Tag: Defense

  • ನೀರಿಲ್ಲದಿದ್ರೂ ಬೃಹತ್ ಮೊಸಳೆ ಪತ್ತೆ- ಭಯಭೀತರಾದ ಜನ

    ನೀರಿಲ್ಲದಿದ್ರೂ ಬೃಹತ್ ಮೊಸಳೆ ಪತ್ತೆ- ಭಯಭೀತರಾದ ಜನ

    ವಿಜಯಪುರ: ಜಿಲ್ಲೆಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಬೃಹತ್ ಮೊಸಳೆ ಪತ್ತೆಯಾಗಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ.

    ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯ ಬೇನಾಳ ಗ್ರಾಮದ ಸೇತುವೆ ಬಳಿ ಕಾಲುವೆ ಇದೆ. ಅಲ್ಲಿ ಬೃಹತ್ ಮೊಸಳೆ ಕಂಡು ಬಂದಿದೆ. ಇದರಿಂದ ಗ್ರಾಮಸ್ಥರು ಭಯಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೊಸಳೆ ರಕ್ಷಣಾ ಕಾರ್ಯವನ್ನು ಮಾಡಿದ್ದರು. ಸ್ಥಳೀಯರು ಹಾಗೂ ಮೀನುಗಾರರ ಸಹಾಯದಿಂದ ಬಲೆ ಹಾಕಿ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಮೊಸಳೆಗೆ ಬಲೆ ಹಾಕಿದರೂ ಸಹ ಅದು ಜನರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿತ್ತು. ಈ ಎಲ್ಲಾ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಸದ್ಯಕ್ಕೆ ಸೆರೆ ಹಿಡಿದ ಮೊಸಳೆಯನ್ನು ಅರಣ್ಯಾಧಿಕಾರಿಗಳು ಆಲಮಟ್ಟಿ ಜಲಾಶಯದಲ್ಲಿ ಬಿಟ್ಟಿದ್ದಾರೆ. ಕಾಲುವೆಯಲ್ಲಿ ನೀರು ಇಲ್ಲದಿದ್ದರೂ ಮೊಸಳೆ ಹೇಗೆ ಬಂತು ಎಂದು ಜನರಲ್ಲಿ ಆತಂಕ ಮೂಡಿದೆ.

  • ಒಂದೇ ಒಂದು ಟ್ವೀಟ್‍ನಿಂದ 26 ಅಪ್ರಾಪ್ತ ಬಾಲಕಿಯರ ರಕ್ಷಣೆ!

    ಒಂದೇ ಒಂದು ಟ್ವೀಟ್‍ನಿಂದ 26 ಅಪ್ರಾಪ್ತ ಬಾಲಕಿಯರ ರಕ್ಷಣೆ!

    ಲಖ್ನೋ: ಒಂದೇ ಒಂದು ಟ್ವೀಟ್‍ನಿಂದಾಗಿ 26 ಅಪ್ರಾಪ್ತ ಬಾಲಕಿಯರನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್​ಪಿ) ಮತ್ತು ರೈಲ್ವೆ ರಕ್ಷಣಾ ದಳ (ಆರ್​ಪಿಎಫ್) ರಕ್ಷಣೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಜುಲೈ 5ರಂದು 26 ಬಾಲಕಿಯರನ್ನು ಮುಜಾಫರ್ ಪುರ-ಬಾಂದ್ರಾ ಔದ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಬಾಲಕಿಯರು ಅಳುತ್ತಿರವುದನ್ನು ಕೇಳಿಸಿಕೊಂಡಿದ್ದ ಪ್ರಯಾಣಿಕರೊಬ್ಬರು ಅಪಹರಣ ಶಂಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದನ್ನು ನೋಡಿದ ರೈಲ್ವೆ ಅಧಿಕಾರಿಗಳು, ಕಳ್ಳ ಸಾಗಾಣಿಕೆ ಪತ್ತೆ ಘಟಕಕ್ಕೆ ಬಾಲಕಿಯರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು. ತಕ್ಷಣವೇ ಜಾಗೃತರಾದ ಇಬ್ಬರು ಪೊಲೀಸರು ಕಪತ್ ಗಂಜ್‍ನಿಂದ ಗೋರಖಪುರವರೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.

