Tag: Deepveer

  • 3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ ದೀಪ್‍ವೀರ್

    3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ ದೀಪ್‍ವೀರ್

    ಮುಂಬೈ: ಬಾಲಿವುಡ್ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಂದು ತಮ್ಮ 3ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    14 ನವೆಂಬರ್ 2018 ರಂದು ಹೊಸ ಜೀವನಕ್ಕೆ ಕಾಲಿಟ್ಟ ಈ ದಂಪತಿ, ಬಾಲಿವುಡ್ ನಲ್ಲಿ ಪವರ್ ಕಪಲ್ ಎಂದು ಗುರುತಿಸಿಕೊಂಡಿದ್ದಾರೆ. ಇಬ್ಬರು ತಮ್ಮ-ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನಕ್ಕೂ ಅವರು ಅಷ್ಟೇ ಪ್ರಮುಖ್ಯತೆಯನ್ನು ಕೊಡುತ್ತಾರೆ. ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ದೀಪ್‍ವೀರ್ ಎಂದು ಕರೆಯುತ್ತಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ

    ರಣವೀರ್, ದೀಪಿಕಾ ಅವರನ್ನು ಯಾವುದೇ ಸಂದರ್ಶನಕ್ಕೆ ಹೋದರು ನೆನಪಿಸಿಕೊಳ್ಳದೆ ಇರುವುದಿಲ್ಲ. ಇಬ್ಬರು ಒಬ್ಬರನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ತಮ್ಮ ಕೆಲಸವನ್ನು ಗೌರವಿಸುತ್ತಾರೆ. ವೈಯಕ್ತಿಕ ಜೀವನದ ಜೊತೆಗೆ ವೃತ್ತಿ ಜೀವನವನ್ನು ಈ ಜೋಡಿ ಸಂಭಾಳಿಸಿಕೊಂಡು ಹೋಗುತ್ತಿದೆ.

     

    View this post on Instagram

     

    A post shared by Ranveer Singh (@ranveersingh)

    ಇತ್ತೀಚೆಗೆ ರಣವೀರ್ ಅಪ್ಪನಾಗು ಆಸೆಯನ್ನು ವ್ಯಕ್ತಪಡಿಸಿದ್ದು, ಅಷ್ಟೆ ಅಲ್ಲದೇ, ದೀಪಿಕಾ ಚಿಕ್ಕವರಿದ್ದಾಗ ಇದ್ದಂತೆ ಕ್ಯೂಟ್ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್ ಸೆಟ್ ಆದಂತೆ ಎಂದು ಹೇಳಿಕೊಂಡಿದ್ದರು. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿರುವ ರಣವೀರ್ ಈ ಕಾರ್ಯಕ್ರಮದ ಪ್ರೋಮೋ ವೀಡಿಯೋದಲ್ಲಿ, ನಿಮಗೆ ಗೊತ್ತಿರುವಂತೆ ನನಗೆ ಮದುವೆಯಾಗಿದೆ. ಕೆಲವೇ ವರ್ಷದಲ್ಲಿ ನಮಗೂ ಮಕ್ಕಳಾಗುತ್ತವೆ ಎಂದು ನಾಚುತ್ತಾ ಹೇಳಿಕೊಂಡಿದ್ದರು. ಇದನ್ನೂ ಓದಿ: 6 ದಿನಗಳ ಕಾಲ ನಡೆಯಲಿದೆ ಕತ್ರಿನಾ, ವಿಕ್ಕಿ ಮದುವೆ – ಯಾರಿಗೆಲ್ಲ ಇದೆ ಆಮಂತ್ರಣ?

