Tag: Deepotsav

  • ಶ್ರೀರಾಮನಗರಿಯಲ್ಲಿ ಝಗಮಗಿಸಿದ ದೀಪೋತ್ಸವ – 26 ಲಕ್ಷ ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ

    ಶ್ರೀರಾಮನಗರಿಯಲ್ಲಿ ಝಗಮಗಿಸಿದ ದೀಪೋತ್ಸವ – 26 ಲಕ್ಷ ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ

    – ಇಷ್ಟೊಂದು ಖರ್ಚು ಬೇಕಾ ಅಂತ ಅಖಿಲೇಶ್ ಕೊಂಕುನುಡಿ

    ಲಕ್ನೋ: ದೇಶಾದ್ಯಂತ ದೀಪಗಳ ಹಬ್ಬ ದೀಪಾವಳಿ (Diwali) ಸಂಭ್ರಮ ಮನೆ ಮಾಡಲಿದೆ. ಅದರ ಮುನ್ನಾದಿನವೇ ಶ್ರೀರಾಮನಗರಿ ಅಯೋಧ್ಯೆಯಲ್ಲಿ (Ayodhya) ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.

    ಅಯೋಧ್ಯೆ ನಗರಿ ದೀಪಗಳಿಂದ ಝಗಮಗಿಸುತ್ತಿದೆ. 26 ಲಕ್ಷ ದೀಪಗಳು ಶ್ರೀರಾಮನೂರನ್ನು ಬೆಳಗುತ್ತಿವೆ. ಪ್ರತಿ ವರ್ಷದಂತೆ ಈ ವರ್ಷವೂ ಸರಯೂ ನದಿಯ ತಟದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಅಯೋಧ್ಯೆಯ ಪವಿತ್ರ ಸರಯು ನದಿಯ ತೀರದಲ್ಲಿ 26,11,101 ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ. ಇದನ್ನೂ ಓದಿ: ದೀಪಾವಳಿ ಹಿನ್ನೆಲೆ ಜಾತಿಗಣತಿ ಸಮೀಕ್ಷೆಗೆ ಅ.23ರವರೆಗೆ ತಾತ್ಕಾಲಿಕ ಬ್ರೇಕ್

    ರಾಮ ಕಿ ಪೌಡಿ ಸೇರಿದಂತೆ 56 ಘಾಟ್‌ಗಳಲ್ಲಿ ದೀಪಗಳು ಪ್ರಜ್ವಲಿಸಿವೆ. 2017ರಲ್ಲಿ ಈ ಉತ್ಸವ ಆರಂಭವಾದಾಗ ಕೇವಲ 1.71 ಲಕ್ಷ ದೀಪಗಳನ್ನು ಬೆಳಗಿಸಲಾಗಿತ್ತು. ಕಳೆದ ವರ್ಷ 25.12 ಲಕ್ಷ ದೀಪಗಳನ್ನ ಹಚ್ಚಲಾಗಿತ್ತು.

    ಅಯೋಧ್ಯೆಯಲ್ಲಿ ದೀಪೋತ್ಸವ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ದೀಪಗಳು ಮತ್ತು ಮೇಣದ ಬತ್ತಿಗಳಿಗಾಗಿ ಯೋಗಿ ಸರ್ಕಾರದ ವೆಚ್ಚವನ್ನು ಪ್ರಶ್ನಿಸಿದ್ದಾರೆ. ಆಯೋಧ್ಯೆ ದೀಪೋತ್ಸವಕ್ಕಾಗಿ ಪ್ರತಿ ವರ್ಷ ಖರ್ಚು ಮಾಡುತ್ತಿದ್ದಾರೆ. ದೀಪೋತ್ಸವಕ್ಕೆ ಹಣತೆ ಖರ್ಚು ಯಾಕೆ? ನೀವು ಕ್ರೈಸ್ತರ ಕ್ರಿಸ್ಮಸ್ ಆಚರಣೆ ನೋಡಿ, ಅವರು ಕ್ರಿಸ್ಮಸ್ ವೇಳೆ ಒಂದು ತಿಂಗಳು ಎಲ್ಲಾ ನಗರಗಳನ್ನು ಲೈಟ್ ಮೂಲಕ ಸಿಂಗರಿಸುತ್ತಾರೆ. ನೀವು ಹಣತೆ ಖರೀದಿಸುತ್ತಾ ಖರ್ಚು ಮಾಡುತ್ತಿದ್ದೀರಿ ಎಂದು ಅಖಿಲೇಶ್ ಯಾದವ್ ವಿವಾದಿತ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