    ಗೋರಕ್‍ಪುರಗೆ ರೈಲು ಬರುತ್ತಿದ್ದಂತೆ ಜಿಆರ್​ಪಿ ಮತ್ತು ಆರ್​ಪಿಎಫ್ ಪೊಲೀಸರು ಬಾಲಕಿಯರನ್ನು ರಕ್ಷಣೆ ಮಾಡಿದ್ದು, ಅವರನ್ನು ಕರೆದೊಯ್ಯುತ್ತಿದ್ದ 22 ವರ್ಷದ ಯುವಕ ಹಾಗೂ 55 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡಿದಿದ್ದಾರೆ.

    ಬಾಲಕಿಯರು 10 ರಿಂದ 14 ವರ್ಷದವರಾಗಿದ್ದು, ಬಿಹಾರದ ಪಶ್ಚಿಮ ಚಂಪಾರಣ್ ಪ್ರದೇಶದವರು. ಅವರನ್ನು ನರಕ್ತಿಯಾಗಂಜ್ ನಿಂದ ಇದ್ಗಾಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ಕುರಿತು ಸದ್ಯ ಬಾಲಕಿರ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಆರ್‍ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

  • ಅಪರೂಪದ ‘ರೆಡ್ ಬಗ್’ ಕೀಟದ ಮೊಟ್ಟೆ ರಕ್ಷಿಸಿದ ವನ್ಯಜೀವಿ ಸ್ವಯಂ ಸೇವಕ

    ಅಪರೂಪದ ‘ರೆಡ್ ಬಗ್’ ಕೀಟದ ಮೊಟ್ಟೆ ರಕ್ಷಿಸಿದ ವನ್ಯಜೀವಿ ಸ್ವಯಂ ಸೇವಕ

    ಬೆಂಗಳೂರು: ಪರಿಸರದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಆದರೆ ನಮ್ಮ ನಡುವೆ ನಮಗೆ ತಿಳಿದೋ ತಿಳಿಯದೇ ಕಾಲಿಗೆ ಸಿಕ್ಕು ಪುಟ್ಟ ಪುಟ್ಟ ಕೀಟಗಳು ಸತ್ತುಹೋಗ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ನಾಶವಾಗ ಬೇಕಿದ್ದ ಕೀಟಗಳ ಮೊಟ್ಟೆಯನ್ನು ರಕ್ಷಿಸಿದ್ದಾರೆ.

    ಹೌದು, ‘ಬೆಂಗಳೂರು, ರೆಡ್ ಬಗ್, ರಕ್ಷಣೆ, ಬಿಬಿಎಂಪಿ, ಪಬ್ಲಿಕ್ ಟಿವಿ ರೆಡ್ ಬಕ್ ಫ್ಯಾಮಿಲಿ’ ಜಾತಿಗೆ ಸೇರಿದ ಕೀಟದ ಮೊಟ್ಟೆಗಳನ್ನು ಬಿಬಿಎಂಪಿ ವನ್ಯಜೀವಿ ವಿಭಾಗದ ಸ್ವಯಂ ಸೇವಕ ರಾಜೇಶ್ ಅವರು ರಕ್ಷಿಸಿದ್ದಾರೆ. ಮತ್ತಿಕೆರೆಯ ಮನೆಯ ಮಟ್ಟಿಲ ಮೇಲೆ ಮೊಟ್ಟೆ ಇಡುತ್ತಿರುವ ಅಪರೂಪದ ದೃಶ್ಯ ಸೆರೆ ಸಿಕ್ಕಿದೆ. ಮೆಟ್ಟಿಲು ಕ್ಲೀನ್ ಮಾಡುವ ವೇಳೆ ರಾಜೇಶ್ ಅವರ ಗಮನಕ್ಕೆ ಬಂದಿದೆ.

