Tag: defamation suit

  • ಸಾಮಾಜಿಕ ಮಾಧ್ಯಮದಲ್ಲಿ ನೀಡುವ ಮಾಹಿತಿ ನಿಖರ, ನಿಷ್ಪಕ್ಷಪಾತವಾಗಿರಬೇಕು – ಇ.ಡಿ ಕಿವಿಹಿಂಡಿದ ದೆಹಲಿ ಕೋರ್ಟ್

    ಸಾಮಾಜಿಕ ಮಾಧ್ಯಮದಲ್ಲಿ ನೀಡುವ ಮಾಹಿತಿ ನಿಖರ, ನಿಷ್ಪಕ್ಷಪಾತವಾಗಿರಬೇಕು – ಇ.ಡಿ ಕಿವಿಹಿಂಡಿದ ದೆಹಲಿ ಕೋರ್ಟ್

    ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವ ಮಾಹಿತಿ ನಿಖರವಾಗಿರಬೇಕು. ಈ ಮೂಲಕ ಇ.ಡಿ (ED) ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ (Rouse Avenue Court) ಎಚ್ಚರಿಸಿದೆ.

    ಈ ಕುರಿತು ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಮಾತನಾಡಿ, ಇ.ಡಿ ವಾಸ್ತವ ಅಂಶಗಳನ್ನು ನೀಡುವಾಗ ದಾರಿತಪ್ಪಿಸುವ ರೀತಿಯಲ್ಲಿ ಅಥವಾ ಮಾನಹಾನಿ ಮಾಡುವ ರೀತಿಯಲ್ಲಿರಬಾರದು. ಒಂದು ವೇಳೆ ಹಾಗೆ ಮಾಡಿದರೆ ಅದು ಸಂಸ್ಥೆಯ ಘನತೆಗೆ ಧಕ್ಕೆ ಬರುತ್ತದೆ. ಜೊತೆಗೆ ಸಂಬಂಧಪಟ್ಟ ವ್ಯಕ್ತಿಯ ಘನತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಹೆಚ್‌ಎನ್ ವ್ಯಾಲಿ ನೀರನ್ನ ಸಂಪುಟ ಸದಸ್ಯರಿಗೆ ಕುಡಿಸಿ ಶುದ್ಧತೆ ಸಾಬೀತುಪಡಿಸಲಿ: ಸಚಿವ ಸುಧಾಕರ್‌ ವಿರುದ್ಧ ಸಂಸದ ಸುಧಾಕರ್‌ ಸವಾಲ್‌

    ಇ.ಡಿಯಂತಹ ತನಿಖಾ ಸಂಸ್ಥೆಯು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಹಾಗೂ ನ್ಯಾಯಯುತ, ಸಮಂಜಸ ಪ್ರಕ್ರಿಯೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುತ್ತದೆ. ಅದಲ್ಲದೇ ಇ.ಡಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮಾಹಿತಿಯೂ ನಿಖರವಾಗಿರಬೇಕು. ದಾರಿತಪ್ಪಿಸದ ಹಾಗೂ ರೋಚಕತೆಯಿಂದ ಮುಕ್ತವಾಗಿರಬೇಕು. ರಾಜಕೀಯವಾಗಿ ಪಕ್ಷಪಾತ ಮಾಡುವ ಉದ್ದೇಶದಿಂದ ಯಾವುದೇ ವಿಷಯವನ್ನು ಹಂಚಿಕೊಳ್ಳುವುದರಿಂದ ಸಂಸ್ಥೆಯ ಸಮಗ್ರತೆ ಹಾಳಾಗುತ್ತದೆ ಎಂದಿದ್ದಾರೆ.

    ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರು ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯ ತಿರಸ್ಕರಿಸಿ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

    ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಬಾನ್ಸುರಿ ಸ್ವರಾಜ್ ಅವರು ಜೈನ್ ಅವರ ಮನೆಯಿಂದ ಇ.ಡಿಯು 1.8 ಕೆಜಿ ಚಿನ್ನ, 133 ಚಿನ್ನದ ನಾಣ್ಯಗಳು ಮತ್ತು 3 ಕೋಟಿ ರೂ. ನಗದು ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಬಾನ್ಸುರಿ ಅವರ ವಿರುದ್ಧ ಜೈನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

