೇರಿ 11 ನಗರಗಳ ಹೆಸರು ಬದಲಾಯಿಸಲಾಗುವುದು. ಸಾರ್ವಜನಿಕ ಭಾವನೆ ಮತ್ತು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಈ ಸ್ಥಳಗಳ ಮರುನಾಮಕರಣ ಮಾಡಲಾಗುತ್ತದೆ ಎಂದು ಸೋಮವಾರ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತದೆ: ಭೂಮಿಗೆ ಮರಳಿದ ಬಳಿಕ ಸುನೀತಾ ವಿಲಿಯಮ್ಸ್‌ ಫಸ್ಟ್‌ ರಿಯಾಕ್ಷನ್‌

    ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದಂತೆ, ಹರಿದ್ವಾರ(Haridwar) ಜಿಲ್ಲೆಯ ಔರಂಗಜೇಬಪುರವನ್ನು ಶಿವಾಜಿ ನಗರ, ಜಂಜಿಯಾಲಿಯನ್ನು ಆರ್ಯ ನಗರ, ಚೌಧಪುರವನ್ನು ಜ್ಯೋತಿಬಾ ಫುಲೆ ನಗರ, ಮೊಹಮ್ಮದ್‌ಪುರ ಜಾಟ್ ಅನ್ನು ಮೋಹನ್‌ಪುರ ಜಾಟ್, ಖಾನ್ಪುರ್ ಖುರೇಷಿಯನ್ನು ಅಂಬೇಡ್ಕರ್ ನಗರ, ಧೀರ್ಪುರವನ್ನು ನಂದಪುರ, ಅಕ್ಬರ್ಪುರ್ ಫಜಲ್ಪುರವನ್ನು ವಿಜಯನಗರ ಮತ್ತು ಖಾನ್ಪುರವನ್ನು ಶ್ರೀ ಕೃಷ್ಣಪುರ ಎಂದು ಮರುನಾಮಕರಣ ಮಾಡಲಾಗುತ್ತದೆ. ಇದನ್ನೂ ಓದಿ: ಮಸ್ಕಿ ಶಾಸಕನ ಪುತ್ರ, ಸಹೋದರನಿಂದ ಮೊಲ ಬೇಟೆ – ಮಾರಕಾಸ್ತ್ರ ಹಿಡಿದು ಮೆರವಣಿಗೆ

    ಡೆಹ್ರಾಡೂನ್(Dehradun) ಜಿಲ್ಲೆಯಲ್ಲಿ, ಪಿರುವಾಲವನ್ನು ರಾಮ್‌ಜಿ ವಾಲಾ, ಪೀರುವಾಳವನ್ನು ಕೇಸರಿ ನಗರ, ಚೌಧಪುರ್ ಖುರ್ದ್ ಅನ್ನು ಪೃಥ್ವಿರಾಜ್ ನಗರ ಮತ್ತು ಅಬ್ದುಲ್ಲಾಪುರವನ್ನು ದಶರಥನಗರ ಎಂದು ಮರುನಾಮಕರಣ ಮಾಡಲಾಗುತ್ತದೆ. ಇದನ್ನೂ ಓದಿ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ – ಮೂವರು ಮಕ್ಕಳು ಸೇರಿ 6 ಮಂದಿ ಸಜೀವ ದಹನ

    ನೈನಿತಾಲ್(Nainital) ಜಿಲ್ಲೆಯಲ್ಲಿ, ನವಾಬಿ ರಸ್ತೆಯನ್ನು ಅಟಲ್ ಮಾರ್ಗ ಎಂದು ಮರುನಾಮಕರಣ ಮಾಡಲಾಗುವುದು ಮತ್ತು ಪಂಚಕ್ಕಿ ಐಟಿಐ ರಸ್ತೆಯನ್ನು ಗುರು ಗೋವಲ್ಕರ್ ಮಾರ್ಗ ಎಂದು ಹೆಸರಿಡಲಾಗುವುದು. ಉಧಮ್ ಸಿಂಗ್ ನಗರ ಜಿಲ್ಲೆಯ ನಗರ ಪಂಚಾಯತ್ ಸುಲ್ತಾನ್‌ಪುರ ಪಟ್ಟಿಯನ್ನು ಕೌಶಲ್ಯ ಪುರಿ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