    ಸದ್ಯ ಮೊಟ್ಟೆ ಇಡುವ ದೃಶ್ಯ ಚಿತ್ರೀಕರಿಸಿದ ರಾಜೇಶ್, ಮೊಟ್ಟೆಯನ್ನೂ ಸೇಫ್ ಮಾಡಿದ್ದಾರೆ. ರಾಗಿ ಕಾಳಿನಷ್ಟು ದಪ್ಪ ಇರುವ 31 ಮೊಟ್ಟೆಗಳನ್ನ ತೆಳುವಾದ ಪೇಪರ್ ಮೂಲಕ ತೆಗೆದು ಮರಳಿನಲ್ಲಿ ರಕ್ಷಿಸಿದ್ದಾರೆ. 45 ದಿನಗಳ ಬಳಿಕ ಅಷ್ಟೂ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿದ್ದು, ಮರಿಗಳನ್ನ ಜೆಪಿ ಪಾರ್ಕ್‍ನಲ್ಲಿ ಬಿಟ್ಟಿದ್ದಾರೆ.

    ಹಾವಿನ ಮೊಟ್ಟೆಗಳನ್ನ ರಕ್ಷಣೆ ಮಾಡಿ ಮೊಟ್ಟೆಯೊಡೆದು ಮಾರಿಯಾಗುವಂತೆ ನೋಡಿಕೊಂಡಿರುವ ಹಲವು ಪ್ರಕರಣಗಳಿವೆ. ಆದರೆ ಕೀಟದ ಮೊಟ್ಟೆಗಳನ್ನ ರಕ್ಷಿಸಿ ಮರಿಯಾಗುವಂತೆ ಮಾಡಿರುವುದು ಖುಷಿ ತಂದಿದೆ. ಇದು ಒಂದು ಶಿಕ್ಷಣವಾಗಿದ್ದು, ಹೆಚ್ಚಿನ ಸಂಶೋದನೆ ನಡೆಸಲು ಸಹಕಾರಿಯಾಗಿದೆ ಎಂದು ರಾಜೇಶ್ ಹೇಳಿದ್ದಾರೆ.

    ಬೆಂಗಳೂರಿನ ಮಟ್ಟಿಗೆ `ಇನ್ಸೆಕ್ಟ್ ಎಗ್ ಇನ್‍ಕ್ಯುಬೇಷನ್’ ಇದೆ ಮೊದಲ ಬಾರಿಗೆ ನಡೆದಿದ್ದು, ಸ್ವಯಂ ಸೇವಕ ರಾಜೇಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

  • ಊಟ, ನೀರು ಇಲ್ಲದೇ ಮುಳ್ಳಿನ ಪೊದೆಯಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ಧೆಯನ್ನು ರಕ್ಷಿಸಿದ ಗದಗ ಪೊಲೀಸ್ರು

    ಊಟ, ನೀರು ಇಲ್ಲದೇ ಮುಳ್ಳಿನ ಪೊದೆಯಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ಧೆಯನ್ನು ರಕ್ಷಿಸಿದ ಗದಗ ಪೊಲೀಸ್ರು

    ಗದಗ: ಊಟ, ನೀರು ಇಲ್ಲದೇ ಮುಳ್ಳಿನ ಕಂಠಿಯ ಪೊದೆಯಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ಧೆಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ನಗರದ ಬೆಟಗೇರಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ನಗರದ ಸೆಟ್ಲಮೆಂಟ್ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಮುಳ್ಳಿನ ಗಿಡದ ಮಧ್ಯದಲ್ಲಿ ವೃದ್ಧೆಯೊಬ್ಬರು ಬಿದ್ದು ನರಳಾಡುತ್ತಿದ್ದ ಸ್ಥಿತಿಯನ್ನು ನೋಡಿದ ಸ್ಥಳೀಯರು ಬೆಟಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಬೆಟಗೇರಿ ಠಾಣೆಯ ಪಿಎಸ್‍ಐ ಮಲ್ಲಪ್ಪ ಮಡ್ಡಿ ಹಾಗೂ ಸಿಬ್ಬಂದಿ ಕೂಡಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಿ ವೃದ್ಧೆಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಸ್ವಸ್ಥ ವೃದ್ಧೆ ಮಾತನಾಡುವ ಸ್ಥಿತಿಯಲ್ಲಿಯೂ ಸಹ ಇಲ್ಲದ ಕಾರಣ ಅವರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸದ್ಯ ಅವರನ್ನು ಗದಗ್ ನ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗನ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 150 ಅಡಿ ಆಳದ ಬೋರ್ ವೆಲ್‍ ಗೆ ಬಿದ್ದು 35 ಗಂಟೆಗಳ ಬಳಿಕ ಬದುಕಿ ಬಂದ 4ರ ಬಾಲಕ – ವಿಡಿಯೋ

