Tag: Deer

  • ರಸ್ತೆ ದಾಟುತ್ತಿದ್ದ ಜಿಂಕೆಗೆ ಕಾರು ಡಿಕ್ಕಿ – ಜಿಂಕೆ ಸಾವು, ಆರೋಪಿ ವಶಕ್ಕೆ

    ರಸ್ತೆ ದಾಟುತ್ತಿದ್ದ ಜಿಂಕೆಗೆ ಕಾರು ಡಿಕ್ಕಿ – ಜಿಂಕೆ ಸಾವು, ಆರೋಪಿ ವಶಕ್ಕೆ

    ಚಾಮರಾಜನಗರ: ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತಿದ್ದ ಜಿಂಕೆಯೊಂದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೇರಳ ರಾಷ್ಟ್ರೀಯ ಹೆದ್ದಾರಿ-766ರ ಬಂಡೀಪುರ ಅಭಯಾರಣ್ಯ ಮದ್ದೂರು ವಲಯದ ಕಗ್ಗಳದಹುಂಡಿ ಸಮೀಪದಲ್ಲಿ ನಡೆದಿದ್ದು, ಕಾರು ಚಾಲಕನನ್ನು ಬಂಧಿಸಲಾಗಿದೆ.

    ಕೇರಳದ ವಯನಾಡಿನ ಝಾಕೀರ್ (56) ಬಂಧಿತ ಆರೋಪಿ. ಈತ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಸ್ವೀಪ್ (ಕೆ.ಎಲ್.72-313) ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಕಗ್ಗಳದಹುಂಡಿ ಸಮೀಪದ ರಸ್ತೆ ದಾಟುತ್ತಿದ್ದ ಜಿಂಕೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಜಿಂಕೆ ರಸ್ತೆಯಲ್ಲೆ ಪ್ರಾಣ ಕಳೆದುಕೊಂಡಿದೆ. ನಂತರ ಅರಣ್ಯಾಧಿಕಾರಿಗಳು ದೌಡಾಯಿಸಿ ಚಾಲಕನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೇಲಾಧಿಕಾರಿಗಳ ಸೂಚನೆಯಂತೆ ಜಿಂಕೆ ಕಳೆಬರವನ್ನು ಸುಡಲಾಗುತ್ತದೆ ಎಂದು RFO ಕೆ.ಪಿ.ಸತೀಶ್ ಕುಮಾರ್ ಮಾಹಿತಿ ನೀಡಿದರು.

    ಸ್ಥಳಕ್ಕೆ ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಮದ್ದೂರು ವಲಯ ಉಪ ಅರಣ್ಯಾಧಿಕಾರಿ ಗೌಸ್, ಶಿವಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

  • ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತಕ್ಕೆ ಬಲಿ

    ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತಕ್ಕೆ ಬಲಿ

    ಬೆಂಗಳೂರು: ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ (Deer) ಅಪಘಾತವಾಗಿ ಸಾವನ್ನಪ್ಪಿದ ಘಟನೆ ಕೋರಮಂಗಲದ (Koramangala) 100 ಫೀಟ್ ರಸ್ತೆಯಲ್ಲಿ ನಡೆದಿದೆ.

    ಮುಂಜಾನೆ 5 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ನಗರದೊಳಗೆ ಬಂದಿದ್ದ ಜಿಂಕೆ ಅಪಘಾತವಾಗಿ (Accident) ಮೃತಪಟ್ಟಿದೆ. ಅಪರಿಚಿತ ವಾಹನಕ್ಕೆ ಸಿಲುಕಿ ಗಂಡು ಜಿಂಕೆ ಸಾವನ್ನಪ್ಪಿದ್ದು, ಆರ್ಮಿ ಫೋರ್ಸ್ ರಸ್ತೆ ಬಳಿ ಘಟನೆ ನಡೆದಿದೆ. ಇದನ್ನೂ ಓದಿ: ಸಾರ್ವಜನಿಕರೇ ಬೀ ಕೇರ್‌ಫುಲ್ – ರಾಜ್ಯದಲ್ಲಿ ಇದ್ದಾರೆ ಬರೋಬ್ಬರಿ 1,436 ನಕಲಿ ವೈದ್ಯರು