    ಇ.ಡಿಯು ತನ್ನ ಎಕ್ಸ್ ಖಾತೆಯಲ್ಲಿ, 2022ರ ಜೂ.6ರಂದು ಪಿಎಂಎಲ್‌ಎ ಅಡಿಯಲ್ಲಿ ಸತ್ಯೇಂದರ್ ಜೈನ್ ಮತ್ತು ಇತರರ ಮನೆಯಲ್ಲಿ ಶೋಧ ನಡೆಸಿದೆ. ಈ ವೇಳೆ ವಿವಿಧ ಶಂಕಾಸ್ಪದ ದಾಖಲೆಗಳು, ಡಿಜಿಟಲ್ ದಾಖಲೆಗಳು ಸೇರಿದಂತೆ 2.85 ಕೋಟಿ ರೂ. ನಗದು ಮತು ಒಟ್ಟು 1.80 ಕೆಜಿ ತೂಕದ 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬರೆದುಕೊಂಡಿತ್ತು.

    ಈ ಕುರಿತು ಜೈನ್ ಅವರು ಮಾತನಾಡಿ, ನಮ್ಮ ಮನೆಯಿಂದ ಇ.ಡಿಯು ಯಾವುದೇ ನಗದು ಅಥವಾ ಚಿನ್ನವನ್ನು ವಶಪಡಿಸಿಕೊಂಡಿಲ್ಲ. ಇ.ಡಿ ನಡೆಸಿರುವ ಪಂಚನಾಮೆಯಲ್ಲಿಯೂ ಈ ಅಂಶ ಸ್ಪಷ್ಟವಾಗಿ ದಾಖಲಾಗಿದೆ. ಆದಾಗ್ಯೂ ಬಾನ್ಸುರಿ ಸ್ವರಾಜ್ ಅವರು ನಮ್ಮ ಮನೆಯಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ ಎಂದು ಆಪಾದಿಸಿದ್ದರು.

    ಪ್ರಕರಣವನ್ನು ಪರಿಗಣಿಸಿದ ನ್ಯಾಯಾಧೀಶರು, ಇ.ಡಿ ಹಂಚಿಕೊಂಡಿರುವ ಟ್ವೀಟ್‌ನ್ನು ಗಮನಿಸಿದರೆ ನಿಜಕ್ಕೂ ಜೈನ್ ಅವರ ಮನೆಯಿಂದ ಹಣ ವಶಪಡಿಸಿಕೊಂಡಿದ್ದಾರೆ ಎನ್ನಿಸುತ್ತದೆ. ಹೀಗಾಗಿ ಬಾನ್ಸುರಿ ಸ್ವರಾಜ್ ವಿರುದ್ಧ ಜೈನ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದೇ ವೇಳೆ ನ್ಯಾಯಾಧೀಶರು, ಇಂತಹ ವಿಷಯದಲ್ಲಿ ಜಾಗೃತಿ ವಹಿಸಿ ಎಂದು ಇ.ಡಿಗೆ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

  • ಚಿರಂಜೀವಿ, ಖುಷ್ಬೂ, ತ್ರಿಷಾ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಜ್ಜಾದ ನಟ

    ಚಿರಂಜೀವಿ, ಖುಷ್ಬೂ, ತ್ರಿಷಾ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಜ್ಜಾದ ನಟ

    ಮಿಳಿನ ಖ್ಯಾತ ಖಳನಟ ಮನ್ಸೂರ್ ಅಲಿಖಾನ್ ಮತ್ತೆ ಕಲಾವಿದರ ವಿರುದ್ಧ ಸಿಡಿದೆದ್ದಿದ್ದಾರೆ. ದಕ್ಷಿಣದ ಹೆಸರಾಂತ ತಾರೆ ತ್ರಿಷಾ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ಮನ್ಸೂರ್ ಮೇಲೆ ಕಲಾವಿದರು ಮತ್ತು ತಂತ್ರಜ್ಞರು ಮುಗಿ ಬಿದ್ದಿದ್ದರು. ಅದರಲ್ಲೂ ಖ್ಯಾತ ನಟ ಚಿರಂಜೀವಿ (Chiranjeevi), ತ್ರಿಷಾ ಮತ್ತು ಖುಷ್ಬೂ (Khushboo) ಪ್ರತಿಕ್ರಿಯೆ ನೀಡಿದ್ದರು. ಮನ್ಸೂರ್ ವಿರುದ್ಧ ದೂರು ಕೂಡ ನೀಡಲಾಗಿತ್ತು. ಆ ನಂತರ ಮನ್ಸೂರ್ ಕ್ಷಮೆ ಕೂಡ ಕೇಳಿದ್ದರು.

