Tag: Deepika Padukone

  • ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಬಾಲಿವುಡ್ ಸ್ಟಾರ್ಸ್

    ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಬಾಲಿವುಡ್ ಸ್ಟಾರ್ಸ್

    ವಿಶ್ವದ ಟಾಪ್ 10ರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ (Mukesh Ambani), ನೀತಾ ಅಂಬಾನಿ ಕೂಡ ಒಬ್ಬರಾಗಿದ್ದು, ಅವರ ಮನೆಯಲ್ಲಿ ಇದೀಗ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್‌ಗೆ ಅದ್ಧೂರಿಯಾಗಿ ತಯಾರಿ ನಡೆಯುತ್ತಿದೆ. ಅಂಬಾನಿ ಕುಟುಂಬ ಮದುವೆಗೆ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಲಿದೆ.

    ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ನಡೆಯಲಿದೆ. ಗುಜರಾತ್‌ನ ಜಾಮ್ ನಗರ ಸಾಕ್ಷಿಯಾಗಲಿದೆ. ಅನಂತ್ ಪ್ರೀ ವೆಡ್ಡಿಂಗ್ ಮದುವೆ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ಇರಲಿದೆ. ಖ್ಯಾತ ಗಾಯಕ ಬಿ ಪ್ರಾಕ್‌ ಅವರ ಗಾಯನ ಇರಲಿದೆ. ಇದನ್ನೂ ಓದಿ:ಶೂಟಿಂಗ್ ಸ್ಪಾಟ್ ನಲ್ಲೇ ಮದುವೆ ವಾರ್ಷಿಕೋತ್ಸವ ಆಚರಿಸಿದ ಚಂದನ್

    ಅನಂತ್ ಅಂಬಾನಿ ಮದುವೆಯಾಗಿ ಅದ್ಧೂರಿ ದೇಗುಲ ನಿರ್ಮಿಸಲಾಗುತ್ತಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು ಇಲ್ಲಿ ಕಾಣಬಹುದು. ಇದನ್ನೂ ಓದಿ:ರಶ್ಮಿಕಾಗೆ ಠಕ್ಕರ್, ಗೋಲ್ಡನ್ ಚಾನ್ಸ್ ಬಾಚಿಕೊಂಡ ತೃಪ್ತಿ ದಿಮ್ರಿ

    ಅನಂತ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಇರಲಿದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ರಜನಿಕಾಂತ್, ರಣ್‌ಬೀರ್ ಕಪೂರ್, ಆಲಿಯಾ ಭಟ್ (Aliaa Bhat), ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ (Deepika Padukone) ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

    ವಿಶೇಷ ಆಹ್ವಾನಿತರಷ್ಟೇ ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದು, ಸುಮಾರು 1000 ಗಣ್ಯರು ಭಾಗಿಯಾಲಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಲಿಂಡಾ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಲವರು ಹಾಜರಿ ಹಾಕಲಿದ್ದಾರೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣ್‌ವೀರ್‌ ದಂಪತಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣ್‌ವೀರ್‌ ದಂಪತಿ

    ಬಾಲಿವುಡ್ ಸ್ಟಾರ್ ದಂಪತಿ ರಣ್‌ವೀರ್ ಸಿಂಗ್- ದೀಪಿಕಾ ಪಡುಕೋಣೆ (Deepika Padukone) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದೀಪ್‌ವೀರ್ ದಂಪತಿ ಮೊದಲ ಮಗುವಿನ (Child) ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ತಾಯಿಯಾಗಿದ್ದಾರೆ.

    ವರುಣ್ ಧವನ್ ದಂಪತಿ, ಅನುಷ್ಕಾ- ವಿರಾಟ್ ಜೋಡಿ ಸಿಹಿಸುದ್ದಿ ಕೊಡ್ತಿದ್ದಂತೆ ದೀಪಿಕಾ ಮತ್ತು ರಣ್‌ವೀರ್ (Ranveer Singh) ಜೋಡಿ ಮನೆಗೆ ಮೊದಲ ಅತಿಥಿ ಆಗಮನ ಆಗುತ್ತಿರುವ ಸಂತಸದಲ್ಲಿದ್ದಾರೆ. ದೀಪಿಕಾ ಈಗ 2 ತಿಂಗಳ ಗರ್ಭಿಣಿ ಎನ್ನಲಾಗಿದೆ. ಅಷ್ಟಕ್ಕೂ ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೀಪಿಕಾ ಕುಟುಂಬ ಈ ಸುದ್ದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕೃತವಾಗಿ ಅನೌನ್ಸ್ ಕೂಡ ಮಾಡಿಲ್ಲ. ಈ ಸುದ್ದಿ ನಿಜನಾ ಕಾದುನೋಡಬೇಕಿದೆ.