    ಅಖಿಲೇಶ್ ಹೇಳಿಕೆಯನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ತೀವ್ರವಾಗಿ ಟೀಕಿಸಿವೆ. ವ್ಯಾಟಿಕನ್ ಸಿಟಿಗೆ ಹೋಗಿ ಕ್ರಿಸ್‌ಮಸ್ ಆಚರಿಸಿ ಎಂದು ವಿಎಚ್‌ಪಿ ಹೇಳಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, ವರ್ಷಗಳ ಕಾಲ ಅಯೋಧ್ಯೆಯನ್ನು ಕತ್ತಲಲ್ಲಿ ಇರಿಸಿದ ಮತ್ತು ರಾಮ ಭಕ್ತರ ಮೇಲೆ ದಾಳಿ ಮಾಡಿದ್ದಕ್ಕೆ ಹೆಮ್ಮೆ ಪಟ್ಟ ಪಕ್ಷವು ಈಗ ದೀಪೋತ್ಸವಕ್ಕಾಗಿ ನಗರದ ಅಲಂಕಾರವನ್ನು ವಿರೋಧಿಸುತ್ತಿದೆ ಎಂದಿದ್ದಾರೆ.

  • ಮತಾಂತರ ತಡೆಯಲು ವಿಜಯನಗರ ಜಿಲ್ಲೆಯಲ್ಲಿ ವಿಶೇಷ ದೀಪೋತ್ಸವ

    ಮತಾಂತರ ತಡೆಯಲು ವಿಜಯನಗರ ಜಿಲ್ಲೆಯಲ್ಲಿ ವಿಶೇಷ ದೀಪೋತ್ಸವ

    ಬಳ್ಳಾರಿ: ಮತಾಂತರ (Conversion) ತಡೆಯಲು ವಿಜಯನಗರ (Vijayanagar) ಜಿಲ್ಲೆಯ ತಾಂಡಾಗಳಲ್ಲಿ ವಿಶೇಷ ದೀಪೋತ್ಸವ (Deepotsav) ಈಗ ನಡೆಯುತ್ತಿದೆ.

    ವಿಜಯನಗರ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹೂವಿನ ಹಡಗಲಿ, ಹಗರಿಬೊಮ್ಮನ ಹಳ್ಳಿ ತಾಲೂಕಿನ ತಾಂಡಾಗಳಲ್ಲಿ ಸಂತ ಸೇವಾಲಾಲ್ ಮಹಾರಾಜರ ದೀಪೋತ್ಸವ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ತಾಂಡಾದ ಜನರು ಶ್ರೀ ಸೇವಾಲಾಲ್ ಹಾಗೂ ಮಾರಿಯಮ್ಮ ದೇಗುಲದಲ್ಲಿ ದೀಪ ಹಚ್ಚಿ ಸಂಭ್ರಮಿಸಿದರು. ಇದನ್ನೂ ಓದಿ: ಕೊಡಚಾದ್ರಿ ಬಳಿ ಜೀಪ್, ಟಿಟಿ ನಡುವೆ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಇತ್ತೀಚೆಗೆ ತಾಂಡಾಗಳಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಇದನ್ನ ಅರಿತ ತಾಂಡಾದ ಪ್ರಮುಖರು ಜಾಗೃತಿ ಮೂಡಿಸಲು ವಿಶೇಷ ದೀಪೋತ್ಸವ ಮಾಡುತ್ತಿದ್ದಾರೆ.

  • ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ರಾಮನ ಪ್ರೇರಣೆ ಪಡೆಯಬೇಕು: ಮೋದಿ

    ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ರಾಮನ ಪ್ರೇರಣೆ ಪಡೆಯಬೇಕು: ಮೋದಿ

    ಲಕ್ನೋ: ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ನಾವು ಶ್ರೀರಾಮನ (Lord Ram) ಪ್ರೇರಣೆ ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದರು.

    ದೀಪಾವಳಿ ಹಿನ್ನೆಲೆಯಲ್ಲಿ ಅಯೋಧ್ಯೆಯ (Ayodhya) ದೀಪೋತ್ಸವ (Deepotsav) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಐದು ಕರ್ತವ್ಯಗಳನ್ನು ಹೇಳಿದ್ದೆ. ಆ ಎಲ್ಲ ಪ್ರೇರಣೆಗಳು ಶ್ರೀರಾಮನಿಂದ ಬಂದಿದೆ. ಜನನಿ ಜನ್ಮ ಭೂಮಿ ಎಂದು ಹೇಳಿದ್ದಾರೆ. ಗುಲಾಮಿ ಮಾನಸಿಕತೆಯಿಂದ ಆಚೆ ಬರಲು ನಾವು ಶ್ರೀರಾಮನ ಪ್ರೇರಣೆ ಪಡೆಯಬೇಕು. ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡಲಾಗುತ್ತಿತ್ತು. ಅದರ ಪರಿಣಾಮ ಏನಾಯಿತು? ನಮ್ಮ ಸಂಸ್ಕೃತಿ ಹಿಂದೆ ಉಳಿಯಿತು ಎಂದು ಬೇಸರ ವ್ಯಕ್ತಪಡಿಸಿದರು.