  • ಉತ್ತರಾಖಂಡದಲ್ಲಿ ಅಕ್ರಮ ಮದರಸಾಗಳ ಮೇಲೆ ಕ್ರಮ – 15 ದಿನಗಳಲ್ಲಿ 52 ಮದರಸಾಗಳು ಬಂದ್

    ಉತ್ತರಾಖಂಡದಲ್ಲಿ ಅಕ್ರಮ ಮದರಸಾಗಳ ಮೇಲೆ ಕ್ರಮ – 15 ದಿನಗಳಲ್ಲಿ 52 ಮದರಸಾಗಳು ಬಂದ್

    ಡೆಹ್ರಾಡೂನ್: ಧರ್ಮದ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಮದರಸಾಗಳ (Illegal Madrasa) ಮೇಲೆ  ಅಧಿಕಾರಿಗಳು ಆಪರೇಷನ್‌ ಶುರುಮಾಡಿದ್ದಾರೆ. ಕೇವಲ 15 ದಿನಗಳಲ್ಲಿ 52 ಅಕ್ರಮ ಮದರಸಾಗಳನ್ನು ಸೀಲ್‌ ಮಾಡಲಾಗಿದೆ.

    ಅಕ್ರಮ ಮದರಸಾಗಳ ಮೇಲೆ ಕ್ರಮ ಕೈಗೊಳ್ಳುವಂತೆ ಉತ್ತರಾಖಂಡ (Uttarakhand) ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಸೂಚನೆ ಬೆನ್ನಲ್ಲೇ  ಅಧಿಕಾರಿಗಳು ರಾಜ್ಯಾದ್ಯಂತ 52ಕ್ಕೂ ಹೆಚ್ಚು ನೋಂದಣಿಯಾಗದ ಮತ್ತು ಕಾನೂನುಬಾಹಿರವಾಗಿ ನಡೆಸುತ್ತಿದ್ದ ಮದರಸಾಗಳನ್ನು ಸೀಲ್ ಮಾಡಿದ್ದಾರೆ.

    ಪಶ್ಚಿಮ ಡೆಹ್ರಾಡೂನ್ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ಮದರಸಾಗಳ ಸಂಖ್ಯೆ ಬೆಳೆಯುತ್ತಿದೆ. ಧಾರ್ಮಿಕ ಶಿಕ್ಷಣಕ್ಕಾಗಿ ಮಾತ್ರವಲ್ಲದೇ ಜನಸಂಖ್ಯಾ ಸಮತೋಲನವನ್ನು ಭಂಗಗೊಳಿಸುವ ವೇದಿಕೆಗಳಾಗಿಯೂ ಅಕ್ರಮ ಮದರಸಾಗಳನ್ನು ಬಳಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಈ ವರದಿಯನ್ನು ಆಧರಿಸಿ ಅಕ್ರಮ ಮದರಸಾಗಳನ್ನು ಬಂದ್ ಮಾಡುವಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ 52 ಮದರಸಾಗಳಿಗೆ ಬೀಗ ಹಾಕಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಶೀಘ್ರವೇ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಇಂಟರ್ನೆಟ್‌ – ಮಸ್ಕ್‌ ಕಂಪನಿ ಜೊತೆ ಜಿಯೋ, ಏರ್‌ಟೆಲ್‌ ಒಪ್ಪಂದ

    ಸೋಮವಾರವಷ್ಟೇ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಡೆಹ್ರಾಡೂನ್‌ನ ವಿಕಾಸನಗರದಲ್ಲಿ 12 ಅಕ್ರಮ ಮದರಸಾಗಳು ಮತ್ತು ಖತಿಮಾದಲ್ಲಿ 9 ಮದರಸಾಗಳನ್ನು ಸೀಲ್ ಮಾಡಲಾಗಿತ್ತು. ಇದಕ್ಕೂ ಮೊದಲು, ವಿವಿಧ ಜಿಲ್ಲೆಗಳಲ್ಲಿ ಅಂತಹ 31 ಮದರಸಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು ಸಿಎಂ ಕಚೇರಿ ತಿಳಿಸಿದೆ. ಕಾನೂನು ಉಲ್ಲಂಘಿಸುವ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಪುಷ್ಕರ್‌ ಸಿಂಗ್ ಧಾಮಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರ ಸೋಗಿನಲ್ಲಿ ಗಾಂಜಾ ಸಾಗಾಟ – 14 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