  • ದೀಪಿಕಾ ಮದ್ವೆಯಲ್ಲಿ ತೊಟ್ಟ ಸೀರೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಬ್ಯಸಾಚಿ

    ದೀಪಿಕಾ ಮದ್ವೆಯಲ್ಲಿ ತೊಟ್ಟ ಸೀರೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಬ್ಯಸಾಚಿ

    ಮುಂಬೈ: ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ಮದುವೆ ಅದ್ಧೂರಿಯಾಗಿ ಇಟಲಿಯಲ್ಲಿ ನಡೆಯಿತು. ಕೊಂಕಣಿ ಮತ್ತು ಪಂಜಾಬಿ ಸಂಪ್ರದಾಯಬದ್ಧವಾಗಿ ಮದುವೆ ಸಹ ನಡೆದಿದೆ. ಬಾಲಿವುಡ್ ತಾರೆಯರ ಮದುವೆಯಲ್ಲಿ ತಮ್ಮ ನೆಚ್ಚಿನ ನಟಿ ತೊಡುವ ಉಡುಗೆಯ ಬಗ್ಗೆ ಬಹುತೇಕರಲ್ಲಿ ಕುತೂಹಲ ಇರುತ್ತದೆ. ದೀಪಿಕಾ ಸಹ ತಮ್ಮ ಮದುವೆಯಲ್ಲಿ ಎರಡು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು. ವಸ್ತ್ರವಿನ್ಯಾಸಕ ಸಬ್ಯಸಾಚಿ ದೀಪಿಕಾರ ಎಲ್ಲ ಮದುವೆ ಫೋಟೋಗಳನ್ನು ತಮ್ಮ ಅಧಿಕೃತ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

    ನವದಂಪತಿ ಧರಿಸಿದ ಎಲ್ಲ ಉಡುಪನ್ನು ನಾನು ಡಿಸೈನ್ ಮಾಡಿಲ್ಲ. ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ದೀಪಿಕಾ ತಾಯಿ ಉಜ್ಜಲಾ ಅವರಿಂದ ಕಾಣಿಕೆಯಾಗಿ ಪಡೆದಿದ್ದ ಸೀರೆಯನ್ನು ಧರಿಸಿದ್ದರು. ಉಜ್ಜಲಾ ಪಡುಕೋಣೆ ಆ ಸೀರೆಯನ್ನು ಬೆಂಗಳೂರಿನ ಮಳಿಗೆಯಲ್ಲಿ ಖರೀದಿಸಿದ್ದಾರೆ ಎಂದು ಸಬ್ಯಸಾಚಿ ಬರೆದುಕೊಂಡಿದ್ದಾರೆ. ದೀಪಿಕಾ ಧರಿಸಿದ್ದ ಕೊಂಕಣಿ ಶೈ ಲಿಯಲ್ಲಿ ವಿನ್ಯಾಸ ಮಾಡಲಾಗಿತ್ತು.

    2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಮದುವೆ ಬಟ್ಟೆಯ ವಸ್ತ್ರವಿನ್ಯಾಸವನ್ನು ಸಬ್ಯಸಾಚಿ ಮಾಡಿದ್ದರು. ಅಂದು ಸಬ್ಯಸಾಚಿ ವಿರುಷ್ಕಾರ ಮದುವೆ ಮತ್ತು ಆರತಕ್ಷತೆಯ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಬುಧವಾರ ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯಲ್ಲಿ ದೀಪ್ ವೀರ್ ರಾಯಲ್ ಲುಕ್‍ನಲ್ಲಿ ಕಂಗೊಳಿಸುತ್ತಿದ್ದರು.