    150 ಅಡಿ ಆಳದ ಬೋರ್ ವೆಲ್‍ ಗೆ ಬಿದ್ದು 35 ಗಂಟೆಗಳ ಬಳಿಕ ಬದುಕಿ ಬಂದ 4ರ ಬಾಲಕ – ವಿಡಿಯೋ

    ಭೋಪಾಲ್: 40 ಅಡಿ ಆಳದ ಬೋರ್ ವೆಲ್‍ ಗೆ ಸಿಲುಕಿದ್ದ 4 ವರ್ಷದ ಹುಡುಗ 35 ಗಂಟೆಗಳ ನಂತರ ಬದುಕಿ ಬಂದಿರುವ ಘಟನೆ ಮಧ್ಯ ಪ್ರದೇಶದ ದಿವಾಸ್ ಜಿಲ್ಲೆಯಲ್ಲಿ ನಡೆದಿದೆ.

    ರೋಷನ್ ಬೋರ್ ವೆಲ್‍ ಗೆ ಬಿದ್ದು ಬದುಕಿ ಬಂದ ಬಾಲಕ. ಈತ ಶನಿವಾರ ಬೆಳಗ್ಗೆ ಜಿಲ್ಲೆಯ ಉಮಾರಿಯಾ ಗ್ರಾಮದಲ್ಲಿ ಆಟವಾಡುತ್ತಿದ್ದನು. ಈ ವೇಳೆ ಸುಮಾರು 11 ಗಂಟೆಗೆ ರೋಷನ್ ಆಕಸ್ಮಿಕವಾಗಿ ತೆರೆದ ಬೋರ್ ವೆಲ್‍ ಗೆ ಬಿದ್ದಿದ್ದಾನೆ. ತಕ್ಷಣ ಬಾಲಕ ಬೋರ್ ವೆಲ್‍ ಗೆ ಬಿದ್ದಿರುವ ಮಾಹಿತಿಯನ್ನು ಸೇನಾ ಪಡೆಗೆ ಮಾಹಿತಿ ತಿಳಿಸಲಾಗಿದೆ.

    ಮಾಹಿತಿ ತಿಳಿದ ಸೇನಾ ತಂಡ ಸ್ಥಳಕ್ಕೆ ದೌಡಾಯಿಸಿದೆ. ನಂತರ ಸಿಬ್ಬಂದಿ ರಕ್ಷಣಾ ಕಾರ್ಯಚರಣೆಯನ್ನು ಆರಂಭಿಸಿದ್ದಾರೆ. ಆ ಬೋರ್ ವೆಲ್‍  ಸುಮಾರು 150 ಅಡಿ ಆಳವಿದ್ದು, ರೋಷನ್ ಸುಮಾರು 40 ಅಡಿ ಆಳಕ್ಕೆ ಸಿಲುಕಿದ್ದ ಮಾಹಿತಿ ದೊರೆತಿದೆ. ನಂತರ ಬಾಲಕನಿಗೆ ಪೈಪ್ ಮೂಲಕ ಆಮ್ಲಜನಕ ಒದಗಿಸಲಾಗಿತ್ತು.