    ವಿಷಯ ತಿಳಿದ ತಕ್ಷಣ ಅಪಘಾತ ನಡೆದ ಜಾಗಕ್ಕೆ ಗ್ರೀನ್ ಆರ್ಮಿ ಫೋರ್ಸ್ ಧಾವಿಸಿ ಜಿಂಕೆಗೆ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಜಿಂಕೆ ಕೊನೆಯುಸಿರೆಳೆದಿತ್ತು. ಸದ್ಯ ಜಿಂಕೆಯ ಮೃತದೇಹವನ್ನು ಜಾಗೃತದಳ ಅರಣ್ಯ ಇಲಾಖೆಗೆ ಶಿಫ್ಟ್ ಮಾಡಿದೆ. ಇದನ್ನೂ ಓದಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಲಲಿತ್ ಝಾ 7 ದಿನ ಪೊಲೀಸ್ ಕಸ್ಟಡಿಗೆ

  • ಜಿಂಕೆ ಬೇಟೆಯಾಡಿದ ಇಬ್ಬರು ಅರೆಸ್ಟ್- 35 ಕೆ.ಜಿ ಮಾಂಸ ವಶ

    ಜಿಂಕೆ ಬೇಟೆಯಾಡಿದ ಇಬ್ಬರು ಅರೆಸ್ಟ್- 35 ಕೆ.ಜಿ ಮಾಂಸ ವಶ

    ಚಾಮರಾಜನಗರ: ಜಿಂಕೆ (Deer) ಬೇಟೆಯಾಡಿದ (Hunt) ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ (Kollegala) ವನ್ಯ ಜೀವಿ ಅರಣ್ಯ ವಲಯದಲ್ಲಿ ಘಟನೆ ನಡೆದಿದ್ದು, ತಾಲೂಕಿನ ಕುಣಗಳ್ಳಿ ಗ್ರಾಮದ ಮೂರ್ತಿ ಹಾಗೂ ರಾಮು ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಜಿಂಕೆಯನ್ನು ಬೇಟೆಯಾಡಿ ಕೊಂದು ಅದರ ಮಾಂಸ ಕತ್ತರಿಸುತ್ತಿದ್ದ ಸಂದರ್ಭ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇವರೊಂದಿಗಿದ್ದ ಇನ್ನೂ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸಬ್‍ಇನ್‍ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು – ಪತಿಯ ವಿರುದ್ಧ ಕೊಲೆ ಆರೋಪ

    ಕೊಳ್ಳೇಗಾಲದ ರಾಯರಹಳ್ಳ ಅರಣ್ಯ ಪ್ರದೇಶದಲ್ಲಿ ನಾಡ ಬಂದೂಕು ಬಳಸಿ ಐವರು ಆರೋಪಿಗಳು ಜಿಂಕೆ ಬೇಟೆಯಾಡುತ್ತಿದ್ದ ಸಂದರ್ಭ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೇ ಬಂಧಿತರಿಂದ ನಾಲ್ಕು ಚಾಕು, ಎರಡು ಮೊಬೈಲ್, ಮೂರು ಬೈಕ್ ಹಾಗೂ 35 ಕೆಜಿ ಜಿಂಕೆ ಮಾಂಸ ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಮೂವರು ಆರೋಪಿಗಳ ಬಂಧನಕ್ಕೆ ಅರಣ್ಯಾಧಿಕಾರಿಗಳು (Forest Officer) ಬಲೆ ಬೀಸಿದ್ದಾರೆ. ಇದನ್ನೂ ಓದಿ: ಇದು ರಾಕಿಭಾಯ್‌ ಇಲ್ಲದ ರಿಯಲ್‌ KGF – ಸಮುದ್ರದಲ್ಲಿ ಸಿಕ್ತು 20 ಕೋಟಿ ಮೌಲ್ಯದ ಚಿನ್ನ..!

  • ಜಿಂಕೆ ಮಾಂಸ ಮಾರಾಟ ಆರೋಪಿ ವಿಚಾರಣೆ ವೇಳೆ ಸಾವು

    ಜಿಂಕೆ ಮಾಂಸ ಮಾರಾಟ ಆರೋಪಿ ವಿಚಾರಣೆ ವೇಳೆ ಸಾವು

    ಮೈಸೂರು: ಅರಣ್ಯ ಇಲಾಖೆ (Forest Department) ವಶದಲ್ಲಿದ್ದ ಜಿಂಕೆ‌ (Deer) ಮಾಂಸ‌ ಮಾರಾಟ ಆರೋಪಿ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಮೈಸೂರು (Mysuru) ಜಿಲ್ಲೆಯ ಎಚ್.ಡಿ. ಕೋಟೆಯಲ್ಲಿ ನಡೆದಿದೆ‌.

