ಇತ್ತೀಚೆಗಷ್ಟೇ ತಾನು ತಾಯಿ ಆಗುತ್ತಿರುವ ಕುರಿತಂತೆ ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದರು. ಪ್ರೆಗ್ನೆಂಟ್ (Pregnant) ಅಂತ ಹೇಳಿ ಇದೀಗ ಸಿನಿಮಾವೊಂದರ ಚಿತ್ರೀಕರಣದಲ್ಲಿ ತೊಡಗಿದ್ದಾರೆ ನಟಿ. ಈ ನಡೆಗೆ ಫ್ಯಾನ್ಸ್ ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಸಮಯದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳೋದು ಸರಿಯಲ್ಲ ಎಂದು ತಿಳುವಳಿಕೆ ಹೇಳಿದ್ದಾರೆ. ಯಾವುದಕ್ಕೂ ಹುಷಾರಾಗಿ ಕೆಲಸ ಮಾಡಿ ಎಂದು ಸಲಹೆಯನ್ನೂ ನೀಡಿದ್ದಾರೆ.

ದೀಪಿಕಾ ಪಡುಕೋಣೆ (Deepika Padukone) ಸದ್ಯ ‘ಸಿಂಗಂ ಅಗೈನ್’ (Singham Again) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಾಯಕವೇ ಕೈಲಾಸ ಅಂತ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿಗೆ ಗರ್ಭಿಣಿ ದೀಪಿಕಾ ಸಾಥ್ ನೀಡುತ್ತಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಹಾಜರಿ ಹಾಕಿರುವ ದೀಪಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್‌ನ ಟಾಪ್ ನಟಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳು ಅವರ ಲಿಸ್ಟ್ನಲ್ಲಿದೆ. ಇದರ ನಡುವೆ ಇತ್ತೀಚೆಗೆ ತಾವು ತಾಯಿಯಾಗಿರುವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದರೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ನಟಿ ಕೈಬಿಟ್ಟಿಲ್ಲ.

‘ಸಿಂಗಂ ಅಗೈನ್’ ಚಿತ್ರದಲ್ಲಿ ದೀಪಿಕಾ ಪೊಲೀಸ್ ಅಧಿಕಾರಿ ನಟಿಸುತ್ತಿದ್ದಾರೆ. ಕಳೆದ ವರ್ಷದ ಅಂತ್ಯದಿಂದಲೇ ಅವರ ಭಾಗದ ಚಿತ್ರೀಕರಣ ಶುರುವಾಗಿತ್ತು. ಪ್ರೆಗ್ನೆಂಟ್ ಆಗಿರುವ ದೀಪಿಕಾ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಸಿನಿಮಾಗೆ ತೊಂದರೆ ಆಗಬಾರದು ಎಂದು ಕೊಟ್ಟ ಮಾತಿನಂತೆ, ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ಕೊಡಲು ಮತ್ತೆ ಶೂಟಿಂಗ್‌ಗೆ ನಟಿ ಭಾಗಿಯಾಗಿದ್ದಾರೆ. ಇದೀಗ ನಟಿಯ ಶೂಟಿಂಗ್ ಫೋಟೋಗಳು ಗಮನ ಸೆಳೆಯುತ್ತಿವೆ.
‘ಸಿಂಗಂ ಅಗೈನ್’ ಚಿತ್ರದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಕರೀನಾ ಕಪೂರ್ ಕೂಡ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಪೊಲೀಸ್ ಅಧಿಕಾರಿಯಾಗಿ ಶಕ್ತಿ ಶೆಟ್ಟಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.



‘ಸಿಂಗಂ ಅಗೈನ್’ ಚಿತ್ರದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ಕರೀನಾ ಕಪೂರ್ ಕೂಡ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಪೊಲೀಸ್ ಅಧಿಕಾರಿಯಾಗಿ ಶಕ್ತಿ ಶೆಟ್ಟಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.