    ಅಯೋಧ್ಯೆ, ಕಾಶಿ ನೋಡುವಾಗ ನೋವಾಗುತ್ತಿತ್ತು. ಕಳೆದ 8 ವರ್ಷಗಳಲ್ಲಿ ತೀರ್ಥ ಕ್ಷೇತ್ರಗಳ ಅಭಿವೃದ್ಧಿ ಮಾಡಿದೆ. ವಾರಣಾಸಿ, ಅಯೋಧ್ಯೆ, ಕೇದಾರನಾಥ, ಬದರಿನಾಥ ಸೇರಿ ಹಲವು ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದೆ. ಅಯೋಧ್ಯೆಯೂ ಹೊಸ ಆಯಾಮದ ಅಭಿವೃದ್ಧಿ ಹೊಂದುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭ ಮಾಡಲಾಗುತ್ತಿದೆ. ಅಯೋಧ್ಯೆ ಅಭಿವೃದ್ಧಿ ಸುತ್ತಲಿನ ಪ್ರದೇಶಗಳಿಗೆ ಆಗಲಿದೆ. ಇವುಗಳಿಂದ ಯುವಕರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರು.

    ರಾಮ ಅಯೋಧ್ಯೆ ರಾಜನಾಗಿದ್ದ. ಆದರೆ ಅವರನ್ನು ಇಡೀ ದೇಶ ಪೂಜಿಸುತ್ತದೆ. ನಾವು ಅವರ ಆದರ್ಶಗಳಲ್ಲಿ ನಡೆಯಬೇಕು. ಅಯೋಧ್ಯೆ ಕರ್ತವ್ಯ ನಗರಿಯಾಗಬೇಕು. ಅಯೋಧ್ಯೆಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲಿದೆ. ವಿದೇಶದಿಂದ ಶ್ರೀರಾಮನ ದರ್ಶನ ಪಡೆಯಲು ಬರಲಿದ್ದಾರೆ. ದೇಶಾದ್ಯಂತ ಭಕ್ತರು ಬರಲಿದ್ದಾರೆ. ಅವರನ್ನು ಗೌರವಯುತವಾಗಿ ಕಾಣಬೇಕು. ಅಯೋಧ್ಯೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆ ಕರ್ತವ್ಯವನ್ನು ಅಯೋಧ್ಯೆ ಜನರು ನಿಷ್ಠೆಯಿಂದ ನಿಭಾಯಿಸಬೇಕು ಎಂದು ಅಯೋಧ್ಯೆಯಿಂದ ದೇಶದ ಜನರಿಗೆ ಮನವಿ ಮಾಡಿದರು.

    75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೇವೆ. ನಾವು ಮತ್ತಷ್ಟು ಎತ್ತರಕ್ಕೆ ಹೋಗಲು ಶ್ರೀರಾಮ ಶಕ್ತಿ ನೀಡಲಿದ್ದಾರೆ. ಶ್ರೀರಾಮನ ಆಡಳಿತದಲ್ಲಿ ಸಬ್ ಕಾ ವಿಕಾಸ್ ಇತ್ತು. ಕಠಿಣ ಗುರಿಗಳನ್ನು ಮುಟ್ಟಲು ರಾಮನ ಆದರ್ಶ ಪ್ರೇರಣೆಯಾಗಲಿದೆ. ಅಯೋಧ್ಯೆಯಲ್ಲಿ ದೀಪೋತ್ಸವ ನಾವು ಸಂಕಲ್ಪ ಮಾಡಬೇಕು. ಶ್ರೀರಾಮನಿಂದ ಎಷ್ಟು ಕಲಿಯಬಹುದು, ಅದನ್ನೆಲ್ಲ ಕಲಿಯಬೇಕು. ಶ್ರೀರಾಮನನ್ನು ಮರ್ಯಾದ ಪುರುಷ ಎಂದು ಕರೆಯುತ್ತಾರೆ. ರಾಮನು ಧರ್ಮ ಮತ್ತು ಕರ್ತವ್ಯದ ಜೀವಂತ ಉದಾಹರಣೆಯಾಗಿದ್ದರು. ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]