    ‘ದಿ ವೈಟ್ ಲೋಟಸ್ ಸೀಸನ್ 3’ ಕಾರ್ಯಕ್ರಮಕ್ಕೆ ದೀಪಿಕಾ ಭಾಗಯಾಗಬೇಕಿತ್ತು. ಸಡನ್ ಆಗಿ ಕಾರ್ಯಕ್ರಮಕ್ಕೆ ಬರದೇ ಹೊರಗುಳಿದಿದ್ದಾರೆ. ಪ್ರೆಗ್ನೆನ್ಸಿ ಕಾರಣದಿಂದಲೇ ಕಾರ್ಯಕ್ರಮಕ್ಕೆ ನಟಿ ಗೈರಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಬಡೇ ಮಿಯಾನ್ ಚೋಟೆ ಮಿಯಾನ್’ ಟೈಟಲ್ ಟ್ರ‍್ಯಾಕ್ ಔಟ್

    2018ರಲ್ಲಿ ರಣ್‌ವೀರ್, ದೀಪಿಕಾ ಜೋಡಿ ಮದುವೆಯಾದರು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಮದುವೆಯಾದರು.

    ದೀಪಿಕಾ ಪಡುಕೋಣೆ ಅವರು ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದಲ್ಲಿ ನಟಿಸಿದ ಬಳಿಕ ಬಾಲಿವುಡ್‌ಗೆ (Bollywood) ಲಗ್ಗೆ ಇಟ್ಟರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ನಂತರ ಹಿಂದಿ ಸಿನಿಮಾರಂಗ ಬೆಂಗಳೂರು ಬೆಡಗಿಯ ಕೈಹಿಡಿಯಿತು. ಇತ್ತೀಚಿನ ‘ಪಠಾಣ್’ ಚಿತ್ರದ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ.

  • ಚುಂಬನ ಎಫೆಕ್ಟ್: ‘ಫೈಟರ್’ ಸಿನಿಮಾ ವಿರುದ್ಧ ಸಿಡಿದೆದ್ದ ವಾಯುಸೇನಾ ಅಧಿಕಾರಿ

    ಚುಂಬನ ಎಫೆಕ್ಟ್: ‘ಫೈಟರ್’ ಸಿನಿಮಾ ವಿರುದ್ಧ ಸಿಡಿದೆದ್ದ ವಾಯುಸೇನಾ ಅಧಿಕಾರಿ

    ದೀಪಿಕಾ ಪಡುಕೋಣೆ (Deepika Paduk) ಮತ್ತು ಹೃತಿಕ್ ರೋಷನ್ ಕಾಂಬಿನೇಷನ್ ನ ಫೈಟರ್ (Fighter) ಸಿನಿಮಾದ ಚುಂಬನ ದೃಶ್ಯ ಕುರಿತಂತೆ ವಾಯುಸೇನಾ ಅಧಿಕಾರಿಯೊಬ್ಬರು ಗರಂ ಆಗಿದ್ದಾರೆ. ವಾಯುಸೇನೆ ಸಮವಸ್ತ್ರ ಧರಿಸಿಕೊಂಡು ಹೃತಿಕ್ ಮತ್ತು ದೀಪಿಕಾ ಚುಂಬಿಸುವ ದೃಶ್ಯವು ವಸ್ತ್ರ ಸಂಹಿತೆ ನೀತಿಯನ್ನು ಉಲ್ಲಂಘಿಸಿದೆ. ಇದರಿಂದಾಗಿ ವಾಯುಸೇನೆಗೆ ಮುಜುಗರ ತರಿಸಿದೆ ಎಂದು ಅಧಿಕಾರಿ ಅಸ್ಸಾಮಿನ ಸೌಮ್ಯ ದೀಪ್ ದಾಸ್ (Soumya Deep Das) ಎನ್ನುವವರು ದೂರು (Complain) ದಾಖಲಿಸಿದ್ದಾರೆ.

    ಫೈಟರ್ ಸಿನಿಮಾ ಕುರಿತಂತೆ ಬಿಡುಗಡೆ ದಿನದಿಂದ ಈವರೆಗೂ ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸುತ್ತಲೇ ಬಂದಿದೆ.  ಈ ಹಿಂದೆ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿತ್ತು. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ (Bikini) ಹಾಕಿದ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು.

    ಈ ಹಿಂದೆ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ನಂತರ ಸಿನಿಮಾದಿಂದಲೇ ಆ ದೃಶ್ಯವನ್ನು ಕೈ ಬಿಡಲಾಗಿತ್ತು. ಫೈಟರ್ ಸಿನಿಮಾದಲ್ಲೂ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಳ್ಳಲಿಲ್ಲ. ಇದು ಅಭಿಮಾನಿಗಳ ನಿರಾಸೆ ಕಾರಣವಾಗಿತ್ತು.

    ಒಂದು ಕಡೆ ಬಿಕಿನಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದರೆ ಮತ್ತೊಂದು ಕಡೆ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮೀರಿದೆ ಎಂದು ಈ ಹಿಂದೆ ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದರು.

     

    ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ.. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದರು.

  • ದೀಪಿಕಾ ಬಿಕಿನಿಗೆ ಮತ್ತೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

    ದೀಪಿಕಾ ಬಿಕಿನಿಗೆ ಮತ್ತೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

    ವಿಶ್ವದಾದ್ಯಂತ ನಾಳೆ ಫೈಟರ್ (Fighter) ರಿಲೀಸ್ ಆಗುತ್ತಿದೆ. ಹೃತಿಕ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಹೊತ್ತಲ್ಲಿ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿದ್ದ ವಿಷಯ ಮುನ್ನೆಲೆಗೆ ಬಂದಿದೆ. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ (Bikini) ಹಾಕಿದ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ನಂತರ ಸಿನಿಮಾದಿಂದಲೇ ಆ ದೃಶ್ಯವನ್ನು ಕೈ ಬಿಡಲಾಗಿತ್ತು. ಫೈಟರ್ ಸಿನಿಮಾದಲ್ಲೂ ಬಿಕಿನಿಯಲ್ಲಿ ದೀಪಿಕಾ ಕಾಣಿಸುವುದಿಲ್ಲ ಎನ್ನುವುದು ಸದ್ಯದ ವರ್ತಮಾನ.