    ಬಾಲಕನಿಗೆ ಪೈಪ್ ಮೂಲಕವೇ ಹಾಲು ಮತ್ತು ನೀರನ್ನು ನೀಡಲಾಯಿತು. ಪೋಷಕರು ಕಾರ್ಯಚರಣೆ ಮುಗಿಯುವರೆಗೂ ಮಗನ ಜೊತೆ ಮಾತನಾಡುತ್ತಿದ್ದರು. ಬಾಲಕನು ಕೂಡ ಅವರ ಮಾತಿಗೆ ಪ್ರತಿಕ್ರಿಯೆ ನಿಡುತ್ತಿದ್ದನು.

    ರಕ್ಷಣಾ ಪಡೆ ಮೊದಲಿಗೆ ಒಂದು ಅನ್ಯ ಮಾರ್ಗ ಅಗೆದು ಆ ಸುರಂಗದ ಮೂಲಕ ಕೊಳವೆ ಬಾವಿಯನ್ನು ಸಂಪರ್ಕಿಸಿ ಬಾಲಕನನ್ನು ಮೇಲೆ ತಳ್ಳುವ ಯೋಚನೆಯನ್ನು ಮಾಡಿದ್ದರು.

    ಸುರಂಗ ಮಾರ್ಗ ಅಗೆದಿದ್ದು, ಆದರೆ ಶೀಘ್ರದಲ್ಲೇ ಬಾಲಕನನ್ನು ಪಾರು ಮಾಡಬೇಕಾಗುತ್ತದೆ. ಇಲ್ಲದ್ದಿದ್ದರೆ ಬಾಲಕನ ಜೀವಕ್ಕೆ ಅಪಾಯವಿದೆ ಎಂದು ಸೇನಾ ಪಡೆ ತಿಳಿದುಕೊಂಡು ತಕ್ಷಣ ಹಗ್ಗವನ್ನು ಕೊಳವೆಯೊಳಗೆ ಇಳಿಸಿದ್ದಾರೆ. ಬಾಲಕನಿಗೆ ತನ್ನ ತೋಳಿನ ಸುತ್ತಿಕೊಳ್ಳಲು ತಿಳಿಸಲಾಗಿದ್ದು, ಹುಡುಗ ನಾವು ಹೇಳಿದ ಸೂಚನೆಗಳನ್ನು ಅನುಸರಿಸಿ, ನಂತರ ಯಶಸ್ವಿಯಾಗಿ ಹೊರಬಂದನು ಎಂದು ಎಸ್ ಪಿ ಹೇಳಿದ್ದಾರೆ.

    ಬಾಲಕ ಬೋರ್ ವೆಲ್‍ ನಿಂದ ಹೊರ ಬಂದ ತಕ್ಷಣ ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯಕ್ಕೆ ಹುಡುಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಎಲ್ಲ ಕಾರ್ಯಚರಣೆ ನಡೆಯಲು ಸುಮಾರು 35 ಗಂಟೆಗಳ ಸಮಯವಾಗಿದ್ದು, ಭಾನುವಾರ ರಾತ್ರಿ 10.45 ರ ವೇಳೆಗೆ ಬಾಲಕನನ್ನು ರಕ್ಷಿಸಲಾಗಿದೆ ಎಂದು ದೆವಾಸ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅನ್ಸುಮನ್ ಸಿಂಗ್ ಹೇಳಿದ್ದಾರೆ.

    https://www.youtube.com/watch?v=lw3NHCkW7Bk&feature=youtu.be&a=

  • 60 ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಸಿಕ್ತು ಚಿನ್ನದ ಪದಕ!

    60 ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಸಿಕ್ತು ಚಿನ್ನದ ಪದಕ!

    ಚಾಮರಾಜನಗರ: ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್ ಮತ್ತು ಅದರಲ್ಲಿದ್ದ 60 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಚಿನ್ನದ ಪದಕ ಸಿಕ್ಕಿದೆ.