ಆದರೆ ಈಗ ‘ಪಠಾಣ್’ ತಂಡ ಸಿನಿಮಾ ಬಗ್ಗೆ ಸುದ್ದಿಯಾಗುವ ಬದಲು ಡೈರೆಕ್ಟರ್ ವಿಚಾರವಾಗಿ ಹೈಲೈಟ್ ಆಗುತ್ತಿದೆ. ಸಿದ್ಧಾರ್ಥ್ ಆನಂದ್ ಬದಲು ಬೇರೆ ನಿರ್ದೇಶಕನಿಗೆ ಮಣೆ ಹಾಕಲು ನಿರ್ಮಾಪಕ ಆದಿತ್ಯಾ ಚೋಪ್ರಾ ಯೋಚಿಸಿದ್ದಾರೆ. ಈ ಹಿಂದೆ ತಮ್ಮ ನಿರ್ಮಾಣದ ‘ಟೈಗರ್’ ಮತ್ತು ‘ವಾರ್’ ಸಿನಿಮಾದ ಸೀಕ್ವೆಲ್‌ನಲ್ಲೂ ನಿರ್ದೇಶಕರನ್ನು ಆದಿತ್ಯಾ ಬದಲಿಸಿದ್ದರು. ಅದೇ ಫಾರ್ಮುಲಾ ಇಲ್ಲಿಯೂ ಬಳಸಲು ಮುಂದಾಗಿದ್ದಾರೆ.
ಕಲ್ಕಿ ಪ್ರಭಾಸ್ (Prabhas) ಎದುರು ಕಮಲ್ ಹಾಸನ್ (Kamal Haasan) ವಿಲನ್ ಆಗಿ ಘರ್ಜಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ವಿಚಾರ ಸುಳ್ಳು ಎಂದು ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ, 2 ನಿಮಿಷಗಳ ಕಾಲ ಕಮಲ್ ನಟಿಸಿದ್ದಾರೆ ಎನ್ನಲಾಗಿದೆ.

ಹೋಳಿ ಹಬ್ಬ (Holi Festival) ಭಾರತೀಯ ಸಂಸ್ಕೃತಿಯ ಸಂಕೇತ. ಹೋಳಿ ಎಂದಾಕ್ಷಣ ಎಲ್ಲರಿಗೂ ಥಟ್ ಅಂತ ನೆನಪಾಗುವುದು ಬಣ್ಣ. ಒಬ್ಬರು ಮತ್ತೊಬ್ಬರಿಗೆ ಬಣ್ಣ ಹಚ್ಚುವುದು. ಅನೇಕ ಸಿನಿಮಾಗಳಲ್ಲಿಯೂ ನಾವು ಹೋಳಿ ಹಬ್ಬದ ಸಡಗರವನ್ನು ನೋಡಿದ್ದೇವೆ. ಅದೇ ರೀತಿ ಹೋಳಿ ಹಬ್ಬವನ್ನು ನೆನಪಿಸುವ ಸಿನಿಮಾಗಳ ಹಾಡುಗಳ ಪಟ್ಟಿ ಇಲ್ಲಿದೆ.


ಬಣ್ಣ ನನ್ನ ಒಲಿವಿನ ಬಣ್ಣ: ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಮತ್ತು ಸುಹಾಸಿನಿ ನಟನೆಯ ‘ಬಂಧನ’ (Bandhana) ಸಿನಿಮಾ ಇಂದಿಗೂ ಎಲ್ಲರ ಫೇವ್‌ರೇಟ್. ಈ ಸಿನಿಮಾದ ‘ಬಣ್ಣ ನನ್ನ ಒಲಿವಿನ ಬಣ್ಣ’ ಹಾಡು ನಿಮ್ಮ ಹೋಳಿ ಹಬ್ಬವನ್ನು ರಂಗೇರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ‘ಬಂಧನ’ ಸಿನಿಮಾ 32ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು. ಹಾಗೇ ನಾಯಕ ವಿಷ್ಣುವರ್ಧನ್ ಮತ್ತು ಸಂಗೀತ ನಿರ್ದೇಶಕ ಎಂ.ರಂಗಾರಾವ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು.

ಬಾಲಮ್ ಪಿಚ್ಕರಿ: ಯೇ ಜವಾನಿ ಹೈ ದಿವಾನಿ ಚಿತ್ರದ ಸಾಂಗ್ ಇದಾಗಿದೆ. ಹೋಳಿ ಹಬ್ಬಕ್ಕೆ ಸಂಬಂಧಪಟ್ಟ ಮತ್ತೊಂದು ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಹಾಡು ಇದಾಗಿದೆ. ಈ ಹಾಡಿನಲ್ಲಿ ರಣ್‌ಬೀರ್ ಕಪೂರ್, ದೀಪಿಕಾ ಪಡುಕೋಣೆ (Deepika Padukone) ಕುಣಿದು ಕುಪ್ಪಳಿಸಿದ್ದರು.











