Tag: Defense

  • ಸೇತುವೆ ಮೇಲಿಂದ ಬಿದ್ದ 50 ಪ್ರಯಾಣಿಕರಿದ್ದ ಬಸ್ – 29 ಮಂದಿ ದುರ್ಮರಣ

    ಸೇತುವೆ ಮೇಲಿಂದ ಬಿದ್ದ 50 ಪ್ರಯಾಣಿಕರಿದ್ದ ಬಸ್ – 29 ಮಂದಿ ದುರ್ಮರಣ

    17ಕ್ಕೂ ಹೆಚ್ಚು ಮಂದಿ ಗಾಯ
    – ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ

    ಲಕ್ನೋ: ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆಗಿ 50 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 29 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಯಮುನಾ ಎಕ್ಸ್‌ಪ್ರೆಸ್‌ ಹೈವೇನಲ್ಲಿ ಇಂದು ಬೆಳಗ್ಗಿನ ಜಾವ ಈ ದುರಂತ ಸಂಭವಿಸಿದೆ. 165 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಆಗ್ರಾ ಮತ್ತು ನೊಯ್ಡಾವನ್ನು ಸಂಪರ್ಕಿಸುತ್ತದೆ. ಇದೊಂದು ಡಬಲ್ ಡೆಕ್ಕರ್ ಬಸ್ಸಾಗಿದ್ದು, ಈ ಬಸ್ ಸುಮಾರು 50 ಮಂದಿ ಪ್ರಯಾಣಿಕರನ್ನು ಲಕ್ನೋದಿಂದ ದೆಹಲಿಗೆ ಕರೆದುಕೊಂಡು ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಚಾಲಕ ನಿದ್ದೆ ಮಂಪರಿನಲ್ಲಿದ್ದನು. ಹೀಗಾಗಿ ಬಸ್ ಸ್ಕಿಡ್ ಆಗಿ ಆಗ್ರಾ ಎಕ್ಸ್‌ಪ್ರೆಸ್‌ವೇ ಬಳಿ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಚರಂಡಿಗೆ ಬಿದ್ದಿದೆ. ಪರಿಣಾಮ 29 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 17 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆದ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

    ಅಪಘಾತವಾದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡ ಚರಂಡಿಗೆ ಇಳಿದು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಸದ್ಯಕ್ಕೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿರುವ ಮೃತದೇಹವನ್ನು ಹೊರತೆಗೆಯಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಸ್ ದುರಂತಕ್ಕೆ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಮತ್ತು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸರ್ಕಾರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಫೋಷಿಸಿದೆ.

  • ಮುರುಡೇಶ್ವರದಲ್ಲಿ ಸಮುದ್ರ ಪಾಲಾಗ್ತಿದ್ದ ಯುವಕನ ರಕ್ಷಣೆ

    ಮುರುಡೇಶ್ವರದಲ್ಲಿ ಸಮುದ್ರ ಪಾಲಾಗ್ತಿದ್ದ ಯುವಕನ ರಕ್ಷಣೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಮುರುಡೇಶ್ವರದ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನೊಬ್ಬನನ್ನು ಕಡಲತೀರದ ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿರುವ ಘಟನೆ ನಡೆದಿದೆ.

    ಎಸ್. ಅನಿಲ್ ಕುಮಾರ್‌ನನ್ನು ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿದ್ದಾರೆ. ಅನಿಲ್ ಕುಮಾರ್ ಮೂಲತಃ ಮೈಸೂರಿನವನಾಗಿದ್ದು, ತನ್ನ ಸ್ನೇಹಿತರ ಜೊತೆಯಲ್ಲಿ ಮುರುಡೇಶ್ವರ ಪ್ರವಾಸಕ್ಕೆ ಆಗಮಿಸಿದ್ದನು. ಈ ಸಂದರ್ಭದಲ್ಲಿ ಸಮುದ್ರದ ನೀರಿಗೆ ಇಳಿದಾಗ ಈ ಘಟನೆ ನಡೆದಿದೆ.

    ಅನಿಲ್ ಕುಮಾರ್ ಮತ್ತು ಸ್ನೇಹಿತರು ಮುರುಡೇಶ್ವರ ಕಡಲತೀರದಲ್ಲಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಆಗ ಸಮುದ್ರದ ರಭಸದ ಅಲೆಗೆ ಅನಿಲ್ ಕುಮಾರ್ ಕೊಚ್ಚಿ ಹೋಗುತ್ತಿದ್ದನು. ಇದನ್ನ ನೋಡಿದ ಕರ್ತವ್ಯ ನಿರತ ಲೈಫ್ ಗಾರ್ಡ್‌ಗಳು ಹಗ್ಗ ಕಟ್ಟಿ ರಕ್ಷಣೆ ಮಾಡಿದ್ದಾರೆ.