    ಒಂದು ಕಡೆ ಬಿಕಿನಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದರೆ ಮತ್ತೊಂದು ಕಡೆ ಚಿತ್ರತಂಡ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಲಾವಿದರ ಸಂಭಾವನೆಯಿಂದ ಚಿತ್ರದ ಬಜೆಟ್ ಮಿತಿ ಮೀರಿದೆ ಎಂದು ಈ ಹಿಂದೆ ಸಿನಿಮಾ ವಿಶ್ಲೇಷಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದರು.

    ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಪಠಾಣ್’ಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದಾರೆ. ಹೃತಿಕ್-ದೀಪಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸ್ಟಾರ್ ಕಲಾವಿದರ ದುಬಾರಿ ಸಂಭಾವನೆ ವಿಷ್ಯವಾಗಿ ಫೈಟರ್ ಸುದ್ದಿಯಲ್ಲಿದೆ.

    ಹೃತಿಕ್ ರೋಷನ್ (Hrithik Roshan) ನಟನೆಯ ‘ಫೈಟರ್’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ತಲುಪಿದೆ. ಇದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು 40 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೃತಿಕ್ ರೋಷನ್ ಸಂಭಾವನೆ 85 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ ಸಂಭಾವನೆ 20 ಕೋಟಿ ರೂಪಾಯಿ. ಇನ್ನುಳಿದ ಕಲಾವಿದರಿಗೆ 15 ಕೋಟಿ ರೂಪಾಯಿ ನೀಡಲಾಗುತ್ತಿದೆ. ಅಂದರೆ, ಸಂಭಾವನೆ ಮೊತ್ತವೇ 160 ಕೋಟಿ ರೂಪಾಯಿ ತಲುಪಲಿದೆ’ ಎಂದು ಕಮಾಲ್ ಆರ್.ಖಾನ್ ಟ್ವೀಟ್ ಮಾಡಿದ್ದರು.

     

    ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್ ಕೋಟಿ ಕೋಟಿ ಲೂಟಿ ಮಾಡಿರೋದ್ರಿಂದ ಸಹಜವಾಗಿ ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಮೇಲೆ ನಿರೀಕ್ಷೆ ಡಬಲ್ ಆಗಿದೆ. ನಾಳೆಯೇ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಸಿನಿಮಾ ಕಲಾವಿದರ ಸಂಭಾವನೆ ಮೀರಿ ಕಲೆಕ್ಷನ್ ಮಾಡುವ ‘ಫೈಟರ್’ ದಾಖಲೆ ಬರೆಯುತ್ತಾ ಎಂದು ಕಾದುನೋಡಬೇಕಿದೆ.

  • ಮಗು ಬಗ್ಗೆ ಸುಳಿವು ಕೊಟ್ಟ ದೀಪಿಕಾ ಪಡುಕೋಣೆ

    ಮಗು ಬಗ್ಗೆ ಸುಳಿವು ಕೊಟ್ಟ ದೀಪಿಕಾ ಪಡುಕೋಣೆ

    ‘ಪಠಾಣ್’ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ವೈವಾಹಿಕ ಬದುಕು ಮತ್ತು ಸಿನಿಮಾ ಕೆರಿಯರ್ ಎರಡನ್ನೂ ಉತ್ತಮವಾಗಿ ಬ್ಯಾಲೆನ್ಸ್ ಮಾಡುತ್ತಾ ಮುನ್ನುಗ್ಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಕ್ಕಳನ್ನು (Childrens) ಹೊಂದುವ ಬಗ್ಗೆ ವೈಯಕ್ತಿಕ ಪ್ರಶ್ನೆಯೊಂದನ್ನ ನಿರೂಪಕಿ ಕೇಳಿದ್ದಾರೆ.

    ಮಕ್ಕಳ ಬಗ್ಗೆ ದೀಪಿಕಾ ಅವರಿಗೆ ಆ ಕುರಿತು ಪ್ರಶ್ನೆ ಮಾಡಲಾಗಿದೆ. ಕುಟುಂಬದ ಬಗ್ಗೆ ಏನಾದರೂ ಯೋಚಿಸಿದ್ದೀರಾ ಎಂದು ಕೇಳಲಾಗಿದೆ. ನನಗೆ ಹಾಗೂ ರಣವೀರ್ ಸಿಂಗ್‌ಗೆ (Ranveer Singh) ಮಕ್ಕಳು ಎಂದರೆ ಇಷ್ಟ. ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಈ ಮೂಲಕ ಶೀಘ್ರವೇ ಸಿಹಿ ಸುದ್ದಿ ನೀಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

