Tag: dehradoon

  • ಡೆಹ್ರಾಡೂನ್‌ನಲ್ಲಿ 10ನೇ ವಿಶ್ವ ಆಯುರ್ವೇದ, ಆರೋಗ್ಯ Expo – ಪ್ರಹ್ಲಾದ್‌ ಜೋಶಿ ಮಾಹಿತಿ

    ಡೆಹ್ರಾಡೂನ್‌ನಲ್ಲಿ 10ನೇ ವಿಶ್ವ ಆಯುರ್ವೇದ, ಆರೋಗ್ಯ Expo – ಪ್ರಹ್ಲಾದ್‌ ಜೋಶಿ ಮಾಹಿತಿ

    – ಡಿ.12-15ರವರೆಗೆ 50 ರಾಷ್ಟ್ರ, 5,000 ಆಯುರ್ವೇದ ತಜ್ಞರು ಭಾಗವಹಿಸುವ ನಿರೀಕ್ಷೆ

    ಹುಬ್ಬಳ್ಳಿ: ಕೇಂದ್ರ ಆಯುಷ್ ಸಚಿವಾಲಯ ಡೆಹ್ರಾಡೂನ್‌ನಲ್ಲಿ (Dehradoon) 10ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಆಂಡ್ ಆರೋಗ್ಯ ಎಕ್ಸ್ಪೋ (Health Expo) ಆಯೋಜಿಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ (Prahlad Joshi) ತಿಳಿಸಿದರು.

    ಹುಬ್ಬಳ್ಳಿಯ (Hubballi) ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಭಾನುವಾರ ಕೆಎಲ್ಇ ಟೆಕ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸ್ಯಾಟೆಲೈಟ್ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು.ಇದನ್ನೂ ಓದಿ: ಹರಾಜಿನಲ್ಲಿ ಆಯ್ಕೆಯಾಗಿ ಅಲಭ್ಯರಾಗುವ ಆಟಗಾರರಿಗೆ ಖಡಕ್‌ ವಾರ್ನಿಂಗ್‌; ನಿಯಮ ಕಡೆಗಣಿಸಿದ್ರೆ 2 ವರ್ಷ ಬ್ಯಾನ್‌

    ಕೇಂದ್ರದ ಆಯುಷ್ ಸಚಿವಾಲಯ ಡಿ. 12ರಿಂದ 15ರವರೆಗೆ ಉತ್ತರಾಖಂಡದ ಡೆಹ್ರಾಡೂನಿನಲ್ಲಿ 10ನೇ ವರ್ಲ್ಡ್ ಆಯುರ್ವೇದ- ಆರೋಗ್ಯ ಎಕ್ಸ್ಪೋ ನಡೆಸುತ್ತಿದೆ. ಈ ಎಕ್ಸ್ಪೋದಲ್ಲಿ 50 ರಾಷ್ಟ್ರಗಳು, 5000 ಆಯುರ್ವೇದ ತಜ್ಞರು ಭಾಗವಹಿಸುವ ನಿರೀಕ್ಷೆಯಿದೆ. ಇದರ ಅಂಗವಾಗಿ ದೇಶದೆಲ್ಲೆಡೆ 20 ಸ್ಯಾಟಲೈಟ್ ಸೆಮಿನಾರ್ ಗಳನ್ನು ನಡೆಸಲಾಗುತ್ತಿದ್ದು, ಇಂದಿನ ಕಾರ್ಯಕ್ರಮವೂ ಇದರ ಅಂಗವಾಗಿದೆ ಎಂದು ಹೇಳಿದರು.