    ಅನಿಲ್ ಕುಮಾರ್ ತೀರಾ ಅಸ್ವಸ್ಥನಾಗಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

  • 7 ದಿನ ಕಾರ್ಯಾಚರಣೆ – 19 ಮಂದಿ ದುರ್ಮರಣ, 57ಕ್ಕೂ ಹೆಚ್ಚು ಜನರ ರಕ್ಷಣೆ

    7 ದಿನ ಕಾರ್ಯಾಚರಣೆ – 19 ಮಂದಿ ದುರ್ಮರಣ, 57ಕ್ಕೂ ಹೆಚ್ಚು ಜನರ ರಕ್ಷಣೆ

    – ಧಾರವಾಡ ಜನತೆ, ಮಾಧ್ಯಮದವರಿಗೆ ಜಿಲ್ಲಾಧಿಕಾರಿ ಧನ್ಯವಾದ
    – ಶ್ರಮಿಸಿದ ಸಿಬ್ಬಂದಿಗೆ ಸೂಕ್ತ ಬಹುಮಾನ

    ಧಾರವಾಡ: ಕಟ್ಟಡ ದುರಂತದಲ್ಲಿ ಸಾವನ್ನಪ್ಪಿದ ಸಂಖ್ಯೆ 19 ಕ್ಕೆ ಏರಿಕೆಯಾಗಿದ್ದು, ಕಳೆದ 7 ದಿನಗಳಿಂದ ಅಗ್ನಿ ಶಾಮಕ ದಳ, ಎನ್‍ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಡೆಸಿದ ಕಾರ್ಯಾಚರಣೆಯಲ್ಲಿ 19 ಶವಗಳನ್ನ ಹೊರ ತೆಗೆಯಲಾಗಿದ್ದು, 57 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

    ಇನ್ನು ಇಂದು ಹೊರ ತೆಗೆದ 3 ಜನರನ್ನು ನವಲು ಝಾರೆ, ವಾಘೂ ಜಾರೆ ಹಾಗೂ ಸಹದೇವ ಸಾಳುಂಕೆ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾಣೆಯಾದ ಈ ಮೂವರನ್ನು ಹುಡುಕುವ ಕಾರ್ಯ ಕಳೆದ 7 ದಿನಗಳಿಂದ ನಡೆದಿತ್ತು. ಆದರೆ ಈ ಮೂವರನ್ನು ಹೊರತು ಪಡಿಸಿ ಉಳಿದವರ ಶವಗಳು ಪತ್ತೆಯಾಗಿದ್ದವು. ತಡ ರಾತ್ರಿ ಕೂಡಾ ಕಾರ್ಯಾಚರಣೆ ನಡೆಸಿ ಈ ಮೂರು ಶವಗಳನ್ನು ಹೊರ ತೆಗೆಯುವಲ್ಲಿ ಅಗ್ನಿ ಶಾಮಕ ದಳ ಸಫಲವಾಗಿದೆ.

    ಇಂದು ಸಿಕ್ಕ ಮೂರು ಶವಗಳಲ್ಲಿ ಕಟ್ಟಡದ ಸೂಪರ್ ವೈಸರ್ ಸಹದೇವ ಸಳುಂಕೆ, ವಾಘು ಜಾರೆ ಹಾಗೂ ನವಲೂ ಜಾರೆಯ ಶವಗಳನ್ನ ಹೊರ ತೆಗೆಯಲಾಯಿತು. ಇದರಲ್ಲಿ ವಾಘು ಹಾಗೂ ನವಲೂ ಇಬ್ಬರು ಕಾಕಾ ಚಿಕ್ಕಪ್ಪನ ಮಕ್ಕಳು ಎಂದು ತಿಳಿದು ಬಂದಿದೆ.

    ಕಟ್ಟಡದ ದುರಂತ ಸ್ಥಳದಲ್ಲಿ ಶೇ.90ರಷ್ಟು ತೆರವು ಕಾರ್ಯಾಚರಣೆ ಆಗಿದೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆಯೊಳಗೆ ಎಲ್ಲ ಕೆಲಸ ಮುಗಿಯಲಿದೆ. ಈ ಘಟನೆಯಲ್ಲಿ ಸ್ಥಳೀಯರು ಬಹಳ ಜನರ ಜೀವ ಉಳಿಸಿದ್ದಾರೆ. ಜಿಲ್ಲಾಡಳಿತದಿಂದ ನಾವು ಅವರ ಮೇಲೆ ಚಿರರುಣಿಯಾಗಿರುತ್ತೇವೆ. ಜನರಿಗೆ ಮಾಹಿತಿ ಮುಟ್ಟಿಸಿದ ಮಾಧ್ಯಮದವರು ಕೂಡಾ ನಮಗೆ ಸಹಾಯ ಮಾಡಿದ್ದಾರೆ ಅವರಿಗೂ ಧನ್ಯವಾದ. ನಾವು ಉಳಿದ ಕಟ್ಟಡಗಳ ಗುಣಮಟ್ಟದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, 7 ದಿನ ನಡೆದ ರಕ್ಷಣಾ ಖರ್ಚನ್ನು ಜಿಲ್ಲಾಡಳಿತ ಭರಿಸಲಿದೆ. ಮುಂದೆ ಮಾಲಿಕರಿಂದ ವಸೂಲಿ ಮಾಡಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಕೃತಜ್ಞತೆ ಹೇಳಿದ್ದಾರೆ.