    ಅಲ್ಲಿಗೆ ಪ್ರಕರಣ ಸುಖಾಂತ್ಯವಾಗಿದೆ ಎಂದು ನಂಬಲಾಗಿತ್ತು. ಆದರೆ, ಮನ್ಸೂರ್ ಅಲಿಖಾನ್ ಮತ್ತೆ ಆ ಮೂವರು ಕಲಾವಿದರ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ಮೇಲೆ ಸಲ್ಲದ ಆರೋಪ ಮಾಡಿರುವ ಚಿರಂಜೀವಿ, ತ್ರಿಷಾ ಮತ್ತು ಖುಷ್ಬೂ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Suit) ಹೂಡುವುದಾಗಿ ಅವರು ತಿಳಿಸಿದ್ದಾರೆ.

    ಛೀಮಾರಿ ಹಾಕಿತ್ತು ಕೋರ್ಟ್

    ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮನ್ಸೂರ್ ಅಲಿ ಖಾನ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌ‍ಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ.

    ಇತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿರಲಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದರು. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಗರಂ ಆಗಿತ್ತು. ಹಾಗಾಗಿ ಮನ್ಸೂರ್ ಅಲಿ ಖಾನ್ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದರು.

    ಮನ್ಸೂರ್ ಅಲಿ ಖಾನ್ (Mansoor Ali Khan) ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮಿಳು ಚಿತ್ರೋದ್ಯಮದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ (Trisha) ಅವರನ್ನು ರೇಪ್ (Rape) ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.

     

    ತ್ರಿಷಾ ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು. ಜೊತೆಗೆ ಲಿಯೋ ಸಿನಿಮಾದ ನಿರ್ದೇಶಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮತ್ತೆ ಆತನೊಂದಿಗೆ ನಾನು ನಟಿಸುವುದಿಲ್ಲ ಎಂದು ತ್ರಿಷಾ ಹೇಳಿಕೊಂಡಿದ್ದರು.

  • #Metoo ಅಭಿಯಾನಕ್ಕೆ ತಲೆದಂಡ – ಕೇಂದ್ರ ಸಚಿವ ಎಂಜೆ ಅಕ್ಬರ್ ರಾಜೀನಾಮೆ

    #Metoo ಅಭಿಯಾನಕ್ಕೆ ತಲೆದಂಡ – ಕೇಂದ್ರ ಸಚಿವ ಎಂಜೆ ಅಕ್ಬರ್ ರಾಜೀನಾಮೆ

    ನವದೆಹಲಿ: ಲೈಂಗಿಕ ಕಿರುಕುಳದ ಆರೋಪಕ್ಕೆ ಒಳಗಾಗಿದ್ದ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವ ಎಂ.ಜೆ.ಅಕ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ನ್ಯಾಯಾಲಯದ ಮೇಲೆ ನಾನು ನಂಬಿಕೆ ಇಟ್ಟಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ ನಾನು ಹೋರಾಟ ಮಾಡುತ್ತೇನೆ. ನನ್ನ ಕಾರ್ಯಕ್ಷಮತೆಯನ್ನು ನಂಬಿ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಸ್ಥಾನ ಹೊಣೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸುಷ್ಮ ಸ್ವರಾಜ್ ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಭಾನುವಾರ ನೈಜೀರಿಯಾದಿಂದ ವಾಪಾಸ್ಸಾದ ಅವರು ಅಕ್ಬರ್, ತಮ್ಮ ವಕೀಲ ಕರಣ್ ಜವಾಲ್ ರ ಮೂಲಕ ಪತ್ರಕರ್ತೆ ಪ್ರಿಯಾ ರಮಣಿ ಸೇರಿದಂತೆ ಒಟ್ಟು 11 ಜನರ ಮೇಲೆ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಘಟನೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನೇ ಹೇಳುತ್ತೇನೆ ಎಂದು ಹೇಳಿದ್ದರು. ಪತ್ರಕರ್ತೆ ಪ್ರಿಯಾ ರಮಣಿ ಮೇಲೆ ಐಪಿಸಿ ಸೆಕ್ಷನ್ 499(ಮಾನಹಾನಿ) ಹಾಗೂ 500 (ಮಾನಹಾನಿ ದಂಡನೆ)ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?:
    ಸಚಿವ ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು ಮೊದಲು ಆರೋಪ ಮಾಡಿದ್ದರು. ಎಂಜಿ ಅಕ್ಬರ್ ಕತೆಯೊಂದಿಗೆ ಇದನ್ನು ಆರಂಭಿಸುತ್ತೇನೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ, ಏಕೆಂದರೆ ಅವರೇನೂ ಮಾಡಿಲ್ಲ. ಈ ಬೇಟೆಗಾರನಿಂದ ಅನೇಕ ಮಹಿಳೆಯರಿಗೆ ಕೆಟ್ಟ ಅನುಭವ ಆಗಿರಬಹುದು. ಬಹುಶಃ ಅವರು ಅನುಭವ ಹಂಚಿಕೊಳ್ಳಬಹುದು ಎಂದು ಬರೆದು ಅಕ್ಟೋಬರ್ 8ರಂದು ಟ್ವೀಟ್ ಮಾಡಿದ್ದರು.