    ತಾಲೂಕಿನ ಹೊಸಹಳ್ಳಿ ಹಾಡಿಯ ಕರಿಯಪ್ಪ ಮೃತ ದುರ್ದೈವಿ. ಮೂರು ದಿನಗಳ ಹಿಂದೆ ಜಿಂಕೆ‌ ಮಾಂಸ ಮಾರಾಟ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು. ಬಸಪುರದ ಪ್ರಸಾದ್, ಮುನಿಯಪ್ಪನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಮಹಾಕುಂಭ ಮೇಳ

    POLICE JEEP

    ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಕರಿಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ಮಾಡುವ ವೇಳೆ‌ ಕರಿಯಪ್ಪ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆದರೆ, ಇದು ಕೊಲೆ ಎಂದು ಆರೋಪಿ ಕರಿಯಪ್ಪ ಪೋಷಕರು ಆರೋಪಿದ್ದಾರೆ. ವಿಚಾರಣೆ ನೆಪದಲ್ಲಿ ಗುಂಡ್ರೆ ಅರಣ್ಯ ವಲಯದ ಅರಣ್ಯ ಸಿಬ್ಬಂದಿ ಕರಿಯಪ್ಪನನ್ನು ಹೊಡೆದು ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: 2 ಗಂಟೆ ಆತ್ಮಹತ್ಯೆ ಹೈಡ್ರಾಮಾ – ಸಿನಿಮಾ ರೀತಿಯಲ್ಲಿ ದಂಪತಿಯ ರಕ್ಷಣೆ

    Live Tv
    [brid partner=56869869 player=32851 video=960834 autoplay=true]

  • ಜಿಂಕೆ ಮೇಲೆ ಕೋತಿ ಸವಾರಿ- ಐಐಟಿ ಮದ್ರಾಸ್‌ನಲ್ಲಿ ಅಪರೂಪದ ದೃಶ್ಯ ಸೆರೆ

    ಜಿಂಕೆ ಮೇಲೆ ಕೋತಿ ಸವಾರಿ- ಐಐಟಿ ಮದ್ರಾಸ್‌ನಲ್ಲಿ ಅಪರೂಪದ ದೃಶ್ಯ ಸೆರೆ

    ಚೆನ್ನೈ: ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ‌ (Social Media) ಕಂಡು ಬರುವ ಮುಗ್ದ ಪ್ರಾಣಿಗಳ ವೀಡಿಯೋಗಳು (Animal Video) ಜನರನ್ನು ನಕ್ಕು ನಗಿಸದೇ ಇರಲಾರದು. ಪ್ರಾಣಿಗಳ ಆಟಾಟೋಪಗಳನ್ನು ನೋಡುವುದು ಜನರ ಖಿನ್ನತೆಗೆ ರಾಮಬಾಣವೂ ಹೌದು. ಇಂತಹುದೇ ಒಂದು ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಎಂದಾದರೂ ನೀವು ಜಿಂಕೆಯ (Deer) ಮೇಲೆ ಕೋತಿ (Monkey) ಸವಾರಿ ಮಾಡಿರುವುದನ್ನು ನೋಡಿದ್ದೀರಾ? ಇಲ್ಲ ಎಂದಾದರೆ ಇಲ್ಲೊಂದು ಅಂತಹುದೇ ವೀಡಿಯೋ ವೈರಲ್ ಆಗುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (IIT Madras) ಕ್ಯಾಂಪಸ್‌ನಲ್ಲಿ ಸೆರೆಹಿಡಿಯಲಾದ ಈ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ.