    ಅಕ್ಟೋಬರ್ 8 ರಂದು ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಈ ಘಟನೆ ನಡೆದಿತ್ತು. ಅಂದು ಚಾಲಕ ಚಿನ್ನಸ್ವಾಮಿ ಅವರ ಸಮಯ ಪ್ರಜ್ಞೆಯಿಂದ 60 ಪ್ರಯಾಣಿಕರ ಪ್ರಾಣ ಉಳಿಸಿದ್ದರು. ಆದ್ದರಿಂದ ಮಂಗಳವಾರ ಅವರಿಗೆ ಕೆಎಸ್‍ಆರ್‍ಟಿಸಿ ಇಲಾಖೆ ಚಿನ್ನದ ಪದಕವನ್ನು ನೀಡಿದೆ.

    ಇಲಾಖೆಯ ನಿಯಮದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ 15 ವರ್ಷ ಹಾಗೂ ನಗರ ಪ್ರದೇಶದಲ್ಲಿ 5 ವರ್ಷ ಯಾವುದೇ ಅಪಾಯ ಸಂಭವಿಸಿದೆ ಬಸ್ ಚಲಾಯಿಸಿದ್ದರೆ ಮಾತ್ರ ಅಂತಹವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಚಿನ್ನಸ್ವಾಮಿ ಕೇವಲ 5 ವರ್ಷ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ 60 ಜನರ ಪ್ರಾಣ ಉಳಿಸಿದ್ದರಿಂದ ಅವರ ಸಾಧನೆಯನ್ನು ಗುರುತಿಸಿ ಈಗ ಚಿನ್ನದ ಪದಕವನ್ನು ಕೊಟ್ಟು ಗೌರವಿಸಲಾಗಿದೆ.

    ನಾನು ಅಂದು ಬ್ರೇಕ್ ಫೇಲ್ ಆಗಿದ್ದಾಗ ಪ್ರಯಾಣಿಕರು ಭಯ ಪಡುತ್ತಾರೆ ಎಂದು ಹೇಳಿರಲಿಲ್ಲ. ನಾನೇ ಬಸ್ ನಿಲ್ಲಿಸಲು ನಿರ್ಧಾರ ಮಾಡಿ ನಿಧಾನವಾಗಿ ಬಸ್ ಚಲಾಯಿಸಿ ಹ್ಯಾಂಡ್‍ಬ್ರೇಕ್ ಹಾಕಿ ಕಬ್ಬಿಣದ ತಡೆಗೋಡೆಗೆ ತಂದು ನಿಲ್ಲಿಸಿದೆ. ಬಳಿಕ ಎಲ್ಲರನ್ನು ನಿಧಾನವಾಗಿ ಬಸ್‍ನಿಂದ ಕೆಳಗಿಳಿಸಿದೆ ಎಂದು ಚಾಲಕ ಚಿನ್ನಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

    ಇಲಾಖೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ನನಗೆ ಚಿನ್ನದ ಪದಕ ನೀಡಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನನ್ನ ಕೆಲಸವನ್ನು ಮುಂದುವರಿಸಲು ನನಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಅವರು ಹೇಳಿದರು.

    ನಡೆದಿದ್ದೇನು?
    ಅಕ್ಟೋಬರ್ 8 ರಂದು ಗುಂಡ್ಲುಪೇಟೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಜಾತ್ರೆಗಾಗಿ ಕೆಎಸ್‍ಆರ್ ಟಿಸಿ ಬಸ್ ತೆರಳುತಿತ್ತು. ಆದರೆ ಬೆಟ್ಟದಿಂದ ವಾಪಸ್ ಬರುವಾಗ ಬಸ್‍ನ ಬ್ರೇಕ್ ಫೇಲ್ ಆಗಿದ್ದರಿಂದ ಪ್ರಪಾತಕ್ಕೆ ಬೀಳುವ ಹಂತದಲ್ಲಿತ್ತು. ಆದರೆ ಈ ಸಂದರ್ಭದಲ್ಲಿ ಬಸ್ ಚಾಲಕ ಚಿನ್ನಸ್ವಾಮಿ ಸಮಯ ಪ್ರಜ್ಞೆಯಿಂದ ಬಸ್ಸನ್ನು ಯಾವುದೇ ರೀತಿಯಲ್ಲಿ ಅಪಾಯವಿಲ್ಲದಂತೆ ಕಬ್ಬಿಣದ ತಡೆಗೋಡೆಗೆ ತಂದು ನಿಲ್ಲಿಸಿ ಎಲ್ಲಾ ಪ್ರಯಾಣಿಕರ ಪ್ರಾಣ ಉಳಿಸಿದ್ದರು.