    ಆಯುರ್ವೇದವು ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿ ಮತ್ತು ಔಷಧಿ ಪದ್ಧತಿ ಕೂಡ ಹೌದು. ಇಂತಹ ಆಯುರ್ವೇದವನ್ನು ಉತ್ತೇಜಿಸಿ, ಉಳಿಸಿ ಬೆಳೆಸುವ ಕಾರ್ಯವನ್ನು ಭಾರತ ಸರ್ಕಾರ ಆಯುಷ್ ಸಚಿವಾಲಯದ ಮೂಲಕ ಮಾಡುತ್ತಿದೆ. ಜೊತೆಗೆ ಆಯುರ್ವೇದದ ಬಗ್ಗೆ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾ ಬಂದಿದೆ. ಪರಿಣಾಮ ನಮ್ಮ ಭಾರತದ (India) ಆಯುರ್ವೇದ ಜಗತ್ತಿನಲ್ಲೆಲ್ಲಾ ಪಸರಿಸುತ್ತಿದೆ ಎಂದರು.

    ಆಯುರ್ವೇದ ಔಷಧಿಗೆ ಹೆಚ್ಚು ಉತ್ತೇಜನ:
    2014ರಲ್ಲಿ ಆಯುರ್ವೇದಕ್ಕೆ ಅಷ್ಟು ಮಹತ್ವ ಇರಲಿಲ್ಲ. ಆಯುರ್ವೇದ ಔಷಧಿ ಕೇವಲ 24,000 ಕೋಟಿ ವಹಿವಾಟು ಇತ್ತು. ನಮ್ಮ ಸರ್ಕಾರ ಬಂದ ಮೇಲೆ ಈಗ 1.40 ಲಕ್ಷ ಕೋಟಿ ದಾಟಿದೆ. 500 ಕೋಟಿ ಇದ್ದ ಬಜೆಟ್ ಈಗ 3,000 ಕೋಟಿ ಕೊಟ್ಟಿದ್ದೇವೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ, ಕಾರ್ಯದರ್ಶಿ ಸಂಜೀವ್ ಜೋಶಿ, ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎ.ಎಸ್.ಪ್ರಶಾಂತ್, ಆಯುರ್ವೇದ ಮಹಾವಿದ್ಯಾಲಯದ ಪ್ರಮುಖರಾದ ಡಾ.ಜೆ.ಆರ್.ಜೋಶಿ, ಡಾ. ಪ್ರಮೋದ್ ಕಟ್ಟಿ ಹಾಗೂ ಆಡಳಿತ ವರ್ಗ ಉಪಸ್ಥಿತರಿದ್ದರು.ಇದನ್ನೂ ಓದಿ: ಚಿತ್ರದುರ್ಗ| ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೇ ಹೊತ್ತಿ ಉರಿದ ಟ್ಯಾಂಕರ್ – ಚಾಲಕ, ನಿರ್ವಾಹಕ ಪಾರು

     

  • ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್

    ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್

    ಡೆಹ್ರಾಡೂನ್: ಭಾರತದ ವಿಕೆಟ್ ಕೀಪರ್ ಹಾಗೂ ಎಡಗೈ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ ಉತ್ತರಾಖಂಡದ ಜನರಲ್ಲಿ ಕ್ರೀಡೆ ಮತ್ತು ಸಾಮಾನ್ಯ ಆರೋಗ್ಯವನ್ನು ಉತ್ತೇಜಿಸಲು ತಮ್ಮಿಂದಾಗುವ ಪ್ರೋತ್ಸಾಹವನ್ನು ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

    ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭಾನುವಾರ ಪಂತ್ ಅವರನ್ನು ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದ್ದಾರೆ. ಇದನ್ನೂ ಓದಿ: 8ನೇ ಆವೃತ್ತಿ ಪ್ರೊ ಕಬಡ್ಡಿಗೆ ಬೆಂಗಳೂರು ಸಜ್ಜು

    ಉತ್ತರಾಖಂಡದ ಜನರು, ಜೀವನದ ವಿವಿಧ ಕ್ಷೇತ್ರಗಳಲ್ಲಿ ದೇಶವನ್ನು ಹೆಮ್ಮೆ ಪಡಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ. ಕ್ರೀಡೆ ಮತ್ತು ಸಾಮಾನ್ಯ ಆರೋಗ್ಯವನ್ನು ಪ್ರೋತ್ಸಾಹಿಸಲು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದ ಪುಷ್ಕರ್ ಧಾಮಿ ಸರ್‌ಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಕ್ನೋ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ

    ಪ್ರಸ್ತುತ ರಿಷಭ್ ಪಂತ್ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ನಲ್ಲಿದ್ದಾರೆ. ಡಿಸೆಂಬರ್ 26ರಂದು ಆರಂಭವಾಗಲಿರುವ ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ.

  • ಮಾಂಸದಂಗಡಿಯಲ್ಲಿ 40 ರೂ. ಕೊಟ್ಟು ಆಡಿನ ರಕ್ತ ಖರೀದಿಸಿ ಸಾವಿನ ನಾಟಕವಾಡಿದ!

    ಮಾಂಸದಂಗಡಿಯಲ್ಲಿ 40 ರೂ. ಕೊಟ್ಟು ಆಡಿನ ರಕ್ತ ಖರೀದಿಸಿ ಸಾವಿನ ನಾಟಕವಾಡಿದ!

    – ಪತ್ನಿ ಕಿರುಕುಳದಿಂದ ಬೇಸತ್ತು ಸಾವಿನ ಡ್ರಾಮಾ ಮಾಡಿದ ಪತಿ

    ಪಾಟ್ನಾ: ಪತ್ನಿಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ನಿರುದ್ಯೋಗಿ ಪತಿ ಮಹಾಶಯನೊಬ್ಬ ಆಕೆಯನ್ನು ಹೆದರಿಸಲು ಸಾವಿನ ನಾಟಕ ಮಾಡಿರುವ ಘಟನೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದಿದೆ.

    ಪ್ರ್ರದೀಪ್ ಕುಮಾರ್ ರಾಮ್(37) ಸಾವಿನ ನಾಟಕ ಮಾಡಿದ ವ್ಯಕ್ತಿಯಾಗಿದ್ದು, ಈತ ಉತ್ತರ ಪ್ರದೇಶದ ಘಾಸಿಪುರ್ ಜಿಲ್ಲೆಯ ಜಾಮಾನಿಯಾ ನಿವಾಸಿ. ಮಾಂಸದ ಅಂಗಡಿಗೆ ಹೋಗಿ 40 ರೂ. ಕೊಟ್ಟು ಆಡಿನ ರಕ್ತವನ್ನು ಖರೀದಿಸಿದ್ದಾನೆ. ಬಳಿಕ ಮನೆಗೆ ಬಂದು ರೂಮ್‍ನಲಿದ್ದ ಮಂಚದ ಮೇಲಿನ ಹಾಸಿಗೆ ಮೇಲೆ ರಕ್ತವನ್ನು ಹರಡಿ ಕೊಲೆ ನಡೆದಿರುವಂತೆ ಸಂಚು ರೂಪಿಸಿದ್ದಾನೆ. ಅದನ್ನು ನೋಡಿದವರು ಆತನ ದೇಹವನ್ನು ಎಲ್ಲಿಯೋ ಎಸೆದಿದ್ದಾರೆ ಎಂದುಕೊಳ್ಳಬೇಕು ಹಾಗೆ ಕಥೆ ನಿರ್ಮಿಸಿದ್ದಾನೆ. ತದನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