    ವೀಡಿಯೋದಲ್ಲಿ ಜಿಂಕೆಯೊಂದು ಕ್ಯಾಂಪಸ್‌ನ ಕಟ್ಟಡಗಳ ಸಮೀಪ ಹುಲ್ಲನ್ನು ಮೇಯಲು ಅಡ್ಡಾಡುತ್ತಿದೆ. ಅದರ ಮೇಲೆ ಆರಾಮವಾಗಿ ಕುಳಿತ ಕೋತಿಯೊಂದು ಆ ಗಳಿಗೆಯನ್ನು ಆನಂದಿಸುತ್ತಿದೆ. ತನ್ನ ಮೇಲೆ ಮಂಗ ಸವಾರಿ ಮಾಡುತ್ತಿದ್ದರೂ ಜಿಂಕೆ ಕಿಂಚಿತ್ತೂ ವಿಚಲಿತವಾಗದೇ ಹಾಯಾಗಿ ಓಡಾಡಿಕೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    ಇದೀಗ ವೀಡಿಯೋ ಭಾರೀ ವೈರಲ್ ಆಗುತ್ತಿರುವುದು ಮಾತ್ರವಲ್ಲದೇ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಐಐಟಿ ಮದ್ರಾಸ್‌ನಲ್ಲಿ ಮಂಗಗಳು ಹೀಗಿರುತ್ತವೆ ಎಂದು ಕೆಲವರು ಹೇಳಿದರೆ, ಇನ್ನೊಬ್ಬರು, ಮಂಗಗಳು ಮನುಷ್ಯರಂತೆ ಪ್ರಾಣಿಗಳ ಮೇಲೆ ಸವಾರಿ ಮಾಡಲು ಹೇಗೆ ಸಾಧ್ಯ ಎಂದು ಆಶ್ಚರ್ಯಪಟ್ಟಿದ್ದಾರೆ. ಇನ್ನೊಬ್ಬರು ಅದು ಐಐಟಿ ಕ್ಯಾಂಪಸ್‌ನ ಮಂಗ, ಹೀಗಾಗಿ ಇಷ್ಟೊಂದು ಸ್ಮಾರ್ಟ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

    ಐಐಟಿ ಮದ್ರಾಸ್ ಕ್ಯಾಂಪಸ್ ಅನ್ನು ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲಾಗಿದ್ದು, ಅದರ ಹೆಚ್ಚಿನ ಭಾಗ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಹೀಗಾಗಿ ಅಲ್ಲಿನ ಕ್ಯಾಂಪಸ್‌ನಲ್ಲಿ ಜಿಂಕೆ, ಕೋತಿ ಸೇರಿದಂತೆ ಅನೇಕ ಜಾತಿಯ ಪ್ರಾಣಿಗಳು ಕಂಡುಬರುವುದು ಸರ್ವೇಸಾಮಾನ್ಯವಾಗಿದೆ. ಇದನ್ನೂ ಓದಿ: ಅಪ್ಪು ಗುಣಗಳನ್ನ ಅಳವಡಿಸಿಕೊಳ್ಳಬೇಕು ಎಂದು ಫ್ಯಾನ್ಸ್‌ಗೆ ಉಪ್ಪಿ ಸಂದೇಶ

    Live Tv
    [brid partner=56869869 player=32851 video=960834 autoplay=true]

  • ನಾಯಿಗಳಿಂದ ತಪ್ಪಿಸಿಕೊಂಡು ಬಂದು ಮನೆಯ ಹಾಲ್‍ನಲ್ಲಿ ಕೂತ ಜಿಂಕೆ

    ನಾಯಿಗಳಿಂದ ತಪ್ಪಿಸಿಕೊಂಡು ಬಂದು ಮನೆಯ ಹಾಲ್‍ನಲ್ಲಿ ಕೂತ ಜಿಂಕೆ

    ಚಿಕ್ಕಮಗಳೂರು: ಸೀಳು ನಾಯಿ ಹಾಗೂ ಬೀದಿನಾಯಿಗಳ ಹಾವಳಿಗೆ ಬೆದರಿದ ಜಿಂಕೆಯೊಂದು ಮನೆಯೊಳಗೆ ಬಂದು ಅವಿತು ಕುಳಿತುಕೊಂಡ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿ ನಡೆದಿದೆ.