    ನಗರದ ಲೀಲಾ ಪ್ಯಾಲೇಸ್‍ನಲ್ಲಿ ದೀಪ್‍ವೀರ್ ಆರತಕ್ಷತೆ ಆಯೋಜಿಸಲಾಗಿತ್ತು. ಹಣೆತುಂಬಾ ಸಿಂಧೂರವಿಟ್ಟು ಮಹಾರಾಣಿಯಂತೆ ಕಂಗೊಳಿಸುತ್ತಿದ್ದ ದೀಪಿಕಾ ಪತಿಯ ಕೈ ಹಿಡಿದು ನಡೆದು ಬಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ದಕ್ಷಿಣ ಭಾರತದ ಸಂಪ್ರದಾಯಕ್ಕೆ ತಕ್ಕಂತೆ ದೀಪಿಕಾ ಬಂಗಾರದ ಬಣ್ಣದ ಜರತಾರಿ ಸೀರೆಯುಟ್ಟು ಆ್ಯಂಟಿಕ್ ಜ್ಯುವೆಲ್ಲರಿ ಧರಿಸಿ ಮಿಂಚಿದರೆ, ವರ ರಣವೀರ್ ಸಿಂಗ್ ಬಂಗಾರದ ಕಸೂತಿ ಇರುವ ಕಡು ನೀಲಿ ವರ್ಣದ ಲಾಂಗ್ ಸೂಟ್ ಧರಿಸಿದ್ದರು.

    ಇಟಲಿಯಲ್ಲಿ ಮದುವೆಯಾಗಿ ಮುಂಬೈಗೆ ಆಗಮಿಸಿದ್ದ ನವದಂಪತಿ ಆತ್ಮೀಯರಿಗೆ ತಮ್ಮ ಆರತಕ್ಷತೆಯ ಆಹ್ವಾನವನ್ನು ನೀಡಿದ್ದರು. ಈ ನಡುವೆ ಅವರ ಮದುವೆ ಸಮಾರಂಭದ ಫೋಟೋಗಳು ಎಲ್ಲಾ ಅಭಿಮಾನಿಗಳ ಮನಗೆದ್ದಿದ್ದವು. ಅಲ್ಲದೇ ಮದುವೆ ಕ್ಷಣ ಫೋಟೋ ಲೀಕ್ ಆಗದಂತೆ ಎಚ್ಚರಿಕೆ ವಹಿಸಿದ್ದ ಈ ಜೋಡಿ ಬಳಿಕ ಅಭಿಮಾನಿಗಳೊಂದಿಗೆ ಸ್ವತಃ ಫೋಟೋಗಳನ್ನು ಒಂದೊಂದಾಗಿ ಹಂಚಿಕೊಂಡಿದ್ದರು.

    https://www.instagram.com/p/BqbYDy2B0LS/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೊನೆಗೂ ಟ್ಯಾಟೂ ತೆಗೆದ ದೀಪಿಕಾ-ಇಲ್ಲಿದೆ ಡಿಪ್ಪಿಯ ಟ್ಯಾಟೂ ಕಹಾನಿ

    ಕೊನೆಗೂ ಟ್ಯಾಟೂ ತೆಗೆದ ದೀಪಿಕಾ-ಇಲ್ಲಿದೆ ಡಿಪ್ಪಿಯ ಟ್ಯಾಟೂ ಕಹಾನಿ

    ಮುಂಬೈ: ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ತಮ್ಮ ಕತ್ತಿನ ಹಿಂಭಾಗದಲ್ಲಿದ್ದ ಆರ್.ಕೆ. ಟ್ಯಾಟೂ ತೆಗೆದಿದ್ದಾರೆ. ಮದುವೆ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ದೀಪಿಕಾ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೋಗಳಲ್ಲಿ ಕತ್ತಿನ ಹಿಂಭಾಗದಲ್ಲಿದ್ದ ಟ್ಯಾಟೂ ಮಾಯವಾಗಿದೆ.

    ಏನದು ಟ್ಯಾಟೋ:
    ದೀಪಿಕಾ ಸಿನಿ ಕೆರಿಯರ್ ಆರಂಭದಲ್ಲಿ ರಣ್‍ಬೀರ್ ಕಪೂರ್ ಅವರನ್ನ ಮದುವೆ ಅಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು. ಈ ಸುದ್ದಿಗಳಿಗೆ ಪೂರಕ ಎಂಬಂತೆ ಸಾರ್ವಜನಿಕವಾಗಿ ದೀಪಿಕಾ ಮತ್ತು ರಣ್‍ಬೀರ್ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ದೀಪಿಕಾ ಆರ್.ಕೆ. (ರಣ್‍ಬೀರ್ ಕಪೂರ್) ಟ್ಯಾಟೂ ಹಾಕಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಹೇಳಿಕೊಂಡಿದ್ದರು.