    ಕಟ್ಟಡ ದುರಂತ ಕಾರ್ಯಾಚರಣೆಯಲ್ಲಿ 288 ಅಗ್ನಿಶಾಮಕ ದಳ ಮತ್ತು 32 ಎಸ್‌ಡಿಆರ್‌ಎಫ್ ತಂಡದ ಸದಸ್ಯರು ಭಾಗವಹಿಸಿದ್ದಾರೆ. ಇದುವರೆಗೂ ಇಂಥ ಕಾರ್ಯಾಚರಣೆ ನಡೆದಿಲ್ಲ. ದೇಶದಲ್ಲಿಯೇ ಇಂತಹ ಘಟನೆ ನಡೆದಿಲ್ಲ. ಈ ಕಾರ್ಯಚರಣೆಯಲ್ಲಿ 57 ಜನರ ಜೀವ ಉಳಿಸಲಾಗಿದೆ. 19 ಜನರ ಶವ ಹೊರತೆಗೆಯಲಾಗಿದೆ. ಈ ಕಾರ್ಯಚರಣೆಯಲ್ಲಿ ಪ್ರತಿಯೊಬ್ಬರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಜನರು ಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ. ಶ್ರಮಿಸಿದ ಸಿಬ್ಬಂದಿಗೆ ಸೂಕ್ತ ಬಹುಮಾನ ಕೊಡಲು ನಿರ್ಧರಿಸಿದ್ದು, ಸರ್ಕಾರದಿಂದ ಸೂಚನೆ ಬಂದಿದೆ. ಈಗಾಗಲೇ ಸರ್ಕಾರಕ್ಕೆ ಸಿಬ್ಬಂದಿ ಪಟ್ಟಿ ಕಳಿಸುತ್ತಿದ್ದೇವೆ ಎಂದು ಅಗ್ನಿಶಾಮಕ ದಳದ ಡಿಐಜಿ ರವಿಕಾಂತೇಗೌಡ ತಿಳಿಸಿದ್ದಾರೆ.

  • ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಬದುಕಿ ಬಂದ ಶ್ವಾನ

    ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಬದುಕಿ ಬಂದ ಶ್ವಾನ

    ಧಾರವಾಡ: ಬದುಕಿದೆಯಾ ಬಡ ಜೀವ ಎಂಬಂತೆ, ಧಾರವಾಡದ ಕಟ್ಟಡ ದುರಂತದಲ್ಲಿ ಅವಶೇಷಗಳಡಿ ಸಿಲುಕಿದ್ದ ಸಾಕಿದ ಶ್ವಾನವೊಂದು ಬದುಕಿ ಬಂದಿದೆ. ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ನಾಯಿಯನ್ನು ರಕ್ಷಣೆ ಮಾಡಲಾಗಿದೆ.

    ಕಟ್ಟಡದ ನೆಲ ಮಹಡಿಯಲ್ಲಿ ಹೋಟೆಲ್ ಮಾಲೀಕರೊಬ್ಬರು ಸಾಕಿದ ನಾಯಿ ರೋಬಿ ಕೊನೆಗೂ ಬದುಕಿ ಬಂದಿದೆ. ಎನ್‍ಡಿಆರ್‍ಎಫ್ ತಂಡದ ಜೊತೆ ಬಂದಿದ್ದ ಅರ್ಜುನ್ ನಾಯಿ ನೆಲ ಮಹಡಿಯಲ್ಲಿ ಸಿಲುಕಿದ್ದ ಸಾಕು ನಾಯಿಯನ್ನು ಪತ್ತೆ ಹಚ್ಚಿದೆ. ಎನ್‍ಡಿಆರ್‍ಎಫ್ ತಂಡದವರು ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ನಂತರ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಇದನ್ನೂ ಓದಿ: ಧಾರವಾಡದಲ್ಲಿ ಕಟ್ಟಡ ಕುಸಿತ – ಸಾವಿನ ಸಂಖ್ಯೆ 6ಕ್ಕೆ ಏರಿಕೆ

    ಸದ್ಯಕ್ಕೆ ಧಾರವಾಡ ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಈವರೆಗೂ ರಕ್ಷಣಾ ಕಾರ್ಯದಲ್ಲಿ 54 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಎರಡು ದಿನಗಳ ಕಾಲ ಕಾರ್ಯಾಚರಣೆ ನೆಡೆಯುವ ಸಾಧ್ಯತೆ ಇದೆ. ಈಗಾಗಲೇ ಘಾಜಿಯಾಬಾದ್ NDRF ನ ಮತ್ತೊಂದು ತಂಡದ 78 ಸಿಬ್ಬಂದಿ ಧಾರವಾಡಕ್ಕೆ ಆಗಮಿಸಿದ್ದಾರೆ.