    ಕಣಿವೆ ಗ್ರಾಮ ಕಾಡಂಚಿನ ಗ್ರಾಮ. ಮೇವು ತಿನ್ನುತ್ತಾ ಕಾಡಂಚಿಗೆ ಬಂದ ಜಿಂಕೆ ನಾಡಿಗೂ ಕಾಲಿಟ್ಟಿತ್ತು. ಜಿಂಕೆಯನ್ನು ಕಂಡ ಬೀದಿ ನಾಯಿಗಳು ಹಾಗೂ ಸೀಳು ನಾಯಿಗಳು ಜಿಂಕೆಯನ್ನು ಬೇಟೆಯಾಡಲು ಮುಂದಾದವು. ಆಗ ಅವುಗಳಿಂದ ತಪ್ಪಿಸಿಕೊಂಡ ಜಿಂಕೆ ಕಣಿವೆ ಗ್ರಾಮದ ಪದ್ಮನಾಭ ಎಂಬುವರ ಮನೆಯೊಳಗೆ ಓಡಿ ಬಂದು ಅವಿತು ಕೂತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮನೆಯವರಂತೆ ನಡುಮನೆಯಲ್ಲಿ ರಾಜಾರೋಷವಾಗಿ ನನ್ನದೇ ಮನೆ ಎಂಬಂತೆ ಆರಾಮಾಗಿ ಕೂತಿದೆ. ಇದನ್ನೂ ಓದಿ: ಮುಂದಿನ 30-40 ವರ್ಷಗಳೂ ಬಿಜೆಪಿ ಯುಗವೇ; ಭಾರತವಾಗಲಿದೆ ವಿಶ್ವಗುರು – ಅಮಿತ್ ಶಾ

    ಜಿಂಕೆಯನ್ನು ಕಂಡ ಮನೆಯವರು ಕೂಡ ಅದನ್ನು ಓಡಿಸದೆ ಸುಸ್ತಾಗಿದ್ದ ಜಿಂಕೆಗೆ ನೀರು ಕುಡಿಸಿ ಸಂತೈಸಿದ್ದಾರೆ. ಬಳಿಕ ಮನೆಯವರು ಹಾಗೂ ಮಕ್ಕಳು ಜಿಂಕೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಮನೆಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದಾಗ ಜಿಂಕೆಯ ಕಾಲಿಗೆ ಗಾಯವಾಗಿದ್ದು ಕಂಡು ಬಂದಿದ್ದು, ಜಿಂಕೆ ನಡೆಯಲಾರದ ಸ್ಥಿತಿಯಲ್ಲಿತ್ತು. ಬಳಿಕ ಅಧಿಕಾರಿಗಳು ಜಿಂಕೆಯನ್ನು ಜೀಪ್‍ನಲ್ಲಿ ತೆಗೆದುಕೊಂಡು ಹೋಗಿ ಹಾರೈಕೆ ಮಾಡಿದ್ದಾರೆ. ಇದನ್ನೂ ಓದಿ: ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ – ಸಿದ್ದರಾಮೋತ್ಸವದ ವಿರುದ್ಧ ಸಿಡಿಮಿಡಿಗೊಂಡ ಡಿಕೆಶಿ

    Live Tv

  • ಮೊದಲ ಬಾರಿಗೆ ಜಿಂಕೆಗಳಲ್ಲಿ ಓಮಿಕ್ರಾನ್ ಪತ್ತೆ

    ಮೊದಲ ಬಾರಿಗೆ ಜಿಂಕೆಗಳಲ್ಲಿ ಓಮಿಕ್ರಾನ್ ಪತ್ತೆ

    ನ್ಯೂಯಾರ್ಕ್: ಯುಎಸ್‍ನಲ್ಲಿ ವಾಸಿಸುವ ಕೆಲವು ಬಿಳಿ ಬಾಲದ ಜಿಂಕೆಗಳಲ್ಲಿ ಕೋವಿಡ್-19ನ ರೂಪಾಂತರಿ ವೈರಸ್ ಓಮಿಕ್ರಾನ್ ಪತ್ತೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.