    ಚಿನ್ನಸ್ವಾಮಿ ಅವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಕೆಟ್ಟ ರಸ್ತೆಯಿಂದಾಗಿ ಈ ಅಪಘಾತ ಸಂಭವಿಸಿದೆ. ದೊಡ್ಡ ಬಸ್ ಗಳು ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟ ಹೀಗಾಗಿ ಮುಂದೆ ಗುಂಡ್ಲುಪೇಟೆ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ನಡುವೆ ಕೇವಲ ಮಿನಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುವುದು ಎಂದು ಕೆಎಸ್‍ಆರ್ ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮಂಡ್ಯ: ಎರಡು ಚಿರತೆ ಮರಿಗಳನ್ನ ರಕ್ಷಿಸಿದ ಗ್ರಾಮಸ್ಥರು- ನೋಡಲು ಮುಗಿಬಿದ್ದ ಜನ

    ಮಂಡ್ಯ: ಎರಡು ಚಿರತೆ ಮರಿಗಳನ್ನ ರಕ್ಷಿಸಿದ ಗ್ರಾಮಸ್ಥರು- ನೋಡಲು ಮುಗಿಬಿದ್ದ ಜನ

    ಮಂಡ್ಯ: ಎರಡು ಚಿರತೆ ಮರಿಗಳನ್ನ ಗ್ರಾಮಸ್ಥರು ರಕ್ಷಣೆ ಮಾಡಿರುವಂತ ಘಟನೆ ಜಿಲ್ಲೆಯ ಪಾಂಡವಪುರದಲ್ಲಿರುವ ಬೇಬಿ ಬೆಟ್ಟದಲ್ಲಿ ನಡೆದಿದೆ.

    ಪಾಂಡವಪುರದ ಬೇಬಿ ಬೆಟ್ಟದ ಪಕ್ಕದಲ್ಲಿರುವ ಬನ್ನಂಗಾಡಿ ಗ್ರಾಮಸ್ಥರು ಚಿರತೆ ಮರಿಗಳ ರಕ್ಷಣೆ ಮಾಡಿದ್ದಾರೆ. ಭಾನುವಾರ ಗ್ರಾಮಸ್ಥರು ಬೆಟ್ಟದ ಬಳಿ ಹೋಗಿದ್ದಾಗ ಅವರನ್ನ ಕಂಡು ದೊಡ್ಡ ಚಿರತೆಗಳು ಜಾಗ ಖಾಲಿ ಮಾಡಿವೆ. ಈ ಸಂದರ್ಭದಲ್ಲಿ ಅಲ್ಲೆ ಇದ್ದ ಮರಿ ಚಿರತೆಗಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ನಂತರ ಅವುಗಳನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಮರಿ ಚಿರತೆಗಳನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

    ಇನ್ನು ಚಿರತೆ ಮರಿಗಳು ಸಿಕ್ಕಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದು ತಮ್ಮ ವಶಕ್ಕೆ ಚಿರತೆ ಮರಿಗಳನ್ನು ಪಡೆದುಕೊಂಡಿದ್ದಾರೆ.