  • ದಾರಿ ಕಾಣದೆ ಪರದಾಡಿದ್ರು- ಪೊಲೀಸರಿಗೆ ಕರೆ ಮಾಡಿ ಕಾಪಾಡಿ ಅಂದ್ರು ಯುವಕ- ಯುವತಿಯರು..!

    ದಾರಿ ಕಾಣದೆ ಪರದಾಡಿದ್ರು- ಪೊಲೀಸರಿಗೆ ಕರೆ ಮಾಡಿ ಕಾಪಾಡಿ ಅಂದ್ರು ಯುವಕ- ಯುವತಿಯರು..!

    ಚಿಕ್ಕಬಳ್ಳಾಪುರ: ಮುಂಜಾನೆಯ ಮಬ್ಬುಗತ್ತಲಲ್ಲಿ ಚಿಕ್ಕಬಳ್ಳಾಪುರದ ಚಾರಣಿಗರ ಪಾಲಿನ ಸ್ವರ್ಗ ಅಂತಲೇ ಪ್ರಸಿದ್ಧ ಪಡೆದಿರುವ ಸ್ಕಂದಗಿರಿ ಬೆಟ್ಟ ಹತ್ತಿದ ಯುವಕ-ಯುವತಿಯರ ತಂಡ ದಾರಿ ಕಾಣದೆ ಬೆಟ್ಟದ ಮಧ್ಯೆ ಪರದಾಡಿದ ಘಟನೆ ನಡೆದಿದೆ.

    ಬೆಂಗಳೂರು ಮೂಲದ ಯುವಕರಾದ ದರ್ಶಿತ್, ರಾಜೇಶ್, ಬಿನಯ್, ಹಾಗೂ ಯುವತಿಯರಾದ ಶಾಶ್ವತಿ, ಶ್ವೇತ ಹಾಗೂ ಸಿಲ್ಕಿ ಎಂಬವರು ಮುಂಜಾನೆ 4 ಗಂಟೆ ಸುಮಾರಿಗೆ ಸ್ಕಂದಗಿರಿ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದಾರೆ. ಅಸಲಿಗೆ ಸ್ಕಂದಗಿರಿ ಬೆಟ್ಟದ ಚಾರಣಕ್ಕೆ ಅಂತ ಸರ್ಕಾರವೇ ತಲಾ 250 ರೂಪಾಯಿ ದರ ನಿಗದಿ ಮಾಡಿದ್ದು, ಗೈಡ್ ಗಳ ಮೂಲಕ ಚಾರಣಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಈ ಆರು ಮಂದಿ ಯುವಕ-ಯುವತಿಯರು ಟಿಕೆಟ್ ಖರೀದಿ ಮಾಡದೆ ಅಕ್ರಮವಾಗಿ ಅಡ್ಡದಾರಿ ಹಿಡಿದು ಚಾರಣಕ್ಕೆ ತೆರಳಿದ್ದಾರೆ.

    ಹೀಗಾಗಿ ಬೆಟ್ಟದ ತುತ್ತ ತುದಿ ತಲಪುವ ಮಾರ್ಗ ತಿಳಿಯದ ಆರು ಮಂದಿ ಯುವಕ-ಯುವತಿಯರು ಆಗೋ ಹಿಗೋ ಕಷ್ಟಪಟ್ಟು ಅರ್ಧ ಬೆಟ್ಟ ಏರಿದ್ದಾರೆ. ಆದರೆ ಮಬ್ಬುಗತ್ತಲಲ್ಲಿ ಬೆಟ್ಟ ಹತ್ತಿದ್ದ ಯುವಕ ಯುವತಿಯರಿಗೆ ಮುಂದೆ ಬೆಟ್ಟ ಏರಲಾಗದೆ ಮಧ್ಯೆ ಸಿಲುಕಿ ಪರದಾಡಿದ್ದಾರೆ. ಕೊನೆಗೆ ಬೆಳಗಾಗುವರೆಗೂ ಅಲ್ಲೆ ಇದ್ದರು. ಆದರೆ ಬೆಳಕಾದ ಮೇಲೆಯೂ ಬೆಟ್ಟದಿಂದ ಕೆಳಗಿಳಿಯುವುದಕ್ಕೆ ದಾರಿ ಕಾಣದ ಯುವಕ-ಯುವತಿಯರು ಪರದಾಡಿದ್ದಾರೆ.

    ಇಂದು ಸುಮಾರು 2 ಗಂಟೆ ಅಲ್ಲೇ ಕಾಲ ಕಳೆದು ಕೊನೆಗೆ ವಿಧಿಯಿಲ್ಲದೆ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಈ ವೇಳೆ ಪೋಲಿಸರು ಉರಗತಜ್ಞ ಹಾಗೂ ವನ್ಯ ಜೀವಿ ಸಂರಕ್ಷಕ ಪ್ರಥ್ವಿರಾಜ್ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಆಗ ಪ್ರಥ್ವಿರಾಜ್ ಗೆ ಯುವಕ ದರ್ಶಿತ್ ಕರೆ ಮಾಡಿ ತಮ್ಮನ್ನ ರಕ್ಷಣೆ ಮಾಡುವಂತೆ ಮೊರೆಯಿಟ್ಟಿದ್ದಾನೆ. ಮಾಹಿತಿ ಅರಿತ ಪ್ರಥ್ವಿರಾಜ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಯುವಕ-ಯುವತಿಯರ ರಕ್ಷಣೆಗೆ ಮುಂದಾಗಿದ್ದಾರೆ.