    ಪ್ರಿಪ್ರಿಂಟ್ ರೆಪೊಸಿಟರಿ ಬಯೋಆರ್‍ಕ್ಸಿವ್‍ನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ಪೀರ್-ರಿವ್ಯೂಡ್ ಅಧ್ಯಯನವು ಓಮಿಕ್ರಾನ್-ಸೋಂಕಿತ ಜಿಂಕೆಗಳಲ್ಲಿ ಸಾರ್ಸ್-ಸಿಒವಿ-2 ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಕಂಡುಹಿಡಿದಿದೆ. ಮನುಷ್ಯನಂತೆಯೇ ಈ ಪ್ರಾಣಿಗಳು ಸಹ ವೈರಸ್‍ನೊಂದಿಗೆ ಮರುಸೋಂಕಿಗೆ ಒಳಗಾಗಬಹುದು ಎಂದು ಹೇಳಿದೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ಕೆಲವು ಪ್ರಾಣಿಗಳಿಗೆ ಓಮಿಕ್ರಾನ್ ಸೋಂಕು ತಗಲಹುದು ಎಂದು ನಮ್ಮ ಸಂಶೋಧನೆಯ ಮುಖಾಂತರ ತಿಳಿದು ಬಂದಿದೆ ಎಂದು ಪೆನ್ ಸ್ಟೇಟ್‍ನ ಸಹಾಯಕ ಸಂಶೋಧನಾ ಪ್ರಾಧ್ಯಾಪಕ ಮತ್ತು ಪತ್ರಿಕೆಯ ಪ್ರಮುಖ ಲೇಖಕ ಕರ್ಟ್ ವಾಂಡೆಗ್ರಿಫ್ಟ್ ಹೇಳಿದರು. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

    ಕಳೆದ ವರ್ಷ ಅಮೆರಿಕದ ಅಯೋವಾದಲ್ಲಿ ಬಿಳಿ ಬಣ್ಣದ ಜಿಂಕೆಗಳನ್ನು ಕೋವಿಡ್-19 ಪರಿಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶೇ.80 ರಷ್ಟು ಜಿಂಕೆಗಳಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ.

    ವೈರಸ್ ಈ ಪ್ರಾಣಿಗಳಿಂದ ಹರಡುತ್ತದೆ ಮತ್ತು ಇದರಿಂದಾಗಿ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳಿಗೆ ಸೋಂಕು ತಗಲುವ ಸಾಧ್ಯತೆಯದೆ. ಈ ಹೊಸ ರೂಪಾಂತರಿ ವೈರಸ್‍ಗೆ ಈಗಿನ ಲಸಿಕೆಗಳು ಸಾಕಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಸಂಶೋಧಕರು 2021ರ ಡಿಸೆಂಬರ್ 12 ಮತ್ತು 2022ರ ಜನವರಿ 31ವರೆಗೆ 131 ಜಿಂಕೆಗಳಿಂದ ರಕ್ತದ ಮಾದರಿಯನ್ನು ಸಂಗ್ರಹಿಸಿ ಈ ಸಂಶೋಧನೆ ನಡೆಸಿದ್ದಾರೆ.