    ಪ್ರದೀಪ್ ಪತ್ನಿ ಪ್ರತಿಭಾ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯಾಗಿದ್ದು, ಡಿಸೆಂಬರ್ 30ರಂದು ಬೆಳಗ್ಗೆ ಮನೆಗೆ ಬಂದ ಆಕೆ ಹಾಸಿಗೆಯಲ್ಲಿದ್ದ ರಕ್ತದ ಕಲೆಯನ್ನು ನೋಡಿ ಗಾಬರಿಗೊಂಡು ತನ್ನ ಪತಿಯನ್ನು ಯಾರೋ ಕೊಲೆ ಮಾಡಿ ಶವವನ್ನು ಎಸೆದಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಪ್ರಕರಣ ಕುರಿತಂತೆ ಪ್ರದೀಪ್‍ನನ್ನು ಪತ್ತೆ ಮಾಡಲು ಶುರು ಮಾಡಿದ ಪೊಲೀಸರಿಗೆ ಆತನ ಮನೆಯಿಂದ ಅರ್ಧಕಿಲೋ ಮೀಟರ್ ದೂರದಲ್ಲಿ ಒಂದು ವಾಟರ್ ಬಾಟಲ್ ರಕ್ತದ ಕಲೆಯಿಂದ ಕೂಡಿರುವುದು ಪತ್ತೆಯಾಗಿದೆ. ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕುಮಾರ್ ಜಮಾನಿಯದಲ್ಲಿ ಇರುವುದಾಗಿ ವ್ಯಕ್ತಿಯೊಬ್ಬ ಬುಧವಾರ ತಿಳಿಸಿದ್ದಾನೆ. ಕುಮಾರ್ ಇದ್ದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ತಂಡ ಆತನನ್ನು ವಶಕ್ಕೆ ಪಡೆದರು.

    ನಂತರ ತನಿಖೆ ನಡೆಸಿದ ಪೊಲೀಸರಿಗೆ ಪ್ರದೀಪ್ ತನ್ನ ಹೆಂಡತಿ ನನಗೆ ಪ್ರತಿದಿನ ಹಣ ನೀಡುವುದಾಗಿ ಮತ್ತಿತರ ವಿಚಾರವಾಗಿ ಪೀಡಿಸುತ್ತಿದ್ದಳು ಹಾಗಾಗಿ ನಾನು ಸಾವಿನ ನಾಟಕವಾಡಿದೆ ಎಂದು ತಿಳಿಸಿದ್ದಾನೆ. ಆದರೆ ಪ್ರತಿಭಾಳನ್ನು ವಿಚಾರಣೆ ನಡೆಸಿದಾಗ ಆಕೆ ತನ್ನ ಪತಿಗೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾಳೆ. ಇನ್ನೂ ದಂಪತಿಗೆ ಎರಡು ಮನೆಗಳಿದ್ದು, ಕುಲಾರಿ ಎಂಬಲ್ಲಿ ಇವರ ಇನ್ನೊಂದು ಮನೆ ನಿರ್ಮಾಣದ ಹಂತದಲ್ಲಿದೆ. ಈ ಸ್ಥಳಕ್ಕೆ ಮಂಗಳವಾರ ರಾತ್ರಿ ಪ್ರದೀಪ್ ಹೋಗಿ ಮಲಗಿರುವುದಾಗಿ ತಿಳಿಸಿದ್ದಾನೆ.

    ಸದ್ಯ ಶುಕ್ರವಾರ ಬೆಳಗ್ಗೆ ಪ್ರದೀಪ್ ಸತ್ಯವನ್ನು ಬಹಿರಂಗ ಪಡಿಸಿದ್ದು, ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ಆತನಿಂದ ಬಾಂಡ್ ಪೇಪರ್ ಮೇಲೆ ಪೊಲೀಸರು ಸಹಿ ಮಾಡಿಸಿಕೊಂಡಿದ್ದು, ನಕಲಿ ಕೊಲೆ ಸಂಚು ರೂಪಿಸಿರುವ ಆರೋಪದಡಿ ಪ್ರದೀಪ್ ವಿರುದ್ದ ಎಫ್‍ಐಆರ್ ದಾಖಲಿಸಲಾಗಿದೆ ಎಂದು ದುರ್ಗವತಿ ಪೊಲೀಸ್ ಠಾಣೆ(ಎಸ್‍ಹೆಚ್‍ಒ) ವೀರೇಂದ್ರ ಕುಮಾರ್ ತಿಳಿಸಿದ್ದಾರೆ.