    ಮೊಬೈಲ್ ಮೂಲಕ ಯುವಕ-ಯುವತಿಯರಿದ್ದ ಸ್ಥಳದ ಮಾಹಿತಿ ತಿಳಿದುಕೊಂಡು ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಪ್ರಥ್ವಿರಾಜ್ ಎರಡು ಗಂಟೆಗೂ ಹೆಚ್ಚು ಕಾಲ ಬೆಟ್ಟದಲ್ಲಿ ಅಲೆದಾಡಿ ಯುವಕ-ಯುವತಿಯರನ್ನ ಪತ್ತೆ ಹಚ್ಚಿದ್ದಾರೆ. ಕೊನೆಗೆ ಸಿಕ್ಕ ಯುವಕ ಯುವತಿಯರನ್ನ ಹರಸಾಹಸ ಪಟ್ಟು ಕೆಳಗೆ ಕರೆ ತಂದಿದ್ದಾರೆ. ಸದ್ಯ ಆರು ಮಂದಿ ಯುವಕ-ಯುವತಿಯರನ್ನ ಚಿಕ್ಕಬಳ್ಳಾಪುರ ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದು, ಯುವಕ-ಯುವತಿಯರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ತಲಾ 2000 ರೂ. ದಂಡ ವಿಧಿಸಲು ಮುಂದಾಗಿದ್ದಾರೆ.

    ಅಂದ ಹಾಗೆ ಅರಣ್ಯ ಪ್ರದೇಶವೂ ಆಗಿರುವ ಸ್ಕಂದಗಿರಿಯನ್ನ ಅಕ್ರಮವಾಗಿ ಪ್ರವೇಶ ಮಾಡಿದರೆ 2 ವರ್ಷ ಜೈಲು ಅಥವಾ 2000 ದಂಡ ವಿಧಿಸಬಹುದಾಗಿದೆ. ಇಲ್ಲವಾದಲ್ಲಿ ಎರಡು ಸಹ ವಿಧಿಸಬಹುದಾಗಿದೆ. ಆದರೆ ಈ ರೀತಿ ಅದೆಷ್ಟೋ ಮಂದಿ ಅಡ್ಡದಾರಿ ಹಿಡಿದು ಫಜೀತಿ ಪಟ್ಟ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಹೀಗಾಗಿ ಅಡ್ಡದಾರಿ ಹಿಡಿದು ಟ್ರೆಕ್ಕಿಂಗ್ ಮಾಡುವ ಮುನ್ನ ಎಚ್ಚರವಿರಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಸ್ವಾರ್ಥವಾಗಿ ತಾಯಿ, ಮಗುವನ್ನು ಕಾಪಾಡಿ, ತನ್ನ ಜೀವ ಕಳೆದುಕೊಂಡ ಆಟೋ ಡ್ರೈವರ್

    ನಿಸ್ವಾರ್ಥವಾಗಿ ತಾಯಿ, ಮಗುವನ್ನು ಕಾಪಾಡಿ, ತನ್ನ ಜೀವ ಕಳೆದುಕೊಂಡ ಆಟೋ ಡ್ರೈವರ್

    ನವದೆಹಲಿ: ಆಟೋ ಚಾಲಕನೊಬ್ಬ ತಾಯಿ ಮತ್ತು ಒಂದು ವರ್ಷದ ಮಗುವಿನ ಜೀವವನ್ನು ಉಳಿಸಿ, ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡಿರುವ ದುರದೃಷ್ಟಕರ ಘಟನೆ ದೆಹಲಿಯಲ್ಲಿ ನಡೆದಿದೆ.

    30 ವರ್ಷದ ಪವನ್ ಶಾ ಇಬ್ಬರ ಜೀವ ಉಳಿಸಿದ ಆಟೋ ಡ್ರೈವರ್. ಶಾ ಕಳೆದ ಶನಿವಾರ ಬೆಳಗ್ಗೆ ಸುಮಾರು 10.45ಕ್ಕೆ ಪ್ರಯಾಣಿಕರನ್ನು ಬಿಟ್ಟು ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ದೆಹಲಿಯ ಮೀತಾಪುರ ಕಾಲುವೆಯ ಸೇತುವೆಯ ಮೇಲೆ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ನಿಂತಿದ್ದರು. ಅದನ್ನು ನೋಡಿದ ಶಾ ಆಟೋ ನಿಲ್ಲಿಸಿದ್ದಾರೆ. ನಂತರ ಶಾ ನೋಡನೋಡುತ್ತಿದ್ದಂತೆ ಮಹಿಳೆ ಮಗುವಿನೊಂದಿಗೆ ನೀರಿಗೆ ಬಿದ್ದಿದ್ದಾರೆ.

    ಶಾ ಒಂದು ಕ್ಷಣವೂ ಯೋಚನೆ ಮಾಡದೇ ಅವರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಬಳಿಕ ಈಜಿಕೊಂಡು ಮಹಿಳೆ ಬಳಿ ಹೋಗಿದ್ದಾರೆ. ಆದರೆ ಇಬ್ಬರನ್ನು ಒಂದೇ ಸಲ ಕಾಪಾಡಲು ಸಾಧ್ಯವಾಗುವುದಿಲ್ಲ ಎಂದು ಅರಿತ ಶಾ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ದಾರಿಯಲ್ಲಿ ಹೋಗುತ್ತಿದ್ದ ರಾಜವೀರ್, ಜಮೀಲ್ ಮತ್ತು ಸಂಜೀವ್ ಮೂವರು ಯುವಕರು ಶಾ ಕೂಗಿದ ಶಬ್ದ ಕೇಳಿ ಸಹಾಯಕ್ಕಾಗಿ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಶಾ, ತಾಯಿ ಮತ್ತು ಮಗುವಿನ ತಲೆ ನೀರಿನಲ್ಲಿ ಮುಳುಗದಂತೆ ಮೇಲೆತ್ತಲು ಪ್ರಯತ್ನಿಸಿದ್ದರು. ತಕ್ಷಣ ಮೂವರು ಒಂದು ಮಾನವ ಸರಪಣಿ ಸಿದ್ಧಪಡಿಸಿ ತಾಯಿ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಶಾನನ್ನು ರಕ್ಷಿಸಲು ಹೋಗುವಷ್ಟರಲ್ಲಿ ನೀರಿನ ರಭಸಕ್ಕೆ ಶಾ ಕೊಚ್ಚಿ ಹೋಗಿದ್ದಾರೆ. ತನ್ನ ಪ್ರಾಣವನ್ನು ಲೆಕ್ಕಿಸದೆ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದ ಆಟೋ ಡ್ರೈವರ್ ಆತನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇತ್ತ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಶಾನನ್ನು ರಕ್ಷಿಸಲಾಗದೆ ಅಸಹಾಯಕವಾಗಿ ಮೂವರು ನೋಡುತ್ತಾ ನಿಂತಿದ್ದರು. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರ ತಂಡ ಆಗಮಿಸಿ ಶೋಧಕಾರ್ಯ ನಡೆಸಿದ್ದಾರೆ. ಅವರ ಜೊತೆ ಇತರ ಆಟೋ ಚಾಲಕರು ಕೂಡ ಬೋಟ್ ಮೂಲಕ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ ಎಷ್ಟು ಹುಡುಕಾಡಿದರೂ ಶಾ ಮಾತ್ರ ಪತ್ತೆಯಾಗಿಲ್ಲ. ಆದ್ದರಿಂದ ಅವರು ಮೃತಪಟ್ಟಿರಬಹದು ಎಂದು ಶಂಕಿಸಲಾಗಿದೆ.

    ಇತ್ತ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಮಹಿಳೆ ಪತಿಯೊಂದಿಗೆ ಜಗಳವಾಡಿಕೊಂಡು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಜೀವನ ರಕ್ಷಾ ಶೌರ್ಯ ಪ್ರಶಸ್ತಿಗೆ ಆಟೋ ಡ್ರೈವರ್ ಶಾ ಹೆಸರನ್ನು ಶಿಫಾರಸ್ಸು ಮಾಡಲಾಗುವುದು ಎಂದು ಡಿಸಿಪಿ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ, ಮುಂದೇನಾಯ್ತು?

    ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ, ಮುಂದೇನಾಯ್ತು?

    ಚೆನ್ನೈ: ಚಲಿಸುತ್ತಿದ್ದ ರೈಲು ಹತ್ತುವ ಸಾಹಸಕ್ಕೆ ಮುಂದಾಗಿದ್ದ ಪ್ರಯಾಣಿಕನೊಬ್ಬ ಕಾಲು ಜಾರಿ ಬಿದ್ದಿದ್ದು, ಅಪಾಯದ ಅಂಚಿನಲ್ಲಿದ್ದ ವ್ಯಕ್ತಿಯನ್ನು ರೈಲ್ವೇ ಪೊಲೀಸರು ರಕ್ಷಿಸಿದ ಘಟನೆ ಚೆನ್ನೈನ ಎಗ್ಮೋರ್ ನಿಲ್ದಾಣದಲ್ಲಿ ನಡೆದಿದೆ.