  • ಎತ್ತರ ಜಿಗಿತದಲ್ಲಿ ಜಿಂಕೆಗೆ ಚಿನ್ನದ ಪದಕ – ವೀಡಿಯೋ ಫುಲ್ ವೈರಲ್

    ಎತ್ತರ ಜಿಗಿತದಲ್ಲಿ ಜಿಂಕೆಗೆ ಚಿನ್ನದ ಪದಕ – ವೀಡಿಯೋ ಫುಲ್ ವೈರಲ್

    ನವದೆಹಲಿ: ಜಿಂಕೆಯೊಂದು ಅತಿ ಎತ್ತರವಾಗಿ ಜಿಗಿದಿದ್ದು, ಅದನ್ನು ನೋಡಲು ಆಕಾಶದಲ್ಲಿ ಹಾರಾಡಿದ ರೀತಿಯಾಗಿಯೇ ಕಾಣುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾಮಾನ್ಯವಾಗಿ ಕಾಡು ಪ್ರಾಣಿಗಳನ್ನು ನೋಡಿದ್ದರೆ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನತೆ ಕಾಣುತ್ತದೆ. ಆದರೆ ಇಲ್ಲೊಂದು ಜಿಂಕೆಯೂ  ಅಂದಾಜು 7 ಅಡಿ ಜಿಗಿದ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆ ವೀಡಿಯೋವನ್ನು ನೋಡಿದವರಿಗೆ ಜಿಂಕೆಯು ಆಕಾಶದಲ್ಲಿ ಹಾರಾಡುವ ರೀತಿ ಕಾಣುತ್ತಿದ್ದು, ವೀಡಿಯೋಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಈ ವೀಡಿಯೋವನ್ನು ವೈಲ್ಡ್‍ಲೆನ್ಸ್ ಇಕೋ ಫೌಂಡೇಶನ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ಪ್ರಶಂಸೆಗೆ ಕಾರಣವಾಗಿದೆ. ಇದುವರೆಗೆ ವೀಡಿಯೋವನ್ನು 79 ಸಾವಿರಕ್ಕೂ ಅಧಿಕ ಜನರು ನೋಡಿದ್ದು, 5,000ಕ್ಕೂ ಅಧಿಕ ಲೈಕ್ ಹಾಗೂ 745 ಮಂದಿ ರೀಟ್ವೀಟ್ ಆಗಿದೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    ವೀಡಿಯೋದಲ್ಲಿ ಏನಿದೆ?: ಜಿಂಕೆಯೊಂದು ಕೆರೆ ಇರುವ ಪ್ರದೇಶದಿಂದ ರಸ್ತೆಯನ್ನು ದಾಟಲು ಬಂದಿದೆ. ಉತ್ಸಾಹದಿಂದ ಹಾಗೂ ಸ್ವತಂತ್ರವಾಗಿ ಜಿಂಕೆಯೂ ಜಿಗಿದಿದೆ. ಇದು ಸಾಮಾನ್ಯ ಮನುಷ್ಯ ಇರುವ ಎತ್ತರದಷ್ಟು ಹಾಗೂ ಉದ್ದವಾಗಿ ಜಿಗಿದಿದೆ. ಉತ್ಸಾಹದಿಂದ ಜಿಗಿದ ಜಿಂಕೆಯು ನೋಡುಗರಿಗೆ ಇದು ಆಕಾಶದಲ್ಲಿ ಹಾರುಡುತ್ತಿದೆ ಎನ್ನುವಂತೆ ತೋರುತ್ತಿದೆ. ಇದನ್ನೂ ಓದಿ: ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ

    ಈ ವೀಡಿಯೋವನ್ನು ನೋಡಿದ ನೆಟ್ಟಿಗರು ದಂಗಾಗಿದ್ದಾರೆ. ಎತ್ತರ ಜಿಗಿತ ಹಾಗೂ ಉದ್ದ ಜಿಗಿತದಲ್ಲಿ ಜಿಂಕೆಗೆ ಚಿನ್ನದ ಪದಕವನ್ನು ನೀಡಬಹುದು ಎಂದು ಒಬ್ಬರೂ ತಿಳಿಸಿದರೇ ಮತ್ತೊಬ್ಬರು ವಾವ್, ನಾನು ಎಂದಿಗೂ ಇಷ್ಟು ಎತ್ತರವಾಗಿ ಜಿಗಿದಿದ್ದನ್ನು ನೋಡಿರಲಿಲ್ಲ. ಇದು ಹಾರುತ್ತಿರುವಂತೆ ಕಾಣುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನೋಡಲು ಯಾವುದೋ ಆಕ್ಷನ್ ಸಿನಿಮಾ ಎಂಬಂತೆ ಭಾಸವಾಗುತ್ತಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.

  • ಕಾಫಿ ತೋಟದಲ್ಲಿ ಕಡವೆ ಬೇಟೆ – ಆರೋಪಿಗಳು ಪರಾರಿ

    ಕಾಫಿ ತೋಟದಲ್ಲಿ ಕಡವೆ ಬೇಟೆ – ಆರೋಪಿಗಳು ಪರಾರಿ

    ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಡವೆ ಬೇಟೆಯಾಡಿ ಪಿಕಪ್ ವಾಹನಕ್ಕೆ ತಂಬುತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡುವ ಮಾಹಿತಿ ಸಿಕ್ಕಿ ಆರೋಪಿಗಳು ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹೊಸೂರು ಸಮೀಪದ ನಡೆದಿದೆ.

