Tag: Deer skin

  • ಮನೆಯಲ್ಲೆಲ್ಲಾ ಕಾಡು ಪ್ರಾಣಿಗಳ ಚರ್ಮ – ತನಿಖೆಗೆ ಹೋದ ಪೊಲೀಸ್ರಿಗೆ ಶಾಕ್

    ಮನೆಯಲ್ಲೆಲ್ಲಾ ಕಾಡು ಪ್ರಾಣಿಗಳ ಚರ್ಮ – ತನಿಖೆಗೆ ಹೋದ ಪೊಲೀಸ್ರಿಗೆ ಶಾಕ್

    ಬೆಂಗಳೂರು: ಸಿಲಿಕಾನ್ ಸಿಟಿಯ ಜಾಲಹಳ್ಳಿ ಪೊಲೀಸರು ಕಾರ್ಯಚರಣೆ ನಡೆಸಿ ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಯಲ್ಲಿ ತೊಡಗಿದ್ದ ಓರ್ವ ಆರೋಪಿಯ ಬಂಧನ ಮಾಡಿದ್ದಾರೆ.

    ತಮಿಳುನಾಡು ಮೂಲದ ಪ್ರಭು ಬಂಧಿತ ಆರೋಪಿಯಾಗಿದ್ದು, ಈತ ಜಾಲಹಳ್ಳಿ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ 3 ಜಿಂಕೆ ಚರ್ಮ ವಶ ಪಡಿಸಿಕೊಂಡ ಪೊಲೀಸರು, ಮತ್ತೆ ಎಲ್ಲೆಲ್ಲಿ ಈ ರೀತಿಯ ಚರ್ಮವನ್ನು ಇಟ್ಟಿದ್ದೀಯ ತೋರಿಸು ನಡಿಯಪ್ಪ ಎಂದಿದ್ದಾರೆ. ಆಗ ಆತ ಪೊಲೀಸರನ್ನು ತಮಿಳುನಾಡಿನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದು, ಆತನ ಮೆನೆಗೆ ಹೋದ ಪೊಲೀಸರಿಗೆ ಶಾಕ್ ಆಗಿದೆ. ಯಾಕೆಂದರೆ ಆರೋಪಿಯ ಮನೆಯ ತುಂಬ ಪ್ರಾಣಿಗಳ ಚರ್ಮ ಮತ್ತು ತಲೆ ಬುರುಡೆಗಳನ್ನು ಶೇಖರಣೆ ಮಾಡಿ ಇಟ್ಟಿದ್ದು ಪತ್ತೆಯಾಗಿದೆ.

    ಆಗ ಆರೋಪಿ ಮನೆಯಲ್ಲಿ ಅಡಗಿಸಿಟ್ಟಿದ್ದ 3 ಜೊತೆ ಜಿಂಕೆ ಚರ್ಮ, ತಲೆ ಬುರುಡೆ ಹಾಗೂ ಮೂಳೆ ಪತ್ತೆ ಮಾಡಿ ಅವುಗಳೆಲ್ಲವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಜಾಲಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಬೆಂಗಳೂರು: ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

    ಬೆಂಗಳೂರು: ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

    ಬೆಂಗಳೂರು: ಜಿಂಕೆ ಚರ್ಮವನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ವಿಶೇಷ ಸಿಬ್ಬಂದಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

    ನಾರಾಯಣಸ್ವಾಮಿ (42) ಮತ್ತು ನಾಗಮಾದ(27) ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಜಿಂಕೆ ಚರ್ಮ ಮಾರಾಟ ಮಾಡುವಾಗ ಅರಣ್ಯ ಇಲಾಖೆಯ ವಿಶೇಷ ಸಿಬ್ಬಂದಿ ಕೈಗೆ ಸಿಕ್ಕಿದ್ದಾರೆ.

    ಬಂಧಿತರ ಬಳಿಯಿದ್ದ ಜಿಂಕೆ ಚರ್ಮವನ್ನು ಪೊಲೀಸರು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.