    ಪ್ರಯಾಣಿಕ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದು, ಈ ವೇಳೆ ಸ್ಥಳದಲ್ಲೇ ಇದ್ದ ರೈಲ್ವೇ ಪೊಲೀಸರು ರಕ್ಷಣೆ ಮಾಡಿರುವ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲ್ವೇ ಸುರಕ್ಷತೆಯ ಬಗ್ಗೆ ಸಾಕಷ್ಟು ಬಾರಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ ಬಳಿಕವೂ ಇಂತಹ ಘಟನೆಗಳು ಪುನಾರವರ್ತನೆ ಆಗುತ್ತಿದ್ದು, ವಿಡಿಯೋ ವೀಕ್ಷಿಸಿದ ಹಲವರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಳೆದ ಫೆಬ್ರವರಿಯಲ್ಲಿಯೂ ಮುಂಬೈ  ನಿಲ್ದಾಣದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಏಳು ವರ್ಷದ ಬಾಲಕ ಚಲಿಸುತ್ತಿದ್ದ ರೈಲು ಹಾಗೂ ಪ್ಲಾಟ್ ಫಾರ್ಮ್ ನಡುವೇ ಸಿಲುಕಿಕೊಂಡಿದ್ದ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕ್ಷಣಮಾತ್ರದಲ್ಲಿ ಬಾಲಕನ್ನು ಹಿಡಿದು ಹೊರಗೆಳೆದಿದ್ದರು. ಈ ವೇಳೆಯೂ ಪೊಲೀಸರ ಕಾರ್ಯ ಬಾಲಕನ ಪ್ರಾಣವನ್ನು ಉಳಿಸಿತ್ತು.

    https://twitter.com/Nikitaa7002/status/1062575548076044288

    https://twitter.com/Major_kuldeep/status/1062572591129354240

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

    ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

    ಮಡಿಕೇರಿ: ವಾಡಿಕೆಗಿಂತ ಶೇಕಡಾ 73 ರಷ್ಟು ಮಳೆಯಾಗಿದೆ. ಪ್ರವಾಹ ಸ್ಥಳಗಳಿಂದ ಈಗಾಗಲೇ 3,120 ಜನರನ್ನು ರಕ್ಷಿಸಿ ತರಲಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ವೈಮಾನಿಕ ಸಮೀಕ್ಷೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯನ್ನು ಲೆಕ್ಕ ಹಾಕಲು ಹೆಚ್ಚು ದಿನಗಳು ಬೇಕಾಗುತ್ತದೆ. ಅಲ್ಲಲ್ಲಿ ಗುಡ್ಡ ಕುಸಿತವಾಗಿದೆ, ರಸ್ತೆಗಳು ಬಿರುಕುಬಿಟ್ಟಿವೆ. ಹಿಂದೆಂದು ಕಾಣದ ಅನಾಹುತಗಳು ಆಗುತ್ತಿವೆ. ಇತ್ತ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದರು.

    ಇಂತಹ ಸಂದರ್ಭದಲ್ಲಿ ಕಳ್ಳಾಟ ಆಡುವ ಅಧಿಕಾರಿಗಳ ಅಮಾನತು ಮಾಡಿ, ಸೂಕ್ತ ವ್ಯವಸ್ಥೆ ಮಾಡಲು ಬಿಬಿಎಂಪಿ ಅಧಿಕಾರಿಗಳನ್ನು ಮಡಿಕೇರಿಗೆ ಕರೆಸಿಕೊಳ್ಳಲಾಗುತ್ತದೆ. ಆದರೆ ಕೆಲವರು ರಕ್ಷಣಾ ಕಾರ್ಯನಿರತರ ಮೇಲೆ ಕೆಲವರು ರಾಜಕೀಯ ಪ್ರದರ್ಶಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ, ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯ ಮೇಲೆ ಒತ್ತಡ ತರುವ ಕೆಲಸ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಸಂತ್ರಸ್ತರಿಗೆ ಸರ್ಕಾರವು ಅಗತ್ಯ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಮೊಬೈಲ್ ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಜೀವನದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಕೆಲವರು ಅವರಿಗೆ ಬೆರಳು ಮಾಡಿ ತೋರಿಸುತ್ತಿದ್ದು, ಸಣ್ಣತನ ಮೆರೆಯುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.


    ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ಕಷ್ಟವಾಗುತ್ತಿದೆ. 40 ಪರಿಹಾರ ಕೇಂದ್ರ ಕೇಂದ್ರಗಳು ವ್ಯವಸ್ಥೆ ಮಾಡಲಾಗಿದ್ದು, ಕೆಲವರು ಪರಿಹಾರ ಕೇಂದ್ರಗಳಲ್ಲಿ ಇರಲು ಇಷ್ಟ ಪಡುತ್ತಿಲ್ಲ. ಹೀಗಾಗಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ. ಮಳೆ ಆರ್ಭಟ ನಿಂತ ತಕ್ಷಣವೇ ಸರ್ಕಾರದ ಭೂಮಿ ಗುರುತು ಮಾಡಿ ಶೆಡ್ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಮುಂದಾಗಲಿದೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋರಿಯಲ್ಲಿ ಬಿದ್ದು 1 ಗಂಟೆ ನರಳಾಡಿದ ಹಸುವಿನ ರಕ್ಷಣೆ

    ಮೋರಿಯಲ್ಲಿ ಬಿದ್ದು 1 ಗಂಟೆ ನರಳಾಡಿದ ಹಸುವಿನ ರಕ್ಷಣೆ

    ಮೈಸೂರು: ದೊಡ್ಡ ಮೋರಿಯಲ್ಲಿ ಬಿದ್ದ ಹಸುವನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಜೆ.ಪಿ. ನಗರದಲ್ಲಿ ನಡೆದಿದೆ.

    ಹಸು ಮೇವು ಮೇಯುತ್ತಾ ಹಳ್ಳಕ್ಕೆ ಬಿದ್ದಿದೆ. ಆದರೆ ಅಲ್ಲಿಂದ ಮೇಲೆ ಬರಲು ಸಾಧ್ಯವಾಗದೇ 1 ಗಂಟೆಗೂ ಹೆಚ್ಚು ಕಾಲ ನರಳಾಡಿದೆ. ಬಳಿಕ ಹಸುವಿನ ನರಳಾಟ ನೋಡಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸಿಬ್ಬಂದಿ ಹಗ್ಗದ ಸಹಾಯದಿಂದ ಹಸುವನ್ನು ರಕ್ಷಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆದಿದೆ. ಮಳೆಯ ಹಿನ್ನೆಲೆಯಲ್ಲಿ ಮೋರಿ ತುಂಬಿ ಹೋಗಿತ್ತು. ಮೋರಿಯಲ್ಲಿ ಹುಲ್ಲು ಬೆಳೆದಿದ್ದ ಕಾರಣ ಹಸು ಮೇಯಲು ಹೋಗಿ ಮೋರಿಯೊಳಗೆ ಸಿಲುಕಿದೆ.

  • ಹಲವು ದಿನಗಳಿಂದ ಕಾಟ ಕೊಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ ಕೊನೆಗೂ ಸೆರೆ!

    ಹಲವು ದಿನಗಳಿಂದ ಕಾಟ ಕೊಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ ಕೊನೆಗೂ ಸೆರೆ!

    ಉಡುಪಿ: ಹಲವು ದಿನಗಳಿಂದ ಕಾಟ ಕೊಡುತ್ತಿದ್ದ ಕಾಳಿಂಗನನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ತಾಲೂಕಾಗಿರುವ ಕಾರ್ಕಳದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಗ್ರಾಮಸ್ಥರ ನಿದ್ದೆಗೆಡಿಸಿತ್ತು.

    ಈ ಅಪರೂಪದ ಕಾಳಿಂಗಸರ್ಪ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದಲ್ಲಿ ಹಲವು ದಿನಗಳಿಂದ ಅಡ್ಡಾಡುತ್ತಿತ್ತು. ಆಹಾರ ಅರಸಿಕೊಂಡು ಜನವಸತಿ ಪ್ರದೇಶಕ್ಕೆ ಬಂದ ಭಾರೀ ಗಾತ್ರದ ಈ ಕಾಳಿಂಗ ಸರ್ಪವನ್ನು ಕೊನೆಗೂ ಸಂರಕ್ಷಿಸಲಾಗಿದೆ.

    ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಪದೇ ಪದೇ ಸರ್ಪ ಕಾಣಿಸಿಕೊಳ್ಳುತ್ತಿದ್ದು, ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೋಳಿ ಗೂಡಿಗೆ ಬರುತ್ತಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಅನಿಲ್ ಪ್ರಭು ಅವರ ಸಹಾಯ ಪಡೆದು ಸೆರೆ ಹಿಡಿಯಲಾಗಿದೆ.

    ಸುಮಾರು 12 ಅಡಿ ಉದ್ದ 15 ಕೆ.ಜಿ ತೂಗುವ ಈ ಹಾವನ್ನು ಕುದುರೆಮುಖ ಅಭಯಾರಣ್ಯಕ್ಕೆ ಮತ್ತೆ ಬಿಡಲಾಗಿದೆ. ವಿಷಕಾರಿಯಾದ ಈ ಹಾವು ಮಳೆಗಾಲದಲ್ಲಿ ಹೆಚ್ಚಾಗಿ ಆಹಾರ ಅರಸಿಕೊಂಡು ನಾಡಿನ ಕಡೆ ಬರುತ್ತದೆ. ಈ ಕಾಳಿಂಗ ಸರ್ಪ ಕೂಡಾ ಆಹಾರವಿಲ್ಲದೆ ಸೊರಗಿದಂತೆ ಕಾಣಿಸುತ್ತಿದೆ ಎಂದು ಉರಗ ತಜ್ಞ ಪ್ರಭು ಹೇಳಿದ್ದಾರೆ.

    ಈ ಗಾತ್ರದ ಕಾಳಿಂಗ ಸರ್ಪವು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಸರೀಸೃಪವಾಗಿದೆ. ಕಾಳಿಂಗ ಸರ್ಪದ ರಕ್ಷಣೆಯೊಂದಿಗೆ ಕಡ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.