    ಕೆಲ ಕಾರಣಗಳಿಂದ ದೀಪಿಕಾ ಮತ್ತು ರಣ್‍ಬೀರ್ ಇಬ್ಬರ ಮಧ್ಯೆ ವೈಮನಸ್ಸು ಮೂಡಿದ್ದರಿಂದ ಬೇರೆಯಾಗಿದ್ದರು. ಬ್ರೇಕಪ್ ಬಳಿಕ ದೀಪಿಕಾ ತಮ್ಮ ಟ್ಯಾಟೂವನ್ನು ಹಾಗೆಯೇ ಉಳಿಸಿಕೊಂಡಿದ್ದರು. ರಾಮ್‍ಲೀಲಾ ಸಿನಿಮಾದ ಬಳಿಕ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿದರು. ಇದಾದ ನಂತರ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು.

    2013ರಿಂದಲು ಪ್ರೇಮಪಾಶದಲ್ಲಿ ಸಿಲುಕಿದರೂ ಪದೇ ಪದೇ ಇಬ್ಬರ ಮದುವೆ ಮುಂದೂಡಲಾಗುತ್ತಿತ್ತು. ಕಾರಣ ರಣ್‍ವೀರ್ ಸಿಂಗ್, ಟ್ಯಾಟೂ ತೆಗೆಸುವಂತೆ ಹೇಳಿದರೂ ದೀಪಿಕಾ ಒಪ್ಪುತ್ತಿರಲಿಲ್ಲವಂತೆ. ಈ ಕಾರಣದಿಂದಲೇ ಇಬ್ಬರ ಮಧ್ಯೆ ಜಗಳ ಸಹ ನಡೆಯುತ್ತಿತ್ತು ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದ್ದವು. ಕೊನೆಗೂ ದೀಪಿಕಾ ತಮ್ಮ ಮಾಜಿ ಪ್ರಿಯಕರ ಹೆಸರಿನ ಟ್ಯಾಟೂ ತೆಗೆಸಿಕೊಂಡಿದ್ದಾರೆ.

    ಲವ್ವರ್ ಬಾಯ್ ಆದ ರಣ್‍ಬೀರ್?
    ಇತ್ತ ದೀಪಿಕಾರಿಂದ ದೂರವಾದ ರಣ್‍ಬೀರ್ ಹೆಸರು ಕತ್ರಿನಾ ಕೈಫ್ ಜೊತೆ ತಳುಕು ಹಾಕಿಕೊಂಡಿತ್ತು. ವಿದೇಶದಲ್ಲಿ ಇಬ್ಬರು ಬೀಚ್ ನಲ್ಲಿ ಸುತ್ತಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿದ ಕತ್ರಿನಾ, ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಂತಾ ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದು ರಣ್‍ಬೀರ್ ನಿಂದ ದೂರವಾದರು. ಇತ್ತ ರಣ್‍ಬೀರ್ ಮತ್ತು ಪಾಕಿಸ್ತಾನಿ ನಟಿ ಮಹೀರಾ ಖಾನ್ ಇಬ್ಬರ ಬಗ್ಗೆ ಲವ್ ಗಾಸಿಪ್ ಗಳು ಕೇಳಿ ಬಂದಿತ್ತು. ಸದ್ಯ ರಣ್‍ಬೀರ್ ಬಹುತಾರಾಗಣವುಳ್ಳ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ತಮ್ಮ ಮೊದಲ ಸಿನಿಮಾ ಬಿಡುಗಡೆಯಾದ ದಿನವೇ (ನವೆಂಬರ್ 14 ಮತ್ತು 15) ರಣ್‍ವೀರ್ ಮತ್ತು ದೀಪಿಕಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಬುಧವಾರ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಸಹ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv