Tag: Dehli Women Murder

  • ದೆಹಲಿ ಯುವತಿ ಹತ್ಯೆ ಕೇಸ್ – ಬಂಧಿತ ಐವರಲ್ಲಿ ಓರ್ವ ಬಿಜೆಪಿ ಸದಸ್ಯ: ಎಎಪಿ ಆರೋಪ

    ದೆಹಲಿ ಯುವತಿ ಹತ್ಯೆ ಕೇಸ್ – ಬಂಧಿತ ಐವರಲ್ಲಿ ಓರ್ವ ಬಿಜೆಪಿ ಸದಸ್ಯ: ಎಎಪಿ ಆರೋಪ

    ನವದೆಹಲಿ: ಹೊಸ ವರ್ಷದ ದಿನದಂದೇ ದೆಹಲಿಯಲ್ಲಿ (Newdelhi) ನಡೆದ ಯುವತಿಯ ಭೀಕರ ಹತ್ಯೆ ಪ್ರಕರಣದಲ್ಲಿ ಸಿಕ್ಕ ಐವರು ಆರೋಪಿಗಳಲ್ಲಿ ಒಬ್ಬರು ಬಿಜೆಪಿ (BJP) ಸದಸ್ಯ ಎಂದು ಆಮ್ ಆದ್ಮಿ ಪಕ್ಷ (AAP) ಆರೋಪಿಸಿದೆ.

    ಸುಲ್ತಾನ್‌ಪುರಿಯಲ್ಲಿ ಯುವತಿ ಅಂಜಲಿ ಚಲಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಸುಮಾರು 12 ಕಿಮೀ ಎಳೆದೊಯ್ದು ಆಕೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ (Saurabh Bhardwaj) ಮಾತನಾಡಿದ್ದಾರೆ. ಇದನ್ನೂ ಓದಿ: ನಾಟಕದಲ್ಲಿ ಸಿದ್ದರಾಮಯ್ಯಗೆ ಅವಮಾನ- ರಂಗಾಯಣದ ವಿರುದ್ಧ ಅಭಿಮಾನಿಗಳ ಆಕ್ರೋಶ

    ಪ್ರಕರಣದಲ್ಲಿ ಬಂಧಿರಾಗಿರುವ ಐವರು ಆರೋಪಿಗಳಲ್ಲಿ ಒಬ್ಬರಾದ ಮನೋಜ್ ಮಿತ್ತಲ್ ಬಿಜೆಪಿ (BJP) ಸದಸ್ಯನಾಗಿದ್ದಾನೆ. ಆದ್ರೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ (Vinai Kumar Saxena) ಹಾಗೂ ಪೊಲೀಸ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಈ ಮಾಹಿತಿಯನ್ನ ಮರೆಮಾಚಿದ್ದಾರೆ. ಪೊಲೀಸ್ ಠಾಣೆಯ (Police Station) ಪಕ್ಕದಲ್ಲೇ ಇರುವ ಭಾವಚಿತ್ರದ ಬೋರ್ಡಿಂಗ್ ಸಹ ಮಿತ್ತಲ್ ಬಿಜೆಪಿ ಸದಸ್ಯ ಎಂಬುದನ್ನ ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ.

    ಕಾರಿನಲ್ಲಿ ಸಿಕ್ಕಿಕೊಂಡಿದ್ದ ಮಹಿಳೆಯನ್ನು ಬೀದಿಯಲ್ಲಿ ಎಳೆದೊಯ್ಯುತ್ತಿರುವ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು 22 ಬಾರಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೂ ಪೊಲೀಸರು ಆರೋಪಿಯನ್ನ ರೆಡ್‌ಹ್ಯಾಂಡಾಗಿ ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ, ಅವರು ತಮ್ಮ ಕಾರು ಅಪಘಾತಕ್ಕೀಡಾಗಿದೆ ಎಂದು ಆರೋಪಿಗಳು ಹೇಳಿದ್ದರು. ಆದ್ರೆ ಮಹಿಳೆಯನ್ನು ಎಳೆದೊಯ್ದಿರುವುದು ತಿಳಿದಿರಲಿಲ್ಲವೆಂಬುದಾಗಿ ಹೇಳಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ಹರೀಶ್ ಖುರಾನಾ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಪ್ಪಿತಸ್ಥರು ಯಾವುದೇ ಪಕ್ಷಕ್ಕೆ ಸೇರಿದ್ದರೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೋಟು ನಿಷೇಧದ ಅಧಿಸೂಚನೆಯೇ ಕಾನೂನುಬಾಹಿರ: ನ್ಯಾ.ನಾಗರತ್ನ

    ಏನಿದು ಘಟನೆ?
    ದೆಹಲಿಯಲ್ಲಿ ಯುವತಿ ಅಮನ್ ವಿಹಾರ್ ನಿವಾಸಿ ಅಂಜಲಿ (20) ಚಲಿಸುತ್ತಿದ್ದ ಸ್ಕೂಟಿಯು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಯುವತಿಯನ್ನ 12 ಕಿಮೀ ಎಳೆದೊಯ್ದು ಆಕೆ ಸಾವನ್ನಪ್ಪಿದ್ದಳು. ಬಳಿ ನೋಂದಾಯಿತ ಕಾರಿನ ಸಂಖ್ಯೆಯ ಆಧಾರದ ಮೇಳೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ, ಘಟನೆಗೆ ಸಂಬಂಧಿಸಿ ಮಾರುತಿ ಸುಜಕಿ ಬಲೆನೊ ಕಾರಿನಲ್ಲಿದ್ದ ಐವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಲ್ಲಿ ಕ್ರೆಡಿಟ್ ಕಾರ್ಡ್ ಸಂಗ್ರಹ ಏಜೆಂಟ್, ಚಾಲಕ ಹಾಗೂ ಪಡಿತರ ಅಂಗಡಿ ಮಾಲೀಕರಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]