Tag: Dehli Assembly Election 2025

  • ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಮಂಡ್ಯ: ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಅಷ್ಟೇ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದರು.

    ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ವಿಚಾರವಾಗಿ, ದೆಹಲಿ ಫಲಿತಾಂಶದಲ್ಲಿ ವಿಶೇಷ ಏನಿಲ್ಲ. ಕೇಜ್ರಿವಾಲ್ ಇಂಡಿಯಾ ಒಕ್ಕೂಟದ ಜೊತೆ ಹೋಗಿದ್ದರೆ ಬಿಜೆಪಿಗೆ ಗೆಲ್ಲುವ ಅವಕಾಶ ಇರಲಿಲ್ಲ. ಆದರೆ ಕೇಜ್ರಿವಾಲ್ ಸ್ವಲ್ಪ ದುಡುಕಿ ನಿರ್ಧಾರ ಮಾಡಿದರು. ಹೀಗಾಗಿ ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಎಂದರು.ಇದನ್ನೂ ಓದಿ: ಸೋಲು ಒಪ್ಕೋತೀವಿ ಆದ್ರೆ ಇವಿಎಂ ಮೇಲೆ ಅನುಮಾನ ಇದೆ: ಶಿವರಾಜ್ ತಂಗಡಗಿ

    ರಾಜ್ಯ ಬಜೆಟ್ ವಿಚಾರ:
    ಕಳೆದ ಬಾರಿಯೂ ಕೃಷಿ ಇಲಾಖೆಗೆ ಹೊಸ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡಿದ್ದರು. ಈ ಬಾರಿಯೂ ಉತ್ತಮ ಕಾರ್ಯಕ್ರಮಗಳು ಸಿಗುವ ನಿರೀಕ್ಷೆ ಇದೆ. ಇನ್ನೂ ಸಚಿವಾಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿ ಸಮಾಧಾನಪಡಿಸಿರುವ ವಿಚಾರವಾಗಿ, ಸಚಿವಾಕಾಂಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಛೇರ್ಮನ್ ಒಳ್ಳೆಯ ಹುದ್ದೆಯಾಗಿದ್ದು, ರಾಜ್ಯಾದ್ಯಂತ ಕೆಲಸ ಮಾಡಲು ಉತ್ತಮ ಅವಕಾಶವಿದೆ. ನರೇಂದ್ರ ಸ್ವಾಮಿಯವರು ಎಂಜಿನಿಯರ್ ಆಗಿದ್ದರಿಂದ ಅವಕಾಶ ಸಿಕ್ಕಿದೆ ಎಂದರು.

    ಮಂಡ್ಯ ಮಿಮ್ಸ್ ಸಮಸ್ಯೆಯ ಆಗರ:
    ಮಿಮ್ಸ್‌ನಲ್ಲಿ (MIMS) ತುಂಬಾ ಸಮಸ್ಯೆ ಇದೆ. ಹೀಗಾಗಿ ಡಿಸಿ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿಸಲಾಗಿದೆ. ಮಿಮ್ಸ್‌ಗೆ ಮೇಜರ್ ಸರ್ಜರಿ ಆಗಬೇಕು. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಶೀಘ್ರವೇ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

    ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೇರಿದೆ. ಆದ್ರೆ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಪ್ ಸೋಲು ಕಂಡಿದ್ದರೆ, `ಕೈ’ ಪಾಳಯ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ.ಇದನ್ನೂ ಓದಿ: ಡಿಬಾಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಫೆ.16ರಂದು ರಿಲೀಸ್ ಆಗಲಿದೆ ‘ಡೆವಿಲ್’ ಚಿತ್ರದ ಟೀಸರ್

     

  • Delhi Election Results | ತುಷ್ಟೀಕರಣ ರಾಜಕೀಯವನ್ನು ತಿರಸ್ಕರಿಸಿದೆ: ಹೆಚ್‌ಡಿಕೆ

    Delhi Election Results | ತುಷ್ಟೀಕರಣ ರಾಜಕೀಯವನ್ನು ತಿರಸ್ಕರಿಸಿದೆ: ಹೆಚ್‌ಡಿಕೆ

    – ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ಅಭಿನಂದಿಸಿದ ಕೇಂದ್ರ ಸಚಿವ

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭೂತಪೂರ್ವ ಗೆಲುವು ತುಷ್ಟೀಕರಣ ರಾಜಕೀಯವನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದರು.

    ದೆಹಲಿ ವಿಧಾನಸಭಾ ಫಲಿತಾಂಶದ (Dehli Assembly Election) ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಹುದೊಡ್ಡ ಫಲಿತಾಂಶಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಅಭಿನಂದಿಸಿದ್ದಾರೆ.ಇದನ್ನೂ ಓದಿ: ಚಿಕ್ಕಬಳ್ಳಾಪುರ | ಲಂಕಾಗೆ ಲಗಾಮು ಹಾಕಿ ಭಾರತ – 6 ರನ್‌ಗಳ ರೋಚಕ ಜಯ

    ಪ್ರಧಾನಿ ಮೋದಿ ಅವರು, ಗೃಹ ಸಚಿವ ಅಮಿತ್ ಶಾ ಅವರು ಮತ್ತು ಕೇಂದ್ರ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಬಿಜೆಪಿ ಪಕ್ಷವು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ನೂತನ ಶಾಸಕರಾಗಿ ಆಯ್ಕೆಯಾದ ನನ್ನ ಮಿತ್ರಪಕ್ಷದ ಎಲ್ಲಾ ನಾಯಕರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ತಿಳಿಸಿದರು.