  • ಚಲಿಸುತ್ತಿದ್ದ ಬಸ್‌ನಲ್ಲೇ ಬಾಲಕಿ ಮೇಲೆ ಗ್ಯಾಂಗ್‌ರೇಪ್ – ಐವರ ವಿರುದ್ಧ ಪೋಕ್ಸೋ ಕೇಸ್!

    ಚಲಿಸುತ್ತಿದ್ದ ಬಸ್‌ನಲ್ಲೇ ಬಾಲಕಿ ಮೇಲೆ ಗ್ಯಾಂಗ್‌ರೇಪ್ – ಐವರ ವಿರುದ್ಧ ಪೋಕ್ಸೋ ಕೇಸ್!

    ಡೆಹ್ರಾಡೂನ್: ಉತ್ತರಾಖಂಡ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ದೆಹಲಿಯಿಂದ (Delhi) ಡೆಹ್ರಾಡೂನ್‌ಗೆ (Dehradun) ಪ್ರಯಾಣಿಸುತ್ತಿದ್ದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಐವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ಐವರ ವಿರುದ್ಧವೂ ಪೋಕ್ಸೋ ಕೇಸ್ (POCSO Case) ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಜಯ್ ಸಿಂಗ್ ಹೇಳಿದ್ದಾರೆ.

    ಡೆಹ್ರಾಡೂನ್‌ನ ಪಾಟೇಲ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ನೂ ಹೆಚ್ಚಿನ ಸಾಕ್ಷ್ಯ ಸಂಗ್ರಹದಲ್ಲಿ ಪೊಲೀಸ್ ಅಧಿಕಾರಿಗಳು ತೊಡಗಿದ್ದಾರೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮೇಲಿನ ಅಪರಾಧಕ್ಕೆ ಕ್ಷಮೆಯಿಲ್ಲ: ಮೋದಿ

    ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ

    ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ಹೊರಡಿಸಿದ ಪತ್ರಿಕಾ ಪ್ರಕಟಣೆಗಳನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಬಹುದು. ಇದರ ಹೊರತಾಗಿ ಯಾವುದೇ ಸುಳ್ಳು ಸುದ್ದಿ ಪ್ರಕಟಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಗೋಲ್ಡನ್ ಟೆಂಪಲ್‍ನಲ್ಲಿ ಕೇಜ್ರಿವಾಲ್ ಬಿಡುಗಡೆಗೆ ಮನೀಶ್ ಸಿಸೋಡಿಯಾ ಪ್ರಾರ್ಥನೆ

    ಪೋಕ್ಸೋ ಕಾಯ್ದೆ-2012ರ ಸೆಕ್ಷನ್ 23ರ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿಯಿಲ್ಲದೆ ವ್ಯಕ್ತಿ ಅಥವಾ ಮಾಧ್ಯಮಗಳು ಸುದ್ದಿ ಪ್ರಕಟಿಸಿದರೆ ಸಂತ್ರಸ್ತೆಯ ಪ್ರತಿಷ್ಠೆಗೆ ಧಕ್ಕೆಯುಂಟಾಗುತ್ತದೆ ಜೊತೆಗೆ ಮಾನಹಾನಿ ಮಾಡಿದಂತೆ ಆಗುತ್ತದೆ. ಈ ಅಪರಾಧ ಎಸಗಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೆಂಪಣ್ಣ ವರದಿ ಬಿಡುಗಡೆಯಾದ್ರೆ ಸಿಎಂ ಪಂಚೆ, ಶರ್ಟು ಎಲ್ಲಾ ಮಸಿ ಆಗೋದು ಗ್ಯಾರಂಟಿ: ಹೆಚ್.ವಿಶ್ವನಾಥ್