    ದೀಪಿಕಾ- ರಣ್‌ವೀರ್ ಮದುವೆಯಾಗಿ 5 ವರ್ಷಗಳು ಕಳೆದಿದೆ. ಹಾಗಾಗಿ ಇದೀಗ ಮಗು ಹೊಂದುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.‌ ಇದನ್ನೂ ಓದಿ:ಕಾರ್ತಿಕ್ ವಿರುದ್ಧ ಕಿಡಿಕಾರಿದ ಬೆಂಕಿ ತನಿಷಾ

    ‘ಪಠಾಣ್’ ಮತ್ತು ‘ಜವಾನ್’ ಸಿನಿಮಾದ ಸಕ್ಸಸ್ ನಂತರ ಹೃತಿಕ್ ರೋಷನ್ (Hrithik Roshan) ಜೊತೆ ‘ಫೈಟರ್’, ರೋಹಿತ್ ಶೆಟ್ಟಿ (Rohit Shetty) ನಿರ್ಮಾಣದ ಸಿನಿಮಾವೊಂದರಲ್ಲಿ ದೀಪಿಕಾ ಪೊಲೀಸ್ ಆಗಿ ಕಾಣಿಸಿಕೊಳ್ತಿದ್ದಾರೆ.

  • ತಿರುಪತಿಯಲ್ಲಿ ಸಹೋದರಿ ಜೊತೆ ಕಾಣಿಸಿಕೊಂಡ ದೀಪಿಕಾ

    ತಿರುಪತಿಯಲ್ಲಿ ಸಹೋದರಿ ಜೊತೆ ಕಾಣಿಸಿಕೊಂಡ ದೀಪಿಕಾ

    ಬಾಲಿವುಡ್ ನಟ ದೀಪಿಕಾ ಪಡುಕೋಣೆ (Deepika Padukone) ನಿನ್ನೆ ರಾತ್ರಿಯೇ ತಿರುಪತಿಗೆ (Tirupati) ಬಂದಿಳಿದಿದ್ದಾರೆ. ಸಹೋದರಿ ಅನಿಶಾ ಪಡುಕೋಣೆ (Anisha Padukone) ಜೊತೆ ತಿರುಪತಿಗೆ ಆಗಮಿಸಿರುವ ದೀಪಿಕಾ, ಇಂದು ಬೆಳಗ್ಗೆ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಸಾಮಾನ್ಯರಂತೆಯೇ ಕಾಲ್ನಡಿಗೆಯಲ್ಲಿ ಬಂದ ದೀಪಿಕಾ, ವಿಐಪಿ ಕೌಂಟರ್ ನಲ್ಲಿ ದರ್ಶನ ಪಡೆದಿದ್ದಾರೆ.

    ದೀಪಿಕಾ ನಟನೆಯ ಫೈಟರ್ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಜೊತೆಗೆ ಈ ವರ್ಷ ದೀಪಿಕಾ ಅವರಿಗೆ ಅತ್ಯುತ್ತಮ ವರ್ಷವಾಗಿತ್ತಂತೆ. ಈ ಎಲ್ಲ ಕಾರಣವನ್ನಿಟ್ಟಿಕೊಂಡು ಸಹೋದರಿ ಜೊತೆ ದೀಪಿಕಾ ತಿರುಪತಿಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.

     

    ನಿನ್ನ ರಾತ್ರಿ ತಿರುಪತಿಯಲ್ಲಿ ವಾಸ್ತವ್ಯ ಹೂಡಿದ್ದವರು. ಇಂದು ಬೆಳಗ್ಗೆಯೇ ಸಹೋದರಿ ಜೊತೆ ದರ್ಶನಕ್ಕೆ ಆಗಮಿಸಿದ್ದರು. ಕೆಲ ಹೊತ್ತು ವೆಂಕಟೇಶ್ವರನ ಸನ್ನಿಧಾನದಲ್ಲಿದ್ದು, ನಂತರ ಅಭಿಮಾನಿಗಳತ್ತ ಕೈ ಬಿಸಿ ಅಲ್ಲಿಂದ ಹೊರಟಿದ್ದಾರೆ.

  • ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಒರಿಜನಲ್ ವಾಯ್ಸ್ ಯಾರದ್ದು? ಫೇಮಸ್ ಆಗಿದ್ದು ಹೇಗೆ?

    ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಒರಿಜನಲ್ ವಾಯ್ಸ್ ಯಾರದ್ದು? ಫೇಮಸ್ ಆಗಿದ್ದು ಹೇಗೆ?

    ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್… ನೀವು ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿದ್ದರೆ ಈ ಸಾಲುಗಳನ್ನು ಖಂಡಿತವಾಗಿಯೂ ಕೇಳಿರುತ್ತೀರಿ. ಇದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ಹಾಡು. ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ ನಟ-ನಟಿಯರೂ ಈ ಸಾಂಗ್‌ಗೆ ಫಿದಾ ಆಗಿದ್ದಾರೆ. ಅಷ್ಟು ಮಾತ್ರವಲ್ಲದೇ ಕ್ರಿಕೆಟ್ ಲೋಕದಲ್ಲೂ ಈ ಸಾಂಗ್ ಭಾರೀ ಸದ್ದು ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ಕ್ರೇಜ್ ಮೂಡಿಸಿರುವ ಈ ಹಾಡನ್ನು (Song) ಮೊದಲಿಗೆ ಹಾಡಿದವರು ಯಾರು? ಇದರ ಸೃಷ್ಟಿಕರ್ತ ಯಾರು? ರಾತ್ರೋರಾತ್ರಿ ಈ ಹಾಡು ವೈರಲ್ (Viral) ಆಗಿದ್ದು ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಮೂಡುತ್ತದೆ. ಇದಕ್ಕೆಲ್ಲ ಉತ್ತರ ಕೊಡುವ ಸಣ್ಣ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