    ಪ್ರಧಾನಿಗಳ ಮಹತ್ವಾಕಾಂಕ್ಷೆಯ ವಿಕಸಿತ ಭಾರತ, ಆತ್ಮನಿರ್ಭರ ಭಾರತ ಮತ್ತು ಅಭಿವೃದ್ಧಿಪೂರಕ ಆಡಳಿತಕ್ಕೆ ಮನ್ನಣೆ ನೀಡಿ, ತುಷ್ಟೀಕರಣ ರಾಜಕೀಯವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವುದಕ್ಕೆ ಈ ಫಲಿತಾಂಶ ಅತ್ಯುತ್ತಮ ಉದಾಹರಣೆ ಎಂದು ಪ್ರತಿಪಾದಿಸಿದರು.

    ಈ ಜನಾದೇಶವು ಬಲಿಷ್ಠ ನಾಯಕತ್ವ, ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಿಕ್ಕಿರುವ ಬೆಂಬಲ ಎಂದು ನಾನು ಭಾವಿಸುತ್ತೇನೆ. ನಮ್ಮ ಮಿತ್ರಪಕ್ಷ ಬಿಜೆಪಿ ಗೆಲುವಿಗೆ ಶ್ರಮಿಸಿದ ಎಲ್ಲಾ ನಾಯಕರು, ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.ಇದನ್ನೂ ಓದಿ: ಶಿವಣ್ಣ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ ಡಿಸಿಎಂ

     

  • ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Dehli Assembly Election) ಬಿಜೆಪಿ 27 ವರ್ಷಗಳ ಬಳಿಕ ಗೆಲವು ಸಾಧಿಸಿದೆ. ಈ ಮೂಲಕ ದೆಹಲಿ ಜನ ಕೇಜ್ರಿವಾಲ್ ನಶೆ ಇಳಿಸುವುದರ ಜೊತೆಗೆ ಎಣ್ಣೆ ಏಟಿಗೆ ಎಎಪಿ (AAP) ಪಕ್ಷಕ್ಕೆ ಸೋಲಿನ ಕಿಕ್ ನೀಡಿದ್ದಾರೆ.

    2014ರ ಲೋಕಸಭೆ ಚುನಾವಣೆ ವೇಳೆ ದೆಹಲಿಯಲ್ಲಿ ಎಎಪಿ ಒಂದು ಸೀಟನ್ನು ಗೆದ್ದರಲಿಲ್ಲ. ಆದರೆ 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಪ್ 70ರಲ್ಲಿ 67 ಸೀಟುಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಒಂದು ಸೀಟು ಗೆಲ್ಲದ ಎಎಪಿ 2020ರ ವಿಧಾನಸಭೆ ಚುನಾವಣೆಯಲ್ಲಿ 63 ಸೀಟುಗಳನ್ನು ಗೆದ್ದು ಬೀಗಿತ್ತು.ಇದನ್ನೂ ಓದಿ: ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು

    ಈ ಸಂದರ್ಭದಲ್ಲಿ ದೆಹಲಿ ಜನತೆ ಕೇಂದ್ರಕ್ಕೆ ಬಿಜೆಪಿ ಮತ್ತು ಸ್ಥಳೀಯವಾಗಿ ಎಎಪಿ ಎಂಬ ತೀರ್ಮಾನಿಸಿದೆ ಎನ್ನಲಾಗಿತ್ತು. ಆದರೆ ಇದೀಗ 2025ರ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಎಲ್ಲವೂ ತಿರುಗಿ ಬಿದ್ದಿದೆ.

    ಕಳೆದೆರಡು ವರ್ಷಗಳಲ್ಲಿ ಎಎಪಿ ಪಕ್ಷಕ್ಕೆ ಹಗರಣದ ಅಲೆಗಳು ಅಪ್ಪಳಿಸಿದ್ದವು. ಮದ್ಯ ಹಗರಣದಲ್ಲಿ ಡಿಸಿಎಂ ಮನೀಷ್ ಸಿಸೋಡಿಯಾ, ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್, ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಗಳಾಗಿ ಜೈಲು ಸೇರಿದ್ದರು. ಈ ಮೂಲಕ ಸಚಿವರು ಸಾಲು ಸಾಲಾಗಿ ಹಗರಣದಲ್ಲಿ ಸಿಲುಕಿ ಜೈಲು ಸೇರಿ ಆಮ್ ಆದ್ಮಿ ಪಕ್ಷದ ವಿಶ್ವಾಸಾರ್ಹತೆಗೆ ಹಾನಿ ಎಸಗಿದರು.