    ಅಷ್ಟೇ ಅಲ್ಲದೆ ತಮ್ಮ ಮೇಲಾದ ಲೈಂಗಿಕ ಕಿರುಕುಳ ಕುರಿತು 2017ರ ಅಕ್ಟೋಬರ್ ನಲ್ಲಿ ಲೇಖನವೊಂದನ್ನು ಪ್ರಿಯಾ ರಮಣಿ ಬರೆದಿದ್ದರು. ಪ್ರಿಯಾ ರಮಣಿ ಆರೋಪದ ಬೆನ್ನಲ್ಲೇ ಪ್ರೇರಣಾ ಸಿಂಗ್ ಬಿಂದ್ರಾ, ಘಜಾಲಾ ವಹಾಬ್, ಶುತಾಪಾ ಪಾಲ್, ಅಂಜು ಭಾರ್ತಿ, ಸುಪರ್ಣಾ ಶರ್ಮಾ, ಶುಮಾ ರಾಹಾ, ಮಾಲಿನಿ ಭೂಪ್ತಾ, ಕನಿಕಾ ಗೆಹ್ಲೋಟ್, ಕಾದಂಬರಿ ಎಂ.ವಾಡೆ, ಮಜಿಲಿ ಡೆ ಪ್ಯೂ ಕಾಂಪ್ ಮತ್ತು ರೂಥ್ ಡೇವಿಡ್ ರವರು ಸಹ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

    ಆರೋಪ ತೀವ್ರಗೊಳ್ಳುತ್ತಲೇ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅಕ್ಬರ್ ಮೇಲಿನ ಆರೋಪಗಳನ್ನು ಪರಿಶೀಲಿಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ವಿರುದ್ಧ ಮಾನನಷ್ಟ ಕೇಸ್ ದಾಖಲು

    ಸಿಎಂ ವಿರುದ್ಧ ಮಾನನಷ್ಟ ಕೇಸ್ ದಾಖಲು

    ಬೆಂಗಳೂರು: ಎನ್ ಆರ್ ರಮೇಶ್ ಒಬ್ಬ ಮನೆಹಾಳ ಎಂದು ಸಿಎಂ ನಿಂದಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಗರದ 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ  ಪ್ರಕರಣ ದಾಖಲಾಗಿದೆ.

    ಬೆಂಗಳೂರು ನಗರದ ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ಅವರು ಸಿಎಂ ವಿರುದ್ಧ ಮಾನನಷ್ಟ  ಕೇಸ್ ದಾಖಲು ಮಾಡಿದ್ದಾರೆ.

    ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮರೆತು, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನನ್ನನ್ನು ಒಬ್ಬ ಮನೆಹಾಳ ಎಂದು ಅವಾಚ್ಯವಾಗಿ ನಿಂದಿಸಿದ್ದರು. ಹೀಗಾಗಿ ಅಸಂವಿಧಾನಿಕ ಪದಗಳನ್ನು ಆಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಯ ಅನ್ವಯದಲ್ಲಿ ನಗರದ 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಎನ್.ಆರ್ ರಮೇಶ್ ಹೇಳಿದ್ದಾರೆ.