    ಸೋಷಿಯಲ್ ಮೀಡಿಯಾದಲ್ಲಿ ಒಂದೊಂದು ಬಾರಿ ಒಂದೊಂದು ಹಾಡು ಟ್ರೆಂಡಿಂಗ್ ಅಲ್ಲಿ ಇರುತ್ತದೆ. ಹಾಗೆಯೇ ‘ಜಸ್ಟ್ ಲುಕಿಂಗ್ ಲೈಕ್ ಎ ವಾವ್’ (Just Looking Like A Wow) ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ಟ್ರೆಂಡಿಂಗ್‌ನಲ್ಲಿದೆ. ಫೇಸ್‌ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಶಾರ್ಟ್ಸ್ ಹೀಗೆ ಎಲ್ಲಾ ಕಡೆ ಈ ಹಾಡು ಧೂಳೆಬ್ಬಿಸುತ್ತಿದ್ದು, ಪ್ರತಿಯೊಬ್ಬರೂ ಈ ಹಾಡಿಗೆ ವಿಡಿಯೋ ಮಾಡುತ್ತಿದ್ದಾರೆ. ಅಲ್ಲದೇ ಇದಕ್ಕೆ ಸಂಬಂಧ ಪಟ್ಟ ಅನೇಕ ಮೀಮ್ಸ್‌ಗಳು (Memes) ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ದೀಪಿಕಾ ಪಡುಕೋಣೆಯಂತಹ (Deepika Padukone) ಫೇಮಸ್ ನಟಿ ಕೂಡಾ ಹಾಡಿಗೆ ರೀಲ್ಸ್ (Reels) ಮಾಡಿದ್ದಾರೆ.

    ಈ ವಾಯ್ಸ್ ಯಾರದ್ದು?
    ಜಾಸ್ಮಿನ್ ಕೌರ್ (Jasmeen Kaur) ಎಂಬ ಸಾಮಾನ್ಯ ಮಹಿಳೆ ಈ ಹಾಡಿನ ಸೃಷ್ಟಿಕರ್ತೆ. ಈಕೆ ದೆಹಲಿಯ (New Delhi) ತಿಲಕ್ ನಗರದಲ್ಲಿ ಸೂಟ್‌ಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಜಾಸ್ಮಿನ್ ಕೌರ್ ತಮ್ಮ ಅಂಗಡಿಯಲ್ಲಿರುವ ಬಟ್ಟೆಗಳನ್ನು ಪ್ರಮೋಟ್ ಮಾಡಿ ಮಾರ್ಕೆಟಿಂಗ್ (Marketing) ಮಾಡುವ ಸಂದರ್ಭ ಈ ಹಾಡನ್ನು ಹಾಡಿದ್ದರು. ಹಳದಿ ಬಣ್ಣದ ಚೂಡಿದಾರ್ ಹಾಕಿ ಮಾರ್ಕೆಟಿಂಗ್‌ಗೋಸ್ಕರ ಜಾಸ್ಮಿನ್ ವಿಡಿಯೋವೊಂದನ್ನು ಮಾಡಿದ್ದರು. ಈ ಸಮಯದಲ್ಲಿ ಹುಟ್ಟಿಕೊಂಡಿದ್ದೇ ಜಸ್ಟ್ ಲೈಕ್ ಎ ವಾವ್ ಹಾಡು.

    ಈ ಹಾಡು ಸದ್ಯ ಎಲ್ಲರ ಮನಗೆದ್ದಿದ್ದು, ರಾತ್ರೋ ರಾತ್ರಿ ಜಾಸ್ಮಿನ್ ಕೌರ್ ಫೇಮಸ್ ಆಗಿದ್ದಾರೆ. ಕಳೆದ 18 ವರ್ಷಗಳಿಂದ ಬಟ್ಟೆ ಅಂಗಡಿ ನಡೆಸುತ್ತಿರುವ ಜಾಸ್ಮಿನ್ ಆಗಾಗ ತಮ್ಮ ಅಂಗಡಿಯಲ್ಲಿರುವ ಬಟ್ಟೆಗಳನ್ನು ಧರಿಸಿ ಅದರ ವಿಶಿಷ್ಟತೆ ಹಾಗೂ ವಿನ್ಯಾಸವನ್ನು ವಿವರಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು.