  • ಸಾರಿಗೆ ಬಸ್‍ನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್ – ಐವರು ಕಾಮುಕರು ಅರೆಸ್ಟ್

    ಸಾರಿಗೆ ಬಸ್‍ನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್ – ಐವರು ಕಾಮುಕರು ಅರೆಸ್ಟ್

    ಡೆಹ್ರಾಡೂನ್: ಉತ್ತರಾಖಂಡ (Uttarakhand) ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ದೆಹಲಿಯಿಂದ (Delhi) ಡೆಹ್ರಾಡೂನ್‍ಗೆ (Dehradun) ಪ್ರಯಾಣಿಸುತ್ತಿದ್ದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು, ರಾಜ್ಯ ಸಾರಿಗೆ ಇಲಾಖೆಯ ಐವರು ನೌಕರರನ್ನು ಭಾನುವಾರ ಬಂಧಿಸಲಾಗಿದೆ.

    ಬಾಲಕಿ ಪ್ರಯಾಣಿಸಿದ ಬಸ್‍ನ ಚಾಲಕ, ಕಂಡಕ್ಟರ್, ಅದರ ಪಕ್ಕದಲ್ಲಿ ನಿಂತಿದ್ದ ಮತ್ತೊಂದು ಬಸ್‍ನ ಚಾಲಕ, ಕಂಡಕ್ಟರ್ ಮತ್ತು ಐಎಸ್‍ಬಿಟಿಯಲ್ಲಿ ಕ್ಯಾಷಿಯರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಐವರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಡೆಹ್ರಾಡೂನ್ ಎಸ್‍ಎಸ್‍ಪಿ ಅಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಘಟನೆಯ ನಂತರ, ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಬಾಲಕಿಯನ್ನು ರಾಜ್ಯ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಕೌನ್ಸೆಲಿಂಗ್ ಅವಧಿಯಲ್ಲಿ ಬಾಲಕಿ ಲೈಂಗಿಕ ದೌರ್ಜನ್ಯದ ಬಗ್ಗೆ ಸಿಡಬ್ಲ್ಯೂಸಿ ಸಿಬ್ಬಂದಿಗೆ ತಿಳಿಸಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಅಲ್ಲದೇ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲೂ ಇಂತಹದ್ದೇ ಘಟನೆ ನಡೆದಿದೆ. ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 69 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

    ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ಮಹಿಳೆಯರ ಸುರಕ್ಷತೆಯ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಡೆಹ್ರಾಡೂನ್‍ನಲ್ಲಿ ಅಮಾನವೀಯ ಘಟನೆ ನಡೆದಿದೆ.

    ಆಗಸ್ಟ್ 9 ರಂದು ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯು ಶವವಾಗಿ ಪತ್ತೆಯಾಗಿದ್ದಳು. ಆಕೆಯ ಶವಪರೀಕ್ಷೆ ನಂತರ ಕರ್ತವ್ಯದಲ್ಲಿರುವಾಗಲೇ ಕೊಲೆ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ತಿಳಿದುಬಂದಿತ್ತು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಖಂಡಿಸಿ ದೇಶಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.

    ಅಪರಾಧ ಅಂಕಿ ಅಂಶಗಳ ಪ್ರಕಾರ 2021ರಲ್ಲಿ ದೇಶಾದ್ಯಂತ 31,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ.

  • ಕೇದಾರನಾಥದ ಬಿಜೆಪಿ ಶಾಸಕಿ ಶೈಲಾ ರಾಣಿ ರಾವತ್ ನಿಧನ!

    ಕೇದಾರನಾಥದ ಬಿಜೆಪಿ ಶಾಸಕಿ ಶೈಲಾ ರಾಣಿ ರಾವತ್ ನಿಧನ!

    ಡೆಹ್ರಾಡೂನ್: ಕೇದಾರನಾಥದ ಬಿಜೆಪಿ ಶಾಸಕಿ ಶೈಲಾ ರಾಣಿ ರಾವತ್ (68) (Shaila Rani Rawat) ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಡೆಹ್ರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ (Dehradun Max Hospital) ಅವರು ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ದೃಢಪಡಿಸಿವೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ – ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ

    ಬೆನ್ನುಮೂಳೆ ಗಾಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾವತ್‌ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್; ಕಾಂಗ್ರೆಸ್‌ ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ!