    ಈ ನಡುವೆ `ಜೈಲ್ ಕಾ ಜವಾಬ್ ವೋಟ್ ಸೇ’ ಎಂದು ದೆಹಲಿಯಲ್ಲಿ ಪ್ರಚಾರ ನಡೆಸಿದ್ದರು. ಆದರೂ ಕೇಜ್ರಿವಾಲ್ ಅನುಕಂಪದ ಕ್ಯಾಂಪೇನ್‌ಗೆ ದೆಹಲಿ ಜನರು ಕರಗಲಿಲ್ಲ. ಕಡೆಗೂ ಎಣ್ಣೆ ಏಟಿಗೆ ಕೇಜ್ರಿವಾಲ್ ತಂಡ ನರಳಿ, ಕಿಕ್ ಇಳಿಸುವ ಮೂಲಕ ಮೋದಿ ತಂಡ ಗೆದ್ದು ಬೀಗಿದೆ.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಶಾಕ್- ನಾಳೆಯಿಂದಲೇ ದರ ಏರಿಕೆ ಜಾರಿ – ಎಷ್ಟು ಕಿ.ಮೀಗೆ ಎಷ್ಟು ದರ?

     

  • ಕೇಜ್ರಿವಾಲ್ ಮದ್ಯದ ಕಡೆ ಹೆಚ್ಚು ಗಮನ ಕೊಟ್ಟಿದ್ರು: ಅಣ್ಣಾ ಹಜಾರೆ

    ಕೇಜ್ರಿವಾಲ್ ಮದ್ಯದ ಕಡೆ ಹೆಚ್ಚು ಗಮನ ಕೊಟ್ಟಿದ್ರು: ಅಣ್ಣಾ ಹಜಾರೆ

    ನವದೆಹಲಿ: ಕೇಜ್ರಿವಾಲ್ (Arvind Kejriwal) ಮದ್ಯದ ಕಡೆ ಹೆಚ್ಚು ಗಮನಹರಿಸಿದ್ದರು. ಅಲ್ಲದೆ ಹಣದ ಬಲ ಹೊಂದಿದ್ದರು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಹೇಳಿದ್ದಾರೆ.

    ದೆಹಲಿ ಚುನಾವಣೆ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಅಭ್ಯರ್ಥಿಯಲ್ಲಿ ಒಳ್ಳೆಯ ನಡವಳಿಕೆ, ಯೋಚನೆ, ಆಪಾದನೆ ರಹಿತ ಜೀವನ ಹಾಗೂ ತ್ಯಾಗ ಮನೋಭಾವವಿದ್ದರೆ ಮತದಾರರರು ಅಂತಹವರ ಮೇಲೆ ನಂಬಿಕೆಯಿಡುತ್ತಾರೆ ಎಂದರು.ಇದನ್ನೂ ಓದಿ: ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್‌ ಮನವಿ

    ಈ ವಿಚಾರವನ್ನು ಕೇಜ್ರಿವಾಲ್ ಬಳಿಯೂ ಹೇಳಿದ್ದೆ. ಆದರೆ ಅವರು ಇದರ ಬಗ್ಗೆ ಗಮನಕೊಡಲಿಲ್ಲ. ಬದಲಾಗಿ ಅವರಲ್ಲಿ ಹಣದ ಹೊಳೆಯಿದ್ದಿದ್ದರಿಂದ ಮದ್ಯದ ಕಡೆಗೆ ಗಮನಹರಿಸಿದರು. ಇದರಿಂದಲೇ ಅವರು ಕಡಿಮೆ ಮತಗಳನ್ನು ಪಡೆಯುತ್ತಿದ್ದಾರೆ ಎಂದು ದೂರಿದರು.

    ರಾಜಕೀಯದಲ್ಲಿ ಆಪಾದನೆಗಳು ಬರುತ್ತದೆ. ಅದು ಸುಳ್ಳು ಎಂದು ನಾವು ಸಾಬೀತು ಮಾಡಬೇಕು ಆದರೆ ಅವರು ಆ ವಿಚಾರದ ಕಡೆಗೆ ತಲೆಹಾಕಲೇ ಇಲ್ಲ. ಸತ್ಯ ಯಾವತ್ತಿದ್ದರು ಸತ್ಯವಾಗಿರುತ್ತದೆ. ಆದ್ದರಿಂದ ನಾನು ಆ ಪಕ್ಷದಿಂದ ದೂರವಿರಬೇಕು ಎಂದು ನಿರ್ಧರಿಸಿದೆ. ಅವತ್ತಿನಿಂದ ಆಪ್‌ನಿಂದ ನಾನು ದೂರ ಇದ್ದೇನೆ ಎಂದರು.ಇದನ್ನೂ ಓದಿ: Delhi Election Results | ಒಂದು ಕ್ಷೇತ್ರದಲ್ಲೂ ಖಾತೆ ತೆರೆಯದ ಕಾಂಗ್ರೆಸ್‌ – `ಕೈʼ ನಾಯಕರಿಗೆ ಮುಖಭಂಗ