    ಈ ಹಾಡು ವೈರಲ್ ಆದ ಬಳಿಕ ಇವರ ಅಂಗಡಿಗೆ ಬರುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ ಎಂದು ಜಾಸ್ಮಿನ್ ಕೌರ್ ಸಂತೋಷ ವ್ಯಕ್ತಪಡಿಸಿದ್ದಾರೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್‌ನಿಂದ ಹಿಡಿದು ಕರಣ್ ಜೋಹರ್, ಸಾನ್ಯಾ ಮಲ್ಹೋತ್ರಾ ಮುಂತಾದ ಸ್ಟಾರ್ ನಟ-ನಟಿಯರು ಈ ಹಾಡಿಗೆ ವಿಡಿಯೋ ಮಾಡಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಕೆಎಲ್ ರಾಹುಲ್ ಕೂಡಾ ತನ್ನ ಪತ್ನಿಯ ಪೋಸ್ಟ್‌ವೊಂದಕ್ಕೆ ಈ ಸಾಲುಗಳನ್ನು ಕಾಮೆಂಟ್ ಮಾಡಿದ್ದಾರೆ. ಖ್ಯಾತ ಸಂಗೀತಗಾರ ಯಶ್‌ರಾಜ್ ಮುಖಾಟೆ ಈ ಸಾಲುಗಳನ್ನು ಹಾಡಾಗಿ ಪರಿವರ್ತಿಸಿದ ಬಳಿಕ ಈ ಹಾಡು ಇನ್ನೂ ಫೇಮಸ್ ಆಗಿದೆ. ಹಾಡು ವೈರಲ್ ಬೆನ್ನಲ್ಲೇ ಜಾಸ್ಮಿನ್ ಕೌರ್ ತಮ್ಮ ಇನ್ಸ್ಟಾಗ್ರಾಂನಲ್ಲಿ 8.36 ಲಕ್ಷ ಅನುಯಾಯಿಗಳನ್ನು (Followers) ಹೊಂದಿದ್ದಾರೆ.

  • ಗ್ಲೋಬಲ್ ಸ್ಟಾರ್ ಆಗಲು ಭಾರತ ಬಿಡಬೇಕಾ? ಪ್ರಿಯಾಂಕಾಗೆ ದೀಪಿಕಾ ಟಾಂಗ್

    ಗ್ಲೋಬಲ್ ಸ್ಟಾರ್ ಆಗಲು ಭಾರತ ಬಿಡಬೇಕಾ? ಪ್ರಿಯಾಂಕಾಗೆ ದೀಪಿಕಾ ಟಾಂಗ್

    ನ್ನಡದ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್‌ನಲ್ಲಿ (Bollywood) ನಂಬರ್ ಒನ್ ನಟಿಯಾಗಿ ಮಿಂಚ್ತಿದ್ದಾರೆ. ಹೀಗಿರುವಾಗ ಭಾರತ ಬಿಟ್ಟು ವಿದೇಶದಲ್ಲಿ ಸೆಟಲ್ ಆಗಿ ಹಾಲಿವುಡ್‌ನಲ್ಲಿ ಮಿಂಚ್ತಿರುವ ಪ್ರಿಯಾಂಕಾ ಚೋಪ್ರಾಗೆ (Priyanka Chopra) ದೀಪಿಕಾ ಟಾಂಗ್ ಕೊಟ್ಟಿದ್ದಾರೆ. ಗೋಬ್ಲಲ್ ಸ್ಟಾರ್ ಆಗಲು ಭಾರತ ಬಿಟ್ಟು ಹೋಗಬೇಕು ಎಂದೇನೂ ಇಲ್ಲ ಅಂತ ಪ್ರಿಯಾಂಕಾಗೆ ದೀಪಿಕಾ ಮಾತಿನ ಚಾಟಿ ಬೀಸಿದ್ದಾರೆ.

    ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ, ವೃತ್ತಿಯಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸಲು ಹಾಲಿವುಡ್ ಸೇರಿದಂತೆ ಬೇರೆ-ಬೇರೆ ಸಿನಿಮಾ ರಂಗಗಳಿಗೆ ಹೋಗುವ ಪ್ರಯತ್ನ ಮಾಡುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ ಪಡುಕೋಣೆ, ಗ್ಲೋಬಲ್ ಸ್ಟಾರ್ ಆಗಲು ಭಾರತವನ್ನು ಬಿಟ್ಟು ಹೋಗಬೇಕು ಎಂದೇನೂ ಇಲ್ಲ ಎಂದಿದ್ದಾರೆ. ಇದನ್ನೂಓದಿ:ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ಕಂಪು- ನಟಿಯರ ಮಾತಿಗೆ ಕನ್ನಡಿಗರು ಫಿದಾ

    ಈ ಮೂಲಕ ಗ್ಲೋಬಲ್ ಸ್ಟಾರ್ ಎನಿಸಿಕೊಳ್ಳಲು ಭಾರತ ಬಿಟ್ಟು ಹೋದ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ನೀಡಿದ್ದಾರೆ. ವಿಶ್ವಮಟ್ಟದಲ್ಲಿ ಗುರುತು ಮೂಡಿಸಲು ನಾನೇಕೆ ನನ್ನ ಲಗೇಜು ಎತ್ತಿಕೊಂಡು ದೇಶ ಬಿಟ್ಟು ಹೊರಡಬೇಕು. ನನಗೆ ಮಾಡೆಲಿಂಗ್ ಸಮಯದಲ್ಲೇ ಹಾಲಿವುಡ್‌ನಿಂದ ಆಫರ್ಸ್ ಬಂದಿತ್ತು ಎಂದು ನಟಿ ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ.

    ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ಚಿತ್ರರಂಗವನ್ನ ಆಳುತ್ತಿದ್ದಾರೆ. ಪಠಾಣ್, ಜವಾನ್ ಸಕ್ಸಸ್ ನಂತರ ದೀಪಿಕಾಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

  • ಕದ್ದು ಮುಚ್ಚಿ ನಿಶ್ಚಿತಾರ್ಥ: ದೀಪಿಕಾ-ರಣವೀರ್ ಸ್ಪೋಟಕ ಹೇಳಿಕೆ

    ಕದ್ದು ಮುಚ್ಚಿ ನಿಶ್ಚಿತಾರ್ಥ: ದೀಪಿಕಾ-ರಣವೀರ್ ಸ್ಪೋಟಕ ಹೇಳಿಕೆ

    ದುವೆಗೂ ಮುನ್ನ ಮೂರ್ನಾಲ್ಕು ವರ್ಷಗಳ ಮುಂಚೆಯೇ ರಹಸ್ಯವಾಗಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದರಂತೆ. ಈ ವಿಷಯವನ್ನು ಅವರು ಯಾರಿಗೂ ಹೇಳಿರಲಿಲ್ಲವೆಂದು ಇದೀಗ ಹೇಳಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ (Koffee With Karan) ಈ ವಿಷಯವನ್ನು ತಾರಾ ಜೋಡಿ ಬಹಿರಂಗ ಪಡಿಸಿದೆ. ಈ ಜೋಡಿಯ ಮದುವೆ 2018ರಲ್ಲಿ ಆಗಿತ್ತು.

    ಬಾಲಿವುಡ್ ನ ಖ್ಯಾತ ಟಾಕ್ ಶೋ ‘ಕಾಫಿ ವಿತ್ ಕರಣ್’ ಇದೀಗ ಸೀಸನ್ 8 ಕಂಡಿದೆ. ಸದ್ಯದಲ್ಲೇ ಸೀಸನ್ 8 ಕೂಡ ಪ್ರಸಾರವಾಗಲಿದೆ. ಮೊದಲ ಎಪಿಸೋಡ್ ನಲ್ಲಿ ಕರಣ್ ಜೋಹಾರ್ ಜೊತೆ ಮಾತನಾಡಿದ್ದಾರೆ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೋಡಿ. ಕರಣ್ ಮಾತುಗಳು ಅಂದರೆ ಅದಕ್ಕೆ ಸೆನ್ಸಾರ್ ಇರುವುದಿಲ್ಲ. ರಣವೀರ್ ಕೂಡ ಅಷ್ಟೇ ಬೋಲ್ಡ್ ಆಗಿ ಮಾತನಾಡುವಂತಹ ನಟ. ಹಾಗಾಗಿ ಮೊದಲನೇ ಎಪಿಸೋಡ್‍ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಎಲ್ಲರದ್ದು.

    ಕರಣ್ ಶೋನಲ್ಲಿ ಕನ್ನಡದ ನಟರು

    ನಿರ್ಮಾಪಕ ಕರಣ್ ಜೋಹರ್ (Karan Johar) ನಿರೂಪಣೆಯ  ಕಾರ್ಯಕ್ರಮ ಶುರು ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಹೊಸ ಸೀಸನ್‌ನಲ್ಲಿ ನ್ಯಾಷನಲ್ ಸ್ಟಾರ್ ಯಶ್- ರಿಷಬ್ ಶೆಟ್ಟಿ (Rishab Shetty) ಭಾಗಿಯಾಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.

    ಬಾಲಿವುಡ್ ಅಡ್ಡಾದ ಫೇಮಸ್ `ಕಾಫಿ ವಿತ್ ಕರಣ್’ ಶೋಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಸಂದರ್ಶನದ ಜೊತೆ ವಿವಾದಗಳು ಅಂಟಿಕೊಳ್ಳುವ  ಈ ಶೋಗೆ ಸೆಲೆಬ್ರಿಟಿಗಳು ಬರಲು ಯೋಚನೆ ಮಾಡುತ್ತಾರೆ. ಹೀಗಿರುವಾಗ ಕರಣ್ ಶೋಗೆ ಯಶ್- ರಿಷಬ್ ಶೆಟ್ಟಿ ಬರುತ್ತಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

     

    ಹೌದು.. ಕಾಫಿ ವಿತ್ ಕರಣ್ ಕಾರ್ಯಕ್ರಮದ ಈವರೆಗಿನ ಸೀಸನ್‌ಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಣೆ ಹಾಕಿದ್ದೇ ಹೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ನಟ-ನಟಿಯರು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದರಿಂದ ಕರಣ್ ಜೋಹರ್ ಅವರು ಸೌತ್ ಸ್ಟಾರ್‌ಗಳ ಕಡೆಗೂ ಗಮನ ಹರಿಸಲು ಆರಂಭಿಸಿದ್ದಾರೆ. 8ನೇ ಸೀಸನ್‌ನಲ್ಲಿ ಯಶ್, ರಿಷಬ್ ಶೆಟ್ಟಿ ಹಾಗೂ ಅಲ್ಲು ಅರ್ಜುನ್ ಅವರು ಪತ್ನಿ ಸಮೇತರಾಗಿ ಈ ಶೋನಲ್ಲಿ ಹಾಜರಿ ಹಾಕಲಿದ್ದಾರೆ ಎಂದು ಸುದ್ದಿ ಪ್ರಕಟ ಆಗಿದೆ. ಈ ಬಗ್ಗೆ ಕರಣ್ ಜೋಹರ್ ಅವರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಯಶ್ (Yash), ರಿಷಬ್ ಶೆಟ್ಟಿ, ಅಲ್ಲು ಅರ್ಜುನ್ ಕೂಡ ಸುದ್ದಿ ಬಿಟ್ಟುಕೊಟ್ಟಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಾಫಿ ವಿತ್ ಕರಣ್’ ಶೋನಲ್ಲಿ ರಣವೀರ್-ದೀಪಿಕಾ