     

  • ಯಾವ ಸ್ವಾರ್ಥವೂ ಇಲ್ಲದೆ ಬೀದಿನಾಯಿಗಳ ಸಂರಕ್ಷಣೆ ಮಾಡ್ತಿದೆ `ಲವ್ ಫಾರ್ ಫರ್ಗಟನ್’ ಸಂಸ್ಥೆ

    ಯಾವ ಸ್ವಾರ್ಥವೂ ಇಲ್ಲದೆ ಬೀದಿನಾಯಿಗಳ ಸಂರಕ್ಷಣೆ ಮಾಡ್ತಿದೆ `ಲವ್ ಫಾರ್ ಫರ್ಗಟನ್’ ಸಂಸ್ಥೆ

    ಬೆಂಗಳೂರು: ಬೀದಿ ನಾಯಿ ಅಂದರೆ ಸಾಕು ಜನರಿಗೆ ಕಚ್ಚುತ್ತೆ, ಗಲೀಜು ಅಂತಾ ದೂರ ಹೋಗುತ್ತಾರೆ. ಆದರೆ ಬೀದಿ ನಾಯಿಗಳ ಸಂರಕ್ಷಣೆಗಾಗಿಯೇ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅವುಗಳನ್ನು ರಕ್ಷಿಸುತ್ತಿದ್ದಾರೆ.

    ಬೆಂಗಳೂರಿನ ಜೆಪಿನಗರದಲ್ಲಿ ಲವ್ ಫಾರ್ ಫರ್ಗಟನ್ ಎನ್ನುವ ಸಂಸ್ಥೆ ಇದೆ. ಕಳೆದ ಒಂದು ವರ್ಷದಿಂದ ಸುಕನ್ಯ ಮತ್ತು ಅವರ ತಂಡ ಈ ಸಂಸ್ಥೆಯನ್ನು ಸ್ಥಾಪಿಸಿ ಬೀದಿ ನಾಯಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಹಸಿವಿನಿಂದ, ಅನಾರೋಗ್ಯದಿಂದ ಮತ್ತು ಅಪಘಾತವಾದ ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿ, ತಮ್ಮ ಶೇಲ್ಟರ್ನಲ್ಲಿ ರಕ್ಷಣೆ ನೀಡುತ್ತಿದ್ದಾರೆ. ಅವುಗಳು ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಅವುಗಳ ಮೂಲ ಸ್ಥಳಕ್ಕೆ ಬಿಟ್ಟುಬರುತ್ತಾರೆ.

    ಒಂದು ವರ್ಷದಲ್ಲಿ ಸುಮಾರು 150 ಕ್ಕೂ ಹೆಚ್ಚು ಬೀದಿ ನಾಯಿಗಳ ರಕ್ಷಣೆ ಮಾಡಿದ್ದೇವೆ. ನಮ್ಮ ದೊಡ್ಡಮ್ಮನಿಂದ ಉತ್ತೇಜನ ಪಡೆದು ಈ ಕೆಲಸ ಮಾಡುತ್ತಿದ್ದಾನೆ. ಅನಾರೋಗ್ಯದಿಂದ ನರಳುವ ಬೀದಿನಾಯಿಗಳಿಗಾಗಿಯೇ ಶೇಲ್ಟರ್ ನಿರ್ಮಿಸಿದ್ದೇವೆ. ಈಗ ಸುಮಾರು 25 ಕ್ಕೂ ಹೆಚ್ಚಿನ ನಾಯಿಗಳು ಇಲ್ಲಿವೆ. ನಿಮ್ಮ ಏರಿಯಾಗಳಲ್ಲಿ ಅನಾರೋಗ್ಯ ಪೀಡಿತ ನಾಯಿಗಳ ಕಂಡರೆ ನಮಗೆ ತಿಳಿಸಿ ನಾವು ಅವುಗಳ ಕೇರ್ ತಗೋತ್ತೀವೆ ಎಂದು ಟ್ರೇಸ್ಟಿ ಸುಕನ್ಯಾ ಹೇಳಿದರು.

    ಯಾವ ಸ್ವಾರ್ಥವೂ ಇಲ್ಲದೆ ತಮ್ಮ ಸಂಪಾದನೆಯಲ್ಲವನು ಇತಂಹ ಬೀದಿನಾಯಿಗಳ ರಕ್ಷಣೆಗೆ ಬಳಸುತ್ತಿರುವ ಸುಕನ್ಯಾ ಮತ್ತು ಅವರ ತಂಡಕ್ಕೆ ಧನ್ಯವಾದಗಳು.