    ಈ ಸಂಬಂಧ ಪ್ರಶಾಂತ್, ದಿನೇಶ್, ಪೂರ್ಣೇಶ್, ಸುಗಂದ್ ಹಾಗೂ ಸುರೇಶ್ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ನುಗ್ಗಿ ಗ್ರಾಪ ಪಂಚಾಯತ್ ವ್ಯಾಪ್ತಿಯ ಹೊಸೂರು ಎಂಬ ಗ್ರಾಮದ ಕಾಫಿ ತೋಟವೊಂದರಲ್ಲಿ ಆರೋಪಿಗಳು ಅಕ್ರಮವಾಗಿ ಕಡವೆ ಬೇಟೆಯಾಡಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ, ಈ ವೇಳೆ ಅರಣ್ಯ ಅಧಿಕಾರಿಗಳು ಬರುವ ಮಾಹಿತಿ ಸಿಕ್ಕ ಹಿನ್ನೆಲೆ ಬೇಟೆಗಾರರು ಕಡವೆಯನ್ನು ಅಲ್ಲೇ ಬಿಟ್ಟು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಶಾಲೆಗೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

    ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. ಬಳಿಕ ಅರಣ್ಯ ಅಧಿಕಾರಿಗಳು ಕಾದು ಕುಳಿತಿದ್ದರು. ಸ್ವಲ್ಪ ಹೊತ್ತಿನ ನಂತರ ಆರೋಪಿಗಳು ಮಾಂಸವನ್ನು ಪಿಕಪ್ ವಾಹನಕ್ಕೆ ತುಂಬುತ್ತಿದ್ದಾಗ ದಾಳಿ ಮಾಡಿದ್ದಾರೆ. ಈ ವೇಳೆ ಪಿಕಪ್ ವಾಹನವನ್ನು ಅಲ್ಲೇ ಬಿಟ್ಟು ಆರೋಪಿಗಳು ನಾಪತ್ತೆಯಾಗಿದ್ದಾರೆ. ಅಧಿಕಾರಿಗಳು ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈಗಾಗಲೇ 6 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ಆರೋಪಿಗಳ ಮನೆ ಮೇಲೂ ದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ಪತ್ತೆಯಾಗಿಲ್ಲ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಡಿ.ಎಫ್.ಓ ನೀಲೇಶ್ ಶಿಂಧೆ ಮಾರ್ಗದರ್ಶನದಲ್ಲಿ ಆರ್.ಎಫ್.ಓ ಪ್ರವೀಣ್, ರಘು, ಪ್ರಕಾಶ್, ಕಿರಣ್, ದಿವಾಕರ್ ಪಾಲ್ಗೊಂಡಿದ್ದರು. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

  • ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಆರು ತಿಂಗಳಿಂದ ಗೃಹ ಬಂಧನದಲ್ಲಿರಿಸಿದ್ದ ಭೂಪ

    ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಆರು ತಿಂಗಳಿಂದ ಗೃಹ ಬಂಧನದಲ್ಲಿರಿಸಿದ್ದ ಭೂಪ

    – ಅರಣ್ಯ ಇಲಾಖೆಯಿಂದ ಜಿಂಕೆ ರಕ್ಷಣೆ

    ಕಾರವಾರ: ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಆರು ತಿಂಗಳ ಕಾಲ ಅಕ್ರಮವಾಗಿ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಕೊಪ್ಪದಲ್ಲಿ ಘಟನೆ ನಡೆದಿದೆ. ಸಂಚಾರಿ ಅರಣ್ಯ ಘಟಕ ದಳದವರು ಮನೆ ಮೇಲೆ ದಾಳಿ ನಡೆಸಿ, ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಬೀಬ್ ರೆಹಮಾನ ಮಹ್ಮದ್ ಸಾಬ್(46) ಬಂಧಿತ ಆರೋಪಿ. ಕಾಡಿನಲ್ಲಿದ್ದ ಜಿಂಕೆಯನ್ನು ಹಿಡಿದು ಬಂಧಿಸಿ ಆರು ತಿಂಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದ.

    ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಸಂಚಾರಿ ಅರಣ್ಯ ಪೊಲೀಸ್ ದಳ ದಾಳಿ ನಡೆಸಿದ್ದಾರೆ. ಆರೋಪಿಯನ್ನು ಆರಣ್ಯ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದು, ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಜಿಂಕೆಯನ್ನು ವಶಪಡಿಸಿಕೊಂಡು ಶಿರಸಿ ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ದು, ಕಾರ್ಯಾಚರಣೆಯಲ್ಲಿ ದಾಂಡೇಲಿ ಸಿ.ಐ.ಡಿ ಅರಣ್ಯ ಘಟಕದ ಪಿ.ಎಸ್.ಐ. ಮಂಜುನಾಥ ಬೋರಕರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.