    2012ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಪಡೆದಿದ್ದ ರಾವತ್‌ ಕೇದಾರನಾಥ ಕ್ಷೇತ್ರದಲ್ಲಿ ಮೊದಲಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 2016ರಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದರು. ಇವರೊಂದಿಗೆ ಇನ್ನೂ ಅನೇಕ ಕಾಂಗ್ರೆಸ್‌ ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದರು.

    2017ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಸೋತಿದ್ದ ರಾವತ್‌, 2022ರಲ್ಲಿ ಮತ್ತೆ ಬಿಜೆಪಿಯಿಂದಲೇ ಕೇದಾರನಾಥದಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ನಟ ದರ್ಶನ್‌ ವಿಚಾರಣಾಧೀನ ಕೈದಿ ನಂಬರ್‌ ಹಾಕಿಕೊಂಡು ಆಟೋ ವ್ಹೀಲಿಂಗ್‌ ಮಾಡ್ತಿದ್ದ ಚಾಲಕ ಬಂಧನ

  • ಹಿಮಗಾಳಿ ಬಳಿಕ ಎಲ್ಲೆಡೆ ಕಗ್ಗತ್ತಲು, ತಿಂದಿದ್ದು ಡ್ರೈಪ್ರೂಟ್ಸ್‌ ಮಾತ್ರ!

    ಹಿಮಗಾಳಿ ಬಳಿಕ ಎಲ್ಲೆಡೆ ಕಗ್ಗತ್ತಲು, ತಿಂದಿದ್ದು ಡ್ರೈಪ್ರೂಟ್ಸ್‌ ಮಾತ್ರ!

    – ಹಿಮಗಾಳಿಗೆ ಸಿಲುಕಿ ಬದುಕಿ ಬಂದ ಚಾರಣಿಗರ ಕರಾಳ ಅನುಭವ!

    – ವಿಶೇಷ ವರದಿ

    ಡೆಹ್ರಾಡೂನ್:‌ ಮಧ್ಯಾಹ್ನದವರೆಗೆ ಎಲ್ಲರೂ ಅಂದುಕೊಂಡಂತೆ ಟ್ರೆಕ್ಕಿಂಗ್.‌ ನಂತರ ಶುರುವಾಯ್ತು ಮಳೆ. ಅದರ ಬೆನ್ನಲ್ಲೇ ಬಂತು 90 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಹಿಮಗಾಳಿ. ಆ ಬಳಿಕ ನಮಗ ಕಾಣಿಸಿದ್ದು ಕಗ್ಗತ್ತಲು ಮಾತ್ರ. ಉತ್ತರಾಖಂಡ್‌ನ (Uttarakhand) ಸಹಸ್ರತಾಲ್‌ಗೆ ಟ್ರೆಕ್ಕಿಂಗ್‌ಗೆ ಹೋಗಿ ಸಿಲುಕಿದ್ದ ಚಾರಣಿಗರು ತಾವು ಎದುರಿಸಿದ ಸಂಕಷ್ಟದ ಸಮಯವನ್ನು ವಿವರಿಸಿದ್ದಾರೆ. ತಾವು ಬದುಕಿ ಬಂದ ರೋಚಕ ಕತೆಯನ್ನು ಹೇಳಿಕೊಂಡಿದ್ದಾರೆ.

    ಉತ್ತರಾಖಂಡ್‌ನ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) 8 ಚಾರಣಿಗರನ್ನು ಬುಧವಾರ ಡೆಹ್ರಾಡೂನ್‌ಗೆ ವಾಪಸ್‌ ಕರೆತಂದಾಗ ಅವರ ಮುಖದಲ್ಲಿ ಭಯವು ಸ್ಪಷ್ಟವಾಗಿ ಕಾಣಿಸಿತು. ಚಾರಣಿಗರು ಆರೋಗ್ಯವಾಗಿದ್ದರೂ ಅವರು ಭಯಭೀತರಾಗಿದ್ದರು. ಕೆಲವರ ಧ್ವನಿಯೂ ಹೊರಬರುತ್ತಿರಲಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಎಸ್‌ಡಿಆರ್‌ಎಫ್ ತಂಡದವರು ಎಂಟು ಚಾರಣಿಗರನ್ನು ರಕ್ಷಿಸಿ ಡೆಹ್ರಾಡೂನ್‌ಗೆ ಕರೆತಂದು, ಇಲ್ಲಿನ ಕೊರೊನೇಷನ್ ಆಸ್ಪತ್ರೆಯಲ್ಲಿ ದಾಖಲಿಸಿದರು. ಇದನ್ನೂ ಓದಿ: ಉತ್ತರಾಖಂಡ ದುರಂತ- ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗ್ಳೂರಿಗೆ ವಾಪಸ್