    ‘ಕಾಫಿ ವಿತ್ ಕರಣ್’ ಶೋನಲ್ಲಿ ರಣವೀರ್-ದೀಪಿಕಾ

    ಬಾಲಿವುಡ್ ನ ಖ್ಯಾತ ಟಾಕ್ ಶೋ ‘ಕಾಫಿ ವಿತ್ ಕರಣ್’ ಇದೀಗ ಸೀಸನ್ 8 ಕಂಡಿದೆ. ಸದ್ಯದಲ್ಲೇ ಸೀಸನ್ 8 ಕೂಡ ಶುರುವಾಗಲಿದೆ. ಮೊದಲ ಎಪಿಸೋಡ್ ನಲ್ಲಿ ಕರಣ್ ಜೋಹಾರ್ ಜೊತೆ ಮಾತನಾಡಲಿದ್ದಾರಂತೆ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೋಡಿ. ಕರಣ್ ಮಾತುಗಳು ಅಂದರೆ ಅದಕ್ಕೆ ಸೆನ್ಸಾರ್ ಇರುವುದಿಲ್ಲ. ರಣವೀರ್ ಕೂಡ ಅಷ್ಟೇ ಬೋಲ್ಡ್ ಆಗಿ ಮಾತನಾಡುವಂತಹ ನಟ. ಹಾಗಾಗಿ ಮೊದಲನೇ ಎಪಿಸೋಡ್‍ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಎಲ್ಲರದ್ದು.

    ಕರಣ್ ಶೋನಲ್ಲಿ ಕನ್ನಡದ ನಟರು

    ನಿರ್ಮಾಪಕ ಕರಣ್ ಜೋಹರ್ (Karan Johar) ನಿರೂಪಣೆಯ  ಕಾರ್ಯಕ್ರಮ ಶುರು ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಹೊಸ ಸೀಸನ್‌ನಲ್ಲಿ ನ್ಯಾಷನಲ್ ಸ್ಟಾರ್ ಯಶ್- ರಿಷಬ್ ಶೆಟ್ಟಿ (Rishab Shetty) ಭಾಗಿಯಾಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.

    ಬಾಲಿವುಡ್ ಅಡ್ಡಾದ ಫೇಮಸ್ `ಕಾಫಿ ವಿತ್ ಕರಣ್’ ಶೋಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಸಂದರ್ಶನದ ಜೊತೆ ವಿವಾದಗಳು ಅಂಟಿಕೊಳ್ಳುವ  ಈ ಶೋಗೆ ಸೆಲೆಬ್ರಿಟಿಗಳು ಬರಲು ಯೋಚನೆ ಮಾಡುತ್ತಾರೆ. ಹೀಗಿರುವಾಗ ಕರಣ್ ಶೋಗೆ ಯಶ್- ರಿಷಬ್ ಶೆಟ್ಟಿ ಬರುತ್ತಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

     

    ಹೌದು.. ಕಾಫಿ ವಿತ್ ಕರಣ್ ಕಾರ್ಯಕ್ರಮದ ಈವರೆಗಿನ ಸೀಸನ್‌ಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಣೆ ಹಾಕಿದ್ದೇ ಹೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ನಟ-ನಟಿಯರು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದರಿಂದ ಕರಣ್ ಜೋಹರ್ ಅವರು ಸೌತ್ ಸ್ಟಾರ್‌ಗಳ ಕಡೆಗೂ ಗಮನ ಹರಿಸಲು ಆರಂಭಿಸಿದ್ದಾರೆ. 8ನೇ ಸೀಸನ್‌ನಲ್ಲಿ ಯಶ್, ರಿಷಬ್ ಶೆಟ್ಟಿ ಹಾಗೂ ಅಲ್ಲು ಅರ್ಜುನ್ ಅವರು ಪತ್ನಿ ಸಮೇತರಾಗಿ ಈ ಶೋನಲ್ಲಿ ಹಾಜರಿ ಹಾಕಲಿದ್ದಾರೆ ಎಂದು ಸುದ್ದಿ ಪ್ರಕಟ ಆಗಿದೆ. ಈ ಬಗ್ಗೆ ಕರಣ್ ಜೋಹರ್ ಅವರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಯಶ್ (Yash), ರಿಷಬ್ ಶೆಟ್ಟಿ, ಅಲ್ಲು ಅರ್ಜುನ್ ಕೂಡ ಸುದ್ದಿ ಬಿಟ್ಟುಕೊಟ್ಟಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]