Tag: deer hunting

  • ಚಿಂಕೆ ಭೇಟೆಯಾಡಿದ್ದವನ ಮೇಲೆ ಶೂಟೌಟ್

    ಚಿಂಕೆ ಭೇಟೆಯಾಡಿದ್ದವನ ಮೇಲೆ ಶೂಟೌಟ್

    ಮಂಡ್ಯ: ಜಿಂಕೆ ಭೇಟೆಯಾಡಿದ್ದ ಕಾಡುಗಳ್ಳನನ್ನು ವನಪಾಲಕರು ಶೂಟೌಟ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ನಾಲ್ವರು ಕಾಡುಗಳ್ಳರು ಬಂದೂಕಿನಿಂದ 2 ಜಿಂಕೆಗಳನ್ನು ಕೊಂದು ಹೆಗಲ ಮೇಲೆ ಹೊತ್ತಿಕೊಂಡು ಬರುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ವನಪಾಲಕರಿಗೆ ಈ ಕಳ್ಳರ ಗ್ಯಾಂಗ್ ಸಿಕ್ಕಿ ಬಿದ್ದಿದೆ. ತಕ್ಷಣ ಎಚ್ಚೆತ್ತ ವನಪಾಲಕರು ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    ಈ ಪರಿಣಾಮ ಕಾಡುಗಳ್ಳರು ಇವರಿಂದ ತಪ್ಪಿಸಿಕೊಳ್ಳಲು ಮುಂದಾದಗ ವೆಂಕಟೇಶ್ ಎನ್ನುವವರ ಮೇಲೆ ಫೈರಿಂಗ್ ಮಾಡಲಾಗಿದೆ. ಗುಂಡೇಟು ಬಿದ್ದ ವೆಂಕಟೇಶ್ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ:ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ

    ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಕಾಡುಗಳ್ಳರು ತಪ್ಪಿಸಿಕೊಂಡಿದ್ದಾರೆ. ಮಳವಳ್ಳಿಯ ಹಲಗೂರು  ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

  • ಜಿಂಕೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಸಿಕ್ಕಿ ಬಿದ್ರು

    ಜಿಂಕೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಸಿಕ್ಕಿ ಬಿದ್ರು

    ಕಾರವಾರ: ಜಿಂಕೆಯನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದ ಐವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಯಲ್ಲಾಪುರದ ಮಹಮ್ಮದ್ ಹನೀಫ್ ಶೇಖ್, ಮೌಸಿಮ್ ಅಬ್ದುಲ್ ರಜಾಕ್ ಶೇಖ್, ಮಂಚಿಕೇರಿ ಗ್ರಾಮದ ಇಸ್ಮಾಯಿಲ್ ಶೇಖ್, ಅಬ್ದುಲ್ ಖಾದರ್ ಶೇಖ್ ಹಾಗೂ ಬೊಮ್ಮನಹಳ್ಳಿಯ ಮಹಮ್ಮದ್ ಹುಸೇನ್ ಶೇಖ್ ಬಂಧಿತ ಆರೋಪಿಗಳು.

    ಬಂಧಿತರಿಂದ ಜಿಂಕೆ ಮಾಂಸ ಹಾಗೂ ಬೇಟೆಗೆ ಬಳಸಿದ ದ್ವಿಚಕ್ರ ವಾಹನ ಸೇರಿದಂತೆ ಕೃತ್ಯಕ್ಕೆ ಬಳಸಿದ ಸಲಕರಣೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಆರೋಪಿಗಳು ಶನಿವಾರ ತಡರಾತ್ರಿ ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ಆದರೆ ಜಿಂಕೆಗಳನ್ನು ನೋಡಿ, ಆರೋಪಿಗಳು ಮೀನು ಹಿಡಿಯುವುದನ್ನು ಬಿಟ್ಟು ಜಿಂಕೆ ಬೇಟೆಯಾಗಿದ್ದಾರೆ. ಜಿಂಕೆಯನ್ನು ಹೊತ್ತು ಮಂಚಿಕೇರಿಗೆ ಬಂದ ಐವರು, ಭಾನುವಾರ ಬೆಳಿಗ್ಗೆ ಮಾಂಸವನ್ನು ಹಂಚಿಕೆ ಮಾಡಿಕೊಳ್ಳುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]