    ಜೀವನಪೂರ್ತಿ ಮರೆಯೋಕಾಗಲ್ಲ!:
    ಹಿಮಗಾಳಿಯ ನಡುವೆ 20 ಗಂಟೆಗೂ ಅಧಿಕ ಕಾಲ ಸಿಲುಕಿದ್ದ ಚಾರಣಿಗರು ಈ ಕರಾಳ ಅನುಭವವನ್ನು ಜೀವನಪೂರ್ತಿ ಮರೆಯಲು ಸಾಧ್ಯವೇ ಇಲ್ಲ. ಚಾರಣದ ನಡುವೆ ನಿಜಕ್ಕೂ ಏನಾಯಿತು ಎನ್ನುವುದನ್ನು ವಿವರಿಸಲೂ ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಚಾರಣದಲ್ಲಿದ್ದವರು ಕೇವಲ ಡ್ರೈಫ್ರೂಟ್‌ ತಿಂದು ಜೀವ ಉಳಿಸಿಕೊಂಡಿದ್ದಾರೆ.

    ಸಹಿಸಲಸಾಧ್ಯ ಚಳಿ ಶುರುವಾಯ್ತು!
    ಉತ್ತರಕಾಶಿಯ ಮನೇರಿಯಲ್ಲಿರುವ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಸಹಯೋಗದೊಂದಿಗೆ ಮೇ 29 ರಂದು ಕರ್ನಾಟಕದ 22 ಚಾರಣಿಗರ ತಂಡವು ಸಹಸ್ರತಾಲ್‌ಗೆ ಚಾರಣವನ್ನು ಪ್ರಾರಂಭಿಸಿತು. ಅವರೊಂದಿಗೆ ಮೂವರು ಮಾರ್ಗದರ್ಶಕರು ಹಾಗೂ ಎಂಟು ಹೇಸರಗತ್ತೆಗಳು ಇದ್ದವು. ಜೂನ್ 2ರ ಸಂಜೆ ಇದ್ದಕ್ಕಿದ್ದಂತೆ ಹಿಮದ ಬಿರುಗಾಳಿ ಪ್ರಾರಂಭವಾಯಿತು. ಚಾರಣಿಗರು ಹೇಳುವ ಪ್ರಕಾರ, ಹಿಮ ಬಿರುಗಾಳಿಯ ವೇಗ ಗಂಟೆಗೆ 90 ಕಿ.ಮೀ. ಇರಬಹುದು. ಇದಾದ ನಂತರ ಕಣ್ಣೆದುರು ಕತ್ತಲು ಕವಿದಿತ್ತು. ತಂಡದಲ್ಲಿದ್ದವರೆಲ್ಲರೂ ಪರಸ್ಪರ ಪ್ರತ್ಯೇಕಗೊಳ್ಳಲು ಪ್ರಾರಂಭಿಸಿದರು. ಇದ್ದಕ್ಕಿದ್ದ ಹಾಗೆ ಚಳಿ ಹೆಚ್ಚಾಗಿ ಸಹಿಸಿಕೊಳ್ಳಲಾಗದೆ ಅಸಹನೀಯ ಅನ್ನಿಸಲು ಶುರುವಾಯಿತು. ಈ ಹಿಂದೆಯೂ ಚಾರಣಕ್ಕಾಗಿ ಉತ್ತರಾಖಂಡಕ್ಕೆ ಬಂದಿದ್ದೆ. ಆದರೆ ಈ ಬಾರಿ ಏನಾಯಿತು ಎಂಬುದನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಎಂದರು ಚಾರಣಿಗ ಜೈಪ್ರಕಾಶ್ ವಿ.ಎಸ್. ಇದನ್ನೂ ಓದಿ: ಉತ್ತರಾಖಂಡ ಹಿಮಪಾತ- ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು

    ಸೋಮವಾರ ಸಂಜೆ ವೆಂಕಟೇಶ್ ಅವರಿದ್ದ ತಂಡವು ಸಹಸ್ರತಾಲ್ ಕಡೆಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಭಾರೀ ಮಳೆ ಶುರುವಾಯಿತು. ನಂತರ ಹಿಮ ಗಾಳಿ ಬೀಸಲಾರಂಭಿಸಿತು ಎಂದು ಹೇಳಿದರು. ನಿಧಾನವಾಗಿ ಚಂಡಮಾರುತ ಬರಲಾರಂಭಿಸಿತು. ಇದರಿಂದಾಗಿ ನಾವಿದ್ದ ಜಾಗದಲ್ಲಿಯೇ ಉಳಿಯಬೇಕಾಯಿತು. ಕಗ್ಗತ್ತಲು ಆವರಿಸಿದ್ದರಿಂದ ಯಾರು ಎಲ್ಲಿದ್ದಾರೆ ಎಂದು ಗೊತ್ತಾಗ್ತಿರಲಿಲ್ಲ ಎಂದರು.

    ಮೊಬೈಲ್‌ ಸಿಗ್ನಲ್‌ ಇಲ್ಲ, ಕಾಲ್‌ ಮಾಡೋದು ಹೇಗೆ..?
    ಹಿಮಗಾಳಿಯ ತೀವ್ರತೆಯ ನಡುವೆಯೇ ಫೋನ್‌ ಕಾಲ್‌ ಮಾಡೋಣ ಎಂದು ನೋಡಿದರೆ ಮೊಬೈಲ್‌ನಲ್ಲಿ ನೆಟ್‌ವರ್ಕ್‌ ಇರಲಿಲ್ಲ. ಇದರಿಂದಾಗಿ ಯಾರಿಗೂ ಏನಾಗಿದೆ ಎಂಬ ವಿಚಾರ ತಿಳಿಸಲು ಸಾಧ್ಯವಾಗಲಿಲ್ಲ ಎಂದವರು ಚಾರಣದ ತಂಡದಲ್ಲಿದ್ದ ಸ್ಮೃತಿ ಪ್ರಕಾಶ್.‌ ಇದನ್ನೂ ಓದಿ: ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ

    ಮೊಬೈಲ್‌ ಟಾರ್ಚ್‌ ಹಚ್ಚಿ ಮಾತುಕತೆ!
    ಹಿಮಗಾಳಿಗೆ ಸಿಲುಕಿದ ಬಳಿಕ ಕತ್ತಲಾದಾಗ ಜೀವ ಉಳಿಸಿಕೊಳ್ಳುವುದು ಇನ್ನಷ್ಟು ಕಷ್ಟವಾಯಿತು. ಹೇಗೋ ಮೊಬೈಲಿನ ಟಾರ್ಚ್ ಹಚ್ಚಿ ಮಾತಾಡುತ್ತಾ ಒಬ್ಬರಿಗೊಬ್ಬರು ಸಮಾಧಾನ ಪಡಿಸುತ್ತಿದ್ದೆವು. ಬುಧವಾರ ಬೆಳಿಗ್ಗೆ ಹೆಲಿಕಾಪ್ಟರ್ ನಮ್ಮ ಬಳಿ ತಲುಪಿದಾಗ ನಾವು ಸುರಕ್ಷಿತವಾಗಿದ್ದೇವೆ ಎಂದೆನಿಸಿತು ಎಂದು ಹಿಮಗಾಳಿಯ ನಡುವೆ ಸಿಲುಕಿ, ಬದುಕಿ ಬಂದ ಬೆಚ್ಚಿ ಬೀಳುವ ಅನುಭವವನ್ನು ಸ್ಮೃತಿ ಪ್ರಕಾಶ್‌ ವಿವರಿಸಿದರು.